Moodle-Learning-Management-System/C2/Getting-Ready-for-Moodle-Installation/Kannada
From Script | Spoken-Tutorial
Revision as of 16:38, 13 June 2019 by Sandhya.np14 (Talk | contribs)
Time | Narration |
00:01 | Getting ready for Moodle installation ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, Moodle ನ ಇನ್ಸ್ಟಾಲ್ಲೇಶನ್ ಗಾಗಿ ಏನು ಅಗತ್ಯವಿದೆ ಎಂದು ಕಲಿಯುವೆವು. |
00:14 | ಲೋಕಲ್-ಹೋಸ್ಟ್ ನಲ್ಲಿನ ಪ್ಯಾಕೇಜ್ ಗಳನ್ನು ಪರಿಶೀಲಿಸುವುದು ಮತ್ತು ಡೇಟಾಬೇಸ್ ಸೆಟ್-ಅಪ್ ಮಾಡುವುದನ್ನು ಸಹ ಕಲಿಯುತ್ತೇವೆ. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:30 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP ಹಾಗೂ Firefox ವೆಬ್-ಬ್ರೌಸರ್ ಅನ್ನು ಬಳಸುತ್ತೇನೆ. |
00:42 | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:46 | ನಿಮ್ಮ ಸಿಸ್ಟಂ ನಲ್ಲಿ Moodle 3.3 ಯನ್ನು ಇನ್ಸ್ಟಾಲ್ ಮಾಡಲು, ನೀವು ಕೆಳಗಿನವುಗಳನ್ನು ಬೆಂಬಲಿಸುವ ಮಷಿನ್ ಅನ್ನು ಹೊಂದಿರಬೇಕು: |
00:52 | Apache 2.x (ಅಥವಾ ಹೆಚ್ಚಿನ ಆವೃತ್ತಿ),
MariaDB 5.5.30 (ಅಥವಾ ಯಾವುದೇ ಹೆಚ್ಚಿನ ಆವೃತ್ತಿ) ಮತ್ತು PHP 5.4.4 +( ಅಥವಾ ಯಾವುದೇ ಹೆಚ್ಚಿನ ಆವೃತ್ತಿ). |
01:08 | ನೀವು ಮೇಲಿನವುಗಳ ಹಳೆಯ ಆವೃತ್ತಿಗಳನ್ನು ಹೊಂದಿದ್ದರೆ, ಮುಂದುವರಿಯುವ ಮೊದಲು ಇವುಗಳನ್ನು ಅನ್-ಇನ್ಸ್ಟಾಲ್ ಮಾಡುವುದು ಉತ್ತಮ. |
01:16 | MariaDB (ಮಾರಿಯಾ ಡಿಬಿ) ಶೀಘ್ರವಾಗಿ ಬೆಳೆಯುತ್ತಿರುವ ಓಪನ್-ಸೋರ್ಸ್ ಡೇಟಾಬೇಸ್ ಆಗಿದೆ. |
01:21 | ಇದು MySQL ಡೇಟಾಬೇಸ್ ಗೆ ಪರ್ಯಾಯವಾಗಿದೆ. |
01:26 | Web-server distributions ನಿಮಗೆ Apache, MariaDB ಮತ್ತು PHP ಗಳನ್ನು ಒಟ್ಟಿಗೇ ಕೊಡುತ್ತದೆ. |
01:34 | ನೀವು ಇವುಗಳನ್ನು ಪ್ರತ್ಯೇಕವಾಗಿ ಅಥವಾ XAMPP, WAMPP ಅಥವಾ LAMPP ನಂತಹ Web server distribution ಗಳನ್ನು ಬಳಸಿ ಇನ್ಸ್ಟಾಲ್ ಮಾಡಬಹುದು. |
01:44 | ನಾನು ಈಗಾಗಲೇ ನನ್ನ ಮಷಿನ್ ನಲ್ಲಿ XAMPP ಅನ್ನು ಇನ್ಸ್ಟಾಲ್ ಮಾಡಿದ್ದೇನೆ. |
01:49 | ಮೊದಲು ನಮ್ಮ ಮಷಿನ್ ನಲ್ಲಿ XAMPP ರನ್ ಆಗುತ್ತಿದೆಯೆ ಎಂದು ಪರಿಶೀಲಿಸಬೇಕು. |
01:54 | ವೆಬ್ ಬ್ರೌಸರ್ ನಲ್ಲಿ, ಹೀಗೆ ಟೈಪ್ ಮಾಡಿ: http colon double slash 127 dot 0 dot 0 dot 1 ಮತ್ತು Enter ಅನ್ನು ಒತ್ತಿ. |
02:08 | ಇದು Unable to connect ಎಂಬ ಮೆಸೇಜ್ ಅನ್ನು ತೋರಿಸುತ್ತದೆ. |
02:12 | ಇದರ ಅರ್ಥ XAMPP ಸರ್ವೀಸ್ ರನ್ ಆಗುತ್ತಿಲ್ಲ. |
02:16 | ಆದ್ದರಿಂದ, ನಾವು XAMPP ಸರ್ವೀಸ್ ಅನ್ನು ಪ್ರಾರಂಭಿಸಬೇಕು. |
02:20 | Ctrl + Alt + T ಕೀಗಳನ್ನು ಒಟ್ಟಿಗೇ ಒತ್ತುವ ಮೂಲಕ 'ಟರ್ಮಿನಲ್' ಅನ್ನು ತೆರೆಯೋಣ. |
02:26 | sudo space slash opt slash lampp slash lampp space start ಎಂದು ಟೈಪ್ ಮಾಡಿ XAMPP ಅನ್ನು ಆರಂಭಿಸಿ. |
02:38 | ಕೇಳಿದಾಗ administrative ಪಾಸ್ವರ್ಡ್ ಅನ್ನು ಕೊಡಿ ಮತ್ತು Enter ಅನ್ನು ಒತ್ತಿ. |
02:44 | ನಿಮಗೆ ಈ ರೀತಿಯ ಮೆಸೇಜ್ ಸಿಕ್ಕರೆ,
Starting XAMPP for Linux …. XAMPP: Starting Apache...ok. XAMPP: Starting MySQL...ok. XAMPP: Starting ProFTPD...ok. |
02:59 | XAMPP ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಲಾಗಿದೆ ಮತ್ತು ನೀವು ಸರ್ವೀಸ್ ಅನ್ನು ಪ್ರಾರಂಭಿಸಿದ್ದೀರಿ ಎಂದರ್ಥ. |
03:05 | ದಯವಿಟ್ಟು ಗಮನಿಸಿ, XAMPP 5.6.30, MySQL ನ ಬದಲಾಗಿ MariaDB ಅನ್ನು ಬಳಸುತ್ತದೆ. |
03:13 | ಕಮಾಂಡ್ ಗಳು ಮತ್ತು ಟೂಲ್ ಗಳು ಎರಡಕ್ಕೂ ಒಂದೇ ಆಗಿವೆ. |
03:17 | ನಾವು ಬ್ರೌಸರ್ ಗೆ ಹಿಂತಿರುಗಿ ಪೇಜ್ ಅನ್ನು ರಿಫ್ರೆಶ್ ಮಾಡೋಣ. |
03:21 | ನಾವು ಈಗ XAMPP ಸ್ಕ್ರೀನ್ ಅನ್ನು ನೋಡಬಹುದು. |
03:25 | ಟರ್ಮಿನಲ್ ನಲ್ಲಿ ನಿಮಗೆ Command not found ಎಂಬ ಮೆಸೇಜ್ ಸಿಗಬಹುದು. |
03:30 | ಇದರ ಅರ್ಥ, ನಿಮ್ಮ ಮಷಿನ್ ನಲ್ಲಿ XAMPP ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ. |
03:34 | ಹಾಗಿದ್ದಲ್ಲಿ, ಈ ವೆಬ್ಸೈಟ್ ನ PHP and MySQL ಸರಣಿಯಲ್ಲಿ, XAMPP Installation ಎಂಬ ಟ್ಯುಟೋರಿಯಲ್ ಅನ್ನು ನೋಡಿ. |
03:42 | ಮೇಲಿನ ಟ್ಯುಟೋರಿಯಲ್ ನಲ್ಲಿ ಹೇಳಲಾದ ಸೂಚನೆಗಳನ್ನು ಅನುಸರಿಸಿ, XAMPP ನ ಇತ್ತೀಚಿನ ಆವೃತ್ತಿಯನ್ನು ಇನ್ಸ್ಟಾಲ್ ಮಾಡಿ. |
03:49 | ನಾವು 'ಟರ್ಮಿನಲ್' ಗೆ ಹಿಂತಿರುಗೋಣ. |
03:52 | XAMPP ಸರ್ವೀಸ್ ಅನ್ನು ಆರಂಭಿಸಲು, ಮೇಲೆ ತೋರಿಸಿರುವ ಹಂತಗಳನ್ನು ಅನುಸರಿಸಿ. |
03:57 | ಈಗ ನಮ್ಮ ಸಿಸ್ಟಂನಲ್ಲಿರುವ PHP ಯ ಆವೃತ್ತಿಯನ್ನು ಪರೀಕ್ಷಿಸೋಣ. |
04:02 | 'ಟರ್ಮಿನಲ್' ನಲ್ಲಿ ಹೀಗೆ ಟೈಪ್ ಮಾಡಿ: sudo space slash opt slash lampp slash bin slash php space hyphen v ಮತ್ತು Enter ಅನ್ನು ಒತ್ತಿ. |
04:17 | ಕೇಳಿದರೆ administrative ಪಾಸ್ವರ್ಡ್ ಅನ್ನು ಕೊಡಿ ಮತ್ತು Enter ಅನ್ನು ಒತ್ತಿ. |
04:23 | ನನ್ನ PHP ಯ ಆವೃತ್ತಿ 5.6.30 ಆಗಿದೆ. |
04:29 | PHP ಅನ್ನು ಯಶಸ್ವಿಯಾಗಿ ಇನ್ಸ್ಟಾಲ್ ಮಾಡಲಾಗಿದೆ ಎಂದು ಈ ಮೆಸೇಜ್ ಸೂಚಿಸುತ್ತದೆ. |
04:34 | ನಿಮಗೆ 5.4.4 ಗಿಂತ ಕಡಿಮೆಯ ಆವೃತ್ತಿ ಸಿಕ್ಕರೆ, ನೀವು XAMPP ನ ಇತ್ತೀಚಿನ ಆವೃತ್ತಿಯನ್ನು ಇನ್ಸ್ಟಾಲ್ ಮಾಡಬೇಕು. |
04:42 | ನಂತರ, ನಮ್ಮ ಸಿಸ್ಟಂನಲ್ಲಿಯ MariaDB ಆವೃತ್ತಿಯನ್ನು ಪರೀಕ್ಷಿಸೋಣ. |
04:48 | 'ಟರ್ಮಿನಲ್' ನಲ್ಲಿ ಹೀಗೆ ಟೈಪ್ ಮಾಡಿ: sudo space slash opt slash lampp slash bin slash mysql space hyphen v ಮತ್ತು Enter ಅನ್ನು ಒತ್ತಿ. |
05:03 | ಕೇಳಿದರೆ administrative ಪಾಸ್ವರ್ಡ್ ಅನ್ನು ಕೊಡಿ ಮತ್ತು Enter ಅನ್ನು ಒತ್ತಿ. |
05:08 | ನನ್ನ MariaDB ಯ ಆವೃತ್ತಿ 10.1.21 ಆಗಿದೆ. |
05:14 | ನಿಮಗೆ 5.5.30 ಗಿಂತ ಕಡಿಮೆಯ ಆವೃತ್ತಿ ಸಿಕ್ಕರೆ, ನೀವು XAMPP ನ ಇತ್ತೀಚಿನ ಆವೃತ್ತಿಯನ್ನು ಇನ್ಸ್ಟಾಲ್ ಮಾಡಬೇಕು. |
05:23 | ಗಮನಿಸಿ: PHP ಹಾಗೂ ಡೇಟಾಬೇಸ್ ನ ಆವೃತ್ತಿಗಳನ್ನು ಪರೀಕ್ಷಿಸಲು, ನಿಮ್ಮ XAMPP ರನ್ ಆಗುತ್ತಿರಬೇಕು. |
05:29 | ಈಗ 'ಕಮಾಂಡ್ ಪ್ರಾಂಪ್ಟ್' ಬದಲಾಗಿರುವುದನ್ನು ಸಹ ಗಮನಿಸಿ. |
05:34 | MariaDB ಯಿಂದ ಹೊರಬರಲು (exit), backslash q ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
05:40 | ಇಲ್ಲಿ ತೋರಿಸಿರುವಂತೆ ನಿಮಗೆ ಇತರ ಎರರ್ ಗಳು ಸಹ ಸಿಗಬಹುದು. |
05:44 | “An apache daemon is already running” ಎಂಬ ಮೆಸೇಜ್ ನಿಮಗೆ ಸಿಗಬಹುದು. |
05:50 | ಇದರ ಅರ್ಥ, ಆರಂಭಿಕ ಸ್ಕ್ರಿಪ್ಟ್ XAMPP-Apache ಅನ್ನು ಆರಂಭಿಸಲಿಲ್ಲ. |
05:55 | ಇಲ್ಲಿ ಮತ್ತೊಂದು ‘ಅಪಾಚೆ ಇನ್ಸ್ಟನ್ಸ್’ (Apache instance) ಈಗಾಗಲೇ ರನ್ ಆಗುತ್ತಿದೆ ಎಂದು ಇದು ಸೂಚಿಸುತ್ತದೆ. |
06:01 | XAMPP ಅನ್ನು ಸರಿಯಾಗಿ ಆರಂಭಿಸಲು, ನೀವು ಈ 'ಡೀಮನ್' (daemon) ಅನ್ನು ಮೊದಲು ನಿಲ್ಲಿಸಬೇಕು. |
06:06 | Apache ಅನ್ನು ನಿಲ್ಲಿಸಲು ಕಮಾಂಡ್ ಹೀಗಿದೆ:
sudo /etc/init.d/apache2 space stop |
06:19 | MySQL daemon failed to start ಎಂಬ ಮೆಸೇಜ್ ಅನ್ನು ನೀವು ಪಡೆಯಬಹುದು. |
06:25 | ಇದರ ಅರ್ಥ, ಆರಂಭಿಕ ಸ್ಕ್ರಿಪ್ಟ್ MySQL ಅನ್ನು ಆರಂಭಿಸಲಿಲ್ಲ. |
06:30 | ಇಲ್ಲಿ ಮತ್ತೊಂದು ‘ಡೇಟಾಬೇಸ್ ಇನ್ಸ್ಟನ್ಸ್’ (database instance) ಈಗಾಗಲೇ ರನ್ ಆಗುತ್ತಿದೆ ಎಂದು ಇದು ಸೂಚಿಸುತ್ತದೆ. |
06:36 | XAMPP ಅನ್ನು ಸರಿಯಾಗಿ ಆರಂಭಿಸಲು, ನೀವು ಈ 'ಡೀಮನ್' (daemon) ಅನ್ನು ಮೊದಲು ನಿಲ್ಲಿಸಬೇಕು. |
06:41 | ಈ ಕಮಾಂಡ್, MySQL ಅನ್ನು ನಿಲ್ಲಿಸುತ್ತದೆ: sudo space /etc/init.d/mysql space stop . |
06:54 | ಎಲ್ಲಾ ಎರರ್ ಗಳನ್ನು ಬಗೆಹರಿಸಿ ಮತ್ತು XAMPP ಯಶಸ್ವಿಯಾಗಿ ರನ್ ಆಗುವಂತೆ ಮಾಡಿ. |
06:59 | ಆಮೇಲೆ ನಿಮ್ಮ ವೆಬ್- ಬ್ರೌಸರ್ ಗೆ ಹಿಂತಿರುಗಿ, ಪೇಜ್ ಅನ್ನು ರಿಫ್ರೆಶ್ ಮಾಡಿ. |
07:03 | ಭಾಷೆಯ ಆಯ್ಕೆಗೆ ಕೇಳಿದರೆ, English ಅನ್ನು ಆಯ್ಕೆಮಾಡಿ. |
07:08 | ಈಗ ಒಂದು ಯೂಸರ್ ನನ್ನು ಸೇರಿಸಬೇಕು ಮತ್ತು 'ಮೂಡಲ್' ಗಾಗಿ ಒಂದು ಡೇಟಾಬೇಸ್ ಅನ್ನು ತಯಾರಿಸಬೇಕು. |
07:14 | ಇದನ್ನು phpmyadmin ನಲ್ಲಿ ಮಾಡುವೆವು. ಇದು MariaDB ಗಾಗಿ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಆಗಿದೆ. |
07:21 | ಇದು XAMPP ನ ಇನ್ಸ್ಟಾಲ್ಲೇಶನ್ ನೊಂದಿಗೆ ಬರುತ್ತದೆ. |
07:25 | ನಾವು ವೆಬ್- ಬ್ರೌಸರ್ ಗೆ ಹಿಂತಿರುಗೋಣ. |
07:28 | XAMPP ಪೇಜ್ ನಲ್ಲಿ, ಮೇಲಿರುವ ಮೆನುವಿನಲ್ಲಿ, phpMyadmin ಮೇಲೆ ಕ್ಲಿಕ್ ಮಾಡಿ. |
07:34 | ಮೇಲಿನ ಮೆನ್ಯುನಲ್ಲಿ, User Accounts ಮೇಲೆ ಕ್ಲಿಕ್ ಮಾಡಿ. ನಂತರ Add User Account ಮೇಲೆ ಕ್ಲಿಕ್ ಮಾಡಿ. |
07:42 | ಇಲ್ಲಿ ತೆರೆದುಕೊಂಡ ಹೊಸ ವಿಂಡೋದಲ್ಲಿ, ನಿಮ್ಮ ಆಯ್ಕೆಯ ಒಂದು username ಅನ್ನು ನಮೂದಿಸಿ. |
07:48 | ನನ್ನ username ಅನ್ನು, moodle hyphen st ಎಂದು ಟೈಪ್ ಮಾಡುವೆನು. |
07:53 | Host ಡ್ರಾಪ್-ಡೌನ್ ಲಿಸ್ಟ್ ನಿಂದ, Local ಅನ್ನು ಆಯ್ಕೆಮಾಡಿ. |
07:57 | Password ಟೆಕ್ಸ್ಟ್-ಬಾಕ್ಸ್ ನಲ್ಲಿ, ನಿಮ್ಮ ಆಯ್ಕೆಯ ಒಂದು ಪಾಸ್ವರ್ಡ್ ಅನ್ನು ನಮೂದಿಸಿ. |
08:02 | ನನ್ನ ಪಾಸ್ವರ್ಡ್ ಅನ್ನು moodle hyphen st ಎಂದು ಟೈಪ್ ಮಾಡುತ್ತೇನೆ. |
08:07 | Re-type ಟೆಕ್ಸ್ಟ್-ಬಾಕ್ಸ್ ನಲ್ಲಿ, ಅದೇ ಪಾಸ್ವರ್ಡ್ ಅನ್ನು ಟೈಪ್ ಮಾಡಿ. |
08:12 | Authentication Plugin ಆಯ್ಕೆಯನ್ನು ಹಾಗೇ ಇಡಿ. |
08:17 | ದಯವಿಟ್ಟು Generate Password ಪ್ರಾಂಪ್ಟ್ ಮೇಲೆ ಸಧ್ಯಕ್ಕೆ ಕ್ಲಿಕ್ ಮಾಡಬೇಡಿ. |
08:22 | Database for user account ನ ಅಡಿಯಲ್ಲಿ, ನಾವು |
08:26 | Create database with same name and grant all privileges ಆಯ್ಕೆಯನ್ನು ನೋಡಬಹುದು. |
08:31 | ಆ ಆಯ್ಕೆಯನ್ನು ಚೆಕ್ ಮಾಡಿ, ಪೇಜ್ ನ ಕೆಳಗೆ ಬಲಗಡೆಯಲ್ಲಿ Go ಬಟನ್ ಮೇಲೆ ಕ್ಲಿಕ್ ಮಾಡುವೆವು. |
08:38 | ವಿಂಡೋದ ಮೇಲ್ಗಡೆ, “You have added a new user” ಎಂಬ ಮೆಸೇಜ್ ಅನ್ನು ನೋಡಬಹುದು. |
08:44 | ಇದರರ್ಥ- moodle-st ಹೆಸರಿನ ಒಂದು ಹೊಸ ಡೇಟಾಬೇಸ್ ಮತ್ತು moodle-st ಎಂಬ ಯೂಸರ್ ಅನ್ನು ತಯಾರಿಸಲಾಗಿದೆ. |
08:54 | ಯೂಸರ್ ನೇಮ್, ಪಾಸ್ವರ್ಡ್ ಮತ್ತು ಡೇಟಾಬೇಸ್ ನ ಹೆಸರುಗಳನ್ನು ಟಿಪ್ಪಣಿ ಮಾಡಿಕೊಳ್ಳಿ. |
08:59 | 'ಮೂಡಲ್' ನ ಇನ್ಸ್ಟಾಲ್ಲೇಶನ್ ಅನ್ನು ಪೂರ್ಣಗೊಳಿಸಲು ಇವು ನಂತರ ಬೇಕಾಗುತ್ತವೆ. |
09:04 | ಗಮನಿಸಿ: Database ನ ಹೆಸರು ಮತ್ತು username ಒಂದೇ ಇರಬೇಕಾಗಿಲ್ಲ. |
09:10 | ವಿಭಿನ್ನ ಹೆಸರುಗಳಿಗಾಗಿ, ಮೊದಲು ಡೇಟಾಬೇಸ್ ಅನ್ನು ತಯಾರಿಸಿ. ನಂತರ ಆ ಡೇಟಾಬೇಸ್ ಗಾಗಿ ಯೂಸರ್ ನನ್ನು ಕ್ರಿಯೇಟ್ ಮಾಡಿ. |
09:18 | ಅಲ್ಲದೆ, ಹೆಸರಿಡುವ ನಿಯಮದಂತೆ, username ನಲ್ಲಿ ನಡುವೆ ಸ್ಪೇಸ್ ಗಳು ಇರಬಾರದು. |
09:25 | ಈಗ ನಮ್ಮ XAMPP ರನ್ ಆಗುತ್ತಿದೆ ಮತ್ತು ಡೇಟಾಬೇಸ್ ಸಿದ್ಧವಾಗಿದೆ. |
09:29 | Moodle ಅನ್ನು ಇನ್ಸ್ಟಾಲ್ ಮಾಡಲು ಈಗ ನಾವು ಸಿದ್ಧರಾಗಿದ್ದೇವೆ. |
09:32 | ಮುಂದಿನ ಟ್ಯುಟೋರಿಯಲ್ ನಲ್ಲಿ, 'ಮೂಡಲ್' ನ ಇನ್ಸ್ಟಾಲ್ಲೇಶನ್ ನೊಂದಿಗೆ ನಾವು ಮುಂದುವರಿಯುತ್ತೇವೆ. |
09:37 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ. |
09:41 | ಸಂಕ್ಷಿಪ್ತವಾಗಿ, |
09:43 | ಈ ಟ್ಯುಟೋರಿಯಲ್ ನಲ್ಲಿ ನಾವು: |
09:45 | Moodle ನ ಇನ್ಸ್ಟಾಲ್ಲೇಶನ್ ಗಾಗಿ ಅವಶ್ಯಕತೆಗಳು, |
09:49 | ಇವುಗಳನ್ನು ಹೇಗೆ ಪರೀಕ್ಷಿಸುವುದು, ಡೇಟಾಬೇಸ್ ಹೇಗೆ ಸೆಟ್-ಅಪ್ ಮಾಡುವುದು ಮತ್ತು ಯೂಸರ್ ಅನ್ನು ಹೇಗೆ ಸೇರಿಸುವುದು ಇವುಗಳ ಬಗ್ಗೆ ಕಲಿತಿದ್ದೇವೆ. |
09:57 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. |
10:03 | ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
10:06 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. |
10:11 | ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
10:15 | ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ? |
10:18 | ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ: |
10:27 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆಯ್ಕೆ ಮಾಡಿ. |
10:30 | ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಉತ್ತರಿಸುತ್ತಾರೆ . |
10:36 | ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇರುತ್ತದೆ. |
10:41 | ದಯವಿಟ್ಟು ಇದಕ್ಕೆ ಸಂಬಂಧಿಸದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. |
10:46 | ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. |
10:48 | ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಕಲಿಕೆಯ ವಸ್ತುವಿನಂತೆ ಬಳಸಬಹುದು. |
10:54 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. |
11:01 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
11:06 | ಈ ಸ್ಕ್ರಿಪ್ಟ್, ಪ್ರಿಯಾಂಕಾ ಅವರ ಕೊಡುಗೆಯಾಗಿದೆ. |
11:10 | ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |