Moodle-Learning-Management-System/C2/Getting-Ready-for-Moodle-Installation/Kannada

From Script | Spoken-Tutorial
Jump to: navigation, search
Time Narration
00:01 Getting ready for Moodle installation ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, Moodle ನ ಇನ್ಸ್ಟಾಲ್ಲೇಶನ್ ಗಾಗಿ ಏನು ಅಗತ್ಯವಿದೆ ಎಂದು ಕಲಿಯುವೆವು.
00:14 ಲೋಕಲ್-ಹೋಸ್ಟ್ ನಲ್ಲಿನ ಪ್ಯಾಕೇಜ್ ಗಳನ್ನು ಪರಿಶೀಲಿಸುವುದು ಮತ್ತು ಡೇಟಾಬೇಸ್ ಸೆಟ್-ಅಪ್ ಮಾಡುವುದನ್ನು ಸಹ ಕಲಿಯುತ್ತೇವೆ.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:30 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP ಹಾಗೂ Firefox ವೆಬ್-ಬ್ರೌಸರ್ ಅನ್ನು ಬಳಸುತ್ತೇನೆ.
00:42 ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
00:46 ನಿಮ್ಮ ಸಿಸ್ಟಂ ನಲ್ಲಿ Moodle 3.3 ಯನ್ನು ಇನ್ಸ್ಟಾಲ್ ಮಾಡಲು, ನೀವು ಕೆಳಗಿನವುಗಳನ್ನು ಬೆಂಬಲಿಸುವ ಮಷಿನ್ ಅನ್ನು ಹೊಂದಿರಬೇಕು:
00:52 Apache 2.x (ಅಥವಾ ಹೆಚ್ಚಿನ ಆವೃತ್ತಿ),

MariaDB 5.5.30 (ಅಥವಾ ಯಾವುದೇ ಹೆಚ್ಚಿನ ಆವೃತ್ತಿ) ಮತ್ತು

PHP 5.4.4 +( ಅಥವಾ ಯಾವುದೇ ಹೆಚ್ಚಿನ ಆವೃತ್ತಿ).

01:08 ನೀವು ಮೇಲಿನವುಗಳ ಹಳೆಯ ಆವೃತ್ತಿಗಳನ್ನು ಹೊಂದಿದ್ದರೆ, ಮುಂದುವರಿಯುವ ಮೊದಲು ಇವುಗಳನ್ನು ಅನ್-ಇನ್ಸ್ಟಾಲ್ ಮಾಡುವುದು ಉತ್ತಮ.
01:16 MariaDB (ಮಾರಿಯಾ ಡಿಬಿ) ಶೀಘ್ರವಾಗಿ ಬೆಳೆಯುತ್ತಿರುವ ಓಪನ್-ಸೋರ್ಸ್ ಡೇಟಾಬೇಸ್ ಆಗಿದೆ.
01:21 ಇದು MySQL ಡೇಟಾಬೇಸ್ ಗೆ ಪರ್ಯಾಯವಾಗಿದೆ.
01:26 Web-server distributions ನಿಮಗೆ Apache, MariaDB ಮತ್ತು PHP ಗಳನ್ನು ಒಟ್ಟಿಗೇ ಕೊಡುತ್ತದೆ.
01:34 ನೀವು ಇವುಗಳನ್ನು ಪ್ರತ್ಯೇಕವಾಗಿ ಅಥವಾ XAMPP, WAMPP ಅಥವಾ LAMPP ನಂತಹ Web server distribution ಗಳನ್ನು ಬಳಸಿ ಇನ್ಸ್ಟಾಲ್ ಮಾಡಬಹುದು.
01:44 ನಾನು ಈಗಾಗಲೇ ನನ್ನ ಮಷಿನ್ ನಲ್ಲಿ XAMPP ಅನ್ನು ಇನ್ಸ್ಟಾಲ್ ಮಾಡಿದ್ದೇನೆ.
01:49 ಮೊದಲು ನಮ್ಮ ಮಷಿನ್ ನಲ್ಲಿ XAMPP ರನ್ ಆಗುತ್ತಿದೆಯೆ ಎಂದು ಪರಿಶೀಲಿಸಬೇಕು.
01:54 ವೆಬ್ ಬ್ರೌಸರ್ ನಲ್ಲಿ, ಹೀಗೆ ಟೈಪ್ ಮಾಡಿ: http colon double slash 127 dot 0 dot 0 dot 1 ಮತ್ತು Enter ಅನ್ನು ಒತ್ತಿ.
02:08 ಇದು Unable to connect ಎಂಬ ಮೆಸೇಜ್ ಅನ್ನು ತೋರಿಸುತ್ತದೆ.
02:12 ಇದರ ಅರ್ಥ XAMPP ಸರ್ವೀಸ್ ರನ್ ಆಗುತ್ತಿಲ್ಲ.
02:16 ಆದ್ದರಿಂದ, ನಾವು XAMPP ಸರ್ವೀಸ್ ಅನ್ನು ಪ್ರಾರಂಭಿಸಬೇಕು.
02:20 Ctrl + Alt + T ಕೀಗಳನ್ನು ಒಟ್ಟಿಗೇ ಒತ್ತುವ ಮೂಲಕ 'ಟರ್ಮಿನಲ್' ಅನ್ನು ತೆರೆಯೋಣ.
02:26 sudo space slash opt slash lampp slash lampp space start ಎಂದು ಟೈಪ್ ಮಾಡಿ XAMPP ಅನ್ನು ಆರಂಭಿಸಿ.
02:38 ಕೇಳಿದಾಗ administrative ಪಾಸ್ವರ್ಡ್ ಅನ್ನು ಕೊಡಿ ಮತ್ತು Enter ಅನ್ನು ಒತ್ತಿ.
02:44 ನಿಮಗೆ ಈ ರೀತಿಯ ಮೆಸೇಜ್ ಸಿಕ್ಕರೆ,

Starting XAMPP for Linux ….

XAMPP: Starting Apache...ok.

XAMPP: Starting MySQL...ok.

XAMPP: Starting ProFTPD...ok.

02:59 XAMPP ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಲಾಗಿದೆ ಮತ್ತು ನೀವು ಸರ್ವೀಸ್ ಅನ್ನು ಪ್ರಾರಂಭಿಸಿದ್ದೀರಿ ಎಂದರ್ಥ.
03:05 ದಯವಿಟ್ಟು ಗಮನಿಸಿ, XAMPP 5.6.30, MySQL ನ ಬದಲಾಗಿ MariaDB ಅನ್ನು ಬಳಸುತ್ತದೆ.
03:13 ಕಮಾಂಡ್ ಗಳು ಮತ್ತು ಟೂಲ್ ಗಳು ಎರಡಕ್ಕೂ ಒಂದೇ ಆಗಿವೆ.
03:17 ನಾವು ಬ್ರೌಸರ್ ಗೆ ಹಿಂತಿರುಗಿ ಪೇಜ್ ಅನ್ನು ರಿಫ್ರೆಶ್ ಮಾಡೋಣ.
03:21 ನಾವು ಈಗ XAMPP ಸ್ಕ್ರೀನ್ ಅನ್ನು ನೋಡಬಹುದು.
03:25 ಟರ್ಮಿನಲ್ ನಲ್ಲಿ ನಿಮಗೆ Command not found ಎಂಬ ಮೆಸೇಜ್ ಸಿಗಬಹುದು.
03:30 ಇದರ ಅರ್ಥ, ನಿಮ್ಮ ಮಷಿನ್ ನಲ್ಲಿ XAMPP ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ.
03:34 ಹಾಗಿದ್ದಲ್ಲಿ, ಈ ವೆಬ್ಸೈಟ್ ನ PHP and MySQL ಸರಣಿಯಲ್ಲಿ, XAMPP Installation ಎಂಬ ಟ್ಯುಟೋರಿಯಲ್ ಅನ್ನು ನೋಡಿ.
03:42 ಮೇಲಿನ ಟ್ಯುಟೋರಿಯಲ್ ನಲ್ಲಿ ಹೇಳಲಾದ ಸೂಚನೆಗಳನ್ನು ಅನುಸರಿಸಿ, XAMPP ನ ಇತ್ತೀಚಿನ ಆವೃತ್ತಿಯನ್ನು ಇನ್ಸ್ಟಾಲ್ ಮಾಡಿ.
03:49 ನಾವು 'ಟರ್ಮಿನಲ್' ಗೆ ಹಿಂತಿರುಗೋಣ.
03:52 XAMPP ಸರ್ವೀಸ್ ಅನ್ನು ಆರಂಭಿಸಲು, ಮೇಲೆ ತೋರಿಸಿರುವ ಹಂತಗಳನ್ನು ಅನುಸರಿಸಿ.
03:57 ಈಗ ನಮ್ಮ ಸಿಸ್ಟಂನಲ್ಲಿರುವ PHP ಯ ಆವೃತ್ತಿಯನ್ನು ಪರೀಕ್ಷಿಸೋಣ.
04:02 'ಟರ್ಮಿನಲ್' ನಲ್ಲಿ ಹೀಗೆ ಟೈಪ್ ಮಾಡಿ: sudo space slash opt slash lampp slash bin slash php space hyphen v ಮತ್ತು Enter ಅನ್ನು ಒತ್ತಿ.
04:17 ಕೇಳಿದರೆ administrative ಪಾಸ್ವರ್ಡ್ ಅನ್ನು ಕೊಡಿ ಮತ್ತು Enter ಅನ್ನು ಒತ್ತಿ.
04:23 ನನ್ನ PHP ಯ ಆವೃತ್ತಿ 5.6.30 ಆಗಿದೆ.
04:29 PHP ಅನ್ನು ಯಶಸ್ವಿಯಾಗಿ ಇನ್ಸ್ಟಾಲ್ ಮಾಡಲಾಗಿದೆ ಎಂದು ಈ ಮೆಸೇಜ್ ಸೂಚಿಸುತ್ತದೆ.
04:34 ನಿಮಗೆ 5.4.4 ಗಿಂತ ಕಡಿಮೆಯ ಆವೃತ್ತಿ ಸಿಕ್ಕರೆ, ನೀವು XAMPP ನ ಇತ್ತೀಚಿನ ಆವೃತ್ತಿಯನ್ನು ಇನ್ಸ್ಟಾಲ್ ಮಾಡಬೇಕು.
04:42 ನಂತರ, ನಮ್ಮ ಸಿಸ್ಟಂನಲ್ಲಿಯ MariaDB ಆವೃತ್ತಿಯನ್ನು ಪರೀಕ್ಷಿಸೋಣ.
04:48 'ಟರ್ಮಿನಲ್' ನಲ್ಲಿ ಹೀಗೆ ಟೈಪ್ ಮಾಡಿ: sudo space slash opt slash lampp slash bin slash mysql space hyphen v ಮತ್ತು Enter ಅನ್ನು ಒತ್ತಿ.
05:03 ಕೇಳಿದರೆ administrative ಪಾಸ್ವರ್ಡ್ ಅನ್ನು ಕೊಡಿ ಮತ್ತು Enter ಅನ್ನು ಒತ್ತಿ.
05:08 ನನ್ನ MariaDB ಯ ಆವೃತ್ತಿ 10.1.21 ಆಗಿದೆ.
05:14 ನಿಮಗೆ 5.5.30 ಗಿಂತ ಕಡಿಮೆಯ ಆವೃತ್ತಿ ಸಿಕ್ಕರೆ, ನೀವು XAMPP ನ ಇತ್ತೀಚಿನ ಆವೃತ್ತಿಯನ್ನು ಇನ್ಸ್ಟಾಲ್ ಮಾಡಬೇಕು.
05:23 ಗಮನಿಸಿ: PHP ಹಾಗೂ ಡೇಟಾಬೇಸ್ ನ ಆವೃತ್ತಿಗಳನ್ನು ಪರೀಕ್ಷಿಸಲು, ನಿಮ್ಮ XAMPP ರನ್ ಆಗುತ್ತಿರಬೇಕು.
05:29 ಈಗ 'ಕಮಾಂಡ್ ಪ್ರಾಂಪ್ಟ್' ಬದಲಾಗಿರುವುದನ್ನು ಸಹ ಗಮನಿಸಿ.
05:34 MariaDB ಯಿಂದ ಹೊರಬರಲು (exit), backslash q ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
05:40 ಇಲ್ಲಿ ತೋರಿಸಿರುವಂತೆ ನಿಮಗೆ ಇತರ ಎರರ್ ಗಳು ಸಹ ಸಿಗಬಹುದು.
05:44 An apache daemon is already running” ಎಂಬ ಮೆಸೇಜ್ ನಿಮಗೆ ಸಿಗಬಹುದು.
05:50 ಇದರ ಅರ್ಥ, ಆರಂಭಿಕ ಸ್ಕ್ರಿಪ್ಟ್ XAMPP-Apache ಅನ್ನು ಆರಂಭಿಸಲಿಲ್ಲ.
05:55 ಇಲ್ಲಿ ಮತ್ತೊಂದು ‘ಅಪಾಚೆ ಇನ್ಸ್ಟನ್ಸ್’ (Apache instance) ಈಗಾಗಲೇ ರನ್ ಆಗುತ್ತಿದೆ ಎಂದು ಇದು ಸೂಚಿಸುತ್ತದೆ.
06:01 XAMPP ಅನ್ನು ಸರಿಯಾಗಿ ಆರಂಭಿಸಲು, ನೀವು ಈ 'ಡೀಮನ್' (daemon) ಅನ್ನು ಮೊದಲು ನಿಲ್ಲಿಸಬೇಕು.
06:06 Apache ಅನ್ನು ನಿಲ್ಲಿಸಲು ಕಮಾಂಡ್ ಹೀಗಿದೆ:

sudo /etc/init.d/apache2 space stop

06:19 MySQL daemon failed to start ಎಂಬ ಮೆಸೇಜ್ ಅನ್ನು ನೀವು ಪಡೆಯಬಹುದು.
06:25 ಇದರ ಅರ್ಥ, ಆರಂಭಿಕ ಸ್ಕ್ರಿಪ್ಟ್ MySQL ಅನ್ನು ಆರಂಭಿಸಲಿಲ್ಲ.
06:30 ಇಲ್ಲಿ ಮತ್ತೊಂದು ‘ಡೇಟಾಬೇಸ್ ಇನ್ಸ್ಟನ್ಸ್’ (database instance) ಈಗಾಗಲೇ ರನ್ ಆಗುತ್ತಿದೆ ಎಂದು ಇದು ಸೂಚಿಸುತ್ತದೆ.
06:36 XAMPP ಅನ್ನು ಸರಿಯಾಗಿ ಆರಂಭಿಸಲು, ನೀವು ಈ 'ಡೀಮನ್' (daemon) ಅನ್ನು ಮೊದಲು ನಿಲ್ಲಿಸಬೇಕು.
06:41 ಈ ಕಮಾಂಡ್, MySQL ಅನ್ನು ನಿಲ್ಲಿಸುತ್ತದೆ: sudo space /etc/init.d/mysql space stop .
06:54 ಎಲ್ಲಾ ಎರರ್ ಗಳನ್ನು ಬಗೆಹರಿಸಿ ಮತ್ತು XAMPP ಯಶಸ್ವಿಯಾಗಿ ರನ್ ಆಗುವಂತೆ ಮಾಡಿ.
06:59 ಆಮೇಲೆ ನಿಮ್ಮ ವೆಬ್- ಬ್ರೌಸರ್ ಗೆ ಹಿಂತಿರುಗಿ, ಪೇಜ್ ಅನ್ನು ರಿಫ್ರೆಶ್ ಮಾಡಿ.
07:03 ಭಾಷೆಯ ಆಯ್ಕೆಗೆ ಕೇಳಿದರೆ, English ಅನ್ನು ಆಯ್ಕೆಮಾಡಿ.
07:08 ಈಗ ಒಂದು ಯೂಸರ್ ನನ್ನು ಸೇರಿಸಬೇಕು ಮತ್ತು 'ಮೂಡಲ್' ಗಾಗಿ ಒಂದು ಡೇಟಾಬೇಸ್ ಅನ್ನು ತಯಾರಿಸಬೇಕು.
07:14 ಇದನ್ನು phpmyadmin ನಲ್ಲಿ ಮಾಡುವೆವು. ಇದು MariaDB ಗಾಗಿ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಆಗಿದೆ.
07:21 ಇದು XAMPP ನ ಇನ್ಸ್ಟಾಲ್ಲೇಶನ್ ನೊಂದಿಗೆ ಬರುತ್ತದೆ.
07:25 ನಾವು ವೆಬ್- ಬ್ರೌಸರ್ ಗೆ ಹಿಂತಿರುಗೋಣ.
07:28 XAMPP ಪೇಜ್ ನಲ್ಲಿ, ಮೇಲಿರುವ ಮೆನುವಿನಲ್ಲಿ, phpMyadmin ಮೇಲೆ ಕ್ಲಿಕ್ ಮಾಡಿ.
07:34 ಮೇಲಿನ ಮೆನ್ಯುನಲ್ಲಿ, User Accounts ಮೇಲೆ ಕ್ಲಿಕ್ ಮಾಡಿ. ನಂತರ Add User Account ಮೇಲೆ ಕ್ಲಿಕ್ ಮಾಡಿ.
07:42 ಇಲ್ಲಿ ತೆರೆದುಕೊಂಡ ಹೊಸ ವಿಂಡೋದಲ್ಲಿ, ನಿಮ್ಮ ಆಯ್ಕೆಯ ಒಂದು username ಅನ್ನು ನಮೂದಿಸಿ.
07:48 ನನ್ನ username ಅನ್ನು, moodle hyphen st ಎಂದು ಟೈಪ್ ಮಾಡುವೆನು.
07:53 Host ಡ್ರಾಪ್-ಡೌನ್ ಲಿಸ್ಟ್ ನಿಂದ, Local ಅನ್ನು ಆಯ್ಕೆಮಾಡಿ.
07:57 Password ಟೆಕ್ಸ್ಟ್-ಬಾಕ್ಸ್ ನಲ್ಲಿ, ನಿಮ್ಮ ಆಯ್ಕೆಯ ಒಂದು ಪಾಸ್ವರ್ಡ್ ಅನ್ನು ನಮೂದಿಸಿ.
08:02 ನನ್ನ ಪಾಸ್ವರ್ಡ್ ಅನ್ನು moodle hyphen st ಎಂದು ಟೈಪ್ ಮಾಡುತ್ತೇನೆ.
08:07 Re-type ಟೆಕ್ಸ್ಟ್-ಬಾಕ್ಸ್ ನಲ್ಲಿ, ಅದೇ ಪಾಸ್ವರ್ಡ್ ಅನ್ನು ಟೈಪ್ ಮಾಡಿ.
08:12 Authentication Plugin ಆಯ್ಕೆಯನ್ನು ಹಾಗೇ ಇಡಿ.
08:17 ದಯವಿಟ್ಟು Generate Password ಪ್ರಾಂಪ್ಟ್ ಮೇಲೆ ಸಧ್ಯಕ್ಕೆ ಕ್ಲಿಕ್ ಮಾಡಬೇಡಿ.
08:22 Database for user account ನ ಅಡಿಯಲ್ಲಿ, ನಾವು
08:26 Create database with same name and grant all privileges ಆಯ್ಕೆಯನ್ನು ನೋಡಬಹುದು.
08:31 ಆ ಆಯ್ಕೆಯನ್ನು ಚೆಕ್ ಮಾಡಿ, ಪೇಜ್ ನ ಕೆಳಗೆ ಬಲಗಡೆಯಲ್ಲಿ Go ಬಟನ್ ಮೇಲೆ ಕ್ಲಿಕ್ ಮಾಡುವೆವು.
08:38 ವಿಂಡೋದ ಮೇಲ್ಗಡೆ, “You have added a new user” ಎಂಬ ಮೆಸೇಜ್ ಅನ್ನು ನೋಡಬಹುದು.
08:44 ಇದರರ್ಥ- moodle-st ಹೆಸರಿನ ಒಂದು ಹೊಸ ಡೇಟಾಬೇಸ್ ಮತ್ತು moodle-st ಎಂಬ ಯೂಸರ್ ಅನ್ನು ತಯಾರಿಸಲಾಗಿದೆ.
08:54 ಯೂಸರ್ ನೇಮ್, ಪಾಸ್ವರ್ಡ್ ಮತ್ತು ಡೇಟಾಬೇಸ್ ನ ಹೆಸರುಗಳನ್ನು ಟಿಪ್ಪಣಿ ಮಾಡಿಕೊಳ್ಳಿ.
08:59 'ಮೂಡಲ್' ನ ಇನ್ಸ್ಟಾಲ್ಲೇಶನ್ ಅನ್ನು ಪೂರ್ಣಗೊಳಿಸಲು ಇವು ನಂತರ ಬೇಕಾಗುತ್ತವೆ.
09:04 ಗಮನಿಸಿ: Database ನ ಹೆಸರು ಮತ್ತು username ಒಂದೇ ಇರಬೇಕಾಗಿಲ್ಲ.
09:10 ವಿಭಿನ್ನ ಹೆಸರುಗಳಿಗಾಗಿ, ಮೊದಲು ಡೇಟಾಬೇಸ್ ಅನ್ನು ತಯಾರಿಸಿ. ನಂತರ ಆ ಡೇಟಾಬೇಸ್ ಗಾಗಿ ಯೂಸರ್ ನನ್ನು ಕ್ರಿಯೇಟ್ ಮಾಡಿ.
09:18 ಅಲ್ಲದೆ, ಹೆಸರಿಡುವ ನಿಯಮದಂತೆ, username ನಲ್ಲಿ ನಡುವೆ ಸ್ಪೇಸ್ ಗಳು ಇರಬಾರದು.
09:25 ಈಗ ನಮ್ಮ XAMPP ರನ್ ಆಗುತ್ತಿದೆ ಮತ್ತು ಡೇಟಾಬೇಸ್ ಸಿದ್ಧವಾಗಿದೆ.
09:29 Moodle ಅನ್ನು ಇನ್ಸ್ಟಾಲ್ ಮಾಡಲು ಈಗ ನಾವು ಸಿದ್ಧರಾಗಿದ್ದೇವೆ.
09:32 ಮುಂದಿನ ಟ್ಯುಟೋರಿಯಲ್ ನಲ್ಲಿ, 'ಮೂಡಲ್' ನ ಇನ್ಸ್ಟಾಲ್ಲೇಶನ್ ನೊಂದಿಗೆ ನಾವು ಮುಂದುವರಿಯುತ್ತೇವೆ.
09:37 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ.
09:41 ಸಂಕ್ಷಿಪ್ತವಾಗಿ,
09:43 ಈ ಟ್ಯುಟೋರಿಯಲ್ ನಲ್ಲಿ ನಾವು:
09:45 Moodle ನ ಇನ್ಸ್ಟಾಲ್ಲೇಶನ್ ಗಾಗಿ ಅವಶ್ಯಕತೆಗಳು,
09:49 ಇವುಗಳನ್ನು ಹೇಗೆ ಪರೀಕ್ಷಿಸುವುದು, ಡೇಟಾಬೇಸ್ ಹೇಗೆ ಸೆಟ್-ಅಪ್ ಮಾಡುವುದು ಮತ್ತು ಯೂಸರ್ ಅನ್ನು ಹೇಗೆ ಸೇರಿಸುವುದು ಇವುಗಳ ಬಗ್ಗೆ ಕಲಿತಿದ್ದೇವೆ.
09:57 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ.
10:03 ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
10:06 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.
10:11 ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
10:15 ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?
10:18 ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ:

http://forums.spoken-tutorial.org

10:27 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆಯ್ಕೆ ಮಾಡಿ.
10:30 ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಉತ್ತರಿಸುತ್ತಾರೆ .
10:36 ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇರುತ್ತದೆ.
10:41 ದಯವಿಟ್ಟು ಇದಕ್ಕೆ ಸಂಬಂಧಿಸದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
10:46 ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
10:48 ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಕಲಿಕೆಯ ವಸ್ತುವಿನಂತೆ ಬಳಸಬಹುದು.
10:54 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ.
11:01 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
11:06 ಈ ಸ್ಕ್ರಿಪ್ಟ್, ಪ್ರಿಯಾಂಕಾ ಅವರ ಕೊಡುಗೆಯಾಗಿದೆ.
11:10 ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14