Koha-Library-Management-System/C2/Add-Subscription-in-Serials/Kannada
00:01 | How to add Subscription in Serials ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು ಹೊಸ ಸೀರಿಯಲ್ ಗಾಗಿ subscription ಅನ್ನು ಹೇಗೆ ಸೇರಿಸುವುದೆಂದು ಕಲಿಯುವೆವು. |
00:15 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:29 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು - ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು, |
00:35 | Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು |
00:39 | ಮತ್ತು Koha ದಲ್ಲಿ, Admin ಆಕ್ಸೆಸ್ ಅನ್ನು ಹೊಂದಿರಬೇಕು.
ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:50 | ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ನಾವು ಸೀರಿಯಲ್ ಸಬ್ಸ್ಕ್ರಿಪ್ಶನ್ ಗಳನ್ನು ಹೇಗೆ ಕ್ಯಾಟಲಾಗ್ ಮಾಡುವುದೆಂದು ಕಲಿತಿದ್ದೆವು. |
00:57 | ಈ ಟ್ಯುಟೋರಿಯಲ್ ನಲ್ಲಿ, ಹೊಸ ಸೀರಿಯಲ್ ಗಳಿಗಾಗಿ ಹೊಸ subscription ಅನ್ನು ಹೇಗೆ ಸೇರಿಸುವುದೆಂದು ಕಲಿಯುವೆವು. |
01:04 | Superlibrarian Bella ಮತ್ತು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ. |
01:10 | ಇದೇ ಸರಣಿಯ ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ವಿವರಿಸಿದಂತೆ, Serials ಸಬ್ಸ್ಕ್ರಿಪ್ಶನ್ ಗಾಗಿ (subscription) ಒಂದು ಹೊಸ ವೆಂಡರ್ (Vendor) ಅನ್ನು ಕ್ರಿಯೇಟ್ ಮಾಡಿ. |
01:18 | ನಾನು Mumbai Journal supplier ಎಂಬ ಹೆಸರನ್ನು ಕೊಡುವೆನು. ನಂತರ ನಾನು Mumbaijournals@gmail.com - ಈ ಇಮೇಲ್- ಐಡಿ ಯನ್ನು ಸೇರಿಸಿದ್ದೇನೆ. |
01:30 | ಈ ಕೆಳಗಿನ ಚೆಕ್-ಬಾಕ್ಸ್ ಗಳನ್ನು ಚೆಕ್ ಮಾಡಲು ನೆನಪಿಡಿ -
Primary acquisitions contact:, Primary serials contact:, Contact about late orders ಮತ್ತು Contact about late issues. |
01:46 | ಈ ವಿವರಗಳನ್ನು ನಂತರ ಈ ಟ್ಯುಟೋರಿಯಲ್ ನಲ್ಲಿ ಬಳಸಲಾಗುವುದು. |
01:51 | ಹೀಗೆಯೇ, ನಿಮ್ಮ ಮಾರಾಟಗಾರರ (vendor) ವಿವರಗಳನ್ನು ನೀವು ತುಂಬಬೇಕು. |
01:56 | ನಾವು ಚಂದಾದಾರರಾಗಬೇಕಾದ (subscribe) 'ಜರ್ನಲ್' ನ ಸ್ಕ್ರೀನ್-ಶಾಟ್ ಇಲ್ಲಿದೆ. |
02:01 | ಇಲ್ಲಿ ತೋರಿಸಿದ ಎಲ್ಲಾ ವಿವರಗಳನ್ನು, ನಾನು ನನ್ನ ಕೋಹಾ ಇಂಟರ್ಫೇಸ್ ನಲ್ಲಿ ನಮೂದಿಸುತ್ತಿದ್ದೇನೆ. |
02:08 | ನಾವು ಕೋಹಾ ಇಂಟರ್ಫೇಸ್ ಗೆ ಹೋಗೋಣ. |
02:12 | ಈಗ, Koha home ಪೇಜ್ ನಲ್ಲಿ, Serials ಮೇಲೆ ಕ್ಲಿಕ್ ಮಾಡಿ. |
02:18 | ಈಗ ತೆರೆದುಕೊಳ್ಳುವ ಪೇಜ್ ನಲ್ಲಿ, ‘New Subscription’ ಮೇಲೆ ಕ್ಲಿಕ್ ಮಾಡಿ. |
02:24 | ಇದು Add a new subscription (1/2) ಎಂದು ಹೇಳುವ ಮತ್ತೊಂದು ಹೊಸ ಪೇಜ್ ಅನ್ನು ತೆರೆಯುತ್ತದೆ. |
02:30 | ಇಲ್ಲಿ, ಕೆಲವು ವಿವರಗಳನ್ನು ತುಂಬಲು ನಮಗೆ ಸೂಚಿಸಲಾಗುತ್ತದೆ. |
02:35 | Vendor ಗಾಗಿ, ಈ ಎರಡು ಖಾಲಿ ಬಾಕ್ಸ್ ಗಳ ಬದಿಯಲ್ಲಿರುವ Search for vendor ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:43 | ಹೊಸ ವಿಂಡೋದಲ್ಲಿ, Serial subscription: search for vendor ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
02:50 | Vendor name ನ ಫೀಲ್ಡ್ ನಲ್ಲಿ, ನಾನು ಹೀಗೆ ಟೈಪ್ ಮಾಡುವೆನು: Mumbai Journal Supplier |
02:56 | ನಿಮ್ಮ ವೆಂಡರ್ ನ (ಮಾರಾಟಗಾರ) ಹೆಸರನ್ನು ನೀವು ಇಲ್ಲಿ ಟೈಪ್ ಮಾಡಬೇಕು.
ಈಗ, ಈ ಫೀಲ್ಡ್ ನ ಬಲಭಾಗದಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ. |
03:05 | Vendor search results ಅನ್ನು ತೋರಿಸುತ್ತಿರುವ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
03:10 | ಕೆಳಗಿರುವ ಟೇಬಲ್ ನಲ್ಲಿ, Select: ಎಂಬ ವಿಭಾಗದ ಅಡಿಯಲ್ಲಿ, Choose ಮೇಲೆ ಕ್ಲಿಕ್ ಮಾಡಿ. ಇದು Vendor ನ ಹೆಸರಿನ ಬದಿಯಲ್ಲಿದೆ. |
03:19 | ಇದೇ ಪೇಜ್, ಎಂದರೆ Add a new subscription (1/2) ಮತ್ತೆ ತೆರೆದುಕೊಳ್ಳುತ್ತದೆ.
ಈ ಪೇಜ್ ಅನ್ನು ಮುಚ್ಚಬೇಡಿ. ಟ್ಯುಟೋರಿಯಲ್ ನಲ್ಲಿ ಇದನ್ನು ನಂತರ ಮತ್ತೆ ಬಳಸಲಾಗುವುದು. |
03:31 | ನಂತರ Record ಇದೆ. Record ನ ಬದಿಯಲ್ಲಿ ಎರಡು ಖಾಲಿ ಬಾಕ್ಸ್ ಗಳಿವೆ. |
03:37 | ಈ ಖಾಲಿ ಬಾಕ್ಸ್ ಗಳ ಕೆಳಗೆ:
Search for record ಮತ್ತು Create record ಎಂಬ ಎರಡು ಟ್ಯಾಬ್ ಗಳಿವೆ. |
03:46 | ಒಂದುವೇಳೆ ದಾಖಲೆಯು ಈಗಾಗಲೇ ಇದ್ದರೆ, Search for record ಮೇಲೆ ಕ್ಲಿಕ್ ಮಾಡಿ. |
03:53 | ಇಲ್ಲದಿದ್ದರೆ, ಆಯಾ ಸೀರಿಯಲ್ ಗಾಗಿ ಒಂದು ಹೊಸ ದಾಖಲೆಯನ್ನು ಸೃಷ್ಟಿ ಮಾಡಲು, Create record ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
04:01 | ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ನಾವು Indian Journal of Microbiology ಎಂಬ ಶೀರ್ಷಿಕೆಯ, ಒಂದು ಸೀರಿಯಲ್ ಅನ್ನು ಈಗಾಗಲೇ ಕ್ಯಾಟಲಾಗ್ ಮಾಡಿದ್ದೇವೆ. |
04:10 | ಹೀಗಾಗಿ, ನಾವು Search for record ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡುತ್ತೇವೆ. |
04:16 | Catalog search ಎಂಬ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ. |
04:21 | Keyword ಫೀಲ್ಡ್ ನಲ್ಲಿ, Indian ಎಂದು ನಮೂದಿಸಿ. |
04:27 | ನಂತರ, ಪೇಜ್ ನ ಕೆಳಗಿರುವ Search ಮೇಲೆ ಕ್ಲಿಕ್ ಮಾಡಿ. |
04:32 | Search results from 1 to 1 of 1, ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
04:39 | ಮೊದಲೇ ನಮೂದಿಸಿದಂತೆ, ಇದು ಕೆಳಗಿನ ವಿವರಗಳನ್ನು ಹೊಂದಿದೆ:
Title- Indian Journal of Microbiology, Publisher- Springer, ISSN- 0046-8991. |
04:58 | ನೀವು ನಮೂದಿಸಿದ ವಿವರಗಳನ್ನು ನೋಡುತ್ತೀರಿ. |
05:02 | ಆಮೇಲೆ, ಟೇಬಲ್ ನ ಬಲಮೂಲೆಯಲ್ಲಿರುವ Choose ಬಟನ್ ಮೇಲೆ ಕ್ಲಿಕ್ ಮಾಡಿ. |
05:07 | ಅದೇ ವಿಂಡೋ ಮುಚ್ಚುತ್ತದೆ ಮತ್ತು ನಮೂದಿಸಲಾದ ವಿವರಗಳು ಪೇಜ್ ನಲ್ಲಿ ಕಾಣಿಸಿಕೊಳ್ಳುತ್ತವೆ - |
05:13 | Add a new subscription (1/2),
Record ಫೀಲ್ಡ್ ನಲ್ಲಿ, ನನ್ನದು ಸಂಖ್ಯೆ 3 ಎಂದು ತೋರಿಸುತ್ತಿದೆ. |
05:22 | ನೀವು ಮಾಡಿದ ನಮೂದುಗಳ ಸಂಖ್ಯೆಯನ್ನು ಅವಲಂಬಿಸಿ, ಇದು ನಿಮ್ಮ ಇಂಟರ್ಫೇಸ್ ನಲ್ಲಿ ಬೇರೆ ಇರಬಹುದು. |
05:29 | ಈ ಕೆಳಗಿನವುಗಳನ್ನು ನಾನು ಇದ್ದ ಹಾಗೇ ಬಿಡುತ್ತೇನೆ. |
05:33 | ಮುಂದೆ,
Library ಗಾಗಿ, ಡ್ರಾಪ್-ಡೌನ್ ನಿಂದ Spoken Tutorial Library ಯನ್ನು ನಾನು ಆಯ್ಕೆಮಾಡುವೆನು. |
05:41 | ಅಗತ್ಯವಿದ್ದರೆ, ನೀವು -
Public note ಮತ್ತು Nonpublic note ಗಳನ್ನು ತುಂಬಬಹುದು. |
05:47 | ನಾನು ಅವುಗಳನ್ನು ಖಾಲಿ ಬಿಡುತ್ತೇನೆ. |
05:50 | ಮುಂದಿನದು Patron notification: ಆಗಿದೆ.
ಡ್ರಾಪ್-ಡೌನ್ ನಿಂದ, Routing List ಅನ್ನು ಆಯ್ಕೆಮಾಡಿ. |
05:59 | Grace period: ಗಾಗಿ, ನಾನು 15 day(s) ಅನ್ನು ಆಯ್ಕೆ ಮಾಡುವೆನು. |
06:04 | Number of issues to display to staff: ಗಾಗಿ, 4 ಅನ್ನು ನಮೂದಿಸಿ. |
06:10 | Number of issues to display to the public: ಗಾಗಿ, 4 ಅನ್ನು ನಮೂದಿಸಿ. |
6:15 | ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಪೇಜ್ ನ ಕೆಳಗಿರುವ Next ಮೇಲೆ ಕ್ಲಿಕ್ ಮಾಡಿ. |
06:22 | Add a new subscription (2/2) ಎಂಬ ಒಂದು ಹೊಸ್ ಪೇಜ್ ತೆರೆದುಕೊಳ್ಳುತ್ತದೆ. |
06:27 | Serials Planning ವಿಭಾಗಕ್ಕಾಗಿ, ಕೆಳಗಿನವುಗಳನ್ನು ನಮೂದಿಸಿ - |
06:32 | First issue publication date: ಗಾಗಿ, ನಾನು 01/01/2017 ಎಂದು ಕೊಡುವೆನು. |
06:41 | Frequency: ಗಾಗಿ, ಡ್ರಾಪ್-ಡೌನ್ ನಿಂದ ನಾನು ⅓ months ಯನ್ನು ಎಂದರೆ ತ್ರೈಮಾಸಿಕವನ್ನು ಆಯ್ಕೆಮಾಡುವೆನು. |
06:48 | Subscription length:-
ಇದು ಈಗಾಗಲೇ ಆಯ್ಕೆಯಾಗಿರದಿದ್ದರೆ, ಡ್ರಾಪ್-ಡೌನ್ ನಿಂದ issues ಅನ್ನು ಆಯ್ಕೆಮಾಡಿ. enter amount in numerals ಗಾಗಿ, ಬಾಕ್ಸ್ ನಲ್ಲಿ4 ಅನ್ನು ನಮೂದಿಸಿ. |
07:01 | Subscription start date: ಇಲ್ಲಿ 01/01/2017 ಎಂದು ನಮೂದಿಸಿ.
Subscription end date: ಇಲ್ಲಿ 01/12/2017 ಎಂದು ನಮೂದಿಸಿ. |
07:20 | Numbering pattern:- ಡ್ರಾಪ್-ಡೌನ್ ನಿಂದ, Volume, Number ಅನ್ನು ಆಯ್ಕೆಮಾಡಿ. |
07:26 | Locale- ಡ್ರಾಪ್-ಡೌನ್ ನಿಂದ English ಅನ್ನು ಆಯ್ಕೆಮಾಡಿ. ಒಂದುವೇಳೆ, ಭಾಷೆಯು English ಆಗಿರದಿದ್ದರೆ, ಡ್ರಾಪ್-ಡೌನ್ ನಿಂದ ನೀವು ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಬಹುದು. |
07:38 | ನಂತರ, ಟೇಬಲ್ ಗಾಗಿ, Volume ಮತ್ತು Number ಗಳಿಗಾಗಿ, ಕೆಳಗಿನವುಗಳನ್ನು ನಮೂದಿಸಿ. |
07:43 | Begins with: Volume= 57,
Begins with: Number =1, Inner counter: Number =4. |
07:55 | ಆದಾಗ್ಯೂ, ಪ್ಯಾಟರ್ನ್-ಟೈಪ್ ಅನ್ನು ಬದಲಾಯಿಸಲು ಬಯಸಿದರೆ, Show/Hide advanced pattern ಮೇಲೆ ಕ್ಲಿಕ್ ಮಾಡಿ. |
08:04 | ನಮೂದುಗಳನ್ನು ಎಡಿಟ್ ಮಾಡಲು, Advanced prediction pattern ಟೇಬಲ್ ನ ಕೆಳಗಿರುವ modify pattern ಮೇಲೆ ಕ್ಲಿಕ್ ಮಾಡಿ. |
08:12 | ಗಮನಿಸಿ: Pattern name: Volume, Number ಎಂದು ಇರಬೇಕು. |
08:18 | Numbering formula : Vol.{X}, No.{Y} ಎಂದು ಇರಬೇಕು. |
08:24 | Advanced prediction pattern ಎಂಬ ಟೇಬಲ್ ನಲ್ಲಿ, Koha ಡೀಫಾಲ್ಟ್ ಆಗಿ -
Label: ಕಾಲಂ X ಗಾಗಿ Volume ಎಂದು, ಕಾಲಂ Y ಗಾಗಿ Number, |
08:39 | Begins with :
ಕಾಲಂ X ಗಾಗಿ 57, ಕಾಲಂ Y ಗಾಗಿ 1 , ಹೀಗೆ ವ್ಯಾಲ್ಯೂಗಳನ್ನು ಆಯ್ಕೆಮಾಡುತ್ತದೆ. |
08:48 | ಈಗ, ಪೇಜ್ ನ ಕೆಳಗಿರುವ Test prediction pattern ಬಟನ್ ಮೇಲೆ ಕ್ಲಿಕ್ ಮಾಡಿ. |
08:54 | ಇದೇ ಪೇಜ್ ನಲ್ಲಿ, ಬಲಭಾಗದಲ್ಲಿ Prediction pattern ಕಾಣಿಸುತ್ತದೆ. |
09:00 | Prediction pattern, Number, Publication date ಮತ್ತು Not published ಗಳ ವಿವರಗಳನ್ನು ತೋರಿಸುತ್ತದೆ. |
09:11 | ಕೊನೆಯದಾಗಿ, ಪೇಜ್ ನ ಕೆಳಗಿರುವ Save subscription ಬಟನ್ ಮೇಲೆ ಕ್ಲಿಕ್ ಮಾಡಿ. |
09:18 | ಕೆಳಗಿನ ವಿವರಗಳೊಂದಿಗೆ, Subscription for Indian Journal of Microbiology ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ:
Information, Planning, Issues ಮತ್ತು Summary. |
09:34 | Planning ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
09:37 | ಕೆಳಗಿನವುಗಳನ್ನು ಪರಿಶೀಲಿಸಿ-
Starting with: ಎಂಬ ಟ್ಯಾಬ್ ನಲ್ಲಿ, Volume ಮತ್ತು Number: ಗಳು 57 ಮತ್ತು 1 ಎಂದು, |
09:46 | Rollover: ಟ್ಯಾಬ್ ಗಾಗಿ, Volume ಮತ್ತು Number ಗಳು 99999 ಮತ್ತು 12 ಎಂದು ಇರಬೇಕು. |
09:56 | ನಂತರ, Issues ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಇದು ಕೆಳಗಿನ ವಿವರಗಳನ್ನು ತೋರಿಸುವುದು - Issue number: ಅನ್ನು Vol. 57 ಮತ್ತು No. 1 Planned date: ಅನ್ನು 01/01/2017 ಎಂದು, |
10:17 | Published date: ಅನ್ನು 01/01/2017 ಎಂದು,
Published date (text): ಖಾಲಿ ಇದೆ, Status: Expected. |
10:31 | ಇದರೊಂದಿಗೆ, Journal subscription ಅನ್ನು ಯಶಸ್ವಿಯಾಗಿ ಸೇರಿಸಲಾಗಿದೆ. |
10:36 | Subscription of Serials ಅನ್ನು ಸೇರಿಸುವ ಉದ್ದೇಶ -
Journals, Magazines, |
10:43 | Serials,
Newspapers ಮತ್ತು ನಿಯಮಿತವಾಗಿ ಪ್ರಕಟಿಸಲಾಗುವ ಇನ್ನಿತರ ಐಟಂಗಳ ಬಗ್ಗೆ ಗಮನವಿರಿಸಲು ಆಗಿದೆ. |
10:50 | Koha ದಿಂದ ನೀವು ಈಗ ಲಾಗ್-ಔಟ್ ಮಾಡಬಹುದು. |
10:53 | ಇದನ್ನು ಮಾಡಲು, Koha ಇಂಟರ್ಫೇಸ್ ನ ಮೇಲಿನ ಬಲಮೂಲೆಗೆ ಹೋಗಿ. Spoken Tutorial Library ಮೇಲೆ ಕ್ಲಿಕ್ ಮಾಡಿ. ಮತ್ತು, ಡ್ರಾಪ್-ಡೌನ್ ನಿಂದ Log out ಅನ್ನು ಆಯ್ಕೆಮಾಡಿ. |
11:05 | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
11:09 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು ಹೊಸ ಸೀರಿಯಲ್ ಗಾಗಿ ಸಬ್ಸ್ಕ್ರಿಪ್ಶನ್ ಅನ್ನು (Subscription) ಹೇಗೆ ಸೇರಿಸುವುದೆಂದು ಕಲಿತಿದ್ದೇವೆ. |
11:18 | ಅಸೈನ್ಮೆಂಟ್:
Journal of Molecular Biology ಗಾಗಿ, ಒಂದು ಹೊಸ Subscription ಅನ್ನು ಸೇರಿಸಿ. |
11:26 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:33 | ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
11:42 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
11:46 |
ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
11:58 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |