Koha-Library-Management-System/C2/Add-Subscription-in-Serials/Kannada

From Script | Spoken-Tutorial
Jump to: navigation, search
00:01 How to add Subscription in Serials ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು ಹೊಸ ಸೀರಿಯಲ್ ಗಾಗಿ subscription ಅನ್ನು ಹೇಗೆ ಸೇರಿಸುವುದೆಂದು ಕಲಿಯುವೆವು.
00:15 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04 ಮತ್ತು

Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.

00:29 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು - ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು,
00:35 Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು
00:39 ಮತ್ತು Koha ದಲ್ಲಿ, Admin ಆಕ್ಸೆಸ್ ಅನ್ನು ಹೊಂದಿರಬೇಕು.

ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.

00:50 ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ನಾವು ಸೀರಿಯಲ್ ಸಬ್ಸ್ಕ್ರಿಪ್ಶನ್ ಗಳನ್ನು ಹೇಗೆ ಕ್ಯಾಟಲಾಗ್ ಮಾಡುವುದೆಂದು ಕಲಿತಿದ್ದೆವು.
00:57 ಈ ಟ್ಯುಟೋರಿಯಲ್ ನಲ್ಲಿ, ಹೊಸ ಸೀರಿಯಲ್ ಗಳಿಗಾಗಿ ಹೊಸ subscription ಅನ್ನು ಹೇಗೆ ಸೇರಿಸುವುದೆಂದು ಕಲಿಯುವೆವು.
01:04 Superlibrarian Bella ಮತ್ತು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ.
01:10 ಇದೇ ಸರಣಿಯ ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ವಿವರಿಸಿದಂತೆ, Serials ಸಬ್ಸ್ಕ್ರಿಪ್ಶನ್ ಗಾಗಿ (subscription) ಒಂದು ಹೊಸ ವೆಂಡರ್ (Vendor) ಅನ್ನು ಕ್ರಿಯೇಟ್ ಮಾಡಿ.
01:18 ನಾನು Mumbai Journal supplier ಎಂಬ ಹೆಸರನ್ನು ಕೊಡುವೆನು. ನಂತರ ನಾನು Mumbaijournals@gmail.com - ಈ ಇಮೇಲ್- ಐಡಿ ಯನ್ನು ಸೇರಿಸಿದ್ದೇನೆ.
01:30 ಈ ಕೆಳಗಿನ ಚೆಕ್-ಬಾಕ್ಸ್ ಗಳನ್ನು ಚೆಕ್ ಮಾಡಲು ನೆನಪಿಡಿ -

Primary acquisitions contact:,

Primary serials contact:,

Contact about late orders ಮತ್ತು

Contact about late issues.

01:46 ಈ ವಿವರಗಳನ್ನು ನಂತರ ಈ ಟ್ಯುಟೋರಿಯಲ್ ನಲ್ಲಿ ಬಳಸಲಾಗುವುದು.
01:51 ಹೀಗೆಯೇ, ನಿಮ್ಮ ಮಾರಾಟಗಾರರ (vendor) ವಿವರಗಳನ್ನು ನೀವು ತುಂಬಬೇಕು.
01:56 ನಾವು ಚಂದಾದಾರರಾಗಬೇಕಾದ (subscribe) 'ಜರ್ನಲ್' ನ ಸ್ಕ್ರೀನ್-ಶಾಟ್ ಇಲ್ಲಿದೆ.
02:01 ಇಲ್ಲಿ ತೋರಿಸಿದ ಎಲ್ಲಾ ವಿವರಗಳನ್ನು, ನಾನು ನನ್ನ ಕೋಹಾ ಇಂಟರ್ಫೇಸ್ ನಲ್ಲಿ ನಮೂದಿಸುತ್ತಿದ್ದೇನೆ.
02:08 ನಾವು ಕೋಹಾ ಇಂಟರ್ಫೇಸ್ ಗೆ ಹೋಗೋಣ.
02:12 ಈಗ, Koha home ಪೇಜ್ ನಲ್ಲಿ, Serials ಮೇಲೆ ಕ್ಲಿಕ್ ಮಾಡಿ.
02:18 ಈಗ ತೆರೆದುಕೊಳ್ಳುವ ಪೇಜ್ ನಲ್ಲಿ, ‘New Subscription’ ಮೇಲೆ ಕ್ಲಿಕ್ ಮಾಡಿ.
02:24 ಇದು Add a new subscription (1/2) ಎಂದು ಹೇಳುವ ಮತ್ತೊಂದು ಹೊಸ ಪೇಜ್ ಅನ್ನು ತೆರೆಯುತ್ತದೆ.
02:30 ಇಲ್ಲಿ, ಕೆಲವು ವಿವರಗಳನ್ನು ತುಂಬಲು ನಮಗೆ ಸೂಚಿಸಲಾಗುತ್ತದೆ.
02:35 Vendor ಗಾಗಿ, ಈ ಎರಡು ಖಾಲಿ ಬಾಕ್ಸ್ ಗಳ ಬದಿಯಲ್ಲಿರುವ Search for vendor ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:43 ಹೊಸ ವಿಂಡೋದಲ್ಲಿ, Serial subscription: search for vendor ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
02:50 Vendor name ನ ಫೀಲ್ಡ್ ನಲ್ಲಿ, ನಾನು ಹೀಗೆ ಟೈಪ್ ಮಾಡುವೆನು: Mumbai Journal Supplier
02:56 ನಿಮ್ಮ ವೆಂಡರ್ ನ (ಮಾರಾಟಗಾರ) ಹೆಸರನ್ನು ನೀವು ಇಲ್ಲಿ ಟೈಪ್ ಮಾಡಬೇಕು.

ಈಗ, ಈ ಫೀಲ್ಡ್ ನ ಬಲಭಾಗದಲ್ಲಿರುವ OK ಬಟನ್ ಅನ್ನು ಕ್ಲಿಕ್ ಮಾಡಿ.

03:05 Vendor search results ಅನ್ನು ತೋರಿಸುತ್ತಿರುವ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
03:10 ಕೆಳಗಿರುವ ಟೇಬಲ್ ನಲ್ಲಿ, Select: ಎಂಬ ವಿಭಾಗದ ಅಡಿಯಲ್ಲಿ, Choose ಮೇಲೆ ಕ್ಲಿಕ್ ಮಾಡಿ. ಇದು Vendor ನ ಹೆಸರಿನ ಬದಿಯಲ್ಲಿದೆ.
03:19 ಇದೇ ಪೇಜ್, ಎಂದರೆ Add a new subscription (1/2) ಮತ್ತೆ ತೆರೆದುಕೊಳ್ಳುತ್ತದೆ.

ಈ ಪೇಜ್ ಅನ್ನು ಮುಚ್ಚಬೇಡಿ. ಟ್ಯುಟೋರಿಯಲ್ ನಲ್ಲಿ ಇದನ್ನು ನಂತರ ಮತ್ತೆ ಬಳಸಲಾಗುವುದು.

03:31 ನಂತರ Record ಇದೆ. Record ನ ಬದಿಯಲ್ಲಿ ಎರಡು ಖಾಲಿ ಬಾಕ್ಸ್ ಗಳಿವೆ.
03:37 ಈ ಖಾಲಿ ಬಾಕ್ಸ್ ಗಳ ಕೆಳಗೆ:

Search for record ಮತ್ತು Create record ಎಂಬ ಎರಡು ಟ್ಯಾಬ್ ಗಳಿವೆ.

03:46 ಒಂದುವೇಳೆ ದಾಖಲೆಯು ಈಗಾಗಲೇ ಇದ್ದರೆ, Search for record ಮೇಲೆ ಕ್ಲಿಕ್ ಮಾಡಿ.
03:53 ಇಲ್ಲದಿದ್ದರೆ, ಆಯಾ ಸೀರಿಯಲ್ ಗಾಗಿ ಒಂದು ಹೊಸ ದಾಖಲೆಯನ್ನು ಸೃಷ್ಟಿ ಮಾಡಲು, Create record ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
04:01 ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ನಾವು Indian Journal of Microbiology ಎಂಬ ಶೀರ್ಷಿಕೆಯ, ಒಂದು ಸೀರಿಯಲ್ ಅನ್ನು ಈಗಾಗಲೇ ಕ್ಯಾಟಲಾಗ್ ಮಾಡಿದ್ದೇವೆ.
04:10 ಹೀಗಾಗಿ, ನಾವು Search for record ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡುತ್ತೇವೆ.
04:16 Catalog search ಎಂಬ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ.
04:21 Keyword ಫೀಲ್ಡ್ ನಲ್ಲಿ, Indian ಎಂದು ನಮೂದಿಸಿ.
04:27 ನಂತರ, ಪೇಜ್ ನ ಕೆಳಗಿರುವ Search ಮೇಲೆ ಕ್ಲಿಕ್ ಮಾಡಿ.
04:32 Search results from 1 to 1 of 1, ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
04:39 ಮೊದಲೇ ನಮೂದಿಸಿದಂತೆ, ಇದು ಕೆಳಗಿನ ವಿವರಗಳನ್ನು ಹೊಂದಿದೆ:

Title- Indian Journal of Microbiology,

Publisher- Springer,

ISSN- 0046-8991.

04:58 ನೀವು ನಮೂದಿಸಿದ ವಿವರಗಳನ್ನು ನೋಡುತ್ತೀರಿ.
05:02 ಆಮೇಲೆ, ಟೇಬಲ್ ನ ಬಲಮೂಲೆಯಲ್ಲಿರುವ Choose ಬಟನ್ ಮೇಲೆ ಕ್ಲಿಕ್ ಮಾಡಿ.
05:07 ಅದೇ ವಿಂಡೋ ಮುಚ್ಚುತ್ತದೆ ಮತ್ತು ನಮೂದಿಸಲಾದ ವಿವರಗಳು ಪೇಜ್ ನಲ್ಲಿ ಕಾಣಿಸಿಕೊಳ್ಳುತ್ತವೆ -
05:13 Add a new subscription (1/2),

Record ಫೀಲ್ಡ್ ನಲ್ಲಿ, ನನ್ನದು ಸಂಖ್ಯೆ 3 ಎಂದು ತೋರಿಸುತ್ತಿದೆ.

05:22 ನೀವು ಮಾಡಿದ ನಮೂದುಗಳ ಸಂಖ್ಯೆಯನ್ನು ಅವಲಂಬಿಸಿ, ಇದು ನಿಮ್ಮ ಇಂಟರ್ಫೇಸ್ ನಲ್ಲಿ ಬೇರೆ ಇರಬಹುದು.
05:29 ಈ ಕೆಳಗಿನವುಗಳನ್ನು ನಾನು ಇದ್ದ ಹಾಗೇ ಬಿಡುತ್ತೇನೆ.
05:33 ಮುಂದೆ,

Library ಗಾಗಿ, ಡ್ರಾಪ್-ಡೌನ್ ನಿಂದ Spoken Tutorial Library ಯನ್ನು ನಾನು ಆಯ್ಕೆಮಾಡುವೆನು.

05:41 ಅಗತ್ಯವಿದ್ದರೆ, ನೀವು -

Public note ಮತ್ತು

Nonpublic note ಗಳನ್ನು ತುಂಬಬಹುದು.

05:47 ನಾನು ಅವುಗಳನ್ನು ಖಾಲಿ ಬಿಡುತ್ತೇನೆ.
05:50 ಮುಂದಿನದು Patron notification: ಆಗಿದೆ.

ಡ್ರಾಪ್-ಡೌನ್ ನಿಂದ, Routing List ಅನ್ನು ಆಯ್ಕೆಮಾಡಿ.

05:59 Grace period: ಗಾಗಿ, ನಾನು 15 day(s) ಅನ್ನು ಆಯ್ಕೆ ಮಾಡುವೆನು.
06:04 Number of issues to display to staff: ಗಾಗಿ, 4 ಅನ್ನು ನಮೂದಿಸಿ.
06:10 Number of issues to display to the public: ಗಾಗಿ, 4 ಅನ್ನು ನಮೂದಿಸಿ.
6:15 ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಪೇಜ್ ನ ಕೆಳಗಿರುವ Next ಮೇಲೆ ಕ್ಲಿಕ್ ಮಾಡಿ.
06:22 Add a new subscription (2/2) ಎಂಬ ಒಂದು ಹೊಸ್ ಪೇಜ್ ತೆರೆದುಕೊಳ್ಳುತ್ತದೆ.
06:27 Serials Planning ವಿಭಾಗಕ್ಕಾಗಿ, ಕೆಳಗಿನವುಗಳನ್ನು ನಮೂದಿಸಿ -
06:32 First issue publication date: ಗಾಗಿ, ನಾನು 01/01/2017 ಎಂದು ಕೊಡುವೆನು.
06:41 Frequency: ಗಾಗಿ, ಡ್ರಾಪ್-ಡೌನ್ ನಿಂದ ನಾನು ⅓ months ಯನ್ನು ಎಂದರೆ ತ್ರೈಮಾಸಿಕವನ್ನು ಆಯ್ಕೆಮಾಡುವೆನು.
06:48 Subscription length:-

ಇದು ಈಗಾಗಲೇ ಆಯ್ಕೆಯಾಗಿರದಿದ್ದರೆ, ಡ್ರಾಪ್-ಡೌನ್ ನಿಂದ issues ಅನ್ನು ಆಯ್ಕೆಮಾಡಿ. enter amount in numerals ಗಾಗಿ, ಬಾಕ್ಸ್ ನಲ್ಲಿ4 ಅನ್ನು ನಮೂದಿಸಿ.

07:01 Subscription start date: ಇಲ್ಲಿ 01/01/2017 ಎಂದು ನಮೂದಿಸಿ.

Subscription end date: ಇಲ್ಲಿ 01/12/2017 ಎಂದು ನಮೂದಿಸಿ.

07:20 Numbering pattern:- ಡ್ರಾಪ್-ಡೌನ್ ನಿಂದ, Volume, Number ಅನ್ನು ಆಯ್ಕೆಮಾಡಿ.
07:26 Locale- ಡ್ರಾಪ್-ಡೌನ್ ನಿಂದ English ಅನ್ನು ಆಯ್ಕೆಮಾಡಿ. ಒಂದುವೇಳೆ, ಭಾಷೆಯು English ಆಗಿರದಿದ್ದರೆ, ಡ್ರಾಪ್-ಡೌನ್ ನಿಂದ ನೀವು ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಬಹುದು.
07:38 ನಂತರ, ಟೇಬಲ್ ಗಾಗಿ, Volume ಮತ್ತು Number ಗಳಿಗಾಗಿ, ಕೆಳಗಿನವುಗಳನ್ನು ನಮೂದಿಸಿ.
07:43 Begins with: Volume= 57,

Begins with: Number =1,

Inner counter: Number =4.

07:55 ಆದಾಗ್ಯೂ, ಪ್ಯಾಟರ್ನ್-ಟೈಪ್ ಅನ್ನು ಬದಲಾಯಿಸಲು ಬಯಸಿದರೆ, Show/Hide advanced pattern ಮೇಲೆ ಕ್ಲಿಕ್ ಮಾಡಿ.
08:04 ನಮೂದುಗಳನ್ನು ಎಡಿಟ್ ಮಾಡಲು, Advanced prediction pattern ಟೇಬಲ್ ನ ಕೆಳಗಿರುವ modify pattern ಮೇಲೆ ಕ್ಲಿಕ್ ಮಾಡಿ.
08:12 ಗಮನಿಸಿ: Pattern name: Volume, Number ಎಂದು ಇರಬೇಕು.
08:18 Numbering formula : Vol.{X}, No.{Y} ಎಂದು ಇರಬೇಕು.
08:24 Advanced prediction pattern ಎಂಬ ಟೇಬಲ್ ನಲ್ಲಿ, Koha ಡೀಫಾಲ್ಟ್ ಆಗಿ -

Label: ಕಾಲಂ X ಗಾಗಿ Volume ಎಂದು, ಕಾಲಂ Y ಗಾಗಿ Number,

08:39 Begins with :

ಕಾಲಂ X ಗಾಗಿ 57,

ಕಾಲಂ Y ಗಾಗಿ 1 , ಹೀಗೆ ವ್ಯಾಲ್ಯೂಗಳನ್ನು ಆಯ್ಕೆಮಾಡುತ್ತದೆ.

08:48 ಈಗ, ಪೇಜ್ ನ ಕೆಳಗಿರುವ Test prediction pattern ಬಟನ್ ಮೇಲೆ ಕ್ಲಿಕ್ ಮಾಡಿ.
08:54 ಇದೇ ಪೇಜ್ ನಲ್ಲಿ, ಬಲಭಾಗದಲ್ಲಿ Prediction pattern ಕಾಣಿಸುತ್ತದೆ.
09:00 Prediction pattern, Number, Publication date ಮತ್ತು Not published ಗಳ ವಿವರಗಳನ್ನು ತೋರಿಸುತ್ತದೆ.
09:11 ಕೊನೆಯದಾಗಿ, ಪೇಜ್ ನ ಕೆಳಗಿರುವ Save subscription ಬಟನ್ ಮೇಲೆ ಕ್ಲಿಕ್ ಮಾಡಿ.
09:18 ಕೆಳಗಿನ ವಿವರಗಳೊಂದಿಗೆ, Subscription for Indian Journal of Microbiology ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ:

Information, Planning, Issues ಮತ್ತು Summary.

09:34 Planning ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
09:37 ಕೆಳಗಿನವುಗಳನ್ನು ಪರಿಶೀಲಿಸಿ-

Starting with: ಎಂಬ ಟ್ಯಾಬ್ ನಲ್ಲಿ, Volume ಮತ್ತು Number: ಗಳು 57 ಮತ್ತು 1 ಎಂದು,

09:46 Rollover: ಟ್ಯಾಬ್ ಗಾಗಿ, Volume ಮತ್ತು Number ಗಳು 99999 ಮತ್ತು 12 ಎಂದು ಇರಬೇಕು.
09:56 ನಂತರ, Issues ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ಇದು ಕೆಳಗಿನ ವಿವರಗಳನ್ನು ತೋರಿಸುವುದು - Issue number: ಅನ್ನು Vol. 57 ಮತ್ತು No. 1 Planned date: ಅನ್ನು 01/01/2017 ಎಂದು,

10:17 Published date: ಅನ್ನು 01/01/2017 ಎಂದು,

Published date (text): ಖಾಲಿ ಇದೆ, Status: Expected.

10:31 ಇದರೊಂದಿಗೆ, Journal subscription ಅನ್ನು ಯಶಸ್ವಿಯಾಗಿ ಸೇರಿಸಲಾಗಿದೆ.
10:36 Subscription of Serials ಅನ್ನು ಸೇರಿಸುವ ಉದ್ದೇಶ -

Journals, Magazines,

10:43 Serials,

Newspapers ಮತ್ತು ನಿಯಮಿತವಾಗಿ ಪ್ರಕಟಿಸಲಾಗುವ ಇನ್ನಿತರ ಐಟಂಗಳ ಬಗ್ಗೆ ಗಮನವಿರಿಸಲು ಆಗಿದೆ.

10:50 Koha ದಿಂದ ನೀವು ಈಗ ಲಾಗ್-ಔಟ್ ಮಾಡಬಹುದು.
10:53 ಇದನ್ನು ಮಾಡಲು, Koha ಇಂಟರ್ಫೇಸ್ ನ ಮೇಲಿನ ಬಲಮೂಲೆಗೆ ಹೋಗಿ. Spoken Tutorial Library ಮೇಲೆ ಕ್ಲಿಕ್ ಮಾಡಿ. ಮತ್ತು, ಡ್ರಾಪ್-ಡೌನ್ ನಿಂದ Log out ಅನ್ನು ಆಯ್ಕೆಮಾಡಿ.
11:05 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
11:09 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು ಹೊಸ ಸೀರಿಯಲ್ ಗಾಗಿ ಸಬ್ಸ್ಕ್ರಿಪ್ಶನ್ ಅನ್ನು (Subscription) ಹೇಗೆ ಸೇರಿಸುವುದೆಂದು ಕಲಿತಿದ್ದೇವೆ.
11:18 ಅಸೈನ್ಮೆಂಟ್:

Journal of Molecular Biology ಗಾಗಿ, ಒಂದು ಹೊಸ Subscription ಅನ್ನು ಸೇರಿಸಿ.

11:26 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
11:33 ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
11:42 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
11:46 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.
11:58 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14