Koha-Library-Management-System/C2/Close-a-Budget/Kannada
Time | Narration |
00:01 | How to close a Budget ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ಬಜೆಟ್ ಅನ್ನುಮುಚ್ಚುವಾಗಿನ ಹಂತಗಳ ಬಗ್ಗೆ ಕಲಿಯುವೆವು. |
00:14 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:28 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:34 | ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. |
00:40 | ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು (access) ನೀವು ಹೊಂದಿರಬೇಕು. |
00:44 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:51 | ನಾವು ಒಂದು Budget ಅನ್ನು ಮುಚ್ಚಲು ಕಲಿಯೋಣ. |
00:55 | ನಾವು ಪ್ರಾರಂಭಿಸುವ ಮೊದಲು, ದಯವಿಟ್ಟು ಗಮನಿಸಿ:
ಸ್ವೀಕರಿಸದ ಆರ್ಡರ್ ಗಳನ್ನು ಮತ್ತು |
01:04 | ಅಗತ್ಯವಿರುವ, ಖರ್ಚು ಮಾಡದ ಫಂಡ್ಸ್ ಅನ್ನು |
01:07 | ಹಳೆಯ ಬಜೆಟ್ ನಿಂದ ಹೊಸ ಬಜೆಟ್ ಗೆ ಸ್ಥಳಾಂತರಿಸಲು, 'ಬಜೆಟ್' ಅನ್ನು ಮುಚ್ಚಲಾಗುತ್ತದೆ. |
01:11 | ಹಿಂದಿನ ಬಜೆಟ್ ನಿಂದ, ಅರ್ಥಾತ್
Spoken Tutorial Library 2016-2017 Phase I ದಿಂದ |
01:20 | ಒಂದು ಹೊಸ ಬಜೆಟ್ ಗೆ ಎಂದರೆ
Spoken Tutorial Library 2017-2018 Phase II. |
01:29 | ದಯವಿಟ್ಟು ಗಮನಿಸಿ -
ಒಂದು 'ಬಜೆಟ್' ಅನ್ನು ಮುಚ್ಚುವ ಮೊದಲು, ಹಿಂದಿನ ವರ್ಷದ ಬಜೆಟ್ ನ ನಕಲು ಮಾಡಿ ಇಡುವುದು ಒಳ್ಳೆಯದು. |
01:38 | ಇದನ್ನು ಮಾಡಲು, ಹಿಂದಿನ ಬಜೆಟ್ ನಲ್ಲಿರುವ ಫಂಡ್ ಸ್ಟ್ರಕ್ಚರ್ ಗಳೇ ಹೊಸ ಬಜೆಟ್ ನಲ್ಲಿಯೂ ಇರಬೇಕು. |
01:46 | ಬಜೆಟ್ ಅನ್ನು ಕ್ಲೋಸ್ ಮಾಡಲು, ಹೀಗೆ ಮಾಡಿ:
Superlibrarian username ಮತ್ತು ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ. |
01:56 | 'Koha' Home ಪೇಜ್ ನಲ್ಲಿ, Acquisitions ಮೇಲೆ ಕ್ಲಿಕ್ ಮಾಡಿ. |
02:01 | ಎಡಭಾಗದಲ್ಲಿರುವ ಆಯ್ಕೆಗಳಿಂದ Budgets ಮೇಲೆ ಕ್ಲಿಕ್ ಮಾಡಿ. |
02:07 | Budgets administration ಪೇಜ್ ನಲ್ಲಿ, Active Budgets ಟ್ಯಾಬ್ ನ ಅಡಿಯಲ್ಲಿ, ಆಯಾ ಬಜೆಟ್ ಅನ್ನು ಗುರುತಿಸಿ. |
02:16 | ಇಲ್ಲಿ, Spoken Tutorial Library 2016-2017 Phase I ಆಗಿದೆ. |
02:24 | Actions ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. ಮತ್ತು ಡ್ರಾಪ್-ಡೌನ್ ನಿಂದ, 'Close' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
02:32 | 'Close' ಅನ್ನು ಆಯ್ಕೆಮಾಡಿದಾಗ, ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
02:37 | ಇದು - The unreceived orders from the following funds will be moved ಎಂದು ಹೇಳುತ್ತದೆ. |
02:44 | ಇದೇ ಪೇಜ್ ನಲ್ಲಿ, Select a Budget ಇದೆ. |
02:49 | ಡ್ರಾಪ್-ಡೌನ್ ನಿಂದ, ನಿಮ್ಮ unreceived orders ಅನ್ನು ಎಲ್ಲಿ ಸೇರಿಸಬೇಕಾಗಿದೆಯೊ ಆ ಬಜೆಟ್ ಅನ್ನು ಆಯ್ಕೆಮಾಡಿಕೊಳ್ಳಿ. |
02:57 | ನಾನು Spoken Tutorial Library 2017-2018 Phase II ಅನ್ನು ಆಯ್ಕೆಮಾಡುತ್ತೇನೆ.
ಇದೇ ಫಂಡ್ ನ ವಿವರಗಳು, ನಕಲು ಬಜೆಟ್ ನಲ್ಲಿಯೂ ಇರುವುದು ಆಗತ್ಯವಾಗಿದೆ. |
03:11 | ಇದು, ಖರ್ಚು ಮಾಡದ 'ಬಜೆಟ್' ಅನ್ನು ಅಲ್ಲಿಗೆ ಸರಿಸಲು ನಮಗೆ ಸಹಾಯ ಮಾಡುತ್ತದೆ. |
03:17 | ಮುಂದಿನದು, 'Move remaining unspent funds' ಎಂದು ಇದೆ. |
03:22 | ಇದರ ಮೇಲೆ ಕ್ಲಿಕ್ ಮಾಡುವುದರಿಂದ, ಖರ್ಚು ಮಾಡದ ಮೊತ್ತವು ಹೊಸ ಬಜೆಟ್ ಗೆ ಸೇರುತ್ತದೆ. |
03:28 | ಹಿಂದಿನ ವರ್ಷದ ಖರ್ಚು ಮಾಡದ ಮೊತ್ತವನ್ನು, ಹೊಸ ಬಜೆಟ್ ಗೆ ಸೇರಿಸಲು ನೀವು ಬಯಸಿದರೆ, ಇದನ್ನು ಮಾಡಿ.
ನಾನು ಈ ಬಾಕ್ಸ್ ಅನ್ನು ಖಾಲಿ ಬಿಡುತ್ತೇನೆ. |
03:40 | ಎಲ್ಲಾ ವಿವರಗಳನ್ನು ತುಂಬಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Move unreceived orders ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
03:49 | ಕೆಳಗಿನ ಮೆಸೇಜ್ ನೊಂದಿಗೆ ಒಂದು ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ: |
03:53 | You have chosen to move all unreceived orders from 'Spoken Tutorial Library 2016-2017 Phase I' to 'Spoken Tutorial Library 2017-2018, Phase II'. |
04:11 | This action cannot be reversed. Do you wish to continue?. |
04:17 | ಒಮ್ಮೆ ಪೂರ್ಣಗೊಂಡ ಮೇಲೆ, ಈ ಪ್ರಕ್ರಿಯೆಯನ್ನು undo ಮಾಡುವುದು ಸಾಧ್ಯವಿಲ್ಲ ಎಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿದೆ. |
04:24 | ಡೈಲಾಗ್-ಬಾಕ್ಸ್ ನ ಕೆಳಗೆ OK ಮೇಲೆ ಕ್ಲಿಕ್ ಮಾಡಿ. |
04:30 | ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
Report after moving unreceived orders from Budget Spoken Tutorial Library 2016-2017 Phase I (01/04/2016 - 31/03/2017) to Spoken Tutorial Library 2017-2018 Phase II (01/04/2017 - 31/03/2018). |
04:49 | ಈ ಪೇಜ್ Order numbers ಅನ್ನು ಮತ್ತು Details ಅನ್ನು Moved ಎಂದು ಪ್ರದರ್ಶಿಸುತ್ತದೆ. |
04:55 | ಇದರೊಂದಿಗೆ, ನಾವು ಹಣಕಾಸಿನ ವರ್ಷದ ಬಜೆಟ್ ಅನ್ನು ಮುಚ್ಚಿದ್ದೇವೆ. |
05:00 | ಮತ್ತು, ನಾವು ಈಗ ಮುಂದಿನ ವರ್ಷದ 'ಬಜೆಟ್' ಅನ್ನು ರಚಿಸಲು ಹೋಗಬಹುದು. |
05:06 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
05:10 | ಸಂಕ್ಷಿಪ್ತವಾಗಿ -
ಈ ಟ್ಯುಟೋರಿಯಲ್ ನಲ್ಲಿ ನಾವು 'ಬಜೆಟ್' ಅನ್ನು ಕ್ಲೋಸ್ ಮಾಡಲು ಬೇಕಾಗುವ ಹಂತಗಳನ್ನು ಕಲಿತಿದ್ದೇವೆ. |
05:19 | ಅಸೈನ್ಮೆಂಟ್ ಗಾಗಿ -
ಹಿಂದಿನ ಒಂದು ಟ್ಯುಟೋರಿಯಲ್ ನ ಅಸೈನ್ಮೆಂಟ್ ನಲ್ಲಿ, ನೀವು Rs. 50 Lakhs ನ ಒಂದು ಹೊಸ 'ಬಜೆಟ್' ಅನ್ನು ಸೇರಿಸಿದ್ದಿರಿ. ಆ ಬಜೆಟ್ ಅನ್ನು ಮುಚ್ಚಿ. |
05:33 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
05:41 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. |
05:47 | ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
05:51 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
05:56 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
06:08 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |