Koha-Library-Management-System/C2/Close-a-Budget/Kannada

From Script | Spoken-Tutorial
Jump to: navigation, search
Time Narration
00:01 How to close a Budget ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, ಬಜೆಟ್ ಅನ್ನುಮುಚ್ಚುವಾಗಿನ ಹಂತಗಳ ಬಗ್ಗೆ ಕಲಿಯುವೆವು.
00:14 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.

00:28 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:34 ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
00:40 ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು (access) ನೀವು ಹೊಂದಿರಬೇಕು.
00:44 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
00:51 ನಾವು ಒಂದು Budget ಅನ್ನು ಮುಚ್ಚಲು ಕಲಿಯೋಣ.
00:55 ನಾವು ಪ್ರಾರಂಭಿಸುವ ಮೊದಲು, ದಯವಿಟ್ಟು ಗಮನಿಸಿ:

ಸ್ವೀಕರಿಸದ ಆರ್ಡರ್ ಗಳನ್ನು ಮತ್ತು

01:04 ಅಗತ್ಯವಿರುವ, ಖರ್ಚು ಮಾಡದ ಫಂಡ್ಸ್ ಅನ್ನು
01:07 ಹಳೆಯ ಬಜೆಟ್ ನಿಂದ ಹೊಸ ಬಜೆಟ್ ಗೆ ಸ್ಥಳಾಂತರಿಸಲು, 'ಬಜೆಟ್' ಅನ್ನು ಮುಚ್ಚಲಾಗುತ್ತದೆ.
01:11 ಹಿಂದಿನ ಬಜೆಟ್ ನಿಂದ, ಅರ್ಥಾತ್

Spoken Tutorial Library 2016-2017 Phase I ದಿಂದ

01:20 ಒಂದು ಹೊಸ ಬಜೆಟ್ ಗೆ ಎಂದರೆ

Spoken Tutorial Library 2017-2018 Phase II.

01:29 ದಯವಿಟ್ಟು ಗಮನಿಸಿ -

ಒಂದು 'ಬಜೆಟ್' ಅನ್ನು ಮುಚ್ಚುವ ಮೊದಲು, ಹಿಂದಿನ ವರ್ಷದ ಬಜೆಟ್ ನ ನಕಲು ಮಾಡಿ ಇಡುವುದು ಒಳ್ಳೆಯದು.

01:38 ಇದನ್ನು ಮಾಡಲು, ಹಿಂದಿನ ಬಜೆಟ್ ನಲ್ಲಿರುವ ಫಂಡ್ ಸ್ಟ್ರಕ್ಚರ್ ಗಳೇ ಹೊಸ ಬಜೆಟ್ ನಲ್ಲಿಯೂ ಇರಬೇಕು.
01:46 ಬಜೆಟ್ ಅನ್ನು ಕ್ಲೋಸ್ ಮಾಡಲು, ಹೀಗೆ ಮಾಡಿ:

Superlibrarian username ಮತ್ತು ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ.

01:56 'Koha' Home ಪೇಜ್ ನಲ್ಲಿ, Acquisitions ಮೇಲೆ ಕ್ಲಿಕ್ ಮಾಡಿ.
02:01 ಎಡಭಾಗದಲ್ಲಿರುವ ಆಯ್ಕೆಗಳಿಂದ Budgets ಮೇಲೆ ಕ್ಲಿಕ್ ಮಾಡಿ.
02:07 Budgets administration ಪೇಜ್ ನಲ್ಲಿ, Active Budgets ಟ್ಯಾಬ್ ನ ಅಡಿಯಲ್ಲಿ, ಆಯಾ ಬಜೆಟ್ ಅನ್ನು ಗುರುತಿಸಿ.
02:16 ಇಲ್ಲಿ, Spoken Tutorial Library 2016-2017 Phase I ಆಗಿದೆ.
02:24 Actions ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. ಮತ್ತು ಡ್ರಾಪ್-ಡೌನ್ ನಿಂದ, 'Close' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
02:32 'Close' ಅನ್ನು ಆಯ್ಕೆಮಾಡಿದಾಗ, ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
02:37 ಇದು - The unreceived orders from the following funds will be moved ಎಂದು ಹೇಳುತ್ತದೆ.
02:44 ಇದೇ ಪೇಜ್ ನಲ್ಲಿ, Select a Budget ಇದೆ.
02:49 ಡ್ರಾಪ್-ಡೌನ್ ನಿಂದ, ನಿಮ್ಮ unreceived orders ಅನ್ನು ಎಲ್ಲಿ ಸೇರಿಸಬೇಕಾಗಿದೆಯೊ ಆ ಬಜೆಟ್ ಅನ್ನು ಆಯ್ಕೆಮಾಡಿಕೊಳ್ಳಿ.
02:57 ನಾನು Spoken Tutorial Library 2017-2018 Phase II ಅನ್ನು ಆಯ್ಕೆಮಾಡುತ್ತೇನೆ.

ಇದೇ ಫಂಡ್ ನ ವಿವರಗಳು, ನಕಲು ಬಜೆಟ್ ನಲ್ಲಿಯೂ ಇರುವುದು ಆಗತ್ಯವಾಗಿದೆ.

03:11 ಇದು, ಖರ್ಚು ಮಾಡದ 'ಬಜೆಟ್' ಅನ್ನು ಅಲ್ಲಿಗೆ ಸರಿಸಲು ನಮಗೆ ಸಹಾಯ ಮಾಡುತ್ತದೆ.
03:17 ಮುಂದಿನದು, 'Move remaining unspent funds' ಎಂದು ಇದೆ.
03:22 ಇದರ ಮೇಲೆ ಕ್ಲಿಕ್ ಮಾಡುವುದರಿಂದ, ಖರ್ಚು ಮಾಡದ ಮೊತ್ತವು ಹೊಸ ಬಜೆಟ್ ಗೆ ಸೇರುತ್ತದೆ.
03:28 ಹಿಂದಿನ ವರ್ಷದ ಖರ್ಚು ಮಾಡದ ಮೊತ್ತವನ್ನು, ಹೊಸ ಬಜೆಟ್ ಗೆ ಸೇರಿಸಲು ನೀವು ಬಯಸಿದರೆ, ಇದನ್ನು ಮಾಡಿ.

ನಾನು ಈ ಬಾಕ್ಸ್ ಅನ್ನು ಖಾಲಿ ಬಿಡುತ್ತೇನೆ.

03:40 ಎಲ್ಲಾ ವಿವರಗಳನ್ನು ತುಂಬಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Move unreceived orders ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
03:49 ಕೆಳಗಿನ ಮೆಸೇಜ್ ನೊಂದಿಗೆ ಒಂದು ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ:
03:53 You have chosen to move all unreceived orders from 'Spoken Tutorial Library 2016-2017 Phase I' to 'Spoken Tutorial Library 2017-2018, Phase II'.
04:11 This action cannot be reversed. Do you wish to continue?.
04:17 ಒಮ್ಮೆ ಪೂರ್ಣಗೊಂಡ ಮೇಲೆ, ಈ ಪ್ರಕ್ರಿಯೆಯನ್ನು undo ಮಾಡುವುದು ಸಾಧ್ಯವಿಲ್ಲ ಎಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿದೆ.
04:24 ಡೈಲಾಗ್-ಬಾಕ್ಸ್ ನ ಕೆಳಗೆ OK ಮೇಲೆ ಕ್ಲಿಕ್ ಮಾಡಿ.
04:30 ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.

Report after moving unreceived orders from Budget Spoken Tutorial Library 2016-2017 Phase I (01/04/2016 - 31/03/2017) to Spoken Tutorial Library 2017-2018 Phase II (01/04/2017 - 31/03/2018).

04:49 ಈ ಪೇಜ್ Order numbers ಅನ್ನು ಮತ್ತು Details ಅನ್ನು Moved ಎಂದು ಪ್ರದರ್ಶಿಸುತ್ತದೆ.
04:55 ಇದರೊಂದಿಗೆ, ನಾವು ಹಣಕಾಸಿನ ವರ್ಷದ ಬಜೆಟ್ ಅನ್ನು ಮುಚ್ಚಿದ್ದೇವೆ.
05:00 ಮತ್ತು, ನಾವು ಈಗ ಮುಂದಿನ ವರ್ಷದ 'ಬಜೆಟ್' ಅನ್ನು ರಚಿಸಲು ಹೋಗಬಹುದು.
05:06 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
05:10 ಸಂಕ್ಷಿಪ್ತವಾಗಿ -

ಈ ಟ್ಯುಟೋರಿಯಲ್ ನಲ್ಲಿ ನಾವು 'ಬಜೆಟ್' ಅನ್ನು ಕ್ಲೋಸ್ ಮಾಡಲು ಬೇಕಾಗುವ ಹಂತಗಳನ್ನು ಕಲಿತಿದ್ದೇವೆ.

05:19 ಅಸೈನ್ಮೆಂಟ್ ಗಾಗಿ -

ಹಿಂದಿನ ಒಂದು ಟ್ಯುಟೋರಿಯಲ್ ನ ಅಸೈನ್ಮೆಂಟ್ ನಲ್ಲಿ, ನೀವು Rs. 50 Lakhs ನ ಒಂದು ಹೊಸ 'ಬಜೆಟ್' ಅನ್ನು ಸೇರಿಸಿದ್ದಿರಿ. ಆ ಬಜೆಟ್ ಅನ್ನು ಮುಚ್ಚಿ.

05:33 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
05:41 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.
05:47 ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
05:51 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.

http://spoken-tutorial.org/NMEICT-Intro

05:56 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.

ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.

06:08 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14