Koha-Library-Management-System/C2/Koha-installation-on-Linux-16.04/Kannada

From Script | Spoken-Tutorial
Revision as of 17:54, 25 February 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Installation of Koha on Ubuntu Linux OS ಎಂಬ ಸ್ಪೋಕನ್- ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು, Ubuntu Linux OS 16.04 ನಲ್ಲಿ Koha Library Management System ಅನ್ನುಇನ್ಸ್ಟಾಲ್ ಮಾಡಲು ಕಲಿಯುವೆವು. ಮತ್ತು ಇನ್ಸ್ಟಾಲೇಶನ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವೆವು.
00:24 ಈ ಟ್ಯುಟೋರಿಯಲ್ ಅನ್ನು:

Ubuntu Linux ಆಪರೇಟಿಂಗ್ ಸಿಸ್ಟಂ 16.04, Koha ಆವೃತ್ತಿ 16.05,

00:35 gedit ಟೆಕ್ಸ್ಟ್- ಎಡಿಟರ್ ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ.
00:41 ನೀವು ಆರಂಭಿಸುವ ಮೊದಲು, ನಿಮ್ಮ ಮಷಿನ್ Ubuntu Linux OS 16.04,
00:50 ಯಾವುದೇ ಟೆಕ್ಸ್ಟ್- ಎಡಿಟರ್,

Firefox ಅಥವಾ Google Chrome ವೆಬ್-ಬ್ರೌಸರ್, ಇವುಗಳನ್ನು ಹೊಂದಿರುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

00:57 ಇದಕ್ಕಾಗಿ - i 3 (ಐ ೩) ಅಥವಾ ಅದಕ್ಕಿಂತ ಹೆಚ್ಚಿನ ಪ್ರೊಸೆಸರ್,
01:05 500GB ಅಥವಾ ಅದಕ್ಕಿಂತ ಹೆಚ್ಚು ಹಾರ್ಡ್ ಡಿಸ್ಕ್,
01:09 4 GB ಅಥವಾ ಅದಕ್ಕಿಂತ ಹೆಚ್ಚು RAM (ರ್ಯಾ ಮ್) ಮತ್ತು ನೆಟ್ವರ್ಕ್ ಸೌಲಭ್ಯ, ಇವುಗಳು ಅಗತ್ಯವಿರುವ ಹಾರ್ಡ್ವೇರ್ ಆಗಿವೆ.
01:15 ಈ ಟ್ಯುಟೋರಿಯಲ್ ನಲ್ಲಿ ಬಳಸಲಾದ ಕಮಾಂಡ್ ಗಳು, ಪ್ಲೇಯರ್ ನ ಕೆಳಗಿರುವ Code Files ಲಿಂಕ್ ನಲ್ಲಿ ಲಭ್ಯವಿರುತ್ತವೆ.
01:22 ನನ್ನ ಮಷಿನ್ ನಲ್ಲಿ, ನಾನು ಈ ಫೈಲ್ ಅನ್ನು gedit ಟೆಕ್ಸ್ಟ್- ಎಡಿಟರ್ ನಲ್ಲಿ ತೆರೆದಿದ್ದೇನೆ. ಮತ್ತು, ವಿವರಣೆಯ ಸಮಯದಲ್ಲಿ ಕಮಾಂಡ್ ಗಳನ್ನು ಕಾಪಿ-ಪೇಸ್ಟ್ ಮಾಡಲು, ನಾನು ಇದೇ ಫೈಲ್ ಅನ್ನು ಬಳಸುತ್ತೇನೆ.
01:33 ಈಗ ನಾವು ಪ್ರಾರಂಭಿಸೋಣ.

ಕೀಬೋರ್ಡ್ ಮೇಲೆ Ctrl+Alt+T ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ.

01:43 ಮೊಟ್ಟಮೊದಲು, ನಮ್ಮ Ubuntu Linux ಇನ್ಸ್ಟಾಲೇಶನ್ ಅಪ್-ಟು-ಡೇಟ್ ಆಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.
01:50 ಇದಕ್ಕಾಗಿ, ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.
01:59 ಇನ್ನುಮುಂದೆ, ಈ ಇನ್ಸ್ಟಾಲೇಶನ್ ನ ಅವಧಿಯಲ್ಲಿ, ಕೇಳಿದಾಗಲೆಲ್ಲ 'ಸಿಸ್ಟಂ ಪಾಸ್ವರ್ಡ್' ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
02:10 ಈ ಕಮಾಂಡ್, koha.list ಎಂಬ ಒಂದು ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಮತ್ತು 'ಪ್ಯಾಕೇಜ್ ರಿಪೊಸಿಟರಿ' (package repository) ಯನ್ನು ಅಪ್-ಡೇಟ್ ಮಾಡುತ್ತದೆ.
02:19 ದಯವಿಟ್ಟು ಗಮನಿಸಿ: ಈ ಟ್ಯುಟೋರಿಯಲ್ ಅನ್ನು ತಯಾರಿಸುವಾಗ, Koha 16.05 ಸ್ಥಿರ ಆವೃತ್ತಿ (stable version) ಆಗಿತ್ತು.
02:28 ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.
02:37 ಆಗ, ಇದು gpg.asc ಫೈಲ್ ಅನ್ನು ಡೌನ್ಲೋಡ್ ಮಾಡುವುದು ಮತ್ತು signature key ಯನ್ನು ಅಪ್-ಡೇಟ್ ಮಾಡುವುದು.
02:47 ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.
02:57 ಈಗ, ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.
03:07 ಇದು ಹೊಸ ' ರಿಪೊಸಿಟರಿ' ಗಳನ್ನು ಅಪ್-ಡೇಟ್ ಮಾಡುವುದು.
03:11 ಈಗ, ಹೀಗೆ ಟೈಪ್ ಮಾಡಿ: sudo apt-get install koha-common ಮತ್ತು, Enter ಅನ್ನು ಒತ್ತಿ.
03:22 Do you want to continue? ಎಂದು ಕೇಳಿದಾಗ Y ಅನ್ನು ಒತ್ತಿ. ಮತ್ತು Enter ಅನ್ನು ಒತ್ತಿ.
03:30 ಇದು Koha ಅನ್ನು ನಿಮ್ಮ ಸಿಸ್ಟಂ ನ ಮೇಲೆ ಇನ್ಸ್ಟಾಲ್ ಮಾಡುವುದು.

ಇನ್ಸ್ಟಾಲೇಶನ್ ಪೂರ್ತಿಯಾಗುವವರೆಗೆ ನಿರೀಕ್ಷಿಸಿ. ಇದು ಸ್ವಲ್ಪ ಸಮಯ ತೆಗೆದುಕೊಳ್ಳುವುದು.

03:40 ಈಗ, ನಾವು Koha ಗಾಗಿ ಪೋರ್ಟ್ ನಂಬರ್ ಅನ್ನು ಬದಲಾಯಿಸಲು, conf ಫೈಲ್ ಅನ್ನು ಒಂದು 'ಟೆಕ್ಸ್ಟ್-ಎಡಿಟರ್' ನಲ್ಲಿ ತೆರೆಯಬೇಕು.
03:49 ನಾನು gedit ಟೆಕ್ಸ್ಟ್-ಎಡಿಟರ್ ಅನ್ನುಬಳಸುವೆನು. ನೀವು ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನುಬಳಸಬಹುದು.
03:57 ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.
04:06 ಫೈಲ್, ಟೆಕ್ಸ್ಟ್-ಎಡಿಟರ್ ನಲ್ಲಿ ತೆರೆದುಕೊಳ್ಳುತ್ತದೆ.
04:10 INTRAPORT = 80 ಎಂದು ಹೇಳುವ ಸಾಲನ್ನು ಗುರುತಿಸಿ.
04:16 80 ಯನ್ನು 8080 ಎಂದು ಬದಲಾಯಿಸಿ. ಇದು ಪೋರ್ಟ್ ನಂಬರ್ ಅನ್ನು 8080 ಗೆ ಬದಲಾಯಿಸುತ್ತದೆ.
04:26 ಆಮೇಲೆ ಫೈಲ್ ಅನ್ನು ಸೇವ್ ಮಾಡಿ, ಕ್ಲೋಸ್ ಮಾಡಿ.
04:30 ಟರ್ಮಿನಲ್ ಗೆ ಹಿಂದಿರುಗಿ.
04:33 ಈಗ, ನಾವು ಡೇಟಾಬೇಸ್ ಅನ್ನು ಸೆಟ್-ಅಪ್ ಮಾಡಬೇಕು.
04:38 ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.
04:47 Do you want to continue? ಎಂದು ಕೇಳಿದಾಗ Y ಅನ್ನು ಒತ್ತಿ. ಹಾಗೂ, Enter ಅನ್ನು ಒತ್ತಿ.
04:57 ಆಮೇಲೆ, ಡೇಟಾಬೇಸ್ ಗಾಗಿ root user ನ ಪಾಸ್ವರ್ಡ್ ಅನ್ನು admin123 ಎಂದು ಸೆಟ್ ಮಾಡಿ.
05:05 ನಿಮಗೆ ಬೇಕೆನಿಸಿದರೆ, ನೀವು ಬೇರೊಂದು ಪಾಸ್ವರ್ಡ್ ಅನ್ನು ಕೊಡಬಹುದು.
05:10 ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.
05:19 ನಂತರ, ಈ ಎರಡು ಕಮಾಂಡ್ ಗಳನ್ನು ಒಂದೊಂದಾಗಿ ಕಾಪಿ ಮಾಡಿ, ಅವುಗಳನ್ನು ಟರ್ಮಿನಲ್ ನ ಮೇಲೆ ಪೇಸ್ಟ್ ಮಾಡಿ. ಮತ್ತು, Enter ಅನ್ನು ಒತ್ತಿ.
05:26 sudo a2enmod rewrite
05:35 sudo a2enmod cgi
05:43 ಇದು 'ಕೋಹಾ'ದ ಮೊಡ್ಯೂಲ್ ಗಳನ್ನು ಸಕ್ರಿಯಗೊಳಿಸುತ್ತದೆ.
05:48 ನಂತರ ಹೀಗೆ ಟೈಪ್ ಮಾಡಿ: sudo service apache2 restart
05:55 ಇದು apache services ಅನ್ನು (ಅಪಾಚೆ ಸರ್ವೀಸಸ್) ರಿ-ಸ್ಟಾರ್ಟ್ ಮಾಡುವುದು. ಆಮೇಲೆ Enter ಅನ್ನು ಒತ್ತಿ.
06:02 library ಎಂಬ ಹೆಸರಿನ ಒಂದು Koha instance ಅನ್ನು ಕ್ರಿಯೇಟ್ ಮಾಡಲು - ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.
06:16 ನಂತರ, port 8080 ಅನ್ನು ಬಳಸುತ್ತಿದ್ದೇವೆ ಎಂದು ನಾವು 'ಅಪಾಚೆ ಸರ್ವರ್'ಗೆ (Apache server) ಹೇಳಬೇಕು.
06:24 ಇದಕ್ಕಾಗಿ, ನಾವು ports.conf ಫೈಲ್ ಅನ್ನು ಟೆಕ್ಸ್ಟ್-ಎಡಿಟರ್ ನಲ್ಲಿ ತೆರೆಯಬೇಕು.
06:31 ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.
06:40 ports.conf ಫೈಲ್ ನಲ್ಲಿ, Listen 80 (ಲಿಸನ್ 8 0) ಎಂಬ ಸಾಲನ್ನು ಹುಡುಕಿ.
06:47 ಈ ಸಾಲಿನ ನಂತರ, Listen 8080 ಎಂದು ಸೇರಿಸಿ.
06:53 ಆಮೇಲೆ ಫೈಲ್ ಅನ್ನು ಸೇವ್ ಮಾಡಿ, ಕ್ಲೋಸ್ ಮಾಡಿ.
06:57 ನಂತರ apache services ಅನ್ನು ರಿ-ಸ್ಟಾರ್ಟ್ ಮಾಡಿ.

ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.

07:10 ಆಮೇಲೆ, ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.
07:20 ಇದು 000-default ಸೈಟ್ ಅನ್ನು ನಿಷ್ಕ್ರಿಯಗೊಳಿಸುತ್ತದೆ (disable).
07:27 ಇದು ನಿಷ್ಕ್ರಿಯವಾಗಿದೆ ಎಂದು ಈ ಮೆಸೇಜ್ ಖಚಿತಪಡಿಸುತ್ತದೆ. ಈಗ ನಾವು ಮುಂದೆ ಹೋಗೋಣ.
07:34 ಈ ಎರಡು ಕಮಾಂಡ್ ಗಳನ್ನು ಒಂದೊಂದಾಗಿ ಕಾಪಿ ಮಾಡಿ, ಅವುಗಳನ್ನು ಟರ್ಮಿನಲ್ ನ ಮೇಲೆ ಪೇಸ್ಟ್ ಮಾಡಿ. ಮತ್ತು, Enter ಅನ್ನು ಒತ್ತಿ.
07:41 sudo a2enmod deflate ಮತ್ತು, Enter ಅನ್ನು ಒತ್ತಿ.
07:52 sudo a2ensite library ಮತ್ತು, Enter ಅನ್ನು ಒತ್ತಿ.
08:03 ಟರ್ಮಿನಲ್ ಮೇಲಿನ ಮೆಸೇಜ್, site library ಯನ್ನು ಸಕ್ರಿಯಗೊಳಿಸಲಾಗಿದೆ (enabled) ಎಂದು ಖಚಿತಪಡಿಸುತ್ತದೆ.
08:10 ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.
08:20 ನಂತರ ಹೀಗೆ ಟೈಪ್ ಮಾಡಿ: sudo su (ಸುಡೋ s u) ಮತ್ತು Enter ಅನ್ನು ಒತ್ತಿ.
08:26 ನಾವು ಈಗ superuser (ಸೂಪರ್ ಯೂಸರ್) ಎಂದರೆ root user ಮೋಡ್ ನಲ್ಲಿ ಇದ್ದೇವೆ.
08:33 ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ.
08:41 ಕೇಳಿದಾಗ ಪಾಸ್ವರ್ಡ್ ಅನ್ನು ಟೈಪ್ ಮಾಡಿ, admin123 ಮತ್ತು Enter ಅನ್ನು ಒತ್ತಿ.
08:49 ನಾವು ಈಗ ನಮ್ಮ MariaDB ಪ್ರಾಂಪ್ಟ್ ನ ಒಳಗಡೆ ಇದ್ದೇವೆ.
08:54 MariaDB ಪ್ರಾಂಪ್ಟ್ ನಲ್ಲಿ, ಹೀಗೆ ಟೈಪ್ ಮಾಡಿ: use mysql ಸೆಮಿಕೋಲನ್ ಮತ್ತು Enter ಅನ್ನು ಒತ್ತಿ.
09:03 ಇದು MariaDB ಗೆ mysql ಡೇಟಾಬೇಸ್ ಅನ್ನು ಬಳಸಲು ಹೇಳುತ್ತದೆ.
09:09 ಟರ್ಮಿನಲ್ ನ ಮೇಲೆ ತೋರಿಸಲಾದ ಮೆಸೇಜ್, Database changed ಎಂದು ಹೇಳುತ್ತದೆ.
09:15 ಗಮನಿಸಿ, ಈ MariaDB ಪ್ರಾಂಪ್ಟ್ mysql ಎಂದು ಹೇಳುತ್ತದೆ.
09:22 ಈಗ ಕೆಳಗಿನ ಕಮಾಂಡ್ ಅನ್ನು ಎಚ್ಚರಿಕೆಯಿಂದ, ಇಲ್ಲಿ ತೋರಿಸಿದಂತೆ ಟೈಪ್ ಮಾಡಿ ಮತ್ತು, Enter ಅನ್ನು ಒತ್ತಿ.
09:30 ಇದು ಯೂಸರ್ koha_library ಗಾಗಿ, ಪಾಸ್ವರ್ಡ್ ಅನ್ನು koha123 ಎಂದು ಸೆಟ್ ಮಾಡುತ್ತದೆ.
09:39 ನಾವು ಟರ್ಮಿನಲ್ ನ ಮೇಲೆ, “Query OK” ಎಂಬ ಮೆಸೇಜ್ ಅನ್ನು ನೋಡುತ್ತೇವೆ.
09:45 ನಂತರ, ಹೀಗೆ ಟೈಪ್ ಮಾಡಿ: flush privileges ಸೆಮಿಕೋಲನ್ ಮತ್ತು, Enter ಅನ್ನು ಒತ್ತಿ.

ಇದು ಇತ್ತೀಚಿನ ಬದಲಾವಣೆಗಳನ್ನು ಅಪ್ಡೇಟ್ ಮಾಡುವುದು.

09:58 ಮತ್ತೊಮ್ಮೆ ನಾವು “Query OK” ಎಂದು ಹೇಳುವ ಒಂದು ಮೆಸೇಜ್ ಅನ್ನು ಟರ್ಮಿನಲ್ ನ ಮೇಲೆ ನೋಡುತ್ತೇವೆ.
10:04 ಕೊನೆಯದಾಗಿ, Mariadb ಯಿಂದ ಹೊರಗೆ ಬರಲು, ಹೀಗೆ ಟೈಪ್ ಮಾಡಿ: quit ಸೆಮಿಕೋಲನ್ ಮತ್ತು, Enter ಅನ್ನು ಒತ್ತಿ.
10:13 ಈಗ ನಾವು ಮತ್ತೆ root user ಪ್ರಾಂಪ್ಟ್ ಗೆ ಮರಳಿದ್ದೇವೆ.
10:17 ನಾವು ಈಗ koha-conf.xml ಫೈಲ್ ಅನ್ನು ಟೆಕ್ಸ್ಟ್-ಎಡಿಟರ್ ನಲ್ಲಿ ತೆರೆಯುತ್ತೇವೆ.
10:25 ನಾನು gedit ಟೆಕ್ಸ್ಟ್-ಎಡಿಟರ್ ಅನ್ನು ಬಳಸಿ ಇದನ್ನು ಮಾಡುತ್ತೇನೆ.
10:30 ಈ ಫೈಲ್ ನಲ್ಲಿ, mysql ಎಂಬ ಕೀವರ್ಡ್ ಗಾಗಿ ಹುಡುಕಿ.
10:37 ಕೆಳಗೆ ಸ್ಕ್ರೋಲ್ ಮಾಡಿ ಮತ್ತು ಈ ಸಾಲನ್ನು ಗುರುತಿಸಿ.
10:41 ಈ ಅಲ್ಫಾನ್ಯೂಮೆರಿಕ್ ವ್ಯಾಲ್ಯೂಗೆ ಬದಲಾಗಿ 'koha123' ಅನ್ನು ಸೇರಿಸಿ.
10:47 ಇದು, ಈಮೊದಲು, ಟರ್ಮಿನಲ್ ನ ಮೂಲಕ ನಮ್ಮ ಡೇಟಾಬೇಸ್ ಗಾಗಿ ನಾವು ಸೆಟ್ ಮಾಡಿದ ಪಾಸ್ವರ್ಡ್ ಆಗಿದೆ ಎಂದು ನೆನಪಿಸಿಕೊಳ್ಳಿ.
10:55 ಫೈಲ್ ಅನ್ನು ಸೇವ್ ಮಾಡಿ ಮತ್ತು editor ವಿಂಡೋಅನ್ನು ಮುಚ್ಚಿ.
10:59 ಈಗ ಯಾವುದೇ ವೆಬ್-ಬ್ರೌಸರ್ ಅನ್ನು ತೆರೆಯಿರಿ. ನಾನು Firefox ವೆಬ್-ಬ್ರೌಸರ್ ಅನ್ನು ತೆರೆಯುತ್ತೇನೆ.
11:06 ಅಡ್ರೆಸ್ ಬಾರ್ ನಲ್ಲಿ, ಹೀಗೆ ಟೈಪ್ ಮಾಡಿ: 127.0.0.1:8080 ಮತ್ತು, Enter ಅನ್ನು ಒತ್ತಿ.
11:21 ಬ್ರೌಸರ್ ನಲ್ಲಿ Koha web installer ಪೇಜ್ ಕಾಣಿಸಿಕೊಳ್ಳುತ್ತದೆ.
11:26 ಲಾಗ್-ಇನ್ ಮಾಡಲು, ನಾವು ಹಿಂದೆ ಸೆಟ್ ಮಾಡಿದ ವಿವರಗಳನ್ನು (credentials) ಬಳಸಿ.
11:31 ನಾನು username ಅನ್ನು koha_library ಎಂದು ಮತ್ತು password ಅನ್ನು koha123 ಎಂದು ಟೈಪ್ ಮಾಡುವೆನು.
11:42 ಒಂದುವೇಳೆ, ನೀವು ಬೇರೆಯ username ಹಾಗೂ password ಗಳನ್ನು ಕೊಟ್ಟಿದ್ದರೆ, ಅವುಗಳನ್ನು ಟೈಪ್ ಮಾಡಿ.
11:48 ಈಗ ಕೆಳಗೆ ಬಲಗಡೆ ಇರುವ Login ಬಟನ್ ಮೇಲೆ ಕ್ಲಿಕ್ ಮಾಡಿ.
11:53 ನಾವು Koha web installerStep 1 ನಲ್ಲಿ ಇದ್ದೇವೆ.
11:58 language ಡ್ರಾಪ್-ಡೌನ್ ನಲ್ಲಿ, ಡೀಫಾಲ್ಟ್ ಆಗಿ, ಈಗಾಗಲೇ ಆಯ್ಕೆ ಆಗಿರದಿದ್ದರೆ, English ಗಾಗಿ en ಅನ್ನು ಆಯ್ಕೆಮಾಡಿ.
12:06 ಈಗ, ಕೆಳಗೆ ಬಲಗಡೆ ಇರುವ Next ಬಟನ್ ಮೇಲೆ ಕ್ಲಿಕ್ ಮಾಡಿ.
12:10 ಈ ವಿಂಡೋ, ಈಗ 2 ಮೆಸೇಜ್ ಗಳನ್ನು ತೋರಿಸುತ್ತದೆ. ಎಲ್ಲಾ Perl modules ಮತ್ತು ಎಲ್ಲಾ dependencies ಗಳನ್ನು ಇನ್ಸ್ಟಾಲ್ ಮಾಡಲಾಗಿದೆ ಎಂದು ಈ ಮೆಸೇಜ್ ಗಳು ಖಚಿತಪಡಿಸುತ್ತವೆ.
12:21 ಕೆಳಗೆ ಬಲಗಡೆಯಲ್ಲಿ ಇರುವ Next ಬಟನ್ ಮೇಲೆ ಕ್ಲಿಕ್ ಮಾಡಿ.
12:25 ಈಗ ನಾವು Step 2 – Database settings ನಲ್ಲಿ ಇದ್ದೇವೆ.
12:30 ಗಮನಿಸಿ, ಇಲ್ಲಿರುವುದೆಲ್ಲ ನಾವು ಮೊದಲೇ ಕೊಟ್ಟಿರುವ ವ್ಯಾಲ್ಯೂಗಳೇ ಆಗಿವೆ.
12:36 ಆಮೇಲೆ, ಕೆಳಗಡೆ Next ಬಟನ್ ಮೇಲೆ ಕ್ಲಿಕ್ ಮಾಡಿ.
12:40 ಇದಾದ ಮೇಲೆ, “Connection established” ಎಂಬ ಒಂದು ಮೆಸೇಜ್ ಅನ್ನು ನಾವು ನೋಡುತ್ತೇವೆ.
12:46 ನಂತರ, ಇದನ್ನು ಖಚಿತಪಡಿಸುವ ಇನ್ನೂ 2 ಮೆಸೇಜ್ ಗಳನ್ನು ನೋಡುತ್ತೇವೆ.
12:51 ಕೆಳಗಡೆ, Next ಬಟನ್ ಮೇಲೆ ಕ್ಲಿಕ್ ಮಾಡಿ.
12:54 ಈಗ ನಾವು Step 3 ಗೆ ಬಂದಿದ್ದೇವೆ.
12:57 ಇಲ್ಲಿ ಸ್ಕ್ರೀನ್ ನಲ್ಲಿ ತೋರಿಸಿರುವುದನ್ನು ಓದಿ. ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ.
13:03 ಶೀಘ್ರದಲ್ಲಿಯೇ, ನಮ್ಮ ಸ್ಕ್ರೀನ್ ನಲ್ಲಿ Success ಎಂಬ ಮೆಸೇಜ್ ಅನ್ನು ನಾವು ನೋಡುತ್ತೇವೆ.

ನಮ್ಮ database tables ಅನ್ನು ಕ್ರಿಯೇಟ್ ಮಾಡಲಾಗಿದೆ ಎಂದು ಇದು ಖಚಿತಪಡಿಸುತ್ತದೆ.

13:13 ಈಗ ಮುಂದುವರೆಯಲು, ಕೆಳಗೆ Next ಬಟನ್ ಮೇಲೆ ಕ್ಲಿಕ್ ಮಾಡಿ.
13:18 ಕೂಡಲೆ, ನಾವು ಈ ಸ್ಕ್ರೀನ್ ಗೆ ಬರುತ್ತೇವೆ.
13:21 ಇಲ್ಲಿ ತೋರಿಸಿದ ಟೆಕ್ಸ್ಟ್ ಅನ್ನು ಓದಿ. ಆಮೇಲೆ install basic configuration settings ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
13:29 ಹೀಗೆ ಮಾಡಿದ ನಂತರ, ನಮ್ಮ MARC flavorಅನ್ನು ಆಯ್ಕೆಮಾಡಲು ನಮಗೆ ಹೇಳಲಾಗುತ್ತದೆ.

ನಾನು MARC21 ಅನ್ನು ಆಯ್ಕೆಮಾಡುತ್ತೇನೆ.

13:38 ನಂತರ ಕೆಳಗಡೆ Next ಬಟನ್ ಮೇಲೆ ಕ್ಲಿಕ್ ಮಾಡಿ.
13:42 ಈ ಸ್ಕ್ರೀನ್ ನಲ್ಲಿ, ಕೆಳಗೆ Mandatory ಎಂಬ ವಿಭಾಗಕ್ಕೆ ಸ್ಕ್ರೋಲ್ ಮಾಡಿ.
13:47 ಇಲ್ಲಿ,Default MARC21 ಚೆಕ್-ಬಾಕ್ಸ್ ಗಳು ಆಯ್ಕೆ ಆಗಿರುವುದನ್ನು ನಾವು ನೋಡುತ್ತೇವೆ.
13:54 Optional ವಿಭಾಗದ ಅಡಿಯಲ್ಲಿ, ಇಲ್ಲಿ ತೋರಿಸಿದಂತೆ ಎಲ್ಲ ಆಯ್ಕೆಗಳನ್ನು ಆರಿಸಿಕೊಳ್ಳಿ.
14:01 ಕೆಳಗೆ ಸ್ಕ್ರೋಲ್ ಮಾಡುತ್ತಿದ್ದಂತೆ, Other data ದ ಅಡಿಯಲ್ಲಿ, ಎಲ್ಲ ಚೆಕ್-ಬಾಕ್ಸ್ ಗಳು ಈಗಾಗಲೇ ಆಯ್ಕೆ ಆಗಿರುವುದನ್ನು ನಾವು ನೋಡುತ್ತೇವೆ.
14:09 ಪೇಜ್ ನ ಕೆಳತುದಿಯವರೆಗೆ ಸ್ಕ್ರೋಲ್ ಮಾಡುತ್ತಾ ಇರಿ.
14:13 ಇಲ್ಲಿ ಕೆಳಗೆ, ಬಹಳ ಉದ್ದವಾಗಿರುವ ಇನ್ನೊಂದು Optional ವಿಭಾಗವು ಇದೆ.
14:18 ಇಲ್ಲಿ, “Some basic currencies” ಎಂಬ ಆಯ್ಕೆಯನ್ನು ಗುರುತಿಸಿ ಮತ್ತು ಅದನ್ನು ಆಯ್ಕೆಮಾಡಿ.
14:24 ಇದರ ನಂತರ, “Useful patron attribute types” ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
14:30 ಈಗ ಪೇಜ್ ನ ಕೆಳತುದಿಗೆ ಹೋಗಿ ಮತ್ತು Import ಬಟನ್ ಮೇಲೆ ಕ್ಲಿಕ್ ಮಾಡಿ.
14:36 'ಕೋಹಾ' ದಲ್ಲಿ ಆಯ್ಕೆಮಾಡಲಾದ ಎಲ್ಲ ಕಾರ್ಯಾಚರಣೆಗಳನ್ನು (functionalities) ಇದು ಸಕ್ರಿಯಗೊಳಿಸುತ್ತದೆ.
14:41 ನಾವು ಈಗ ಒಂದು ಹೊಸ ಪೇಜ್ ಗೆ ಬಂದಿದ್ದೇವೆ. ಈ ಪೇಜ್ ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು ಸ್ಕ್ರೀನ್ ಮೇಲೆ ಪ್ರದರ್ಶಿಸಿದ ಎಲ್ಲಾ ಟೆಕ್ಸ್ಟ್ ಅನ್ನು ಓದಿ.
14:50 All done” ಎಂಬ ಒಂದು ಮೆಸೇಜ್ ಅನ್ನು ನಾವು ನೋಡಬಹುದು.
14:54 ಈಗ Finish ಬಟನ್ ಮೇಲೆ ಕ್ಲಿಕ್ ಮಾಡಿ.
14:57 ನಮ್ಮ ಸ್ಕ್ರೀನ್ ನಲ್ಲಿ, ನಾವು ಒಂದು ಮೆಸೇಜ್ ಅನ್ನು ನೋಡುತ್ತೇವೆ. ನಮ್ಮ ಇನ್ಸ್ಟಾಲೇಶನ್ ಯಶಸ್ವಿಯಾಗಿದೆ ಎಂದು ಇದು ಖಚಿತಪಡಿಸುತ್ತದೆ.
15:04 ಈಗ ನಮ್ಮನ್ನು Koha ಇಂಟರ್ಫೇಸ್ ಗೆ ಕಳಿಸಲಾಗುತ್ತದೆ.
15:08 username ಅನ್ನು koha_library ಎಂದು ಹಾಗೂ password ಅನ್ನು koha123 ಎಂದು ಟೈಪ್ ಮಾಡಿ.
15:16 ಡ್ರಾಪ್-ಡೌನ್ ನಿಂದ My Library ಯನ್ನು ಆಯ್ಕೆಮಾಡಿ.
15:20 ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
15:23 ನಾವು Koha Administration ಪೇಜ್ ಗೆ ಬಂದಿದ್ದೇವೆ.
15:27 ಈ ಪೇಜ್ ನಲ್ಲಿ, ವಿವಿಧ ಟ್ಯಾಬ್ ಗಳನ್ನು ನಾವು ನೋಡಬಹುದು.
15:31 ಇವುಗಳನ್ನು ಹೇಗೆ ಬಳಸುವುದೆಂದು ಈ ಸರಣಿಯಲ್ಲಿ ನಂತರ ನಾವು ಕಲಿಯುವೆವು.
15:37 ಈಗ, No Library Set ಮೇಲೆ ಕ್ಲಿಕ್ ಮಾಡಿ ಮತ್ತು Logout ಆಯ್ಕೆಯನ್ನು ಆರಿಸಿಕೊಳ್ಳಿ.
15:45 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಇದರ ಸಾರಾಂಶವು ಹೀಗಿದೆ.
15:50 ಈ ಟ್ಯುಟೋರಿಯಲ್ ನಲ್ಲಿ ನಾವು, Ubuntu Linux OS 16.04 ನಲ್ಲಿ Koha Library Management System ಅನ್ನು ಇನ್ಸ್ಟಾಲ್ ಮಾಡಲು ಮತ್ತು ಇನ್ಸ್ಟಾಲೇಶನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಕಲಿತಿದ್ದೇವೆ.
16:03 ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
16:12 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
16:22 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
16:26 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.

ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.

16:39 ಈ ಸ್ಕ್ರಿಪ್ಟ್, ನ್ಯಾನ್ಸಿ ಮತ್ತು ವೀಡಿಯೊ ಪ್ರವೀಣ್ ಅವರ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Sandhya.np14