Koha-Library-Management-System/C2/Koha-installation-on-Linux-16.04/Kannada
Time | Narration |
00:01 | Installation of Koha on Ubuntu Linux OS ಎಂಬ ಸ್ಪೋಕನ್- ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು, Ubuntu Linux OS 16.04 ನಲ್ಲಿ Koha Library Management System ಅನ್ನುಇನ್ಸ್ಟಾಲ್ ಮಾಡಲು ಕಲಿಯುವೆವು. ಮತ್ತು ಇನ್ಸ್ಟಾಲೇಶನ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವೆವು. |
00:24 | ಈ ಟ್ಯುಟೋರಿಯಲ್ ಅನ್ನು:
Ubuntu Linux ಆಪರೇಟಿಂಗ್ ಸಿಸ್ಟಂ 16.04, Koha ಆವೃತ್ತಿ 16.05, |
00:35 | gedit ಟೆಕ್ಸ್ಟ್- ಎಡಿಟರ್ ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ. |
00:41 | ನೀವು ಆರಂಭಿಸುವ ಮೊದಲು, ನಿಮ್ಮ ಮಷಿನ್ Ubuntu Linux OS 16.04, |
00:50 | ಯಾವುದೇ ಟೆಕ್ಸ್ಟ್- ಎಡಿಟರ್,
Firefox ಅಥವಾ Google Chrome ವೆಬ್-ಬ್ರೌಸರ್, ಇವುಗಳನ್ನು ಹೊಂದಿರುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. |
00:57 | ಇದಕ್ಕಾಗಿ -
i 3 (ಐ ೩) ಅಥವಾ ಅದಕ್ಕಿಂತ ಹೆಚ್ಚಿನ ಪ್ರೊಸೆಸರ್, |
01:05 | 500GB ಅಥವಾ ಅದಕ್ಕಿಂತ ಹೆಚ್ಚು ಹಾರ್ಡ್ ಡಿಸ್ಕ್, |
01:09 | 4 GB ಅಥವಾ ಅದಕ್ಕಿಂತ ಹೆಚ್ಚು RAM ಮತ್ತು ನೆಟ್ವರ್ಕ್ ಸೌಲಭ್ಯ, ಇವುಗಳು ಅಗತ್ಯವಿರುವ ಹಾರ್ಡ್ವೇರ್ ಆಗಿವೆ. |
01:15 | ಈ ಟ್ಯುಟೋರಿಯಲ್ ನಲ್ಲಿ ಬಳಸಲಾದ ಕಮಾಂಡ್ ಗಳು, ಪ್ಲೇಯರ್ ನ ಕೆಳಗಿರುವ Code Files ಲಿಂಕ್ ನಲ್ಲಿ ಲಭ್ಯವಿರುತ್ತವೆ. |
01:22 | ನನ್ನ ಮಷಿನ್ ನಲ್ಲಿ, ನಾನು ಈ ಫೈಲ್ ಅನ್ನು gedit ಟೆಕ್ಸ್ಟ್- ಎಡಿಟರ್ ನಲ್ಲಿ ತೆರೆದಿದ್ದೇನೆ. ಮತ್ತು, ವಿವರಣೆಯ ಸಮಯದಲ್ಲಿ ಕಮಾಂಡ್ ಗಳನ್ನು ಕಾಪಿ-ಪೇಸ್ಟ್ ಮಾಡಲು, ನಾನು ಇದೇ ಫೈಲ್ ಅನ್ನು ಬಳಸುತ್ತೇನೆ. |
01:33 | ಈಗ ನಾವು ಪ್ರಾರಂಭಿಸೋಣ.
ಕೀಬೋರ್ಡ್ ಮೇಲೆ Ctrl+Alt+T ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. |
01:43 | ಮೊಟ್ಟಮೊದಲು, ನಮ್ಮ Ubuntu Linux ಇನ್ಸ್ಟಾಲೇಶನ್ ಅಪ್-ಟು-ಡೇಟ್ ಆಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. |
01:50 | ಇದಕ್ಕಾಗಿ, ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
01:59 | ಇನ್ನುಮುಂದೆ, ಈ ಇನ್ಸ್ಟಾಲೇಶನ್ ನ ಅವಧಿಯಲ್ಲಿ, ಕೇಳಿದಾಗಲೆಲ್ಲ 'ಸಿಸ್ಟಂ ಪಾಸ್ವರ್ಡ್' ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
02:10 | ಈ ಕಮಾಂಡ್, koha.list ಎಂಬ ಒಂದು ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಮತ್ತು 'ಪ್ಯಾಕೇಜ್ ರಿಪೊಸಿಟರಿ' (package repository) ಯನ್ನು ಅಪ್-ಡೇಟ್ ಮಾಡುತ್ತದೆ. |
02:19 | ದಯವಿಟ್ಟು ಗಮನಿಸಿ: ಈ ಟ್ಯುಟೋರಿಯಲ್ ಅನ್ನು ತಯಾರಿಸುವಾಗ, Koha 16.05 ಸ್ಥಿರ ಆವೃತ್ತಿ (stable version) ಆಗಿತ್ತು. |
02:28 | ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
02:37 | ಆಗ, ಇದು gpg.asc ಫೈಲ್ ಅನ್ನು ಡೌನ್ಲೋಡ್ ಮಾಡುವುದು ಮತ್ತು signature key ಯನ್ನು ಅಪ್-ಡೇಟ್ ಮಾಡುವುದು. |
02:47 | ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
02:57 | ಈಗ, ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
03:07 | ಇದು ಹೊಸ ' ರಿಪೊಸಿಟರಿ' ಗಳನ್ನು ಅಪ್-ಡೇಟ್ ಮಾಡುವುದು. |
03:11 | ಈಗ, ಹೀಗೆ ಟೈಪ್ ಮಾಡಿ: sudo apt-get install koha-common ಮತ್ತು, Enter ಅನ್ನು ಒತ್ತಿ. |
03:22 | Do you want to continue? ಎಂದು ಕೇಳಿದಾಗ Y ಅನ್ನು ಒತ್ತಿ. ಮತ್ತು Enter ಅನ್ನು ಒತ್ತಿ. |
03:30 | ಇದು Koha ಅನ್ನು ನಿಮ್ಮ ಸಿಸ್ಟಂ ನ ಮೇಲೆ ಇನ್ಸ್ಟಾಲ್ ಮಾಡುವುದು.
ಇನ್ಸ್ಟಾಲೇಶನ್ ಪೂರ್ತಿಯಾಗುವವರೆಗೆ ನಿರೀಕ್ಷಿಸಿ. ಇದು ಸ್ವಲ್ಪ ಸಮಯ ತೆಗೆದುಕೊಳ್ಳುವುದು. |
03:40 | ಈಗ, ನಾವು Koha ಗಾಗಿ ಪೋರ್ಟ್ ನಂಬರ್ ಅನ್ನು ಬದಲಾಯಿಸಲು, conf ಫೈಲ್ ಅನ್ನು ಒಂದು 'ಟೆಕ್ಸ್ಟ್-ಎಡಿಟರ್' ನಲ್ಲಿ ತೆರೆಯಬೇಕು. |
03:49 | ನಾನು gedit ಟೆಕ್ಸ್ಟ್-ಎಡಿಟರ್ ಅನ್ನುಬಳಸುವೆನು. ನೀವು ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನುಬಳಸಬಹುದು. |
03:57 | ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
04:06 | ಫೈಲ್, ಟೆಕ್ಸ್ಟ್-ಎಡಿಟರ್ ನಲ್ಲಿ ತೆರೆದುಕೊಳ್ಳುತ್ತದೆ. |
04:10 | INTRAPORT = 80 ಎಂದು ಹೇಳುವ ಸಾಲನ್ನು ಗುರುತಿಸಿ. |
04:16 | 80 ಯನ್ನು 8080 ಎಂದು ಬದಲಾಯಿಸಿ. ಇದು ಪೋರ್ಟ್ ನಂಬರ್ ಅನ್ನು 8080 ಗೆ ಬದಲಾಯಿಸುತ್ತದೆ. |
04:26 | ಆಮೇಲೆ ಫೈಲ್ ಅನ್ನು ಸೇವ್ ಮಾಡಿ, ಕ್ಲೋಸ್ ಮಾಡಿ. |
04:30 | ಟರ್ಮಿನಲ್ ಗೆ ಹಿಂದಿರುಗಿ. |
04:33 | ಈಗ, ನಾವು ಡೇಟಾಬೇಸ್ ಅನ್ನು ಸೆಟ್-ಅಪ್ ಮಾಡಬೇಕು. |
04:38 | ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
04:47 | Do you want to continue? ಎಂದು ಕೇಳಿದಾಗ Y ಅನ್ನು ಒತ್ತಿ. ಹಾಗೂ, Enter ಅನ್ನು ಒತ್ತಿ. |
04:57 | ಆಮೇಲೆ, ಡೇಟಾಬೇಸ್ ಗಾಗಿ root user ನ ಪಾಸ್ವರ್ಡ್ ಅನ್ನು admin123 ಎಂದು ಸೆಟ್ ಮಾಡಿ. |
05:05 | ನಿಮಗೆ ಬೇಕೆನಿಸಿದರೆ, ನೀವು ಬೇರೊಂದು ಪಾಸ್ವರ್ಡ್ ಅನ್ನು ಕೊಡಬಹುದು. |
05:10 | ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
05:19 | ನಂತರ, ಈ ಎರಡು ಕಮಾಂಡ್ ಗಳನ್ನು ಒಂದೊಂದಾಗಿ ಕಾಪಿ ಮಾಡಿ, ಅವುಗಳನ್ನು ಟರ್ಮಿನಲ್ ನ ಮೇಲೆ ಪೇಸ್ಟ್ ಮಾಡಿ. ಮತ್ತು, Enter ಅನ್ನು ಒತ್ತಿ. |
05:26 | sudo a2enmod rewrite |
05:35 | sudo a2enmod cgi |
05:43 | ಇದು 'ಕೋಹಾ'ದ ಮೊಡ್ಯೂಲ್ ಗಳನ್ನು ಸಕ್ರಿಯಗೊಳಿಸುತ್ತದೆ. |
05:48 | ನಂತರ ಹೀಗೆ ಟೈಪ್ ಮಾಡಿ: sudo service apache2 restart |
05:55 | ಇದು apache services ಅನ್ನು (ಅಪಾಚೆ ಸರ್ವೀಸಸ್) ರಿ-ಸ್ಟಾರ್ಟ್ ಮಾಡುವುದು. ಆಮೇಲೆ Enter ಅನ್ನು ಒತ್ತಿ. |
06:02 | library ಎಂಬ ಹೆಸರಿನ ಒಂದು Koha instance ಅನ್ನು ಕ್ರಿಯೇಟ್ ಮಾಡಲು - ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
06:16 | ನಂತರ, port 8080 ಅನ್ನು ಬಳಸುತ್ತಿದ್ದೇವೆ ಎಂದು ನಾವು 'ಅಪಾಚೆ ಸರ್ವರ್'ಗೆ (Apache server) ಹೇಳಬೇಕು. |
06:24 | ಇದಕ್ಕಾಗಿ, ನಾವು ports.conf ಫೈಲ್ ಅನ್ನು ಟೆಕ್ಸ್ಟ್-ಎಡಿಟರ್ ನಲ್ಲಿ ತೆರೆಯಬೇಕು. |
06:31 | ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
06:40 | ports.conf ಫೈಲ್ ನಲ್ಲಿ, Listen 80 (ಲಿಸನ್ 8 0) ಎಂಬ ಸಾಲನ್ನು ಹುಡುಕಿ. |
06:47 | ಈ ಸಾಲಿನ ನಂತರ, Listen 8080 ಎಂದು ಸೇರಿಸಿ. |
06:53 | ಆಮೇಲೆ ಫೈಲ್ ಅನ್ನು ಸೇವ್ ಮಾಡಿ, ಕ್ಲೋಸ್ ಮಾಡಿ. |
06:57 | ನಂತರ apache services ಅನ್ನು ರಿ-ಸ್ಟಾರ್ಟ್ ಮಾಡಿ.
ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
07:10 | ಆಮೇಲೆ, ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
07:20 | ಇದು 000-default ಸೈಟ್ ಅನ್ನು ನಿಷ್ಕ್ರಿಯಗೊಳಿಸುತ್ತದೆ (disable). |
07:27 | ಇದು ನಿಷ್ಕ್ರಿಯವಾಗಿದೆ ಎಂದು ಈ ಮೆಸೇಜ್ ಖಚಿತಪಡಿಸುತ್ತದೆ. ಈಗ ನಾವು ಮುಂದೆ ಹೋಗೋಣ. |
07:34 | ಈ ಎರಡು ಕಮಾಂಡ್ ಗಳನ್ನು ಒಂದೊಂದಾಗಿ ಕಾಪಿ ಮಾಡಿ, ಅವುಗಳನ್ನು ಟರ್ಮಿನಲ್ ನ ಮೇಲೆ ಪೇಸ್ಟ್ ಮಾಡಿ. ಮತ್ತು, Enter ಅನ್ನು ಒತ್ತಿ. |
07:41 | sudo a2enmod deflate ಮತ್ತು, Enter ಅನ್ನು ಒತ್ತಿ. |
07:52 | sudo a2ensite library ಮತ್ತು, Enter ಅನ್ನು ಒತ್ತಿ. |
08:03 | ಟರ್ಮಿನಲ್ ಮೇಲಿನ ಮೆಸೇಜ್, site library ಯನ್ನು ಸಕ್ರಿಯಗೊಳಿಸಲಾಗಿದೆ (enabled) ಎಂದು ಖಚಿತಪಡಿಸುತ್ತದೆ. |
08:10 | ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
08:20 | ನಂತರ ಹೀಗೆ ಟೈಪ್ ಮಾಡಿ: sudo su (ಸುಡೋ s u) ಮತ್ತು Enter ಅನ್ನು ಒತ್ತಿ. |
08:26 | ನಾವು ಈಗ superuser (ಸೂಪರ್ ಯೂಸರ್) ಎಂದರೆ root user ಮೋಡ್ ನಲ್ಲಿ ಇದ್ದೇವೆ. |
08:33 | ಈ ಕಮಾಂಡ್ ಅನ್ನು Code file ನಿಂದ ಕಾಪಿ ಮಾಡಿ ಮತ್ತು ಅದನ್ನು ಟರ್ಮಿನಲ್ ನಲ್ಲಿ ಪೇಸ್ಟ್ ಮಾಡಿ. Enter ಅನ್ನು ಒತ್ತಿ. |
08:41 | ಕೇಳಿದಾಗ ಪಾಸ್ವರ್ಡ್ ಅನ್ನು ಟೈಪ್ ಮಾಡಿ, admin123 ಮತ್ತು Enter ಅನ್ನು ಒತ್ತಿ. |
08:49 | ನಾವು ಈಗ ನಮ್ಮ MariaDB ಪ್ರಾಂಪ್ಟ್ ನ ಒಳಗಡೆ ಇದ್ದೇವೆ. |
08:54 | MariaDB ಪ್ರಾಂಪ್ಟ್ ನಲ್ಲಿ, ಹೀಗೆ ಟೈಪ್ ಮಾಡಿ: use mysql ಸೆಮಿಕೋಲನ್ ಮತ್ತು Enter ಅನ್ನು ಒತ್ತಿ. |
09:03 | ಇದು MariaDB ಗೆ mysql ಡೇಟಾಬೇಸ್ ಅನ್ನು ಬಳಸಲು ಹೇಳುತ್ತದೆ. |
09:09 | ಟರ್ಮಿನಲ್ ನ ಮೇಲೆ ತೋರಿಸಲಾದ ಮೆಸೇಜ್, Database changed ಎಂದು ಹೇಳುತ್ತದೆ. |
09:15 | ಗಮನಿಸಿ, ಈ MariaDB ಪ್ರಾಂಪ್ಟ್ mysql ಎಂದು ಹೇಳುತ್ತದೆ. |
09:22 | ಈಗ ಕೆಳಗಿನ ಕಮಾಂಡ್ ಅನ್ನು ಎಚ್ಚರಿಕೆಯಿಂದ, ಇಲ್ಲಿ ತೋರಿಸಿದಂತೆ ಟೈಪ್ ಮಾಡಿ ಮತ್ತು, Enter ಅನ್ನು ಒತ್ತಿ. |
09:30 | ಇದು ಯೂಸರ್ koha_library ಗಾಗಿ, ಪಾಸ್ವರ್ಡ್ ಅನ್ನು koha123 ಎಂದು ಸೆಟ್ ಮಾಡುತ್ತದೆ. |
09:39 | ನಾವು ಟರ್ಮಿನಲ್ ನ ಮೇಲೆ, “Query OK” ಎಂಬ ಮೆಸೇಜ್ ಅನ್ನು ನೋಡುತ್ತೇವೆ. |
09:45 | ನಂತರ, ಹೀಗೆ ಟೈಪ್ ಮಾಡಿ: flush privileges ಸೆಮಿಕೋಲನ್ ಮತ್ತು, Enter ಅನ್ನು ಒತ್ತಿ.
ಇದು ಇತ್ತೀಚಿನ ಬದಲಾವಣೆಗಳನ್ನು ಅಪ್ಡೇಟ್ ಮಾಡುವುದು. |
09:58 | ಮತ್ತೊಮ್ಮೆ ನಾವು “Query OK” ಎಂದು ಹೇಳುವ ಒಂದು ಮೆಸೇಜ್ ಅನ್ನು ಟರ್ಮಿನಲ್ ನ ಮೇಲೆ ನೋಡುತ್ತೇವೆ. |
10:04 | ಕೊನೆಯದಾಗಿ, Mariadb ಯಿಂದ ಹೊರಗೆ ಬರಲು, ಹೀಗೆ ಟೈಪ್ ಮಾಡಿ: quit ಸೆಮಿಕೋಲನ್ ಮತ್ತು, Enter ಅನ್ನು ಒತ್ತಿ. |
10:13 | ಈಗ ನಾವು ಮತ್ತೆ root user ಪ್ರಾಂಪ್ಟ್ ಗೆ ಮರಳಿದ್ದೇವೆ. |
10:17 | ನಾವು ಈಗ koha-conf.xml ಫೈಲ್ ಅನ್ನು ಟೆಕ್ಸ್ಟ್-ಎಡಿಟರ್ ನಲ್ಲಿ ತೆರೆಯುತ್ತೇವೆ. |
10:25 | ನಾನು gedit ಟೆಕ್ಸ್ಟ್-ಎಡಿಟರ್ ಅನ್ನು ಬಳಸಿ ಇದನ್ನು ಮಾಡುತ್ತೇನೆ. |
10:30 | ಈ ಫೈಲ್ ನಲ್ಲಿ, mysql ಎಂಬ ಕೀವರ್ಡ್ ಗಾಗಿ ಹುಡುಕಿ. |
10:37 | ಕೆಳಗೆ ಸ್ಕ್ರೋಲ್ ಮಾಡಿ ಮತ್ತು ಈ ಸಾಲನ್ನು ಗುರುತಿಸಿ. |
10:41 | ಈ ಅಲ್ಫಾನ್ಯೂಮೆರಿಕ್ ವ್ಯಾಲ್ಯೂಗೆ ಬದಲಾಗಿ 'koha123' ಅನ್ನು ಸೇರಿಸಿ. |
10:47 | ಇದು, ಈಮೊದಲು, ಟರ್ಮಿನಲ್ ನ ಮೂಲಕ ನಮ್ಮ ಡೇಟಾಬೇಸ್ ಗಾಗಿ ನಾವು ಸೆಟ್ ಮಾಡಿದ ಪಾಸ್ವರ್ಡ್ ಆಗಿದೆ ಎಂದು ನೆನಪಿಸಿಕೊಳ್ಳಿ. |
10:55 | ಫೈಲ್ ಅನ್ನು ಸೇವ್ ಮಾಡಿ ಮತ್ತು editor ವಿಂಡೋಅನ್ನು ಮುಚ್ಚಿ. |
10:59 | ಈಗ ಯಾವುದೇ ವೆಬ್-ಬ್ರೌಸರ್ ಅನ್ನು ತೆರೆಯಿರಿ. ನಾನು Firefox ವೆಬ್-ಬ್ರೌಸರ್ ಅನ್ನು ತೆರೆಯುತ್ತೇನೆ. |
11:06 | ಅಡ್ರೆಸ್ ಬಾರ್ ನಲ್ಲಿ, ಹೀಗೆ ಟೈಪ್ ಮಾಡಿ: 127.0.0.1:8080 ಮತ್ತು, Enter ಅನ್ನು ಒತ್ತಿ. |
11:21 | ಬ್ರೌಸರ್ ನಲ್ಲಿ Koha web installer ಪೇಜ್ ಕಾಣಿಸಿಕೊಳ್ಳುತ್ತದೆ. |
11:26 | ಲಾಗ್-ಇನ್ ಮಾಡಲು, ನಾವು ಹಿಂದೆ ಸೆಟ್ ಮಾಡಿದ ವಿವರಗಳನ್ನು (credentials) ಬಳಸಿ. |
11:31 | ನಾನು username ಅನ್ನು koha_library ಎಂದು ಮತ್ತು password ಅನ್ನು koha123 ಎಂದು ಟೈಪ್ ಮಾಡುವೆನು. |
11:42 | ಒಂದುವೇಳೆ, ನೀವು ಬೇರೆಯ username ಹಾಗೂ password ಗಳನ್ನು ಕೊಟ್ಟಿದ್ದರೆ, ಅವುಗಳನ್ನು ಟೈಪ್ ಮಾಡಿ. |
11:48 | ಈಗ ಕೆಳಗೆ ಬಲಗಡೆ ಇರುವ Login ಬಟನ್ ಮೇಲೆ ಕ್ಲಿಕ್ ಮಾಡಿ. |
11:53 | ನಾವು Koha web installerನ Step 1 ನಲ್ಲಿ ಇದ್ದೇವೆ. |
11:58 | language ಡ್ರಾಪ್-ಡೌನ್ ನಲ್ಲಿ, ಡೀಫಾಲ್ಟ್ ಆಗಿ, ಈಗಾಗಲೇ ಆಯ್ಕೆ ಆಗಿರದಿದ್ದರೆ, English ಗಾಗಿ en ಅನ್ನು ಆಯ್ಕೆಮಾಡಿ. |
12:06 | ಈಗ, ಕೆಳಗೆ ಬಲಗಡೆ ಇರುವ Next ಬಟನ್ ಮೇಲೆ ಕ್ಲಿಕ್ ಮಾಡಿ. |
12:10 | ಈ ವಿಂಡೋ, ಈಗ 2 ಮೆಸೇಜ್ ಗಳನ್ನು ತೋರಿಸುತ್ತದೆ. ಎಲ್ಲಾ Perl modules ಮತ್ತು ಎಲ್ಲಾ dependencies ಗಳನ್ನು ಇನ್ಸ್ಟಾಲ್ ಮಾಡಲಾಗಿದೆ ಎಂದು ಈ ಮೆಸೇಜ್ ಗಳು ಖಚಿತಪಡಿಸುತ್ತವೆ. |
12:21 | ಕೆಳಗೆ ಬಲಗಡೆಯಲ್ಲಿ ಇರುವ Next ಬಟನ್ ಮೇಲೆ ಕ್ಲಿಕ್ ಮಾಡಿ. |
12:25 | ಈಗ ನಾವು Step 2 – Database settings ನಲ್ಲಿ ಇದ್ದೇವೆ. |
12:30 | ಗಮನಿಸಿ, ಇಲ್ಲಿರುವುದೆಲ್ಲ ನಾವು ಮೊದಲೇ ಕೊಟ್ಟಿರುವ ವ್ಯಾಲ್ಯೂಗಳೇ ಆಗಿವೆ. |
12:36 | ಆಮೇಲೆ, ಕೆಳಗಡೆ Next ಬಟನ್ ಮೇಲೆ ಕ್ಲಿಕ್ ಮಾಡಿ. |
12:40 | ಇದಾದ ಮೇಲೆ, “Connection established” ಎಂಬ ಒಂದು ಮೆಸೇಜ್ ಅನ್ನು ನಾವು ನೋಡುತ್ತೇವೆ. |
12:46 | ನಂತರ, ಇದನ್ನು ಖಚಿತಪಡಿಸುವ ಇನ್ನೂ 2 ಮೆಸೇಜ್ ಗಳನ್ನು ನೋಡುತ್ತೇವೆ. |
12:51 | ಕೆಳಗಡೆ, Next ಬಟನ್ ಮೇಲೆ ಕ್ಲಿಕ್ ಮಾಡಿ. |
12:54 | ಈಗ ನಾವು Step 3 ಗೆ ಬಂದಿದ್ದೇವೆ. |
12:57 | ಇಲ್ಲಿ ಸ್ಕ್ರೀನ್ ನಲ್ಲಿ ತೋರಿಸಿರುವುದನ್ನು ಓದಿ. ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ. |
13:03 | ಶೀಘ್ರದಲ್ಲಿಯೇ, ನಮ್ಮ ಸ್ಕ್ರೀನ್ ನಲ್ಲಿ Success ಎಂಬ ಮೆಸೇಜ್ ಅನ್ನು ನಾವು ನೋಡುತ್ತೇವೆ.
ನಮ್ಮ database tables ಅನ್ನು ಕ್ರಿಯೇಟ್ ಮಾಡಲಾಗಿದೆ ಎಂದು ಇದು ಖಚಿತಪಡಿಸುತ್ತದೆ. |
13:13 | ಈಗ ಮುಂದುವರೆಯಲು, ಕೆಳಗೆ Next ಬಟನ್ ಮೇಲೆ ಕ್ಲಿಕ್ ಮಾಡಿ. |
13:18 | ಕೂಡಲೆ, ನಾವು ಈ ಸ್ಕ್ರೀನ್ ಗೆ ಬರುತ್ತೇವೆ. |
13:21 | ಇಲ್ಲಿ ತೋರಿಸಿದ ಟೆಕ್ಸ್ಟ್ ಅನ್ನು ಓದಿ. ಆಮೇಲೆ install basic configuration settings ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. |
13:29 | ಹೀಗೆ ಮಾಡಿದ ನಂತರ, ನಮ್ಮ MARC flavorಅನ್ನು ಆಯ್ಕೆಮಾಡಲು ನಮಗೆ ಹೇಳಲಾಗುತ್ತದೆ.
ನಾನು MARC21 ಅನ್ನು ಆಯ್ಕೆಮಾಡುತ್ತೇನೆ. |
13:38 | ನಂತರ ಕೆಳಗಡೆ Next ಬಟನ್ ಮೇಲೆ ಕ್ಲಿಕ್ ಮಾಡಿ. |
13:42 | ಈ ಸ್ಕ್ರೀನ್ ನಲ್ಲಿ, ಕೆಳಗೆ Mandatory ಎಂಬ ವಿಭಾಗಕ್ಕೆ ಸ್ಕ್ರೋಲ್ ಮಾಡಿ. |
13:47 | ಇಲ್ಲಿ,Default MARC21 ಚೆಕ್-ಬಾಕ್ಸ್ ಗಳು ಆಯ್ಕೆ ಆಗಿರುವುದನ್ನು ನಾವು ನೋಡುತ್ತೇವೆ. |
13:54 | Optional ವಿಭಾಗದ ಅಡಿಯಲ್ಲಿ, ಇಲ್ಲಿ ತೋರಿಸಿದಂತೆ ಎಲ್ಲ ಆಯ್ಕೆಗಳನ್ನು ಆರಿಸಿಕೊಳ್ಳಿ. |
14:01 | ಕೆಳಗೆ ಸ್ಕ್ರೋಲ್ ಮಾಡುತ್ತಿದ್ದಂತೆ, Other data ದ ಅಡಿಯಲ್ಲಿ, ಎಲ್ಲ ಚೆಕ್-ಬಾಕ್ಸ್ ಗಳು ಈಗಾಗಲೇ ಆಯ್ಕೆ ಆಗಿರುವುದನ್ನು ನಾವು ನೋಡುತ್ತೇವೆ. |
14:09 | ಪೇಜ್ ನ ಕೆಳತುದಿಯವರೆಗೆ ಸ್ಕ್ರೋಲ್ ಮಾಡುತ್ತಾ ಇರಿ. |
14:13 | ಇಲ್ಲಿ ಕೆಳಗೆ, ಬಹಳ ಉದ್ದವಾಗಿರುವ ಇನ್ನೊಂದು Optional ವಿಭಾಗವು ಇದೆ. |
14:18 | ಇಲ್ಲಿ, “Some basic currencies” ಎಂಬ ಆಯ್ಕೆಯನ್ನು ಗುರುತಿಸಿ ಮತ್ತು ಅದನ್ನು ಆಯ್ಕೆಮಾಡಿ. |
14:24 | ಇದರ ನಂತರ, “Useful patron attribute types” ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
14:30 | ಈಗ ಪೇಜ್ ನ ಕೆಳತುದಿಗೆ ಹೋಗಿ ಮತ್ತು Import ಬಟನ್ ಮೇಲೆ ಕ್ಲಿಕ್ ಮಾಡಿ. |
14:36 | 'ಕೋಹಾ' ದಲ್ಲಿ ಆಯ್ಕೆಮಾಡಲಾದ ಎಲ್ಲ ಕಾರ್ಯಾಚರಣೆಗಳನ್ನು (functionalities) ಇದು ಸಕ್ರಿಯಗೊಳಿಸುತ್ತದೆ. |
14:41 | ನಾವು ಈಗ ಒಂದು ಹೊಸ ಪೇಜ್ ಗೆ ಬಂದಿದ್ದೇವೆ. ಈ ಪೇಜ್ ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು ಸ್ಕ್ರೀನ್ ಮೇಲೆ ಪ್ರದರ್ಶಿಸಿದ ಎಲ್ಲಾ ಟೆಕ್ಸ್ಟ್ ಅನ್ನು ಓದಿ. |
14:50 | “All done” ಎಂಬ ಒಂದು ಮೆಸೇಜ್ ಅನ್ನು ನಾವು ನೋಡಬಹುದು. |
14:54 | ಈಗ Finish ಬಟನ್ ಮೇಲೆ ಕ್ಲಿಕ್ ಮಾಡಿ. |
14:57 | ನಮ್ಮ ಸ್ಕ್ರೀನ್ ನಲ್ಲಿ, ನಾವು ಒಂದು ಮೆಸೇಜ್ ಅನ್ನು ನೋಡುತ್ತೇವೆ. ನಮ್ಮ ಇನ್ಸ್ಟಾಲೇಶನ್ ಯಶಸ್ವಿಯಾಗಿದೆ ಎಂದು ಇದು ಖಚಿತಪಡಿಸುತ್ತದೆ. |
15:04 | ಈಗ ನಮ್ಮನ್ನು Koha ಇಂಟರ್ಫೇಸ್ ಗೆ ಕಳಿಸಲಾಗುತ್ತದೆ. |
15:08 | username ಅನ್ನು koha_library ಎಂದು ಹಾಗೂ password ಅನ್ನು koha123 ಎಂದು ಟೈಪ್ ಮಾಡಿ. |
15:16 | ಡ್ರಾಪ್-ಡೌನ್ ನಿಂದ My Library ಯನ್ನು ಆಯ್ಕೆಮಾಡಿ. |
15:20 | ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
15:23 | ನಾವು Koha Administration ಪೇಜ್ ಗೆ ಬಂದಿದ್ದೇವೆ. |
15:27 | ಈ ಪೇಜ್ ನಲ್ಲಿ, ವಿವಿಧ ಟ್ಯಾಬ್ ಗಳನ್ನು ನಾವು ನೋಡಬಹುದು. |
15:31 | ಇವುಗಳನ್ನು ಹೇಗೆ ಬಳಸುವುದೆಂದು ಈ ಸರಣಿಯಲ್ಲಿ ನಂತರ ನಾವು ಕಲಿಯುವೆವು. |
15:37 | ಈಗ, No Library Set ಮೇಲೆ ಕ್ಲಿಕ್ ಮಾಡಿ ಮತ್ತು Logout ಆಯ್ಕೆಯನ್ನು ಆರಿಸಿಕೊಳ್ಳಿ. |
15:45 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಇದರ ಸಾರಾಂಶವು ಹೀಗಿದೆ. |
15:50 | ಈ ಟ್ಯುಟೋರಿಯಲ್ ನಲ್ಲಿ ನಾವು, Ubuntu Linux OS 16.04 ನಲ್ಲಿ Koha Library Management System ಅನ್ನು ಇನ್ಸ್ಟಾಲ್ ಮಾಡಲು ಮತ್ತು ಇನ್ಸ್ಟಾಲೇಶನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಕಲಿತಿದ್ದೇವೆ. |
16:03 | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
16:12 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
16:22 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
16:26 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
16:39 | ಈ ಸ್ಕ್ರಿಪ್ಟ್, ನ್ಯಾನ್ಸಿ ಮತ್ತು ವೀಡಿಯೊ ಪ್ರವೀಣ್ ಅವರ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ. ಧನ್ಯವಾದಗಳು. |