Koha-Library-Management-System/C2/Set-Currency/Kannada
From Script | Spoken-Tutorial
Revision as of 16:36, 20 February 2019 by Sandhya.np14 (Talk | contribs)
Time | Narration |
00:01 | Set Currency ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, Koha ದಲ್ಲಿ (ಕೋಹಾ) Currency ಯನ್ನು (ಕರೆನ್ಸಿ) ಹೇಗೆ ಸೆಟ್ ಮಾಡುವುದೆಂದು ಕಲಿಯುವೆವು. |
00:13 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux Operating System 16.04 ಹಾಗೂ Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:26 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:33 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು (access) ನೀವು ಹೊಂದಿರಬೇಕು. |
00:42 | ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:49 | ಮೊಟ್ಟಮೊದಲು, Superlibrarian username Bella ಮತ್ತು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ. |
00:58 | ನಂತರ Koha Administration ಮೇಲೆ ಕ್ಲಿಕ್ ಮಾಡಿ. |
01:03 | ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
01:06 | Acquisition parameters ವಿಭಾಗದ ಅಡಿಯಲ್ಲಿ, Currencies and exchange rates ಮೇಲೆ ಕ್ಲಿಕ್ ಮಾಡಿ. |
01:15 | ಈ ಡೇಟಾ ತಂತಾನೇ ಅಪ್ಡೇಟ್ ಆಗುವುದಿಲ್ಲ ಎಂಬುದನ್ನು ಗಮನಿಸಿ. |
01:20 | ಆದ್ದರಿಂದ ಈ ಡೇಟಾಅನ್ನು ಅಪ್ಡೇಟ್ ಮಾಡುವುದು ಮುಖ್ಯವಾಗಿದೆ. ಸರಿಯಾದ accounting ವಿವರಗಳನ್ನು ಇಡಲು ಸಹ ಇದು ಸಹಾಯ ಮಾಡುವುದು. |
01:30 | ಈಗ plus New currency ಮೇಲೆ ಕ್ಲಿಕ್ ಮಾಡಿ. |
01:35 | ಇಲ್ಲಿ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, Currency:, Rate: ಮತ್ತು Symbol: ಗಳಂತಹ ಕಡ್ಡಾಯವಾದ ವಿವರಗಳನ್ನು ತುಂಬಿ. |
01:47 | ನನ್ನ ಲೈಬ್ರರಿ India ದಲ್ಲಿ ಇರುವುದರಿಂದ, ನಾನು Currency ಗಾಗಿ Rupee ಯನ್ನು, Rate ಗಾಗಿ 1 ಮತ್ತು Rupee (₹) ಚಿಹ್ನೆಯನ್ನು ನಮೂದಿಸುತ್ತೇನೆ. |
02:00 | ನಂತರ, ISO code: ಅನ್ನು INR ಎಂದು ಕೊಡಿ. |
02:05 | ಕರೆನ್ಸಿ ಯನ್ನು ಸಕ್ರಿಯಗೊಳಿಸಲು, ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ. Last updated ಕರೆನ್ಸಿ ಸೆಟ್-ಅಪ್ ನ ದಿನಾಂಕವನ್ನು ತೋರಿಸುತ್ತದೆ. |
02:14 | ಪೇಜ್ ನ ಕೆಳಗಡೆ ಇರುವ Submit ಬಟನ್ ಮೇಲೆ ಕ್ಲಿಕ್ ಮಾಡಿ. |
02:20 | ಇಲ್ಲಿ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, Currency ಟ್ಯಾಬ್ ನ ಅಡಿಯಲ್ಲಿ, Rupee ಗಾಗಿ ವಿವರಗಳು ಕಾಣಿಸಿಕೊಳ್ಳುತ್ತವೆ. |
02:27 | ಅಗತ್ಯವಿದ್ದರೆ, ಅದನ್ನು ಎಡಿಟ್ ಸಹ ಮಾಡಬಹುದು. |
02:32 | ಅಸೈನ್ಮೆಂಟ್ ಗಾಗಿ: ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಯಾವುದೇ ಕರೆನ್ಸಿ ಯನ್ನು ಸೆಟ್ ಮಾಡಿ, ಆದರೆ ಅದನ್ನು 'Active' ಮಾಡಬೇಡಿ. |
02:41 | ನಾವು Koha ಇಂಟರ್ಫೇಸ್ ಗೆ ಹಿಂದಿರುಗೋಣ. |
02:45 | ಅದೇ ಪೇಜ್ ನಲ್ಲಿ, Column visibility ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:50 | ಇಲ್ಲಿರುವ ಆಯ್ಕೆಗಳಿಂದ ISO code ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:55 | ಟೇಬಲ್ ನಲ್ಲಿ, Rupee ಗಾಗಿ ISO ಕಾಲಂ ಕಾಣಿಸಿಕೊಳ್ಳುತ್ತದೆ. |
03:00 | MARC ಫೈಲ್ ಗಳನ್ನು staging (ಸ್ಟೇಜಿಂಗ್) ಟೂಲ್ ಗಳ ಮುಖಾಂತರ ಇಂಪೋರ್ಟ್ ಮಾಡುವಾಗ, ನಮೂದಿಸಲಾದ ISO code ಅನ್ನು ಬಳಸಲಾಗುವುದು ಎಂಬುದನ್ನು ನೆನಪಿಡಿ. |
03:09 | 'ಟೂಲ್', ಸಧ್ಯಕ್ಕೆ ಸಕ್ರಿಯವಾಗಿರುವ ಕರೆನ್ಸಿಯ ಬೆಲೆಯನ್ನು ಕಂಡುಹಿಡಿಯಲು ಮತ್ತು ಬಳಸಲು ಪ್ರಯತ್ನಿಸುವುದು. |
03:16 | Currency ಯನ್ನು ಎಡಿಟ್ ಮಾಡಲು, ಆ ನಿರ್ದಿಷ್ಟ Currency ಯ Edit ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಾನು ಕರೆನ್ಸಿ USD ಗಾಗಿ, Edit ಮೇಲೆ ಕ್ಲಿಕ್ ಮಾಡುವೆನು. |
03:29 | Modify currency ಎಂಬ ಪೇಜ್ ತೆರೆದುಕೊಳ್ಳುತ್ತದೆ. |
03:32 | Rate ಮತ್ತು Symbol ಗಳ ವ್ಯಾಲ್ಯೂ ಗಳನ್ನು ನೀವು ಬದಲಾಯಿಸಬಹುದು. ನಾನು ಅವುಗಳನ್ನು ಈಗ ಇದ್ದಹಾಗೆಯೇ ಇಡುತ್ತೇನೆ. |
03:40 | ಗಮನಿಸಿ, ನಾನು ‘Active’ ಫೀಲ್ಡ್ ಗಾಗಿ ಚೆಕ್-ಬಾಕ್ಸ್ ನಲ್ಲಿ ಕ್ಲಿಕ್ ಮಾಡುವದಿಲ್ಲ. |
03:46 | active currency ಯು ಲೈಬ್ರರಿ ಯಲ್ಲಿ ಬಳಸಲು ಮುಖ್ಯ ಕರೆನ್ಸಿ ಆಗಿದೆ. |
03:51 | ನನ್ನ ಲೈಬ್ರರಿ India ದಲ್ಲಿ ಇರುವುದರಿಂದ, Rupee ಯನ್ನು active currency ಎಂದು ಬಳಸಲಾಗುವುದು. |
03:57 | ಆಮೇಲೆ, ಪೇಜ್ ನ ಕೆಳಗೆ ಇರುವ Submit ಮೇಲೆ ಕ್ಲಿಕ್ ಮಾಡಿ. |
04:02 | ಅದೇ Currencies and exchange rates ಎಂಬ ಪೇಜ್, ಮತ್ತೆ ತೆರೆದುಕೊಳ್ಳುತ್ತದೆ. |
04:08 | ಈಗ ನಿಮ್ಮ Koha Superlibrarian ಅಕೌಂಟ್ ನಿಂದ ಲಾಗ್-ಔಟ್ ಮಾಡಿ. |
04:13 | ಇದನ್ನು ಮಾಡಲು, ಮೊದಲು ಮೇಲ್ಗಡೆಯ ಬಲಮೂಲೆಗೆ ಹೋಗಿ. Spoken Tutorial Library ಮೇಲೆ ಕ್ಲಿಕ್ ಮಾಡಿ. |
04:21 | ಆಮೇಲೆ, ಡ್ರಾಪ್-ಡೌನ್ ನಿಂದ, Log out ಅನ್ನು ಆಯ್ಕೆಮಾಡಿ. |
04:26 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
04:30 | ಸಂಕ್ಷಿಪ್ತವಾಗಿ,
ಈ ಟ್ಯುಟೋರಿಯಲ್ ನಲ್ಲಿ ನಾವು, Currency ಯನ್ನು ಹೇಗೆ ಸೆಟ್ ಮಾಡುವುದೆಂದು ಕಲಿತಿದ್ದೇವೆ. |
04:36 | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
04:44 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
04:54 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
04:58 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. |
05:05 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
05:10 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |