Koha-Library-Management-System/C2/Set-Currency/Kannada

From Script | Spoken-Tutorial
Jump to: navigation, search
Time Narration
00:01 Set Currency ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, Koha ದಲ್ಲಿ (ಕೋಹಾ) Currency ಯನ್ನು (ಕರೆನ್ಸಿ) ಹೇಗೆ ಸೆಟ್ ಮಾಡುವುದೆಂದು ಕಲಿಯುವೆವು.
00:13 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux Operating System 16.04 ಹಾಗೂ Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.

00:26 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:33 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.

ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು (access) ನೀವು ಹೊಂದಿರಬೇಕು.

00:42 ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
00:49 ಮೊಟ್ಟಮೊದಲು, Superlibrarian username Bella ಮತ್ತು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ.
00:58 ನಂತರ Koha Administration ಮೇಲೆ ಕ್ಲಿಕ್ ಮಾಡಿ.
01:03 ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
01:06 Acquisition parameters ವಿಭಾಗದ ಅಡಿಯಲ್ಲಿ, Currencies and exchange rates ಮೇಲೆ ಕ್ಲಿಕ್ ಮಾಡಿ.
01:15 ಈ ಡೇಟಾ ತಂತಾನೇ ಅಪ್ಡೇಟ್ ಆಗುವುದಿಲ್ಲ ಎಂಬುದನ್ನು ಗಮನಿಸಿ.
01:20 ಆದ್ದರಿಂದ ಈ ಡೇಟಾಅನ್ನು ಅಪ್ಡೇಟ್ ಮಾಡುವುದು ಮುಖ್ಯವಾಗಿದೆ. ಸರಿಯಾದ accounting ವಿವರಗಳನ್ನು ಇಡಲು ಸಹ ಇದು ಸಹಾಯ ಮಾಡುವುದು.
01:30 ಈಗ plus New currency ಮೇಲೆ ಕ್ಲಿಕ್ ಮಾಡಿ.
01:35 ಇಲ್ಲಿ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, Currency:, Rate: ಮತ್ತು Symbol: ಗಳಂತಹ ಕಡ್ಡಾಯವಾದ ವಿವರಗಳನ್ನು ತುಂಬಿ.
01:47 ನನ್ನ ಲೈಬ್ರರಿ India ದಲ್ಲಿ ಇರುವುದರಿಂದ, ನಾನು Currency ಗಾಗಿ Rupee ಯನ್ನು, Rate ಗಾಗಿ 1 ಮತ್ತು Rupee (₹) ಚಿಹ್ನೆಯನ್ನು ನಮೂದಿಸುತ್ತೇನೆ.
02:00 ನಂತರ, ISO code: ಅನ್ನು INR ಎಂದು ಕೊಡಿ.
02:05 ಕರೆನ್ಸಿ ಯನ್ನು ಸಕ್ರಿಯಗೊಳಿಸಲು, ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ. Last updated ಕರೆನ್ಸಿ ಸೆಟ್-ಅಪ್ ನ ದಿನಾಂಕವನ್ನು ತೋರಿಸುತ್ತದೆ.
02:14 ಪೇಜ್ ನ ಕೆಳಗಡೆ ಇರುವ Submit ಬಟನ್ ಮೇಲೆ ಕ್ಲಿಕ್ ಮಾಡಿ.
02:20 ಇಲ್ಲಿ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, Currency ಟ್ಯಾಬ್ ನ ಅಡಿಯಲ್ಲಿ, Rupee ಗಾಗಿ ವಿವರಗಳು ಕಾಣಿಸಿಕೊಳ್ಳುತ್ತವೆ.
02:27 ಅಗತ್ಯವಿದ್ದರೆ, ಅದನ್ನು ಎಡಿಟ್ ಸಹ ಮಾಡಬಹುದು.
02:32 ಅಸೈನ್ಮೆಂಟ್ ಗಾಗಿ: ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಯಾವುದೇ ಕರೆನ್ಸಿ ಯನ್ನು ಸೆಟ್ ಮಾಡಿ, ಆದರೆ ಅದನ್ನು 'Active' ಮಾಡಬೇಡಿ.
02:41 ನಾವು Koha ಇಂಟರ್ಫೇಸ್ ಗೆ ಹಿಂದಿರುಗೋಣ.
02:45 ಅದೇ ಪೇಜ್ ನಲ್ಲಿ, Column visibility ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:50 ಇಲ್ಲಿರುವ ಆಯ್ಕೆಗಳಿಂದ ISO code ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:55 ಟೇಬಲ್ ನಲ್ಲಿ, Rupee ಗಾಗಿ ISO ಕಾಲಂ ಕಾಣಿಸಿಕೊಳ್ಳುತ್ತದೆ.
03:00 MARC ಫೈಲ್ ಗಳನ್ನು staging (ಸ್ಟೇಜಿಂಗ್) ಟೂಲ್ ಗಳ ಮುಖಾಂತರ ಇಂಪೋರ್ಟ್ ಮಾಡುವಾಗ, ನಮೂದಿಸಲಾದ ISO code ಅನ್ನು ಬಳಸಲಾಗುವುದು ಎಂಬುದನ್ನು ನೆನಪಿಡಿ.
03:09 'ಟೂಲ್', ಸಧ್ಯಕ್ಕೆ ಸಕ್ರಿಯವಾಗಿರುವ ಕರೆನ್ಸಿಯ ಬೆಲೆಯನ್ನು ಕಂಡುಹಿಡಿಯಲು ಮತ್ತು ಬಳಸಲು ಪ್ರಯತ್ನಿಸುವುದು.
03:16 Currency ಯನ್ನು ಎಡಿಟ್ ಮಾಡಲು, ಆ ನಿರ್ದಿಷ್ಟ CurrencyEdit ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಾನು ಕರೆನ್ಸಿ USD ಗಾಗಿ, Edit ಮೇಲೆ ಕ್ಲಿಕ್ ಮಾಡುವೆನು.
03:29 Modify currency ಎಂಬ ಪೇಜ್ ತೆರೆದುಕೊಳ್ಳುತ್ತದೆ.
03:32 Rate ಮತ್ತು Symbol ಗಳ ವ್ಯಾಲ್ಯೂ ಗಳನ್ನು ನೀವು ಬದಲಾಯಿಸಬಹುದು. ನಾನು ಅವುಗಳನ್ನು ಈಗ ಇದ್ದಹಾಗೆಯೇ ಇಡುತ್ತೇನೆ.
03:40 ಗಮನಿಸಿ, ನಾನು ‘Active’ ಫೀಲ್ಡ್ ಗಾಗಿ ಚೆಕ್-ಬಾಕ್ಸ್ ನಲ್ಲಿ ಕ್ಲಿಕ್ ಮಾಡುವದಿಲ್ಲ.
03:46 active currency ಯು ಲೈಬ್ರರಿ ಯಲ್ಲಿ ಬಳಸಲು ಮುಖ್ಯ ಕರೆನ್ಸಿ ಆಗಿದೆ.
03:51 ನನ್ನ ಲೈಬ್ರರಿ India ದಲ್ಲಿ ಇರುವುದರಿಂದ, Rupee ಯನ್ನು active currency ಎಂದು ಬಳಸಲಾಗುವುದು.
03:57 ಆಮೇಲೆ, ಪೇಜ್ ನ ಕೆಳಗೆ ಇರುವ Submit ಮೇಲೆ ಕ್ಲಿಕ್ ಮಾಡಿ.
04:02 ಅದೇ Currencies and exchange rates ಎಂಬ ಪೇಜ್, ಮತ್ತೆ ತೆರೆದುಕೊಳ್ಳುತ್ತದೆ.
04:08 ಈಗ ನಿಮ್ಮ Koha Superlibrarian ಅಕೌಂಟ್ ನಿಂದ ಲಾಗ್-ಔಟ್ ಮಾಡಿ.
04:13 ಇದನ್ನು ಮಾಡಲು, ಮೊದಲು ಮೇಲ್ಗಡೆಯ ಬಲಮೂಲೆಗೆ ಹೋಗಿ. Spoken Tutorial Library ಮೇಲೆ ಕ್ಲಿಕ್ ಮಾಡಿ.
04:21 ಆಮೇಲೆ, ಡ್ರಾಪ್-ಡೌನ್ ನಿಂದ, Log out ಅನ್ನು ಆಯ್ಕೆಮಾಡಿ.
04:26 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
04:30 ಸಂಕ್ಷಿಪ್ತವಾಗಿ,

ಈ ಟ್ಯುಟೋರಿಯಲ್ ನಲ್ಲಿ ನಾವು, Currency ಯನ್ನು ಹೇಗೆ ಸೆಟ್ ಮಾಡುವುದೆಂದು ಕಲಿತಿದ್ದೇವೆ.

04:36 ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
04:44 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
04:54 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
04:58 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
05:05 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.
05:10 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14