Java/C3/Calling-methods-of-the-superclass/Kannada
|
|
00:01 | Calling methods of the super class ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು: super ಕೀ ವರ್ಡ್ ಅನ್ನು ಯಾವಾಗ ಉಪಯೋಗಿಸುವುದು, |
00:13 | super ಕ್ಲಾಸ್ ನ ಮೆಥೆಡ್ ಗಳನ್ನು ಕಾಲ್ ಹೇಗೆ ಮಾಡುವುದು, |
00:17 | super ಕ್ಲಾಸ್ ನ ಕನ್ಸ್ಟ್ರಕ್ಟರ್ ಅನ್ನು ಇನ್ವೋಕ್ ಹೇಗೆ ಮಾಡುವುದು ಎಂಬುದನ್ನು ಕಲಿಯುವೆವು. |
00:22 | ಇಲ್ಲಿ ನಾವು:
ಉಬಂಟು , ಆವೃತ್ತಿ 12.04, ಜೆಡಿಕೆ 1.7, ಎಕ್ಲಿಪ್ಸ್ 4.3.1 ಇವುಗಳನ್ನು ಬಳಸುತ್ತಿದ್ದೇವೆ. |
00:32 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಜಾವಾ ಮತ್ತು 'ಎಕ್ಲಿಪ್ಸ್ ಐ ಡಿ ಇ' ಗಳ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು. |
00:39 | ಅಲ್ಲದೇ, ಜಾವಾದಲ್ಲಿನ ಸಬ್-ಕ್ಲಾಸಿಂಗ್ ಮತ್ತು ಮೆಥೆಡ್ ಓವರ್-ರೈಡಿಂಗ್ ಗಳ ಬಗ್ಗೆ ಸಹ ತಿಳಿದಿರಬೇಕು. |
00:45 | ಇಲ್ಲದಿದ್ದಲ್ಲಿ , ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ನೋಡಿ. |
00:51 | ಒಂದು ಸಬ್-ಕ್ಲಾಸ್, ಸೂಪರ್-ಕ್ಲಾಸ್ ನ ಡೇಟಾ ಮತ್ತು ಮೆಥೆಡ್ ಗಳನ್ನು super ಕೀವರ್ಡ್ ಸಹಾಯದಿಂದ ಬಳಸಬಹುದು. |
00:58 | super ಕೀ ವರ್ಡ್:
ಪೇರೆಂಟ್-ಕ್ಲಾಸ್ ನ 'ಇನ್ಸ್ಟನ್ಸ್ ವೇರಿಯೇಬಲ್' ಅನ್ನು ಸೂಚಿಸುತ್ತದೆ. ಪೇರೆಂಟ್-ಕ್ಲಾಸ್ ಕನ್ಸ್ಟ್ರಕ್ಟರ್ ಅನ್ನು, ಇನ್ವೋಕ್ ಮಾಡಲು ಬಳಸಲಾಗುತ್ತದೆ. ಪೇರೆಂಟ್ ಕ್ಲಾಸ್ ನ ಮೆಥೆಡ್ ಅನ್ನು, ಇನ್ವೋಕ್ ಮಾಡಲು ಬಳಸಲಾಗುತ್ತದೆ. |
01:13 | ಈಗ, ನಾವು 'ಐ ಡಿ ಇ' ಯಲ್ಲಿ ಹಿಂದೆ ರಚಿಸಿದ ಪ್ರೊಜೆಕ್ಟ್ ಗೆ ಹೋಗೋಣ. |
01:19 | Manager ಕ್ಲಾಸ್ ಗೆ ಹೋಗೋಣ. |
01:22 | ಈಗ, getDetails() (ಗೆಟ್ ಡೀಟೇಲ್ಸ್) ಎಂಬ ಮೆಥೆಡ್ ಗೆ ಬರೋಣ. |
01:26 | return ಸ್ಟೇಟ್ಮೆಂಟ್ ನಲ್ಲಿ, ನಾವು Name ಮತ್ತು Email ಅನ್ನು ತೆಗೆದುಬಿಡೋಣ. |
01:32 | ಈಗ Employee ಕ್ಲಾಸ್ ಗೆ ಬರೋಣ. |
01:36 | ಇದು ಪೇರೆಂಟ್-ಕ್ಲಾಸ್ ಅಥವಾ ಸೂಪರ್-ಕ್ಲಾಸ್ ಆಗಿದೆ. |
01:41 | ಇಲ್ಲಿ, ನಾವು ಈಗಾಗಲೇ getDetails() ಮೆಥೆಡ್ ಅನ್ನು ಹೊಂದಿದ್ದೇವೆ. |
01:46 | ಈ ಮೆಥೆಡ್, name ಮತ್ತು email ಅನ್ನು ಹಿಂತಿರುಗಿಸುತ್ತದೆ. |
01:51 | ಹಾಗಾಗಿ, Manager ಕ್ಲಾಸ್ ನಲ್ಲಿ, ಈ getDetails() ಮೆಥೆಡ್ ಅನ್ನು ನಾವು ಬಳಸಬಹುದು. |
01:57 | Manager ಕ್ಲಾಸ್ ನಲ್ಲಿ, Employee ಕ್ಲಾಸ್ ನಿಂದ ನಾವು getDetails() ಮೆಥೆಡ್ ಅನ್ನು ಕಾಲ್ ಮಾಡುವೆವು. |
02:04 | ಆದ್ದರಿಂದ, Manager ಕ್ಲಾಸ್ ನಲ್ಲಿ getDetails() ಮೆಥೆಡ್ ಗೆ ಬನ್ನಿ. |
02:10 | return ಸ್ಟೇಟ್ಮೆಂಟ್ ನ ಒಳಗೆ, ಹೀಗೆ ಟೈಪ್ ಮಾಡಿ: super dot getDetails() plus slash n Manager of getDepartment(). |
02:22 | ಈಗ ಪ್ರೋಗ್ರಾಮ್ ಅನ್ನು ರನ್ ಮಾಡುತ್ತೇನೆ. |
02:25 | ನಾವು Manager ನ ವಿವರಗಳನ್ನು ಪಡೆದಿರುವುದನ್ನು ಕಾಣಬಹುದು. ಹೀಗೆ, ಸಬ್- ಕ್ಲಾಸ್ ನ ಒಳಗೆ, ಸೂಪರ್- ಕ್ಲಾಸ್ ನ ಮೆಥೆಡ್ ಅನ್ನು ಕಾಲ್ ಮಾಡಬಹುದು. |
02:36 | ಈಗ ನಾವು Employee ಕ್ಲಾಸ್ ಗೆ ಬರೋಣ. |
02:41 | ಇಲ್ಲಿ ಒಂದು ಕನ್ಸ್ಟ್ರಕ್ಟರ್ ಅನ್ನು ಸೇರಿಸೋಣ. |
02:44 | ಆದ್ದರಿಂದ, Employee ಕ್ಲಾಸ್ ನ ಒಳಗೆ, ಹೀಗೆ ಟೈಪ್ ಮಾಡಿ: public space Employee within brackets String name, String email_address . |
02:59 | ಕರ್ಲಿ ಬ್ರ್ಯಾಕೆಟ್ ಗಳ ಒಳಗೆ, ಹೀಗೆ ಟೈಪ್ ಮಾಡಿ:
this dot name is equal to name semicolon, this dot email_address is equal to email_address |
03:17 | ಈಗ setter (ಸೆಟ್ಟರ್) ಮತ್ತು getter (ಗೆಟ್ಟರ್) ಮೆಥೆಡ್ ಗಳನ್ನು ಕಾಮೆಂಟ್ ಮಾಡೋಣ. |
03:23 | getDetails() ಮೆಥೆಡ್ ನ ಒಳಗೆ,
getName ನ ಬದಲಾಗಿ, name ಎಂದು ಟೈಪ್ ಮಾಡಿ. getEmail ನ ಬದಲಾಗಿ email_address ಎಂದು ಟೈಪ್ ಮಾಡಿ. |
03:37 | ಪೇರೆಂಟ್ ಕ್ಲಾಸ್ ನ ಎಲ್ಲಾ ಮೆಥೆಡ್ ಮತ್ತು ವೇರಿಯೇಬಲ್ ಗಳನ್ನು, ಸಬ್-ಕ್ಲಾಸ್ ಇನ್ಹೆರಿಟ್ ಮಾಡುತ್ತದೆ (ಪಡೆಯುತ್ತದೆ). |
03:44 | ಗಮನಿಸಿ, ಇದು ಕನ್ಸ್ಟ್ರಕ್ಟರ್ ಅನ್ನು ಇನ್ಹೆರಿಟ್ ಮಾಡುವುದಿಲ್ಲ. |
03:49 | ಆದರೆ ಕನ್ಸ್ಟ್ರಕ್ಟರ್ ಗಳು, ತನ್ನ ಸೂಪರ್-ಕ್ಲಾಸ್ ನ private ಅಲ್ಲದ ಕನ್ಸ್ಟ್ರಕ್ಟರ್ ಗಳನ್ನು ಕಾಲ್ ಮಾಡಬಹುದು. |
03:55 | ಇದನ್ನು ನಾವು, ಚೈಲ್ಡ್ ಕ್ಲಾಸ್ ಕನ್ಸ್ಟ್ರಕ್ಟರ್ ನಿಂದ super ಕೀವರ್ಡ್ ಅನ್ನು ಬಳಸಿ ಮಾಡುತ್ತೇವೆ. |
04:01 | ಇದನ್ನು ಈಗ ನಾವು ನೋಡುವೆವು. |
04:04 | ಅದಕ್ಕಾಗಿ Manager ಕ್ಲಾಸ್ ಗೆ ಬನ್ನಿ. ಇಲ್ಲಿ ನಾವು ಒಂದು ಕನ್ಸ್ಟ್ರಕ್ಟರ್ ಅನ್ನು ಸೇರಿಸೋಣ. |
04:10 | ಅದಕ್ಕಾಗಿ, ಹೀಗೆ ಟೈಪ್ ಮಾಡಿ: public space Manager within brackets String space name comma String space email underscore address comma String space dept . |
04:30 | ನಂತರ, ಕರ್ಲಿ ಬ್ರ್ಯಾಕೆಟ್ ಗಳ ಒಳಗೆ, ಹೀಗೆ ಟೈಪ್ ಮಾಡಿ: super within brackets name, email underscore address semicolon. |
04:44 | ಅನಂತರ ಹೀಗೆ ಟೈಪ್ ಮಾಡಿ: department is equal to dept semicolon. |
04:51 | ಇಲ್ಲಿ ನಾವು setter ಮತ್ತು getter ಮೆಥೆಡ್ ಗಳನ್ನು ಕಾಮೆಂಟ್ ಮಾಡುವೆವು. |
04:56 | ಅನಂತರ, getDetails() ಮೆಥೆಡ್ ನ ಒಳಗೆ, getDepartment ನ ಬದಲಾಗಿ department ಎಂದು ಟೈಪ್ ಮಾಡಿ. |
05:05 | ಈಗ TestEmployee ಕ್ಲಾಸ್ ಗೆ ಬನ್ನಿ. |
05:09 | setter ಮೆಥೆಡ್ ನ ಕಾಲ್ ಅನ್ನು ಕಾಮೆಂಟ್ ಮಾಡಿ. |
05:15 | ಈಗ, Manager ಕನ್ಸ್ಟ್ರಕ್ಟರ್ ನ ಕಾಲ್ ನ ಒಳಗೆ, ಹೀಗೆ ಟೈಪ್ ಮಾಡಿ: within quotes Nikkita Dinesh, abc@gmail.com, Accounts. |
05:32 | ಈಗ ಪ್ರೋಗ್ರಾಮ್ ಅನ್ನು ರನ್ ಮಾಡಿ. |
05:35 | ನಾವು ಇಲ್ಲಿ ತೋರಿಸಿದಂತೆ ಔಟ್ಪುಟ್ ಅನ್ನು ಪಡೆಯುತ್ತೇವೆ. ನಾವು Manager ವಿವರಗಳನ್ನು ಪಡೆಯುತ್ತೇವೆ. |
05:40 | ಈ ರೀತಿಯಲ್ಲಿ, ನಾವು ಸೂಪರ್ ಕ್ಲಾಸ್ ನ ಕನ್ಸ್ಟ್ರಕ್ಟರ್ ಅನ್ನು ಕಾಲ್ ಮಾಡಬಹುದು. |
05:45 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
super ಕೀ ವರ್ಡ್, super ಕ್ಲಾಸ್ ನ ಮೆಥೆಡ್ ಅನ್ನು ಕಾಲ್ ಮಾಡುವುದು ಮತ್ತು super ಕ್ಲಾಸ್ ನ ಕನ್ಸ್ಟ್ರಕ್ಟರ್ ಅನ್ನು ಇನ್ವೋಕ್ ಮಾಡುವುದನ್ನು ಕಲಿತಿದ್ದೇವೆ. |
05:56 | ಅಸೈನ್ಮೆಂಟ್ ಗಾಗಿ,
ಹಿಂದಿನ ಅಸೈನ್ಮೆಂಟ್ ಅನ್ನು ತೆರಿಯಿರಿ. Bike ಕ್ಲಾಸ್ ನಲ್ಲಿ, Vehicle ಕ್ಲಾಸ್ ನ run ಮೆಥೆಡ್ ಅನ್ನು ಕಾಲ್ ಮಾಡಿ. |
06:04 | ಔಟ್ಪುಟ್ ಹೀಗಿರಬೇಕು:
The Vehicle is running. The Bike is running safely. |
06:10 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ ಅನ್ನು ವೀಕ್ಷಿಸಿ. |
06:17 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇರದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
06:26 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ತಂಡವು:
ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ,ದಯವಿಟ್ಟು ಕೆಳಗಿನ ಲಿಂಕ್ ಗೆ ಸಂಪರ್ಕಿಸಿ. contact at spoken hyphen tutorial dot org |
06:42 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಟಾಕ್ ಟು ಎ ಟೀಚರ್ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
06:46 | ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
06:54 | ಈ ಮಿಷನ್ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
07:05 | ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ವಂದನೆಗಳು. |