Java/C3/Calling-methods-of-the-superclass/Kannada

From Script | Spoken-Tutorial
Jump to: navigation, search
Time
Narration
00:01 Calling methods of the super class ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು: super ಕೀ ವರ್ಡ್ ಅನ್ನು ಯಾವಾಗ ಉಪಯೋಗಿಸುವುದು,
00:13 super ಕ್ಲಾಸ್ ನ ಮೆಥೆಡ್ ಗಳನ್ನು ಕಾಲ್ ಹೇಗೆ ಮಾಡುವುದು,
00:17 super ಕ್ಲಾಸ್ ನ ಕನ್ಸ್ಟ್ರಕ್ಟರ್ ಅನ್ನು ಇನ್ವೋಕ್ ಹೇಗೆ ಮಾಡುವುದು ಎಂಬುದನ್ನು ಕಲಿಯುವೆವು.
00:22 ಇಲ್ಲಿ ನಾವು:

ಉಬಂಟು , ಆವೃತ್ತಿ 12.04,

ಜೆಡಿಕೆ 1.7,

ಎಕ್ಲಿಪ್ಸ್ 4.3.1 ಇವುಗಳನ್ನು ಬಳಸುತ್ತಿದ್ದೇವೆ.

00:32 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಜಾವಾ ಮತ್ತು 'ಎಕ್ಲಿಪ್ಸ್ ಐ ಡಿ ಇ' ಗಳ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.
00:39 ಅಲ್ಲದೇ, ಜಾವಾದಲ್ಲಿನ ಸಬ್-ಕ್ಲಾಸಿಂಗ್ ಮತ್ತು ಮೆಥೆಡ್ ಓವರ್-ರೈಡಿಂಗ್ ಗಳ ಬಗ್ಗೆ ಸಹ ತಿಳಿದಿರಬೇಕು.
00:45 ಇಲ್ಲದಿದ್ದಲ್ಲಿ , ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ನೋಡಿ.
00:51 ಒಂದು ಸಬ್-ಕ್ಲಾಸ್, ಸೂಪರ್-ಕ್ಲಾಸ್ ನ ಡೇಟಾ ಮತ್ತು ಮೆಥೆಡ್ ಗಳನ್ನು super ಕೀವರ್ಡ್ ಸಹಾಯದಿಂದ ಬಳಸಬಹುದು.
00:58 super ಕೀ ವರ್ಡ್:

ಪೇರೆಂಟ್-ಕ್ಲಾಸ್ ನ 'ಇನ್ಸ್ಟನ್ಸ್ ವೇರಿಯೇಬಲ್' ಅನ್ನು ಸೂಚಿಸುತ್ತದೆ.

ಪೇರೆಂಟ್-ಕ್ಲಾಸ್ ಕನ್ಸ್ಟ್ರಕ್ಟರ್ ಅನ್ನು, ಇನ್ವೋಕ್ ಮಾಡಲು ಬಳಸಲಾಗುತ್ತದೆ.

ಪೇರೆಂಟ್ ಕ್ಲಾಸ್ ನ ಮೆಥೆಡ್ ಅನ್ನು, ಇನ್ವೋಕ್ ಮಾಡಲು ಬಳಸಲಾಗುತ್ತದೆ.

01:13 ಈಗ, ನಾವು 'ಐ ಡಿ ಇ' ಯಲ್ಲಿ ಹಿಂದೆ ರಚಿಸಿದ ಪ್ರೊಜೆಕ್ಟ್ ಗೆ ಹೋಗೋಣ.
01:19 Manager ಕ್ಲಾಸ್ ಗೆ ಹೋಗೋಣ.
01:22 ಈಗ, getDetails() (ಗೆಟ್ ಡೀಟೇಲ್ಸ್) ಎಂಬ ಮೆಥೆಡ್ ಗೆ ಬರೋಣ.
01:26 return ಸ್ಟೇಟ್ಮೆಂಟ್ ನಲ್ಲಿ, ನಾವು Name ಮತ್ತು Email ಅನ್ನು ತೆಗೆದುಬಿಡೋಣ.
01:32 ಈಗ Employee ಕ್ಲಾಸ್ ಗೆ ಬರೋಣ.
01:36 ಇದು ಪೇರೆಂಟ್-ಕ್ಲಾಸ್ ಅಥವಾ ಸೂಪರ್-ಕ್ಲಾಸ್ ಆಗಿದೆ.
01:41 ಇಲ್ಲಿ, ನಾವು ಈಗಾಗಲೇ getDetails() ಮೆಥೆಡ್ ಅನ್ನು ಹೊಂದಿದ್ದೇವೆ.
01:46 ಈ ಮೆಥೆಡ್, name ಮತ್ತು email ಅನ್ನು ಹಿಂತಿರುಗಿಸುತ್ತದೆ.
01:51 ಹಾಗಾಗಿ, Manager ಕ್ಲಾಸ್ ನಲ್ಲಿ, ಈ getDetails() ಮೆಥೆಡ್ ಅನ್ನು ನಾವು ಬಳಸಬಹುದು.
01:57 Manager ಕ್ಲಾಸ್ ನಲ್ಲಿ, Employee ಕ್ಲಾಸ್ ನಿಂದ ನಾವು getDetails() ಮೆಥೆಡ್ ಅನ್ನು ಕಾಲ್ ಮಾಡುವೆವು.
02:04 ಆದ್ದರಿಂದ, Manager ಕ್ಲಾಸ್ ನಲ್ಲಿ getDetails() ಮೆಥೆಡ್ ಗೆ ಬನ್ನಿ.
02:10 return ಸ್ಟೇಟ್ಮೆಂಟ್ ನ ಒಳಗೆ, ಹೀಗೆ ಟೈಪ್ ಮಾಡಿ: super dot getDetails() plus slash n Manager of getDepartment().
02:22 ಈಗ ಪ್ರೋಗ್ರಾಮ್ ಅನ್ನು ರನ್ ಮಾಡುತ್ತೇನೆ.
02:25 ನಾವು Manager ನ ವಿವರಗಳನ್ನು ಪಡೆದಿರುವುದನ್ನು ಕಾಣಬಹುದು. ಹೀಗೆ, ಸಬ್- ಕ್ಲಾಸ್ ನ ಒಳಗೆ, ಸೂಪರ್- ಕ್ಲಾಸ್ ನ ಮೆಥೆಡ್ ಅನ್ನು ಕಾಲ್ ಮಾಡಬಹುದು.
02:36 ಈಗ ನಾವು Employee ಕ್ಲಾಸ್ ಗೆ ಬರೋಣ.
02:41 ಇಲ್ಲಿ ಒಂದು ಕನ್ಸ್ಟ್ರಕ್ಟರ್ ಅನ್ನು ಸೇರಿಸೋಣ.
02:44 ಆದ್ದರಿಂದ, Employee ಕ್ಲಾಸ್ ನ ಒಳಗೆ, ಹೀಗೆ ಟೈಪ್ ಮಾಡಿ: public space Employee within brackets String name, String email_address .
02:59 ಕರ್ಲಿ ಬ್ರ್ಯಾಕೆಟ್ ಗಳ ಒಳಗೆ, ಹೀಗೆ ಟೈಪ್ ಮಾಡಿ:

this dot name is equal to name semicolon, this dot email_address is equal to email_address

03:17 ಈಗ setter (ಸೆಟ್ಟರ್) ಮತ್ತು getter (ಗೆಟ್ಟರ್) ಮೆಥೆಡ್ ಗಳನ್ನು ಕಾಮೆಂಟ್ ಮಾಡೋಣ.
03:23 getDetails() ಮೆಥೆಡ್ ನ ಒಳಗೆ,

getName ನ ಬದಲಾಗಿ, name ಎಂದು ಟೈಪ್ ಮಾಡಿ.

getEmail ನ ಬದಲಾಗಿ email_address ಎಂದು ಟೈಪ್ ಮಾಡಿ.

03:37 ಪೇರೆಂಟ್ ಕ್ಲಾಸ್ ನ ಎಲ್ಲಾ ಮೆಥೆಡ್ ಮತ್ತು ವೇರಿಯೇಬಲ್ ಗಳನ್ನು, ಸಬ್-ಕ್ಲಾಸ್ ಇನ್ಹೆರಿಟ್ ಮಾಡುತ್ತದೆ (ಪಡೆಯುತ್ತದೆ).
03:44 ಗಮನಿಸಿ, ಇದು ಕನ್ಸ್ಟ್ರಕ್ಟರ್ ಅನ್ನು ಇನ್ಹೆರಿಟ್ ಮಾಡುವುದಿಲ್ಲ.
03:49 ಆದರೆ ಕನ್ಸ್ಟ್ರಕ್ಟರ್ ಗಳು, ತನ್ನ ಸೂಪರ್-ಕ್ಲಾಸ್ ನ private ಅಲ್ಲದ ಕನ್ಸ್ಟ್ರಕ್ಟರ್ ಗಳನ್ನು ಕಾಲ್ ಮಾಡಬಹುದು.
03:55 ಇದನ್ನು ನಾವು, ಚೈಲ್ಡ್ ಕ್ಲಾಸ್ ಕನ್ಸ್ಟ್ರಕ್ಟರ್ ನಿಂದ super ಕೀವರ್ಡ್ ಅನ್ನು ಬಳಸಿ ಮಾಡುತ್ತೇವೆ.
04:01 ಇದನ್ನು ಈಗ ನಾವು ನೋಡುವೆವು.
04:04 ಅದಕ್ಕಾಗಿ Manager ಕ್ಲಾಸ್ ಗೆ ಬನ್ನಿ. ಇಲ್ಲಿ ನಾವು ಒಂದು ಕನ್ಸ್ಟ್ರಕ್ಟರ್ ಅನ್ನು ಸೇರಿಸೋಣ.
04:10 ಅದಕ್ಕಾಗಿ, ಹೀಗೆ ಟೈಪ್ ಮಾಡಿ: public space Manager within brackets String space name comma String space email underscore address comma String space dept .
04:30 ನಂತರ, ಕರ್ಲಿ ಬ್ರ್ಯಾಕೆಟ್ ಗಳ ಒಳಗೆ, ಹೀಗೆ ಟೈಪ್ ಮಾಡಿ: super within brackets name, email underscore address semicolon.
04:44 ಅನಂತರ ಹೀಗೆ ಟೈಪ್ ಮಾಡಿ: department is equal to dept semicolon.
04:51 ಇಲ್ಲಿ ನಾವು setter ಮತ್ತು getter ಮೆಥೆಡ್ ಗಳನ್ನು ಕಾಮೆಂಟ್ ಮಾಡುವೆವು.
04:56 ಅನಂತರ, getDetails() ಮೆಥೆಡ್ ನ ಒಳಗೆ, getDepartment ನ ಬದಲಾಗಿ department ಎಂದು ಟೈಪ್ ಮಾಡಿ.
05:05 ಈಗ TestEmployee ಕ್ಲಾಸ್ ಗೆ ಬನ್ನಿ.
05:09 setter ಮೆಥೆಡ್ ನ ಕಾಲ್ ಅನ್ನು ಕಾಮೆಂಟ್ ಮಾಡಿ.
05:15 ಈಗ, Manager ಕನ್ಸ್ಟ್ರಕ್ಟರ್ ನ ಕಾಲ್ ನ ಒಳಗೆ, ಹೀಗೆ ಟೈಪ್ ಮಾಡಿ: within quotes Nikkita Dinesh, abc@gmail.com, Accounts.
05:32 ಈಗ ಪ್ರೋಗ್ರಾಮ್ ಅನ್ನು ರನ್ ಮಾಡಿ.
05:35 ನಾವು ಇಲ್ಲಿ ತೋರಿಸಿದಂತೆ ಔಟ್ಪುಟ್ ಅನ್ನು ಪಡೆಯುತ್ತೇವೆ. ನಾವು Manager ವಿವರಗಳನ್ನು ಪಡೆಯುತ್ತೇವೆ.
05:40 ಈ ರೀತಿಯಲ್ಲಿ, ನಾವು ಸೂಪರ್ ಕ್ಲಾಸ್ ನ ಕನ್ಸ್ಟ್ರಕ್ಟರ್ ಅನ್ನು ಕಾಲ್ ಮಾಡಬಹುದು.
05:45 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:

super ಕೀ ವರ್ಡ್, super ಕ್ಲಾಸ್ ನ ಮೆಥೆಡ್ ಅನ್ನು ಕಾಲ್ ಮಾಡುವುದು ಮತ್ತು super ಕ್ಲಾಸ್ ನ ಕನ್ಸ್ಟ್ರಕ್ಟರ್ ಅನ್ನು ಇನ್ವೋಕ್ ಮಾಡುವುದನ್ನು ಕಲಿತಿದ್ದೇವೆ.

05:56 ಅಸೈನ್ಮೆಂಟ್ ಗಾಗಿ,

ಹಿಂದಿನ ಅಸೈನ್ಮೆಂಟ್ ಅನ್ನು ತೆರಿಯಿರಿ. Bike ಕ್ಲಾಸ್ ನಲ್ಲಿ, Vehicle ಕ್ಲಾಸ್ ನ run ಮೆಥೆಡ್ ಅನ್ನು ಕಾಲ್ ಮಾಡಿ.

06:04 ಔಟ್ಪುಟ್ ಹೀಗಿರಬೇಕು:

The Vehicle is running. The Bike is running safely.

06:10 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ ಅನ್ನು ವೀಕ್ಷಿಸಿ.
06:17 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇರದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
06:26 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ತಂಡವು:

ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ,ದಯವಿಟ್ಟು ಕೆಳಗಿನ ಲಿಂಕ್ ಗೆ ಸಂಪರ್ಕಿಸಿ. contact at spoken hyphen tutorial dot org

06:42 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಟಾಕ್ ಟು ಎ ಟೀಚರ್ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
06:46 ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
06:54 ಈ ಮಿಷನ್ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

http://spoken-tutorial.org/NMEICT-Intro

07:05 ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14