Java/C3/Subclassing-and-Method-Overriding/Kannada
|
|
00:01 | Subclassing and Method overriding ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು:
ಸಬ್ ಕ್ಲಾಸಿಂಗ್, extends (ಎಕ್ಸ್ಟೆಂಡ್ಸ್) ಎಂಬ ಕೀ ವರ್ಡ್ ಮತ್ತು ಮೆಥಡ್ ಒವರ್-ರೈಡಿಂಗ್ ಇವುಗಳ ಬಗೆಗೆ ಕಲಿಯುವೆವು. |
00:15 | ಇಲ್ಲಿ ನಾವು:
Ubuntu Linux (ಉಬಂಟು ಲಿನಕ್ಸ್) ಆವೃತ್ತಿ 12.04, JDK 1.7, Eclipse 4.3.1 ಇವುಗಳನ್ನು ಬಳಸುತ್ತಿದ್ದೇವೆ. |
00:25 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಜಾವಾ ಮತ್ತು ಎಕ್ಲಿಪ್ಸ್ ಐಡಿಇ ಇವುಗಳ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು. |
00:32 | ಇರದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ ಸೈಟ್ ಅನ್ನು ನೋಡಿ. |
00:37 | ಮೊದಲಿಗೆ, ಸಬ್ ಕ್ಲಾಸಿಂಗ್ ಎಂದರೇನು ಎಂದು ತಿಳಿದುಕೊಳ್ಳೋಣ. |
00:41 | ಇದು, ಈಗಿರುವ ಕ್ಲಾಸ್ ನಿಂದ ಒಂದು ಹೊಸ ಕ್ಲಾಸ್ ಅನ್ನು ರಚಿಸಲು ಇರುವ ವಿಧಾನವಾಗಿದೆ. |
00:46 | ಹೊಸದಾಗಿ ರಚಿಸಲ್ಪಟ್ಟ ಕ್ಲಾಸ್ ಅನ್ನು “ಸಬ್ ಕ್ಲಾಸ್” ಅಥವಾ “ಡಿರೈವ್ಡ್ ಕ್ಲಾಸ್” ಅಥವಾ “ಚೈಲ್ಡ್ ಕ್ಲಾಸ್” ಎನ್ನುವರು. |
00:53 | ಈಗಾಗಲೇ ಇರುವ ಕ್ಲಾಸ್ ಅನ್ನು “ಸೂಪರ್ ಕ್ಲಾಸ್” ಅಥವಾ “ಬೇಸ್ ಕ್ಲಾಸ್” ಅಥವಾ “ಪೇರೆಂಟ್ ಕ್ಲಾಸ್” ಎನ್ನುವರು. |
01:00 | ಈಗ, ಸಬ್ ಕ್ಲಾಸ್ ಅನ್ನು ರಚಿಸುವುದು ಹೇಗೆಂದು ನಿಮಗೆ ತೋರಿಸುತ್ತೇನೆ. ನಾನು ಈಗಾಗಲೇ MyProject (ಮೈ ಪ್ರೊಜೆಕ್ಟ್) ಎಂಬ ಹೆಸರಿನ ಒಂದು ಪ್ರಾಜೆಕ್ಟ್ ಅನ್ನು ಕ್ರಿಯೇಟ್ ಮಾಡಿದ್ದೇನೆ. |
01:10 | ಅದರಲ್ಲಿ, Employee ಎನ್ನುವ ಒಂದು ಕ್ಲಾಸ್ ಅನ್ನು ಕ್ರಿಯೇಟ್ ಮಾಡಿದ್ದೇನೆ. |
01:15 | ಇದು name ಮತ್ತು email_address ಗಳೆಂಬ ವೇರಿಯೇಬಲ್ ಗಳನ್ನು ಹೊಂದಿದೆ. |
01:19 | ಇದು, ಕ್ಲಾಸ್ ಗಾಗಿ setter (ಸೆಟ್ಟರ್) ಮತ್ತು getter (ಗೆಟ್ಟರ್) ಎನ್ನುವ ಮೆಥೆಡ್ ಗಳನ್ನು ಸಹ ಹೊಂದಿದೆ. |
01:24 | ಇದರಲ್ಲಿ "getDetails()" ಎನ್ನುವ ಮೆಥೆಡ್ ಇದೆ. ಈ ಮೆಥಡ್, name ಮತ್ತು email_address ಗಳನ್ನು ಹಿಂದಿರುಗಿಸುತ್ತದೆ. |
01:31 | ಈಗ, ನಾವು Manager ಕ್ಲಾಸ್ ಗೆ ಬರೋಣ. |
01:35 | ಇದು name, email_address ಮತ್ತು department ಗಳೆಂಬ ವೇರಿಯೇಬಲ್ ಗಳನ್ನು ಹೊಂದಿದೆ. |
01:40 | ಕೆಲವು ವೇರಿಯೇಬಲ್ ಗಳು, Employee ಮತ್ತು Manager ಈ ಎರಡೂ ಕ್ಲಾಸ್ ಗಳಲ್ಲಿ ಇರುವುದನ್ನು ನಾವು ನೋಡಬಹುದು. |
01:47 | name ಮತ್ತು email_address ಗಳು Employee ಕ್ಲಾಸ್ ನಲ್ಲಿವೆ. ಇವುಗಳು Manager ಕ್ಲಾಸ್ ನಲ್ಲಿ ಕೂಡ ಇರುವುದನ್ನು ನಾವು ನೋಡಬಹುದು. |
01:57 | ಹಾಗಾಗಿ, Manager ಕ್ಲಾಸ್ ಅನ್ನು Employee ಕ್ಲಾಸ್ ನ ಸಬ್-ಕ್ಲಾಸ್ ಆಗಿ ಮಾಡಬಹುದು. |
02:03 | ಅದಕ್ಕಾಗಿ, ನಾವು Manager ಕ್ಲಾಸ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. |
02:08 | public class Manager ನ ನಂತರ, “extends Employee” ಎಂದು ಟೈಪ್ ಮಾಡಿ. |
02:14 | ಈಗಿರುವ ಕ್ಲಾಸ್ ನಿಂದ ಸಬ್ ಕ್ಲಾಸ್ ಅನ್ನು ರಚಿಸಲು, ನಾವು “extends” ಎಂಬ ಕೀ ವರ್ಡ್ ಅನ್ನು ಬಳಸುತ್ತೇವೆ. |
02:21 | ಎರಡೂ ಕ್ಲಾಸ್ ನಲ್ಲಿ ಇರುವ ನಕಲು ವೇರಿಯೇಬಲ್ ಗಳನ್ನು ತೆಗೆದುಬಿಡಿ. |
02:26 | ಹೀಗೆ, Manager ಕ್ಲಾಸ್ ನಿಂದ, name ಮತ್ತು email_address ಗಳನ್ನು ತೆಗೆದುಹಾಕಿರಿ. |
02:32 | ಅಲ್ಲದೇ, ಇಲ್ಲಿಯ setter ಮತ್ತು getter ಮೆಥೆಡ್ ಗಳನ್ನು ಕೂಡ ತೆಗೆದುಹಾಕಿರಿ. |
02:37 | Manager ಕ್ಲಾಸ್ ನಲ್ಲಿ, ನಮ್ಮ ಹತ್ತಿರ department ಎಂಬ ಒಂದೇ ಒಂದು ವೇರಿಯೇಬಲ್ ಇದೆ. |
02:43 | department ಗಾಗಿ, ನಾವು setter ಮತ್ತು getter ಮೆಥೆಡ್ ಗಳನ್ನು ಸಹ ಹೊಂದಿದ್ದೇವೆ. |
02:49 | ಈ ರೀತಿಯಲ್ಲಿ Manager ಕ್ಲಾಸ್, Employee ಕ್ಲಾಸ್ ನ ಸದಸ್ಯರನ್ನು ಇನ್ಹೆರಿಟ್ ಮಾಡುತ್ತದೆ. |
02:55 | ಒಂದು ಕ್ಲಾಸ್ ನಿಂದ ಇನ್ನೊಂದು ಕ್ಲಾಸ್ ಅನ್ನು “extend” ಮಾಡುವ ಈ ವಿಧಾನವನ್ನು ಸಿಂಗಲ್ ಇನ್-ಹೆರಿಟೆನ್ಸ್ ಎನ್ನುವರು. |
03:02 | ನಾನು 'TestEmployee' ಎನ್ನುವ ಇನ್ನೊಂದು ಕ್ಲಾಸ್ ಅನ್ನು ಕೂಡ ರಚಿಸಿರುವೆನು. |
03:08 | main ಮೆಥೆಡ್ ನ ಒಳಗೆ, ನಾವು Manager ಕ್ಲಾಸ್ ನ ಓಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡುವೆವು. |
03:14 | main ಮೆಥೆಡ್ ನ ಒಳಗೆ, ಹೀಗೆ ಟೈಪ್ ಮಾಡಿ: Manager manager equal to new Manager parentheses. |
03:23 | ನಂತರ, Manager ಕ್ಲಾಸ್ ನ setter ಮೆಥೆಡ್ ಗಳನ್ನು ಕಾಲ್ ಮಾಡುವೆವು. |
03:28 | ಆದ್ದರಿಂದ ಹೀಗೆ ಟೈಪ್ ಮಾಡಿ: manager dot setName within brackets and double quotes Nikkita Dinesh. |
03:38 | ನಂತರ ಹೀಗೆ ಟೈಪ್ ಮಾಡಿ: manager dot setEmail within brackets and double quotes abc at gmail dot com. |
03:49 | ನಂತರ ಹೀಗೆ ಟೈಪ್ ಮಾಡಿ: manager dot setDepartment within brackets and double quotes Accounts. |
03:57 | ನೀವು ಯಾವುದೇ name, email_address ಹಾಗೂ department ಅನ್ನು ಬಳಸಬಹುದು. |
04:02 | ಈಗ ನಾವು Manager ಓಬ್ಜೆಕ್ಟ್ ಅನ್ನು ಬಳಸಿ, "getDetails()" ಮೆಥಡ್ ಅನ್ನು ಕಾಲ್ ಮಾಡೋಣ. |
04:08 | ಹೀಗೆ, ಟೈಪ್ ಮಾಡಿ: System.out.println within brackets manager dot getDetails. |
04:17 | ಈಗ ಪ್ರೋಗ್ರಾಮ್ ಅನ್ನು ಸೇವ್ ಮಾಡಿ ನಂತರ ರನ್ ಮಾಡೋಣ. |
04:21 | ನಾವು ಈ ಔಟ್ಪುಟ್ ಅನ್ನು ಪಡೆಯುತ್ತೇವೆ.
Name: Nikkita Dinesh Email: abc@gmail.com |
04:30 | ಇಲ್ಲಿ, Manager ಕ್ಲಾಸ್ ನ ಓಬ್ಜೆಕ್ಟ್, getDetails() ಮೆಥೆಡ್ ಅನ್ನು ಕಾಲ್ ಮಾಡುತ್ತದೆ. |
04:36 | ಈಗ, Manager ಕ್ಲಾಸ್ ಗೆ ಬನ್ನಿ. |
04:39 | ಇಲ್ಲಿ "getDetails()" ಮೆಥೆಡ್ ಇಲ್ಲ ಎಂಬುದನ್ನು ನಾವು ನೋಡಬಹುದು. |
04:43 | ಆದರೂ ಕೂಡ ನಮಗೆ ಔಟ್ಪುಟ್ ಸಿಕ್ಕಿದೆ. ಇದಕ್ಕೆ ಕಾರಣ, Manager ಕ್ಲಾಸ್, Employee ಕ್ಲಾಸ್ ಅನ್ನು extend ಮಾಡುತ್ತದೆ. |
04:52 | Manager ಕ್ಲಾಸ್, Employee ಕ್ಲಾಸ್ ನ ವೇರಿಯೇಬಲ್ ಗಳನ್ನು ಮತ್ತು ಮೆಥೆಡ್ ಗಳನ್ನು ತಂತಾನೆ ಇನ್ಹೆರಿಟ್ ಮಾಡುತ್ತದೆ. |
04:59 | ಹಾಗಾಗಿ, ಇದು ಪೇರೆಂಟ್ ಕ್ಲಾಸ್ ಆದ Employee ಕ್ಲಾಸ್ ನಲ್ಲಿ ಇರುವುದು. |
05:04 | ಈಗ Employee ಕ್ಲಾಸ್ ಗೆ ಬರೋಣ. ಇಲ್ಲಿ getDetails() ಮೆಥೆಡ್ ಇದೆ. |
05:11 | ನಾವು department ಅನ್ನು ರಿಟರ್ನ್ ಮಾಡಿಲ್ಲ ಎಂಬುದನ್ನು ಗಮನಿಸಿ. ಹಾಗಾಗಿ, ಇದು ಔಟ್ಪುಟ್ ನಲ್ಲಿ department ಅನ್ನು ಪ್ರಿಂಟ್ ಮಾಡಿಲ್ಲ. |
05:20 | ಈಗ, getDetails() ಮೆಥೆಡ್ ಅನ್ನು private ಗೆ ಬದಲಿಸೋಣ. ಫೈಲ್ ಅನ್ನು ಸೇವ್ ಮಾಡಿ. |
05:27 | 'TestEmployee' ಕ್ಲಾಸ್ ನಲ್ಲಿ ನಮಗೆ ಕಂಪೈಲೇಶನ್ ಎರರ್ ಸಿಗುವುದನ್ನು ನಾವು ನೋಡಬಹುದು. |
05:34 | ಇದು ಹೀಗೆ ಹೇಳುತ್ತದೆ: "The method getDetails() from the type Employee is not visible". |
05:40 | ಇದರ ಅರ್ಥ, getDetails() ಮೆಥೆಡ್ ಅನ್ನು ಉಪಯೋಗಿಸಲು ಸಾಧ್ಯವಿಲ್ಲ. |
05:45 | ಇದಕ್ಕೆ ಕಾರಣ, ನಾವು getDetails() ಮೆಥೆಡ್ ಅನ್ನು private ಎಂದು ಡಿಕ್ಲೇರ್ ಮಾಡಿದ್ದೇವೆ. |
05:52 | ಸಬ್ ಕ್ಲಾಸ್, ಅದರ ಸೂಪರ್ ಕ್ಲಾಸ್ ನ ಪ್ರೈವೇಟ್ ಮೆಂಬರ್ ಗಳನ್ನು ಇನ್ಹೆರಿಟ್ ಮಾಡುವುದಿಲ್ಲ. |
05:58 | ಸಬ್ ಕ್ಲಾಸ್ ಗೆ, ಸೂಪರ್ ಕ್ಲಾಸ್ ನ ಪ್ರೈವೇಟ್ ಮೆಂಬರ್ ಗಳನ್ನು ನೇರವಾಗಿ ಬಳಸಲು ಸಾಧ್ಯವಿಲ್ಲ. |
06:04 | ಸೂಪರ್ ಕ್ಲಾಸ್, ಪಬ್ಲಿಕ್ ಅಥವಾ ಪ್ರೊಟೆಕ್ಟೆಡ್ ಮೆಥೆಡ್ ಗಳನ್ನು ಹೊಂದಿರಬಹುದು. |
06:09 | ಈ ಮೆಥಡ್ ಗಳು, ಅವುಗಳ ಪ್ರೈವೇಟ್ ಫೀಲ್ಡ್ ಗಳನ್ನು ಬಳಸಬಹುದು. |
06:13 | ಈ ಮೆಥೆಡ್ ಗಳ ಮೂಲಕ, ಸಬ್-ಕ್ಲಾಸ್ ಸಹ ಪ್ರೈವೇಟ್ ಫೀಲ್ಡ್ ಗಳನ್ನು ಬಳಸಬಹುದು. |
06:18 | ನಾವಿದನ್ನು ಪುನಃ ಪಬ್ಲಿಕ್ ಗೆ ಬದಲಾಯಿಸೋಣ. |
06:21 | ಈಗ, ಮ್ಯಾನೇಜರ್ ಕ್ಲಾಸ್ ನಲ್ಲಿ getDetails() ಮೆಥಡ್ ಅನ್ನು ಸೇರಿಸೋಣ. |
06:27 | ಈ ಮೆಥಡ್, name, email_address ಹಾಗೂ department ಇವುಗಳನ್ನು ಹಿಂದಿರುಗಿಸುತ್ತದೆ. |
06:33 | ಹೀಗೆ ಟೈಪ್ ಮಾಡಿ: public String getDetails parentheses. |
06:39 | ಮೆಥೆಡ್ ನ ಒಳಗೆ, ಹೀಗೆ ಟೈಪ್ ಮಾಡಿ: return within brackets Name plus getName() plus slash n plus Email plus getEmail() plus slash n plus Manager of plus getDepartment() semicolon.
ಫೈಲ್ ಅನ್ನು ಸೇವ್ ಮಾಡಿ. |
07:07 | ಈಗ Manager ಮತ್ತು Employee ಎರಡೂ ಕ್ಲಾಸ್ ಗಳಲ್ಲಿ, getDetails() ಮೆಥೆಡ್ ಇರುವುದನ್ನು ಗಮನಿಸಿ. |
07:15 | ಎರಡೂ ಕ್ಲಾಸ್ ಗಳಲ್ಲಿ, ಮೆಥೆಡ್ ನ ಹೆಸರು, ರಿಟರ್ನ್ ಟೈಪ್ ಮತ್ತು ಆರ್ಗ್ಯುಮೆಂಟ್ ಲಿಸ್ಟ್ ಒಂದೇ ಆಗಿದೆ. |
07:22 | ಒಂದುವೇಳೆ, ಹೆಸರು, ರಿಟರ್ನ್ ಟೈಪ್ ಮತ್ತು ಆರ್ಗ್ಯುಮೆಂಟ್ ಲಿಸ್ಟ್ ಒಂದೇ ಆಗಿದ್ದರೆ, ಸಬ್ ಕ್ಲಾಸ್ ನಲ್ಲಿರುವ ಮೆಥೆಡ್, ಪೇರೆಂಟ್ ಕ್ಲಾಸ್ ನ ಮೆಥೆಡ್ ಅನ್ನು ಓವರ್-ರೈಡ್ ಮಾಡಿದೆ ಎಂದು ಹೇಳಲಾಗುತ್ತದೆ. |
07:33 | Manager ಕ್ಲಾಸ್ ಗೆ ಹಿಂತಿರುಗಿ. |
07:36 | getDetails() ಮೆಥೆಡ್ ನ ಹಿಂದೆ @Override ಎಂದು ಟೈಪ್ ಮಾಡಿ. |
07:43 | ಇದೊಂದು ಓವರ್-ರೈಡ್ ನ ಟಿಪ್ಪಣಿಯಾಗಿದೆ. ಇದು, ಒಂದು ಮೆಥೆಡ್, ಸೂಪರ್ ಕ್ಲಾಸ್ ನ ಒಂದು ಮೆಥೆಡ್ ಅನ್ನು ಓವರ್-ರೈಡ್ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಸೂಚಿಸುತ್ತದೆ. |
07:53 | ಇದೀಗ ಅನೋಟೇಶನ್ (ಟಿಪ್ಪಣಿ) ಎಂದರೆ ಏನು ಎಂದು ತಿಳಿಯೋಣ. |
07:57 | ಅನೋಟೇಶನ್ ಗಳು:
(@) ಚಿಹ್ನೆಯಿಂದ ಆರಂಭಗೊಳ್ಳುತ್ತವೆ, ಒಂದು ಪ್ರೊಗ್ರಾಮ್ ಬಗ್ಗೆ ಡೇಟಾ ಒದಗಿಸುತ್ತವೆ, ಕೋಡ್ ಗಳ ಕಾರ್ಯಾಚರಣೆಯಲ್ಲಿ, ಅವುಗಳ ನೇರವಾದ ಪರಿಣಾಮ ಇರುವುದಿಲ್ಲ. |
08:10 | ಒಂದು ಮೆಥೆಡ್ ಅನ್ನು @Override ಎಂದು ಟಿಪ್ಪಣಿ ಮಾಡಿದಾಗ, ಒಂದುವೇಳೆ-
ಒಂದು ಮೆಥೆಡ್, ಸೂಪರ್ ಕ್ಲಾಸ್ ನಲ್ಲಿ ಡಿಕ್ಲೇರ್ ಮಾಡಲಾದ ಮೆಥೆಡ್ ಅನ್ನು ಓವರ್-ರೈಡ್ ಮಾಡಿದಾಗ |
08:23 | ಮತ್ತು, ಮೆಥೆಡ್ ಸಿಗ್ನೇಚರ್, ಅದರ ಸೂಪರ ಕ್ಲಾಸ್ ನಲ್ಲಿ ಬೇರೆಯಾಗಿದ್ದರೆ ಕಂಪೈಲರ್, ಎರರ್ ಅನ್ನು ತೋರಿಸುತ್ತದೆ. |
08:28 | ಈಗ, ನಾವು “ಐಡಿಇ” ಗೆ ಹಿಂತಿರುಗೋಣ. Manager ಕ್ಲಾಸ್ ಗೆ ಹಿಂತಿರುಗಿ. |
08:34 | (@) ಚಿಹ್ನೆಯು, ಮುಂದೆ ಬರುತ್ತಿರುವುದು ಅನೋಟೇಶನ್ ಆಗಿದೆ ಎಂದು ಕಂಪೈಲರ್ ಗೆ ಸೂಚಿಸುತ್ತದೆ. |
08:42 | ಇಲ್ಲಿ, getDetails() ಮೆಥೆಡ್ ಅನ್ನು ಓವರ್-ರೈಡ್ ಮಾಡಲಾಗಿದೆ ಎಂದು ಇದು ತೋರಿಸುತ್ತದೆ. |
08:48 | ನಾವು 'TestEmployee' ಕ್ಲಾಸ್ ಗೆ ಬರೋಣ. |
08:51 | ಫೈಲ್ ಅನ್ನು ಸೇವ್ ಮಾಡಿ ಮತ್ತು ಪ್ರೊಗ್ರಾಂಅನ್ನು ರನ್ ಮಾಡಿ. |
08:55 | ನಾವು ಈ ಕೆಳಕಂಡಂತೆ ಔಟ್ಪುಟ್ ಅನ್ನು ಪಡೆಯುತ್ತೇವೆ.
Name: Nikkita Dinesh Email: abc@gmail.com Manager of Accounts |
09:05 | ಇಲ್ಲಿ, Manager ಕ್ಲಾಸ್ ನ ಆಬ್ಜೆಕ್ಟ್, getDetails() ಮೆಥೆಡ್ ಅನ್ನು ಕಾಲ್ ಮಾಡುತ್ತದೆ. |
09:11 | ಆದರೆ ಈಗ, ಅದು ತಾನೇ Manager ಕ್ಲಾಸ್ ನ ಮೆಥೆಡ್ ಅನ್ನು ಕಾಲ್ ಮಾಡುತ್ತದೆ. |
09:16 | ಈ ರೀತಿಯಲ್ಲಿ, ಪೇರೆಂಟ್ ಕ್ಲಾಸ್ ನ ಮೆಥೆಡ್ ಅನ್ನು, ಸಬ್ ಕ್ಲಾಸ್ ಓವರ್-ರೈಡ್ ಮಾಡುತ್ತದೆ. |
09:23 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು:
ಸಬ್ ಕ್ಲಾಸಿಂಗ್ ಮತ್ತು ಮೆಥೆಡ್ ಓವರ್-ರೈಡಿಂಗ್ ಇವುಗಳ ಬಗ್ಗೆ ಕಲಿತಿದ್ದೇವೆ. |
09:31 | ಈಗ ಒಂದು ಅಸೈನ್ಮೆಂಟ್:
Vehicle ಎಂಬ ಒಂದು ಕ್ಲಾಸ್ ಅನ್ನು ರಚಿಸಿ. ಇದರಲ್ಲಿ, “The vehicle is running” ಎಂದು ಪ್ರಿಂಟ್ ಮಾಡುವ run ಎಂಬ ಒಂದು ಮೆಥಡ್ ಇರಬೇಕು. |
09:40 | ಅಲ್ಲದೇ, Bike ಎಂಬ ಒಂದು ಕ್ಲಾಸ್ ಅನ್ನು ರಚಿಸಿ. ಇದರಲ್ಲಿ, “The Bike is running safely” ಎಂದು ಪ್ರಿಂಟ್ ಮಾಡುವ run ಎಂಬ ಒಂದು ಮೆಥಡ್ ಇರಬೇಕು. |
09:48 | ಔಟ್ಪುಟ್ ಹೀಗಿರಬೇಕು: “The Bike is running safely” |
09:52 | ಸ್ಪೋಕನ್ ಟ್ಯುಟೋರಿಯಲ್ ನ ಬಗೆಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇರದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:06 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ತಂಡವು:
ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈಕೆಳಗಿನ ಲಿಂಕ್ ಗೆ ಬರೆಯಿರಿ. contact at spoken hyphen tutorial dot org |
10:21 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಟಾಕ್ ಟು ಟೀಚರ್ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. |
10:42 | ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |