Java/C3/Subclassing-and-Method-Overriding/Kannada

From Script | Spoken-Tutorial
Jump to: navigation, search
Time
Narration
00:01 Subclassing and Method overriding ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:

ಸಬ್ ಕ್ಲಾಸಿಂಗ್, extends (ಎಕ್ಸ್ಟೆಂಡ್ಸ್) ಎಂಬ ಕೀ ವರ್ಡ್ ಮತ್ತು ಮೆಥಡ್ ಒವರ್-ರೈಡಿಂಗ್ ಇವುಗಳ ಬಗೆಗೆ ಕಲಿಯುವೆವು.

00:15 ಇಲ್ಲಿ ನಾವು:

Ubuntu Linux (ಉಬಂಟು ಲಿನಕ್ಸ್) ಆವೃತ್ತಿ 12.04,

JDK 1.7,

Eclipse 4.3.1 ಇವುಗಳನ್ನು ಬಳಸುತ್ತಿದ್ದೇವೆ.

00:25 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಜಾವಾ ಮತ್ತು ಎಕ್ಲಿಪ್ಸ್ ಐಡಿಇ ಇವುಗಳ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.
00:32 ಇರದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ ಸೈಟ್ ಅನ್ನು ನೋಡಿ.
00:37 ಮೊದಲಿಗೆ, ಸಬ್ ಕ್ಲಾಸಿಂಗ್ ಎಂದರೇನು ಎಂದು ತಿಳಿದುಕೊಳ್ಳೋಣ.
00:41 ಇದು, ಈಗಿರುವ ಕ್ಲಾಸ್ ನಿಂದ ಒಂದು ಹೊಸ ಕ್ಲಾಸ್ ಅನ್ನು ರಚಿಸಲು ಇರುವ ವಿಧಾನವಾಗಿದೆ.
00:46 ಹೊಸದಾಗಿ ರಚಿಸಲ್ಪಟ್ಟ ಕ್ಲಾಸ್ ಅನ್ನು “ಸಬ್ ಕ್ಲಾಸ್” ಅಥವಾ “ಡಿರೈವ್ಡ್ ಕ್ಲಾಸ್” ಅಥವಾ “ಚೈಲ್ಡ್ ಕ್ಲಾಸ್” ಎನ್ನುವರು.
00:53 ಈಗಾಗಲೇ ಇರುವ ಕ್ಲಾಸ್ ಅನ್ನು “ಸೂಪರ್ ಕ್ಲಾಸ್” ಅಥವಾ “ಬೇಸ್ ಕ್ಲಾಸ್” ಅಥವಾ “ಪೇರೆಂಟ್ ಕ್ಲಾಸ್” ಎನ್ನುವರು.
01:00 ಈಗ, ಸಬ್ ಕ್ಲಾಸ್ ಅನ್ನು ರಚಿಸುವುದು ಹೇಗೆಂದು ನಿಮಗೆ ತೋರಿಸುತ್ತೇನೆ. ನಾನು ಈಗಾಗಲೇ MyProject (ಮೈ ಪ್ರೊಜೆಕ್ಟ್) ಎಂಬ ಹೆಸರಿನ ಒಂದು ಪ್ರಾಜೆಕ್ಟ್ ಅನ್ನು ಕ್ರಿಯೇಟ್ ಮಾಡಿದ್ದೇನೆ.
01:10 ಅದರಲ್ಲಿ, Employee ಎನ್ನುವ ಒಂದು ಕ್ಲಾಸ್ ಅನ್ನು ಕ್ರಿಯೇಟ್ ಮಾಡಿದ್ದೇನೆ.
01:15 ಇದು name ಮತ್ತು email_address ಗಳೆಂಬ ವೇರಿಯೇಬಲ್ ಗಳನ್ನು ಹೊಂದಿದೆ.
01:19 ಇದು, ಕ್ಲಾಸ್ ಗಾಗಿ setter (ಸೆಟ್ಟರ್) ಮತ್ತು getter (ಗೆಟ್ಟರ್) ಎನ್ನುವ ಮೆಥೆಡ್ ಗಳನ್ನು ಸಹ ಹೊಂದಿದೆ.
01:24 ಇದರಲ್ಲಿ "getDetails()" ಎನ್ನುವ ಮೆಥೆಡ್ ಇದೆ. ಈ ಮೆಥಡ್, name ಮತ್ತು email_address ಗಳನ್ನು ಹಿಂದಿರುಗಿಸುತ್ತದೆ.
01:31 ಈಗ, ನಾವು Manager ಕ್ಲಾಸ್ ಗೆ ಬರೋಣ.
01:35 ಇದು name, email_address ಮತ್ತು department ಗಳೆಂಬ ವೇರಿಯೇಬಲ್ ಗಳನ್ನು ಹೊಂದಿದೆ.
01:40 ಕೆಲವು ವೇರಿಯೇಬಲ್ ಗಳು, Employee ಮತ್ತು Manager ಈ ಎರಡೂ ಕ್ಲಾಸ್ ಗಳಲ್ಲಿ ಇರುವುದನ್ನು ನಾವು ನೋಡಬಹುದು.
01:47 name ಮತ್ತು email_address ಗಳು Employee ಕ್ಲಾಸ್ ನಲ್ಲಿವೆ. ಇವುಗಳು Manager ಕ್ಲಾಸ್ ನಲ್ಲಿ ಕೂಡ ಇರುವುದನ್ನು ನಾವು ನೋಡಬಹುದು.
01:57 ಹಾಗಾಗಿ, Manager ಕ್ಲಾಸ್ ಅನ್ನು Employee ಕ್ಲಾಸ್ ನ ಸಬ್-ಕ್ಲಾಸ್ ಆಗಿ ಮಾಡಬಹುದು.
02:03 ಅದಕ್ಕಾಗಿ, ನಾವು Manager ಕ್ಲಾಸ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು.
02:08 public class Manager ನ ನಂತರ, “extends Employee” ಎಂದು ಟೈಪ್ ಮಾಡಿ.
02:14 ಈಗಿರುವ ಕ್ಲಾಸ್ ನಿಂದ ಸಬ್ ಕ್ಲಾಸ್ ಅನ್ನು ರಚಿಸಲು, ನಾವು “extends” ಎಂಬ ಕೀ ವರ್ಡ್ ಅನ್ನು ಬಳಸುತ್ತೇವೆ.
02:21 ಎರಡೂ ಕ್ಲಾಸ್ ನಲ್ಲಿ ಇರುವ ನಕಲು ವೇರಿಯೇಬಲ್ ಗಳನ್ನು ತೆಗೆದುಬಿಡಿ.
02:26 ಹೀಗೆ, Manager ಕ್ಲಾಸ್ ನಿಂದ, name ಮತ್ತು email_address ಗಳನ್ನು ತೆಗೆದುಹಾಕಿರಿ.
02:32 ಅಲ್ಲದೇ, ಇಲ್ಲಿಯ setter ಮತ್ತು getter ಮೆಥೆಡ್ ಗಳನ್ನು ಕೂಡ ತೆಗೆದುಹಾಕಿರಿ.
02:37 Manager ಕ್ಲಾಸ್ ನಲ್ಲಿ, ನಮ್ಮ ಹತ್ತಿರ department ಎಂಬ ಒಂದೇ ಒಂದು ವೇರಿಯೇಬಲ್ ಇದೆ.
02:43 department ಗಾಗಿ, ನಾವು setter ಮತ್ತು getter ಮೆಥೆಡ್ ಗಳನ್ನು ಸಹ ಹೊಂದಿದ್ದೇವೆ.
02:49 ಈ ರೀತಿಯಲ್ಲಿ Manager ಕ್ಲಾಸ್, Employee ಕ್ಲಾಸ್ ನ ಸದಸ್ಯರನ್ನು ಇನ್ಹೆರಿಟ್ ಮಾಡುತ್ತದೆ.
02:55 ಒಂದು ಕ್ಲಾಸ್ ನಿಂದ ಇನ್ನೊಂದು ಕ್ಲಾಸ್ ಅನ್ನು “extend” ಮಾಡುವ ಈ ವಿಧಾನವನ್ನು ಸಿಂಗಲ್ ಇನ್-ಹೆರಿಟೆನ್ಸ್ ಎನ್ನುವರು.
03:02 ನಾನು 'TestEmployee' ಎನ್ನುವ ಇನ್ನೊಂದು ಕ್ಲಾಸ್ ಅನ್ನು ಕೂಡ ರಚಿಸಿರುವೆನು.
03:08 main ಮೆಥೆಡ್ ನ ಒಳಗೆ, ನಾವು Manager ಕ್ಲಾಸ್ ನ ಓಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡುವೆವು.
03:14 main ಮೆಥೆಡ್ ನ ಒಳಗೆ, ಹೀಗೆ ಟೈಪ್ ಮಾಡಿ: Manager manager equal to new Manager parentheses.
03:23 ನಂತರ, Manager ಕ್ಲಾಸ್ ನ setter ಮೆಥೆಡ್ ಗಳನ್ನು ಕಾಲ್ ಮಾಡುವೆವು.
03:28 ಆದ್ದರಿಂದ ಹೀಗೆ ಟೈಪ್ ಮಾಡಿ: manager dot setName within brackets and double quotes Nikkita Dinesh.
03:38 ನಂತರ ಹೀಗೆ ಟೈಪ್ ಮಾಡಿ: manager dot setEmail within brackets and double quotes abc at gmail dot com.
03:49 ನಂತರ ಹೀಗೆ ಟೈಪ್ ಮಾಡಿ: manager dot setDepartment within brackets and double quotes Accounts.
03:57 ನೀವು ಯಾವುದೇ name, email_address ಹಾಗೂ department ಅನ್ನು ಬಳಸಬಹುದು.
04:02 ಈಗ ನಾವು Manager ಓಬ್ಜೆಕ್ಟ್ ಅನ್ನು ಬಳಸಿ, "getDetails()" ಮೆಥಡ್ ಅನ್ನು ಕಾಲ್ ಮಾಡೋಣ.
04:08 ಹೀಗೆ, ಟೈಪ್ ಮಾಡಿ: System.out.println within brackets manager dot getDetails.
04:17 ಈಗ ಪ್ರೋಗ್ರಾಮ್ ಅನ್ನು ಸೇವ್ ಮಾಡಿ ನಂತರ ರನ್ ಮಾಡೋಣ.
04:21 ನಾವು ಈ ಔಟ್ಪುಟ್ ಅನ್ನು ಪಡೆಯುತ್ತೇವೆ.

Name: Nikkita Dinesh

Email: abc@gmail.com

04:30 ಇಲ್ಲಿ, Manager ಕ್ಲಾಸ್ ನ ಓಬ್ಜೆಕ್ಟ್, getDetails() ಮೆಥೆಡ್ ಅನ್ನು ಕಾಲ್ ಮಾಡುತ್ತದೆ.
04:36 ಈಗ, Manager ಕ್ಲಾಸ್ ಗೆ ಬನ್ನಿ.
04:39 ಇಲ್ಲಿ "getDetails()" ಮೆಥೆಡ್ ಇಲ್ಲ ಎಂಬುದನ್ನು ನಾವು ನೋಡಬಹುದು.
04:43 ಆದರೂ ಕೂಡ ನಮಗೆ ಔಟ್ಪುಟ್ ಸಿಕ್ಕಿದೆ. ಇದಕ್ಕೆ ಕಾರಣ, Manager ಕ್ಲಾಸ್, Employee ಕ್ಲಾಸ್ ಅನ್ನು extend ಮಾಡುತ್ತದೆ.
04:52 Manager ಕ್ಲಾಸ್, Employee ಕ್ಲಾಸ್ ನ ವೇರಿಯೇಬಲ್ ಗಳನ್ನು ಮತ್ತು ಮೆಥೆಡ್ ಗಳನ್ನು ತಂತಾನೆ ಇನ್ಹೆರಿಟ್ ಮಾಡುತ್ತದೆ.
04:59 ಹಾಗಾಗಿ, ಇದು ಪೇರೆಂಟ್ ಕ್ಲಾಸ್ ಆದ Employee ಕ್ಲಾಸ್ ನಲ್ಲಿ ಇರುವುದು.
05:04 ಈಗ Employee ಕ್ಲಾಸ್ ಗೆ ಬರೋಣ. ಇಲ್ಲಿ getDetails() ಮೆಥೆಡ್ ಇದೆ.
05:11 ನಾವು department ಅನ್ನು ರಿಟರ್ನ್ ಮಾಡಿಲ್ಲ ಎಂಬುದನ್ನು ಗಮನಿಸಿ. ಹಾಗಾಗಿ, ಇದು ಔಟ್ಪುಟ್ ನಲ್ಲಿ department ಅನ್ನು ಪ್ರಿಂಟ್ ಮಾಡಿಲ್ಲ.
05:20 ಈಗ, getDetails() ಮೆಥೆಡ್ ಅನ್ನು private ಗೆ ಬದಲಿಸೋಣ. ಫೈಲ್ ಅನ್ನು ಸೇವ್ ಮಾಡಿ.
05:27 'TestEmployee' ಕ್ಲಾಸ್ ನಲ್ಲಿ ನಮಗೆ ಕಂಪೈಲೇಶನ್ ಎರರ್ ಸಿಗುವುದನ್ನು ನಾವು ನೋಡಬಹುದು.
05:34 ಇದು ಹೀಗೆ ಹೇಳುತ್ತದೆ: "The method getDetails() from the type Employee is not visible".
05:40 ಇದರ ಅರ್ಥ, getDetails() ಮೆಥೆಡ್ ಅನ್ನು ಉಪಯೋಗಿಸಲು ಸಾಧ್ಯವಿಲ್ಲ.
05:45 ಇದಕ್ಕೆ ಕಾರಣ, ನಾವು getDetails() ಮೆಥೆಡ್ ಅನ್ನು private ಎಂದು ಡಿಕ್ಲೇರ್ ಮಾಡಿದ್ದೇವೆ.
05:52 ಸಬ್ ಕ್ಲಾಸ್, ಅದರ ಸೂಪರ್ ಕ್ಲಾಸ್ ನ ಪ್ರೈವೇಟ್ ಮೆಂಬರ್ ಗಳನ್ನು ಇನ್ಹೆರಿಟ್ ಮಾಡುವುದಿಲ್ಲ.
05:58 ಸಬ್ ಕ್ಲಾಸ್ ಗೆ, ಸೂಪರ್ ಕ್ಲಾಸ್ ನ ಪ್ರೈವೇಟ್ ಮೆಂಬರ್ ಗಳನ್ನು ನೇರವಾಗಿ ಬಳಸಲು ಸಾಧ್ಯವಿಲ್ಲ.
06:04 ಸೂಪರ್ ಕ್ಲಾಸ್, ಪಬ್ಲಿಕ್ ಅಥವಾ ಪ್ರೊಟೆಕ್ಟೆಡ್ ಮೆಥೆಡ್ ಗಳನ್ನು ಹೊಂದಿರಬಹುದು.
06:09 ಈ ಮೆಥಡ್ ಗಳು, ಅವುಗಳ ಪ್ರೈವೇಟ್ ಫೀಲ್ಡ್ ಗಳನ್ನು ಬಳಸಬಹುದು.
06:13 ಈ ಮೆಥೆಡ್ ಗಳ ಮೂಲಕ, ಸಬ್-ಕ್ಲಾಸ್ ಸಹ ಪ್ರೈವೇಟ್ ಫೀಲ್ಡ್ ಗಳನ್ನು ಬಳಸಬಹುದು.
06:18 ನಾವಿದನ್ನು ಪುನಃ ಪಬ್ಲಿಕ್ ಗೆ ಬದಲಾಯಿಸೋಣ.
06:21 ಈಗ, ಮ್ಯಾನೇಜರ್ ಕ್ಲಾಸ್ ನಲ್ಲಿ getDetails() ಮೆಥಡ್ ಅನ್ನು ಸೇರಿಸೋಣ.
06:27 ಈ ಮೆಥಡ್, name, email_address ಹಾಗೂ department ಇವುಗಳನ್ನು ಹಿಂದಿರುಗಿಸುತ್ತದೆ.
06:33 ಹೀಗೆ ಟೈಪ್ ಮಾಡಿ: public String getDetails parentheses.
06:39 ಮೆಥೆಡ್ ನ ಒಳಗೆ, ಹೀಗೆ ಟೈಪ್ ಮಾಡಿ: return within brackets Name plus getName() plus slash n plus Email plus getEmail() plus slash n plus Manager of plus getDepartment() semicolon.

ಫೈಲ್ ಅನ್ನು ಸೇವ್ ಮಾಡಿ.

07:07 ಈಗ Manager ಮತ್ತು Employee ಎರಡೂ ಕ್ಲಾಸ್ ಗಳಲ್ಲಿ, getDetails() ಮೆಥೆಡ್ ಇರುವುದನ್ನು ಗಮನಿಸಿ.
07:15 ಎರಡೂ ಕ್ಲಾಸ್ ಗಳಲ್ಲಿ, ಮೆಥೆಡ್ ನ ಹೆಸರು, ರಿಟರ್ನ್ ಟೈಪ್ ಮತ್ತು ಆರ್ಗ್ಯುಮೆಂಟ್ ಲಿಸ್ಟ್ ಒಂದೇ ಆಗಿದೆ.
07:22 ಒಂದುವೇಳೆ, ಹೆಸರು, ರಿಟರ್ನ್ ಟೈಪ್ ಮತ್ತು ಆರ್ಗ್ಯುಮೆಂಟ್ ಲಿಸ್ಟ್ ಒಂದೇ ಆಗಿದ್ದರೆ, ಸಬ್ ಕ್ಲಾಸ್ ನಲ್ಲಿರುವ ಮೆಥೆಡ್, ಪೇರೆಂಟ್ ಕ್ಲಾಸ್ ನ ಮೆಥೆಡ್ ಅನ್ನು ಓವರ್-ರೈಡ್ ಮಾಡಿದೆ ಎಂದು ಹೇಳಲಾಗುತ್ತದೆ.
07:33 Manager ಕ್ಲಾಸ್ ಗೆ ಹಿಂತಿರುಗಿ.
07:36 getDetails() ಮೆಥೆಡ್ ನ ಹಿಂದೆ @Override ಎಂದು ಟೈಪ್ ಮಾಡಿ.
07:43 ಇದೊಂದು ಓವರ್-ರೈಡ್ ನ ಟಿಪ್ಪಣಿಯಾಗಿದೆ. ಇದು, ಒಂದು ಮೆಥೆಡ್, ಸೂಪರ್ ಕ್ಲಾಸ್ ನ ಒಂದು ಮೆಥೆಡ್ ಅನ್ನು ಓವರ್-ರೈಡ್ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಸೂಚಿಸುತ್ತದೆ.
07:53 ಇದೀಗ ಅನೋಟೇಶನ್ (ಟಿಪ್ಪಣಿ) ಎಂದರೆ ಏನು ಎಂದು ತಿಳಿಯೋಣ.
07:57 ಅನೋಟೇಶನ್ ಗಳು:

(@) ಚಿಹ್ನೆಯಿಂದ ಆರಂಭಗೊಳ್ಳುತ್ತವೆ,

ಒಂದು ಪ್ರೊಗ್ರಾಮ್ ಬಗ್ಗೆ ಡೇಟಾ ಒದಗಿಸುತ್ತವೆ,

ಕೋಡ್ ಗಳ ಕಾರ್ಯಾಚರಣೆಯಲ್ಲಿ, ಅವುಗಳ ನೇರವಾದ ಪರಿಣಾಮ ಇರುವುದಿಲ್ಲ.

08:10 ಒಂದು ಮೆಥೆಡ್ ಅನ್ನು @Override ಎಂದು ಟಿಪ್ಪಣಿ ಮಾಡಿದಾಗ, ಒಂದುವೇಳೆ-

ಒಂದು ಮೆಥೆಡ್, ಸೂಪರ್ ಕ್ಲಾಸ್ ನಲ್ಲಿ ಡಿಕ್ಲೇರ್ ಮಾಡಲಾದ ಮೆಥೆಡ್ ಅನ್ನು ಓವರ್-ರೈಡ್ ಮಾಡಿದಾಗ

08:23 ಮತ್ತು, ಮೆಥೆಡ್ ಸಿಗ್ನೇಚರ್, ಅದರ ಸೂಪರ ಕ್ಲಾಸ್ ನಲ್ಲಿ ಬೇರೆಯಾಗಿದ್ದರೆ ಕಂಪೈಲರ್, ಎರರ್ ಅನ್ನು ತೋರಿಸುತ್ತದೆ.
08:28 ಈಗ, ನಾವು “ಐಡಿಇ” ಗೆ ಹಿಂತಿರುಗೋಣ. Manager ಕ್ಲಾಸ್ ಗೆ ಹಿಂತಿರುಗಿ.
08:34 (@) ಚಿಹ್ನೆಯು, ಮುಂದೆ ಬರುತ್ತಿರುವುದು ಅನೋಟೇಶನ್ ಆಗಿದೆ ಎಂದು ಕಂಪೈಲರ್ ಗೆ ಸೂಚಿಸುತ್ತದೆ.
08:42 ಇಲ್ಲಿ, getDetails() ಮೆಥೆಡ್ ಅನ್ನು ಓವರ್-ರೈಡ್ ಮಾಡಲಾಗಿದೆ ಎಂದು ಇದು ತೋರಿಸುತ್ತದೆ.
08:48 ನಾವು 'TestEmployee' ಕ್ಲಾಸ್ ಗೆ ಬರೋಣ.
08:51 ಫೈಲ್ ಅನ್ನು ಸೇವ್ ಮಾಡಿ ಮತ್ತು ಪ್ರೊಗ್ರಾಂಅನ್ನು ರನ್ ಮಾಡಿ.
08:55 ನಾವು ಈ ಕೆಳಕಂಡಂತೆ ಔಟ್ಪುಟ್ ಅನ್ನು ಪಡೆಯುತ್ತೇವೆ.

Name: Nikkita Dinesh

Email: abc@gmail.com

Manager of Accounts

09:05 ಇಲ್ಲಿ, Manager ಕ್ಲಾಸ್ ನ ಆಬ್ಜೆಕ್ಟ್, getDetails() ಮೆಥೆಡ್ ಅನ್ನು ಕಾಲ್ ಮಾಡುತ್ತದೆ.
09:11 ಆದರೆ ಈಗ, ಅದು ತಾನೇ Manager ಕ್ಲಾಸ್ ನ ಮೆಥೆಡ್ ಅನ್ನು ಕಾಲ್ ಮಾಡುತ್ತದೆ.
09:16 ಈ ರೀತಿಯಲ್ಲಿ, ಪೇರೆಂಟ್ ಕ್ಲಾಸ್ ನ ಮೆಥೆಡ್ ಅನ್ನು, ಸಬ್ ಕ್ಲಾಸ್ ಓವರ್-ರೈಡ್ ಮಾಡುತ್ತದೆ.
09:23 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು:

ಸಬ್ ಕ್ಲಾಸಿಂಗ್ ಮತ್ತು ಮೆಥೆಡ್ ಓವರ್-ರೈಡಿಂಗ್ ಇವುಗಳ ಬಗ್ಗೆ ಕಲಿತಿದ್ದೇವೆ.

09:31 ಈಗ ಒಂದು ಅಸೈನ್ಮೆಂಟ್:

Vehicle ಎಂಬ ಒಂದು ಕ್ಲಾಸ್ ಅನ್ನು ರಚಿಸಿ. ಇದರಲ್ಲಿ, “The vehicle is running” ಎಂದು ಪ್ರಿಂಟ್ ಮಾಡುವ run ಎಂಬ ಒಂದು ಮೆಥಡ್ ಇರಬೇಕು.

09:40 ಅಲ್ಲದೇ, Bike ಎಂಬ ಒಂದು ಕ್ಲಾಸ್ ಅನ್ನು ರಚಿಸಿ. ಇದರಲ್ಲಿ, “The Bike is running safely” ಎಂದು ಪ್ರಿಂಟ್ ಮಾಡುವ run ಎಂಬ ಒಂದು ಮೆಥಡ್ ಇರಬೇಕು.
09:48 ಔಟ್ಪುಟ್ ಹೀಗಿರಬೇಕು: “The Bike is running safely”
09:52 ಸ್ಪೋಕನ್ ಟ್ಯುಟೋರಿಯಲ್ ನ ಬಗೆಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇರದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:06 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ತಂಡವು:

ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈಕೆಳಗಿನ ಲಿಂಕ್ ಗೆ ಬರೆಯಿರಿ. contact at spoken hyphen tutorial dot org

10:21 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಟಾಕ್ ಟು ಟೀಚರ್ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ.

http://spoken-tutorial.org/NMEICT-Intro

10:42 ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14