Health-and-Nutrition/C2/Laid-back-hold-for-breastfeeding/Kannada
From Script | Spoken-Tutorial
Revision as of 22:47, 15 January 2019 by Sandhya.np14 (Talk | contribs)
|
|
00:01 | Laid-back hold for breastfeeding ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು : ತಾಯಿಯು ಹಾಲುಣಿಸುವಾಗ ಮಗುವನ್ನು ಹಿಡಿದುಕೊಳ್ಳುವ ಸರಿಯಾದ ವಿಧಾನವನ್ನು ಆರಿಸಿಕೊಳ್ಳುವುದು, |
00:15 | ಸ್ತನ್ಯಪಾನದ ಮೊದಲು ತಾಯಿಯ ತಯಾರಿ ಮತ್ತು 'ಲೇಡ್-ಬ್ಯಾಕ್ ಹೋಲ್ಡ್' ಅನ್ನು ಹೇಗೆ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. |
00:22 | ನಾವು ಈಗ ಆರಂಭಿಸೋಣ. |
00:24 | ಪ್ರಪಂಚದಾದ್ಯಂತ ತಾಯಂದಿರು ತಮ್ಮ ಮಗುವನ್ನು ವಿವಿಧ ರೀತಿಯಲ್ಲಿ ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ. |
00:31 | ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿದಂತೆ, ತಾಯಿ ಮತ್ತು ಅವಳ ಮಗುವಿಗಾಗಿ ಅತ್ಯುತ್ತಮ ಹಾಲುಣಿಸುವ ಹಿಡಿತವು ಈ ಕೆಳಗಿನಂತೆ ಇರುತ್ತದೆ: |
00:39 | ಹಾಲುಣಿಸುವ ಸಂಪೂರ್ಣ ಅವಧಿಯಲ್ಲಿ ತಾಯಿ ಮತ್ತು ಮಗು ಇಬ್ಬರೂ ಆರಾಮವಾಗಿರುತ್ತಾರೆ. |
00:47 | ಮಗು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಜೋಡಿಸಿಕೊಳ್ಳಲು ಸಾಧ್ಯವಾಗಿರುತ್ತದೆ ಮತ್ತು ಸಾಕಷ್ಟು ಹಾಲು ಸಿಗುತ್ತದೆ. |
00:55 | 'ಲೇಡ್-ಬ್ಯಾಕ್ ಹೋಲ್ಡ್' ಎಂಬ ಹಿಡಿತದ ಬಗ್ಗೆ ನಾವು ತಿಳಿಯೋಣ. |
01:00 | “ಕ್ರಾಸ್-ಕ್ರೇಡಲ್” ಅಥವಾ “ಕ್ರೇಡಲ್ ಹೋಲ್ಡ್” ವಿಧಾನದಲ್ಲಿ, ಮಗು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಜೋಡಿಸಿಕೊಳ್ಳಲು ಕಷ್ಟವಾದಾಗ, |
01:10 | ಅಥವಾ ತಾಯಿಯು ದೊಡ್ಡ ಸ್ತನಗಳನ್ನು ಹೊಂದಿದ್ದರೆ, |
01:13 | ಅಥವಾ ತಾಯಿಗೆ ಬೆನ್ನು ನೋವಿದ್ದರೆ, |
01:16 | ತಾಯಿಯು ದಣಿದಿದ್ದರೆ, ಅಂತಹ ಸಂದರ್ಭಗಳಲ್ಲಿ 'ಲೇಡ್-ಬ್ಯಾಕ್ ಹೋಲ್ಡ್' ಅನ್ನು ಶಿಫಾರಸು ಮಾಡಲಾಗುತ್ತದೆ. |
01:19 | ಮಗುವಿಗೆ ಹಾಲೂಡಿಸುವ ಮೊದಲು ತಾಯಿಯು ಸಾಬೂನು ಹಾಗೂ ನೀರಿನಿಂದ ತನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಒಣಗಿಸಬೇಕು. |
01:27 | ನಂತರ ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. |
01:32 | ಹಾಲುಣಿಸುವ ತಾಯಂದಿರು ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಉತ್ಪಾದಿಸುತ್ತಾರೆ.
ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸಿಕೊಳ್ಳಬೇಕು. |
01:44 | ನಂತರ, ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು. |
01:50 | ಅವಳು ಸ್ತನದ ಮೇಲೆ ತನ್ನ ಬ್ರಾ ಅಥವಾ ಕುಪ್ಪಸದ ಒತ್ತಡವು ಬಾರದಂತೆ ನೋಡಿಕೊಳ್ಳಬೇಕು. |
01:55 | ನಂತರ, ತಾಯಿಯು ನೆಲದ ಮೇಲೆ ಅಥವಾ ಹಾಸಿಗೆಯ ಮೇಲೆ ಆರಾಮವಾಗಿ ಒರಗಿಕೊಳ್ಳಬೇಕು. |
02:01 | ಅವಳ ತಲೆ, ಕುತ್ತಿಗೆ ಮತ್ತು ಬೆನ್ನಿನ ಮೇಲ್ಭಾಗವು ದಿಂಬುಗಳ ಆಸರೆಯನ್ನು ಪಡೆದಿರಬೇಕು. |
02:07 | ಈಗ ತಾಯಿಯು ಸಿದ್ಧವಾಗಿದ್ದಾಳೆ. ಹೀಗಾಗಿ, ಮಗುವನ್ನು ಸರಿಯಾಗಿ ಹೇಗೆ ಹಿಡಿದುಕೊಳ್ಳುವುದು ಎಂಬುದನ್ನು ನಾವು ತಿಳಿಯೋಣ. |
02:13 | ತಾಯಿಯು ತಾನು ಹಾಲುಣಿಸುವ ಸ್ತನದ ಬದಿಯ ಕೈಯಿಂದ ತನ್ನ ಮಗುವಿನ ಶರೀರವನ್ನು ಹಿಡಿದಿರಬೇಕು. |
02:20 | ತನ್ನ ಇನ್ನೊಂದು ಕೈ ಹೆಬ್ಬೆರಳು ಮತ್ತು ಬೆರಳುಗಳಿಂದ ಅವಳು ತನ್ನ ಮಗುವಿನ ತಲೆಯ ಕೆಳಭಾಗವನ್ನು ಹಿಡಿಯಬೇಕು. |
02:27 | ಈ ಚಿತ್ರದಲ್ಲಿರುವ ತಾಯಿಯು, ಮಗುವಿಗೆ ತನ್ನ ಬಲಗಡೆಯ ಸ್ತನದಿಂದ ಮೊಲೆಯೂಡಿಸುತ್ತಾಳೆ. |
02:32 | ಆದ್ದರಿಂದ, ಮಗುವನ್ನು ಹಿಡಿದುಕೊಳ್ಳಲು ಅವಳು ತನ್ನ ಬಲಗೈಯನ್ನು ಬಳಸುತ್ತಿದ್ದಾಳೆ. |
02:38 | ಅವಳು ಮಗುವಿನ ತಲೆಯ ಕೆಳಭಾಗವನ್ನು ಹಿಡಿದುಕೊಳ್ಳಲು, ತನ್ನ ಎಡಗೈಯ ಹೆಬ್ಬೆರಳು ಮತ್ತು ಬೆರಳುಗಳನ್ನು ಬಳಸುತ್ತಿದ್ದಾಳೆ. |
02:46 | ನಂತರ, ಮಗುವಿನ ತಲೆಯನ್ನು ಹಿಡಿದುಕೊಳ್ಳಲು, ತಾಯಿಯ ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ನಾವು ನೋಡೋಣ. |
02:54 | ತಾಯಿಯ ಹೆಬ್ಬೆರಳು, ಮಗುವಿನ ಒಂದು ಕಿವಿಯ ಹಿಂದೆ ಮತ್ತು ಉಳಿದ ಬೆರಳುಗಳು ಇನ್ನೊಂದು ಕಿವಿಯ ಹಿಂದೆ ಇರಬೇಕು. |
03:02 | ಅವಳು ಬೆರಳುಗಳನ್ನು ಅಥವಾ ಹೆಬ್ಬೆರಳನ್ನು, ಕಿವಿಯ ಹಿಂದಿನಿಂದ ಮಗುವಿನ ಕುತ್ತಿಗೆಗೆ ಸರಿಸಬಾರದು. |
03:08 | ಮಗುವಿನ ತಲೆಯ ಹಿಂಭಾಗದಲ್ಲಿ ಅವಳು ತನ್ನ ಕೈಯಿಂದ ಒತ್ತಡವನ್ನು ಹಾಕಬಾರದು. ಇದರಿಂದ, ಹಾಲೂಡಿಸುವಾಗ ಮಗು ಆರಾಮವಾಗಿ ಇರುವುದು. |
03:20 | ನಂತರ, ಮಗುವನ್ನು ಸರಿಯಾಗಿ ಹೇಗೆ ಹಿಡಿದುಕೊಳ್ಳುವುದು ಎಂಬುದನ್ನು ಕಲಿಯೋಣ. |
03:25 | ಮಗುವಿನ ಹೊಟ್ಟೆಯು ತಾಯಿಯ ಹೊಟ್ಟೆಯ ಮೇಲೆ ಇರುವಂತೆ, ಮಗುವನ್ನು ತಾಯಿಯ ಶರೀರದ ಮೇಲೆ ಇರಿಸಬೇಕು. |
03:32 | ಮತ್ತು ಮಗುವಿನ ತಲೆಯು ತಾಯಿಯ ಎದೆಯ ಹತ್ತಿರ ಇರಬೇಕು. |
03:38 | ಮಗು ಮತ್ತು ತಾಯಿಯ ಎದೆಯ ನಡುವಿನ ಅಂತರವು ಕಡಿಮೆ ಇದ್ದಷ್ಟು, ಸ್ತನವನ್ನು ತಲುಪಲು ಮಗುವಿಗೆ ಸಹಾಯವಾಗುತ್ತದೆ. |
03:44 | ಮತ್ತು, ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು ಮಗುವಿಗೆ ಸುಲಭವಾಗುತ್ತದೆ. |
03:49 | ಎರಡನೆಯದಾಗಿ, ಮಗುವನ್ನು ಹಿಡಿದುಕೊಂಡಿರುವ ದಿಕ್ಕು ಅತಿ ಮುಖ್ಯವಾಗಿದೆ. |
03:56 | ನಾವು ಆಹಾರ ಸೇವಿಸುವಾಗ ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಇರುವುದನ್ನು ನೀವು ಗಮನಿಸಿರಬಹುದು. |
04:05 | ಹೀಗೆಯೇ, ಸ್ತನ್ಯಪಾನ ಮಾಡಿಸುವಾಗ ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ದಿಕ್ಕಿನಲ್ಲಿರಬೇಕು. |
04:14 | ಇದರಿಂದ ಮಗುವಿಗೆ ಹಾಲನ್ನು ನುಂಗಲು ಸುಲಭವಾಗುತ್ತದೆ. |
04:19 | ನೆನಪಿಡಿ, ಮಗುವಿನ ಶರೀರದ ಮುಂದಿನ ಭಾಗವು ತಾಯಿಯ ಶರೀರದ ಮುಂದಿನ ಭಾಗದ ಮೇಲೆ ಇರುವವರೆಗೆ ಮಗುವನ್ನು ತಾಯಿಯ ಶರೀರದ ಮೇಲೆ ಯಾವುದೇ ದಿಕ್ಕಿನಲ್ಲಿ ಇರಿಸಬಹುದು. |
04:32 | ಮತ್ತು, ಮಗುವು ತಾಯಿಯ ಸ್ತನವನ್ನು ಸುಲಭವಾಗಿ ತಲುಪಬಹುದು. |
04:38 | ಮಗುವಿನ ದೇಹವನ್ನು ಹೊಂದಿಸುವ ಬಗ್ಗೆ, ಈಗ ನಾವು ಮೂರನೆಯ ಅಂಶಕ್ಕೆ ಬರುತ್ತೇವೆ. |
04:42 | ತಾಯಿಯು ತನ್ನ ಮಗುವಿನ ಪೂರ್ತಿ ಶರೀರವನ್ನು ಹಿಡಿದುಕೊಳ್ಳಬೇಕು. |
04:47 | ಇಲ್ಲದಿದ್ದರೆ, ಮಗುವು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಲು (attach) ಬಹಳ ಪ್ರಯತ್ನಿಸಬೇಕಾಗುವುದು. |
04:54 | ನಂತರ, ನಾವು ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ. |
04:59 | ಶಿಶುವಿನ ಮೂಗು ಹಾಗೂ ತಾಯಿಯ ಮೊಲೆಯ ತೊಟ್ಟು ಯಾವಾಗಲೂ ಒಂದೇ ಸಾಲಿನಲ್ಲಿರಬೇಕು. |
05:04 | ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರದಲ್ಲಿರಬೇಕು. |
05:09 | ಲ್ಯಾಚಿಂಗ್ ಸಮಯದಲ್ಲಿ ಶಿಶು, ಅರಿಯೋಲಾದ ಕೆಳಭಾಗವನ್ನು ಹೆಚ್ಚಾಗಿ ತೆಗೆದುಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ. |
05:16 | ಹೀಗಾಗಿ, ಹೆಚ್ಚು ಹಾಲನ್ನು ಕುಡಿಯಲು ಕೆಳದವಡೆಯನ್ನು ಬಳಸುತ್ತದೆ. |
05:21 | ದಯವಿಟ್ಟು ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ. |
05:27 | ಈಗ, ಮಗು 'ಲೇಡ್-ಬ್ಯಾಕ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ ಲ್ಯಾಚ್ ಮಾಡಿಕೊಳ್ಳಲು ಸಿದ್ಧವಾಗಿದೆ. |
05:34 | ಈ ಹಿಡಿತದಲ್ಲಿ, ಮಗು ತಾಯಿಯ ಸ್ತನಕ್ಕೆ ಸಹಜವಾಗಿ, ಆಳವಾಗಿ ಜೋಡಿಸಿಕೊಳ್ಳಬಹುದು. |
05:40 | ಸ್ತನಕ್ಕೆ ಮಗುವಿನ ಸರಿಯಾದ ಜೋಡಣೆಯ ಬಗ್ಗೆ, ಇದೇ ಸರಣಿಯ ಇನ್ನೊಂದು ವೀಡಿಯೋದಲ್ಲಿ ವಿವರಿಸಲಾಗಿದೆ. |
05:49 | ಮಗು ತಾಯಿಯ ಸ್ತನಕ್ಕೆ ಸರಿಯಾಗಿ ಜೋಡಿಸಿಕೊಂಡ ತಕ್ಷಣ, ತಾಯಿಯು ಮಗುವಿನ ತಲೆಯಿಂದ ತನ್ನ ಕೈಯನ್ನು ಹಿಂತೆಗೆದುಕೊಳ್ಳಬಹುದು ಮತ್ತು ತನ್ನ ಎರಡೂ ಕೈಗಳಿಂದ ಮಗುವನ್ನು ಹಿಡಿದುಕೊಳ್ಳಬಹುದು. |
06:02 | ಈ ವಿಶ್ರಾಂತಿಯ ಸ್ಥಿತಿಯಲ್ಲಿ, ತಾಯಿಯು ಒರಗಿಕೊಂಡು ಹಾಲೂಡಿಸಬೇಕು.
ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
06:11 | ಈ ಟ್ಯುಟೋರಿಯಲ್ ನಲ್ಲಿ, ತಾಯಿಯು ಹಾಲುಣಿಸುವಾಗ ಮಗುವನ್ನು ಹಿಡಿದುಕೊಳ್ಳುವ ಸರಿಯಾದ ವಿಧಾನವನ್ನು ಆರಿಸಿಕೊಳ್ಳುವುದು, |
06:18 | ಸ್ತನ್ಯಪಾನದ ಮೊದಲು ತಾಯಿಯ ತಯಾರಿ ಮತ್ತು 'ಲೇಡ್-ಬ್ಯಾಕ್ ಹೋಲ್ಡ್' ಅನ್ನು ಹೇಗೆ ಮಾಡುವುದು ಇವುಗಳ ಬಗ್ಗೆ ತಿಳಿದುಕೊಂಡೆವು. |
06:25 | ಈ ಟ್ಯುಟೋರಿಯಲ್, Spoken Tutorial Project, IIT Bombay ಇವರ ಕೊಡುಗೆಯಾಗಿದೆ. |
06:31 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD ಮೂಲಕ ಭಾರತ ಸರಕಾರದ ಅನುದಾನವನ್ನು ಪಡೆದಿದೆ.
ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
06:44 | ಈ ಟ್ಯುಟೋರಿಯಲ್, WHEELS Global Foundation ನ ಉದಾರ ಕೊಡುಗೆಯಿಂದ ಭಾಗಶಃ ಅನುದಾನವನ್ನು ಪಡೆದಿದ್ದು |
06:51 | Maa aur Shishu Poshan (ಮಾ ಔರ್ ಶಿಶು ಪೋಷಣ್) ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
ಈ ಟ್ಯುಟೋರಿಯಲ್ ನ ಡೊಮೇನ್ ರಿವ್ಯೂ ಮಾಡಿದವರು Dr. ರೂಪಲ್ ದಲಾಲ್, MD ಪೀಡಿಯಾಟ್ರಿಕ್ಸ್. |
07:03 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.
ಧನ್ಯವಾದಗಳು. |