Health-and-Nutrition/C2/Laid-back-hold-for-breastfeeding/Kannada

From Script | Spoken-Tutorial
Jump to: navigation, search
Time
Narration
00:01 Laid-back hold for breastfeeding ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು : ತಾಯಿಯು ಹಾಲುಣಿಸುವಾಗ ಮಗುವನ್ನು ಹಿಡಿದುಕೊಳ್ಳುವ ಸರಿಯಾದ ವಿಧಾನವನ್ನು ಆರಿಸಿಕೊಳ್ಳುವುದು,
00:15 ಸ್ತನ್ಯಪಾನದ ಮೊದಲು ತಾಯಿಯ ತಯಾರಿ ಮತ್ತು 'ಲೇಡ್-ಬ್ಯಾಕ್ ಹೋಲ್ಡ್' ಅನ್ನು ಹೇಗೆ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
00:22 ನಾವು ಈಗ ಆರಂಭಿಸೋಣ.
00:24 ಪ್ರಪಂಚದಾದ್ಯಂತ ತಾಯಂದಿರು ತಮ್ಮ ಮಗುವನ್ನು ವಿವಿಧ ರೀತಿಯಲ್ಲಿ ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ.
00:31 ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿದಂತೆ, ತಾಯಿ ಮತ್ತು ಅವಳ ಮಗುವಿಗಾಗಿ ಅತ್ಯುತ್ತಮ ಹಾಲುಣಿಸುವ ಹಿಡಿತವು ಈ ಕೆಳಗಿನಂತೆ ಇರುತ್ತದೆ:
00:39 ಹಾಲುಣಿಸುವ ಸಂಪೂರ್ಣ ಅವಧಿಯಲ್ಲಿ ತಾಯಿ ಮತ್ತು ಮಗು ಇಬ್ಬರೂ ಆರಾಮವಾಗಿರುತ್ತಾರೆ.
00:47 ಮಗು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಜೋಡಿಸಿಕೊಳ್ಳಲು ಸಾಧ್ಯವಾಗಿರುತ್ತದೆ ಮತ್ತು ಸಾಕಷ್ಟು ಹಾಲು ಸಿಗುತ್ತದೆ.
00:55 'ಲೇಡ್-ಬ್ಯಾಕ್ ಹೋಲ್ಡ್' ಎಂಬ ಹಿಡಿತದ ಬಗ್ಗೆ ನಾವು ತಿಳಿಯೋಣ.
01:00 “ಕ್ರಾಸ್-ಕ್ರೇಡಲ್” ಅಥವಾ “ಕ್ರೇಡಲ್ ಹೋಲ್ಡ್” ವಿಧಾನದಲ್ಲಿ, ಮಗು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಜೋಡಿಸಿಕೊಳ್ಳಲು ಕಷ್ಟವಾದಾಗ,
01:10 ಅಥವಾ ತಾಯಿಯು ದೊಡ್ಡ ಸ್ತನಗಳನ್ನು ಹೊಂದಿದ್ದರೆ,
01:13 ಅಥವಾ ತಾಯಿಗೆ ಬೆನ್ನು ನೋವಿದ್ದರೆ,
01:16 ತಾಯಿಯು ದಣಿದಿದ್ದರೆ, ಅಂತಹ ಸಂದರ್ಭಗಳಲ್ಲಿ 'ಲೇಡ್-ಬ್ಯಾಕ್ ಹೋಲ್ಡ್' ಅನ್ನು ಶಿಫಾರಸು ಮಾಡಲಾಗುತ್ತದೆ.
01:19 ಮಗುವಿಗೆ ಹಾಲುಣಿಸುವ ಮೊದಲು ತಾಯಿಯು ಸಾಬೂನು ಹಾಗೂ ನೀರಿನಿಂದ ತನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಒಣಗಿಸಬೇಕು.
01:27 ನಂತರ ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು.
01:32 ಹಾಲುಣಿಸುವ ತಾಯಂದಿರು ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಉತ್ಪಾದಿಸುತ್ತಾರೆ.

ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸಿಕೊಳ್ಳಬೇಕು.

01:44 ನಂತರ, ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು.
01:50 ಅವಳು ಸ್ತನದ ಮೇಲೆ ತನ್ನ ಬ್ರಾ ಅಥವಾ ಕುಪ್ಪಸದ ಒತ್ತಡವು ಬಾರದಂತೆ ನೋಡಿಕೊಳ್ಳಬೇಕು.
01:55 ನಂತರ, ತಾಯಿಯು ನೆಲದ ಮೇಲೆ ಅಥವಾ ಹಾಸಿಗೆಯ ಮೇಲೆ ಆರಾಮವಾಗಿ ಒರಗಿಕೊಳ್ಳಬೇಕು.
02:01 ಅವಳ ತಲೆ, ಕುತ್ತಿಗೆ ಮತ್ತು ಬೆನ್ನಿನ ಮೇಲ್ಭಾಗವು ದಿಂಬುಗಳ ಆಸರೆಯನ್ನು ಪಡೆದಿರಬೇಕು.
02:07 ಈಗ ತಾಯಿಯು ಸಿದ್ಧವಾಗಿದ್ದಾಳೆ. ಹೀಗಾಗಿ, ಮಗುವನ್ನು ಸರಿಯಾಗಿ ಹೇಗೆ ಹಿಡಿದುಕೊಳ್ಳುವುದು ಎಂಬುದನ್ನು ನಾವು ತಿಳಿಯೋಣ.
02:13 ತಾಯಿಯು ತಾನು ಹಾಲುಣಿಸುವ ಸ್ತನದ ಬದಿಯ ಕೈಯಿಂದ ತನ್ನ ಮಗುವಿನ ಶರೀರವನ್ನು ಹಿಡಿದಿರಬೇಕು.
02:20 ತನ್ನ ಇನ್ನೊಂದು ಕೈ ಹೆಬ್ಬೆರಳು ಮತ್ತು ಬೆರಳುಗಳಿಂದ ಅವಳು ತನ್ನ ಮಗುವಿನ ತಲೆಯ ಕೆಳಭಾಗವನ್ನು ಹಿಡಿಯಬೇಕು.
02:27 ಈ ಚಿತ್ರದಲ್ಲಿರುವ ತಾಯಿಯು, ಮಗುವಿಗೆ ತನ್ನ ಬಲಗಡೆಯ ಸ್ತನದಿಂದ ಮೊಲೆಯೂಡಿಸುತ್ತಾಳೆ.
02:32 ಆದ್ದರಿಂದ, ಮಗುವನ್ನು ಹಿಡಿದುಕೊಳ್ಳಲು ಅವಳು ತನ್ನ ಬಲಗೈಯನ್ನು ಬಳಸುತ್ತಿದ್ದಾಳೆ.
02:38 ಅವಳು ಮಗುವಿನ ತಲೆಯ ಕೆಳಭಾಗವನ್ನು ಹಿಡಿದುಕೊಳ್ಳಲು, ತನ್ನ ಎಡಗೈಯ ಹೆಬ್ಬೆರಳು ಮತ್ತು ಬೆರಳುಗಳನ್ನು ಬಳಸುತ್ತಿದ್ದಾಳೆ.
02:46 ನಂತರ, ಮಗುವಿನ ತಲೆಯನ್ನು ಹಿಡಿದುಕೊಳ್ಳಲು, ತಾಯಿಯ ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ನಾವು ನೋಡೋಣ.
02:54 ತಾಯಿಯ ಹೆಬ್ಬೆರಳು, ಮಗುವಿನ ಒಂದು ಕಿವಿಯ ಹಿಂದೆ ಮತ್ತು ಉಳಿದ ಬೆರಳುಗಳು ಇನ್ನೊಂದು ಕಿವಿಯ ಹಿಂದೆ ಇರಬೇಕು.
03:02 ಅವಳು ಬೆರಳುಗಳನ್ನು ಅಥವಾ ಹೆಬ್ಬೆರಳನ್ನು, ಕಿವಿಯ ಹಿಂದಿನಿಂದ ಮಗುವಿನ ಕುತ್ತಿಗೆಗೆ ಸರಿಸಬಾರದು.
03:08 ಮಗುವಿನ ತಲೆಯ ಹಿಂಭಾಗದಲ್ಲಿ ಅವಳು ತನ್ನ ಕೈಯಿಂದ ಒತ್ತಡವನ್ನು ಹಾಕಬಾರದು. ಇದರಿಂದ, ಹಾಲುಣಿಸುವಾಗ ಮಗು ಆರಾಮವಾಗಿ ಇರುವುದು.
03:20 ನಂತರ, ಮಗುವನ್ನು ಸರಿಯಾಗಿ ಹೇಗೆ ಹಿಡಿದುಕೊಳ್ಳುವುದು ಎಂಬುದನ್ನು ಕಲಿಯೋಣ.
03:25 ಮಗುವಿನ ಹೊಟ್ಟೆಯು ತಾಯಿಯ ಹೊಟ್ಟೆಯ ಮೇಲೆ ಇರುವಂತೆ, ಮಗುವನ್ನು ತಾಯಿಯ ಶರೀರದ ಮೇಲೆ ಇರಿಸಬೇಕು.
03:32 ಮತ್ತು ಮಗುವಿನ ತಲೆಯು ತಾಯಿಯ ಎದೆಯ ಹತ್ತಿರ ಇರಬೇಕು.
03:38 ಮಗು ಮತ್ತು ತಾಯಿಯ ಎದೆಯ ನಡುವಿನ ಅಂತರವು ಕಡಿಮೆ ಇದ್ದಷ್ಟು, ಸ್ತನವನ್ನು ತಲುಪಲು ಮಗುವಿಗೆ ಸಹಾಯವಾಗುತ್ತದೆ.
03:44 ಮತ್ತು, ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು ಮಗುವಿಗೆ ಸುಲಭವಾಗುತ್ತದೆ.
03:49 ಎರಡನೆಯದಾಗಿ, ಮಗುವನ್ನು ಹಿಡಿದುಕೊಂಡಿರುವ ದಿಕ್ಕು ಅತಿ ಮುಖ್ಯವಾಗಿದೆ.
03:56 ನಾವು ಆಹಾರ ಸೇವಿಸುವಾಗ ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಇರುವುದನ್ನು ನೀವು ಗಮನಿಸಿರಬಹುದು.
04:05 ಹೀಗೆಯೇ, ಸ್ತನ್ಯಪಾನ ಮಾಡಿಸುವಾಗ ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ದಿಕ್ಕಿನಲ್ಲಿರಬೇಕು.
04:14 ಇದರಿಂದ ಮಗುವಿಗೆ ಹಾಲನ್ನು ನುಂಗಲು ಸುಲಭವಾಗುತ್ತದೆ.
04:19 ನೆನಪಿಡಿ, ಮಗುವಿನ ಶರೀರದ ಮುಂದಿನ ಭಾಗವು ತಾಯಿಯ ಶರೀರದ ಮುಂದಿನ ಭಾಗದ ಮೇಲೆ ಇರುವವರೆಗೆ ಮಗುವನ್ನು ತಾಯಿಯ ಶರೀರದ ಮೇಲೆ ಯಾವುದೇ ದಿಕ್ಕಿನಲ್ಲಿ ಇರಿಸಬಹುದು.
04:32 ಮತ್ತು, ಮಗುವು ತಾಯಿಯ ಸ್ತನವನ್ನು ಸುಲಭವಾಗಿ ತಲುಪಬಹುದು.
04:38 ಮಗುವಿನ ದೇಹವನ್ನು ಹೊಂದಿಸುವ ಬಗ್ಗೆ, ಈಗ ನಾವು ಮೂರನೆಯ ಅಂಶಕ್ಕೆ ಬರುತ್ತೇವೆ.
04:42 ತಾಯಿಯು ತನ್ನ ಮಗುವಿನ ಪೂರ್ತಿ ಶರೀರವನ್ನು ಹಿಡಿದುಕೊಳ್ಳಬೇಕು.
04:47 ಇಲ್ಲದಿದ್ದರೆ, ಮಗುವು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಲು (attach) ಬಹಳ ಪ್ರಯತ್ನಿಸಬೇಕಾಗುವುದು.
04:54 ನಂತರ, ನಾವು ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ.
04:59 ಶಿಶುವಿನ ಮೂಗು ಹಾಗೂ ತಾಯಿಯ ಮೊಲೆಯ ತೊಟ್ಟು ಯಾವಾಗಲೂ ಒಂದೇ ಸಾಲಿನಲ್ಲಿರಬೇಕು.
05:04 ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರದಲ್ಲಿರಬೇಕು.
05:09 ಲ್ಯಾಚಿಂಗ್ ಸಮಯದಲ್ಲಿ ಶಿಶು, ಅರಿಯೋಲಾದ ಕೆಳಭಾಗವನ್ನು ಹೆಚ್ಚಾಗಿ ತೆಗೆದುಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ.
05:16 ಹೀಗಾಗಿ, ಹೆಚ್ಚು ಹಾಲನ್ನು ಕುಡಿಯಲು ಕೆಳದವಡೆಯನ್ನು ಬಳಸುತ್ತದೆ.
05:21 ದಯವಿಟ್ಟು ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ.
05:27 ಈಗ, ಮಗು 'ಲೇಡ್-ಬ್ಯಾಕ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ ಲ್ಯಾಚ್ ಮಾಡಿಕೊಳ್ಳಲು ಸಿದ್ಧವಾಗಿದೆ.
05:34 ಈ ಹಿಡಿತದಲ್ಲಿ, ಮಗು ತಾಯಿಯ ಸ್ತನಕ್ಕೆ ಸಹಜವಾಗಿ, ಆಳವಾಗಿ ಜೋಡಿಸಿಕೊಳ್ಳಬಹುದು.
05:40 ಸ್ತನಕ್ಕೆ ಮಗುವಿನ ಸರಿಯಾದ ಜೋಡಣೆಯ ಬಗ್ಗೆ, ಇದೇ ಸರಣಿಯ ಇನ್ನೊಂದು ವೀಡಿಯೋದಲ್ಲಿ ವಿವರಿಸಲಾಗಿದೆ.
05:49 ಮಗು ತಾಯಿಯ ಸ್ತನಕ್ಕೆ ಸರಿಯಾಗಿ ಜೋಡಿಸಿಕೊಂಡ ತಕ್ಷಣ, ತಾಯಿಯು ಮಗುವಿನ ತಲೆಯಿಂದ ತನ್ನ ಕೈಯನ್ನು ಹಿಂತೆಗೆದುಕೊಳ್ಳಬಹುದು ಮತ್ತು ತನ್ನ ಎರಡೂ ಕೈಗಳಿಂದ ಮಗುವನ್ನು ಹಿಡಿದುಕೊಳ್ಳಬಹುದು.
06:02 ಈ ವಿಶ್ರಾಂತಿಯ ಸ್ಥಿತಿಯಲ್ಲಿ, ತಾಯಿಯು ಒರಗಿಕೊಂಡು ಹಾಲುಣಿಸಬೇಕು.
06:07 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
06:11 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Debosmita, Sandhya.np14