Inkscape/C2/Align-and-distribute-objects/Kannada
From Script | Spoken-Tutorial
Revision as of 20:07, 19 December 2018 by Sandhya.np14 (Talk | contribs)
Time | Narration |
00:01 | ನಮಸ್ಕಾರ, ಅಲೈನ್ ಅಂಡ್ ಡಿಸ್ತ್ರಿಬ್ಯುಟ್ ಆಬ್ಜೆಕ್ಟ್ಸ್ ಎನ್ನುವ ಇಂಕ್-ಸ್ಕೇಪ್-ನ ಸ್ಪೋಕನ್ ಟ್ಯುಟೋರಿಯಲ್-ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು: |
00:09 | ವಿವಿಧ ಆಬ್ಜೆಕ್ಟ್ ಗಳನ್ನು ಒಗ್ಗೂಡಿಸುವುದು ಮತ್ತು ಹಂಚುವುದು |
00:12 | ಆಬ್ಜೆಕ್ಟ್ ಗಳನ್ನು ಸಾಲು ಮತ್ತು ಸ್ತಂಭಗಳಲ್ಲಿ ಜೋಡಿಸುವುದು. |
00:16 | ಆಬ್ಜೆಕ್ಟ್ ಗಳ ನಡುವೆ ಅಂತರ ಏರ್ಪಡಿಸುವುದು ಮತ್ತು ಟೈಲ್ ಪ್ಯಾಟರ್ನ್ ಅನ್ನು ರಚಿಸುವುದು. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ. |
00:31 | ಡ್ಯಾಶ್ ಹೋಮ್ ಗೆ ಹೋಗಿ, ಇಂಕ್ ಸ್ಕೇಪ್ ಎಂದು ಟೈಪ್ ಮಾಡಿ. |
00:35 | ಲೋಗೋ ಅನ್ನು ಕ್ಲಿಕ್ ಮಾಡಿ. |
00:37 | ಈ ಮೊದಲು ರಚಿಸಿದ ಇಂಕ್ ಸ್ಕೇಪ್ ಡಾಕ್ಯುಮೆಂಟ್ ಅನ್ನು ಓಪನ್ ಮಾಡುತ್ತೇನೆ. |
00:44 | ಐದು ವಿವಿಧ ಆಕಾರಗಳು, ಕ್ಯಾನ್ವಾಸ್ ನ ಮೇಲಿರುವುದನ್ನು ನಾವು ನೋಡಬಹುದು. |
00:50 | ನಿಮ್ಮ ಇಂಕ್ ಸ್ಕೇಪ್ ಕ್ಯಾನ್ವಾಸ್ ಮೇಲೆ, ಐದು ಆಕಾರಗಳನ್ನು ರಚಿಸಿ ಮತ್ತು ಇಲ್ಲಿ ತೋರಿಸಿದಂತೆ ಇಡಿ. |
00:55 | ಈಗ, ಆಬ್ಜೆಕ್ಟ್ ಗಳನ್ನು ಸಾಲಾಗಿ ಇಡೋಣ. |
00:59 | ಆಬ್ಜೆಕ್ಟ್ ಮೆನುವಿನಲ್ಲಿ, ಅಲೈನ್ ಎಂಡ್ ಡಿಸ್ಟ್ರಿಬ್ಯೂಟ್ ಎಂಬುದನ್ನು ಕ್ಲಿಕ್ ಮಾಡಿ. |
01:04 | ಅಲೈನ್ ಎಂಡ್ ಡಿಸ್ಟ್ರಿಬ್ಯೂಟ್ ಡೈಲಾಗ್ ಬಾಕ್ಸ್ ಇಂಟರ್ಫೇಸ್ ನ ಬಲಭಾಗದಲ್ಲಿ ಓಪನ್ ಆಗುತ್ತದೆ. |
01:09 | ಎರಡು ರೀತಿಯ ಪೊಸಿಶನಿಂಗ್ ಗಳು ಇಲ್ಲಿ ಲಭ್ಯವಿದೆ. |
01:12 | ಅಲೈನ್ ಎಂದರೆ, ಆಬ್ಜೆಕ್ಟ್ ಗಳ ಕೇಂದ್ರ ಅಥವಾ ಅಂಚುಗಳು ಪರಸ್ಪರ ಸಾಲಾಗಿಡಲ್ಪಡುತ್ತವೆ. |
01:18 | ಡಿಸ್ಟ್ರಿಬ್ಯೂಟ್ ಎಂದರೆ ಆಬ್ಜೆಕ್ಟ್ ಗಳನ್ನು ಅವುಗಳ ಕೇಂದ್ರ ಅಥವಾ ಅಂಚುಗಳನ್ನು ಆಧರಿಸಿ, ಅಡ್ಡಲಾಗಿ ಅಥವಾ ಲಂಬವಾಗಿ ವಿತರಿಸಲಾಗುತ್ತದೆ. |
01:29 | ನಾವು ಈ ಆಯ್ಕೆಗಳನ್ನು ಮತ್ತು ಅವುಗಳ ಉಪ-ಆಯ್ಕೆಗಳನ್ನು ಬಳಸಿ ವಿವಿಧ ರೀತಿಯಲ್ಲಿ ವಸ್ತುಗಳನ್ನು ಜೋಡಿಸಬಹುದು. |
01:36 | ಇಲ್ಲಿ ಮತ್ತೊಂದು ಮುಖ್ಯ ವೈಶಿಷ್ಟ್ಯವಿದೆ: ರಿಲೇಟಿವ್ ಟು |
01:39 | ಇದನ್ನು ಬಳಸಿ, ವಸ್ತುಗಳನ್ನು ಬೇರೊಂದು ವಸ್ತುವನ್ನು ಆಧಾರವಾಗಿಟ್ಟು ಜೋಡಿಸಬಹುದು. |
01:44 | ಇಲ್ಲಿರುವ ಆಯ್ಕೆಗಳನ್ನು ನೋಡಲು, ಡ್ರಾಪ್ ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ. |
01:47 | ಇಲ್ಲಿರುವ ಆಯ್ಕೆಗಳು ಹೀಗಿವೆ – ಲಾಸ್ಟ್ ಸೆಲೆಕ್ಟೆಡ್, ಫರ್ಸ್ಟ್ ಸೆಲೆಕ್ಟೆಡ್, ಬಿಗ್ಗೆಸ್ಟ್ ಆಬ್ಜೆಕ್ಟ್, ಸ್ಮಾಲೆಸ್ಟ್ ಆಬ್ಜೆಕ್ಟ್, ಪೇಜ್, ಡ್ರಾಯಿಂಗ್ ಮತ್ತು ಸೆಲೆಕ್ಷನ್ |
02:00 | ಪೂರ್ವನಿಯೋಜಿತವಾಗಿ, ವಸ್ತುಗಳು, ಪೇಜ್ ಗೆ ಅನುಗುಣವಾಗಿ ಜೋಡಿಸಲ್ಪಟ್ಟಿರುತ್ತವೆ. |
02:04 | ಹಾಗಾಗಿ, ಆಯ್ದ ಆಬ್ಜೆಕ್ಟ್ ಗಳು, ನಿಮ್ಮ ಪೇಜ್ ನ ಆಯಾಮಗಳ ಪ್ರಕಾರ, 'ಅಲೈನ್ ಮತ್ತು ಡಿಸ್ಟ್ರಿಬ್ಯೂಟ್' ಆಯ್ಕೆಗೆ ಪ್ರತಿಕ್ರಿಯಿಸುತ್ತವೆ. |
02:13 | ಕ್ಯಾನ್ವಾಸ್ ಮೇಲೆ ಇರುವ ಎಲ್ಲ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡಲು ctrl ಮತ್ತು A ಕೀಗಳನ್ನು ಒತ್ತಿ. |
02:17 | ಮೊದಲ ಐದು ಐಕಾನ್ ಗಳು ಲಂಬ ಸಾಲಿನಲ್ಲಿ ಜೋಡಿಸುತ್ತದೆ. |
02:22 | ಮೊದಲ ಐಕಾನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |
02:25 | ಟೂಲ್ ಟಿಪ್ ಹೇಳುವಂತೆ, ಆಬ್ಜೆಕ್ಟ್ ಗಳ ಬಲ ಭಾಗದ ಅಂಚುಗಳು, ಆಂಕರ್ (anchor) ನ ಎಡ ಅಂಚಿಗೆ ಪ್ರತಿಯಾಗಿ ಜೋಡಿಸಲ್ಪಟ್ಟಿರುತ್ತವೆ. |
02:32 | ರಿಲೇಟಿವ್ ಟು ಎಂಬ ಆಯ್ಕೆ ಪೇಜ್ ಆಗಿರುವುದರಿಂದ, ಇಲ್ಲಿ ಆಂಕರ್ ಪಾಯಿಂಟ್ ಪೇಜ್ ಆಗಿರುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ. |
02:38 | ಈಗ ಎರಡೂ ಆಬ್ಜೆಕ್ಟ್ ಗಳೂ ಒಂದರ ಮೇಲೊಂದು ಇವೆ. |
02:43 | ಹಿಂದಿನ ವ್ಯವಸ್ಥೆಯಲ್ಲಿದ್ದ ಆಬ್ಜೆಕ್ಟ್ ಗಳ ನಡುವಿನ ಅಂತರದ ಆಧಾರದ ಮೇಲೆ ಅಬ್ಜೆಕ್ಟ್ ಗಳು ಒಂದರ ಮೇಲೊಂದು ವ್ಯಾಪಿಸುತ್ತವೆ. |
02:48 | ಇದನ್ನು ಸರಿಪಡಿಸಲು, ಡಿಸ್ಟ್ರಿಬ್ಯೂಟ್ ನ ಕೆಳಗಿರುವ, ರಿಮೂವ್ ಒವರ್ ಲ್ಯಾಪ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. |
02:56 | ಈಗ ಇದು ಸರಿಯಾಗಿದೆ. |
02:58 | ಆಬ್ಜೆಕ್ಟ್ ಗಳ ನಡುವಿನ ಅಂತರವನ್ನು ಅಡ್ಡ ಮತ್ತು ಲಂಬವಾಗಿ ಹೊಂದಿಸಲು, H ಮತ್ತು V ಆಯ್ಕೆಗಳನ್ನು ಬಳಸಿ. |
03:06 | ಈಗ, ಅಲೈನ್ ನ ಕೆಳಗಿರುವ ಆಯ್ಕೆಗಳನ್ನು ಕ್ಲಿಕ್ ಮಾಡಿ, ಮತ್ತು ಆಬ್ಜೆಕ್ಟ್ ಗಳು ಹೇಗೆ ತಾವಾಗಿಯೇ ಹೊಂದಿಕೊಳ್ಳುತ್ತವೆ ಎಂಬುದನ್ನು ಗಮನಿಸಿ. |
03:14 | undo ಆಯ್ಕೆಯನ್ನು ಬಳಸಿ, ಇದನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. |
03:21 | ಟೂಲ್ ಟಿಪ್ ಗಳು ಅಲೈನ್ಮೆಂಟ್ ಗಳನ್ನು ಅರಿಯುವಲ್ಲಿ ಸಹಾಯಕವಾಗಿವೆ. |
03:28 | ಕೊನೆಯ ಆಯ್ಕೆಯು ಕೇವಲ ಅಕ್ಷರಗಳಿಗೆ ಮಾತ್ರ ಪರಿಣಾಮ ಬೀರುತ್ತವೆ. ಹಾಗಾಗಿ ಇದನ್ನು ಬೇರೆ ಟ್ಯುಟೋರಿಯಲ್ ನಲ್ಲಿ ಕಲಿಯೋಣ. |
03:35 | ನಂತರ, ಆಬ್ಜೆಕ್ಟ್ ಗಳ ನಡುವಿನ ಅಂತರವನ್ನು ಸರಿಪಡಿಸಲು ಡಿಸ್ಟ್ರಿಬ್ಯೂಟ್ ಆಯ್ಕೆಯನ್ನು ಬಳಸಿ. |
03:40 | ವಸ್ತುಗಳು ಲಂಬವಾದ ದಿಕ್ಕಿನಲ್ಲಿ ಇರುವುದರಿಂದ, ನಾವು ಡಿಸ್ಟ್ರಿಬ್ಯೂಟ್ ಆಯ್ಕೆಯ ಕೆಳಗಿರುವ ಕೊನೆಯ ನಾಲ್ಕು ಐಕಾನ್ ಗಳನ್ನು ಬಳಸಬೇಕು. |
03:48 | ಅವುಗಳನ್ನು ಕೇಂದ್ರದ ಆಧಾರವಾಗಿ ಮೊದಲು ಜೋಡಿಸುತ್ತೇನೆ. |
03:51 | ಈಗ, ಡಿಸ್ಟ್ರಿಬ್ಯೂಟ್ ನ ಕೆಳಗಿರುವ ಆಯ್ಕೆಗಳನ್ನು ಕ್ಲಿಕ್ ಮಾಡಿ ಮತ್ತು, ಆಬ್ಜೆಕ್ಟ್ ಗಳು ಹೇಗೆ ತಾವಾಗಿಯೇ ಹೊಂದಿಕೊಳ್ಳುತ್ತವೆ ಎಂಬುದನ್ನು ಗಮನಿಸಿ. |
03:58 | ಪುನಃ, undo ಆಯ್ಕೆಯನ್ನು ಬಳಸಿ, ಇದನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. |
04:07 | ಟೂಲ್ ಟಿಪ್ ಗಳನ್ನು ಬಳಸಿ ಅಲೈನ್ಮೆಂಟ್ ಗಳನ್ನು ಇನ್ನೂ ಸರಿಯಾಗಿ ಅರಿಯಬಹುದು. |
04:13 | ರಿಲೇಟಿವ್ ಟು ನ ಕೆಳಗೆ, ಟ್ರೀಟ್ ಸೆಲೆಕ್ಷನ್ ಆಸ್ ಗ್ರುಪ್ ಎಂಬ ಆಯ್ಕೆ ಇರುವುದನ್ನು ಗಮನಿಸಿ. |
04:19 | ಇದರಿಂದ, ಆಬ್ಜೆಕ್ಟ್ ಗಳೆಲ್ಲವೂ ಒಂದೇ ಗುಂಪಿನಂತೆ ಪರಿಗಣಿಸಲ್ಪಡುತ್ತವೆ. |
04:22 | ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
04:24 | ಈಗ, ಒಂದರ ನಂತರ ಇನ್ನೊಂದರಂತೆ ಐಕಾನ್ ಗಳನ್ನು ಕ್ಲಿಕ್ ಮಾಡಿ ಮತ್ತು ಆಬ್ಜೆಕ್ಟ್ ಗಳು ಪ್ರತ್ಯೇಕವಾಗಿ ಪರಿಗಣಿಸಲ್ಪಡುವ ಬದಲು ಗುಂಪಾಗಿ ಪರಿಗಣಿಸಲ್ಪಡುವುದನ್ನು ಗಮನಿಸಬಹುದು. |
04:34 | ಈ ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ. |
04:36 | ಈಗ, ಆಬ್ಜೆಕ್ಟ್ ಗಳು ಪ್ರತ್ಯೇಕವಾಗಿ ಪರಿಗಣಿಸಲ್ಪಡುತ್ತವೆ. |
04:40 | ನಂತರ, ಲಾಸ್ಟ್ ಸೆಲೆಕ್ಟೆಡ್ ನಂತೆ ಆಬ್ಜೆಕ್ಟ್ ಗಳನ್ನು ಜೋಡಿಸೋಣ. |
04:45 | ರಿಲೇಟಿವ್ ಟು ಎಂಬ ಆಯ್ಕೆಯನ್ನು ಲಾಸ್ಟ್ ಸೆಲ್ಎಕ್ಟೆಡ್ ಅಂದು ಬದಲಾಯಿಸಿ. |
04:49 | ಹಾಗಾಗಿ, ಎಲ್ಲ ಆಬ್ಜೆಕ್ಟ್ ಗಳನ್ನು ಕ್ಯಾನ್ವಾಸ್ ನ ಒಳಗೆ ತನ್ನಿ ಮತ್ತು ಅವುಗಳನ್ನು ಹರಡಿ. |
05:01 | ಎಲ್ಲ ಆಬ್ಜೆಕ್ಟ್ ಗಳನ್ನು ಒಂದೊಂದಾಗಿ ಆಯ್ಕೆ ಮಾಡಿ. ವೃತ್ತವನ್ನು ಕೊನೆಯಲ್ಲಿ ಆಯ್ಕೆ ಮಾಡಿ. |
05:06 | ಮೊದಲಿನಂತೆ, ಐಕಾನ್ ಗಳನ್ನು ಒಂದರ ನಂತರ ಒಂದನ್ನು ಕ್ಲಿಕ್ ಮಾಡಿ. |
05:10 | ಕೊನೆಗೆ ಆಯ್ಕೆ ಮಾಡಿರುವುದು ವೃತ್ತವಾಗಿರುವುದರಿಂದ, ಆಬ್ಜೆಕ್ಟ್ ಗಳು ವೃತ್ತದಂತೆ ವ್ಯವಸ್ಥಿತವಾಗಿರುವುದನ್ನು ನೀವು ಗಮನಿಸಬಹುದು. |
05:19 | ಹೀಗೆಯೇ, ನೀವು ರಿಲೇಟಿವ್ ಟು ನಲ್ಲಿರುವ ಎಲ್ಲ ಆಯ್ಕೆಗಳನ್ನು ಪ್ರಯತ್ನಿಸಿ, ಆಬ್ಜೆಕ್ಟ್ ಗಳ ವ್ಯವಸ್ಥೆಯನ್ನು ಗಮನಿಸಬಹುದು. |
05:26 | ಅಲೈನ್ ಅಂಡ್ ಡಿಸ್ಟ್ರಿಬ್ಯೂಟ್ ಡೈಲಾಗ್ ಬಾಕ್ಸ್ ನ ಉಳಿದ ಆಯ್ಕೆಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ. |
05:32 | ಹಾಗಾಗಿ, ಈ ಡೈಲಾಗ್ ಬಾಕ್ಸ್ ಅನ್ನು ಈಗ ಕ್ಲೋಸ್ ಮಾಡೋಣ. |
05:37 | ನಂತರ, ಆಬ್ಜೆಕ್ಟ್ ಗಳನ್ನು ಲಂಬ ಸಾಲು ಮತ್ತು ಅಡ್ಡ ಸಾಲುಗಳಲ್ಲಿ ಜೋಡಿಸುವುದು ಹೇಗೆಂದು ಕಲಿಯೋಣ. |
05:41 | ಆಬ್ಜೆಕ್ಟ್ ಮೆನುವಿನಲ್ಲಿ ರೋಸ್ ಎಂಡ್ ಕಾಲಮ್ಸ್ ಎಂಬುದನ್ನು ಕ್ಲಿಕ್ ಮಾಡಿ. |
05:46 | ರೋಸ್ ಎಂಡ್ ಕಾಲಮ್ಸ್ ಎಂಬ ಡೈಲಾಗ್ ಬಾಕ್ಸ್ ಓಪನ್ ಆಗುತ್ತದೆ. |
05:50 | ಈ ಆಯ್ಕೆಯನ್ನು ಬಳಸಿ, ಆಬ್ಜೆಕ್ಟ್ ಗಳನ್ನು ಲಂಬ ಮತ್ತು ಅಡ್ಡ ಸಾಲುಗಳಲ್ಲಿ, ಆವಶ್ಯಕ ಅಂತರದೊಂದಿಗೆ ಜೋಡಿಸಬಹುದು. |
05:57 | ಕ್ಯಾನ್ವಾಸ್ ನ ಮೇಲೆ ಆಬ್ಬ್ಜೆಕ್ಟ್ ಗಳನ್ನು ಹರಡಿ. |
06:01 | ಈಗ, ಈ ಆಬ್ಜೆಕ್ಟ್ ಗಳನ್ನು ಎರಡು ಅಡ್ಡ ಸಾಲು ಮತ್ತು ಮೂರು ಲಂಬ ಸಾಲುಗಳಲ್ಲಿ ಜೋಡಿಸೋಣ. |
06:05 | ಹಾಗಾಗಿ, ರೋ ಪ್ಯಾರಾಮೀಟರ್ ಅನ್ನು ಎರಡು ಎಂದು ಬದಲಾಯಿಸಿ. |
06:09 | ರೋ ಪ್ಯಾರಾಮೀಟರ್ ಬದಲಾದಾಗ ಕಾಲಮ್ ಪ್ಯಾರಾಮೀಟರ್ ಕೂಡಾ ಬದಲಾಗುವುದನ್ನು ನೀವು ಗಮನಿಸಬಹುದು. |
06:15 | ಬಲ ಭಾಗದಲ್ಲಿ ಕೆಳಗಿರುವ ಅರೇಂಜ್ ಎಂಬುದನ್ನು ಕ್ಲಿಕ್ ಮಾಡಿ. |
06:19 | ಅಲೈನ್ ಎಂಬ ಆಯ್ಕೆಯಿಂದ ಆಬ್ಜೆಕ್ಟ್ ಗಳನ್ನು ಬಲಕ್ಕೆ, ಕೇಂದ್ರದಲ್ಲಿ ಮತ್ತು ಎಡಕ್ಕೆ ಅಲೈನ್ ಮಾಡಬಹುದು. |
06:29 | ಒಂದೊಂದಾಗಿ ಬಳಸಿ, ಬದಲಾವಣೆಗಳನ್ನು ಗಮನಿಸಿ. |
06:37 | ರೋ ಮತ್ತು ಕಾಲಮ್ ಗಳಲ್ಲಿರುವ, ಆಬ್ಜೆಕ್ಟ್ ಗಳ ನಡುವಿನ ಅಂತರವನ್ನು , ಸೆಟ್ ಸ್ಪೇಸಿಂಗ್ ಎಂಬ ಆಯ್ಕೆಯನ್ನು ಬಳಸಿ, ನಾವು ಬದಲಾಯಿಸಬಹುದು. |
06:45 | ಈಗ, ರೋ ಮತ್ತು ಕಾಲಮ್ ನ ಸ್ಪೇಸ್ ಪ್ಯಾರಾಮೀಟರ್ ಅನ್ನು ಐದು ಎಂದು ಬದಲಾಯಿಸಿ. |
06:50 | ಅರೇಂಜ್ ಬಟನ್ ಅನ್ನು ಕ್ಲಿಕ್ ಮಾಡಿ. |
06:53 | ಆಬ್ಜೆಕ್ಟ್ ಗಳ ನಡುವಿನ ಅಂತರವನ್ನು ಗಮನಿಸಿ. |
06:56 | ಈಗ, ಅಲೈನ್ ಎಂಡ್ ಡಿಸ್ಟ್ರಿಬ್ಯೂಟ್ ಅನ್ನು ಬಳಸಿ, ಮಾದರಿ ರಚಿಸುವುದನ್ನು ನಾನು ತೋರಿಸುತ್ತೇನೆ. |
07:01 | ಇಲ್ಲಿ, ನಾಲ್ಕು ವಿವಿಧ ಗಾತ್ರ ಮತ್ತು ಬಣ್ಣಗಳ ಚೌಕಗಳಿರುವ ಹೊಸ ಇಂಕ್ ಸ್ಕೇಪ್ ಫೈಲ್ ಇದೆ. |
07:06 | ಎಲ್ಲ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡಿ, ಡೈಮಂಡ್ ಆಕಾರದಲ್ಲಿ ಕಾಣುವಂತೆ ತಿರುಗಿಸಿ. |
07:12 | ಅಲೈನ್ ಎಂಡ್ ಡಿಸ್ಟ್ರಿಬ್ಯೂಟ್ ಡೈಲಾಗ್ ಬಾಕ್ಸ್ ಅನ್ನು ಒಪನ್ ಮಾಡಿ. |
07:15 | ಸೆಂಟರ್ ಆನ್ ವರ್ಟಿಕಲ್ ಆಕ್ಸಿಸ್ ಎಂಬುದನ್ನು ಕ್ಲಿಕ್ ಮಾಡಿ. |
07:18 | ಸೆಂಟರ್ ಆನ್ ಹಾರಿಜಾಂಟಲ್(horizontal) ಆಕ್ಸಿಸ್ ಎಂಬುದನ್ನು ಕ್ಲಿಕ್ ಮಾಡಿ. |
07:22 | ಕ್ಯಾನ್ವಾಸ್ ನ ಮೇಲೆ ಟೈಲ್ ಮಾದರಿಯು ರೂಪುಗೊಂಡಿದೆ. |
07:25 | ಈ ಆಯ್ಕೆಗಳನ್ನು ಸೃಜನಾತ್ಮಕವಾಗಿ ಬಳಸಿ, ನಾವು ಅನೇಕ ವಿಶಿಷ್ಟ ಮಾದರಿಗಳನ್ನು ರಚಿಸಬಹುದು. |
07:30 | ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು : |
07:34 | ವಿವಿಧ ಆಬ್ಜೆಕ್ಟ್ ಗಳನ್ನು ಜೋಡಿಸುವುದು ಮತ್ತು ಹರಡುವುದು. |
07:37 | ಆಬ್ಜೆಕ್ಟ್ ಗಳನ್ನು ರೋ ಮತ್ತು ಕಾಲಮ್ ನಲ್ಲಿ ಜೋಡಿಸುವುದು. |
07:40 | ಅಬ್ಜೆಕ್ಟ್ ಗಳ ನಡುವಿನ ಅಂತರವನ್ನು ಬದಲಾಯಿಸುವುದು ಮತ್ತು ಟೈಲ್ ಮಾದರಿಯನ್ನು ರೂಪಿಸುವುದು. |
07:45 | ನಿಮಗಾಗಿ ಎರಡು ಅಸೈನ್ಮೆಂಟ್ ಗಳು ಇಲ್ಲಿವೆ. |
07:47 | ಐದು ವೃತ್ತಗಳನ್ನು ಈ ಕೆಳಗಿನ ಅಯಾಮಗಳಂತೆ ರಚಿಸಿ. |
07:54 | ಎಲ್ಲವನ್ನೂ ಕ್ಯಾನ್ವಾಸ್ ನ ಮೇಲೆ ಹರಡಿ ಮತ್ತು ಆಯ್ಕೆ ಮಾಡಿ. |
07:59 | ಅಲೈನ್ ಎಂಡ್ ಡಿಸ್ಟ್ರಿಬ್ಯೂಟ್ ನಲ್ಲಿ, ರಿಲೇಟಿವ್ ಟು ನ ಬದಲು, ಬಿಗ್ಗೆಸ್ಟ್ ಎಂಬುದನ್ನು ಆಯ್ಕೆ ಮಾಡಿ. |
08:04 | ಅಲೈನ್ ಆನ್ ಲೆಫ್ಟ್ ಎಡ್ಜಸ್ ಅನ್ನು ಕ್ಲಿಕ್ ಮಾಡಿ. |
08:06 | ಸೆಂಟರ್ ಆನ್ ಹಾರಿಜಾಂಟಲ್(horizontal) ಅಕ್ಸಿಸ್ ಅನ್ನು ಕ್ಲಿಕ್ ಮಾಡಿ. |
08:10 | ನೀಲಿ ಬಣ್ಣದ ನೂರು ನೂರು ಪಿಕ್ಸೆಲ್ ಗಾತ್ರದ ಆರು ಚೌಕಗಳನ್ನು ರಚಿಸಿ. |
08:17 | ಎಲ್ಲ ಚೌಕಗಳನ್ನು ಆಯ್ಕೆ ಮಾಡಿ, ರೋಸ್ ಎಂಡ್ ಕಾಲಮ್ಸ್ ಅನ್ನು ಒಪನ್ ಮಾಡಿ. |
08:21 | ಅವುಗಳನ್ನು ಎರಡು ರೋ ಮತ್ತು 3 ಕಾಲಮ್ ಗಳಲ್ಲಿ ಜೋಡಿಸಿ. |
08:25 | ಎರಡೂ ಸ್ಪೇಸ್ ಪ್ಯಾರಾಮೀಟರ್ಗಳನ್ನು ಇಪ್ಪತ್ತು ಎಂದು ಬದಲಾಯಿಸಿ. |
08:29 | ನಿಮ್ಮ ಅಸೈನ್ಮೆಂಟ್ ಮುಗಿದ ನಂತರ ಹೀಗೆ ಕಾಣಬೇಕು. |
08:35 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
08:43 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
08:51 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
08:54 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
09:03 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
09:07 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
09:09 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ರಾಕೇಶ. ಧನ್ಯವಾದಗಳು. |