Inkscape/C2/Align-and-distribute-objects/Kannada

From Script | Spoken-Tutorial
Jump to: navigation, search
Time Narration
00:01 ನಮಸ್ಕಾರ, ಅಲೈನ್ ಅಂಡ್ ಡಿಸ್ತ್ರಿಬ್ಯುಟ್ ಆಬ್ಜೆಕ್ಟ್ಸ್ ಎನ್ನುವ ಇಂಕ್-ಸ್ಕೇಪ್-ನ ಸ್ಪೋಕನ್ ಟ್ಯುಟೋರಿಯಲ್-ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು:
00:09 ವಿವಿಧ ಆಬ್ಜೆಕ್ಟ್ ಗಳನ್ನು ಒಗ್ಗೂಡಿಸುವುದು ಮತ್ತು ಹಂಚುವುದು
00:12 ಆಬ್ಜೆಕ್ಟ್ ಗಳನ್ನು ಸಾಲು ಮತ್ತು ಸ್ತಂಭಗಳಲ್ಲಿ ಜೋಡಿಸುವುದು.
00:16 ಆಬ್ಜೆಕ್ಟ್ ಗಳ ನಡುವೆ ಅಂತರ ಏರ್ಪಡಿಸುವುದು ಮತ್ತು ಟೈಲ್ ಪ್ಯಾಟರ್ನ್ ಅನ್ನು ರಚಿಸುವುದು.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ.
00:31 ಡ್ಯಾಶ್ ಹೋಮ್ ಗೆ ಹೋಗಿ, ಇಂಕ್ ಸ್ಕೇಪ್ ಎಂದು ಟೈಪ್ ಮಾಡಿ.
00:35 ಲೋಗೋ ಅನ್ನು ಕ್ಲಿಕ್ ಮಾಡಿ.
00:37 ಈ ಮೊದಲು ರಚಿಸಿದ ಇಂಕ್ ಸ್ಕೇಪ್ ಡಾಕ್ಯುಮೆಂಟ್ ಅನ್ನು ಓಪನ್ ಮಾಡುತ್ತೇನೆ.
00:44 ಐದು ವಿವಿಧ ಆಕಾರಗಳು, ಕ್ಯಾನ್ವಾಸ್ ನ ಮೇಲಿರುವುದನ್ನು ನಾವು ನೋಡಬಹುದು.
00:50 ನಿಮ್ಮ ಇಂಕ್ ಸ್ಕೇಪ್ ಕ್ಯಾನ್ವಾಸ್ ಮೇಲೆ, ಐದು ಆಕಾರಗಳನ್ನು ರಚಿಸಿ ಮತ್ತು ಇಲ್ಲಿ ತೋರಿಸಿದಂತೆ ಇಡಿ.
00:55 ಈಗ, ಆಬ್ಜೆಕ್ಟ್ ಗಳನ್ನು ಸಾಲಾಗಿ ಇಡೋಣ.
00:59 ಆಬ್ಜೆಕ್ಟ್ ಮೆನುವಿನಲ್ಲಿ, ಅಲೈನ್ ಎಂಡ್ ಡಿಸ್ಟ್ರಿಬ್ಯೂಟ್ ಎಂಬುದನ್ನು ಕ್ಲಿಕ್ ಮಾಡಿ.
01:04 ಅಲೈನ್ ಎಂಡ್ ಡಿಸ್ಟ್ರಿಬ್ಯೂಟ್ ಡೈಲಾಗ್ ಬಾಕ್ಸ್ ಇಂಟರ್ಫೇಸ್ ನ ಬಲಭಾಗದಲ್ಲಿ ಓಪನ್ ಆಗುತ್ತದೆ.
01:09 ಎರಡು ರೀತಿಯ ಪೊಸಿಶನಿಂಗ್ ಗಳು ಇಲ್ಲಿ ಲಭ್ಯವಿದೆ.
01:12 ಅಲೈನ್ ಎಂದರೆ, ಆಬ್ಜೆಕ್ಟ್ ಗಳ ಕೇಂದ್ರ ಅಥವಾ ಅಂಚುಗಳು ಪರಸ್ಪರ ಸಾಲಾಗಿಡಲ್ಪಡುತ್ತವೆ.
01:18 ಡಿಸ್ಟ್ರಿಬ್ಯೂಟ್ ಎಂದರೆ ಆಬ್ಜೆಕ್ಟ್ ಗಳನ್ನು ಅವುಗಳ ಕೇಂದ್ರ ಅಥವಾ ಅಂಚುಗಳನ್ನು ಆಧರಿಸಿ, ಅಡ್ಡಲಾಗಿ ಅಥವಾ ಲಂಬವಾಗಿ ವಿತರಿಸಲಾಗುತ್ತದೆ.
01:29 ನಾವು ಈ ಆಯ್ಕೆಗಳನ್ನು ಮತ್ತು ಅವುಗಳ ಉಪ-ಆಯ್ಕೆಗಳನ್ನು ಬಳಸಿ ವಿವಿಧ ರೀತಿಯಲ್ಲಿ ವಸ್ತುಗಳನ್ನು ಜೋಡಿಸಬಹುದು.
01:36 ಇಲ್ಲಿ ಮತ್ತೊಂದು ಮುಖ್ಯ ವೈಶಿಷ್ಟ್ಯವಿದೆ: ರಿಲೇಟಿವ್ ಟು
01:39 ಇದನ್ನು ಬಳಸಿ, ವಸ್ತುಗಳನ್ನು ಬೇರೊಂದು ವಸ್ತುವನ್ನು ಆಧಾರವಾಗಿಟ್ಟು ಜೋಡಿಸಬಹುದು.
01:44 ಇಲ್ಲಿರುವ ಆಯ್ಕೆಗಳನ್ನು ನೋಡಲು, ಡ್ರಾಪ್ ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ.
01:47 ಇಲ್ಲಿರುವ ಆಯ್ಕೆಗಳು ಹೀಗಿವೆ – ಲಾಸ್ಟ್ ಸೆಲೆಕ್ಟೆಡ್, ಫರ್ಸ್ಟ್ ಸೆಲೆಕ್ಟೆಡ್, ಬಿಗ್ಗೆಸ್ಟ್ ಆಬ್ಜೆಕ್ಟ್, ಸ್ಮಾಲೆಸ್ಟ್ ಆಬ್ಜೆಕ್ಟ್, ಪೇಜ್, ಡ್ರಾಯಿಂಗ್ ಮತ್ತು ಸೆಲೆಕ್ಷನ್
02:00 ಪೂರ್ವನಿಯೋಜಿತವಾಗಿ, ವಸ್ತುಗಳು, ಪೇಜ್ ಗೆ ಅನುಗುಣವಾಗಿ ಜೋಡಿಸಲ್ಪಟ್ಟಿರುತ್ತವೆ.
02:04 ಹಾಗಾಗಿ, ಆಯ್ದ ಆಬ್ಜೆಕ್ಟ್ ಗಳು, ನಿಮ್ಮ ಪೇಜ್ ನ ಆಯಾಮಗಳ ಪ್ರಕಾರ, 'ಅಲೈನ್ ಮತ್ತು ಡಿಸ್ಟ್ರಿಬ್ಯೂಟ್' ಆಯ್ಕೆಗೆ ಪ್ರತಿಕ್ರಿಯಿಸುತ್ತವೆ.
02:13 ಕ್ಯಾನ್ವಾಸ್ ಮೇಲೆ ಇರುವ ಎಲ್ಲ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡಲು ctrl ಮತ್ತು A ಕೀಗಳನ್ನು ಒತ್ತಿ.
02:17 ಮೊದಲ ಐದು ಐಕಾನ್ ಗಳು ಲಂಬ ಸಾಲಿನಲ್ಲಿ ಜೋಡಿಸುತ್ತದೆ.
02:22 ಮೊದಲ ಐಕಾನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
02:25 ಟೂಲ್ ಟಿಪ್ ಹೇಳುವಂತೆ, ಆಬ್ಜೆಕ್ಟ್ ಗಳ ಬಲ ಭಾಗದ ಅಂಚುಗಳು, ಆಂಕರ್ (anchor) ನ ಎಡ ಅಂಚಿಗೆ ಪ್ರತಿಯಾಗಿ ಜೋಡಿಸಲ್ಪಟ್ಟಿರುತ್ತವೆ.
02:32 ರಿಲೇಟಿವ್ ಟು ಎಂಬ ಆಯ್ಕೆ ಪೇಜ್ ಆಗಿರುವುದರಿಂದ, ಇಲ್ಲಿ ಆಂಕರ್ ಪಾಯಿಂಟ್ ಪೇಜ್ ಆಗಿರುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ.
02:38 ಈಗ ಎರಡೂ ಆಬ್ಜೆಕ್ಟ್ ಗಳೂ ಒಂದರ ಮೇಲೊಂದು ಇವೆ.
02:43 ಹಿಂದಿನ ವ್ಯವಸ್ಥೆಯಲ್ಲಿದ್ದ ಆಬ್ಜೆಕ್ಟ್ ಗಳ ನಡುವಿನ ಅಂತರದ ಆಧಾರದ ಮೇಲೆ ಅಬ್ಜೆಕ್ಟ್ ಗಳು ಒಂದರ ಮೇಲೊಂದು ವ್ಯಾಪಿಸುತ್ತವೆ.
02:48 ಇದನ್ನು ಸರಿಪಡಿಸಲು, ಡಿಸ್ಟ್ರಿಬ್ಯೂಟ್ ನ ಕೆಳಗಿರುವ, ರಿಮೂವ್ ಒವರ್ ಲ್ಯಾಪ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
02:56 ಈಗ ಇದು ಸರಿಯಾಗಿದೆ.
02:58 ಆಬ್ಜೆಕ್ಟ್ ಗಳ ನಡುವಿನ ಅಂತರವನ್ನು ಅಡ್ಡ ಮತ್ತು ಲಂಬವಾಗಿ ಹೊಂದಿಸಲು, H ಮತ್ತು V ಆಯ್ಕೆಗಳನ್ನು ಬಳಸಿ.
03:06 ಈಗ, ಅಲೈನ್ ನ ಕೆಳಗಿರುವ ಆಯ್ಕೆಗಳನ್ನು ಕ್ಲಿಕ್ ಮಾಡಿ, ಮತ್ತು ಆಬ್ಜೆಕ್ಟ್ ಗಳು ಹೇಗೆ ತಾವಾಗಿಯೇ ಹೊಂದಿಕೊಳ್ಳುತ್ತವೆ ಎಂಬುದನ್ನು ಗಮನಿಸಿ.
03:14 undo ಆಯ್ಕೆಯನ್ನು ಬಳಸಿ, ಇದನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು.
03:21 ಟೂಲ್ ಟಿಪ್ ಗಳು ಅಲೈನ್ಮೆಂಟ್ ಗಳನ್ನು ಅರಿಯುವಲ್ಲಿ ಸಹಾಯಕವಾಗಿವೆ.
03:28 ಕೊನೆಯ ಆಯ್ಕೆಯು ಕೇವಲ ಅಕ್ಷರಗಳಿಗೆ ಮಾತ್ರ ಪರಿಣಾಮ ಬೀರುತ್ತವೆ. ಹಾಗಾಗಿ ಇದನ್ನು ಬೇರೆ ಟ್ಯುಟೋರಿಯಲ್ ನಲ್ಲಿ ಕಲಿಯೋಣ.
03:35 ನಂತರ, ಆಬ್ಜೆಕ್ಟ್ ಗಳ ನಡುವಿನ ಅಂತರವನ್ನು ಸರಿಪಡಿಸಲು ಡಿಸ್ಟ್ರಿಬ್ಯೂಟ್ ಆಯ್ಕೆಯನ್ನು ಬಳಸಿ.
03:40 ವಸ್ತುಗಳು ಲಂಬವಾದ ದಿಕ್ಕಿನಲ್ಲಿ ಇರುವುದರಿಂದ, ನಾವು ಡಿಸ್ಟ್ರಿಬ್ಯೂಟ್ ಆಯ್ಕೆಯ ಕೆಳಗಿರುವ ಕೊನೆಯ ನಾಲ್ಕು ಐಕಾನ್ ಗಳನ್ನು ಬಳಸಬೇಕು.
03:48 ಅವುಗಳನ್ನು ಕೇಂದ್ರದ ಆಧಾರವಾಗಿ ಮೊದಲು ಜೋಡಿಸುತ್ತೇನೆ.
03:51 ಈಗ, ಡಿಸ್ಟ್ರಿಬ್ಯೂಟ್ ನ ಕೆಳಗಿರುವ ಆಯ್ಕೆಗಳನ್ನು ಕ್ಲಿಕ್ ಮಾಡಿ ಮತ್ತು, ಆಬ್ಜೆಕ್ಟ್ ಗಳು ಹೇಗೆ ತಾವಾಗಿಯೇ ಹೊಂದಿಕೊಳ್ಳುತ್ತವೆ ಎಂಬುದನ್ನು ಗಮನಿಸಿ.
03:58 ಪುನಃ, undo ಆಯ್ಕೆಯನ್ನು ಬಳಸಿ, ಇದನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು.
04:07 ಟೂಲ್ ಟಿಪ್ ಗಳನ್ನು ಬಳಸಿ ಅಲೈನ್ಮೆಂಟ್ ಗಳನ್ನು ಇನ್ನೂ ಸರಿಯಾಗಿ ಅರಿಯಬಹುದು.
04:13 ರಿಲೇಟಿವ್ ಟು ನ ಕೆಳಗೆ, ಟ್ರೀಟ್ ಸೆಲೆಕ್ಷನ್ ಆಸ್ ಗ್ರುಪ್ ಎಂಬ ಆಯ್ಕೆ ಇರುವುದನ್ನು ಗಮನಿಸಿ.
04:19 ಇದರಿಂದ, ಆಬ್ಜೆಕ್ಟ್ ಗಳೆಲ್ಲವೂ ಒಂದೇ ಗುಂಪಿನಂತೆ ಪರಿಗಣಿಸಲ್ಪಡುತ್ತವೆ.
04:22 ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
04:24 ಈಗ, ಒಂದರ ನಂತರ ಇನ್ನೊಂದರಂತೆ ಐಕಾನ್ ಗಳನ್ನು ಕ್ಲಿಕ್ ಮಾಡಿ ಮತ್ತು ಆಬ್ಜೆಕ್ಟ್ ಗಳು ಪ್ರತ್ಯೇಕವಾಗಿ ಪರಿಗಣಿಸಲ್ಪಡುವ ಬದಲು ಗುಂಪಾಗಿ ಪರಿಗಣಿಸಲ್ಪಡುವುದನ್ನು ಗಮನಿಸಬಹುದು.
04:34 ಈ ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ.
04:36 ಈಗ, ಆಬ್ಜೆಕ್ಟ್ ಗಳು ಪ್ರತ್ಯೇಕವಾಗಿ ಪರಿಗಣಿಸಲ್ಪಡುತ್ತವೆ.
04:40 ನಂತರ, ಲಾಸ್ಟ್ ಸೆಲೆಕ್ಟೆಡ್ ನಂತೆ ಆಬ್ಜೆಕ್ಟ್ ಗಳನ್ನು ಜೋಡಿಸೋಣ.
04:45 ರಿಲೇಟಿವ್ ಟು ಎಂಬ ಆಯ್ಕೆಯನ್ನು ಲಾಸ್ಟ್ ಸೆಲ್ಎಕ್ಟೆಡ್ ಅಂದು ಬದಲಾಯಿಸಿ.
04:49 ಹಾಗಾಗಿ, ಎಲ್ಲ ಆಬ್ಜೆಕ್ಟ್ ಗಳನ್ನು ಕ್ಯಾನ್ವಾಸ್ ನ ಒಳಗೆ ತನ್ನಿ ಮತ್ತು ಅವುಗಳನ್ನು ಹರಡಿ.
05:01 ಎಲ್ಲ ಆಬ್ಜೆಕ್ಟ್ ಗಳನ್ನು ಒಂದೊಂದಾಗಿ ಆಯ್ಕೆ ಮಾಡಿ. ವೃತ್ತವನ್ನು ಕೊನೆಯಲ್ಲಿ ಆಯ್ಕೆ ಮಾಡಿ.
05:06 ಮೊದಲಿನಂತೆ, ಐಕಾನ್ ಗಳನ್ನು ಒಂದರ ನಂತರ ಒಂದನ್ನು ಕ್ಲಿಕ್ ಮಾಡಿ.
05:10 ಕೊನೆಗೆ ಆಯ್ಕೆ ಮಾಡಿರುವುದು ವೃತ್ತವಾಗಿರುವುದರಿಂದ, ಆಬ್ಜೆಕ್ಟ್ ಗಳು ವೃತ್ತದಂತೆ ವ್ಯವಸ್ಥಿತವಾಗಿರುವುದನ್ನು ನೀವು ಗಮನಿಸಬಹುದು.
05:19 ಹೀಗೆಯೇ, ನೀವು ರಿಲೇಟಿವ್ ಟು ನಲ್ಲಿರುವ ಎಲ್ಲ ಆಯ್ಕೆಗಳನ್ನು ಪ್ರಯತ್ನಿಸಿ, ಆಬ್ಜೆಕ್ಟ್ ಗಳ ವ್ಯವಸ್ಥೆಯನ್ನು ಗಮನಿಸಬಹುದು.
05:26 ಅಲೈನ್ ಅಂಡ್ ಡಿಸ್ಟ್ರಿಬ್ಯೂಟ್ ಡೈಲಾಗ್ ಬಾಕ್ಸ್ ನ ಉಳಿದ ಆಯ್ಕೆಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ.
05:32 ಹಾಗಾಗಿ, ಈ ಡೈಲಾಗ್ ಬಾಕ್ಸ್ ಅನ್ನು ಈಗ ಕ್ಲೋಸ್ ಮಾಡೋಣ.
05:37 ನಂತರ, ಆಬ್ಜೆಕ್ಟ್ ಗಳನ್ನು ಲಂಬ ಸಾಲು ಮತ್ತು ಅಡ್ಡ ಸಾಲುಗಳಲ್ಲಿ ಜೋಡಿಸುವುದು ಹೇಗೆಂದು ಕಲಿಯೋಣ.
05:41 ಆಬ್ಜೆಕ್ಟ್ ಮೆನುವಿನಲ್ಲಿ ರೋಸ್ ಎಂಡ್ ಕಾಲಮ್ಸ್ ಎಂಬುದನ್ನು ಕ್ಲಿಕ್ ಮಾಡಿ.
05:46 ರೋಸ್ ಎಂಡ್ ಕಾಲಮ್ಸ್ ಎಂಬ ಡೈಲಾಗ್ ಬಾಕ್ಸ್ ಓಪನ್ ಆಗುತ್ತದೆ.
05:50 ಈ ಆಯ್ಕೆಯನ್ನು ಬಳಸಿ, ಆಬ್ಜೆಕ್ಟ್ ಗಳನ್ನು ಲಂಬ ಮತ್ತು ಅಡ್ಡ ಸಾಲುಗಳಲ್ಲಿ, ಆವಶ್ಯಕ ಅಂತರದೊಂದಿಗೆ ಜೋಡಿಸಬಹುದು.
05:57 ಕ್ಯಾನ್ವಾಸ್ ನ ಮೇಲೆ ಆಬ್ಬ್ಜೆಕ್ಟ್ ಗಳನ್ನು ಹರಡಿ.
06:01 ಈಗ, ಈ ಆಬ್ಜೆಕ್ಟ್ ಗಳನ್ನು ಎರಡು ಅಡ್ಡ ಸಾಲು ಮತ್ತು ಮೂರು ಲಂಬ ಸಾಲುಗಳಲ್ಲಿ ಜೋಡಿಸೋಣ.
06:05 ಹಾಗಾಗಿ, ರೋ ಪ್ಯಾರಾಮೀಟರ್ ಅನ್ನು ಎರಡು ಎಂದು ಬದಲಾಯಿಸಿ.
06:09 ರೋ ಪ್ಯಾರಾಮೀಟರ್ ಬದಲಾದಾಗ ಕಾಲಮ್ ಪ್ಯಾರಾಮೀಟರ್ ಕೂಡಾ ಬದಲಾಗುವುದನ್ನು ನೀವು ಗಮನಿಸಬಹುದು.
06:15 ಬಲ ಭಾಗದಲ್ಲಿ ಕೆಳಗಿರುವ ಅರೇಂಜ್ ಎಂಬುದನ್ನು ಕ್ಲಿಕ್ ಮಾಡಿ.
06:19 ಅಲೈನ್ ಎಂಬ ಆಯ್ಕೆಯಿಂದ ಆಬ್ಜೆಕ್ಟ್ ಗಳನ್ನು ಬಲಕ್ಕೆ, ಕೇಂದ್ರದಲ್ಲಿ ಮತ್ತು ಎಡಕ್ಕೆ ಅಲೈನ್ ಮಾಡಬಹುದು.
06:29 ಒಂದೊಂದಾಗಿ ಬಳಸಿ, ಬದಲಾವಣೆಗಳನ್ನು ಗಮನಿಸಿ.
06:37 ರೋ ಮತ್ತು ಕಾಲಮ್ ಗಳಲ್ಲಿರುವ, ಆಬ್ಜೆಕ್ಟ್ ಗಳ ನಡುವಿನ ಅಂತರವನ್ನು , ಸೆಟ್ ಸ್ಪೇಸಿಂಗ್ ಎಂಬ ಆಯ್ಕೆಯನ್ನು ಬಳಸಿ, ನಾವು ಬದಲಾಯಿಸಬಹುದು.
06:45 ಈಗ, ರೋ ಮತ್ತು ಕಾಲಮ್ ನ ಸ್ಪೇಸ್ ಪ್ಯಾರಾಮೀಟರ್ ಅನ್ನು ಐದು ಎಂದು ಬದಲಾಯಿಸಿ.
06:50 ಅರೇಂಜ್ ಬಟನ್ ಅನ್ನು ಕ್ಲಿಕ್ ಮಾಡಿ.
06:53 ಆಬ್ಜೆಕ್ಟ್ ಗಳ ನಡುವಿನ ಅಂತರವನ್ನು ಗಮನಿಸಿ.
06:56 ಈಗ, ಅಲೈನ್ ಎಂಡ್ ಡಿಸ್ಟ್ರಿಬ್ಯೂಟ್ ಅನ್ನು ಬಳಸಿ, ಮಾದರಿ ರಚಿಸುವುದನ್ನು ನಾನು ತೋರಿಸುತ್ತೇನೆ.
07:01 ಇಲ್ಲಿ, ನಾಲ್ಕು ವಿವಿಧ ಗಾತ್ರ ಮತ್ತು ಬಣ್ಣಗಳ ಚೌಕಗಳಿರುವ ಹೊಸ ಇಂಕ್ ಸ್ಕೇಪ್ ಫೈಲ್ ಇದೆ.
07:06 ಎಲ್ಲ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡಿ, ಡೈಮಂಡ್ ಆಕಾರದಲ್ಲಿ ಕಾಣುವಂತೆ ತಿರುಗಿಸಿ.
07:12 ಅಲೈನ್ ಎಂಡ್ ಡಿಸ್ಟ್ರಿಬ್ಯೂಟ್ ಡೈಲಾಗ್ ಬಾಕ್ಸ್ ಅನ್ನು ಒಪನ್ ಮಾಡಿ.
07:15 ಸೆಂಟರ್ ಆನ್ ವರ್ಟಿಕಲ್ ಆಕ್ಸಿಸ್ ಎಂಬುದನ್ನು ಕ್ಲಿಕ್ ಮಾಡಿ.
07:18 ಸೆಂಟರ್ ಆನ್ ಹಾರಿಜಾಂಟಲ್(horizontal) ಆಕ್ಸಿಸ್ ಎಂಬುದನ್ನು ಕ್ಲಿಕ್ ಮಾಡಿ.
07:22 ಕ್ಯಾನ್ವಾಸ್ ನ ಮೇಲೆ ಟೈಲ್ ಮಾದರಿಯು ರೂಪುಗೊಂಡಿದೆ.
07:25 ಈ ಆಯ್ಕೆಗಳನ್ನು ಸೃಜನಾತ್ಮಕವಾಗಿ ಬಳಸಿ, ನಾವು ಅನೇಕ ವಿಶಿಷ್ಟ ಮಾದರಿಗಳನ್ನು ರಚಿಸಬಹುದು.
07:30 ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು :
07:34 ವಿವಿಧ ಆಬ್ಜೆಕ್ಟ್ ಗಳನ್ನು ಜೋಡಿಸುವುದು ಮತ್ತು ಹರಡುವುದು.
07:37 ಆಬ್ಜೆಕ್ಟ್ ಗಳನ್ನು ರೋ ಮತ್ತು ಕಾಲಮ್ ನಲ್ಲಿ ಜೋಡಿಸುವುದು.
07:40 ಅಬ್ಜೆಕ್ಟ್ ಗಳ ನಡುವಿನ ಅಂತರವನ್ನು ಬದಲಾಯಿಸುವುದು ಮತ್ತು ಟೈಲ್ ಮಾದರಿಯನ್ನು ರೂಪಿಸುವುದು.
07:45 ನಿಮಗಾಗಿ ಎರಡು ಅಸೈನ್ಮೆಂಟ್ ಗಳು ಇಲ್ಲಿವೆ.
07:47 ಐದು ವೃತ್ತಗಳನ್ನು ಈ ಕೆಳಗಿನ ಅಯಾಮಗಳಂತೆ ರಚಿಸಿ.
07:54 ಎಲ್ಲವನ್ನೂ ಕ್ಯಾನ್ವಾಸ್ ನ ಮೇಲೆ ಹರಡಿ ಮತ್ತು ಆಯ್ಕೆ ಮಾಡಿ.
07:59 ಅಲೈನ್ ಎಂಡ್ ಡಿಸ್ಟ್ರಿಬ್ಯೂಟ್ ನಲ್ಲಿ, ರಿಲೇಟಿವ್ ಟು ನ ಬದಲು, ಬಿಗ್ಗೆಸ್ಟ್ ಎಂಬುದನ್ನು ಆಯ್ಕೆ ಮಾಡಿ.
08:04 ಅಲೈನ್ ಆನ್ ಲೆಫ್ಟ್ ಎಡ್ಜಸ್ ಅನ್ನು ಕ್ಲಿಕ್ ಮಾಡಿ.
08:06 ಸೆಂಟರ್ ಆನ್ ಹಾರಿಜಾಂಟಲ್(horizontal) ಅಕ್ಸಿಸ್ ಅನ್ನು ಕ್ಲಿಕ್ ಮಾಡಿ.
08:10 ನೀಲಿ ಬಣ್ಣದ ನೂರು ನೂರು ಪಿಕ್ಸೆಲ್ ಗಾತ್ರದ ಆರು ಚೌಕಗಳನ್ನು ರಚಿಸಿ.
08:17 ಎಲ್ಲ ಚೌಕಗಳನ್ನು ಆಯ್ಕೆ ಮಾಡಿ, ರೋಸ್ ಎಂಡ್ ಕಾಲಮ್ಸ್ ಅನ್ನು ಒಪನ್ ಮಾಡಿ.
08:21 ಅವುಗಳನ್ನು ಎರಡು ರೋ ಮತ್ತು 3 ಕಾಲಮ್ ಗಳಲ್ಲಿ ಜೋಡಿಸಿ.
08:25 ಎರಡೂ ಸ್ಪೇಸ್ ಪ್ಯಾರಾಮೀಟರ್ಗಳನ್ನು ಇಪ್ಪತ್ತು ಎಂದು ಬದಲಾಯಿಸಿ.
08:29 ನಿಮ್ಮ ಅಸೈನ್ಮೆಂಟ್ ಮುಗಿದ ನಂತರ ಹೀಗೆ ಕಾಣಬೇಕು.
08:35 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
08:43 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
08:51 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
08:54 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
09:03 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
09:07 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:09 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ರಾಕೇಶ. ಧನ್ಯವಾದಗಳು.

Contributors and Content Editors

Chetana, Rakeshkkrao, Sandhya.np14, Vasudeva ahitanal