Linux-Old/C2/Ubuntu-Software-Center/Kannada

From Script | Spoken-Tutorial
Revision as of 13:01, 6 September 2018 by Nancyvarkey (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಉಬಂಟು ಸಾಫ್ಟ್ವೇರ್ ಸೆಂಟರ್ ನ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು ಆಪರೇಟಿಂಗ್ ಸಿಸ್ಟಮ್ ನಲ್ಲಿ ಉಬಂಟು ಸಾಫ್ಟ್ವೇರ್ ಸೆಂಟರ್ ನ ಸಹಾಯದಿಂದ ಸಾಫ್ಟ್ವೇರ್ ಗಳನ್ನು ಡೌನ್ಲೋಡ್, ಇನ್ಸ್ಟಾಲ್, ಅಪ್ಡೇಟ್ ಹಾಗೂ ಅನ್ಇನ್ಸ್ಟಾಲ್ ಹೇಗೆ ಮಾಡುವುದು ಎಂಬುದರ ಬಗ್ಗೆ ತಿಳಿಯಲಿದ್ದೇವೆ.
00:16 ಉಬಂಟು ಸಾಫ್ಟ್ವೇರ್ ಸೆಂಟರ್ ಎಂದರೇನು?
00:18 ಇದೊಂದು ಉಬಂಟು ಓ.ಎಸ್. ನಲ್ಲಿ ಸಾಫ್ಟ್ವೇರ್ ಗಳನ್ನು ವ್ಯವಸ್ಥಾಪಿಸಲಿಕ್ಕಿರುವ ಉಪಕರಣವಾಗಿದೆ.
00:23 ಇದನ್ನು ನೀವು ಸಾಫ್ಟ್ವೇರ್ ಗಳನ್ನು ಹುಡುಕಲು, ಡೌನ್ಲೋಡ್, ಇನ್ಸ್ಟಾಲ್, ಅಪ್ಡೇಟ್ ಹಾಗೂ ಅನ್ಇನ್ಸ್ಟಾಲ್ ಮಾಡಲು ಉಪಯೋಗಿಸಬಹುದು.
00:30 ಉಬಂಟು ಸಾಫ್ಟ್ವೇರ್ ಸೆಂಟರ್ ಪ್ರತಿಯೊಂದು ಸಾಫ್ಟ್ವೇರ್ ನ ರಿವ್ಯೂ ಮತ್ತು ರೇಟಿಂಗ್ ಅನ್ನು ಸೂಚಿಸುತ್ತದೆ.
00:36 ಇದರಿಂದ ನೀವು ಯಾವುದೇ ಸಾಫ್ಟ್ವೇರ್ ಅನ್ನು ಬಳಸುವ ಮೊದಲೇ ಅದರ ಬಗೆಗಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
00:41 ಇದು ಸಾಫ್ಟ್ವೇರ್ ನ ಹಿಸ್ಟರಿ ಯನ್ನೂ ಕೂಡಾ ದಾಖಲಿಸಿಡುತ್ತದೆ.
00:45 ಈ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು ಸಾಫ್ಟ್ವೇರ್ ಸೆಂಟರ್ ನ 11.10 ನೇ ಆವೃತ್ತಿಯನ್ನು ಬಳಸುತ್ತಿದ್ದೇವೆ.
00:52 ಈ ಟ್ಯುಟೋರಿಯಲ್ ನಲ್ಲಿ ಮುಂದುವರಿಯಲು,
00:54 ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು.
00:56 ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಲು ನೀವು ಸ್ವತಃ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಆಗಿರಬೇಕು ಅಥವಾ ಅಡ್ಮಿನಿಸ್ಟ್ರೇಟರ್ ನ ಹಕ್ಕನ್ನು ಪಡೆದಿರಬೇಕು.
01:04 ನಿಮ್ಮ ಲಾಂಚರ್ ನಲ್ಲಿ Ubuntu Software Center ನ ಐಕಾನ್ ಅನ್ನು ಒತ್ತಿ.
01:08 Ubuntu Software Center ಎಂಬ ವಿಂಡೋ ಕಾಣಿಸುತ್ತದೆ.
01:12 ಇಲ್ಲಿ All Software, Installed ಮತ್ತು History ಎಂಬ ಬಟನ್ ಗಳು ವಿಂಡೋನ ಎಡ ಮೇಲ್ಭಾಗದಲ್ಲಿ ಕಾಣಿಸುತ್ತವೆ.
01:19 Search ಎಂಬುದು ಬಲ ಮೇಲ್ಭಾಗದಲ್ಲಿ ಕಾಣಿಸುತ್ತದೆ.
01:23 Ubuntu Software Center ಎಂಬ ವಿಂಡೋ ಎರಡು ಫಲಕಗಳಲ್ಲಿ ವಿಭಾಗಿಸಲ್ಪಟ್ಟಿದೆ.
01:28 ಎಡ ಫಲಕದಲ್ಲಿ ಸಾಫ್ಟ್ವೇರ್ ಗಳ ವಿಭಾಗಗಳು ಕಾಣಿಸುತ್ತವೆ.
01:33 ಬಲ ಫಲಕದಲ್ಲಿ What’s New ಮತ್ತು Top Rated ಕಾಣಿಸುತ್ತವೆ.
01:38 What’s New ಎಂಬ ಫಲಕವು ಹೊಸತಾಗಿ ಬಂದ ಸಾಫ್ಟ್ವೇರ್ ಗಳ ಸೂಚಿಯನ್ನು ತೋರಿಸುತ್ತದೆ.
01:42 Top Rated ಎಂಬ ಫಲಕವು ಬಳಕೆದಾರರಿಂದ ಹೆಚ್ಚು ಶ್ರೇಯಾಂಕ ಗಳಿಸಿದ ಹಾಗೂ ಡೌನ್ಲೋಡ್ ಆದ ಸಾಫ್ಟ್ವೇರ್ ಗಳ ಸೂಚಿಯನ್ನು ತೋರಿಸುತ್ತದೆ.
01:51 ಈಗ ವಿಭಾಗದ ಅನುಸಾರವಾಗಿ ಸಾಫ್ಟ್ವೇರ್ ಅನ್ನು ಹುಡುಕೋಣ.
01:55 ಎಡ ಫಲಕದಲ್ಲಿ Internet ಎಂಬುದರ ಮೇಲೆ ಕ್ಲಿಕ್ ಮಾಡಿ.
01:58 ಇಂಟರ್ನೆಟ್ ಸಾಫ್ಟ್ವೇರ್ ಗಳ ಸೂಚಿ ಹಾಗೂ ಹೆಚ್ಚು ಶ್ರೇಯಾಂಕ ಗಳಿಸಿದ ಇಂಟರ್ನೆಟ್ ಸಾಫ್ಟ್ವೇರ್ ಗಳ ಸೂಚಿಯು ಕಾಣಿಸುತ್ತದೆ.
02:05 ಗಮನಿಸಿ, ಕೆಲವು ಸಾಫ್ಟ್ವೇರ್ ಗಳು ಸರಿ ಚಿಹ್ನೆಯಿರುವ ವೃತ್ತಗಳನ್ನು ಹೊಂದಿವೆ.
02:10 ಇದು ಈ ಸಾಫ್ಟ್ವೇರ್ ಗಳು ಈಗಾಗಲೇ ನಿಮ್ಮ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಆಗಿವೆ ಎಂಬುದನ್ನು ಸೂಚಿಸುತ್ತದೆ
02:15 ಇಂಟರ್ನೆಟ್ ವಿಭಾಗದಲ್ಲಿ ಇನ್ನೂ ಹೆಚ್ಚು ಸಾಫ್ಟ್ವೇರ್ ಗಳನ್ನು ನೋಡಬಯಸಿದಲ್ಲಿ All ಎಂಬ ಐಕಾನ್ ಅನ್ನು ಒತ್ತಿ.
02:21 ಈಗ ಇಂಟರ್ನೆಟ್ ವಿಭಾಗದಲ್ಲಿನ ಎಲ್ಲಾ ಸಾಫ್ಟ್ವೇರ್ ಗಳೂ ವಿಂಡೋ ನಲ್ಲಿ ಸೂಚಿಬದ್ದವಾಗಿದೆ.
02:26 ನೀವು ಸಾಫ್ಟ್ವೇರ್ ಗಳನ್ನು ಹೆಸರಿಗೆ, ಶ್ರೇಯಾಂಕಕ್ಕೆ ಅಥವಾ ಹೊಸತಿಗೆ ಅನುಸಾರವಾಗಿ ಕ್ರಮಪಡಿಸಬಹುದು.
02:32 ಈಗ ಬಲ ಮೇಲ್ಭಾಗದ ಮೂಲೆಯಲ್ಲಿ ಕಾಣುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡೋಣ.
02:36 ಸೂಚಿಯಿಂದ By Top Rated ಎಂಬುದನ್ನು ಆಯ್ಕೆಮಾಡಿ.
02:40 ಈಗ ಇಂಟರ್ನೆಟ್ ಸಾಫ್ಟ್ವೇರ್ ಗಳು ಶ್ರೇಯಾಂಕಕ್ಕೆ ಅನುಸಾರವಾಗಿ ಕ್ರಮಬದ್ದಗೊಳ್ಳುತ್ತವೆ.
02:45 ನಿಮ್ಮ ಕಂಪ್ಯೂಟರ್ ನಲ್ಲಿ ಈಗಾಗಲೇ ಇನ್ಸ್ಟಾಲ್ ಆಗಿರುವ ಸಾಫ್ಟ್ವೇರ್ ಗಳನ್ನು ನೋಡಬಯಸಿದಲ್ಲಿ,
02:50 Installed ಎಂಬ ಬಟನ್ ಅನ್ನು ಒತ್ತಿ.
02:53 ಸಾಫ್ಟ್ವೇರ್ ನ ವಿಭಾಗಗಳು ಕಾಣಿಸಿಕೊಳ್ಳುತ್ತದೆ.
02:56 ಅಲ್ಲಿ Sound & Video ಎಂಬುದರ ಪಕ್ಕದಲ್ಲಿರುವ ಸಣ್ಣ ತ್ರಿಕೋಣವನ್ನು ಕ್ಲಿಕ್ ಮಾಡಿ.
03:02 ಇದು ನಿಮ್ಮ ಕಂಪ್ಯೂಟರ್ ನಲ್ಲಿ Sound and Video ಎಂಬ ವಿಭಾಗದ ಯಾವ ಯಾವ ಸಾಫ್ಟ್ವೇರ್ ಗಳು ಇನ್ಸ್ಟಾಲ್ ಆಗಿವೆ ಎಂಬುದನ್ನು ತೋರಿಸುತ್ತದೆ.
03:08 ಈಗ All Software ಎಂಬಲ್ಲಿನ ಡ್ರಾಪ್ ಡೌನ್ ನಲ್ಲಿ Provided by Ubuntu ಎಂಬುದನ್ನು ಆಯ್ಕೆ ಮಾಡಿ.
03:14 ಉಬಂಟು ಕಡೆಯಿಂದ ಒದಗಿಸಲ್ಪಡುವ ಎಲ್ಲಾ ಸಾಫ್ಟ್ವೇರ್ ಗಳ ಸೂಚಿಯು ಕಾಣಿಸುತ್ತದೆ.
03:19 ಈಗ ನಾವು VLC media player ಎಂಬ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡೋಣ.
03:24 ವಿಂಡೋದ ಬಲ ಮೇಲ್ಭಾಗದಲ್ಲಿರುವ ಸರ್ಚ್ ಬಾಕ್ಸ್ ನಲ್ಲಿ VLC ಎಂದು ಟೈಪ್ ಮಾಡಿ.
03:29 VLC media player ಕಾಣಿಸುತ್ತದೆ.
03:33 ಈಗ Install ನ ಮೇಲೆ ಕ್ಲಿಕ್ ಮಾಡಿ.
03:35 ದೃಢೀಕರಿಸಲು ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
03:38 ಅಲ್ಲಿ ನಿಮ್ಮ ಸಿಸ್ಟಮ್ ನ ಪಾಸ್ವರ್ಡ್ ಅನ್ನು ನಮೂದಿಸಿ.
03:42 Authenticate ಎಂಬಲ್ಲಿ ಕ್ಲಿಕ್ ಮಾಡಿ.
03:44 ಪ್ರೊಗ್ರೆಸ್ ಬಾರ್ ನತ್ತ ನೋಡಿ, ಅದು VLC ಯು ಇನ್ಸ್ಟಾಲ್ ಆಗುತ್ತಿದೆ ಎಂದು ತೋರಿಸುತ್ತದೆ.
03:50 ಇನ್ಸ್ಟಾಲೇಶನ್ ಎಂಬುದು ಇನ್ಸ್ಟಾಲ್ ಆಗುತ್ತಿರುವ ಪ್ಯಾಕೇಜ್ ನ ಆಕೃತಿ ಪರಿಮಾಣಕ್ಕನುಗುಣವಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ.
03:57 ಮೇಲಿರುವ ಬಟನ್ ನಿಂದ ಕೂಡಾ ಪ್ರೊಗ್ರೆಸ್ ತಿಳಿಯುತ್ತದೆ.
04:02 ನೀವು ಇದು ಇನ್ಸ್ಟಾಲ್ ಆಗುತ್ತಿರುವಾಗ ಬೇರೆ ಅಪ್ಲಿಕೇಶನ್ ಅನ್ನು ನೋಡಬಹುದು.
04:07 ಒಮ್ಮೆ VLC ಯು ಇನ್ಸ್ಟಾಲ್ ಆಯಿತೆಂದರೆ ಅದರ ಹತ್ತಿರ ಸಣ್ಣ ಟಿಕ್ ಮಾರ್ಕ್ ಕಾಣಿಸುತ್ತದೆ.
04:13 Remove ಎಂಬ ಬಟನ್ ಬಲ ಭಾಗದಲ್ಲಿ ಕಾಣಿಸುತ್ತದೆ.
04:17 ನೀವು VLC ಯನ್ನು ಅನ್ಇನ್ಸ್ಟಾಲ್ ಮಾಡಬಯಸಿದಲ್ಲಿ Remove ಬಟನ್ ನ ಮೇಲೆ ಕ್ಲಿಕ್ ಮಾಡಿ.
04:23 ಹೀಗೆಯೇ ನೀವು ಉಳಿದ ಎಲ್ಲಾ ಸಾಫ್ಟ್ವೇರ್ ಪ್ಯಾಕೇಜ್ ಗಳನ್ನು ಸರ್ಚ್ ಮಾಡಿ ಇನ್ಸ್ಟಾಲ್ ಮಾಡಬಹುದಾಗಿದೆ.
04:29 ಈಗ ನಾವು History ಯನ್ನು ನೋಡೋಣ.
04:31 ಇದು ಸಾಫ್ಟ್ವೇರ್ ಗಳ ಇನ್ಸ್ಟಾಲೇಶನ್, ಅಪ್ಡೇಟ್ ಹಾಗೂ ರಿಮೂವಲ್ ಅನ್ನು ಒಳಗೊಂಡಂತೆ ಎಲ್ಲಾ ಬದಲಾವಣೆಗಳನ್ನೂ ತೋರಿಸುತ್ತದೆ.
04:40 History ಯನ್ನು ಕ್ಲಿಕ್ ಮಾಡಿ. History ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
04:45 ನೀವು ನಿಮ್ಮ ಹಿಸ್ಟರಿಯನ್ನು All Changes, Installations, Updates ಮತ್ತು Removals ಎಂಬೀ ವಿಭಾಗಗಳಲ್ಲಿ ನೋಡಬಹುದು.
04:51 All Changes ಎಂಬಲ್ಲಿ ಕ್ಲಿಕ್ ಮಾಡಿ.
04:53 ಈ ಸೂಚಿಯಲ್ಲಿ ನಾವು ಮಾಡಿದ ಇನ್ಸ್ಟಾಲೇಶನ್, ಅಪ್ಡೇಟ್ ಹಾಗೂ ರಿಮೂವಲ್ ನ ಎಲ್ಲಾ ಮಾಹಿತಿಯು ಇರುತ್ತದೆ.
05:01 ನೀವು ಇನ್ಸ್ಟಾಲ್ ಆದ ಸಾಫ್ಟ್ವೇರ್ ಗಳನ್ನು ನಿಯಮಿತವಾಗಿಅಪ್ಡೇಟ್ ಮಾಡಬಹುದು.
05:07 ನೀವು ಉಬಂಟುವಿನ ಬಗ್ಗೆ ಹಾಗೂ ಉಬಂಟು ಸಾಫ್ಟ್ವೇರ್ ಸೆಂಟರ್ ನ ಬಗ್ಗೆ ಹೆಚ್ಚು ತಿಳಿಯಲು ಉಬಂಟುವಿನ ವೆಬ್ಸೈಟ್ ಗೆ ಭೇಟಿಕೊಡಿ. <Pause>
05:17 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಮುಕ್ತಾಯದ ಹಂತಕ್ಕೆ ಬಂದೆವು.
05:21 ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು ಸಾಫ್ಟ್ವೇರ್ ಸೆಂಟರ್ ನ ಉಪಯೋಗದ ಬಗ್ಗೆ ತಿಳಿದೆವು.
05:26 ನಾವು ಉಬಂಟು ಆಪರೇಟಿಂಗ್ ಸಿಸ್ಟಮ್ ನಲ್ಲಿ ಸಾಫ್ಟ್ವೇರ್ ಗಳನ್ನು ಹೇಗೆ ಇನ್ಸ್ಟಾಲ್, ಅಪ್ಡೇಟ್ ಹಾಗೂ ಅನ್ಇನ್ಸ್ಟಾಲ್ ಮಾಡುವುದು ಎಂಬುದನ್ನೂ ಕಲಿತೆವು.
05:36 ಇಲ್ಲಿ ನಿಮಗೊಂದು ಅಭ್ಯಾಸವಿದೆ.
05:39 ಉಬಂಟು ಸಾಫ್ಟ್ವೇರ್ ಸೆಂಟರ್ ನ ಮೂಲಕ Thunderbird ಅನ್ನು ಇನ್ಸ್ಟಾಲ್ ಮಾಡಿ.
05:46 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋವನ್ನು ವೀಕ್ಷಿಸಿ.
05:49 ಇದು ಈ ಪ್ರಾಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
05:52 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು.
05:57 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
06:02 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
06:06 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
06:12 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
06:17 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
06:24 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
06:35 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Nancyvarkey, Vasudeva ahitanal