Linux-Old/C2/Ubuntu-Software-Center/Kannada
From Script | Spoken-Tutorial
Time | Narration |
00:00 | ಉಬಂಟು ಸಾಫ್ಟ್ವೇರ್ ಸೆಂಟರ್ ನ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು ಆಪರೇಟಿಂಗ್ ಸಿಸ್ಟಮ್ ನಲ್ಲಿ ಉಬಂಟು ಸಾಫ್ಟ್ವೇರ್ ಸೆಂಟರ್ ನ ಸಹಾಯದಿಂದ ಸಾಫ್ಟ್ವೇರ್ ಗಳನ್ನು ಡೌನ್ಲೋಡ್, ಇನ್ಸ್ಟಾಲ್, ಅಪ್ಡೇಟ್ ಹಾಗೂ ಅನ್ಇನ್ಸ್ಟಾಲ್ ಹೇಗೆ ಮಾಡುವುದು ಎಂಬುದರ ಬಗ್ಗೆ ತಿಳಿಯಲಿದ್ದೇವೆ. |
00:16 | ಉಬಂಟು ಸಾಫ್ಟ್ವೇರ್ ಸೆಂಟರ್ ಎಂದರೇನು? |
00:18 | ಇದೊಂದು ಉಬಂಟು ಓ.ಎಸ್. ನಲ್ಲಿ ಸಾಫ್ಟ್ವೇರ್ ಗಳನ್ನು ವ್ಯವಸ್ಥಾಪಿಸಲಿಕ್ಕಿರುವ ಉಪಕರಣವಾಗಿದೆ. |
00:23 | ಇದನ್ನು ನೀವು ಸಾಫ್ಟ್ವೇರ್ ಗಳನ್ನು ಹುಡುಕಲು, ಡೌನ್ಲೋಡ್, ಇನ್ಸ್ಟಾಲ್, ಅಪ್ಡೇಟ್ ಹಾಗೂ ಅನ್ಇನ್ಸ್ಟಾಲ್ ಮಾಡಲು ಉಪಯೋಗಿಸಬಹುದು. |
00:30 | ಉಬಂಟು ಸಾಫ್ಟ್ವೇರ್ ಸೆಂಟರ್ ಪ್ರತಿಯೊಂದು ಸಾಫ್ಟ್ವೇರ್ ನ ರಿವ್ಯೂ ಮತ್ತು ರೇಟಿಂಗ್ ಅನ್ನು ಸೂಚಿಸುತ್ತದೆ. |
00:36 | ಇದರಿಂದ ನೀವು ಯಾವುದೇ ಸಾಫ್ಟ್ವೇರ್ ಅನ್ನು ಬಳಸುವ ಮೊದಲೇ ಅದರ ಬಗೆಗಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. |
00:41 | ಇದು ಸಾಫ್ಟ್ವೇರ್ ನ ಹಿಸ್ಟರಿ ಯನ್ನೂ ಕೂಡಾ ದಾಖಲಿಸಿಡುತ್ತದೆ. |
00:45 | ಈ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು ಸಾಫ್ಟ್ವೇರ್ ಸೆಂಟರ್ ನ 11.10 ನೇ ಆವೃತ್ತಿಯನ್ನು ಬಳಸುತ್ತಿದ್ದೇವೆ. |
00:52 | ಈ ಟ್ಯುಟೋರಿಯಲ್ ನಲ್ಲಿ ಮುಂದುವರಿಯಲು, |
00:54 | ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು. |
00:56 | ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಲು ನೀವು ಸ್ವತಃ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಆಗಿರಬೇಕು ಅಥವಾ ಅಡ್ಮಿನಿಸ್ಟ್ರೇಟರ್ ನ ಹಕ್ಕನ್ನು ಪಡೆದಿರಬೇಕು. |
01:04 | ನಿಮ್ಮ ಲಾಂಚರ್ ನಲ್ಲಿ Ubuntu Software Center ನ ಐಕಾನ್ ಅನ್ನು ಒತ್ತಿ. |
01:08 | Ubuntu Software Center ಎಂಬ ವಿಂಡೋ ಕಾಣಿಸುತ್ತದೆ. |
01:12 | ಇಲ್ಲಿ All Software, Installed ಮತ್ತು History ಎಂಬ ಬಟನ್ ಗಳು ವಿಂಡೋನ ಎಡ ಮೇಲ್ಭಾಗದಲ್ಲಿ ಕಾಣಿಸುತ್ತವೆ. |
01:19 | Search ಎಂಬುದು ಬಲ ಮೇಲ್ಭಾಗದಲ್ಲಿ ಕಾಣಿಸುತ್ತದೆ. |
01:23 | Ubuntu Software Center ಎಂಬ ವಿಂಡೋ ಎರಡು ಫಲಕಗಳಲ್ಲಿ ವಿಭಾಗಿಸಲ್ಪಟ್ಟಿದೆ. |
01:28 | ಎಡ ಫಲಕದಲ್ಲಿ ಸಾಫ್ಟ್ವೇರ್ ಗಳ ವಿಭಾಗಗಳು ಕಾಣಿಸುತ್ತವೆ. |
01:33 | ಬಲ ಫಲಕದಲ್ಲಿ What’s New ಮತ್ತು Top Rated ಕಾಣಿಸುತ್ತವೆ. |
01:38 | What’s New ಎಂಬ ಫಲಕವು ಹೊಸತಾಗಿ ಬಂದ ಸಾಫ್ಟ್ವೇರ್ ಗಳ ಸೂಚಿಯನ್ನು ತೋರಿಸುತ್ತದೆ. |
01:42 | Top Rated ಎಂಬ ಫಲಕವು ಬಳಕೆದಾರರಿಂದ ಹೆಚ್ಚು ಶ್ರೇಯಾಂಕ ಗಳಿಸಿದ ಹಾಗೂ ಡೌನ್ಲೋಡ್ ಆದ ಸಾಫ್ಟ್ವೇರ್ ಗಳ ಸೂಚಿಯನ್ನು ತೋರಿಸುತ್ತದೆ. |
01:51 | ಈಗ ವಿಭಾಗದ ಅನುಸಾರವಾಗಿ ಸಾಫ್ಟ್ವೇರ್ ಅನ್ನು ಹುಡುಕೋಣ. |
01:55 | ಎಡ ಫಲಕದಲ್ಲಿ Internet ಎಂಬುದರ ಮೇಲೆ ಕ್ಲಿಕ್ ಮಾಡಿ. |
01:58 | ಇಂಟರ್ನೆಟ್ ಸಾಫ್ಟ್ವೇರ್ ಗಳ ಸೂಚಿ ಹಾಗೂ ಹೆಚ್ಚು ಶ್ರೇಯಾಂಕ ಗಳಿಸಿದ ಇಂಟರ್ನೆಟ್ ಸಾಫ್ಟ್ವೇರ್ ಗಳ ಸೂಚಿಯು ಕಾಣಿಸುತ್ತದೆ. |
02:05 | ಗಮನಿಸಿ, ಕೆಲವು ಸಾಫ್ಟ್ವೇರ್ ಗಳು ಸರಿ ಚಿಹ್ನೆಯಿರುವ ವೃತ್ತಗಳನ್ನು ಹೊಂದಿವೆ. |
02:10 | ಇದು ಈ ಸಾಫ್ಟ್ವೇರ್ ಗಳು ಈಗಾಗಲೇ ನಿಮ್ಮ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಆಗಿವೆ ಎಂಬುದನ್ನು ಸೂಚಿಸುತ್ತದೆ |
02:15 | ಇಂಟರ್ನೆಟ್ ವಿಭಾಗದಲ್ಲಿ ಇನ್ನೂ ಹೆಚ್ಚು ಸಾಫ್ಟ್ವೇರ್ ಗಳನ್ನು ನೋಡಬಯಸಿದಲ್ಲಿ All ಎಂಬ ಐಕಾನ್ ಅನ್ನು ಒತ್ತಿ. |
02:21 | ಈಗ ಇಂಟರ್ನೆಟ್ ವಿಭಾಗದಲ್ಲಿನ ಎಲ್ಲಾ ಸಾಫ್ಟ್ವೇರ್ ಗಳೂ ವಿಂಡೋ ನಲ್ಲಿ ಸೂಚಿಬದ್ದವಾಗಿದೆ. |
02:26 | ನೀವು ಸಾಫ್ಟ್ವೇರ್ ಗಳನ್ನು ಹೆಸರಿಗೆ, ಶ್ರೇಯಾಂಕಕ್ಕೆ ಅಥವಾ ಹೊಸತಿಗೆ ಅನುಸಾರವಾಗಿ ಕ್ರಮಪಡಿಸಬಹುದು. |
02:32 | ಈಗ ಬಲ ಮೇಲ್ಭಾಗದ ಮೂಲೆಯಲ್ಲಿ ಕಾಣುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡೋಣ. |
02:36 | ಸೂಚಿಯಿಂದ By Top Rated ಎಂಬುದನ್ನು ಆಯ್ಕೆಮಾಡಿ. |
02:40 | ಈಗ ಇಂಟರ್ನೆಟ್ ಸಾಫ್ಟ್ವೇರ್ ಗಳು ಶ್ರೇಯಾಂಕಕ್ಕೆ ಅನುಸಾರವಾಗಿ ಕ್ರಮಬದ್ದಗೊಳ್ಳುತ್ತವೆ. |
02:45 | ನಿಮ್ಮ ಕಂಪ್ಯೂಟರ್ ನಲ್ಲಿ ಈಗಾಗಲೇ ಇನ್ಸ್ಟಾಲ್ ಆಗಿರುವ ಸಾಫ್ಟ್ವೇರ್ ಗಳನ್ನು ನೋಡಬಯಸಿದಲ್ಲಿ, |
02:50 | Installed ಎಂಬ ಬಟನ್ ಅನ್ನು ಒತ್ತಿ. |
02:53 | ಸಾಫ್ಟ್ವೇರ್ ನ ವಿಭಾಗಗಳು ಕಾಣಿಸಿಕೊಳ್ಳುತ್ತದೆ. |
02:56 | ಅಲ್ಲಿ Sound & Video ಎಂಬುದರ ಪಕ್ಕದಲ್ಲಿರುವ ಸಣ್ಣ ತ್ರಿಕೋಣವನ್ನು ಕ್ಲಿಕ್ ಮಾಡಿ. |
03:02 | ಇದು ನಿಮ್ಮ ಕಂಪ್ಯೂಟರ್ ನಲ್ಲಿ Sound and Video ಎಂಬ ವಿಭಾಗದ ಯಾವ ಯಾವ ಸಾಫ್ಟ್ವೇರ್ ಗಳು ಇನ್ಸ್ಟಾಲ್ ಆಗಿವೆ ಎಂಬುದನ್ನು ತೋರಿಸುತ್ತದೆ. |
03:08 | ಈಗ All Software ಎಂಬಲ್ಲಿನ ಡ್ರಾಪ್ ಡೌನ್ ನಲ್ಲಿ Provided by Ubuntu ಎಂಬುದನ್ನು ಆಯ್ಕೆ ಮಾಡಿ. |
03:14 | ಉಬಂಟು ಕಡೆಯಿಂದ ಒದಗಿಸಲ್ಪಡುವ ಎಲ್ಲಾ ಸಾಫ್ಟ್ವೇರ್ ಗಳ ಸೂಚಿಯು ಕಾಣಿಸುತ್ತದೆ. |
03:19 | ಈಗ ನಾವು VLC media player ಎಂಬ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡೋಣ. |
03:24 | ವಿಂಡೋದ ಬಲ ಮೇಲ್ಭಾಗದಲ್ಲಿರುವ ಸರ್ಚ್ ಬಾಕ್ಸ್ ನಲ್ಲಿ VLC ಎಂದು ಟೈಪ್ ಮಾಡಿ. |
03:29 | VLC media player ಕಾಣಿಸುತ್ತದೆ. |
03:33 | ಈಗ Install ನ ಮೇಲೆ ಕ್ಲಿಕ್ ಮಾಡಿ. |
03:35 | ದೃಢೀಕರಿಸಲು ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
03:38 | ಅಲ್ಲಿ ನಿಮ್ಮ ಸಿಸ್ಟಮ್ ನ ಪಾಸ್ವರ್ಡ್ ಅನ್ನು ನಮೂದಿಸಿ. |
03:42 | Authenticate ಎಂಬಲ್ಲಿ ಕ್ಲಿಕ್ ಮಾಡಿ. |
03:44 | ಪ್ರೊಗ್ರೆಸ್ ಬಾರ್ ನತ್ತ ನೋಡಿ, ಅದು VLC ಯು ಇನ್ಸ್ಟಾಲ್ ಆಗುತ್ತಿದೆ ಎಂದು ತೋರಿಸುತ್ತದೆ. |
03:50 | ಇನ್ಸ್ಟಾಲೇಶನ್ ಎಂಬುದು ಇನ್ಸ್ಟಾಲ್ ಆಗುತ್ತಿರುವ ಪ್ಯಾಕೇಜ್ ನ ಆಕೃತಿ ಪರಿಮಾಣಕ್ಕನುಗುಣವಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. |
03:57 | ಮೇಲಿರುವ ಬಟನ್ ನಿಂದ ಕೂಡಾ ಪ್ರೊಗ್ರೆಸ್ ತಿಳಿಯುತ್ತದೆ. |
04:02 | ನೀವು ಇದು ಇನ್ಸ್ಟಾಲ್ ಆಗುತ್ತಿರುವಾಗ ಬೇರೆ ಅಪ್ಲಿಕೇಶನ್ ಅನ್ನು ನೋಡಬಹುದು. |
04:07 | ಒಮ್ಮೆ VLC ಯು ಇನ್ಸ್ಟಾಲ್ ಆಯಿತೆಂದರೆ ಅದರ ಹತ್ತಿರ ಸಣ್ಣ ಟಿಕ್ ಮಾರ್ಕ್ ಕಾಣಿಸುತ್ತದೆ. |
04:13 | Remove ಎಂಬ ಬಟನ್ ಬಲ ಭಾಗದಲ್ಲಿ ಕಾಣಿಸುತ್ತದೆ. |
04:17 | ನೀವು VLC ಯನ್ನು ಅನ್ಇನ್ಸ್ಟಾಲ್ ಮಾಡಬಯಸಿದಲ್ಲಿ Remove ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:23 | ಹೀಗೆಯೇ ನೀವು ಉಳಿದ ಎಲ್ಲಾ ಸಾಫ್ಟ್ವೇರ್ ಪ್ಯಾಕೇಜ್ ಗಳನ್ನು ಸರ್ಚ್ ಮಾಡಿ ಇನ್ಸ್ಟಾಲ್ ಮಾಡಬಹುದಾಗಿದೆ. |
04:29 | ಈಗ ನಾವು History ಯನ್ನು ನೋಡೋಣ. |
04:31 | ಇದು ಸಾಫ್ಟ್ವೇರ್ ಗಳ ಇನ್ಸ್ಟಾಲೇಶನ್, ಅಪ್ಡೇಟ್ ಹಾಗೂ ರಿಮೂವಲ್ ಅನ್ನು ಒಳಗೊಂಡಂತೆ ಎಲ್ಲಾ ಬದಲಾವಣೆಗಳನ್ನೂ ತೋರಿಸುತ್ತದೆ. |
04:40 | History ಯನ್ನು ಕ್ಲಿಕ್ ಮಾಡಿ. History ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
04:45 | ನೀವು ನಿಮ್ಮ ಹಿಸ್ಟರಿಯನ್ನು All Changes, Installations, Updates ಮತ್ತು Removals ಎಂಬೀ ವಿಭಾಗಗಳಲ್ಲಿ ನೋಡಬಹುದು. |
04:51 | All Changes ಎಂಬಲ್ಲಿ ಕ್ಲಿಕ್ ಮಾಡಿ. |
04:53 | ಈ ಸೂಚಿಯಲ್ಲಿ ನಾವು ಮಾಡಿದ ಇನ್ಸ್ಟಾಲೇಶನ್, ಅಪ್ಡೇಟ್ ಹಾಗೂ ರಿಮೂವಲ್ ನ ಎಲ್ಲಾ ಮಾಹಿತಿಯು ಇರುತ್ತದೆ. |
05:01 | ನೀವು ಇನ್ಸ್ಟಾಲ್ ಆದ ಸಾಫ್ಟ್ವೇರ್ ಗಳನ್ನು ನಿಯಮಿತವಾಗಿಅಪ್ಡೇಟ್ ಮಾಡಬಹುದು. |
05:07 | ನೀವು ಉಬಂಟುವಿನ ಬಗ್ಗೆ ಹಾಗೂ ಉಬಂಟು ಸಾಫ್ಟ್ವೇರ್ ಸೆಂಟರ್ ನ ಬಗ್ಗೆ ಹೆಚ್ಚು ತಿಳಿಯಲು ಉಬಂಟುವಿನ ವೆಬ್ಸೈಟ್ ಗೆ ಭೇಟಿಕೊಡಿ. <Pause> |
05:17 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಮುಕ್ತಾಯದ ಹಂತಕ್ಕೆ ಬಂದೆವು. |
05:21 | ಈ ಟ್ಯುಟೋರಿಯಲ್ ನಲ್ಲಿ ನಾವು ಉಬಂಟು ಸಾಫ್ಟ್ವೇರ್ ಸೆಂಟರ್ ನ ಉಪಯೋಗದ ಬಗ್ಗೆ ತಿಳಿದೆವು. |
05:26 | ನಾವು ಉಬಂಟು ಆಪರೇಟಿಂಗ್ ಸಿಸ್ಟಮ್ ನಲ್ಲಿ ಸಾಫ್ಟ್ವೇರ್ ಗಳನ್ನು ಹೇಗೆ ಇನ್ಸ್ಟಾಲ್, ಅಪ್ಡೇಟ್ ಹಾಗೂ ಅನ್ಇನ್ಸ್ಟಾಲ್ ಮಾಡುವುದು ಎಂಬುದನ್ನೂ ಕಲಿತೆವು. |
05:36 | ಇಲ್ಲಿ ನಿಮಗೊಂದು ಅಭ್ಯಾಸವಿದೆ. |
05:39 | ಉಬಂಟು ಸಾಫ್ಟ್ವೇರ್ ಸೆಂಟರ್ ನ ಮೂಲಕ Thunderbird ಅನ್ನು ಇನ್ಸ್ಟಾಲ್ ಮಾಡಿ. |
05:46 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋವನ್ನು ವೀಕ್ಷಿಸಿ. |
05:49 | ಇದು ಈ ಪ್ರಾಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
05:52 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
05:57 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
06:02 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
06:06 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
06:12 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
06:17 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
06:24 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
06:35 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |