Scilab/C4/User-Defined-Input-and-Output/Kannada
From Script | Spoken-Tutorial
Revision as of 18:38, 16 November 2017 by Sandhya.np14 (Talk | contribs)
Time | Narration |
00:01 | ಸೈಲ್ಯಾಬ್ ನ File handling ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:08 | 'ಇನ್ಪುಟ್ ಫಂಕ್ಷನ್' |
00:10 | 'ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು' |
00:12 | 'ಸೇವ್ ಫಂಕ್ಷನ್ ' |
00:14 | 'ಲೋಡ್ ಫಂಕ್ಷನ್' ಗಳ ಕುರಿತು ಕಲಿಯುತ್ತೇವೆ. |
00:16 | ವಿವರಣೆಗಾಗಿ ನಾನು,Scilab ಆವೃತ್ತಿ 5.3.3 ಇನ್ಸ್ಟಾಲ್ ಆಗಿರುವ Ubuntu Linux 12.04 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ. |
00:26 | ನೀವು ಸೈಲ್ಯಾಬ್ ನ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. |
00:29 | ಇಲ್ಲವಾದಲ್ಲಿ, ಸೈಲ್ಯಾಬ್ ನ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ,spoken hyphen tutorial dot org ವೆಬ್ಸೈಟ್ ಗೆ ಭೇಟಿಕೊಡಿ. |
00:37 | ಯೂಸರ್ ನಿಂದ ಇನ್ಪುಟ್ ಅನ್ನು ಪಡೆದುಕೊಳ್ಳಲು, input() ಫಂಕ್ಷನ್ ಅನ್ನು ಬಳಸಲಾಗುತ್ತದೆ. |
00:42 | ಇದು ಯೂಸರ್ ಇನ್ಪುಟ್ ಗಾಗಿ, ಟೆಕ್ಸ್ಟ್-ಸ್ಟ್ರಿಂಗ್ ನಲ್ಲಿ ಒಂದು ಪ್ರಾಮ್ಟ್ ಅನ್ನು ಕೊಡುತ್ತದೆ. |
00:47 | ಇದು ಕೀಬೋರ್ಡ್ ನಿಂದ ಇನ್ಪುಟ್ ಗಾಗಿ ಕಾಯುತ್ತದೆ. |
00:51 | ಪ್ರಾಮ್ಟ್ ನಲ್ಲಿ, ಕ್ಯಾರೇಜ್ ರಿಟರ್ನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ನಮೂದಿಸದಿದ್ದರೆ, input() ಫಂಕ್ಷನ್, ಒಂದು ಖಾಲಿ ಮ್ಯಾಟ್ರಿಕ್ಸ್ ಅನ್ನು ಹಿಂದಿರುಗಿಸುತ್ತದೆ. |
00:59 | 'ಇನ್ಪುಟ್' ಫಂಕ್ಷನ್ ಅನ್ನು ಎರಡು ರೀತಿಯಲ್ಲಿ ಬರೆಯಬಹುದು: |
01:03 | ಮೊದಲನೆಯದು, x= input into brackets "message to display" |
01:09 | ಎರಡನೆಯದು, x= input into brackets ("message to display", "strings"). |
01:17 | ಎರಡನೆಯ ಉದಾಹರಣೆಯಲ್ಲಿ, ಎರಡನೆಯ ಆರ್ಗ್ಯುಮೆಂಟ್ “string” ಆಗಿದೆ. |
01:22 | ಹಾಗಾಗಿ, ಔಟ್ಪುಟ್, ಒಂದು ‘ಕ್ಯಾರೆಕ್ಟರ್ ಸ್ಟ್ರಿಂಗ್’ ಆಗಿರುತ್ತದೆ. ಈ, ಎಕ್ಸ್ಪ್ರೆಷನ್ ಅನ್ನು (expression) ಕೀ ಬೋರ್ಡ್ ಬಳಸಿ ಸೇರಿಸಲಾಗಿದೆ. |
01:29 | ಸೈಲ್ಯಾಬ್ ಕನ್ಸೋಲ್ ವಿಂಡೋಗೆ ಬದಲಾಯಿಸಿ, ಮತ್ತು |
01:33 | ಹೀಗೆ ಟೈಪ್ ಮಾಡಿ: x is equal to input open bracket inside double quotes Enter your age close the double quotes close the bracket ಮತ್ತು Enter ಅನ್ನು ಒತ್ತಿ. |
01:49 | 25 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
01:53 | ಈಗ ಹೀಗೆ ಟೈಪ್ ಮಾಡಿ: y is equal to input into bracket into double quotes Enter your age close the double quotes comma again inside double quotes write string close the bracket ಮತ್ತು Enter ಅನ್ನು ಒತ್ತಿ. |
02:14 | 25 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
02:18 | ಈ ಎರಡೂ ಸಂದರ್ಭಗಳಲ್ಲಿ, ಕೀ ಬೋರ್ಡ್ ನ ಮೂಲಕ ನಾವು 25 ಅನ್ನು ನಮೂದಿಸಿದ್ದೇವೆ ಎಂದು ನೋದುತ್ತೇವೆ. |
02:25 | ಈಗ ನಾವು x ಮತ್ತು y ವೇರಿಯೇಬಲ್ ಗಳ ಟೈಪ್ ಅನ್ನು ಪರೀಕ್ಷಿಸೋಣ. |
02:30 | clc ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ಖಾಲಿ ಮಾಡೋಣ. |
02:34 | ಎರಡನೆಯ ಉದಾಹರಣೆಯಲ್ಲಿ ಕೊಟ್ಟಿರುವ “string” ಆರ್ಗ್ಯುಮೆಂಟ್ ನ ಬಳಕೆ ಮತ್ತು ಉಪಯುಕ್ತತೆಯನ್ನು ಪರಿಶೀಲಿಸಲು ನಾವು ಇದನ್ನು ಮಾಡುತ್ತಿದ್ದೇವೆ. |
02:42 | ವೇರಿಯೇಬಲ್ ನ ಟೈಪ್ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ. |
02:45 | -->typeof into brackets x ಮತ್ತು Enter ಅನ್ನು ಒತ್ತಿ. |
02:51 | ಹಾಗೆಯೇ, typeof(y) ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
02:57 | ‘x’ ನಲ್ಲಿ ಸ್ಟೋರ್ ಮಾಡಲಾದ ಮೊದಲನೆಯ ಉತ್ತರವು, constant ಟೈಪ್ ನದ್ದು ಆಗಿದೆ. |
03:04 | ಮತ್ತು, ‘y’ ನಲ್ಲಿ ಸ್ಟೋರ್ ಆದ ಎರಡನೆಯ ಉತ್ತರವು, string ಟೈಪ್ ನದ್ದು ಆಗಿದೆ. ಇದು ಆರ್ಗ್ಯುಮೆಂಟ್ “string” ಅನ್ನು ಕಮಾಂಡ್ ನಲ್ಲಿ ಹೊಂದಿದೆ. ಇದನ್ನು ನೀವು ಸ್ವತಃ ನೋಡಬಹುದು. |
03:12 | ಈಗ ನಾವು ಕನ್ಸೋಲ್ ನ ಮೇಲೆ ತೋರಿಸಲಾದ ಔಟ್ಪುಟ್ ಅನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂದು ನೋಡೋಣ. |
03:17 | mprintf()ಫಂಕ್ಷನ್ ಅನ್ನು ಬಳಸಿ ಇದನ್ನು ಮಾಡಬಹುದು. |
03:22 | mprintf() ಫಂಕ್ಷನ್, ಡೇಟಾವನ್ನು ಪರಿವರ್ತಿಸಿ, ಫಾರ್ಮ್ಯಾಟ್ ಮಾಡಿ , ಸೈಲ್ಯಾಬ್ ಕನ್ಸೋಲ್ ನ ಮೇಲೆ ಬರೆಯುತ್ತದೆ. |
03:28 | ಇದು, C-ಕೋಡ್ ನ printf() ಫಂಕ್ಷನ್ ನಂತಹ ಒಂದು ಇಂಟರ್ಫೇಸ್ ಆಗಿದೆ. |
03:34 | ಈಗ ನಾವು ಇದರ ಒಂದು ಉದಾಹರಣೆಯನ್ನು ನೋಡೋಣ. ಕನ್ಸೋಲ್ ಗೆ ಹೋಗಿ. |
03:38 | ಹೀಗೆ ಟೈಪ್ ಮಾಡಿ: mprintf into bracket into quotes type At iteration percent i comma Result is colon slash n alpha is equal to percentf comma 33 comma 0.535 close the bracket. |
04:12 | ಇಲ್ಲಿ, percent i (%i) ಇರುವಲ್ಲಿ 33 ಮತ್ತು percent f (%f) ಇರುವಲ್ಲಿ point 535 (0.535) ಗಳನ್ನು ಡಿಸ್ಪ್ಲೇ ಮಾಡಲಾಗುವುದು. Enter ಅನ್ನು ಒತ್ತಿ. |
04:26 | ಇದು At iteration 33, Result is alpha is equal to 0.535000 ಎಂಬ ಔಟ್ಪುಟ್ ಅನ್ನು ಕೊಡುತ್ತದೆ. |
04:39 | ಕನ್ಸೋಲ್ ಅನ್ನು ತೆರವುಗೊಳಿಸಿ. ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ. |
04:44 | mprintf open bracket into quotes Value of x is equal to percentage d is taken as a CONSTANT comma while value of y is equal to percent s is taken as a STRING close the quotes comma x comma y close the bracket. |
05:19 | ಮೇಲಿನ ಉದಾಹರಣೆಯಲ್ಲಿ, ವೇರೀಯೇಬಲ್ ‘x’ ನಲ್ಲಿ ಸ್ಟೋರ್ ಆದ constant ಡೇಟಾಅನ್ನು ಸೇರಿಸಲು, ‘ಪರ್ಸೆಂಟೇಜ್ d’ (%d) ಯನ್ನು ಬಳಸಲಾಗಿದೆ. |
05:28 | ‘y’ ವೇರಿಯೇಬಲ್ ನಲ್ಲಿ ಸ್ಟೋರ್ ಆದ ಸ್ಟ್ರಿಂಗ್ ಡೇಟಾಅನ್ನು ಸೇರಿಸಲು, 'ಪರ್ಸೆಂಟೇಜ್ s' (%s) ಅನ್ನು ಬಳಸಲಾಗಿದೆ. |
05:38 | ಈಗ save ಮತ್ತು load ಕಮಾಂಡ್ ಗಳ ಬಳಕೆಯ ಬಗ್ಗೆ ನೋಡೋಣ. |
05:43 | ಸೈಲ್ಯಾಬ್ ನಲ್ಲಿ ಕೆಲಸ ಮಾಡುವಾಗ, ಮಧ್ಯದಲ್ಲಿ ಹೊರಬಂದು |
05:47 | ನಂತರ ಮುಂದುವರೆಸಲು, save thissession ಎಂದು ಟೈಪ್ ಮಾಡಿ. |
05:52 | ಇದು, ಎಲ್ಲ ವೇರಿಯೇಬಲ್ ಗಳ ಈಗಿನ ವ್ಯಾಲ್ಯೂಗಳನ್ನು, thissession ಎಂಬ ಫೈಲ್ ನಲ್ಲಿ ಸೇವ್ ಮಾಡುತ್ತದೆ. |
05:58 | ಈ ಫೈಲ್ ಅನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. |
06:01 | ಇದು ಬೈನರಿ ಫಾರ್ಮ್ಯಾಟ್ ನಲ್ಲಿರುತ್ತದೆ. |
06:04 | ನೀವು ನಂತರ ಸೈಲ್ಯಾಬ್ ಅನ್ನು ಪ್ರಾರಂಭಿಸಿದಾಗ load thissession ಎಂದು ಟೈಪ್ ಮಾಡಿ. |
06:08 | ನೀವು ಲೆಕ್ಕವನ್ನು ಎಲ್ಲಿ ಬಿಟ್ಟಿದ್ದರೋ ಅಲ್ಲಿಂದಲೇ ಮುಂದುವರಿಸಬಹುದು. |
06:13 | save ಮತ್ತು load ಫಂಕ್ಷನ್ ಗಳ ಉದ್ದೇಶಗಳು: |
06:16 | save() ಕಮಾಂಡ್, ಸೈಲ್ಯಾಬ್ ನ ಈಗಿನ ಎಲ್ಲಾ ವೇರಿಯೇಬಲ್ ಗಳನ್ನು ಒಂದು ಬೈನರಿ ಫೈಲ್ ನಲ್ಲಿ ಸೇವ್ ಮಾಡುತ್ತದೆ. |
06:22 | ಒಂದುವೇಳೆ, ವೇರಿಯೇಬಲ್, ‘ಗ್ರಾಫಿಕ್ ಹ್ಯಾಂಡಲ್’ ಆಗಿದ್ದರೆ, save ಫಂಕ್ಷನ್, ಎಲ್ಲ ಸಂಬಂಧಿತ ಗ್ರಾಫಿಕ್_ಎಂಟಿಟಿಗಳ ಡೆಫಿನಿಶನ್ ಅನ್ನು ಸೇವ್ ಮಾಡುತ್ತದೆ. |
06:31 | ಈ ಫೈಲ್ ಅನ್ನು, ಅದರ ಪಾಥ್ ಮೂಲಕ ಅಥವಾ ಹಿಂದೆ ಹೇಳಿದ ‘ಡಿಸ್ಕ್ರಿಪ್ಟರ್’ ನ ಮೂಲಕ ಕೊಡಬಹುದು. |
06:37 | save(filename), ಈಗಿನ ಎಲ್ಲಾ ವೇರಿಯೇಬಲ್ ಗಳನ್ನು, filename ಸೂಚಿಸುವ ಹೆಸರಿನ ಫೈಲ್ ನಲ್ಲಿ, ಸೇವ್ ಮಾಡುತ್ತದೆ. |
06:45 | save into bracket fd, ಈಗಿನ ಎಲ್ಲಾ ವೇರಿಯೇಬಲ್ ಗಳನ್ನು, ಡಿಸ್ಕ್ರಿಪ್ಟರ್ fd ಯಿಂದ ಸೂಚಿಸಲಾದ ಫೈಲ್ ನಲ್ಲಿ ಸೇವ್ ಮಾಡುತ್ತದೆ. |
06:53 | save(filename,x,y) ಅಥವಾ save(fd,x,y), ಕೇವಲ x ಮತ್ತು y ಹೆಸರಿನ ವೇರಿಯೇಬಲ್ ಗಳನ್ನು ಮಾತ್ರ ಸೇವ್ ಮಾಡುತ್ತದೆ. |
07:02 | save ಮತ್ತು load ಕಮಾಂಡ್ ಗಳ ಬಳಕೆಯನ್ನು ವಿವರಿಸಲು ನಾವು ಒಂದು ಉದಾಹರಣೆಯನ್ನು ನೋಡೋಣ. |
07:07 | ಕನ್ಸೋಲ್ ಗೆ ಹಿಂದಿರುಗಿ. ನಾವು a ಮತ್ತು b ಎಂಬ ಎರಡು ಮ್ಯಾಟ್ರಿಕ್ಸ್ ಗಳನ್ನು ಡಿಫೈನ್ ಮಾಡೋಣ. |
07:14 | ಹೀಗೆ ಟೈಪ್ ಮಾಡಿ: a = eye of (2,2), Enter ಅನ್ನು ಒತ್ತಿ. |
07:22 | ಮತ್ತು b=ones(a), Enter ಅನ್ನು ಒತ್ತಿ. |
07:28 | clc ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ತೆರವುಗೊಳಿಸಿ. ಈಗ, |
07:34 | ಹೀಗೆ ಟೈಪ್ ಮಾಡಿ: save space matrix dash a dash b. |
07:42 | ಅಥವಾ ಅದನ್ನು ಹೀಗೆ ಸಹ ಬರೆಯಬಹುದು: |
07:46 | save into brackets into quotes matrix dash a dash b dot dat close the quotes comma a comma b close the bracket ಮತ್ತು Enter ಅನ್ನು ಒತ್ತಿ. |
08:03 | ಇದು ‘ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರಿ’ಯಲ್ಲಿ, 'matrix dash a dash b dot dat' (matrix-a-b.dat) ಎಂಬ ಬೈನರಿ ಫೈಲ್ ನಲ್ಲಿ, ವೇರಿಯೇಬಲ್ ಗಳ ವ್ಯಾಲ್ಯುಗಳನ್ನು ಸೇವ್ ಮಾಡುತ್ತದೆ. |
08:12 | ಈ ಬೈನರಿ ಫೈಲ್ ಇರುವುದನ್ನು ಪರೀಕ್ಷಿಸಲು, ನೀವು ‘ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರಿ’ಯನ್ನು ಬ್ರೌಸ್ ಮಾಡಬಹುದು. |
08:17 | ನೀವು ಇಲ್ಲಿ ಇದನ್ನು ನೋಡಬಹುದು. ನಾನು ‘ಫೈಲ್ ಬ್ರೌಸರ್’ ಅನ್ನು ಕ್ಲೋಸ್ ಮಾಡುವೆನು. |
08:22 | ಈಗ ನಾವು ಫೈಲ್ ಅನ್ನು ವೇರಿಯೇಬಲ್ ಗಳಲ್ಲಿ ಮತ್ತೆ ಲೋಡ್ ಮಾಡೋಣ. |
08:26 | ಅದಕ್ಕೂ ಮೊದಲು, ನಾವು ವೇರಿಯೇಬಲ್ ಗಳಾದ a ಮತ್ತು b ಗಳನ್ನು ಖಾಲಿ ಮಾಡಬೇಕು. |
08:29 | clear a space b, ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
08:34 | ಈ ವೇರಿಯೇಬಲ್ ಗಳು ನಿಜವಾಗಿಯೂ ಖಾಲಿ ಆಗಿವೆಯೆ ಎಂದು ಇನ್ನೊಮ್ಮೆ ಪರೀಕ್ಷಿಸೋಣ. |
08:39 | ->a , b |
08:41 | ಈಗ ನಾವು load ಕಮಾಂಡ್ ಅನ್ನು ಬಳಸಿ, ‘ಬೈನರಿ ಫೈಲ್’ ಗಳಿಂದ ವ್ಯಾಲ್ಯುಗಳನ್ನು ಈ a ಮತ್ತು b ಎಂಬ ವೇರಿಯೇಬಲ್ ಗಳಲ್ಲಿ ಲೋಡ್ ಮಾಡೋಣ. |
08:49 | ಹೀಗೆ ಟೈಪ್ ಮಾಡಿ: load into bracket into quote matrix dash a dash b dot dat close the quotes comma into quotes a comma into quotes b close the bracket. Enter ಅನ್ನು ಒತ್ತಿ. |
09:08 | ನಾವು, ವೇರಿಯೇಬಲ್ a ಮತ್ತು b ಗಳಲ್ಲಿರುವ ವ್ಯಾಲ್ಯುಗಳನ್ನು ಪರೀಕ್ಷಿಸೋಣ. ಕನ್ಸೋಲ್ ಅನ್ನು ತೆರವುಗೊಳಿಸಿ. |
09:14 | ಹೀಗೆ ಟೈಪ್ ಮಾಡಿ: -->a ಮತ್ತು -->b |
09:18 | ವ್ಯಾಲ್ಯುಗಳು, ವೇರಿಯೇಬಲ್ ಗಳಲ್ಲಿ ಮತ್ತೆ ಲೋಡ್ ಆಗಿರುವುದನ್ನು ನೀವು ನೋಡಬಹುದು. |
09:23 | ಈ ಟ್ಯುಟೋರಿಯಲ್ ನಲ್ಲಿ ನಾವು - input ಕಮಾಂಡ್ ಅನ್ನು ಬಳಸಿ ಇನ್ಪುಟ್ ಫಂಕ್ಷನ್, |
09:28 | mprintf ಕಮಾಂಡ್ ಅನ್ನು ಬಳಸಿ, ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು, |
09:31 | save ಮತ್ತು |
09:33 | load ಫಂಕ್ಷನ್- ಇವುಗಳ ಕುರಿತು ಕಲಿತಿದ್ದೇವೆ. |
09:35 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
09:38 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
09:41 | ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:46 | ಸ್ಪೋಕನ್ ಟ್ಯುಟೋರಿಯಲ್ ತಂಡವು: |
09:48 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
09:51 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:54 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org. |
10:01 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
10:05 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:12 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
10:23 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
10:26 | ಧನ್ಯವಾದಗಳು. |