Scilab/C4/User-Defined-Input-and-Output/Kannada

From Script | Spoken-Tutorial
Jump to: navigation, search
Time Narration
00:01 ಸೈಲ್ಯಾಬ್ ನ File handling ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
00:08 'ಇನ್ಪುಟ್ ಫಂಕ್ಷನ್'
00:10 'ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು'
00:12 'ಸೇವ್ ಫಂಕ್ಷನ್ '
00:14 'ಲೋಡ್ ಫಂಕ್ಷನ್' ಗಳ ಕುರಿತು ಕಲಿಯುತ್ತೇವೆ.
00:16 ವಿವರಣೆಗಾಗಿ ನಾನು,Scilab ಆವೃತ್ತಿ 5.3.3 ಇನ್ಸ್ಟಾಲ್ ಆಗಿರುವ Ubuntu Linux 12.04 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ.
00:26 ನೀವು ಸೈಲ್ಯಾಬ್ ನ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು.
00:29 ಇಲ್ಲವಾದಲ್ಲಿ, ಸೈಲ್ಯಾಬ್ ನ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ,spoken hyphen tutorial dot org ವೆಬ್ಸೈಟ್ ಗೆ ಭೇಟಿಕೊಡಿ.
00:37 ಯೂಸರ್ ನಿಂದ ಇನ್ಪುಟ್ ಅನ್ನು ಪಡೆದುಕೊಳ್ಳಲು, input() ಫಂಕ್ಷನ್ ಅನ್ನು ಬಳಸಲಾಗುತ್ತದೆ.
00:42 ಇದು ಯೂಸರ್ ಇನ್ಪುಟ್ ಗಾಗಿ, ಟೆಕ್ಸ್ಟ್-ಸ್ಟ್ರಿಂಗ್ ನಲ್ಲಿ ಒಂದು ಪ್ರಾಮ್ಟ್ ಅನ್ನು ಕೊಡುತ್ತದೆ.
00:47 ಇದು ಕೀಬೋರ್ಡ್ ನಿಂದ ಇನ್ಪುಟ್ ಗಾಗಿ ಕಾಯುತ್ತದೆ.
00:51 ಪ್ರಾಮ್ಟ್ ನಲ್ಲಿ, ಕ್ಯಾರೇಜ್ ರಿಟರ್ನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ನಮೂದಿಸದಿದ್ದರೆ, input() ಫಂಕ್ಷನ್, ಒಂದು ಖಾಲಿ ಮ್ಯಾಟ್ರಿಕ್ಸ್ ಅನ್ನು ಹಿಂದಿರುಗಿಸುತ್ತದೆ.
00:59 'ಇನ್ಪುಟ್' ಫಂಕ್ಷನ್ ಅನ್ನು ಎರಡು ರೀತಿಯಲ್ಲಿ ಬರೆಯಬಹುದು:
01:03 ಮೊದಲನೆಯದು, x= input into brackets "message to display"
01:09 ಎರಡನೆಯದು, x= input into brackets ("message to display", "string").
01:17 ಎರಡನೆಯ ಉದಾಹರಣೆಯಲ್ಲಿ, ಎರಡನೆಯ ಆರ್ಗ್ಯುಮೆಂಟ್ “string” ಆಗಿದೆ.
01:22 ಹಾಗಾಗಿ, ಔಟ್ಪುಟ್, ಒಂದು ‘ಕ್ಯಾರೆಕ್ಟರ್ ಸ್ಟ್ರಿಂಗ್’ ಆಗಿರುತ್ತದೆ. ಈ, ಎಕ್ಸ್ಪ್ರೆಷನ್ ಅನ್ನು (expression) ಕೀ ಬೋರ್ಡ್ ಬಳಸಿ ಸೇರಿಸಲಾಗಿದೆ.
01:29 ಸೈಲ್ಯಾಬ್ ಕನ್ಸೋಲ್ ವಿಂಡೋಗೆ ಬದಲಾಯಿಸಿ, ಮತ್ತು
01:33 ಹೀಗೆ ಟೈಪ್ ಮಾಡಿ: x is equal to input open bracket inside double quotes Enter your age close the double quotes close the bracket ಮತ್ತು Enter ಅನ್ನು ಒತ್ತಿ.
01:49 25 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
01:53 ಈಗ ಹೀಗೆ ಟೈಪ್ ಮಾಡಿ: y is equal to input into bracket into double quotes Enter your age close the double quotes comma again inside double quotes write string close the bracket ಮತ್ತು Enter ಅನ್ನು ಒತ್ತಿ.
02:14 25 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
02:18 ಈ ಎರಡೂ ಸಂದರ್ಭಗಳಲ್ಲಿ, ಕೀ ಬೋರ್ಡ್ ನ ಮೂಲಕ ನಾವು 25 ಅನ್ನು ನಮೂದಿಸಿದ್ದೇವೆ ಎಂದು ನೋದುತ್ತೇವೆ.
02:25 ಈಗ ನಾವು x ಮತ್ತು y ವೇರಿಯೇಬಲ್ ಗಳ ಟೈಪ್ ಅನ್ನು ಪರೀಕ್ಷಿಸೋಣ.
02:30 clc ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ಖಾಲಿ ಮಾಡೋಣ.
02:34 ಎರಡನೆಯ ಉದಾಹರಣೆಯಲ್ಲಿ ಕೊಟ್ಟಿರುವ “string” ಆರ್ಗ್ಯುಮೆಂಟ್ ನ ಬಳಕೆ ಮತ್ತು ಉಪಯುಕ್ತತೆಯನ್ನು ಪರಿಶೀಲಿಸಲು ನಾವು ಇದನ್ನು ಮಾಡುತ್ತಿದ್ದೇವೆ.
02:42 ವೇರಿಯೇಬಲ್ ನ ಟೈಪ್ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ.
02:45 -->typeof into brackets x ಮತ್ತು Enter ಅನ್ನು ಒತ್ತಿ.
02:51 ಹಾಗೆಯೇ, typeof(y) ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
02:57 ‘x’ ನಲ್ಲಿ ಸ್ಟೋರ್ ಮಾಡಲಾದ ಮೊದಲನೆಯ ಉತ್ತರವು, constant ಟೈಪ್ ನದ್ದು ಆಗಿದೆ.
03:04 ಮತ್ತು, ‘y’ ನಲ್ಲಿ ಸ್ಟೋರ್ ಆದ ಎರಡನೆಯ ಉತ್ತರವು, string ಟೈಪ್ ನದ್ದು ಆಗಿದೆ. ಇದು ಆರ್ಗ್ಯುಮೆಂಟ್ “string” ಅನ್ನು ಕಮಾಂಡ್ ನಲ್ಲಿ ಹೊಂದಿದೆ. ಇದನ್ನು ನೀವು ಸ್ವತಃ ನೋಡಬಹುದು.
03:12 ಈಗ ನಾವು ಕನ್ಸೋಲ್ ನ ಮೇಲೆ ತೋರಿಸಲಾದ ಔಟ್ಪುಟ್ ಅನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂದು ನೋಡೋಣ.
03:17 mprintf()ಫಂಕ್ಷನ್ ಅನ್ನು ಬಳಸಿ ಇದನ್ನು ಮಾಡಬಹುದು.
03:22 mprintf() ಫಂಕ್ಷನ್, ಡೇಟಾವನ್ನು ಪರಿವರ್ತಿಸಿ, ಫಾರ್ಮ್ಯಾಟ್ ಮಾಡಿ , ಸೈಲ್ಯಾಬ್ ಕನ್ಸೋಲ್ ನ ಮೇಲೆ ಬರೆಯುತ್ತದೆ.
03:28 ಇದು, C-ಕೋಡ್ ನ printf() ಫಂಕ್ಷನ್ ನಂತಹ ಒಂದು ಇಂಟರ್ಫೇಸ್ ಆಗಿದೆ.
03:34 ಈಗ ನಾವು ಇದರ ಒಂದು ಉದಾಹರಣೆಯನ್ನು ನೋಡೋಣ. ಕನ್ಸೋಲ್ ಗೆ ಹೋಗಿ.
03:38 ಹೀಗೆ ಟೈಪ್ ಮಾಡಿ: mprintf into bracket into quotes type At iteration percent i comma Result is colon slash n alpha is equal to percentf comma 33 comma 0.535 close the bracket.
04:12 ಇಲ್ಲಿ, percent i (%i) ಇರುವಲ್ಲಿ 33 ಮತ್ತು percent f (%f) ಇರುವಲ್ಲಿ point 535 (0.535) ಗಳನ್ನು ಡಿಸ್ಪ್ಲೇ ಮಾಡಲಾಗುವುದು. Enter ಅನ್ನು ಒತ್ತಿ.
04:26 ಇದು At iteration 33, Result is alpha is equal to 0.535000 ಎಂಬ ಔಟ್ಪುಟ್ ಅನ್ನು ಕೊಡುತ್ತದೆ.
04:39 ಕನ್ಸೋಲ್ ಅನ್ನು ತೆರವುಗೊಳಿಸಿ. ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ.
04:44 mprintf open bracket into quotes Value of x is equal to percentage d is taken as a CONSTANT comma while value of y is equal to percent s is taken as a STRING close the quotes comma x comma y close the bracket.
05:19 ಮೇಲಿನ ಉದಾಹರಣೆಯಲ್ಲಿ, ವೇರೀಯೇಬಲ್ ‘x’ ನಲ್ಲಿ ಸ್ಟೋರ್ ಆದ constant ಡೇಟಾಅನ್ನು ಸೇರಿಸಲು, ‘ಪರ್ಸೆಂಟೇಜ್ d’ (%d) ಯನ್ನು ಬಳಸಲಾಗಿದೆ.
05:28 ‘y’ ವೇರಿಯೇಬಲ್ ನಲ್ಲಿ ಸ್ಟೋರ್ ಆದ ಸ್ಟ್ರಿಂಗ್ ಡೇಟಾಅನ್ನು ಸೇರಿಸಲು, 'ಪರ್ಸೆಂಟೇಜ್ s' (%s) ಅನ್ನು ಬಳಸಲಾಗಿದೆ.
05:38 ಈಗ save ಮತ್ತು load ಕಮಾಂಡ್ ಗಳ ಬಳಕೆಯ ಬಗ್ಗೆ ನೋಡೋಣ.
05:43 ಸೈಲ್ಯಾಬ್ ನಲ್ಲಿ ಕೆಲಸ ಮಾಡುವಾಗ, ಮಧ್ಯದಲ್ಲಿ ಹೊರಬಂದು
05:47 ನಂತರ ಮುಂದುವರೆಸಲು, save thissession ಎಂದು ಟೈಪ್ ಮಾಡಿ.
05:52 ಇದು, ಎಲ್ಲ ವೇರಿಯೇಬಲ್ ಗಳ ಈಗಿನ ವ್ಯಾಲ್ಯೂಗಳನ್ನು, thissession ಎಂಬ ಫೈಲ್ ನಲ್ಲಿ ಸೇವ್ ಮಾಡುತ್ತದೆ.
05:58 ಈ ಫೈಲ್ ಅನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
06:01 ಇದು ಬೈನರಿ ಫಾರ್ಮ್ಯಾಟ್ ನಲ್ಲಿರುತ್ತದೆ.
06:04 ನೀವು ನಂತರ ಸೈಲ್ಯಾಬ್ ಅನ್ನು ಪ್ರಾರಂಭಿಸಿದಾಗ load thissession ಎಂದು ಟೈಪ್ ಮಾಡಿ.
06:08 ನೀವು ಲೆಕ್ಕವನ್ನು ಎಲ್ಲಿ ಬಿಟ್ಟಿದ್ದರೋ ಅಲ್ಲಿಂದಲೇ ಮುಂದುವರಿಸಬಹುದು.
06:13 save ಮತ್ತು load ಫಂಕ್ಷನ್ ಗಳ ಉದ್ದೇಶಗಳು:
06:16 save() ಕಮಾಂಡ್, ಸೈಲ್ಯಾಬ್ ನ ಈಗಿನ ಎಲ್ಲಾ ವೇರಿಯೇಬಲ್ ಗಳನ್ನು ಒಂದು ಬೈನರಿ ಫೈಲ್ ನಲ್ಲಿ ಸೇವ್ ಮಾಡುತ್ತದೆ.
06:22 ಒಂದುವೇಳೆ, ವೇರಿಯೇಬಲ್, ‘ಗ್ರಾಫಿಕ್ ಹ್ಯಾಂಡಲ್’ ಆಗಿದ್ದರೆ, save ಫಂಕ್ಷನ್, ಎಲ್ಲ ಸಂಬಂಧಿತ ಗ್ರಾಫಿಕ್_ಎಂಟಿಟಿಗಳ ಡೆಫಿನಿಶನ್ ಅನ್ನು ಸೇವ್ ಮಾಡುತ್ತದೆ.
06:31 ಈ ಫೈಲ್ ಅನ್ನು, ಅದರ ಪಾಥ್ ಮೂಲಕ ಅಥವಾ ಹಿಂದೆ ಹೇಳಿದ ‘ಡಿಸ್ಕ್ರಿಪ್ಟರ್’ ನ ಮೂಲಕ ಕೊಡಬಹುದು.
06:37 save(filename), ಈಗಿನ ಎಲ್ಲಾ ವೇರಿಯೇಬಲ್ ಗಳನ್ನು, filename ಸೂಚಿಸುವ ಹೆಸರಿನ ಫೈಲ್ ನಲ್ಲಿ, ಸೇವ್ ಮಾಡುತ್ತದೆ.
06:45 save into bracket fd, ಈಗಿನ ಎಲ್ಲಾ ವೇರಿಯೇಬಲ್ ಗಳನ್ನು, ಡಿಸ್ಕ್ರಿಪ್ಟರ್ fd ಯಿಂದ ಸೂಚಿಸಲಾದ ಫೈಲ್ ನಲ್ಲಿ ಸೇವ್ ಮಾಡುತ್ತದೆ.
06:53 save(filename,x,y) ಅಥವಾ save(fd,x,y), ಕೇವಲ x ಮತ್ತು y ಹೆಸರಿನ ವೇರಿಯೇಬಲ್ ಗಳನ್ನು ಮಾತ್ರ ಸೇವ್ ಮಾಡುತ್ತದೆ.
07:02 save ಮತ್ತು load ಕಮಾಂಡ್ ಗಳ ಬಳಕೆಯನ್ನು ವಿವರಿಸಲು ನಾವು ಒಂದು ಉದಾಹರಣೆಯನ್ನು ನೋಡೋಣ.
07:07 ಕನ್ಸೋಲ್ ಗೆ ಹಿಂದಿರುಗಿ. ನಾವು a ಮತ್ತು b ಎಂಬ ಎರಡು ಮ್ಯಾಟ್ರಿಕ್ಸ್ ಗಳನ್ನು ಡಿಫೈನ್ ಮಾಡೋಣ.
07:14 ಹೀಗೆ ಟೈಪ್ ಮಾಡಿ: a = eye of (2,2), Enter ಅನ್ನು ಒತ್ತಿ.
07:22 ಮತ್ತು b=ones(a), Enter ಅನ್ನು ಒತ್ತಿ.
07:28 clc ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ತೆರವುಗೊಳಿಸಿ. ಈಗ,
07:34 ಹೀಗೆ ಟೈಪ್ ಮಾಡಿ: save space matrix dash a dash b.
07:42 ಅಥವಾ ಅದನ್ನು ಹೀಗೆ ಸಹ ಬರೆಯಬಹುದು:
07:46 save into brackets into quotes matrix dash a dash b dot dat close the quotes comma a comma b close the bracket ಮತ್ತು Enter ಅನ್ನು ಒತ್ತಿ.
08:03 ಇದು ‘ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರಿ’ಯಲ್ಲಿ, 'matrix dash a dash b dot dat' (matrix-a-b.dat) ಎಂಬ ಬೈನರಿ ಫೈಲ್ ನಲ್ಲಿ, ವೇರಿಯೇಬಲ್ ಗಳ ವ್ಯಾಲ್ಯುಗಳನ್ನು ಸೇವ್ ಮಾಡುತ್ತದೆ.
08:12 ಈ ಬೈನರಿ ಫೈಲ್ ಇರುವುದನ್ನು ಪರೀಕ್ಷಿಸಲು, ನೀವು ‘ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರಿ’ಯನ್ನು ಬ್ರೌಸ್ ಮಾಡಬಹುದು.
08:17 ನೀವು ಇಲ್ಲಿ ಇದನ್ನು ನೋಡಬಹುದು. ನಾನು ‘ಫೈಲ್ ಬ್ರೌಸರ್’ ಅನ್ನು ಕ್ಲೋಸ್ ಮಾಡುವೆನು.
08:22 ಈಗ ನಾವು ಫೈಲ್ ಅನ್ನು ವೇರಿಯೇಬಲ್ ಗಳಲ್ಲಿ ಮತ್ತೆ ಲೋಡ್ ಮಾಡೋಣ.
08:26 ಅದಕ್ಕೂ ಮೊದಲು, ನಾವು ವೇರಿಯೇಬಲ್ ಗಳಾದ a ಮತ್ತು b ಗಳನ್ನು ಖಾಲಿ ಮಾಡಬೇಕು.
08:29 clear a space b, ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
08:34 ಈ ವೇರಿಯೇಬಲ್ ಗಳು ನಿಜವಾಗಿಯೂ ಖಾಲಿ ಆಗಿವೆಯೆ ಎಂದು ಇನ್ನೊಮ್ಮೆ ಪರೀಕ್ಷಿಸೋಣ.
08:39 ->a , b
08:41 ಈಗ ನಾವು load ಕಮಾಂಡ್ ಅನ್ನು ಬಳಸಿ, ‘ಬೈನರಿ ಫೈಲ್’ ಗಳಿಂದ ವ್ಯಾಲ್ಯುಗಳನ್ನು ಈ a ಮತ್ತು b ಎಂಬ ವೇರಿಯೇಬಲ್ ಗಳಲ್ಲಿ ಲೋಡ್ ಮಾಡೋಣ.
08:49 ಹೀಗೆ ಟೈಪ್ ಮಾಡಿ: load into bracket into quote matrix dash a dash b dot dat close the quotes comma into quotes a comma into quotes b close the bracket. Enter ಅನ್ನು ಒತ್ತಿ.
09:08 ನಾವು, ವೇರಿಯೇಬಲ್ a ಮತ್ತು b ಗಳಲ್ಲಿರುವ ವ್ಯಾಲ್ಯುಗಳನ್ನು ಪರೀಕ್ಷಿಸೋಣ. ಕನ್ಸೋಲ್ ಅನ್ನು ತೆರವುಗೊಳಿಸಿ.
09:14 ಹೀಗೆ ಟೈಪ್ ಮಾಡಿ: -->a ಮತ್ತು -->b
09:18 ವ್ಯಾಲ್ಯುಗಳು, ವೇರಿಯೇಬಲ್ ಗಳಲ್ಲಿ ಮತ್ತೆ ಲೋಡ್ ಆಗಿರುವುದನ್ನು ನೀವು ನೋಡಬಹುದು.
09:23 ಈ ಟ್ಯುಟೋರಿಯಲ್ ನಲ್ಲಿ ನಾವು - input ಕಮಾಂಡ್ ಅನ್ನು ಬಳಸಿ ಇನ್ಪುಟ್ ಫಂಕ್ಷನ್,
09:28 mprintf ಕಮಾಂಡ್ ಅನ್ನು ಬಳಸಿ, ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು,
09:31 save ಮತ್ತು
09:33 load ಫಂಕ್ಷನ್- ಇವುಗಳ ಕುರಿತು ಕಲಿತಿದ್ದೇವೆ.
09:35 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
09:38 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
09:41 ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:46 ಸ್ಪೋಕನ್ ಟ್ಯುಟೋರಿಯಲ್ ತಂಡವು:
09:48 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
09:51 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:54 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
10:01 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
10:05 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:12 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

10:23 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
10:26 ಧನ್ಯವಾದಗಳು.

Contributors and Content Editors

Anjana310312, Sandhya.np14