Scilab/C2/Plotting-2D-graphs/Kannada
From Script | Spoken-Tutorial
Revision as of 11:46, 27 October 2017 by Anjana310312 (Talk | contribs)
Time | Narration |
00:00 | Scilab (ಸೈಲ್ಯಾಬ್) ನ Plotting 2D graphs ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:04 | ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿದೆ ಎಂದುಕೊಂಡು, ಸೈಲ್ಯಾಬ್ ನ plots ಗಳ ಕುರಿತು ಚರ್ಚೆಯನ್ನು ಪ್ರಾರಂಭಿಸೋಣ. |
00:10 | ಸೈಲ್ಯಾಬ್ ವಿವಿಧ ಬಗೆಯ '2D' ಮತ್ತು '3D' ಪ್ಲೋಟ್ ಗಳನ್ನು ರಚನೆ ಮಾಡಲು ಮತ್ತು ವಿನ್ಯಾಸಗೊಳಿಸಲು ಅವಕಾಶವನ್ನು ಕೊಡುತ್ತದೆ. |
00:15 | ಸೈಲ್ಯಾಬ್ ನಲ್ಲಿ ರಚನೆ ಮಾಡಬಹುದಾದ ಗ್ರಾಫ್ ಗಳು : x-y plots, contour plots, 3D plots, histograms, bar charts ಮುಂತಾದವು. |
00:24 | ಈಗ ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ಓಪನ್ ಮಾಡೋಣ. |
00:28 | ನಾನು ಕಮಾಂಡ್ ಗಳನ್ನು ಕಟ್ ಮತ್ತು ಪೇಸ್ಟ್ ಮಾಡಲು, 'Plotting.sce' ಎಂಬ ಫೈಲ್ ಅನ್ನು ಬಳಸುತ್ತೇನೆ. |
00:34 | ಪ್ಲೋಟ್ ಮಾಡಲು ನಮಗೆ ಬಿಂದುಗಳ ಸಮೂಹ ಬೇಕು. ಈಗ ಸಮಾನ ಅಂತರವನ್ನು ಹೊಂದಿದ ಬಿಂದುಗಳ ಸಮೂಹವನ್ನು ರಚಿಸೋಣ. |
00:39 | ಇದನ್ನು linspace ಕಮಾಂಡ್ ಅನ್ನು ಬಳಸಿ ಮಾಡಬಹುದು ಮತ್ತು ಇದು ಸಮಾನ ಅಂತರವನ್ನು ಹೊಂದಿದ ವೆಕ್ಟರ್ ಅನ್ನು ರಚಿಸುತ್ತದೆ. |
00:45 | ಉದಾಹರಣೆಗೆ,ಆಗಿದೆಆಗಿದೆ |
00:48 | x ಇದು ಒಂದು ನೇರವಾಗಿ, ಸಮಾನ ಅಂತರದಲ್ಲಿ, 1 ಮತ್ತು 10 ರ ನಡುವೆ 5 ಬಿಂದುಗಳನ್ನು ಹೊಂದಿರುವ ರೋ ವೆಕ್ಟರ್ ಆಗಿದೆ |
00:57 | ಇದೇ ರೀತಿ, y ಇದು ಒಂದು ನೇರವಾಗಿ, ಸಮಾನ ಅಂತರದಲ್ಲಿ, 1 ಮತ್ತು 20 ರ ನಡುವೆ 5 ಬಿಂದುಗಳನ್ನು ಹೊಂದಿರುವ ರೋ ವೆಕ್ಟರ್ ಆಗಿದೆ. |
01:08 | linspace ನ ಕುರಿತು ಹೆಚ್ಚಿನ ಮಾಹಿತಿಯನ್ನು Help ಡಾಕ್ಯುಮೆಂಟೇಷನ್ ನಲ್ಲಿ ಪಡೆಯಬಹುದು. |
01:14 | ಈಗ ನಾವು plot ಫಂಕ್ಷನ್ ಅನ್ನು ಬಳಸಿ, x ಮತ್ತು y ಆರ್ಗ್ಯುಮೆಂಟ್ ಗಳೊಂದಿಗೆ ಒಂದು ಗ್ರಾಫ್ ಅನ್ನು ಪ್ಲೋಟ್ ಮಾಡೋಣ. |
01:19 | ಇದು matlab ನಲ್ಲಿ ಬಳಸುವಂತೇ ಇದೆ. |
01:23 | ನೀವು ಇಲ್ಲಿ ನೋಡುವಂತೆ plot(x,y) ಇದು x ಮತ್ತು y ಗಳ ನಡುವೆ ಗ್ರಾಫ್ ಅನ್ನು ರಚಿಸುತ್ತದೆ. |
01:31 | Graphics window ವು '0' ಎಂದು ಲೇಬಲ್ ಆಗಿರುವುದನ್ನು ಗಮನಿಸಿ. |
01:36 | ನಾವು xset ಫಂಕ್ಷನ್ ಅನ್ನು ಬಳಸಿ ಇನ್ನೊಂದು ವಿಂಡೋವನ್ನು ಓಪನ್ ಮಾಡಬಹುದು. |
01:41 | ನಾನು ಇದನ್ನು ಕ್ಲೋಸ್ ಮಾಡುತ್ತೇನೆ. |
01:43 | xset ಫಂಕ್ಷನ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತಿ. |
01:50 | ನೀವು Graphic window number 1 ಅನ್ನು ನೋಡಬಹುದು. |
01:54 | ಈ ಫಂಕ್ಷನ್ ಗೆ ಪಾಸ್ ಮಾಡಿದ ಎರಡು ಆರ್ಗ್ಯುಮೆಂಟ್ ಗಳನ್ನು ಅಂದರೆ, 'window' ಮತ್ತು 1 ಅನ್ನು, ಗಮನಿಸಿ. |
02:03 | ಮುಂದಿನ ಗ್ರಾಫ್ ಅನ್ನು ಈ ವಿಂಡೋ ನಲ್ಲಿ ಪ್ಲೋಟ್ ಮಾಡುತ್ತೇವೆ. |
02:06 | '2d' ಗ್ರಾಫ್ ಅನ್ನು ಪ್ಲೋಟ್ ಮಾಡಲು, plot2d ಫಂಕ್ಷನ್ ಸೈಲ್ಯಾಬ್ ಗೆ ನೇಟಿವ್ ಫಂಕ್ಷನ್ ಆಗಿದೆ. |
02:14 | plot2d ಕಮಾಂಡ್ ನೀವು ಇಲ್ಲಿ ಕಾಣುವಂಟೆ x ಮತ್ತು y ಗಳ ಮೇಲೆ ಗ್ರಾಫ್ ಅನ್ನು ಪ್ಲೋಟ್ ಮಾಡುತ್ತದೆ. |
02:26 | ಇಲ್ಲಿ ಮೂರನೇ ಆರ್ಗ್ಯುಮೆಂಟ್ ಆದ 'style' ಇರುವುದನ್ನು ಗಮನಿಸಿ. |
02:31 | style ಆರ್ಗ್ಯುಮೆಂಟ್ ಐಚ್ಛಿಕ. ಇದು ಗ್ರಾಫ್ ಅನ್ನು ವಿನ್ಯಾಸಗೊಳಿಸಲು ಉಪಯುಕ್ತ. |
02:36 | ಸ್ಟೈಲ್ ನ ಧನಾತ್ಮಕ ಬೆಲೆಗೆ, ಕರ್ವ್ ಪ್ಲೇಯ್ನ್ ಆಗಿದ್ದು ಬೇರೆ ಬೇರೆ ಬಣ್ಣವನ್ನು ಹೊಂದಿರುತ್ತದೆ. ನಮ್ಮ ಉದಾಹರಣೆಯಲ್ಲಿ, 3 ಕ್ಕೆ ಹಸಿರು ಬಣ್ಣವಾಗಿದೆ. |
02:44 | 'style' ನ ಡಿಫಾಲ್ಟ್ ವ್ಯಾಲ್ಯೂ 1 ಆಗಿರುತ್ತದೆ. |
02:46 | ಋಣಾತ್ಮಕ ಬೆಲೆಯನ್ನು ಕೊಟ್ಟು ಗ್ರಾಫ್ ಅನ್ನು ಪ್ಲೋಟ್ ಮಾಡಿ, ವ್ಯತ್ಯಾಸವನ್ನು ನೀವೇ ಗಮನಿಸಿ. |
02:51 | ಮತ್ತು ನಾವು x ಮತ್ತು y ಎಕ್ಸಿಸ್ ಗಳ ಪ್ರಾರಂಭಿಕ ಬಿಂದು ಮತ್ತು ಅಂತಿಮ ಬಿಂದುಗಳನ್ನು, ನಾಲ್ಕನೇ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡುವುದರ ಮೂಲಕ ಸೆಟ್ ಮಾಡಬಹುದು. |
02:57 | ಇದನ್ನು rect ಎಂದು ಕರೆಯುತ್ತಾರೆ. ಇಲ್ಲಿ, |
03:07 | x ಆಕ್ಸಿಸ್ 1 ರಿಂದ 10 ರ ವರೆಗೆ ಮತ್ತು y ಆಕ್ಸಿಸ್ 1 ರಿಂದ 20 ರವರೆಗೆ ಇರುವುದನ್ನು ನೋಡಬಹುದು. |
03:14 | rect ಕಮಾಂಡ್ ನಲ್ಲಿ ಆರ್ಗ್ಯುಮೆಂಟ್ ಗಳು xmin, ymin, xmax ಮತ್ತು ymax ಈ ಕ್ರಮದಲ್ಲಿ ಇರುತ್ತದೆ. |
03:24 | ಈಗ ಟೈಟಲ್, ಆಕ್ಸಿಸ್ ಮತ್ತು ಲೆಜೆಂಡ್ಸ್ ಗಳ ಕುರಿತು ಕಲಿಯೋಣ. |
03:28 | ಆಕ್ಸಿಸ್ ಗಳಿಗೆ ಲೇಬಲ್ ಅನ್ನು ಕೊಡಲು ಮತ್ತು ಪ್ಲೋಟ್ ಗೆ ಟೈಟಲ್ ಅನ್ನು ಕೊಡಲು ನಾವು title, xlabel ಮತ್ತು ylabel ಕಮಾಂಡ್ ಗಳನ್ನು ಬಳಸಬಹುದು. |
03:38 | ನಾನು ಈ ಕಮಾಂಡ್ ಗಳನ್ನು ಕಟ್ ಮಾಡಿ, ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ. |
03:45 | ಗ್ರಾಫ್ ನಲ್ಲಿ x-axis ಗೆ ' x ' ಎಂದೂ, y-axis ಗೆ 'y' ಎಂದೂ, ಗ್ರಾಫ್ ನ ಟೈಟಲ್ 'My title' ಎಂದೂ ಲೇಬಲ್ ಬಂದಿರುವುದನ್ನು ನೀವು ನೋಡಬಹುದು. |
03:58 | ನೀವು ಪ್ಲೋಟ್ ನ title ಮತ್ತು axes ಅನ್ನು 3 ರ ಬದಲು ಒಂದೇ ಕಮಾಂಡ್ ನಲ್ಲಿ ಕಾನ್ಫಿಗರ್ ಮಾಡಲು ಬಯಸಬಹುದು. |
04:04 | ಇದಕ್ಕಾಗಿ xtitle ಕಮಾಂಡ್ ಅನ್ನು ಎಲ್ಲಾ 3 ಆರ್ಗ್ಯುಮೆಂಟ್ ಗಳೊಂದಿಗೆ ಬಳಸಬಹುದು. |
04:11 | ನಾನು ಈ ಕಮಾಂಡ್ ಗಳನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ. |
04:18 | ಈಗ ನೀವು x axis ನ ಲೇಬಲ್ X axis , Y axis ಮತ್ತು ಟೈಟಲ್ 'My title' ಎಂದು ಬಂದಿರುವುದನ್ನು ನೋಡಬಹುದು. |
04:26 | ಈಗ ನಾನು ಟೈಪ್ ಮಾಡುತ್ತಿರುವ clf() ಫಂಕ್ಷನ್ ಗ್ರಾಫಿಕ್ ವಿಂಡೋವನ್ನು ಖಾಲಿ ಮಾಡುತ್ತಿರುವುದನ್ನು ನೀವು ನೋಡಬಹುದು. |
04:36 | ಒಂದೇ ಗ್ರಾಫಿಕ್ ವಿಂಡೋ ದಲ್ಲಿ ಅನೇಕ ಗ್ರಾಫ್ ಗಳನ್ನು ಪ್ಲೋಟ್ ಮಾಡುವಾಗ ಇದು ಉಪಯುಕ್ತ. |
04:41 | ನಾನು ಈ ವಿಂಡೋವನ್ನು ಕ್ಲೋಸ್ ಮಾಡುತ್ತೇನೆ. |
04:44 | ಕೆಲವೊಮ್ಮೆ ನಾವು, ಒಂದೇ ಪ್ಲೋಟ್ ನಲ್ಲಿ ಎರಡು ಸೆಟ್ ಡಾಟಾ ,ಅಂದರೆ ಒಂದು ಸೆಟ್ x ಡಾಟಾ ಮತ್ತು ಎರಡು ಸೆಟ್ y ಡಾಟಾ, ಗಳನ್ನು ಹೋಲಿಕೆ ಮಾಡಬೇಕಾಗುತ್ತದೆ. |
04:51 | ಈಗ ಇದಕ್ಕೆ ಒಂದು ಉದಾಹರಣೆಯನ್ನು ನೋಡೋಣ, ನಾನು ಕೆಳಕ್ಕೆ ಸ್ಕ್ರೋಲ್ ಮಾಡುತ್ತೇನೆ. |
04:56 | ನಾವು linspace ಕಮಾಂಡ್ ಅನ್ನು ಬಳಸಿ x-ಆಕ್ಸಿಸ್ ಬಿಂದುಗಳನ್ನು ರೋ ವೆಕ್ಟರ್ x ನಲ್ಲಿ ಡಿಫೈನ್ ಮಾಡುತ್ತೇವೆ. |
05:03 | ಈಗ ಒಂದು ಫಂಕ್ಷನ್ ಅನ್ನು ಡಿಫೈನ್ ಮಾಡೋಣ. |
05:05 | y1 = x square. |
05:07 | plot x verses y1. |
05:10 | ಇನ್ನೊಂದು ಫಂಕ್ಷನ್ y2 = 2 x square ಎಂದು ಡಿಫೈನ್ ಮಾಡಿ. |
05:15 | plot x verses y2. |
05:17 | ನಾವು ನಮ್ಮ ಗ್ರಾಫ್ ಗೆ ಲೇಬಲ್ ಮತ್ತು ಟೈಟಲ್ ಅನ್ನು ಕೂಡ ಕೊಡೋಣ. |
05:22 | ನಾವು ಕರ್ವ್ ನ ವಿನ್ಯಾಸವನ್ನು ಬದಲಿಸಲು, ”o-” ಮತ್ತು ”+ -” ಕಮಾಂಡ್ ಗಳನ್ನು ಹೆಚ್ಚುವರಿಯಾಗಿ ಪಾಸ್ ಮಾಡಿದ್ದೇವೆ. |
05:33 | ಈ ಆರ್ಗ್ಯುಮೆಂಟ್ ಗಳು plot2d ಫಂಕ್ಷನ್ ನ ಭಾಗವಲ್ಲ. |
05:37 | ಅವುಗಳನ್ನು plot ಫಂಕ್ಷನ್ ನೊಂದಿಗೆ ಮಾತ್ರ ಬಳಸಬಹುದು. |
05:41 | ನಾನು ಈ ಕಮಾಂಡ್ ಗಳನ್ನು ಕಾಪಿ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡುತ್ತೇನೆ. |
05:49 | ನೀವು ಗ್ರಾಫ್ ಅನ್ನು ನೋಡಿ. |
05:51 | ಯಾವ ಕರ್ವ್ ಯಾವ ಫಂಕ್ಷನ್ ನೊಂದಿಗೆ ಸಂಯೋಜನೆಗೊಂಡಿದೆ ಎಂದು ತಿಳಿಯುವುದು ಉತ್ತಮವಲ್ಲವೇ? |
05:56 | ಇದನ್ನು legend ಕಮಾಂಡ್ ಅನ್ನು ಬಳಸಿ ಮಾಡಬಹುದು. |
06:08 | "o-" ಕರ್ವ್ y1=x square ಫಂಕ್ಷನ್ ಅನ್ನೂ, "+-" ಕರ್ವ್ y2=2*x^2 (y2=2x square) ಫಂಕ್ಷನ್ ಅನ್ನೂ ಪ್ರತಿನಿಧಿಸುತ್ತದೆ. |
06:19 | ನಾನು ಈ ಗ್ರಾಫಿಕ್ ವಿಂಡೋ ವನ್ನು ಕ್ಲೋಸ್ ಮಾಡುತ್ತೇನೆ. |
06:22 | ನಾವು ಈಗ plot2d demos ಮತ್ತು subplot ಫಂಕ್ಷನ್ ಗಳ ಕುರಿತು ಚರ್ಚೆ ಮಾಡೋಣ. |
06:28 | ಸೈಲ್ಯಾಬ್ ಅದರ ಎಲ್ಲಾ ಮುಖ್ಯ ಫಂಕ್ಷನ್ ಗಳ ಕುರಿತು ಡೆಮೋವನ್ನು ಕೊಡುತ್ತದೆ. |
06:31 | demonstration ಟ್ಯಾಬ್ ನ ಮೂಲಕ plot2d ಯ ಡೆಮೋವನ್ನು ನೋಡಬಹುದು. |
06:39 | Graphics ನ ಮೇಲೆ ಕ್ಲಿಕ್ ಮಾಡಿ, 2D and 3D plots ಅನ್ನು ಕ್ಲಿಕ್ ಮಾಡಿ ಮತ್ತು ಕೊಟ್ಟಿರುವ ಅನೇಕ ಡೆಮೋಗಳಲ್ಲಿ ಒಂದನ್ನು ಆರಿಸಿಕೊಳ್ಳಿ. |
06:51 | plot2d ಯ ಮೇಲೆ ಕ್ಲಿಕ್ ಮಾಡುತ್ತೇನೆ. |
06:54 | ನೀವು ಡೆಮೋ ಗ್ರಾಫ್ ಅನ್ನು ನೋಡಬಹುದು. |
06:55 | ಈ ಗ್ರಾಫ್ ನ ಕೋಡ್ ಅನ್ನು ಇಲ್ಲಿ view code ಬಟನ್ ಅನ್ನು ಕ್ಲಿಕ್ ಮಾಡಿ ನೋಡಬಹುದು. |
07:02 | ಈ ಲಿಂಕ್ Mac OS ನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ, ಆದರೆ Windows ಮತ್ತು Linux ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. |
07:07 | Mac ನಲ್ಲಿ ಕೋಡ್ ಅನ್ನು ಡೈರಕ್ಟರಿಯ ಮೂಲಕ ನೋಡಬಹುದು. |
07:12 | ಈಗ ಟರ್ಮಿನಲ್ ಗೆ ಹೋಗೋಣ. |
07:15 | ನಾನು ಈಗ ಇಲ್ಲಿ ತೋರಿಸಿರುವಂತೆ Scilab 5.2 ನ 'demos' ಡೈರಕ್ಟರಿಯಲ್ಲಿದ್ದೇನೆ. |
07:21 | ಈ ಡೈರಕ್ಟರಿಯ ಪೂರ್ಣ ಪಾಥ್ ಅನ್ನು ಇಲ್ಲಿ ತೋರಿಸಿದೆ. |
07:27 | ನಾವು ಇಲ್ಲಿ ತೋರಿಸಿರುವಂತೆ, ಲಭ್ಯವಿರುವ ಡೆಮೋ ಪಟ್ಟಿಯನ್ನು ನೋಡಲು ls ಎಂದು ಟೈಪ್ ಮಾಡಬಹುದು. |
07:36 | ನಂತರ ನಾವು 2d_3d_plots ಡೈರಕ್ಟರಿಯನ್ನು ಆರಿಸಿಕೊಂಡು, Enter ಅನ್ನು ಒತ್ತಬೇಕು. |
07:46 | 'sce' ಫೈಲ್ ನಲ್ಲಿ ಲಭ್ಯವಿರುವ ಅನೇಕ ಡೆಮೋಕೋಡ್ ಗಳನ್ನು ನೋಡಲು ls ಎಂದು ಟೈಪ್ ಮಾಡಿ. |
07:55 | ನಾವು ಈಗ ಮೊದಲೇ ನೋಡಿದ ಡೆಮೋಗೆ ಕೋಡ್ ಅನ್ನು ನೋಡೋಣ. |
08:00 | more plot2d.dem.sce ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
08:11 | ಇಲ್ಲಿ ನಾವು plot2d ಫಂಕ್ಷನ್ ನ ಡೆಮೋ ಗ್ರಾಫ್ ನ ಕೋಡ್ ಅನ್ನು ನೋಡಬಹುದು. |
08:18 | ನಾನು ಟರ್ಮಿನಲ್ ಅನ್ನು ಕ್ಲೋಸ್ ಮಾಡುತ್ತೇನೆ. |
08:21 | ನಾನು ಡೆಮೋ ಗ್ರಾಫ್ ಮತ್ತು ಡೆಮೋ ವಿಂಡೋವನ್ನು ಕ್ಲೋಸ್ ಮಾಡುತ್ತೇನೆ. |
08:26 | ಇದೇ ರೀತಿಯಲ್ಲಿ ನೀವು ಸೈಲ್ಯಾಬ್ ನ ಬೇರೆ ಡೆಮೋ ಗಳನ್ನು ನೋಡಿ, ಅದರ ಕುರಿತು ತಿಳಿದುಕೊಳ್ಳಬಹುದು. |
08:29 | ಈಗ subplot ಫಂಕ್ಷನ್ ನ ಕುರಿತು ಚರ್ಚಿಸೋಣ. |
08:33 | subplot() ಫಂಕ್ಷನ್ ಗ್ರಾಫಿಕ್ ವಿಂಡೋವನ್ನು ಉಪವಿಂಡೋಗಳ ಮ್ಯಾಟ್ರಿಕ್ಸ್ ಆಗಿ ವಿಭಜಿಸುತ್ತದೆ. |
08:37 | ಈ ಫಂಕ್ಷನ್ ಅನ್ನು ವಿವರಿಸಲು, ನಾವು ಸೈಲ್ಯಾಬ್ ನಲ್ಲಿ 'plotting 2D graphs' ನ ಡೆಮೋ ವನ್ನು ಬಳಸೋಣ. |
08:43 | ಉದಾಹರಣೆಗೆ ನಿಮ್ಮ ಕನ್ಸೋಲ್ ನಲ್ಲಿ, plot2d ಎಂದು ಟೈಪ್ ಮಾಡಿ ಮತ್ತು ಈ ಫಂಕ್ಷನ್ ನ ಡೆಮೋ ಪ್ಲೋಟ್ ಅನ್ನು ನೋಡಬೇಕು. |
08:58 | ನಾನು ಈ ವಿಂಡೋವನ್ನು ಕ್ಲೋಸ್ ಮಾಡುತ್ತೇನೆ. |
09:00 | subplot ಕಮಾಂಡ್ ಗ್ರಾಫಿಕ್ಸ್ ವಿಂಡೋವನ್ನು '2 by 2' ಮ್ಯಾಟ್ರಿಕ್ಸ್ ನಲ್ಲಿ ಉಪವಿಂಡೋಗಳಾಗಿ ವಿಭಜಿಸಿರುತ್ತದೆ. ಇದನ್ನು subplot ಕಮಾಂಡ್ ನ ಮೊದಲ ಎರಡು ಆರ್ಗ್ಯುಮೆಂಟ್ ಗಳು ಪ್ರತಿನಿಧಿಸುತ್ತವೆ. |
09:10 | ಮೂರನೆಯ ಆರ್ಗ್ಯುಮೆಂಟ್ ಯಾವ ವಿಂಡೋದಲ್ಲಿ ಗ್ರಾಫ್ ಅನ್ನು ರಚಿಸಬೇಕು ಎಂಬುದನ್ನು ಸೂಚಿಸುತ್ತದೆ. |
09:15 | ನಾನು ಇದನ್ನು ಈ ಕಮಾಂಡ್ ಗಳನ್ನು ಸೈಲ್ಯಾಬ್ ಕನ್ಸೋಲ್ ಗೆ ಕಾಪಿ ಮಾಡುವ ಮೂಲಕ ಎಕ್ಸಿಕ್ಯೂಟ್ ಮಾಡುತ್ತೇನೆ. |
09:24 | ನೀವು ಒಂದೇ ವಿಂಡೋದಲ್ಲಿ 4 ಪ್ಲೋಟ್ ಗಳನ್ನು ನೋಡಬಹುದು. |
09:28 | ದೊರಕಿರುವ ಪ್ಲೋಟ್ ಅನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಇಮೇಜ್ ನಂತೆ ಸೇವ್ ಮಾಡಿಕೊಳ್ಳಬಹುದು. |
09:32 | 'graphic window' ನ ಮೇಲೆ ಕ್ಲಿಕ್ ಮಾಡಿ, File ಗೆ ಹೋಗಿ, Export to ವನ್ನು ಆಯ್ಕೆ ಮಾಡಿಕೊಳ್ಳಿ. |
09:39 | ನಿಮ್ಮ ಪ್ಲೋಟ್ ಗೆ ಸರಿಹೊಂದುವ ಹೆಸರನ್ನು ಕೊಡಿ. |
09:50 | ನಿಮ್ಮ ಫೈಲ್ ಅನ್ನು ಸೇವ್ ಮಾಡಲು ಫೋಲ್ಡರ್ ಅನ್ನು ಆಯ್ಕೆ ಮಾಡಿಕೊಳ್ಳಿ. |
09:54 | ನಿಮ್ಮ ಇಮೇಜ್ ಯಾವ ಫಾರ್ಮ್ಯಾಟ್ ನಲ್ಲಿ ಸೇವ್ ಆಗಬೇಕೋ ಆ ಫೈಲ್ ಫಾರ್ಮ್ಯಾಟ್ ಅನ್ನು ಆರಿಸಿಕೊಳ್ಳಿ. |
09:59 | ನಾನು 'JPEG' ಫಾರ್ಮ್ಯಾಟ್ ಅನ್ನು ಆರಿಸಿಕೊಳ್ಳುತ್ತೇನೆ. ಮತ್ತು Save ಅನ್ನು ಕ್ಲಿಕ್ ಮಾಡಿ. |
10:05 | ಇಮೇಜ್ ಅನ್ನು ಓಪನ್ ಮಾಡಲು, ಡೈರೆಕ್ಟರಿಯನ್ನು ಬ್ರೌಸ್ ಮಾಡಿ ಮತ್ತು ಅದು ಸೇವ್ ಆಗಿದೆಯೇ ಇಲ್ಲವೆ ಎಂದು ಖಚಿತಪಡಿಸಿಕೊಳ್ಳಿ. |
10:11 | ಇಲ್ಲಿಗೆ Plotting in Scilab ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
10:15 | ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಆಪರೇಶನ್ ಗಳಿವೆ ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ. |
10:20 | ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ. |
10:22 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. |
10:29 | ಇದರ ಕುರಿತು ಹೆಚ್ಚಿನ ವಿವರಗಳು ಈ ಲಿಂಕ್ ನಲ್ಲಿ ದೊರೆಯುತ್ತದೆ. |
10:32 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |