Scilab/C2/Plotting-2D-graphs/Kannada
From Script | Spoken-Tutorial
Time | Narration |
00:00 | Scilab (ಸೈಲ್ಯಾಬ್) ನ Plotting 2D graphs ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:04 | ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿದೆ ಎಂದು ಭಾವಿಸಿಕೊಂಡು, ನಾವು ಸೈಲ್ಯಾಬ್ ನ plots ಗಳ ಕುರಿತು ಚರ್ಚಿಸುವೆವು. |
00:10 | ಸೈಲ್ಯಾಬ್, ವಿವಿಧ ಬಗೆಯ '2D' ಮತ್ತು '3D' ಪ್ಲಾಟ್ (plot) ಗಳನ್ನು ರಚಿಸಲು ಮತ್ತು ಕಸ್ಟಮೈಜ್ ಮಾಡಲು ಅವಕಾಶವನ್ನು ಮಾಡಿಕೊಡುತ್ತದೆ. |
00:15 | ಸೈಲ್ಯಾಬ್ ನಲ್ಲಿ x-y plot ಗಳು, ಕಾಂಟೂರ್ ಪ್ಲಾಟ್ ಗಳು, (contour plot ಗಳು), 3D plot ಗಳು, ಹಿಸ್ಟೋಗ್ರಾಮ್ ಗಳು, ಬಾರ್-ಚಾರ್ಟ್ ಗಳು ಮುಂತಾದ ಹಲವು ಬಗೆಯ ಚಾರ್ಟ್ ಗಳನ್ನು ರಚಿಸಬಹುದು. |
00:24 | ಈಗ ನಿಮ್ಮ ‘ಸೈಲ್ಯಾಬ್ ಕನ್ಸೋಲ್ ವಿಂಡೋ’ವನ್ನು ತೆರೆಯಿರಿ. |
00:28 | ನಾನು ಕಮಾಂಡ್ ಗಳನ್ನು ಕಟ್ ಮತ್ತು ಪೇಸ್ಟ್ ಮಾಡಲು, 'Plotting.sce' ಎಂಬ ಫೈಲ್ ಅನ್ನು ಬಳಸುವೆನು. |
00:34 | ಪ್ಲಾಟ್ ಮಾಡಲು, ನಮಗೆ ಬಿಂದುಗಳ ಒಂದು ಸಮೂಹ ಬೇಕು. ಸಮಾನಾಂತರವನ್ನು ಹೊಂದಿದ ಬಿಂದುಗಳ ಒಂದು ಸಮೂಹವನ್ನು ನಾವು ರಚಿಸೋಣ. |
00:39 | ಇದನ್ನು linspace ಕಮಾಂಡ್ ಅನ್ನು ಬಳಸಿ ಮಾಡಬಹುದು. ಇದು ರೇಖಾಮಾನದಲ್ಲಿ, (linearly) ಸಮಾನ ಅಂತರವನ್ನು ಹೊಂದಿದ ಒಂದು ವೆಕ್ಟರ್ ಅನ್ನು ರಚಿಸುತ್ತದೆ. |
00:45 | ಉದಾಹರಣೆಗೆ, |
00:48 | x- ಇದು ರೇಖಾಮಾನದಲ್ಲಿ, ಸಮಾನ ಅಂತರದಲ್ಲಿ, 1 ಮತ್ತು 10 ರ ನಡುವೆ 5 ಬಿಂದುಗಳನ್ನು ಹೊಂದಿರುವ, ಒಂದು ರೋ ವೆಕ್ಟರ್ ಆಗಿದೆ. |
00:57 | ಇದೇ ರೀತಿ, y- ಇದು ರೇಖಾಮಾನದಲ್ಲಿ, ಸಮಾನ ಅಂತರದಲ್ಲಿ, 1 ಮತ್ತು 20 ರ ನಡುವೆ 5 ಬಿಂದುಗಳನ್ನು ಹೊಂದಿರುವ ರೋ ವೆಕ್ಟರ್ ಆಗಿದೆ. |
01:08 | linspace ನ ಕುರಿತು ಹೆಚ್ಚಿನ ಮಾಹಿತಿಯನ್ನು, Help ಎಂಬ ಡಾಕ್ಯುಮೆಂಟೇಷನ್ ನಲ್ಲಿ ಪಡೆಯಬಹುದು. |
01:14 | ಈಗ ನಾವು, x ಮತ್ತು y ಆರ್ಗ್ಯುಮೆಂಟ್ ಗಳೊಂದಿಗೆ plot ಫಂಕ್ಷನ್ ಅನ್ನು ಬಳಸಿ, ಒಂದು ಗ್ರಾಫ್ ಅನ್ನು ಪ್ಲಾಟ್ ಮಾಡುವೆವು. |
01:19 | ಇದು matlab ನಲ್ಲಿ ಬಳಸುವುದರ ಹಾಗೆಯೇ ಇದೆ. |
01:23 | ನೀವು ನೋಡುವಂತೆ, plot(x,y), ಒಂದು x ವರ್ಸಸ್ y (x verses y) ಗ್ರಾಫ್ ಅನ್ನು ರಚಿಸುತ್ತದೆ. |
01:31 | Graphics window, '0' (ಝೀರೊ) ಎಂದು ಲೇಬಲ್ ಆಗಿರುವುದನ್ನು ಗಮನಿಸಿ. |
01:36 | xset ಫಂಕ್ಷನ್ ಅನ್ನು ಬಳಸಿ, ನಾವು ಇನ್ನೊಂದು ಗ್ರಾಫಿಕ್-ವಿಂಡೋ ವನ್ನು ಓಪನ್ ಮಾಡುವೆವು. |
01:41 | ನಾನು ಇದನ್ನು ಕ್ಲೋಸ್ ಮಾಡುತ್ತೇನೆ. |
01:43 | xset ಫಂಕ್ಷನ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತಿ. |
01:50 | ನೀವು Graphic window number 1 ಅನ್ನು ನೋಡುವಿರಿ. |
01:54 | ಗಮನಿಸಿ: 'window' ಮತ್ತು 1, ಈ ಎರಡು ಆರ್ಗ್ಯುಮೆಂಟ್ ಗಳನ್ನು ಈ ಫಂಕ್ಷನ್ ಗೆ ಪಾಸ್ ಮಾಡಲಾಗಿದೆ. |
02:03 | ಮುಂದಿನ ಗ್ರಾಫ್ ಅನ್ನು, ಈ ವಿಂಡೋ ದಲ್ಲಿ ಪ್ಲಾಟ್ ಮಾಡಲಾಗುವುದು. |
02:06 | ಸೈಲ್ಯಾಬ್ ಗಾಗಿ, plot2d, '2d' ಗ್ರಾಫ್ ಅನ್ನು ಪ್ಲಾಟ್ ಮಾಡಲು ಬಳಸುವ ನೇಟಿವ್ ಫಂಕ್ಷನ್ ಆಗಿದೆ. |
02:14 | ನೀವು ಇಲ್ಲಿ ಕಾಣುವಂತೆ, plot2d ಕಮಾಂಡ್, ಒಂದು x ವರ್ಸಸ್ y ಗ್ರಾಫ್ ಅನ್ನು ಪ್ಲಾಟ್ ಮಾಡುತ್ತದೆ. |
02:26 | ಇಲ್ಲಿ, 'style' ಎಂಬ ಮೂರನೇ ಆರ್ಗ್ಯುಮೆಂಟ್, ಇರುವುದನ್ನು ಗಮನಿಸಿ. |
02:31 | style ಆರ್ಗ್ಯುಮೆಂಟ್ ಐಚ್ಛಿಕ ಆಗಿದೆ. ಇದನ್ನು, ಪ್ಲಾಟ್ ಅನ್ನು ಕಸ್ಟಮೈಜ್ ಮಾಡಲು ಬಳಸಲಾಗುತ್ತದೆ. |
02:36 | style ನ ಧನಾತ್ಮಕ ವ್ಯಾಲ್ಯೂಗಳಿಗೆ, ಕರ್ವ್, ಸ್ಪಷ್ಟವಾಗಿದ್ದು ವಿಭಿನ್ನ ಬಣ್ಣಗಳನ್ನು ಹೊಂದಿರುತ್ತದೆ. ಇಲ್ಲಿ, 3 ಕ್ಕೆ ಹಸಿರು ಬಣ್ಣವಿದೆ. |
02:44 | 'style' ನ ಡಿಫಾಲ್ಟ್ ವ್ಯಾಲ್ಯೂ, 1 ಆಗಿರುತ್ತದೆ. |
02:46 | ಋಣಾತ್ಮಕ ವ್ಯಾಲ್ಯೂಗಳಿಗೆ, ಗ್ರಾಫ್ ಗಳನ್ನು ಪ್ಲಾಟ್ ಮಾಡಲು ಪ್ರಯತ್ನಿಸಿ ಮತ್ತು ಅವುಗಳಲ್ಲಿಯ ವ್ಯತ್ಯಾಸವನ್ನು ನೀವೇ ಗಮನಿಸಿ. |
02:51 | ಅಲ್ಲದೇ, ನಾಲ್ಕನೇ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡುವುದರ ಮೂಲಕ, ನಾವು x ಮತ್ತು y ಆಕ್ಸಿಸ್ (axes) ಗಳಿಗಾಗಿ, ಮೊದಲನೆಯ ಮತ್ತು ಕೊನೆಯ ಬಿಂದುಗಳನ್ನು ನಿರ್ಧರಿಸಬಹುದು. |
02:57 | ಇದನ್ನು rect (ರೆಕ್ಟ್) ಎಂದು ಕರೆಯುತ್ತಾರೆ. ನೀವು ನೋಡುವಂತೆ, |
03:07 | x ಆಕ್ಸಿಸ್, 1 ರಿಂದ 10 ರ ವರೆಗೆ ಮತ್ತು y ಆಕ್ಸಿಸ್, 1 ರಿಂದ 20 ರವರೆಗೆ ಇರುತ್ತವೆ. |
03:14 | rect ಕಮಾಂಡ್ ನಲ್ಲಿ, ಆರ್ಗ್ಯುಮೆಂಟ್ ಗಳು xmin, ymin, xmax ಮತ್ತು ymax (x ಮಿನ್, y ಮಿನ್, x ಮ್ಯಾಕ್ಸ್, y ಮ್ಯಾಕ್ಸ್) ಈ ಕ್ರಮದಲ್ಲಿ ಇರುತ್ತವೆ. |
03:24 | ಈಗ ನಾವು ಟೈಟಲ್, ಆಕ್ಸಿಸ್ ಮತ್ತು ಲೆಜೆಂಡ್ಸ್ ಗಳ ಕುರಿತು ಕಲಿಯೋಣ. |
03:28 | ಆಕ್ಸಿಸ್ ಗೆ ಲೇಬಲ್ ಗಳನ್ನು ಮತ್ತು ಪ್ಲಾಟ್ ಗೆ ಟೈಟಲ್ ಅನ್ನು ಕೊಡಲು, ನಾವು title, xlabel ಮತ್ತು ylabel ಕಮಾಂಡ್ ಗಳನ್ನು ಬಳಸಬಹುದು. |
03:38 | ನಾನು ಈ ಕಮಾಂಡ್ ಗಳನ್ನು ಕಟ್ ಮಾಡಿ, ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ. |
03:45 | ಗ್ರಾಫ್ ನಲ್ಲಿ, x-axis ಗೆ ' x ' ಎಂದು, y-axis ಗೆ 'y' ಎಂದು ಲೇಬಲ್ ಆಗಿದ್ದು, ಅದರ ಟೈಟಲ್, 'My title' ಎಂದು ಆಗಿರುವುದನ್ನು ನೀವು ನೋಡಬಹುದು. |
03:58 | ನಿಮಗೆ ಪ್ಲಾಟ್ ನ title ಮತ್ತು axes ಅನ್ನು, 3 ರ ಬದಲು ಒಂದೇ ಕಮಾಂಡ್ ನಲ್ಲಿ ಕಾನ್ಫಿಗರ್ ಮಾಡಬೇಕಾಗಿದ್ದರೆ, |
04:04 | ಇದಕ್ಕಾಗಿ, ನಾವು xtitle ಕಮಾಂಡ್ ಅನ್ನು, ಈ 3 ಆರ್ಗ್ಯುಮೆಂಟ್ ಗಳೊಂದಿಗೆ ಬಳಸುತ್ತೇವೆ. |
04:11 | ನಾನು ಈ ಕಮಾಂಡ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ. |
04:18 | ಈಗ ನೀವು, x axis ನ ಲೇಬಲ್ ಅನ್ನು X-axis ಎಂದು, Y-axis ಮತ್ತು ಟೈಟಲ್ ಅನ್ನು 'My title' ಎಂದು ನೋಡುವಿರಿ. |
04:26 | ನೀವು ನೋಡುವಂತೆ, ಈಗ ನಾನು ಟೈಪ್ ಮಾಡುತ್ತಿರುವ clf() ಫಂಕ್ಷನ್, ಗ್ರಾಫಿಕ್ ವಿಂಡೋವನ್ನು ತೆರವುಗೊಳಿಸುತ್ತದೆ. |
04:36 | ಒಂದೇ ಗ್ರಾಫಿಕ್ ವಿಂಡೋ ದಲ್ಲಿ, ವಿಭಿನ್ನ ಗ್ರಾಫ್ ಗಳನ್ನು ಪ್ಲಾಟ್ ಮಾಡುವಾಗ ಇದು ಉಪಯುಕ್ತವಾಗಿದೆ. |
04:41 | ನಾನು ಈ ವಿಂಡೋವನ್ನು ಕ್ಲೋಸ್ ಮಾಡುತ್ತೇನೆ. |
04:44 | ಕೆಲವೊಮ್ಮೆ ನಾವು, ಒಂದೇ ಪ್ಲಾಟ್ ನಲ್ಲಿ ಎರಡು ಸೆಟ್ ಡೇಟಾಗಳನ್ನು, ಎಂದರೆ, ಒಂದು ಸೆಟ್ x -ಡೇಟಾ ಮತ್ತು ಎರಡು ಸೆಟ್ y-ಡೇಟಾ ಗಳನ್ನು ಹೋಲಿಸಬೇಕಾಗುತ್ತದೆ. |
04:51 | ಈಗ ನಾವು ಇದರ ಒಂದು ಉದಾಹರಣೆಯನ್ನು ನೋಡೋಣ. ನಾನು ಕೆಳಗೆ ಸ್ಕ್ರೋಲ್ ಮಾಡುವೆನು. |
04:56 | ನಾವು linspace ಕಮಾಂಡ್ ಅನ್ನು ಬಳಸಿ, x-ಆಕ್ಸಿಸ್ ನ ಪಾಯಿಂಟ್ ಗಳನ್ನು, ರೋ ವೆಕ್ಟರ್ x ನಲ್ಲಿ ಡಿಫೈನ್ ಮಾಡುವೆವು. |
05:03 | ಈಗ ಒಂದು ಫಂಕ್ಷನ್ ಅನ್ನು ಡಿಫೈನ್ ಮಾಡೋಣ. |
05:05 | y1 = x square. (y ವನ್ ಈಸ್ ಇಕ್ವಲ್ ಟು x ಸ್ಕ್ವೇರ್) |
05:07 | plot x verses y1. |
05:10 | ಇನ್ನೊಂದು ಫಂಕ್ಷನ್ ಅನ್ನು y2 = 2 x square (y 2 ಈಸ್ ಇಕ್ವಲ್ ಟು 2 x ಸ್ಕ್ವೇರ್) ಎಂದು ಡಿಫೈನ್ ಮಾಡಿ. |
05:15 | plot x verses y2. |
05:17 | ನಾವು, ನಮ್ಮ ಗ್ರಾಫ್ ಗೆ ಲೇಬಲ್ ಮತ್ತು ಟೈಟಲ್ ಗಳನ್ನು ಕೂಡ ಕೊಡುವೆವು. |
05:22 | ಗಮನಿಸಿ: ಕರ್ವ್ ನ ನೋಟವನ್ನು ಬದಲಿಸಲು, ನಾವು plot ಫಂಕ್ಷನ್ ಗೆ, ”o-” (ಝೀರೊ ಮೈನಸ್) ಮತ್ತು ”+ -” (ಪ್ಲಸ್ ಮೈನಸ್) ಕಮಾಂಡ್ ಗಳನ್ನು ಸಹ ಪಾಸ್ ಮಾಡಿದ್ದೇವೆ. |
05:33 | ಈ ಆರ್ಗ್ಯುಮೆಂಟ್ ಗಳು, plot2d ಫಂಕ್ಷನ್ ನ ಭಾಗವಾಗಿಲ್ಲ. |
05:37 | ಅವುಗಳನ್ನು plot ಫಂಕ್ಷನ್ ನೊಂದಿಗೆ ಮಾತ್ರ ಬಳಸಬಹುದು. |
05:41 | ನಾನು ಈ ಕಮಾಂಡ್ ಗಳನ್ನು ಕಾಪಿ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡುತ್ತೇನೆ. |
05:49 | ನೀವು ಗ್ರಾಫ್ ಅನ್ನು ನೋಡಿ. |
05:51 | ಯಾವ ಕರ್ವ್, ಯಾವ ಫಂಕ್ಷನ್ ಗೆ ಸಂಬಂಧಿಸಿದ್ದು ಎಂದು ತಿಳಿಯುವುದು ಹೆಚ್ಚು ಸಹಾಯಕವಲ್ಲವೇ? |
05:56 | ನೀವು ನೋಡುವಂತೆ, legend ಕಮಾಂಡ್ ಅನ್ನು ಬಳಸಿ ಇದನ್ನು ತಿಳಿದುಕೊಳ್ಳಬಹುದು. |
06:08 | "o-" ಕರ್ವ್, y1=x square ಫಂಕ್ಷನ್ ಅನ್ನು ಮತ್ತು "+-" ಕರ್ವ್, y2=2*x^2 (y2=2x square) ಫಂಕ್ಷನ್ ಅನ್ನು ಪ್ರತಿನಿಧಿಸುತ್ತವೆ. |
06:19 | ನಾನು ಈ ಗ್ರಾಫಿಕ್ ವಿಂಡೋ ವನ್ನು ಕ್ಲೋಸ್ ಮಾಡುತ್ತೇನೆ. |
06:22 | ನಾವು ಈಗ plot2d demos (ಪ್ಲಾಟ್ 2d ಡೆಮೋಸ್) ಮತ್ತು subplot (ಸಬ್ ಪ್ಲಾಟ್) ಫಂಕ್ಷನ್ ಗಳ ಕುರಿತು ಚರ್ಚಿಸುವೆವು. |
06:28 | ಸೈಲ್ಯಾಬ್, ಅದರ ಎಲ್ಲಾ ಪ್ರಮುಖ ಫಂಕ್ಷನ್ ಗಳಿಗಾಗಿ, ‘demos’ (ಡೆಮೋಸ್) ಅನ್ನು ಒದಗಿಸುತ್ತದೆ. |
06:31 | plot2d ಯ ‘demos’ ಅನ್ನು, demonstration ಟ್ಯಾಬ್ ನ ಮೂಲಕ ನೋಡಬಹುದು. |
06:39 | ಕ್ರಮವಾಗಿ Graphics >> 2D and 3D plotsಗಳ ಮೇಲೆ ಕ್ಲಿಕ್ ಮಾಡಿ, ಮತ್ತು ಕೊಟ್ಟಿರುವ ಅನೇಕ ಡೆಮೋಗಳಲ್ಲಿ ಒಂದನ್ನು ಆರಿಸಿಕೊಳ್ಳಿ. |
06:51 | ನಾನು plot2d ಯ ಮೇಲೆ ಕ್ಲಿಕ್ ಮಾಡುವೆನು. |
06:54 | ನೀವು ಡೆಮೋ ಗ್ರಾಫ್ ಅನ್ನು ನೋಡುವಿರಿ. |
06:55 | ಇಲ್ಲಿರುವ view code ಬಟನ್ ಅನ್ನು ಕ್ಲಿಕ್ ಮಾಡಿ, ಈ ಗ್ರಾಫ್ ನ ಕೋಡ್ ಅನ್ನು ಸಹ ನೋಡಬಹುದು. |
07:02 | ಈ ಲಿಂಕ್, Mac OS ನಲ್ಲಿ ತೆರೆದುಕೊಳ್ಳುವುದಿಲ್ಲ, ಆದರೆ Windows ಮತ್ತು Linux ಗಳಲ್ಲಿ ಕೆಲಸ ಮಾಡುತ್ತದೆ. |
07:07 | ಆದಾಗ್ಯೂ, Mac ನಲ್ಲಿ, ಡಿರೆಕ್ಟರಿಯ ಮೂಲಕ ಕೋಡ್ ಅನ್ನು ನೋಡಬಹುದು. |
07:12 | ನಾವು ಟರ್ಮಿನಲ್ ಗೆ ಹೋಗೋಣ. |
07:15 | ಇಲ್ಲಿ ತೋರಿಸಿರುವಂತೆ, ಸಧ್ಯಕ್ಕೆ ನಾನು Scilab 5.2 ದ, 'demos' ಎಂಬ ಡಿರೆಕ್ಟರಿಯಲ್ಲಿದ್ದೇನೆ. |
07:21 | ಈ ಡೈರಕ್ಟರಿಗೆ, ಪಾಥ್ ಅನ್ನು ಇಲ್ಲಿ ತೋರಿಸಲಾಗಿದೆ. |
07:27 | ಇಲ್ಲಿ ತೋರಿಸಿರುವಂತೆ, ಲಭ್ಯವಿರುವ 'demos' ಪಟ್ಟಿಯನ್ನು ನೋಡಲು, ನಾವು ls ಎಂದು ಟೈಪ್ ಮಾಡುವೆವು. |
07:36 | ನಂತರ, ನಾವು 2d_3d_plots ಡೈರಕ್ಟರಿಯನ್ನು ಆಯ್ಕೆಮಾಡಿ, Enter ಅನ್ನು ಒತ್ತುವೆವು. |
07:46 | 'sce' ಫೈಲ್ ಗಳಲ್ಲಿ ಲಭ್ಯವಿರುವ ವಿವಿಧ ಡೆಮೋಕೋಡ್ ಗಳನ್ನು ನೋಡಲು, ls ಎಂದು ಮತ್ತೊಮ್ಮೆ ಟೈಪ್ ಮಾಡಿ. |
07:55 | ನಾವು ಈಮೊದಲೇ ನೋಡಿದ ಡೆಮೋಗಾಗಿ, ಕೋಡ್ ಅನ್ನು ನೋಡುವೆವು. |
08:00 | more plot2d.dem.sce ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
08:11 | ಇಲ್ಲಿ ನೀವು, ‘plot2d’ ಫಂಕ್ಷನ್ ನ, ಡೆಮೋ ಗ್ರಾಫ್ ಗಾಗಿ ಕೋಡ್ ಅನ್ನು ನೋಡುವಿರಿ. |
08:18 | ನಾನು ಟರ್ಮಿನಲ್ ಅನ್ನು ಕ್ಲೋಸ್ ಮಾಡುವೆನು. |
08:21 | ನಾನು ಡೆಮೋ ಗ್ರಾಫ್ ಮತ್ತು 'demos' ವಿಂಡೋವನ್ನು ಕ್ಲೋಸ್ ಮಾಡುವೆನು. |
08:26 | ಹೀಗೆಯೇ, ನೀವು ಉಳಿದ ಡೆಮೋ ಗಳನ್ನು ನೋಡಿ, ಸೈಲ್ಯಾಬ್ ನ ಬಗ್ಗೆ ತಿಳಿದುಕೊಳ್ಳಬಹುದು. |
08:29 | ಈಗ ನಾವು, subplot ಫಂಕ್ಷನ್ ನ ಬಗ್ಗೆ ಚರ್ಚಿಸೋಣ. |
08:33 | subplot() ಫಂಕ್ಷನ್, ಗ್ರಾಫಿಕ್ಸ್ ವಿಂಡೋವನ್ನು ಸಬ್-ವಿಂಡೋಗಳ ಒಂದು ಮ್ಯಾಟ್ರಿಕ್ಸ್ ಆಗಿ ವಿಭಜಿಸುತ್ತದೆ. |
08:37 | ಈ ಫಂಕ್ಷನ್ ಅನ್ನು ವಿವರಿಸಲು, ನಾವು ಸೈಲ್ಯಾಬ್ ನಲ್ಲಿ '2D graphs' ಅನ್ನು ಪ್ಲಾಟ್ ಮಾಡಲು 'demos' ಅನ್ನು ಬಳಸುವೆವು. |
08:43 | ಉದಾಹರಣೆಗೆ, ನಿಮ್ಮ ಕನ್ಸೋಲ್ ನಲ್ಲಿ, plot2d ಎಂದು ಟೈಪ್ ಮಾಡಿ ಮತ್ತು ಈ ಫಂಕ್ಷನ್ ನ ಡೆಮೋ ಪ್ಲಾಟ್ ಅನ್ನು ನೋಡಿ. |
08:58 | ನಾನು ಈ ವಿಂಡೋವನ್ನು ಕ್ಲೋಸ್ ಮಾಡುವೆನು. |
09:00 | subplot ಕಮಾಂಡ್, ಗ್ರಾಫಿಕ್ಸ್ ವಿಂಡೋವನ್ನು, ಸಬ್-ವಿಂಡೋಗಳ ಒಂದು '2 by 2' ಮ್ಯಾಟ್ರಿಕ್ಸ್ ಆಗಿ ವಿಭಜಿಸಿರುತ್ತದೆ. ಇದನ್ನು subplot ಕಮಾಂಡ್ ನ, ಮೊದಲ ಎರಡು ಆರ್ಗ್ಯುಮೆಂಟ್ ಗಳು ಪ್ರತಿನಿಧಿಸುತ್ತವೆ. |
09:10 | ಮೂರನೆಯ ಆರ್ಗ್ಯುಮೆಂಟ್, ಈಗಿನ ಯಾವ ವಿಂಡೋದಲ್ಲಿ ಪ್ಲಾಟ್ ಅನ್ನು ರಚಿಸಬೇಕು ಎಂಬುದನ್ನು ಸೂಚಿಸುತ್ತದೆ. |
09:15 | ಸೈಲ್ಯಾಬ್ ಕನ್ಸೋಲ್ ಗೆ, ಈ ಎಲ್ಲ ಕಮಾಂಡ್ ಗಳನ್ನು ಕಾಪಿ ಮಾಡುವ ಮೂಲಕ, ನಾನು ಇವೆಲ್ಲವುಗಳನ್ನು ಎಕ್ಸಿಕ್ಯೂಟ್ ಮಾಡುತ್ತೇನೆ. |
09:24 | ಒಂದೇ ಪ್ಲಾಟ್ ವಿಂಡೋದಲ್ಲಿ, ನೀವು 4 ಪ್ಲಾಟ್ ಗಳನ್ನು ನೋಡಬಹುದು. |
09:28 | ಹೀಗೆ ಪಡೆದ ಪ್ಲಾಟ್ ಅನ್ನು, ನಿಮ್ಮ ಕಂಪ್ಯೂಟರ್ ನಲ್ಲಿ, ಒಂದು ಇಮೇಜ್ ನಂತೆ ಸೇವ್ ಮಾಡಬಹುದು. |
09:32 | 'graphic window' ದ ಮೇಲೆ ಕ್ಲಿಕ್ ಮಾಡಿ. File ಮೆನ್ಯುಗೆ ಹೋಗಿ, Export to ಅನ್ನು ಆಯ್ಕೆ ಮಾಡಿ. |
09:39 | ನಿಮ್ಮ ಪ್ಲಾಟ್ ಗೆ ಸೂಕ್ತವಾದ ಒಂದು ಹೆಸರನ್ನು ಕೊಡಿ. |
09:50 | ನಿಮ್ಮ ಫೈಲ್ ಅನ್ನು ಸೇವ್ ಮಾಡಲು, ಒಂದು ಫೋಲ್ಡರ್ ಅನ್ನು ಆಯ್ಕೆ ಮಾಡಿ. |
09:54 | ನಿಮ್ಮ ಇಮೇಜ್ ಗಾಗಿ ನಿಮಗೆ ಬೇಕಾಗಿರುವ ‘ಫೈಲ್ ಫಾರ್ಮ್ಯಾಟ್’ ಅನ್ನು ಆರಿಸಿಕೊಳ್ಳಿ. |
09:59 | ನಾನು 'JPEG' ಫಾರ್ಮ್ಯಾಟ್ ಅನ್ನು ಆಯ್ಕೆಮಾಡಿ, Save ಅನ್ನು ಕ್ಲಿಕ್ ಮಾಡುವೆನು. |
10:05 | ಇಮೇಜ್ ಅನ್ನು ಓಪನ್ ಮಾಡಲು, ಡೈರೆಕ್ಟರಿಯನ್ನು ಬ್ರೌಸ್ ಮಾಡಿ ಮತ್ತು ಅದು ಸೇವ್ ಆಗಿದೆಯೇ ಇಲ್ಲವೆ ಎಂದು ಪರಿಶೀಲಿಸಿ. |
10:11 | ಇಲ್ಲಿಗೆ, Plotting in Scilab ಎಂಬ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
10:15 | ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಫಂಕ್ಷನ್ ಗಳಿವೆ. ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ. |
10:20 | ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ. |
10:22 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:29 | ಇದರ ಕುರಿತು ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ದೊರೆಯುತ್ತದೆ. |
10:32 | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |