PERL/C3/Perl-Module-Library-(CPAN)/Kannada
From Script | Spoken-Tutorial
Revision as of 22:42, 11 October 2017 by Sandhya.np14 (Talk | contribs)
Time | Narration |
00:01 | Pearl Module Library ಅಂದರೆ CPAN ನ ಬಳಕೆಯ ಕಲಿಕೆಗಾಗಿ ಇರುವ ಸ್ಪೊಕನ್ ಟ್ಯುಟೋರಿಯಲ್ ಗೆ ತಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, PERL ನಲ್ಲಿ, ಲಭ್ಯವಿರುವ ಮೊಡ್ಯುಲ್ ಗಳನ್ನು ಬಳಸಲು ಮತ್ತು ಹೊಸ ಮೊಡ್ಯುಲ್ ಗಳನ್ನು ರಚಿಸಲು ಕಲಿಯುವೆವು. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
Ubuntu Linux 12.04 ಆಪರೇಟಿಂಗ್ ಸಿಸ್ಟಮ್, Perl 5.14.2 ಹಾಗೂ gedit ಟೆಕ್ಸ್ಟ್ ಎಡಿಟರ್ ಇವುಗಳನ್ನು ಉಪಯೋಗಿಸುತ್ತಿದ್ದೇನೆ. |
00:28 | ನೀವು ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರನ್ನು ಬಳಸಬಹುದು. |
00:32 | ಈ ಟ್ಯುಟೋರಿಯಲ್ ಅನ್ನು ಕಲಿಯಲು, ನಿಮಗೆ ಪರ್ಲ್ (perl) ಪ್ರೊಗ್ರಾಮಿಂಗ್ ಬಗ್ಗೆ ತಿಳಿದಿರಬೇಕು. |
00:37 | ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳಿಗಾಗಿ, spoken tutorial ವೆಬ್ಸೈಟ್ ಅನ್ನು ನೋಡಿ. |
00:43 | Modules: ಗಳು ಕೋಡ್ ಫೈಲ್ ಗಳಾಗಿದ್ದು ಆಗಾಗ್ಗೆ ಬಳಸಲಾಗುವ ರುಟೀನ್ ಗಳನ್ನು ಒಳಗೊಂಡಿವೆ. ಇವು ವಿಭಿನ್ನ ಪ್ರೊಗ್ರಾಮರ್ ಗಳಿಂದ ಬರೆಯಲ್ಪಟ್ಟಿವೆ ಹಾಗೂ ಇವುಗಳನ್ನು ಏಕಕಾಲಕ್ಕೆ ವಿವಿಧ ಪ್ರೋಗ್ರಾಮ್ ಗಳಲ್ಲಿ ಬಳಸಬಹುದು. |
00:55 | CPAN: PERL ಒಂದು ಓಪನ್ ಸೋರ್ಸ್ ಪ್ರೊಗ್ರಾಮಿಂಗ್ ಭಾಷೆಯಾಗಿದ್ದು, PERL ನ CPAN ಲೈಬ್ರರಿಗೆ ಯಾರೇ ಆಗಲಿ ತಮ್ಮ ಯೋಗದಾನವನ್ನು ಸಲ್ಲಿಸಬಹುದು. |
01:03 | CPAN ನಲ್ಲಿ, ವಿವಿಧ ಪ್ರೊಗ್ರಾಮರ್ ಗಳಿಂದ ಬರೆಯಲ್ಪಟ್ಟ, ಬಳಸಲು ಸಿದ್ಧವಿರುವ ಸಾವಿರಾರು ಮೊಡ್ಯುಲ್ ಗಳು ಇವೆ . |
01:09 | CPAN ನ ಅಧಿಕೃತ ವೆಬ್ಸೈಟ್, www.cpan.org ಆಗಿದೆ. |
01:17 | ಉದಾಹರಣೆಗಾಗಿ, ನಾವು List colon colon Util ಅನ್ನು ತೆಗೆದುಕೊಂಡು ಅದನ್ನು ಹೇಗೆ ಬಳಸುವುದೆಂದು ನೋಡೋಣ. |
01:24 | ಇದರಿಂದ ನಾನು ಈ ಮೊಡ್ಯುಲ್ ನಲ್ಲಿ ಈಗಾಗಲೇ ಬರೆದಿರುವ ಫ್ಂಕ್ಷನ್ ಗಳನ್ನು ಎಕ್ಸೆಸ್ (access) ಮಾಡುತ್ತೇನೆ. |
01:30 | ಟರ್ಮಿನಲ್ ಗೆ ಬದಲಾಯಿಸಿ. |
01:32 | ಹೀಗೆ ಟೈಪ್ ಮಾಡಿ: perldoc List colon colon Util . |
01:38 | ನಿಮಗೆ You need to install the perl hyphen doc package to use this program ಎನ್ನುವ ಎರರ್ ಸಿಗಬಹುದು . |
01:46 | ನೀವು perl hyphen doc ಎನ್ನುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಬೇಕು ಎಂದು ಇದು ಸೂಚಿಸುತ್ತದೆ. |
01:50 | Synaptic Package Manager ನ್ನು ಉಪಯೋಗಿಸಿ ಇದನ್ನು ನೀವು ಮಾಡಿ. |
01:55 | ಸಂಬಂಧಿತ Linux ಟ್ಯುಟೋರಿಯಲ್ ಗಳಿಗಾಗಿ, spoken tutorial ವೆಬ್ಸೈಟ್ ಅನ್ನು ನೋಡಿ. |
02:01 | ನೀವು ಇಲ್ಲಿ ನೋಡುತ್ತಿರುವುದು, List colon colon Util ಮಾಡ್ಯುಲ್ ಗಾಗಿ ಇರುವ ಡಾಕ್ಯುಮೆಂಟೇಷನ್ ಆಗಿದೆ. |
02:08 | ಡಾಕ್ಯುಮೆಂಟೇಷನ್, ಮಾಡ್ಯುಲ್ ನ ವಿವರಣೆ, ಉದಾಹರಣೆ ಸಹಿತ ಇದನ್ನು ಬಳಸುವ ವಿಧಾನ ಹಾಗೂ ಒಂದು ಓವರ್ವ್ಯೂ(overview) ಇವುಗಳನ್ನು ಒಳಗೊಂಡಿರುವುದನ್ನು ಗಮನಿಸಿ. |
02:20 | perldoc viewer ನಿಂದ ಹೊರಬರಲು ‘Q’ ಕೀಯನ್ನು ಒತ್ತಿರಿ. |
02:25 | ಬಳಿಕ, ನಾವು Perl ಪ್ರೊಗ್ರಾಮ್ ನಲ್ಲಿ List colon colon Util ಮೊಡ್ಯುಲ್ ಅನ್ನು ಹೇಗೆ ಬಳಸುವುದೆಂದು ನೋಡುವೆವು. |
02:33 | ಈಗಾಗಲೆ ನಾನು ಸೇವ್ ಮಾಡಿರುವ exist underscore modules.pl ಎನ್ನುವ ಸ್ಯಾಂಪಲ್ ಪ್ರೋಗ್ರ್ಯಾಮ್ ಅನ್ನು ಓಪನ್ ಮಾಡುತ್ತೇನೆ. |
02:40 | ನಿಮ್ಮ exist underscore modules dot pl ಫೈಲ್ ನಲ್ಲಿ, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕೋಡ್ ಅನ್ನು ಟೈಪ್ ಮಾಡಿ. |
02:47 | ನಾವೀಗ ಕೋಡ್ ಅನ್ನು ತಿಳಿದುಕೊಳ್ಳೋಣ. |
02:50 | use List colon colon Util ಇದು, List colon colon Util ಎಂಬ ಮೊಡ್ಯುಲ್ ಅನ್ನು ಹುಡುಕಿ ಅದನ್ನು ಲೋಡ್ (load) ಮಾಡಲು Perl ಗೆ ಹೇಳುತ್ತದೆ. |
03:00 | qw() ಎಂಬ ಫಂಕ್ಷನ್, ಸ್ಟ್ರಿಂಗ್ ನಿಂದ (string) ಡಿಲಿಮಿಟರ್ ಅನ್ನು ಬಳಸಿ, ಶಬ್ದಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡುತ್ತದೆ ಮತ್ತು ಈ ಶಬ್ದಗಳನ್ನು ಒಂದು ಲಿಸ್ಟ್ ನಂತೆ ಹಿಂದಿರುಗಿಸುತ್ತದೆ. |
03:09 | ಇದು 'ಅರೇ' (array) ಯನ್ನು ಡಿಕ್ಲೇರ್ ಮಾಡುವ ಒಂದು ಶೀಘ್ರವಾದ ವಿಧಾನವಾಗಿದೆ. |
03:13 | ಒಂದು ಮೊಡ್ಯುಲ್ ಅನ್ನು ಇಂಪೋರ್ಟ್ ಮಾಡುವಾಗ, ಇದು ಲಿಸ್ಟ್ ನಲ್ಲಿ ಸೂಚಿಸಲಾದ 'ಸಬ್-ರುಟೀನ್'ಗಳನ್ನು ಮಾತ್ರ ನಮ್ಮ ಪ್ರೊಗ್ರ್ಯಾಮ್ ನಲ್ಲಿ ಇಂಪೋರ್ಟ್ ಮಾಡುತ್ತದೆ. |
03:21 | ಇದು 'ಸಬ್-ರುಟೀನ್'ಗಳ ಸಾಮಾನ್ಯ ಉಪಯುಕ್ತತೆಯ ಪಟ್ಟಿಯನ್ನು ಒಳಗೊಂಡಿದೆ. |
03:26 | ಮೊಡ್ಯುಲ್, ನಮ್ಮ ಪ್ರೊಗ್ರ್ಯಾಮ್ ಗೆ ಅದರ 'ಸಬ್-ರುಟೀನ್'ಗಳು ಮತ್ತು ' ವೇರಿಯೆಬಲ್' ಗಳನ್ನು ಎಕ್ಸ್ಪೋರ್ಟ್ ಮಾಡುತ್ತದೆ. |
03:32 | List colon colon Util ನಲ್ಲಿ ಲಭ್ಯವಿರುವ ಜನಪ್ರಿಯ 'ಸಬ್-ರುಟೀನ್'ಗಳು ಹೀಗಿವೆ:
first – ಇದು ಲಿಸ್ಟ್ ನಲ್ಲಿರುವ ಮೊದಲ ಎಲಿಮೆಂಟ್ ಅನ್ನು ರಿಟರ್ನ್ ಮಾಡುತ್ತದೆ. |
03:42 | max – ಇದು ಲಿಸ್ಟ್ ನಲ್ಲಿರುವ ಗರಿಷ್ಠ ಸಂಖ್ಯೆ ಯನ್ನು ರಿಟರ್ನ್ ಮಾಡುತ್ತದೆ (ಹಿಂದಿರುಗಿಸುತ್ತದೆ). |
03:47 | maxstr- ಲಿಸ್ಟ್ ನಲ್ಲಿರುವ ಎಲ್ಲಕ್ಕಿಂತ ದೊಡ್ಡ ಸ್ಟ್ರಿಂಗ್ ಅನ್ನು ರಿಟರ್ನ್ ಮಾಡುತ್ತದೆ. |
03:52 | min- ಇದು ಕನಿಷ್ಠ ಸಂಖ್ಯೆಯನ್ನು ರಿಟರ್ನ್ ಮಾಡುತ್ತದೆ. |
03:57 | minstr – ಲಿಸ್ಟ್ ನಲ್ಲಿರುವ ಎಲ್ಲಕ್ಕಿಂತ ಚಿಕ್ಕ ಸ್ಟ್ರಿಂಗ್ ಅನ್ನು ರಿಟರ್ನ್ ಮಾಡುತ್ತದೆ. |
04:02 | shuffle- ಇದು ಇನ್ಪುಟ್ ನ ವ್ಯಾಲ್ಯೂಗಳನ್ನು ಇಷ್ಟಬಂದಂತೆ ಇರಿಸುತ್ತದೆ. |
04:08 | sum – ಇದು ಲಿಸ್ಟ್ ನಲ್ಲಿರುವ ಎಲ್ಲ ಎಲಿಮೆಂಟ್ ಗಳ ಸಂಖ್ಯಾತ್ಮಕ ಮೊತ್ತವನ್ನು ರಿಟರ್ನ್ ಮಾಡುತ್ತದೆ. |
04:14 | ಪ್ರತಿಯೊಂದು ಫಂಕ್ಷನ್ ಗಾಗಿ, ಪ್ರತ್ಯೇಕವಾದ ಸೋರ್ಸ್ ಕೋಡ್ ಅನ್ನು ಬರೆಯುವ ಅವಶ್ಯಕತೆ ಇಲ್ಲ. |
04:18 | ನಮ್ಮ ಪ್ರೋಗ್ರ್ಯಾಮ್ ನಲ್ಲಿ ಲಭ್ಯವಿರುವ ಈ 'ಸಬ್-ರುಟೀನ್' ಗಳನ್ನು ನಾವು ಬಳಸಿಕೊಳ್ಳಬಹುದು. |
04:23 | ಈ ಇನ್ಪುಟ್ ಗಳನ್ನು ನಾನು max, min, sum ಮತ್ತು shuffle ಫಂಕ್ಷನ್ ಗಳಿಗೆ ಪಾಸ್ ಮಾಡುತ್ತಿದ್ದೇನೆ (ದಾಟಿಸುತ್ತಿದ್ದೇನೆ). |
04:30 | ಮತ್ತು, ಇವು print ಸ್ಟೆಟ್ಮೆಂಟ್ ಗಳಾಗಿವೆ. |
04:33 | ಈಗ ಫೈಲ್ ಅನ್ನು ಸೇವ್ ಮಾಡುವುದಕ್ಕೆ Ctrl+S ಅನ್ನು ಒತ್ತಿರಿ. |
04:37 | ನಾವೀಗ ಪ್ರೋಗ್ರ್ಯಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
04:40 | ಟರ್ಮಿನಲ್ ಗೆ ಹಿಂತಿರುಗಿ ಹೀಗೆ ಟೈಪ್ ಮಾಡಿ: perl exist underscore modules dot pl ಮತ್ತು Enter ಅನ್ನು ಒತ್ತಿ. |
04:49 | ಔಟ್ಪುಟ್ ಅನ್ನು ಪರಿಶೀಲಿಸಿ. |
04:51 | Random number ನಲ್ಲಿ, ನೀವು 0 ಯಿಂದ 51 ರವರೆಗಿನ ಯಾವುದೇ ವ್ಯಾಲ್ಯೂಅನ್ನು ಪಡೆಯಬಹುದು. |
04:58 | ಬಳಿಕ, ಒಂದು ಹೊಸ Perl ಮೊಡ್ಯುಲ್ ಅನ್ನು ಹೇಗೆ ರಚಿಸುವುದು ಮತ್ತು ಅದನ್ನು ಹೇಗೆ CPAN ಗೆ ಸೇರಿಸುವುದು ಎಂಬುದನ್ನು ನಾವು ನೋಡುವೆವು. |
05:04 | ಮೊಡ್ಯುಲ್ ಅನ್ನು ರಚಿಸಲು ಬೇಕಾದ ಹಂತಗಳು ಈ ಕೆಳಗಿನಂತಿವೆ: |
05:08 | ಮೊಡ್ಯುಲ್ ಅನ್ನು ಡೆವಲಪ್ ಮಾಡಲು ಸ್ಥಾನವನ್ನು ಕಲ್ಪಿಸಿ. |
05:11 | ಮೊಡ್ಯುಲ್ ಗಾಗಿ ಸ್ಕೆಲೆಟನ್ ಫೈಲ್ ಗಳನ್ನು ನಿರ್ಮಿಸಿ. |
05:14 | ಮೊಡ್ಯುಲ್ ಅನ್ನು 'ಡಾಕ್ಯೂಮೆಂಟ್' (Document) ಮಾಡಿ. |
05:16 | Perl ಕೋಡ್ ಅನ್ನು ಬರೆಯಿರಿ. |
05:18 | ಟೆಸ್ಟಿಂಗ್ ಗಾಗಿ ಕೋಡ್ ಅನ್ನು ಬರೆಯಿರಿ. |
05:20 | CPAN ನಲ್ಲಿ module ಅನ್ನು ಡಿಸ್ಟ್ರಿಬ್ಯೂಟ್ ಮಾಡಿ. |
05:24 | Perl, h2xs ಎನ್ನುವ ಪ್ರೋಗ್ರ್ಯಾಮ್ ನೊಂದಿಗೆ ಡಿಸ್ಟ್ರಿಬ್ಯೂಟ್ ಆಗಿದೆ. ಇದನ್ನು ಹೊಸ ಮೊಡ್ಯುಲ್ ಗಾಗಿ ಫೈಲ್ ಗಳನ್ನು ತಯಾರಿಸಲು ಬಳಸಲಾಗುತ್ತದೆ. |
05:32 | Math colon colon Simple ನಮ್ಮ ಮೊಡ್ಯುಲ್ ನ ಹೆಸರನ್ನು ಸೂಚಿಸುತ್ತದೆ. |
05:37 | ಇದನ್ನು ಡೈರೆಕ್ಟರಿಯನ್ನು ತಯಾರಿಸಲು ಬಳಸಲಾಗುತ್ತದೆ ಮತ್ತು ಇದು, ತಾನು ಒಳಗೊಂಡಿರುವ ಮೊಡ್ಯುಲ್ ಅನ್ನು ಸರಿಯಾಗಿ ಗುರುತಿಸಬೇಕು. |
05:43 | ಮೂಲತಃ, ಇದು ಮೊಡ್ಯುಲ್ ಗಳಿಗಾಗಿ ಸ್ಕೆಲೆಟನ್ ಫೈಲ್ ಗಳನ್ನು ನಿರ್ಮಿಸುತ್ತದೆ. hyphen PAX- ಇದು autoload ಮತ್ತು autogenerate ಗಳನ್ನು ಬಿಟ್ಟುಬಿಡುವ ಆಯ್ಕೆಗಳಾಗಿವೆ. |
05:54 | Math colon colon Simple - ಎನ್ನುವ ಒಂದು ಹೊಸಮೊಡ್ಯುಲ್ ಅನ್ನು ರಚಿಸೋಣ. |
05:59 | ಇದಕ್ಕೆ add, subtract, multiply ಮತ್ತು divide ಗಳಂತಹ ಸರಳ ಫಂಕ್ಷನ್ ಗಳನ್ನು ಒದಗಿಸಲಾಗಿದೆ. |
06:06 | ನಾವು h2xs ಕಮಾಂಡ್ ಅನ್ನು ಎಕ್ಸಿಕ್ಯೂಟ್ ಮಾಡಲು ಟರ್ಮಿನಲ್ ಗೆ ಹಿಂದಿರುಗೋಣ. |
06:12 | h2xs hyphen PAXn Math colon colon Simple ಎಂದು ಟೈಪ್ ಮಾಡಿ. |
06:20 | h2xs ಪ್ರೊಗ್ರ್ಯಾಮ್, ಮೊಡ್ಯುಲ್ ಅನ್ನು ಡಿಸ್ಟ್ರೀಬ್ಯೂಟ್ ಮಾಡಲು ಬೇಕಾಗಿರುವ ಈ ಎಲ್ಲ ಫೈಲ್ ಗಳನ್ನು ಉತ್ಪಾದಿಸುತ್ತದೆ . |
06:27 | ನಾವು ಡೈರೆಕ್ಟರಿ ಯನ್ನು Math hyphen Simple ಗೆ ಬದಲಾಯಿಸೋಣ. |
06:33 | ನಿಮ್ಮ ಕಂಪ್ಯೂಟರ್ ನಲ್ಲಿ, ಡಿರೆಕ್ಟರೀ ಪಾಥ್ ಅನ್ನು ಗಮನಿಸಿ. ಇದು Math forward slash Simple ಎಂದು ಆಗಿರಬಹುದು. |
06:41 | ಡೈರೆಕ್ಟರಿ ಯಲ್ಲಿರುವ ಎಲ್ಲ ಫೈಲ್ ಗಳನ್ನು ಪಟ್ಟಿಮಾಡಲು "ls" ಎಂದು ಟೈಪ್ ಮಾಡಿ. ನಾವು ಕೆಳಕಂಡ ಫೈಲ್ ಗಳನ್ನು ನೋಡಬಹುದು . |
06:49 | ಹೊಸ ಆವೃತ್ತಿಗಳನ್ನು ಬರೆಯುವಾಗ, ನಮ್ಮ ಮೊಡ್ಯುಲ್ ಗೆ ಮಾಡಿದ ಬದಲಾವಣೆಗಳನ್ನು "Changes" ಎನ್ನುವ ಫೈಲ್ ನಲ್ಲಿ ಸೇರಿಸುವೆವು. |
06:58 | lib subdirectory ಮೊಡ್ಯುಲ್ ಅನ್ನು ಒಳಗೊಂಡಿದೆ. |
07:02 | MANIFEST, ಈ ಡೈರೆಕ್ಟರಿಯಲ್ಲಿರುವ ಫೈಲ್ ಗಳ ಪಟ್ಟಿಯನ್ನು ಹೊಂದಿದೆ. |
07:07 | Makefile, ಒಂದು ಪರ್ಲ್ ಪ್ರೊಗ್ರಾಮ್ ಆಗಿದೆ. ಇದನ್ನು Unix Makefile ಅನ್ನು ಕ್ರಿಯೇಟ್ ಮಾಡಲು ಬಳಸಲಾಗುತ್ತದೆ. |
07:12 | ನಮ್ಮ ಮೊಡ್ಯುಲ್ ಅನ್ನು ಪರೀಕ್ಷಿಸಲು ಮತ್ತು ಇನ್ಸ್ಟಾಲ್ ಮಾಡಲು ನಾವು ಈ Makefile ನ್ನು ಬಳಸುವೆವು. |
07:18 | ಟೆಸ್ಟ್ ಸ್ಕ್ರಿಪ್ಟ್ ಗಳು 't' ಸಬ್-ಡಿರೆಕ್ಟರೀಯಲ್ಲಿ ಇರುತ್ತವೆ . |
07:22 | tests ಗಳು ಸರಳವಾದ Perl ಸ್ಕ್ರಿಪ್ಟ್ ಗಳಾಗಿದ್ದು, dot t ಎಕ್ಸ್ಟೆನ್ಶನ್ ಅನ್ನು ಹೊಂದಿವೆ ಮತ್ತು ಇವುಗಳನ್ನು unit testing ಗಾಗಿ ಬಳಸಲಾಗುತ್ತದೆ. |
07:30 | Simple.pm ನಮ್ಮ ಮಾಡ್ಯುಲ್ ಆಗಿದೆ . |
07:34 | ನಾವು h2xs ಕಮಾಂಡ್ ಅನ್ನು ಎಕ್ಸಿಕ್ಯೂಟ್ ಮಾಡಿದಾಗ, ಈ ಎಲ್ಲ ಫೈಲ್ ಗಳು ತಾವಾಗಿಯೇ ಹುಟ್ಟಿಕೊಳ್ಳುತ್ತವೆ. |
07:41 | ನಾವು simple.pm ಎನ್ನುವ ಫೈಲ್ ಅನ್ನು ಒಪನ್ ಮಾಡೋಣ . |
07:45 | ಡೈರೆಕ್ಟರಿಯನ್ನು lib forward slash Math ಗೆ ಬದಲಾಯಿಸಿ. |
07:51 | ಈಗ, ನಾವು simple.pm ಫೈಲ್ ನಲ್ಲಿ ಇರುವುದನ್ನು ನೋಡಲು, ಅದನ್ನು ಒಪನ್ ಮಾಡುವೆವು. |
07:57 | gedit Simple.pm ಎಂದು ಟೈಪ್ ಮಾಡಿ. |
08:02 | ನಾವಿಲ್ಲಿ ಏನನ್ನೂ ಮಾಡದಿರುವ, ಡಾಕ್ಯೂಮೆಂಟ್ ಮಾಡಲಾದ, ಒಂದು ಕ್ರಿಯಾತ್ಮಕ ಪರ್ಲ್ ಮೊಡ್ಯುಲ್ ಅನ್ನು ನೋಡುತ್ತೇವೆ. |
08:09 | ಇದು ಏನನ್ನಾದರೂ ಮಾಡಬೇಕೆಂದರೆ, ಈ ಫೈಲ್ ನಲ್ಲಿ ನಾವು ಅಗತ್ಯವಿರುವ ಫಂಕ್ಷನ್ ಗಳನ್ನು ಬರೆಯಬೇಕು. |
08:16 | "Preloaded methods go here" ಈ ಟೆಕ್ಸ್ಟ್ ನ ನಂತರ ಕೆಳಗಿನ ಕೋಡ್ ಅನ್ನು ಸೇರಿಸಿರಿ. |
08:22 | ಇಲ್ಲಿ, ನಾವು add, subtract, multiply ಹಾಗೂ divide ಎಂಬ ಸಬ್-ರುಟಿನ್ ಗಳನ್ನು ಸೇರಿಸುವೆವು. |
08:29 | ಈಗ, ಫೈಲ್ ಅನ್ನು ಸೇವ್ ಮಾಡಲು Ctrl+S ಅನ್ನು ಒತ್ತಿರಿ. |
08:33 | ಈಗ, ನಮ್ಮ ಕೋಡ್, ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಲು, ಒಂದು ಸ್ಯಾಂಪಲ್ ಪರ್ಲ್ ಪ್ರೊಗ್ರ್ಯಾಮ್ ಅನ್ನು ಕ್ರಿಯೇಟ್ ಮಾಡೋಣ. |
08:41 | ನಾವು ಸಬ್-ಡೈರೆಕ್ಟರಿ 't' ಯ ಅಡಿಯಲ್ಲಿರುವ Math-Simple.t ಎನ್ನುವ ಟೆಸ್ಟ್-ಫೈಲ್ ಅನ್ನು ಒಪನ್ ಮಾಡೋಣ. |
08:49 | gedit Math-Simple.t ಎಂದು ಟೈಪ್ ಮಾಡಿ. |
08:55 | “Insert your test code below..” ಎನ್ನುವುದರ ಮುಂದೆ ಈ ಕೆಳಗಿನ ಕೋಡ್ ಅನ್ನು ಸೇರಿಸಿರಿ. |
09:02 | Print ಸ್ಟೇಟ್ಮೆಂಟ್ ಗಳು, ಔಟ್ಪುಟ್ ಅನ್ನು ಪ್ರಿಂಟ್ ಮಾಡುತ್ತವೆ. |
09:06 | ಈಗ, ಫೈಲ್ ಅನ್ನು ಸೇವ್ ಮಾಡಲು Ctrl+S ಅನ್ನು ಒತ್ತಿರಿ. |
09:10 | ನಾವು ಟೆಸ್ಟ್-ಸ್ಕ್ರಿಪ್ಟ್ ಅನ್ನು ರನ್ ಮಾಡೋಣ. |
09:13 | perl Math-simple.t ಎಂದು ಟೈಪ್ ಮಾಡಿ ಮತ್ತು Enter ಕೀಯನ್ನು ಒತ್ತಿರಿ. |
09:19 | ನಾವು ಈ ಎರೆರ್ ಮೆಸೇಜ್ ಅನ್ನು ಕಾಣುತ್ತೇವೆ. ಏಕೆಂದರೆ, Perl ಸ್ಕ್ರಿಪ್ಟ್, ತನ್ನ ಡೈರೆಕ್ಟರಿಯಲ್ಲಿ Simple.pm ಅನ್ನು ಹುಡುಕಲು ಸಾಧ್ಯವಾಗಿಲ್ಲ. |
09:27 | ಅದು lib ಡೈರೆಕ್ಟರಿಯಲ್ಲಿ ನೋಡಬೇಕು. ಈ ತಪ್ಪನ್ನು ನಾವು ಹೇಗೆ ಸರಿಪಡಿಸಬಹುದು? |
09:33 | ಇದಕ್ಕಾಗಿ ನಾವು ಕೆಲವು ಆಯ್ಕೆಗಳನ್ನು ನೋಡೋಣ . |
09:37 | @INC (at the rate INC ), ಇದು ಒಂದು ವಿಶಿಷ್ಟವಾದ ವೆರಿಯೇಬಲ್ ಆಗಿದ್ದು ವಿವಿಧ ಡೈರೆಕ್ಟರಿಗಳ ಪಟ್ಟಿಯನ್ನು ಹೊಂದಿದೆ. |
09:43 | ಪರ್ಲ್ ಮೊಡ್ಯುಲ್ ಗಳನ್ನು ಮತ್ತು ಲೈಬ್ರರಿ ಗಳನ್ನು ಈ ಡೈರೆಕ್ಟರಿಗಳಿಂದ ಲೋಡ್ ಮಾಡಬಹುದು. |
09:48 | ಕೋಡ್ ನ ಈ ವಾಕ್ಯವು, ಈ ಡಿರೆಕ್ಟರಿ-ಪಾಥ್ ಅನ್ನು ಅದರ at the rate INC ಸರ್ಚ್ ಡೈರೆಕ್ಟರಿಗೆ ಸೇರಿಸಲು, Perl ಪ್ರೋಗ್ರ್ಯಾಮ್ ಗೆ ಸೂಚಿಸುತ್ತದೆ. |
09:57 | ಪರ್ಯಾಯವಾಗಿ, ರನ್-ಟೈಮ್ ನಲ್ಲಿ, '-I' ಆಯ್ಕೆಯನ್ನು ಬಳಸಿ, ಫೈಲ್ ಗಳನ್ನು ನಾವು at the rate INC ಗೆ ಸೇರಿಸಬಹುದು. |
10:06 | ಈಗ, ನಾವು ಟರ್ಮಿನಲ್ ಗೆ ಹಿಂದಿರುಗೋಣ. |
10:10 | '-I' ಕಮಾಂಡ್ ಲೈನ್ ಪ್ಯಾರಾಮೀಟರ್ ಅನ್ನು ಬಳಸಿ, ಪ್ರೊಗ್ರ್ಯಾಮ್ ಆನ್ನು ನಾನು ಎಕ್ಸೀಕ್ಯೂಟ್ ಮಾಡುವೆನು. |
10:16 | ಆದ್ದರಿಂದ, ನಾನು perl -Ilib t/Math-Simple.t ಎಂದು ಟೈಪ್ ಮಾಡುವೆನು. |
10:24 | ಇದು ನಿರೀಕ್ಷಿಸಿದ ಔಟ್ಪುಟ್ ಆಗಿದೆ. |
10:27 | ನಾವು ಮೊಡ್ಯುಲ್ ಅನ್ನು ಪರೀಕ್ಷಿಸಿದ್ದೇವೆ ಮತ್ತು ಅದು ಸರಿಯಾಗಿ ಕೆಲಸಮಾಡುತ್ತಿದೆ. |
10:31 | ಕೊನೆಯದಾಗಿ ಮೊಡ್ಯುಲ್ ಅನ್ನು ವಿತರಿಸುವುದು. |
10:34 | ಮೊಡ್ಯುಲ್ ಅನ್ನು ಇನ್ಸ್ಟಾಲ್ ಮಾಡುವ ಸಾಮಾನ್ಯ ಪದ್ಧತಿ ಎಂದರೆ ಈ ಕಮಾಂಡ್ ಗಳನ್ನು ರನ್ ಮಾಡುವುದಾಗಿದೆ. |
10:40 | ಇನ್ಸ್ಟಾಲೇಷನ್, Perl library directory ಯಲ್ಲಿ ಫೈಲ್ ಗಳನ್ನು ಕಾಪಿ ಮಾಡುವುದನ್ನು ಒಳಗೊಂಡಿದೆ. |
10:45 | ನಮ್ಮಲ್ಲಿ ಹೆಚ್ಚು ಜನರಿಗೆ ಈ ಡೈರೆಕ್ಟರಿಯಲ್ಲಿ ಕಾಪಿ ಮಾಡುವ ಅನುಮತಿ ಇರುವುದಿಲ್ಲ. |
10:49 | Math-Simple ಅಷ್ಟೊಂದು ಉಪಯುಕ್ತ ಮೊಡ್ಯುಲ್ ಆಗಿಲ್ಲ. ಆದ್ದರಿಂದ, ನಾನು ಅದರ ಇನ್ಸ್ಟಾಲೇಷನ್ ಭಾಗವನ್ನು ಪ್ರದರ್ಶಿಸುತ್ತಿಲ್ಲ. |
10:57 | ನಾವೀಗ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ. |
11:02 | ಈ ಟ್ಯುಟೋರಿಯಲ್ ನಲ್ಲಿ ನಾವು:
ಲಭ್ಯವಿರುವ ಮೊಡ್ಯುಲ್ ಗಳನ್ನು ಬಳಸುವುದು, ಹೊಸ ಮೊಡ್ಯುಲ್ ಗಳನ್ನು ರಚಿಸುವುದು ಮತ್ತು ಪರ್ಲ್ ಪ್ರೊಗ್ರ್ಯಾಮ್ ನಲ್ಲಿ ಅವುಗಳನ್ನು ಬಳಕೆ ಮಾಡುವ ಬಗ್ಗೆ ಕಲಿತಿದ್ದೇವೆ. |
11:11 | ಇಲ್ಲಿ ನಿಮಗೊಂದು ಅಸೈನ್ಮೆಂಟ್ ಇದೆ. |
11:13 | Text colon colon Wrap ಮೊಡ್ಯುಲ್ ಅನ್ನು ಉಪಯೋಗಿಸಿರಿ . |
11:17 | Wrap() ಫಂಕ್ಷನ್ ಅನ್ನು ಉಪಯೋಗಿಸಿ. ಪ್ಯಾರಾಗ್ರಾಫ್ ಗಳನ್ನು ಒಪ್ಪವಾಗಿರಿಸಲು ಇದು ಇನ್ಪುಟ್ ಟೆಕ್ಸ್ಟ್ ಅನ್ನು wrap ಮಾಡುತ್ತದೆ. |
11:24 | Text colon colon Wrap ಮೊಡ್ಯುಲ್, "columns" ಎನ್ನುವ ವೆರಿಯೆಬಲ್ ಅನ್ನು ಹೊಂದಿದೆ. columns ನ ವ್ಯಾಲ್ಯೂಅನ್ನು ೩೦ ಕ್ಕೆ ಹೊಂದಿಸಿ. |
11:31 | ಫಾರ್ಮ್ಯಾಟ್ ಮಾಡಿದ ಔಟ್ಪುಟ್ ಅನ್ನು ನೋಡಲು ಟೆಕ್ಸ್ಟ್ ಅನ್ನು ಪ್ರಿಂಟ್ ಮಾಡಿ. |
11:35 | ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿರುವ ವೀಡಿಯೊ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:42 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು ಸ್ಪೋಕನ್- ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. |
11:51 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org |
11:55 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
12:02 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
12:06 | ಸ್ಕ್ರಿಪ್ಟ್ ನ ಅನುವಾದಕಿ ಸುಚೇತಾ ಹಾಗೂ ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ.
ವಂದನೆಗಳು. |