PERL/C3/Perl-Module-Library-(CPAN)/Kannada

From Script | Spoken-Tutorial
Jump to: navigation, search


Time Narration
00:01 Pearl Module Library ಅಂದರೆ CPAN ನ ಬಳಕೆಯ ಕಲಿಕೆಗಾಗಿ ಇರುವ ಸ್ಪೊಕನ್ ಟ್ಯುಟೋರಿಯಲ್ ಗೆ ತಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು, PERL ನಲ್ಲಿ, ಲಭ್ಯವಿರುವ ಮೊಡ್ಯುಲ್ ಗಳನ್ನು ಬಳಸಲು ಮತ್ತು ಹೊಸ ಮೊಡ್ಯುಲ್ ಗಳನ್ನು ರಚಿಸಲು ಕಲಿಯುವೆವು.
00:16 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,

Ubuntu Linux 12.04 ಆಪರೇಟಿಂಗ್ ಸಿಸ್ಟಮ್, Perl 5.14.2 ಹಾಗೂ gedit ಟೆಕ್ಸ್ಟ್ ಎಡಿಟರ್ ಇವುಗಳನ್ನು ಉಪಯೋಗಿಸುತ್ತಿದ್ದೇನೆ.

00:28 ನೀವು ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರನ್ನು ಬಳಸಬಹುದು.
00:32 ಈ ಟ್ಯುಟೋರಿಯಲ್ ಅನ್ನು ಕಲಿಯಲು, ನಿಮಗೆ ಪರ್ಲ್ (perl) ಪ್ರೊಗ್ರಾಮಿಂಗ್ ಬಗ್ಗೆ ತಿಳಿದಿರಬೇಕು.
00:37 ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳಿಗಾಗಿ, spoken tutorial ವೆಬ್ಸೈಟ್ ಅನ್ನು ನೋಡಿ.
00:43 Modules: ಗಳು ಕೋಡ್ ಫೈಲ್ ಗಳಾಗಿದ್ದು ಆಗಾಗ್ಗೆ ಬಳಸಲಾಗುವ ರುಟೀನ್ ಗಳನ್ನು ಒಳಗೊಂಡಿವೆ. ಇವು ವಿಭಿನ್ನ ಪ್ರೊಗ್ರಾಮರ್ ಗಳಿಂದ ಬರೆಯಲ್ಪಟ್ಟಿವೆ ಹಾಗೂ ಇವುಗಳನ್ನು ಏಕಕಾಲಕ್ಕೆ ವಿವಿಧ ಪ್ರೋಗ್ರಾಮ್ ಗಳಲ್ಲಿ ಬಳಸಬಹುದು.
00:55 CPAN: PERL ಒಂದು ಓಪನ್ ಸೋರ್ಸ್ ಪ್ರೊಗ್ರಾಮಿಂಗ್ ಭಾಷೆಯಾಗಿದ್ದು, PERL ನ CPAN ಲೈಬ್ರರಿಗೆ ಯಾರೇ ಆಗಲಿ ತಮ್ಮ ಯೋಗದಾನವನ್ನು ಸಲ್ಲಿಸಬಹುದು.
01:03 CPAN ನಲ್ಲಿ, ವಿವಿಧ ಪ್ರೊಗ್ರಾಮರ್ ಗಳಿಂದ ಬರೆಯಲ್ಪಟ್ಟ, ಬಳಸಲು ಸಿದ್ಧವಿರುವ ಸಾವಿರಾರು ಮೊಡ್ಯುಲ್ ಗಳು ಇವೆ .
01:09 CPAN ನ ಅಧಿಕೃತ ವೆಬ್ಸೈಟ್, www.cpan.org ಆಗಿದೆ.
01:17 ಉದಾಹರಣೆಗಾಗಿ, ನಾವು List colon colon Util ಅನ್ನು ತೆಗೆದುಕೊಂಡು ಅದನ್ನು ಹೇಗೆ ಬಳಸುವುದೆಂದು ನೋಡೋಣ.
01:24 ಇದರಿಂದ ನಾನು ಈ ಮೊಡ್ಯುಲ್ ನಲ್ಲಿ ಈಗಾಗಲೇ ಬರೆದಿರುವ ಫ್ಂಕ್ಷನ್ ಗಳನ್ನು ಎಕ್ಸೆಸ್ (access) ಮಾಡುತ್ತೇನೆ.
01:30 ಟರ್ಮಿನಲ್ ಗೆ ಬದಲಾಯಿಸಿ.
01:32 ಹೀಗೆ ಟೈಪ್ ಮಾಡಿ: perldoc List colon colon Util .
01:38 ನಿಮಗೆ You need to install the perl hyphen doc package to use this program ಎನ್ನುವ ಎರರ್ ಸಿಗಬಹುದು .
01:46 ನೀವು perl hyphen doc ಎನ್ನುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಬೇಕು ಎಂದು ಇದು ಸೂಚಿಸುತ್ತದೆ.
01:50 Synaptic Package Manager ನ್ನು ಉಪಯೋಗಿಸಿ ಇದನ್ನು ನೀವು ಮಾಡಿ.
01:55 ಸಂಬಂಧಿತ Linux ಟ್ಯುಟೋರಿಯಲ್ ಗಳಿಗಾಗಿ, spoken tutorial ವೆಬ್ಸೈಟ್ ಅನ್ನು ನೋಡಿ.
02:01 ನೀವು ಇಲ್ಲಿ ನೋಡುತ್ತಿರುವುದು, List colon colon Util ಮಾಡ್ಯುಲ್ ಗಾಗಿ ಇರುವ ಡಾಕ್ಯುಮೆಂಟೇಷನ್ ಆಗಿದೆ.
02:08 ಡಾಕ್ಯುಮೆಂಟೇಷನ್, ಮಾಡ್ಯುಲ್ ನ ವಿವರಣೆ, ಉದಾಹರಣೆ ಸಹಿತ ಇದನ್ನು ಬಳಸುವ ವಿಧಾನ ಹಾಗೂ ಒಂದು ಓವರ್ವ್ಯೂ(overview) ಇವುಗಳನ್ನು ಒಳಗೊಂಡಿರುವುದನ್ನು ಗಮನಿಸಿ.
02:20 perldoc viewer ನಿಂದ ಹೊರಬರಲು ‘Q’ ಕೀಯನ್ನು ಒತ್ತಿರಿ.
02:25 ಬಳಿಕ, ನಾವು Perl ಪ್ರೊಗ್ರಾಮ್ ನಲ್ಲಿ List colon colon Util ಮೊಡ್ಯುಲ್ ಅನ್ನು ಹೇಗೆ ಬಳಸುವುದೆಂದು ನೋಡುವೆವು.
02:33 ಈಗಾಗಲೆ ನಾನು ಸೇವ್ ಮಾಡಿರುವ exist underscore modules.pl ಎನ್ನುವ ಸ್ಯಾಂಪಲ್ ಪ್ರೋಗ್ರ್ಯಾಮ್ ಅನ್ನು ಓಪನ್ ಮಾಡುತ್ತೇನೆ.
02:40 ನಿಮ್ಮ exist underscore modules dot pl ಫೈಲ್ ನಲ್ಲಿ, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕೋಡ್ ಅನ್ನು ಟೈಪ್ ಮಾಡಿ.
02:47 ನಾವೀಗ ಕೋಡ್ ಅನ್ನು ತಿಳಿದುಕೊಳ್ಳೋಣ.
02:50 use List colon colon Util ಇದು, List colon colon Util ಎಂಬ ಮೊಡ್ಯುಲ್ ಅನ್ನು ಹುಡುಕಿ ಅದನ್ನು ಲೋಡ್ (load) ಮಾಡಲು Perl ಗೆ ಹೇಳುತ್ತದೆ.
03:00 qw() ಎಂಬ ಫಂಕ್ಷನ್, ಸ್ಟ್ರಿಂಗ್ ನಿಂದ (string) ಡಿ-ಲಿಮಿಟರ್ ಅನ್ನು ಬಳಸಿ, ಶಬ್ದಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡುತ್ತದೆ ಮತ್ತು ಈ ಶಬ್ದಗಳನ್ನು ಒಂದು ಲಿಸ್ಟ್ ನಂತೆ ಹಿಂದಿರುಗಿಸುತ್ತದೆ.
03:09 ಇದು 'ಅರೇ' (array) ಯನ್ನು ಡಿಕ್ಲೇರ್ ಮಾಡುವ ಒಂದು ಶೀಘ್ರವಾದ ವಿಧಾನವಾಗಿದೆ.
03:13 ಒಂದು ಮೊಡ್ಯುಲ್ ಅನ್ನು ಇಂಪೋರ್ಟ್ ಮಾಡುವಾಗ, ಇದು ಲಿಸ್ಟ್ ನಲ್ಲಿ ಸೂಚಿಸಲಾದ 'ಸಬ್-ರುಟೀನ್'ಗಳನ್ನು ಮಾತ್ರ ನಮ್ಮ ಪ್ರೊಗ್ರ್ಯಾಮ್ ನಲ್ಲಿ ಇಂಪೋರ್ಟ್ ಮಾಡುತ್ತದೆ.
03:21 ಇದು 'ಸಬ್-ರುಟೀನ್'ಗಳ ಸಾಮಾನ್ಯ ಉಪಯುಕ್ತತೆಯ ಪಟ್ಟಿಯನ್ನು ಒಳಗೊಂಡಿದೆ.
03:26 ಮೊಡ್ಯುಲ್, ನಮ್ಮ ಪ್ರೊಗ್ರ್ಯಾಮ್ ಗೆ ಅದರ 'ಸಬ್-ರುಟೀನ್'ಗಳು ಮತ್ತು ' ವೇರಿಯೆಬಲ್' ಗಳನ್ನು ಎಕ್ಸ್ಪೋರ್ಟ್ ಮಾಡುತ್ತದೆ.
03:32 List colon colon Util ನಲ್ಲಿ ಲಭ್ಯವಿರುವ ಜನಪ್ರಿಯ 'ಸಬ್-ರುಟೀನ್'ಗಳು ಹೀಗಿವೆ:

first – ಇದು ಲಿಸ್ಟ್ ನಲ್ಲಿರುವ ಮೊದಲ ಎಲಿಮೆಂಟ್ ಅನ್ನು ರಿಟರ್ನ್ ಮಾಡುತ್ತದೆ.

03:42 max – ಇದು ಲಿಸ್ಟ್ ನಲ್ಲಿರುವ ಗರಿಷ್ಠ ಸಂಖ್ಯೆ ಯನ್ನು ರಿಟರ್ನ್ ಮಾಡುತ್ತದೆ (ಹಿಂದಿರುಗಿಸುತ್ತದೆ).
03:47 maxstr- ಲಿಸ್ಟ್ ನಲ್ಲಿರುವ ಎಲ್ಲಕ್ಕಿಂತ ದೊಡ್ಡ ಸ್ಟ್ರಿಂಗ್ ಅನ್ನು ರಿಟರ್ನ್ ಮಾಡುತ್ತದೆ.
03:52 min- ಇದು ಕನಿಷ್ಠ ಸಂಖ್ಯೆಯನ್ನು ರಿಟರ್ನ್ ಮಾಡುತ್ತದೆ.
03:57 minstr – ಲಿಸ್ಟ್ ನಲ್ಲಿರುವ ಎಲ್ಲಕ್ಕಿಂತ ಚಿಕ್ಕ ಸ್ಟ್ರಿಂಗ್ ಅನ್ನು ರಿಟರ್ನ್ ಮಾಡುತ್ತದೆ.
04:02 shuffle- ಇದು ಇನ್ಪುಟ್ ನ ವ್ಯಾಲ್ಯೂಗಳನ್ನು ಇಷ್ಟಬಂದಂತೆ ಇರಿಸುತ್ತದೆ.
04:08 sum – ಇದು ಲಿಸ್ಟ್ ನಲ್ಲಿರುವ ಎಲ್ಲ ಎಲಿಮೆಂಟ್ ಗಳ ಸಂಖ್ಯಾತ್ಮಕ ಮೊತ್ತವನ್ನು ರಿಟರ್ನ್ ಮಾಡುತ್ತದೆ.
04:14 ಪ್ರತಿಯೊಂದು ಫಂಕ್ಷನ್ ಗಾಗಿ, ಪ್ರತ್ಯೇಕವಾದ ಸೋರ್ಸ್ ಕೋಡ್ ಅನ್ನು ಬರೆಯುವ ಅವಶ್ಯಕತೆ ಇಲ್ಲ.
04:18 ನಮ್ಮ ಪ್ರೋಗ್ರ್ಯಾಮ್ ನಲ್ಲಿ ಲಭ್ಯವಿರುವ ಈ 'ಸಬ್-ರುಟೀನ್' ಗಳನ್ನು ನಾವು ಬಳಸಿಕೊಳ್ಳಬಹುದು.
04:23 ಈ ಇನ್ಪುಟ್ ಗಳನ್ನು ನಾನು max, min, sum ಮತ್ತು shuffle ಫಂಕ್ಷನ್ ಗಳಿಗೆ ಪಾಸ್ ಮಾಡುತ್ತಿದ್ದೇನೆ (ದಾಟಿಸುತ್ತಿದ್ದೇನೆ).
04:30 ಮತ್ತು, ಇವು print ಸ್ಟೆಟ್ಮೆಂಟ್ ಗಳಾಗಿವೆ.
04:33 ಈಗ ಫೈಲ್ ಅನ್ನು ಸೇವ್ ಮಾಡುವುದಕ್ಕೆ Ctrl+S ಅನ್ನು ಒತ್ತಿರಿ.
04:37 ನಾವೀಗ ಪ್ರೋಗ್ರ್ಯಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
04:40 ಟರ್ಮಿನಲ್ ಗೆ ಹಿಂತಿರುಗಿ ಹೀಗೆ ಟೈಪ್ ಮಾಡಿ: perl exist underscore modules dot pl ಮತ್ತು Enter ಅನ್ನು ಒತ್ತಿ.
04:49 ಔಟ್ಪುಟ್ ಅನ್ನು ಪರಿಶೀಲಿಸಿ.
04:51 Random number ನಲ್ಲಿ, ನೀವು 0 ಯಿಂದ 51 ರವರೆಗಿನ ಯಾವುದೇ ವ್ಯಾಲ್ಯೂಅನ್ನು ಪಡೆಯಬಹುದು.
04:58 ಬಳಿಕ, ಒಂದು ಹೊಸ Perl ಮೊಡ್ಯುಲ್ ಅನ್ನು ಹೇಗೆ ರಚಿಸುವುದು ಮತ್ತು ಅದನ್ನು ಹೇಗೆ CPAN ಗೆ ಸೇರಿಸುವುದು ಎಂಬುದನ್ನು ನಾವು ನೋಡುವೆವು.
05:04 ಮೊಡ್ಯುಲ್ ಅನ್ನು ರಚಿಸಲು ಬೇಕಾದ ಹಂತಗಳು ಈ ಕೆಳಗಿನಂತಿವೆ:
05:08 ಮೊಡ್ಯುಲ್ ಅನ್ನು ಡೆವಲಪ್ ಮಾಡಲು ಸ್ಥಾನವನ್ನು ಕಲ್ಪಿಸಿ.
05:11 ಮೊಡ್ಯುಲ್ ಗಾಗಿ ಸ್ಕೆಲೆಟನ್ ಫೈಲ್ ಗಳನ್ನು ನಿರ್ಮಿಸಿ.
05:14 ಮೊಡ್ಯುಲ್ ಅನ್ನು 'ಡಾಕ್ಯೂಮೆಂಟ್' (Document) ಮಾಡಿ.
05:16 Perl ಕೋಡ್ ಅನ್ನು ಬರೆಯಿರಿ.
05:18 ಟೆಸ್ಟಿಂಗ್ ಗಾಗಿ ಕೋಡ್ ಅನ್ನು ಬರೆಯಿರಿ.
05:20 CPAN ನಲ್ಲಿ module ಅನ್ನು ಡಿಸ್ಟ್ರಿಬ್ಯೂಟ್ ಮಾಡಿ.
05:24 Perl, h2xs ಎನ್ನುವ ಪ್ರೋಗ್ರ್ಯಾಮ್ ನೊಂದಿಗೆ ಡಿಸ್ಟ್ರಿಬ್ಯೂಟ್ ಆಗಿದೆ. ಇದನ್ನು ಹೊಸ ಮೊಡ್ಯುಲ್ ಗಾಗಿ ಫೈಲ್ ಗಳನ್ನು ತಯಾರಿಸಲು ಬಳಸಲಾಗುತ್ತದೆ.
05:32 Math colon colon Simple ನಮ್ಮ ಮೊಡ್ಯುಲ್ ನ ಹೆಸರನ್ನು ಸೂಚಿಸುತ್ತದೆ.
05:37 ಇದನ್ನು ಡೈರೆಕ್ಟರಿಯನ್ನು ತಯಾರಿಸಲು ಬಳಸಲಾಗುತ್ತದೆ ಮತ್ತು ಇದು, ತಾನು ಒಳಗೊಂಡಿರುವ ಮೊಡ್ಯುಲ್ ಅನ್ನು ಸರಿಯಾಗಿ ಗುರುತಿಸಬೇಕು.
05:43 ಮೂಲತಃ, ಇದು ಮೊಡ್ಯುಲ್ ಗಳಿಗಾಗಿ ಸ್ಕೆಲೆಟನ್ ಫೈಲ್ ಗಳನ್ನು ನಿರ್ಮಿಸುತ್ತದೆ. hyphen PAX- ಇದು autoload ಮತ್ತು autogenerate ಗಳನ್ನು ಬಿಟ್ಟುಬಿಡುವ ಆಯ್ಕೆಗಳಾಗಿವೆ.
05:54 Math colon colon Simple - ಎನ್ನುವ ಒಂದು ಹೊಸಮೊಡ್ಯುಲ್ ಅನ್ನು ರಚಿಸೋಣ.
05:59 ಇದಕ್ಕೆ add, subtract, multiply ಮತ್ತು divide ಗಳಂತಹ ಸರಳ ಫಂಕ್ಷನ್ ಗಳನ್ನು ಒದಗಿಸಲಾಗಿದೆ.
06:06 ನಾವು h2xs ಕಮಾಂಡ್ ಅನ್ನು ಎಕ್ಸಿಕ್ಯೂಟ್ ಮಾಡಲು ಟರ್ಮಿನಲ್ ಗೆ ಹಿಂದಿರುಗೋಣ.
06:12 h2xs hyphen PAXn Math colon colon Simple ಎಂದು ಟೈಪ್ ಮಾಡಿ.
06:20 h2xs ಪ್ರೊಗ್ರ್ಯಾಮ್, ಮೊಡ್ಯುಲ್ ಅನ್ನು ಡಿಸ್ಟ್ರೀಬ್ಯೂಟ್ ಮಾಡಲು ಬೇಕಾಗಿರುವ ಈ ಎಲ್ಲ ಫೈಲ್ ಗಳನ್ನು ಉತ್ಪಾದಿಸುತ್ತದೆ .
06:27 ನಾವು ಡೈರೆಕ್ಟರಿ ಯನ್ನು Math hyphen Simple ಗೆ ಬದಲಾಯಿಸೋಣ.
06:33 ನಿಮ್ಮ ಕಂಪ್ಯೂಟರ್ ನಲ್ಲಿ, ಡಿರೆಕ್ಟರೀ ಪಾಥ್ ಅನ್ನು ಗಮನಿಸಿ. ಇದು Math forward slash Simple ಎಂದು ಆಗಿರಬಹುದು.
06:41 ಡೈರೆಕ್ಟರಿ ಯಲ್ಲಿರುವ ಎಲ್ಲ ಫೈಲ್ ಗಳನ್ನು ಪಟ್ಟಿಮಾಡಲು "ls" ಎಂದು ಟೈಪ್ ಮಾಡಿ. ನಾವು ಕೆಳಕಂಡ ಫೈಲ್ ಗಳನ್ನು ನೋಡಬಹುದು .
06:49 ಹೊಸ ಆವೃತ್ತಿಗಳನ್ನು ಬರೆಯುವಾಗ, ನಮ್ಮ ಮೊಡ್ಯುಲ್ ಗೆ ಮಾಡಿದ ಬದಲಾವಣೆಗಳನ್ನು "Changes" ಎನ್ನುವ ಫೈಲ್ ನಲ್ಲಿ ಸೇರಿಸುವೆವು.
06:58 lib subdirectory ಮೊಡ್ಯುಲ್ ಅನ್ನು ಒಳಗೊಂಡಿದೆ.
07:02 MANIFEST, ಈ ಡೈರೆಕ್ಟರಿಯಲ್ಲಿರುವ ಫೈಲ್ ಗಳ ಪಟ್ಟಿಯನ್ನು ಹೊಂದಿದೆ.
07:07 Makefile, ಒಂದು ಪರ್ಲ್ ಪ್ರೊಗ್ರಾಮ್ ಆಗಿದೆ. ಇದನ್ನು Unix Makefile ಅನ್ನು ಕ್ರಿಯೇಟ್ ಮಾಡಲು ಬಳಸಲಾಗುತ್ತದೆ.
07:12 ನಮ್ಮ ಮೊಡ್ಯುಲ್ ಅನ್ನು ಪರೀಕ್ಷಿಸಲು ಮತ್ತು ಇನ್ಸ್ಟಾಲ್ ಮಾಡಲು ನಾವು ಈ Makefile ನ್ನು ಬಳಸುವೆವು.
07:18 ಟೆಸ್ಟ್ ಸ್ಕ್ರಿಪ್ಟ್ ಗಳು 't' ಸಬ್-ಡಿರೆಕ್ಟರೀಯಲ್ಲಿ ಇರುತ್ತವೆ .
07:22 tests ಗಳು ಸರಳವಾದ Perl ಸ್ಕ್ರಿಪ್ಟ್ ಗಳಾಗಿದ್ದು, dot t ಎಕ್ಸ್ಟೆನ್ಶನ್ ಅನ್ನು ಹೊಂದಿವೆ ಮತ್ತು ಇವುಗಳನ್ನು unit testing ಗಾಗಿ ಬಳಸಲಾಗುತ್ತದೆ.
07:30 Simple.pm ನಮ್ಮ ಮಾಡ್ಯುಲ್ ಆಗಿದೆ .
07:34 ನಾವು h2xs ಕಮಾಂಡ್ ಅನ್ನು ಎಕ್ಸಿಕ್ಯೂಟ್ ಮಾಡಿದಾಗ, ಈ ಎಲ್ಲ ಫೈಲ್ ಗಳು ತಾವಾಗಿಯೇ ಹುಟ್ಟಿಕೊಳ್ಳುತ್ತವೆ.
07:41 ನಾವು simple.pm ಎನ್ನುವ ಫೈಲ್ ಅನ್ನು ಒಪನ್ ಮಾಡೋಣ .
07:45 ಡೈರೆಕ್ಟರಿಯನ್ನು lib forward slash Math ಗೆ ಬದಲಾಯಿಸಿ.
07:51 ಈಗ, ನಾವು simple.pm ಫೈಲ್ ನಲ್ಲಿ ಇರುವುದನ್ನು ನೋಡಲು, ಅದನ್ನು ಒಪನ್ ಮಾಡುವೆವು.
07:57 gedit Simple.pm ಎಂದು ಟೈಪ್ ಮಾಡಿ.
08:02 ನಾವಿಲ್ಲಿ ಏನನ್ನೂ ಮಾಡದಿರುವ, ಡಾಕ್ಯೂಮೆಂಟ್ ಮಾಡಲಾದ, ಒಂದು ಕ್ರಿಯಾತ್ಮಕ ಪರ್ಲ್ ಮೊಡ್ಯುಲ್ ಅನ್ನು ನೋಡುತ್ತೇವೆ.
08:09 ಇದು ಏನನ್ನಾದರೂ ಮಾಡಬೇಕೆಂದರೆ, ಈ ಫೈಲ್ ನಲ್ಲಿ ನಾವು ಅಗತ್ಯವಿರುವ ಫಂಕ್ಷನ್ ಗಳನ್ನು ಬರೆಯಬೇಕು.
08:16 "Preloaded methods go here" ಈ ಟೆಕ್ಸ್ಟ್ ನ ನಂತರ ಕೆಳಗಿನ ಕೋಡ್ ಅನ್ನು ಸೇರಿಸಿರಿ.
08:22 ಇಲ್ಲಿ, ನಾವು add, subtract, multiply ಹಾಗೂ divide ಎಂಬ ಸಬ್-ರುಟಿನ್ ಗಳನ್ನು ಸೇರಿಸುವೆವು.
08:29 ಈಗ, ಫೈಲ್ ಅನ್ನು ಸೇವ್ ಮಾಡಲು Ctrl+S ಅನ್ನು ಒತ್ತಿರಿ.
08:33 ಈಗ, ನಮ್ಮ ಕೋಡ್, ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಲು, ಒಂದು ಸ್ಯಾಂಪಲ್ ಪರ್ಲ್ ಪ್ರೊಗ್ರ್ಯಾಮ್ ಅನ್ನು ಕ್ರಿಯೇಟ್ ಮಾಡೋಣ.
08:41 ನಾವು ಸಬ್-ಡೈರೆಕ್ಟರಿ 't' ಯ ಅಡಿಯಲ್ಲಿರುವ Math-Simple.t ಎನ್ನುವ ಟೆಸ್ಟ್-ಫೈಲ್ ಅನ್ನು ಒಪನ್ ಮಾಡೋಣ.
08:49 gedit Math-Simple.t ಎಂದು ಟೈಪ್ ಮಾಡಿ.
08:55 “Insert your test code below..” ಎನ್ನುವುದರ ಮುಂದೆ ಈ ಕೆಳಗಿನ ಕೋಡ್ ಅನ್ನು ಸೇರಿಸಿರಿ.
09:02 Print ಸ್ಟೇಟ್ಮೆಂಟ್ ಗಳು, ಔಟ್ಪುಟ್ ಅನ್ನು ಪ್ರಿಂಟ್ ಮಾಡುತ್ತವೆ.
09:06 ಈಗ, ಫೈಲ್ ಅನ್ನು ಸೇವ್ ಮಾಡಲು Ctrl+S ಅನ್ನು ಒತ್ತಿರಿ.
09:10 ನಾವು ಟೆಸ್ಟ್-ಸ್ಕ್ರಿಪ್ಟ್ ಅನ್ನು ರನ್ ಮಾಡೋಣ.
09:13 perl Math-simple.t ಎಂದು ಟೈಪ್ ಮಾಡಿ ಮತ್ತು Enter ಕೀಯನ್ನು ಒತ್ತಿರಿ.
09:19 ನಾವು ಈ ಎರೆರ್ ಮೆಸೇಜ್ ಅನ್ನು ಕಾಣುತ್ತೇವೆ. ಏಕೆಂದರೆ, Perl ಸ್ಕ್ರಿಪ್ಟ್, ತನ್ನ ಡೈರೆಕ್ಟರಿಯಲ್ಲಿ Simple.pm ಅನ್ನು ಹುಡುಕಲು ಸಾಧ್ಯವಾಗಿಲ್ಲ.
09:27 ಅದು lib ಡೈರೆಕ್ಟರಿಯಲ್ಲಿ ನೋಡಬೇಕು. ಈ ತಪ್ಪನ್ನು ನಾವು ಹೇಗೆ ಸರಿಪಡಿಸಬಹುದು?
09:33 ಇದಕ್ಕಾಗಿ ನಾವು ಕೆಲವು ಆಯ್ಕೆಗಳನ್ನು ನೋಡೋಣ .
09:37 @INC (at the rate INC ), ಇದು ಒಂದು ವಿಶಿಷ್ಟವಾದ ವೆರಿಯೇಬಲ್ ಆಗಿದ್ದು ವಿವಿಧ ಡೈರೆಕ್ಟರಿಗಳ ಪಟ್ಟಿಯನ್ನು ಹೊಂದಿದೆ.
09:43 ಪರ್ಲ್ ಮೊಡ್ಯುಲ್ ಗಳನ್ನು ಮತ್ತು ಲೈಬ್ರರಿ ಗಳನ್ನು ಈ ಡೈರೆಕ್ಟರಿಗಳಿಂದ ಲೋಡ್ ಮಾಡಬಹುದು.
09:48 ಕೋಡ್ ನ ಈ ವಾಕ್ಯವು, ಈ ಡಿರೆಕ್ಟರಿ-ಪಾಥ್ ಅನ್ನು ಅದರ at the rate INC ಸರ್ಚ್ ಡೈರೆಕ್ಟರಿಗೆ ಸೇರಿಸಲು, Perl ಪ್ರೋಗ್ರ್ಯಾಮ್ ಗೆ ಸೂಚಿಸುತ್ತದೆ.
09:57 ಪರ್ಯಾಯವಾಗಿ, ರನ್-ಟೈಮ್ ನಲ್ಲಿ, '-I' ಆಯ್ಕೆಯನ್ನು ಬಳಸಿ, ಫೈಲ್ ಗಳನ್ನು ನಾವು at the rate INC ಗೆ ಸೇರಿಸಬಹುದು.
10:06 ಈಗ, ನಾವು ಟರ್ಮಿನಲ್ ಗೆ ಹಿಂದಿರುಗೋಣ.
10:10 '-I' ಕಮಾಂಡ್ ಲೈನ್ ಪ್ಯಾರಾಮೀಟರ್ ಅನ್ನು ಬಳಸಿ, ಪ್ರೊಗ್ರ್ಯಾಮ್ ಆನ್ನು ನಾನು ಎಕ್ಸೀಕ್ಯೂಟ್ ಮಾಡುವೆನು.
10:16 ಆದ್ದರಿಂದ, ನಾನು perl -Ilib t/Math-Simple.t ಎಂದು ಟೈಪ್ ಮಾಡುವೆನು.
10:24 ಇದು ನಿರೀಕ್ಷಿಸಿದ ಔಟ್ಪುಟ್ ಆಗಿದೆ.
10:27 ನಾವು ಮೊಡ್ಯುಲ್ ಅನ್ನು ಪರೀಕ್ಷಿಸಿದ್ದೇವೆ ಮತ್ತು ಅದು ಸರಿಯಾಗಿ ಕೆಲಸಮಾಡುತ್ತಿದೆ.
10:31 ಕೊನೆಯದಾಗಿ ಮೊಡ್ಯುಲ್ ಅನ್ನು ವಿತರಿಸುವುದು.
10:34 ಮೊಡ್ಯುಲ್ ಅನ್ನು ಇನ್ಸ್ಟಾಲ್ ಮಾಡುವ ಸಾಮಾನ್ಯ ಪದ್ಧತಿ ಎಂದರೆ ಈ ಕಮಾಂಡ್ ಗಳನ್ನು ರನ್ ಮಾಡುವುದಾಗಿದೆ.
10:40 ಇನ್ಸ್ಟಾಲೇಷನ್, Perl library directory ಯಲ್ಲಿ ಫೈಲ್ ಗಳನ್ನು ಕಾಪಿ ಮಾಡುವುದನ್ನು ಒಳಗೊಂಡಿದೆ.
10:45 ನಮ್ಮಲ್ಲಿ ಹೆಚ್ಚು ಜನರಿಗೆ ಈ ಡೈರೆಕ್ಟರಿಯಲ್ಲಿ ಕಾಪಿ ಮಾಡುವ ಅನುಮತಿ ಇರುವುದಿಲ್ಲ.
10:49 Math-Simple ಅಷ್ಟೊಂದು ಉಪಯುಕ್ತ ಮೊಡ್ಯುಲ್ ಆಗಿಲ್ಲ. ಆದ್ದರಿಂದ, ನಾನು ಅದರ ಇನ್ಸ್ಟಾಲೇಷನ್ ಭಾಗವನ್ನು ಪ್ರದರ್ಶಿಸುತ್ತಿಲ್ಲ.
10:57 ನಾವೀಗ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ.
11:02 ಈ ಟ್ಯುಟೋರಿಯಲ್ ನಲ್ಲಿ ನಾವು:

ಲಭ್ಯವಿರುವ ಮೊಡ್ಯುಲ್ ಗಳನ್ನು ಬಳಸುವುದು, ಹೊಸ ಮೊಡ್ಯುಲ್ ಗಳನ್ನು ರಚಿಸುವುದು ಮತ್ತು ಪರ್ಲ್ ಪ್ರೊಗ್ರ್ಯಾಮ್ ನಲ್ಲಿ ಅವುಗಳನ್ನು ಬಳಕೆ ಮಾಡುವ ಬಗ್ಗೆ ಕಲಿತಿದ್ದೇವೆ.

11:11 ಇಲ್ಲಿ ನಿಮಗೊಂದು ಅಸೈನ್ಮೆಂಟ್ ಇದೆ.
11:13 Text colon colon Wrap ಮೊಡ್ಯುಲ್ ಅನ್ನು ಉಪಯೋಗಿಸಿರಿ .
11:17 Wrap() ಫಂಕ್ಷನ್ ಅನ್ನು ಉಪಯೋಗಿಸಿ. ಪ್ಯಾರಾಗ್ರಾಫ್ ಗಳನ್ನು ಒಪ್ಪವಾಗಿರಿಸಲು ಇದು ಇನ್ಪುಟ್ ಟೆಕ್ಸ್ಟ್ ಅನ್ನು wrap ಮಾಡುತ್ತದೆ.
11:24 Text colon colon Wrap ಮೊಡ್ಯುಲ್, "columns" ಎನ್ನುವ ವೆರಿಯೆಬಲ್ ಅನ್ನು ಹೊಂದಿದೆ. columns ನ ವ್ಯಾಲ್ಯೂಅನ್ನು ೩೦ ಕ್ಕೆ ಹೊಂದಿಸಿ.
11:31 ಫಾರ್ಮ್ಯಾಟ್ ಮಾಡಿದ ಔಟ್ಪುಟ್ ಅನ್ನು ನೋಡಲು ಟೆಕ್ಸ್ಟ್ ಅನ್ನು ಪ್ರಿಂಟ್ ಮಾಡಿ.
11:35 ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿರುವ ವೀಡಿಯೊ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
11:42 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು ಸ್ಪೋಕನ್- ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
11:51 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org
11:55 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
12:02 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
12:06 ಸ್ಕ್ರಿಪ್ಟ್ ನ ಅನುವಾದಕಿ ಸುಚೇತಾ ಹಾಗೂ ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14