Jmol-Application/C2/Modify-Display-and-View/Kannada
From Script | Spoken-Tutorial
Revision as of 17:11, 26 September 2017 by Sandhya.np14 (Talk | contribs)
|
|
---|---|
00:01 | Jmol Application (ಜೆ-ಮೊಲ್ ಅಪ್ಲಿಕೇಶನ್) ನಲ್ಲಿ Modify Display and View (ಮಾಡಿಫೈ ಡಿಸ್ಪ್ಲೇ ಆಂಡ್ ವ್ಯೂ ) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:11 | ಸ್ಕ್ರೀನ್ ನ ಮೇಲೆ ಮಾಡೆಲ್ ಅನ್ನು ತಿರುಗಿಸಲು, ಝೂಮ್ ಮಾಡಲು, ಸ್ಥಳಾಂತರಿಸಲು ಹಾಗೂ ಸ್ಪಿನ್ ಮಾಡಲು, |
00:17 | ವ್ಯೂ ಅನ್ನು ಮಾರ್ಪಡಿಸಲು, |
00:19 | ಡಿಸ್ಪ್ಲೇದ ಸ್ಟೈಲ್ ಅನ್ನು ಬದಲಾಯಿಸಲು, |
00:22 | ಪರಮಾಣುಗಳ ಮತ್ತು ಬಾಂಡ್ ಗಳ ಸೈಜ್ ಹಾಗೂ ಬಣ್ಣಗಳನ್ನು ಬದಲಾಯಿಸಲು, |
00:26 | ಮಾಡೆಲ್ ಅನ್ನು ಆಕ್ಸಿಸ್ ಹಾಗೂ ಬೌಂಡ್ ಬಾಕ್ಸ್ ಗಳೊಂದಿಗೆ ಡಿಸ್ಪ್ಲೇ ಮಾಡಲು (ಪ್ರದರ್ಶಿಸಲು), |
00:30 | ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಇಮೇಜನ್ನು ಸೇವ್ ಮಾಡಲು ಕಲಿಯುವೆವು. |
00:34 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು |
00:37 | 'Jmol Application' ವಿಂಡೋ ಹಾಗೂ |
00:40 | 'ಮಾಡೆಲ್ ಕಿಟ್' (modelkit) ಫಂಕ್ಷನ್ ಅನ್ನು ಬಳಸಿ, ಮಾಡೆಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡುವುದನ್ನು ತಿಳಿದಿರಬೇಕು. |
00:45 | ಇಲ್ಲದಿದ್ದರೆ, ಸಂಬಂಧಪಟ್ಟ ಟ್ಯುಟೋರಿಯಲ್ ಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ನೋಡಿ. |
00:51 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:53 | Ubuntu OS ಆವೃತ್ತಿ 12.04, |
00:58 | Jmol ಆವೃತ್ತಿ 12.2.2 ಮತ್ತು |
01:02 | Java ಆವೃತ್ತಿ 7 ಇವುಗಳನ್ನು ಬಳಸುತ್ತಿದ್ದೇನೆ. |
01:05 | 'ಪ್ಯಾನೆಲ್'ನ ಮೇಲೆ, '2-chloro-1-propanol' ಮಾಡೆಲ್ ನೊಂದಿಗೆ ನಾನು ಒಂದು ಹೊಸ 'Jmol' ವಿಂಡೋಅನ್ನು ಓಪನ್ ಮಾಡಿದ್ದೇನೆ. |
01:12 | ರಚನೆಯ (ಸ್ಟ್ರಕ್ಚರ್) ಒಳ್ಳೆಯ ನೋಟವನ್ನು ಪಡೆಯಲು, ನಾವು ಮಾಡೆಲ್ ಅನ್ನು ತಿರುಗಿಸಬಹುದು (ರೊಟೇಟ್) ಮತ್ತು ಝೂಮ್ ಮಾಡಬಹುದು. |
01:18 | ಮಾಡೆಲ್ ಅನ್ನು ರೊಟೇಟ್ ಮಾಡಲು, ಟೂಲ್-ಬಾರ್ ನ “Rotate molecule” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
01:24 | ಮಾಡೆಲ್ ನ ಮೇಲೆ ಕ್ಲಿಕ್ ಮಾಡಿ ಹಾಗೂ ಕರ್ಸರ್, ಒಂದು ಕೈ ಆಕಾರದ ಐಕಾನ್ ಆಗಿ ಬದಲಾಯಿಸುವುದನ್ನು ಗಮನಿಸಿ. |
01:29 | ಮೌಸ್-ಬಟನ್ ಅನ್ನು ಕೆಳಗೆ ಒತ್ತಿ ಹಿಡಿದು, ಮೌಸ್ ಅನ್ನು ಪ್ಯಾನೆಲ್ ನ ಮೇಲೆ ಎಳೆಯಿರಿ. |
01:34 | 'ಮಾಡೆಲ್' ತಿರುಗುತ್ತಿರುವುದನ್ನು ನೀವು ನೋಡಬಹುದು. |
01:37 | ಝೂಮ್-ಇನ್ ಹಾಗೂ ಝೂಮ್-ಔಟ್ ಮಾಡಲು, ಕರ್ಸರ್ ಅನ್ನು ಪ್ಯಾನೆಲ್ ನ ಮೇಲಿಡಿ. |
01:42 | ಝೂಮ್-ಔಟ್ ಮಾಡಲು ಮೌಸ್-ವ್ಹೀಲ್ ಅನ್ನು ಮೇಲ್ಗಡೆ ಮತ್ತು ಝೂಮ್-ಇನ್ ಮಾಡಲು ಕೆಳಗಡೆ ನಡೆಸಿ. |
01:49 | ಪ್ಯಾನೆಲ್ ನ ಮೇಲೆ ಮಾಡೆಲ್ ಅನ್ನು ನಡೆಸಲು, ಕರ್ಸರ್ ಅನ್ನು ಮಾಡೆಲ್ ನ ಮೇಲೆ ಇರಿಸಿ. |
01:54 | ಕೀಬೋರ್ಡ್ ಮೇಲಿನ 'Shift' ಬಟನ್ ಅನ್ನು ಒತ್ತಿಹಿಡಿಯಿರಿ. |
01:57 | ಡಬಲ್-ಕ್ಲಿಕ್ ಮಾಡಿ ಮೌಸನ್ನು ಎಳೆಯಿರಿ. |
02:00 | ವಿವರಗಳಿಗಾಗಿ ಪಾಪ್-ಅಪ್ ಮೆನ್ಯೂನಲ್ಲಿ ಒದಗಿಸಲಾದ 'Mouse Manual' ಅನ್ನು ನೋಡಿ. |
02:06 | ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ. 'About' ಎಂಬಲ್ಲಿಗೆ ಸ್ಕ್ರೋಲ್ ಡೌನ್ ಮಾಡಿ. ಆಮೇಲೆ 'Jmol 12.2.2' ಅನ್ನು ಆಯ್ಕೆಮಾಡಿ ಮತ್ತು 'Mouse Manual' ನ ಮೇಲೆ ಕ್ಲಿಕ್ ಮಾಡಿ. |
02:17 | ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿದ್ದರೆ, |
02:19 | “Mouse manual” ನೊಂದಿಗೆ ಒಂದು ವೆಬ್-ಪೇಜ್, ಸ್ಕ್ರೀನ್ ನ ಮೇಲೆ ಕಾಣಿಸಿಕೊಳ್ಳುತ್ತದೆ. |
02:24 | ಪಾಪ್-ಅಪ್ ಮೆನ್ಯೂವಿನಿಂದ ಹೊರಬರಲು, 'ಪ್ಯಾನೆಲ್'ನ ಮೇಲೆ ಕ್ಲಿಕ್ ಮಾಡಿ. |
02:28 | 'ಪ್ಯಾನೆಲ್'ನ ಮೇಲೆ ಅಣುವನ್ನು ಸ್ವಯಂಚಾಲಿತವಾಗಿ ಸ್ಪಿನ್ ಮಾಡಲು, ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ. |
02:34 | 'Spin' ಎಂಬಲ್ಲಿಗೆ ಸ್ಕ್ರೋಲ್ ಡೌನ್ ಮಾಡಿ. ಆಮೇಲೆ 'On' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
02:40 | ಈ ಮಾಡೆಲ್, 'ಪ್ಯಾನೆಲ್'ನ ಮೇಲೆ ಸ್ಪಿನ್ ಆಗುತ್ತಿರುವುದನ್ನು ನಾವು ನೋಡಬಹುದು. |
02:44 | ಸ್ಪಿನ್ ಆಗುವುದನ್ನು ನಿಲ್ಲಿಸಲು, ಮತ್ತೊಮ್ಮೆ ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ. |
02:49 | 'Spin' ಎಂಬಲ್ಲಿಗೆ ಸ್ಕ್ರೋಲ್ ಡೌನ್ ಮಾಡಿ ಮತ್ತು 'Off' ನ ಮೇಲೆ ಕ್ಲಿಕ್ ಮಾಡಿ. |
02:54 | ಒಂದು ಅಸೈನ್ಮೆಂಟ್ - |
02:56 | '2-chloro-3-Iodo-pentane' ನ ಒಂದು ಮಾಡೆಲ್ ಅನ್ನು ಕ್ರಿಯೇಟ್ ಮಾಡಿ. |
03:00 | ಪಾಪ್-ಅಪ್ ಮೆನ್ಯೂನಲ್ಲಿ, 'Spin' ಎಂಬ ಆಯ್ಕೆಯ ಬಗ್ಗೆ ಕಲಿತುಕೊಳ್ಳಿ. |
03:04 | ಸ್ಪಿನ್ ನ ದಿಕ್ಕನ್ನು 'Z' ಅಕ್ಸಿಸ್ ಗೆ ಮತ್ತು 'rate of spin' ಅನ್ನು '40' ಕ್ಕೆ ಬದಲಾಯಿಸಿ. |
03:10 | ಸೂಚನೆ: ಪಾಪ್-ಅಪ್ ಮೆನ್ಯೂನಲ್ಲಿಯ 'Set Z Rate ' ಎಂಬ ಆಯ್ಕೆಯನ್ನು ಬಳಸಿ. |
03:16 | ಪೂರ್ತಿಗೊಂಡ ನಿಮ್ಮ ಅಸೈನ್ಮೆಂಟ್, ಕೆಳಗಿನಂತೆ ಕಾಣಬೇಕು. |
03:22 | ಈಗ ನಾವು 'View' ಮೆನ್ಯೂದ ಬಗ್ಗೆ ಕಲಿಯೋಣ. |
03:25 | ಮೆನ್ಯೂ-ಬಾರ್ ನ ಮೇಲಿನ 'View' ಎಂಬ ಮೆನ್ಯೂ, ಮಾಡೆಲ್ ಅನ್ನು ವಿವಿಧ ಕೋನಗಳಿಂದ ವೀಕ್ಷಿಸಲು ಆಯ್ಕೆಗಳನ್ನು ಹೊಂದಿದೆ. |
03:31 | 'View' ಮೆನ್ಯೂದ ಮೇಲೆ ಕ್ಲಿಕ್ ಮಾಡಿ. |
03:33 | ಮೆನ್ಯೂಅನ್ನು ಸ್ಕ್ರೋಲ್ ಡೌನ್ ಮಾಡಿ ಮತ್ತು ಒದಗಿಸಲಾದ ವಿವಿಧ ಆಯ್ಕೆಗಳಿಂದ ಆರಿಸಿಕೊಳ್ಳಿ. |
03:38 | ಉದಾಹರಣೆಗೆ, ನಾನು 'Top' ಎಂಬ ವ್ಯೂಅನ್ನು ಆರಿಸಿಕೊಳ್ಳುವೆನು. |
03:42 | 'Top' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:45 | ಅಣುವು, ಮೇಲಿನಿಂದ ಹೇಗೆ ಕಾಣುತ್ತದೆ ಎಂಬುದನ್ನು ಸ್ಕ್ರೀನ್ ನ ಮೇಲಿನ ಇಮೇಜ್ ತೋರಿಸುತ್ತದೆ. |
03:50 | ನಾವು ಈ ವ್ಯೂಅನ್ನು ಒಂದು ಇಮೇಜ್ ನಂತೆ ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಬಹುದು. |
03:55 | 'Save current view as an image' ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
03:59 | 'Save' ಎಂಬ ಒಂದು ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:03 | ಫೈಲ್ ಫಾರ್ಮ್ಯಾಟ್ ಅನ್ನು ಆಯ್ಕೆಮಾಡಲು, 'Image Type' ನ ಆಯ್ಕೆಗಳ ಮೇಲೆ ಸ್ಕ್ರೋಲ್ ಡೌನ್ ಮಾಡಿ. |
04:09 | ನಾನು 'JPEG' ಫಾರ್ಮ್ಯಾಟ್ ಅನ್ನು ಆಯ್ಕೆಮಾಡುವೆನು. |
04:13 | ನಿಮಗೆ ಫೈಲನ್ನು ಸೇವ್ ಮಾಡಬೇಕಾಗಿರುವ ಫೋಲ್ಡರ್ ಅನ್ನು ಓಪನ್ ಮಾಡಿ. |
04:17 | ನನಗೆ ಇದು 'Desktop' ನ ಮೇಲೆ ಬೇಕಾಗಿದೆ. |
04:19 | 'Desktop' ಅನ್ನು ಆಯ್ಕೆಮಾಡಿ ಮತ್ತು 'Open' ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:24 | 'File Name' ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ ಹೀಗೆ ಟೈಪ್ ಮಾಡಿ: “2-chloro-1-propanol”. |
04:30 | “Files of Type” ಎಂಬಲ್ಲಿಗೆ ಹೋಗಿ ಮತ್ತು 'jpg' ಯನ್ನು ಆಯ್ಕೆಮಾಡಿ. |
04:35 | 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:38 | ಈಗ, ಇಮೇಜ್ ಅನ್ನು ಡೆಸ್ಕ್ಟಾಪ್ ನ ಮೇಲೆ 'JPEG' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಲಾಗುವುದು. |
04:44 | ಮೊಲೆಕ್ಯುಲರ್ ಮಾಡೆಲ್ ನ ಡಿಸ್ಪ್ಲೇದ ಸ್ಟೈಲ್ ಅನ್ನು ವಿವಿಧ ರೀತಿಗಳಲ್ಲಿ ಬದಲಾಯಿಸಬಹುದು. |
04:50 | ಅವಶ್ಯವಿದ್ದಲ್ಲಿ, ಪರಮಾಣುಗಳ ಗಾತ್ರ (size) ಹಾಗೂ ಬಣ್ಣ (color) ಮತ್ತು ಈ ಅಣುವಿನಲ್ಲಿಯ ಬಾಂಡ್ (bond) ಗಳನ್ನು ಬದಲಾಯಿಸಬಹುದು. |
04:57 | ಅಣುವಿನಲ್ಲಿಯ ಅಥವಾ ಆಯ್ಕೆಯಾದ ಒಂದು ಸೆಟ್ ನಲ್ಲಿಯ ಎಲ್ಲ ಪರಮಾಣುಗಳನ್ನು ಮಾರ್ಪಡಿಸಲು ನಮ್ಮ ಹತ್ತಿರ ಒಂದು ಆಯ್ಕೆಯಿದೆ. |
05:03 | ಪ್ಯಾನೆಲ್ ನ ಮೇಲಿನ ಮಾಡೆಲ್ ನ ಡೀಫಾಲ್ಟ್ ಡಿಸ್ಪ್ಲೇ, 'ball and stick' (ಬಾಲ್ ಆಂಡ್ ಸ್ಟಿಕ್) ಎಂಬ ಮಾದರಿಯಲ್ಲಿದೆ. |
05:09 | ಡಿಸ್ಪ್ಲೇಯನ್ನು 'CPK Space fill' ಗೆ ಬದಲಾಯಿಸಲು, ಪಾಪ್-ಅಪ್ ಮೆನ್ಯೂವನ್ನು ಓಪನ್ ಮಾಡಿ. |
05:15 | ಪೂರ್ತಿ ಅಣುವನ್ನು ಬದಲಾಯಿಸಲು, 'Select' ಗೆ ಹೋಗಿ ಮತ್ತು 'All' ನ ಮೇಲೆ ಕ್ಲಿಕ್ ಮಾಡಿ. |
05:22 | ಮತ್ತೊಮ್ಮೆ ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ. |
05:25 | 'Style' ಗೆ ಸ್ಕ್ರೋಲ್ ಡೌನ್ ಮಾಡಿ, ಸಬ್-ಮೆನ್ಯೂನಿಂದ 'Scheme' ಅನ್ನು ಆಯ್ಕೆಮಾಡಿ. |
05:30 | ಮತ್ತು 'CPK Spacefill' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
05:35 | ಸ್ಕ್ರೀನ್ ನ ಮೇಲಿನ ಮಾಡೆಲ್, 'CPK Spacefill' ಮಾಡೆಲ್ ಗೆ ಪರಿವರ್ತಿಸಲ್ಪಟ್ಟಿದೆ. |
05:40 | ಈಗ ನಾವು ಅದನ್ನು ಮರಳಿ 'ball and stick' ಮಾಡೆಲ್ ಗೆ ಪರಿವರ್ತಿಸೋಣ. |
05:44 | ಹಿಂದಿನ ಹಂತಗಳನ್ನೇ ನಾವು ಅನುಸರಿಸೋಣ. |
05:48 | ಪಾಪ್-ಅಪ್ –ಮೆನ್ಯೂಅನ್ನು ಓಪನ್ ಮಾಡಿ. |
05:50 | 'Style' ಗೆ ಸ್ಕ್ರೋಲ್ ಡೌನ್ ಮಾಡಿ, 'Scheme' ಅನ್ನು ಆಯ್ಕೆಮಾಡಿ. 'Ball and Stick' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
05:56 | ಮಾಡೆಲ್, ಈಗ 'ball and stick' ಸ್ಟೈಲ್ ನ ಡಿಸ್ಪ್ಲೇಗೆ ಪರಿವರ್ತಿಸಲ್ಪಟ್ಟಿದೆ. |
06:01 | ಪಾಪ್-ಅಪ್ ಮೆನ್ಯೂ ಹಾಗೂ ಮೆನ್ಯೂ ಬಾರ್ ಮೇಲಿನ 'Display' ಮೆನ್ಯೂಗಳನ್ನು ಬಳಸಿ, ಬಾಂಡ್ ಗಳ ಸೈಜನ್ನು ಬದಲಾಯಿಸಬಹುದು. |
06:08 | 'Display' ಎಂಬ ಮೆನ್ಯೂವಿನ ಮೇಲೆ ಕ್ಲಿಕ್ ಮಾಡಿ ಮತ್ತು 'Bond' ಅನ್ನು ಆಯ್ಕೆಮಾಡಿ. |
06:12 | ಸಬ್-ಮೆನ್ಯೂ, ’ಆಂಗ್ಸ್ಟ್ರಾಮ್ ಯೂನಿಟ್’ಗಳಲ್ಲಿ, ಬಾಂಡ್ ಗಳ ವಿವಿಧ ವ್ಯಾಸಗಳ ಆಯ್ಕೆಗಳನ್ನು ಹೊಂದಿದೆ. |
06:19 | ಉದಾಹರಣೆಗೆ, ನಾನು '0.1 Angstrom' ಅನ್ನು ಆಯ್ಕೆಮಾಡಿ ಅದರ ಮೇಲೆ ಕ್ಲಿಕ್ ಮಾಡುವೆನು. |
06:26 | ಬಾಂಡ್ ಗಳ ದಪ್ಪದಲ್ಲಿಯ ಬದಲಾವಣೆಯನ್ನು ಗಮನಿಸಿ. |
06:30 | ನಾವು ಪರಮಾಣುಗಳ ಮತ್ತು ಬಾಂಡ್ ಗಳ ಬಣ್ಣವನ್ನು ಸಹ ಬದಲಾಯಿಸಬಹುದು. |
06:34 | ನನಗೆ, ಮಾಡೆಲ್ ನಲ್ಲಿಯ ಎಲ್ಲ ಕಾರ್ಬನ್ ಪರಮಾಣುಗಳ ಬಣ್ಣವನ್ನು ಹಳದಿ ಬಣ್ಣಕ್ಕೆ ಬದಲಾಯಿಸಬೇಕಾಗಿದೆ. |
06:39 | ಇದನ್ನು ಮಾಡಲು, ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ ಮತ್ತು 'Select' ಎಂಬಲ್ಲಿಗೆ ಹೋಗಿ. |
06:44 | 'Element' ಎಂಬಲ್ಲಿಗೆ ಸ್ಕ್ರೋಲ್ ಡೌನ್ ಮಾಡಿ ಮತ್ತು 'Carbon' ನ ಮೇಲೆ ಕ್ಲಿಕ್ ಮಾಡಿ. |
06:48 | ಪಾಪ್-ಅಪ್ ಮೆನ್ಯೂಅನ್ನು ಮತ್ತೊಮ್ಮೆ ಓಪನ್ ಮಾಡಿ ಮತ್ತು 'Color' ಅನ್ನು ಆಯ್ಕೆಮಾಡಿ. |
06:52 | ಆಮೇಲೆ 'Atoms' ಅನ್ನು ಆಯ್ಕೆಮಾಡಿ ಮತ್ತು ' 'Yellow' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:57 | ಮಾಡೆಲ್ ನಲ್ಲಿಯ ಎಲ್ಲ ಕಾರ್ಬನ್ ಗಳು ಈಗ ಹಳದಿ ಬಣ್ಣದಲ್ಲಿ ಕಾಣುತ್ತಿವೆ. |
07:02 | ಬಾಂಡ್ ಗಳ ಬಣ್ಣಗಳನ್ನು ಹೇಗೆ ಬದಲಾಯಿಸುವುದು ಎಂದು ನಾವು ನೋಡೋಣ. |
07:06 | ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ ಮತ್ತು 'All' ಅನ್ನು ಆಯ್ಕೆಮಾಡಿ. |
07:10 | ಪಾಪ್-ಅಪ್ ಮೆನ್ಯೂಅನ್ನು ಮತ್ತೊಮ್ಮೆ ಓಪನ್ ಮಾಡಿ. |
07:12 | 'Color' ಗೆ ಸ್ಕ್ರೋಲ್ ಡೌನ್ ಮಾಡಿ , ಸಬ್-ಮೆನ್ಯೂನಿಂದ 'Bonds' ಅನ್ನು ಆಯ್ಕೆಮಾಡಿ. |
07:16 | ಸ್ಕ್ರೋಲ್ ಡೌನ್ ಮಾಡಿ ಹಾಗೂ 'Blue' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
07:20 | ಎಲ್ಲ ಬಾಂಡ್ ಗಳ ಬಣ್ಣ ಈಗ ನೀಲಿ ಆಗಿದೆ. |
07:23 | ನಾವು ಈ ಮಾಡೆಲ್ ಅನ್ನು, ಸ್ಕ್ರೀನ್ ನ ಮೇಲೆ X, Y ಹಾಗೂ Z ಆಕ್ಸಿಸ್ ಗಳೊಂದಿಗೆ ಮತ್ತು 'ಬೌಂಡಿಂಗ್ ಬಾಕ್ಸ್' ನ ಒಳಗೆ ಡಿಸ್ಪ್ಲೇ ಮಾಡಬಹುದು. |
07:31 | ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ, 'Style' ಅನ್ನು ಆಯ್ಕೆಮಾಡಿ. |
07:34 | ಮತ್ತು 'Axes' ಎಂಬ ಆಯ್ಕೆಗೆ ಸ್ಕ್ರೋಲ್ ಡೌನ್ ಮಾಡಿ. |
07:37 | ಸಬ್-ಮೆನ್ಯೂನಿಂದ 'Pixel Width' ಅನ್ನು ಆಯ್ಕೆಮಾಡಿ. |
07:40 | ನಾನು '3 px' ಅನ್ನು ಪಿಕ್ಸೆಲ್ ವಿಡ್ತ್ ಎಂದು ಆಯ್ಕೆಮಾಡುವೆನು. |
07:44 | ಈಗ ನಮ್ಮ ಹತ್ತಿರ ಮಾಡೆಲ್, ಎಲ್ಲ ಆಕ್ಸಿಸ್ ಗಳೊಂದಿಗೆ ಸ್ಕ್ರೀನ್ ನ ಮೇಲೆ ಇದೆ. |
07:49 | ಇಮೇಜ್ ನ ಸುತ್ತಲೂ ಒಂದು ಬೌಂಡ್-ಬಾಕ್ಸ್ ಅನ್ನು ರಚಿಸಲು, ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ. |
07:54 | 'Style' ಗೆ ಸ್ಕ್ರೋಲ್ ಡೌನ್ ಮಾಡಿ ಹಾಗೂ ಆಯ್ಕೆಗಳಿಂದ 'Boundbox' ಅನ್ನು ಆಯ್ಕೆಮಾಡಿ. |
07:59 | 'Pixel width' ಅನ್ನು ಆಯ್ಕೆಮಾಡಿ ಮತ್ತು ಪಿಕ್ಸೆಲ್ ವಿಡ್ತ್ '3 px' ನ ಮೇಲೆ ಕ್ಲಿಕ್ ಮಾಡಿ. |
08:05 | ಸ್ಕ್ರೀನ್ ನ ಮೇಲೆ, 'Boundbox' ನಲ್ಲಿ, ನಮ್ಮ ಹತ್ತಿರ ಆಕ್ಸಿಸ್ ಗಳೊಂದಿಗೆ (axes) '2-chloro-1-propanol' ನ ಮಾಡೆಲ್ ಇದೆ. |
08:12 | 'Boundbox' ಅನ್ನು ಸ್ಪಷ್ಟವಾಗಿ ನೋಡಲು, ನಾವು ಝೂಮ್-ಇನ್ ಅಥವಾ ಝೂಮ್-ಔಟ್ ಮಾಡಬೇಕಾಗಬಹುದು. |
08:17 | ಇಮೇಜನ್ನು ಸೇವ್ ಮಾಡಿ ಪ್ರೊಗ್ರಾಂನಿಂದ ಹೊರಗೆ ಬನ್ನಿ. |
08:21 | ಸಂಕ್ಷಿಪ್ತವಾಗಿ, |
08:23 | ಈ ಟ್ಯುಟೋರಿಯಲ್ ನಲ್ಲಿ, ನಾವು: |
08:26 | ಸ್ಕ್ರೀನ್ ನ ಮೇಲೆ ಮಾಡೆಲ್ ಅನ್ನು ತಿರುಗಿಸಲು, ಝೂಮ್ ಮಾಡಲು, ಸ್ಥಳಾಂತರಿಸಲು ಹಾಗೂ ಸ್ಪಿನ್ ಮಾಡಲು, |
08:31 | ವಿವಿಧ ಕೋನಗಳಿಂದ ಮಾಡೆಲ್ ಅನ್ನು ವೀಕ್ಷಿಸಲು, |
08:34 | ಡಿಸ್ಪ್ಲೇ ದ ಸ್ಟೈಲ್ ಅನ್ನು ಬದಲಾಯಿಸಲು ಮತ್ತು |
08:36 | ಪರಮಾಣುಗಳ ಹಾಗೂ ಬಾಂಡ್ ಗಳ ಬಣ್ಣವನ್ನು ಬದಲಾಯಿಸಲು ಕಲಿತಿದ್ದೇವೆ. |
08:39 | ನಾವು : |
08:41 | ಆಕ್ಸಿಸ್ ಮತ್ತು ಬೌಂಡ್ ಬಾಕ್ಸ್ ಗಳೊಂದಿಗೆ ಇಮೇಜನ್ನು ಡಿಸ್ಪ್ಲೇ ಮಾಡಲು ಹಾಗೂ |
08:44 | ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಇಮೇಜನ್ನು ಸೇವ್ ಮಾಡಲು ಸಹ ಕಲಿತಿದ್ದೇವೆ. |
08:48 | ಅಸೈನ್ಮೆಂಟ್ ಗಾಗಿ: |
08:50 | '3-amino-1-propanol' ನ ಮೊಡೆಲ್ ಅನ್ನು ಕ್ರಿಯೇಟ್ ಮಾಡಿ |
08:53 | ಡಿಸ್ಪ್ಲೇಯನ್ನು 'Sticks' ಗೆ ಬದಲಾಯಿಸಿ. |
08:56 | ಮೊಡೆಲ್ ನಲ್ಲಿಯ ಎಲ್ಲ ಹೈಡ್ರೋಜೆನ್ ಗಳ ಬಣ್ಣವನ್ನು 'Green' (ಹಸಿರು) ಗೆ ಬದಲಾಯಿಸಿ. |
09:00 | ಎಲ್ಲ ಬಾಂಡ್ ಗಳ ಕಲರ್ ಅನ್ನು 'Yellow' (ಹಳದಿ) ಗೆ ಬದಲಾಯಿಸಿ. |
09:04 | ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್, ಈ ಕೆಳಗಿನಂತೆ ಕಾಣಬೇಕು. |
09:12 | ಈ ಕೆಳಗಿನ ಲಿಂಕ್ ನಿಂದ ವಿಡಿಯೋಅನ್ನು ನೋಡಿ. |
09:15 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ. |
09:19 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:24 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್’: |
09:26 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:29 | ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ. |
09:34 | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
09:41 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ ನ ಭಾಗವಾಗಿದೆ. |
09:44 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. |
09:51 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
09:57 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
ವಂದನೆಗಳು. |