Jmol-Application/C2/Modify-Display-and-View/Kannada

From Script | Spoken-Tutorial
Jump to: navigation, search
Time
Narration
00:01 Jmol Application (ಜೆ-ಮೊಲ್ ಅಪ್ಲಿಕೇಶನ್) ನಲ್ಲಿ Modify Display and View (ಮಾಡಿಫೈ ಡಿಸ್ಪ್ಲೇ ಆಂಡ್ ವ್ಯೂ ) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ, ನಾವು:
00:11 ಸ್ಕ್ರೀನ್ ನ ಮೇಲೆ ಮಾಡೆಲ್ ಅನ್ನು ತಿರುಗಿಸಲು, ಝೂಮ್ ಮಾಡಲು, ಸ್ಥಳಾಂತರಿಸಲು ಹಾಗೂ ಸ್ಪಿನ್ ಮಾಡಲು,
00:17 ವ್ಯೂ ಅನ್ನು ಮಾರ್ಪಡಿಸಲು,
00:19 ಡಿಸ್ಪ್ಲೇದ ಸ್ಟೈಲ್ ಅನ್ನು ಬದಲಾಯಿಸಲು,
00:22 ಪರಮಾಣುಗಳ ಮತ್ತು ಬಾಂಡ್ ಗಳ ಸೈಜ್ ಹಾಗೂ ಬಣ್ಣಗಳನ್ನು ಬದಲಾಯಿಸಲು,
00:26 ಮಾಡೆಲ್ ಅನ್ನು ಆಕ್ಸಿಸ್ ಹಾಗೂ ಬೌಂಡ್ ಬಾಕ್ಸ್ ಗಳೊಂದಿಗೆ ಡಿಸ್ಪ್ಲೇ ಮಾಡಲು (ಪ್ರದರ್ಶಿಸಲು),
00:30 ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಇಮೇಜನ್ನು ಸೇವ್ ಮಾಡಲು ಕಲಿಯುವೆವು.
00:34 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು
00:37 'Jmol Application' ವಿಂಡೋ ಹಾಗೂ
00:40 'ಮಾಡೆಲ್ ಕಿಟ್' (modelkit) ಫಂಕ್ಷನ್ ಅನ್ನು ಬಳಸಿ, ಮಾಡೆಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡುವುದನ್ನು ತಿಳಿದಿರಬೇಕು.
00:45 ಇಲ್ಲದಿದ್ದರೆ, ಸಂಬಂಧಪಟ್ಟ ಟ್ಯುಟೋರಿಯಲ್ ಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ನೋಡಿ.
00:51 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:53 Ubuntu OS ಆವೃತ್ತಿ 12.04,
00:58 Jmol ಆವೃತ್ತಿ 12.2.2 ಮತ್ತು
01:02 Java ಆವೃತ್ತಿ 7 ಇವುಗಳನ್ನು ಬಳಸುತ್ತಿದ್ದೇನೆ.
01:05 'ಪ್ಯಾನೆಲ್'ನ ಮೇಲೆ, '2-chloro-1-propanol' ಮಾಡೆಲ್ ನೊಂದಿಗೆ ನಾನು ಒಂದು ಹೊಸ 'Jmol' ವಿಂಡೋಅನ್ನು ಓಪನ್ ಮಾಡಿದ್ದೇನೆ.
01:12 ರಚನೆಯ (ಸ್ಟ್ರಕ್ಚರ್) ಒಳ್ಳೆಯ ನೋಟವನ್ನು ಪಡೆಯಲು, ನಾವು ಮಾಡೆಲ್ ಅನ್ನು ತಿರುಗಿಸಬಹುದು (ರೊಟೇಟ್) ಮತ್ತು ಝೂಮ್ ಮಾಡಬಹುದು.
01:18 ಮಾಡೆಲ್ ಅನ್ನು ರೊಟೇಟ್ ಮಾಡಲು, ಟೂಲ್-ಬಾರ್ ನ “Rotate molecule” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:24 ಮಾಡೆಲ್ ನ ಮೇಲೆ ಕ್ಲಿಕ್ ಮಾಡಿ ಹಾಗೂ ಕರ್ಸರ್, ಒಂದು ಕೈ ಆಕಾರದ ಐಕಾನ್ ಆಗಿ ಬದಲಾಯಿಸುವುದನ್ನು ಗಮನಿಸಿ.
01:29 ಮೌಸ್-ಬಟನ್ ಅನ್ನು ಕೆಳಗೆ ಒತ್ತಿ ಹಿಡಿದು, ಮೌಸ್ ಅನ್ನು ಪ್ಯಾನೆಲ್ ನ ಮೇಲೆ ಎಳೆಯಿರಿ.
01:34 'ಮಾಡೆಲ್' ತಿರುಗುತ್ತಿರುವುದನ್ನು ನೀವು ನೋಡಬಹುದು.
01:37 ಝೂಮ್-ಇನ್ ಹಾಗೂ ಝೂಮ್-ಔಟ್ ಮಾಡಲು, ಕರ್ಸರ್ ಅನ್ನು ಪ್ಯಾನೆಲ್ ನ ಮೇಲಿಡಿ.
01:42 ಝೂಮ್-ಔಟ್ ಮಾಡಲು ಮೌಸ್-ವ್ಹೀಲ್ ಅನ್ನು ಮೇಲ್ಗಡೆ ಮತ್ತು ಝೂಮ್-ಇನ್ ಮಾಡಲು ಕೆಳಗಡೆ ನಡೆಸಿ.
01:49 ಪ್ಯಾನೆಲ್ ನ ಮೇಲೆ ಮಾಡೆಲ್ ಅನ್ನು ನಡೆಸಲು, ಕರ್ಸರ್ ಅನ್ನು ಮಾಡೆಲ್ ನ ಮೇಲೆ ಇರಿಸಿ.
01:54 ಕೀಬೋರ್ಡ್ ಮೇಲಿನ 'Shift' ಬಟನ್ ಅನ್ನು ಒತ್ತಿಹಿಡಿಯಿರಿ.
01:57 ಡಬಲ್-ಕ್ಲಿಕ್ ಮಾಡಿ ಮೌಸನ್ನು ಎಳೆಯಿರಿ.
02:00 ವಿವರಗಳಿಗಾಗಿ ಪಾಪ್-ಅಪ್ ಮೆನ್ಯೂನಲ್ಲಿ ಒದಗಿಸಲಾದ 'Mouse Manual' ಅನ್ನು ನೋಡಿ.
02:06 ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ. 'About' ಎಂಬಲ್ಲಿಗೆ ಸ್ಕ್ರೋಲ್ ಡೌನ್ ಮಾಡಿ. ಆಮೇಲೆ 'Jmol 12.2.2' ಅನ್ನು ಆಯ್ಕೆಮಾಡಿ ಮತ್ತು 'Mouse Manual' ನ ಮೇಲೆ ಕ್ಲಿಕ್ ಮಾಡಿ.
02:17 ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿದ್ದರೆ,
02:19 “Mouse manual” ನೊಂದಿಗೆ ಒಂದು ವೆಬ್-ಪೇಜ್, ಸ್ಕ್ರೀನ್ ನ ಮೇಲೆ ಕಾಣಿಸಿಕೊಳ್ಳುತ್ತದೆ.
02:24 ಪಾಪ್-ಅಪ್ ಮೆನ್ಯೂವಿನಿಂದ ಹೊರಬರಲು, 'ಪ್ಯಾನೆಲ್'ನ ಮೇಲೆ ಕ್ಲಿಕ್ ಮಾಡಿ.
02:28 'ಪ್ಯಾನೆಲ್'ನ ಮೇಲೆ ಅಣುವನ್ನು ಸ್ವಯಂಚಾಲಿತವಾಗಿ ಸ್ಪಿನ್ ಮಾಡಲು, ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ.
02:34 'Spin' ಎಂಬಲ್ಲಿಗೆ ಸ್ಕ್ರೋಲ್ ಡೌನ್ ಮಾಡಿ. ಆಮೇಲೆ 'On' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
02:40 ಈ ಮಾಡೆಲ್, 'ಪ್ಯಾನೆಲ್'ನ ಮೇಲೆ ಸ್ಪಿನ್ ಆಗುತ್ತಿರುವುದನ್ನು ನಾವು ನೋಡಬಹುದು.
02:44 ಸ್ಪಿನ್ ಆಗುವುದನ್ನು ನಿಲ್ಲಿಸಲು, ಮತ್ತೊಮ್ಮೆ ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ.
02:49 'Spin' ಎಂಬಲ್ಲಿಗೆ ಸ್ಕ್ರೋಲ್ ಡೌನ್ ಮಾಡಿ ಮತ್ತು 'Off' ನ ಮೇಲೆ ಕ್ಲಿಕ್ ಮಾಡಿ.
02:54 ಒಂದು ಅಸೈನ್ಮೆಂಟ್ -
02:56 '2-chloro-3-Iodo-pentane' ನ ಒಂದು ಮಾಡೆಲ್ ಅನ್ನು ಕ್ರಿಯೇಟ್ ಮಾಡಿ.
03:00 ಪಾಪ್-ಅಪ್ ಮೆನ್ಯೂನಲ್ಲಿ, 'Spin' ಎಂಬ ಆಯ್ಕೆಯ ಬಗ್ಗೆ ಕಲಿತುಕೊಳ್ಳಿ.
03:04 ಸ್ಪಿನ್ ನ ದಿಕ್ಕನ್ನು 'Z' ಅಕ್ಸಿಸ್ ಗೆ ಮತ್ತು 'rate of spin' ಅನ್ನು '40' ಕ್ಕೆ ಬದಲಾಯಿಸಿ.
03:10 ಸೂಚನೆ: ಪಾಪ್-ಅಪ್ ಮೆನ್ಯೂನಲ್ಲಿಯ 'Set Z Rate ' ಎಂಬ ಆಯ್ಕೆಯನ್ನು ಬಳಸಿ.
03:16 ಪೂರ್ತಿಗೊಂಡ ನಿಮ್ಮ ಅಸೈನ್ಮೆಂಟ್, ಕೆಳಗಿನಂತೆ ಕಾಣಬೇಕು.
03:22 ಈಗ ನಾವು 'View' ಮೆನ್ಯೂದ ಬಗ್ಗೆ ಕಲಿಯೋಣ.
03:25 ಮೆನ್ಯೂ-ಬಾರ್ ನ ಮೇಲಿನ 'View' ಎಂಬ ಮೆನ್ಯೂ, ಮಾಡೆಲ್ ಅನ್ನು ವಿವಿಧ ಕೋನಗಳಿಂದ ವೀಕ್ಷಿಸಲು ಆಯ್ಕೆಗಳನ್ನು ಹೊಂದಿದೆ.
03:31 'View' ಮೆನ್ಯೂದ ಮೇಲೆ ಕ್ಲಿಕ್ ಮಾಡಿ.
03:33 ಮೆನ್ಯೂಅನ್ನು ಸ್ಕ್ರೋಲ್ ಡೌನ್ ಮಾಡಿ ಮತ್ತು ಒದಗಿಸಲಾದ ವಿವಿಧ ಆಯ್ಕೆಗಳಿಂದ ಆರಿಸಿಕೊಳ್ಳಿ.
03:38 ಉದಾಹರಣೆಗೆ, ನಾನು 'Top' ಎಂಬ ವ್ಯೂಅನ್ನು ಆರಿಸಿಕೊಳ್ಳುವೆನು.
03:42 'Top' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:45 ಅಣುವು, ಮೇಲಿನಿಂದ ಹೇಗೆ ಕಾಣುತ್ತದೆ ಎಂಬುದನ್ನು ಸ್ಕ್ರೀನ್ ನ ಮೇಲಿನ ಇಮೇಜ್ ತೋರಿಸುತ್ತದೆ.
03:50 ನಾವು ಈ ವ್ಯೂಅನ್ನು ಒಂದು ಇಮೇಜ್ ನಂತೆ ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಬಹುದು.
03:55 'Save current view as an image' ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
03:59 'Save' ಎಂಬ ಒಂದು ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
04:03 ಫೈಲ್ ಫಾರ್ಮ್ಯಾಟ್ ಅನ್ನು ಆಯ್ಕೆಮಾಡಲು, 'Image Type' ನ ಆಯ್ಕೆಗಳ ಮೇಲೆ ಸ್ಕ್ರೋಲ್ ಡೌನ್ ಮಾಡಿ.
04:09 ನಾನು 'JPEG' ಫಾರ್ಮ್ಯಾಟ್ ಅನ್ನು ಆಯ್ಕೆಮಾಡುವೆನು.
04:13 ನಿಮಗೆ ಫೈಲನ್ನು ಸೇವ್ ಮಾಡಬೇಕಾಗಿರುವ ಫೋಲ್ಡರ್ ಅನ್ನು ಓಪನ್ ಮಾಡಿ.
04:17 ನನಗೆ ಇದು 'Desktop' ನ ಮೇಲೆ ಬೇಕಾಗಿದೆ.
04:19 'Desktop' ಅನ್ನು ಆಯ್ಕೆಮಾಡಿ ಮತ್ತು 'Open' ಬಟನ್ ನ ಮೇಲೆ ಕ್ಲಿಕ್ ಮಾಡಿ.
04:24 'File Name' ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ ಹೀಗೆ ಟೈಪ್ ಮಾಡಿ: “2-chloro-1-propanol”.
04:30 “Files of Type” ಎಂಬಲ್ಲಿಗೆ ಹೋಗಿ ಮತ್ತು 'jpg' ಯನ್ನು ಆಯ್ಕೆಮಾಡಿ.
04:35 'Save' ಬಟನ್ ನ ಮೇಲೆ ಕ್ಲಿಕ್ ಮಾಡಿ.
04:38 ಈಗ, ಇಮೇಜ್ ಅನ್ನು ಡೆಸ್ಕ್ಟಾಪ್ ನ ಮೇಲೆ 'JPEG' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಲಾಗುವುದು.
04:44 ಮೊಲೆಕ್ಯುಲರ್ ಮಾಡೆಲ್ ನ ಡಿಸ್ಪ್ಲೇದ ಸ್ಟೈಲ್ ಅನ್ನು ವಿವಿಧ ರೀತಿಗಳಲ್ಲಿ ಬದಲಾಯಿಸಬಹುದು.
04:50 ಅವಶ್ಯವಿದ್ದಲ್ಲಿ, ಪರಮಾಣುಗಳ ಗಾತ್ರ (size) ಹಾಗೂ ಬಣ್ಣ (color) ಮತ್ತು ಈ ಅಣುವಿನಲ್ಲಿಯ ಬಾಂಡ್ (bond) ಗಳನ್ನು ಬದಲಾಯಿಸಬಹುದು.
04:57 ಅಣುವಿನಲ್ಲಿಯ ಅಥವಾ ಆಯ್ಕೆಯಾದ ಒಂದು ಸೆಟ್ ನಲ್ಲಿಯ ಎಲ್ಲ ಪರಮಾಣುಗಳನ್ನು ಮಾರ್ಪಡಿಸಲು ನಮ್ಮ ಹತ್ತಿರ ಒಂದು ಆಯ್ಕೆಯಿದೆ.
05:03 ಪ್ಯಾನೆಲ್ ನ ಮೇಲಿನ ಮಾಡೆಲ್ ನ ಡೀಫಾಲ್ಟ್ ಡಿಸ್ಪ್ಲೇ, 'ball and stick' (ಬಾಲ್ ಆಂಡ್ ಸ್ಟಿಕ್) ಎಂಬ ಮಾದರಿಯಲ್ಲಿದೆ.
05:09 ಡಿಸ್ಪ್ಲೇಯನ್ನು 'CPK Space fill' ಗೆ ಬದಲಾಯಿಸಲು, ಪಾಪ್-ಅಪ್ ಮೆನ್ಯೂವನ್ನು ಓಪನ್ ಮಾಡಿ.
05:15 ಪೂರ್ತಿ ಅಣುವನ್ನು ಬದಲಾಯಿಸಲು, 'Select' ಗೆ ಹೋಗಿ ಮತ್ತು 'All' ನ ಮೇಲೆ ಕ್ಲಿಕ್ ಮಾಡಿ.
05:22 ಮತ್ತೊಮ್ಮೆ ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ.
05:25 'Style' ಗೆ ಸ್ಕ್ರೋಲ್ ಡೌನ್ ಮಾಡಿ, ಸಬ್-ಮೆನ್ಯೂನಿಂದ 'Scheme' ಅನ್ನು ಆಯ್ಕೆಮಾಡಿ.
05:30 ಮತ್ತು 'CPK Spacefill' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
05:35 ಸ್ಕ್ರೀನ್ ನ ಮೇಲಿನ ಮಾಡೆಲ್, 'CPK Spacefill' ಮಾಡೆಲ್ ಗೆ ಪರಿವರ್ತಿಸಲ್ಪಟ್ಟಿದೆ.
05:40 ಈಗ ನಾವು ಅದನ್ನು ಮರಳಿ 'ball and stick' ಮಾಡೆಲ್ ಗೆ ಪರಿವರ್ತಿಸೋಣ.
05:44 ಹಿಂದಿನ ಹಂತಗಳನ್ನೇ ನಾವು ಅನುಸರಿಸೋಣ.
05:48 ಪಾಪ್-ಅಪ್ –ಮೆನ್ಯೂಅನ್ನು ಓಪನ್ ಮಾಡಿ.
05:50 'Style' ಗೆ ಸ್ಕ್ರೋಲ್ ಡೌನ್ ಮಾಡಿ, 'Scheme' ಅನ್ನು ಆಯ್ಕೆಮಾಡಿ. 'Ball and Stick' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
05:56 ಮಾಡೆಲ್, ಈಗ 'ball and stick' ಸ್ಟೈಲ್ ನ ಡಿಸ್ಪ್ಲೇಗೆ ಪರಿವರ್ತಿಸಲ್ಪಟ್ಟಿದೆ.
06:01 ಪಾಪ್-ಅಪ್ ಮೆನ್ಯೂ ಹಾಗೂ ಮೆನ್ಯೂ ಬಾರ್ ಮೇಲಿನ 'Display' ಮೆನ್ಯೂಗಳನ್ನು ಬಳಸಿ, ಬಾಂಡ್ ಗಳ ಸೈಜನ್ನು ಬದಲಾಯಿಸಬಹುದು.
06:08 'Display' ಎಂಬ ಮೆನ್ಯೂವಿನ ಮೇಲೆ ಕ್ಲಿಕ್ ಮಾಡಿ ಮತ್ತು 'Bond' ಅನ್ನು ಆಯ್ಕೆಮಾಡಿ.
06:12 ಸಬ್-ಮೆನ್ಯೂ, ’ಆಂಗ್ಸ್ಟ್ರಾಮ್ ಯೂನಿಟ್’ಗಳಲ್ಲಿ, ಬಾಂಡ್ ಗಳ ವಿವಿಧ ವ್ಯಾಸಗಳ ಆಯ್ಕೆಗಳನ್ನು ಹೊಂದಿದೆ.
06:19 ಉದಾಹರಣೆಗೆ, ನಾನು '0.1 Angstrom' ಅನ್ನು ಆಯ್ಕೆಮಾಡಿ ಅದರ ಮೇಲೆ ಕ್ಲಿಕ್ ಮಾಡುವೆನು.
06:26 ಬಾಂಡ್ ಗಳ ದಪ್ಪದಲ್ಲಿಯ ಬದಲಾವಣೆಯನ್ನು ಗಮನಿಸಿ.
06:30 ನಾವು ಪರಮಾಣುಗಳ ಮತ್ತು ಬಾಂಡ್ ಗಳ ಬಣ್ಣವನ್ನು ಸಹ ಬದಲಾಯಿಸಬಹುದು.
06:34 ನನಗೆ, ಮಾಡೆಲ್ ನಲ್ಲಿಯ ಎಲ್ಲ ಕಾರ್ಬನ್ ಪರಮಾಣುಗಳ ಬಣ್ಣವನ್ನು ಹಳದಿ ಬಣ್ಣಕ್ಕೆ ಬದಲಾಯಿಸಬೇಕಾಗಿದೆ.
06:39 ಇದನ್ನು ಮಾಡಲು, ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ ಮತ್ತು 'Select' ಎಂಬಲ್ಲಿಗೆ ಹೋಗಿ.
06:44 'Element' ಎಂಬಲ್ಲಿಗೆ ಸ್ಕ್ರೋಲ್ ಡೌನ್ ಮಾಡಿ ಮತ್ತು 'Carbon' ನ ಮೇಲೆ ಕ್ಲಿಕ್ ಮಾಡಿ.
06:48 ಪಾಪ್-ಅಪ್ ಮೆನ್ಯೂಅನ್ನು ಮತ್ತೊಮ್ಮೆ ಓಪನ್ ಮಾಡಿ ಮತ್ತು 'Color' ಅನ್ನು ಆಯ್ಕೆಮಾಡಿ.
06:52 ಆಮೇಲೆ 'Atoms' ಅನ್ನು ಆಯ್ಕೆಮಾಡಿ ಮತ್ತು ' 'Yellow' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:57 ಮಾಡೆಲ್ ನಲ್ಲಿಯ ಎಲ್ಲ ಕಾರ್ಬನ್ ಗಳು ಈಗ ಹಳದಿ ಬಣ್ಣದಲ್ಲಿ ಕಾಣುತ್ತಿವೆ.
07:02 ಬಾಂಡ್ ಗಳ ಬಣ್ಣಗಳನ್ನು ಹೇಗೆ ಬದಲಾಯಿಸುವುದು ಎಂದು ನಾವು ನೋಡೋಣ.
07:06 ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ ಮತ್ತು 'All' ಅನ್ನು ಆಯ್ಕೆಮಾಡಿ.
07:10 ಪಾಪ್-ಅಪ್ ಮೆನ್ಯೂಅನ್ನು ಮತ್ತೊಮ್ಮೆ ಓಪನ್ ಮಾಡಿ.
07:12 'Color' ಗೆ ಸ್ಕ್ರೋಲ್ ಡೌನ್ ಮಾಡಿ , ಸಬ್-ಮೆನ್ಯೂನಿಂದ 'Bonds' ಅನ್ನು ಆಯ್ಕೆಮಾಡಿ.
07:16 ಸ್ಕ್ರೋಲ್ ಡೌನ್ ಮಾಡಿ ಹಾಗೂ 'Blue' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
07:20 ಎಲ್ಲ ಬಾಂಡ್ ಗಳ ಬಣ್ಣ ಈಗ ನೀಲಿ ಆಗಿದೆ.
07:23 ನಾವು ಈ ಮಾಡೆಲ್ ಅನ್ನು, ಸ್ಕ್ರೀನ್ ನ ಮೇಲೆ X, Y ಹಾಗೂ Z ಆಕ್ಸಿಸ್ ಗಳೊಂದಿಗೆ ಮತ್ತು 'ಬೌಂಡಿಂಗ್ ಬಾಕ್ಸ್' ನ ಒಳಗೆ ಡಿಸ್ಪ್ಲೇ ಮಾಡಬಹುದು.
07:31 ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ, 'Style' ಅನ್ನು ಆಯ್ಕೆಮಾಡಿ.
07:34 ಮತ್ತು 'Axes' ಎಂಬ ಆಯ್ಕೆಗೆ ಸ್ಕ್ರೋಲ್ ಡೌನ್ ಮಾಡಿ.
07:37 ಸಬ್-ಮೆನ್ಯೂನಿಂದ 'Pixel Width' ಅನ್ನು ಆಯ್ಕೆಮಾಡಿ.
07:40 ನಾನು '3 px' ಅನ್ನು ಪಿಕ್ಸೆಲ್ ವಿಡ್ತ್ ಎಂದು ಆಯ್ಕೆಮಾಡುವೆನು.
07:44 ಈಗ ನಮ್ಮ ಹತ್ತಿರ ಮಾಡೆಲ್, ಎಲ್ಲ ಆಕ್ಸಿಸ್ ಗಳೊಂದಿಗೆ ಸ್ಕ್ರೀನ್ ನ ಮೇಲೆ ಇದೆ.
07:49 ಇಮೇಜ್ ನ ಸುತ್ತಲೂ ಒಂದು ಬೌಂಡ್-ಬಾಕ್ಸ್ ಅನ್ನು ರಚಿಸಲು, ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ.
07:54 'Style' ಗೆ ಸ್ಕ್ರೋಲ್ ಡೌನ್ ಮಾಡಿ ಹಾಗೂ ಆಯ್ಕೆಗಳಿಂದ 'Boundbox' ಅನ್ನು ಆಯ್ಕೆಮಾಡಿ.
07:59 'Pixel width' ಅನ್ನು ಆಯ್ಕೆಮಾಡಿ ಮತ್ತು ಪಿಕ್ಸೆಲ್ ವಿಡ್ತ್ '3 px' ನ ಮೇಲೆ ಕ್ಲಿಕ್ ಮಾಡಿ.
08:05 ಸ್ಕ್ರೀನ್ ನ ಮೇಲೆ, 'Boundbox' ನಲ್ಲಿ, ನಮ್ಮ ಹತ್ತಿರ ಆಕ್ಸಿಸ್ ಗಳೊಂದಿಗೆ (axes) '2-chloro-1-propanol' ನ ಮಾಡೆಲ್ ಇದೆ.
08:12 'Boundbox' ಅನ್ನು ಸ್ಪಷ್ಟವಾಗಿ ನೋಡಲು, ನಾವು ಝೂಮ್-ಇನ್ ಅಥವಾ ಝೂಮ್-ಔಟ್ ಮಾಡಬೇಕಾಗಬಹುದು.
08:17 ಇಮೇಜನ್ನು ಸೇವ್ ಮಾಡಿ ಪ್ರೊಗ್ರಾಂನಿಂದ ಹೊರಗೆ ಬನ್ನಿ.
08:21 ಸಂಕ್ಷಿಪ್ತವಾಗಿ,
08:23 ಈ ಟ್ಯುಟೋರಿಯಲ್ ನಲ್ಲಿ, ನಾವು:
08:26 ಸ್ಕ್ರೀನ್ ನ ಮೇಲೆ ಮಾಡೆಲ್ ಅನ್ನು ತಿರುಗಿಸಲು, ಝೂಮ್ ಮಾಡಲು, ಸ್ಥಳಾಂತರಿಸಲು ಹಾಗೂ ಸ್ಪಿನ್ ಮಾಡಲು,
08:31 ವಿವಿಧ ಕೋನಗಳಿಂದ ಮಾಡೆಲ್ ಅನ್ನು ವೀಕ್ಷಿಸಲು,
08:34 ಡಿಸ್ಪ್ಲೇ ದ ಸ್ಟೈಲ್ ಅನ್ನು ಬದಲಾಯಿಸಲು ಮತ್ತು
08:36 ಪರಮಾಣುಗಳ ಹಾಗೂ ಬಾಂಡ್ ಗಳ ಬಣ್ಣವನ್ನು ಬದಲಾಯಿಸಲು ಕಲಿತಿದ್ದೇವೆ.
08:39 ನಾವು :
08:41 ಆಕ್ಸಿಸ್ ಮತ್ತು ಬೌಂಡ್ ಬಾಕ್ಸ್ ಗಳೊಂದಿಗೆ ಇಮೇಜನ್ನು ಡಿಸ್ಪ್ಲೇ ಮಾಡಲು ಹಾಗೂ
08:44 ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಇಮೇಜನ್ನು ಸೇವ್ ಮಾಡಲು ಸಹ ಕಲಿತಿದ್ದೇವೆ.
08:48 ಅಸೈನ್ಮೆಂಟ್ ಗಾಗಿ:
08:50 '3-amino-1-propanol' ನ ಮೊಡೆಲ್ ಅನ್ನು ಕ್ರಿಯೇಟ್ ಮಾಡಿ
08:53 ಡಿಸ್ಪ್ಲೇಯನ್ನು 'Sticks' ಗೆ ಬದಲಾಯಿಸಿ.
08:56 ಮೊಡೆಲ್ ನಲ್ಲಿಯ ಎಲ್ಲ ಹೈಡ್ರೋಜೆನ್ ಗಳ ಬಣ್ಣವನ್ನು 'Green' (ಹಸಿರು) ಗೆ ಬದಲಾಯಿಸಿ.
09:00 ಎಲ್ಲ ಬಾಂಡ್ ಗಳ ಕಲರ್ ಅನ್ನು 'Yellow' (ಹಳದಿ) ಗೆ ಬದಲಾಯಿಸಿ.
09:04 ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್, ಈ ಕೆಳಗಿನಂತೆ ಕಾಣಬೇಕು.
09:12 ಈ ಕೆಳಗಿನ ಲಿಂಕ್ ನಿಂದ ವಿಡಿಯೋಅನ್ನು ನೋಡಿ.

http://spoken-tutorial.org/What_is_a_Spoken_Tutorial

09:15 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ.
09:19 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:24 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್’:
09:26 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:29 ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.
09:34 ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

09:41 ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ ನ ಭಾಗವಾಗಿದೆ.
09:44 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
09:51 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

09:57 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ವಂದನೆಗಳು.

Contributors and Content Editors

Sandhya.np14