Scilab/C4/User-Defined-Input-and-Output/Kannada
From Script | Spoken-Tutorial
Revision as of 13:22, 20 September 2017 by Anjana310312 (Talk | contribs)
Time | Narration |
00:01 | ಸೈಲ್ಯಾಬ್ ನ User Defined input output ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:08 | 'ಇನ್ಪುಟ್ ಫಂಕ್ಷನ್' |
00:10 | 'ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು' |
00:12 | ' ಸೇವ್ ಫಂಕ್ಷನ್ ' |
00:14 | 'ಲೋಡ್ ಫಂಕ್ಷನ್ ' ಗಳ ಕುರಿತು ಕಲಿಯುತ್ತೇವೆ. . |
00:16 | ವಿವರಣೆಗೋಸ್ಕರ ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಮ್ ಮತ್ತು Scilab version 5.3.3 ಗಳನ್ನು ಬಳಸುತ್ತಿದ್ದೇನೆ. |
00:26 | ನೀವು ಸೈಲ್ಯಾಬ್ ನ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. |
00:29 | ಇಲ್ಲವಾದಲ್ಲಿ, ದಯವಿಟ್ಟು ಸಂಬಂಧಿತ ಟ್ಯುಟೋರಿಯಲ್ ಗಾಗಿ spoken hyphen tutorial dot org ಜಾಲತಾಣವನ್ನು ಭೇಟಿಕೊಡಿ. |
00:37 | ಬಳಕೆದಾರರಿಂದ ಇನ್ಪುಟ್ ಅನ್ನು ಪಡೆದುಕೊಳ್ಳಲು input() ಫಂಕ್ಷನ್ ಅನ್ನು ಬಳಸಲಾಗುತ್ತದೆ. |
00:42 | ಇದು ಬಳಕೆದಾರ ನಿಂದ ಇನ್ಪುಟ್ ಅನ್ನು ಟೆಕ್ಸ್ಟ್ ಸ್ಟ್ರಿಂಗ್ ರೂಪದಲ್ಲಿ ಪ್ರಾಮ್ಟ್ ಮಾಡಲು ಅವಕಾಶ ಕೊಡುತ್ತದೆ. |
00:47 | ಇದು ಕೀಬೋರ್ಡ್ ನಿಂದ ಇನ್ಪುಟ್ ಅನ್ನು ಕಾಯುತ್ತದೆ. |
00:51 | ಪ್ರಾಮ್ಟ್ ನಲ್ಲಿ ಕ್ಯಾರಿಯೇಜ್ ರಿಟರ್ನ್ ಅನ್ನು ಹೊರತುಪಡಿಸಿ ಇನ್ನೇನನ್ನೂ ನಮೂದಿಸದಿದ್ದರೆ, input() ಫಂಕ್ಷನ್ ಒಂದು ಖಾಲಿ ಮ್ಯಾಟ್ರಿಕ್ಸ್ ಅನ್ನು ಹಿಂದಿರುಗಿಸುತ್ತದೆ. |
00:59 | 'ಇನ್ಪುಟ್' ಫಂಕ್ಷನ್ ಅನ್ನು ಎರಡು ರೀತಿಯಲ್ಲಿ ಬರೆಯಬಹುದು: |
01:03 | ಮೊದಲನೆಯದು, x= input into brackets "message to display" |
01:09 | ಎರಡನೆಯದು, x= input into brackets ("message to display", "strings"). |
01:17 | ಎರಡನೆಯ ಉದಾಹರಣೆಯಲ್ಲಿ, ಎರಡನೆಯ ಆರ್ಗ್ಯುಮೆಂಟ್ “string” ಆಗಿದೆ. |
01:22 | ಹಾಗಾಗಿ ಕೀ ಬೋರ್ಡ್ ಅನ್ನು ಬಳಸಿ ನಮೂದಿಸಿದ ಎಕ್ಸ್ಪ್ರೆಷನ್ ನ ಔಟ್ಪುಟ್ ಒಂದು ಕ್ಯಾರೆಕ್ಟರ್ ಸ್ಟ್ರಿಂಗ್ ಆಗಿರುತ್ತದೆ. |
01:29 | ಸೈಲ್ಯಾಬ್ ಕನ್ಸೋಲ್ ಅನ್ನು ತೆರೆದು, |
01:33 | x is equal to input open bracket inside double quotes Enter your age close the double quotes close the bracket ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
01:49 | 25 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
01:53 | ಈಗ y is equal to input into bracket into double quotes Enter your age close the double quotes comma again inside double quotes write string close the bracket ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
02:14 | 25 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
02:18 | ಈ ಎರಡೂ ಉದಾಹರಣೆಗಳಲ್ಲೂ, ನಾವು ಕೀ ಬೋರ್ಡ್ ನ ಮೂಲಕ 25 ಅನ್ನು ನಮೂದಿಸಿದ್ದೇವೆ ಎಂದು ನಾವು ತಿಳಿದಿದ್ದೇವೆ. |
02:25 | ಈಗ ನಾವು ವೇರಿಯೇಬಲ್ x ಮತ್ತು y ಗಳ ಟೈಪ್ ಅನ್ನು ಪರೀಕ್ಷಿಸೋಣ. |
02:30 | clc ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ಖಾಲಿ ಮಾಡೋಣ. |
02:34 | ನಾವು ಇದನ್ನು, ಎರಡನೆಯ ಉದಾಹರಣೆಯಲ್ಲಿ ಕೊಟ್ಟಿರುವ “string” ಆರ್ಗ್ಯುಮೆಂಟ್ ನ ಬಳಕೆ ಮತ್ತು ಉಪಯುಕ್ತತೆಯನ್ನು ಪರಿಶೀಲಿಸಲು ಮಾಡುತ್ತಿದ್ದೇವೆ. |
02:42 | ವೇರಿಯೇಬಲ್ ನ ಟೈಪ್ ಅನ್ನು ಪರಿಶೀಲಿಸಲು, |
02:45 | -->typeof into brackets x ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
02:51 | ಹಾಗೆಯೇ, typeof(y) ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
02:57 | ಮೊದಲನೆಯ ಉತ್ತರವು ಅಂದರೆ x ನಲ್ಲಿ constant ಟೈಪ್ ಮತ್ತು |
03:04 | ಎರಡನೆಯ ಉತ್ತರವು ಅಂದರೆ ಕಮಾಂಡ್ ನಲ್ಲಿ y ಯ ಜತೆಗೆ “string” ಆರ್ಗ್ಯುಮೆಂಟ್ ಇರುವಲ್ಲಿ ಟೈಪ್ string ಆಗಿರುವುದನ್ನು ನೀವು ನೋಡಬಹುದು. |
03:12 | ಈಗ ಕನ್ಸೋಲ್ ನ ಮೇಲೆ ಡಿಸ್ಪ್ಲೇ ಆಗುವ ಔಟ್ಪುಟ್ ಅನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂದು ನೋಡೋಣ. |
03:17 | ಇದನ್ನು mprintf() ಅನ್ನು ಬಳಸಬಹುದು. |
03:22 | mprintf() ಫಂಕ್ಷನ್ ಇದು, ಡಾಟಾವನ್ನು ಪರಿವರ್ತಿಸಿ, ಫಾರ್ಮ್ಯಾಟ್ ಮಾಡಿ , ಸೈಲ್ಯಾಬ್ ಕನ್ಸೋಲ್ ನ ಮೇಲೆ ಬರೆಯುತ್ತದೆ. |
03:28 | ಇದು C-ಲ್ಯಾಂಗ್ವೇಜ್ ನಲ್ಲಿರುವ printf() ಫಂಕ್ಷನ್ ನಂತೆ ಕಾರ್ಯ ನಿರ್ವಹಿಸುತ್ತದೆ. |
03:34 | ಈಗ ಇದಕ್ಕೆ ಒಂದು ಉದಾಹರಣೆಯನ್ನು ನೋಡೋಣಾ. ಕನ್ಸೋಲ್ ಗೆ ಹೋಗಿ. |
03:38 | mprintf into bracket into quotes type At iteration percent i comma Result is colon slash n alpha is equal to percentf comma 33 comma 0.535 close the bracket ಎಂದುಟೈಪ್ ಮಾಡಿ. |
04:12 | ಇಲ್ಲಿ percent i (%i) ನ ಜಾಗದಲ್ಲಿ 33 ಮತ್ತು percent f (%f) ನ ಜಾಗದಲ್ಲಿ point 535 (0.535) ಎಂದೂ ಡಿಸ್ಪ್ಲೇ ಆಗುತ್ತದೆ. Enter ಅನ್ನು ಒತ್ತಿ. |
04:26 | ಇದು At iteration 33, Result is alpha is equal to 0.535000 ಎಂಬ ಫಲಿತಾಂಶವನ್ನು ಕೊಡುತ್ತದೆ. |
04:39 | ಕನ್ಸೋಲ್ ಅನ್ನು ಖಾಲಿ ಮಾಡಿ. ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ. |
04:44 | mprintf open bracket into quotes Value of x is equal to percentage d is taken as a CONSTANT comma while value of y is equal to percent s is taken as a STRING close the quotes comma x comma y close the bracket. |
05:19 | ಮೇಲಿನ ಉದಾಹರಣೆಯಲ್ಲಿ, ವೇರೀಯೇಬಲ್ x ನಲ್ಲಿ ಸ್ಟೋರ್ ಆದ ಕಾನ್ಸ್ಟೆಂಟ್ ಅನ್ನು ಸೇರಿಸಲು ಪರ್ಸೆಂಟ್ d (%d) ಯನ್ನು ಬಳಸಲಾಗಿದೆ. |
05:28 | percentage s (%s) ಅನ್ನು y ವೇರಿಯೇಬಲ್ ನಲ್ಲಿ ಸ್ಟೋರ್ ಆದ ಸ್ಟ್ರಿಂಗ್ ಅನ್ನು ಸೇರಿಸಲು ಬಳಸಲಾಗಿದೆ. |
05:38 | ಈಗ save ಮತ್ತು load ಕಮಾಂಡ್ ಗಳ ಉಪಯೋಗದ ಕುರಿತು ಚರ್ಚೆ ಮಾಡೋಣ. |
05:43 | ಈಗ ಮಧ್ಯದಲ್ಲಿ ಸೈಲ್ಯಾಬ್ ನಿಂದ ಹೊರಬಂದು, |
05:47 | ನಂತರ ಪುನಃ ಇದನ್ನು ತೆರೆಯಲು , save thissession ಎಂದು ಟೈಪ್ ಮಾಡಿ. |
05:52 | ಇದರಿಂದ ವೇರಿಯೇಬಲ್ ಗಳ ಪ್ರಸ್ತುತ ವ್ಯಾಲ್ಯೂಗಳು thissession ಎಂಬ ಫೈಲ್ ನಲ್ಲಿ ಸೇವ್ ಆಗಿರುತ್ತದೆ. |
05:58 | ಈ ಫೈಲ್ ಅನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. |
06:01 | ಇದು ಬೈನರಿ ಫಾರ್ಮ್ಯಾಟ್ ನಲ್ಲಿರುತ್ತದೆ. |
06:04 | ನೀವು ನಂತರ ಸೈಲ್ಯಾಬ್ ಅನ್ನು ಪ್ರಾರಂಭಿಸಿದಾಗ load thissession ಎಂದುಟೈಪ್ ಮಾಡಿ. |
06:08 | ನೀವು ಲೆಕ್ಕವನ್ನು ಎಲ್ಲಿ ಬಿಟ್ಟಿದ್ದರೋ ಅಲ್ಲಿಂದಲೇ ಮುಂದುವರಿಸಬಹುದು. |
06:13 | save ಮತ್ತು load ಫಂಕ್ಷನ್ ಗಳ ಉದ್ದೇಶಗಳು : |
06:16 | save() ಕಮಾಂಡ್ ಸೈಲ್ಯಾಬ್ ನ ಎಲ್ಲಾ ಪ್ರಸ್ತುತ ವೇರಿಯೇಬಲ್ ಗಳನ್ನು ಒಂದು ಬೈನರಿ ಫೈಲ್ ನಲ್ಲಿ ಸೇವ್ ಮಾಡುತ್ತದೆ. |
06:22 | ವೇರಿಯೇಬಲ್ ಗ್ರಾಫಿಕ್ ಹ್ಯಾಂಡಲ್ ಆಗಿದ್ದರೆ, save ಕಮಾಂಡ್ ಸಂಬಂಧಿತ ಗ್ರಾಫಿಕ್_ಎಂಟಿಟಿಗಳ ಡೆಫಿನೇಶನ್ ಅನ್ನು ಸೇವ್ ಮಾಡುತ್ತದೆ. |
06:31 | ಫೈಲ್ ಅನ್ನು ಅದರ ಪಾಥ್ ಮೂಲಕ ಅಥವಾ ಹಿಂದೆ ಕೊಟ್ಟ ಡಿಸ್ಕ್ರಿಪ್ಟರ್ ನ ಮೂಲಕ ಕೊಡಬಹುದು. |
06:37 | save(filename) ಇದು ಕೊಟ್ಟಿರುವ ಫೈಲ್ ನ ಹೆಸರಿನ ಫೈಲ್ ನಲ್ಲಿ ಪ್ರಸ್ತುತ ವೇರಿಯೇಬಲ್ ಗಳನ್ನು ಸೇವ್ ಮಾಡುತ್ತದೆ. |
06:45 | save into bracket fd ಇದು ಎಲ್ಲಾ ಪ್ರಸ್ತುತ ವೇರಿಯೇಬಲ್ ಗಳನ್ನು ಡಿಸ್ಕ್ರಿಪ್ಟರ್ fd ಯಿಂದ ಡಿಫೈನ್ ಆದ ಫೈಲ್ ನಲ್ಲಿ ಸೇವ್ ಮಾಡುತ್ತದೆ. |
06:53 | save(filename,x,y) ಅಥವಾ save(fd,x,y) ಇದು ಕೇವಲ x ಮತ್ತು y ಹೆಸರಿನ ವೇರಿಯೇಬಲ್ ಗಳನ್ನು ಮಾತ್ರ ಸೇವ್ ಮಾಡುತ್ತದೆ. |
07:02 | ಈಗ save ಮತ್ತು load ಕಮಾಂಡ್ ಗಳನ್ನು ವಿವರಿಸಲು ಒಂದು ಉದಾಹರಣೆಯನ್ನು ನೋಡೋಣ. |
07:07 | ಕನ್ಸೋಲ್ ಗೆ ಹಿಂದಿರುಗಿ. ಎರಡು ಮ್ಯಾಟ್ರಿಕ್ಸ್ ಗಳನ್ನು ಅಂದರೆ a ಮತ್ತು b ಗಳನ್ನು ಡಿಫೈನ್ ಮಾಡೋಣ. |
07:14 | a = eye of (2,2) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
07:22 | b=ones(a) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
07:28 | clc ಕಮಾಂಡ್ ಅನ್ನು ಬಳಸಿ ಕನ್ಸೋಲ್ ಅನ್ನು ಖಾಲಿ ಮಾಡೋಣ. ಈಗ |
07:34 | save space matrix dash a dash b ಎಂದು ಟೈಪ್ ಮಾಡಿ. |
07:42 | ಅಥವಾ ಅದನ್ನು, |
07:46 | save into brackets into quotes matrix dash a dash b dot dat close the quotes comma a comma b close the bracket ಎಂದೂ ಟೈಪ್ ಮಾಡಬಹುದು. ಮತ್ತು Enter ಅನ್ನು ಒತ್ತಿ. |
08:03 | ಇದು ವೇರಿಯೇಬಲ್ ಗಳ ವ್ಯಾಲ್ಯುಗಳನ್ನು, ಪ್ರಸ್ತುತ ಡೈರಕ್ಟರಿಯಲ್ಲಿ, 'matrix dash a dash b dot dat' (matrix-a-b.dat) ಎಂಬ ಬೈನರಿ ಫೈಲ್ ನಲ್ಲಿ ಸೇವ್ ಮಾಡುತ್ತದೆ. |
08:12 | ನೀವು ಪ್ರಸ್ತುತ ವರ್ಕಿಂಗ್ ಡೈರಕ್ಟರಿಯಲ್ಲಿ ಬ್ರೌಸ್ ಮಾಡಿ, ಈ ಬೈನರಿ ಫೈಲ್ ನ ಇರುವಿಕೆಯನ್ನು ಪರೀಕ್ಷಿಸಬಹುದು. |
08:17 | ನೀವು ಇಲ್ಲಿ ಇದನ್ನು ನೋಡಬಹುದು. ನಾನು ಫೈಲ್ ಬ್ರೌಸರ್ ಅನ್ನು ಕ್ಲೋಸ್ ಮಾಡುತ್ತೇನೆ. |
08:22 | ಈಗ ಪುನಃ ಫೈಲ್ ಅನ್ನು ವೇರಿಯೇಬಲ್ ಗಳಿಗೆ ಲೋಡ್ ಮಾಡಬೇಕು. |
08:26 | ಅದಕ್ಕೂ ಮೊದಲು, ನಾವು ವೇರಿಯೇಬಲ್ ಗಳಾದ a ಮತ್ತು b ಗಳನ್ನು ಖಾಲಿ ಮಾಡಬೇಕು. |
08:29 | clear a space b, ಎಂದುಟೈಪ್ ಮಾಡಿ, Enter ಅನ್ನು ಒತ್ತಿ. |
08:34 | ಈಗ ವೇರಿಯೇಬಲ್ ಗಳು ಖಾಲಿಯಾಗಿವೆಯೆ ಎಂದು ಇನ್ನೊಮ್ಮೆ ಪರೀಕ್ಷಿಸಿಕೊಳ್ಳೋಣ. |
08:39 | ->a , b |
08:41 | ಈಗ ವೇರಿಯೇಬಲ್ a ಮತ್ತು b ಗಳಲ್ಲಿ, load ಕಮಾಂಡ್ ಅನ್ನು ಬಳಸಿ ಬೈನರಿ ಫೈಲ್ ನಿಂದ ವ್ಯಾಲ್ಯುಗಳನ್ನು ಲೋಡ್ ಮಾಡೋಣ. |
08:49 | load into bracket into quote matrix dash a dash b dot dat close the quotes comma into quotes a comma into quotes b close the bracket ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
09:08 | ಈಗ ಇನ್ನೊಮ್ಮೆ a ಮತ್ತು b ವೇರಿಯೇಬಲ್ ಗಳ ವ್ಯಾಲ್ಯುವನ್ನು ಪರೀಕ್ಷಿಸೋಣ. ಕನ್ಸೋಲ್ ಅನ್ನು ಖಾಲಿ ಮಾಡಿ. |
09:14 | -->a ಮತ್ತು -->b ಎಂದು ಟೈಪ್ ಮಾಡಿ. |
09:18 | ವ್ಯಾಲ್ಯುಗಳು ವೇರಿಯೇಬಲ್ ಗಳಲ್ಲಿ ಲೋಡ್ ಆಗಿರುವುದನ್ನು ನೀವು ನೋಡಬಹುದು. |
09:23 | ಈ ಟ್ಯುಟೋರಿಯಲ್ ನಲ್ಲಿ ನಾವು - input ಕಮಾಂಡ್ ಅನ್ನು ಬಳಸಿ ಇನ್ಪುಟ್ ಫಂಕ್ಷನ್ ನ ಕುರಿತು, |
09:28 | mprintf ಕಮಾಂಡ್ ಅನ್ನು ಬಳಸಿ, ಔಟ್ಪುಟ್ ಅನ್ನು ಫಾರ್ಮ್ಯಾಟ್ ಮಾಡುವುದು, |
09:31 | save ನ ಕುರಿತು, |
09:33 | load ಫಂಕ್ಷನ್- ಇವುಗಳ ಕುರಿತು ಕಲಿತಿದ್ದೇವೆ. |
09:35 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ. |
09:38 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. |
09:41 | ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು. |
09:46 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
09:48 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
09:51 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:54 | ಹೆಚ್ಚಿನ ವಿವರಗಳಿಗೆ conatct@spoken-tutorial.org ಗೆ ಬರೆಯಿರಿ. |
10:01 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. |
10:05 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. |
10:12 | ಇದರ ಕುರಿತು ಹೆಚ್ಚಿನ ವಿವರಗಳು http://spoken-tutorial.org/NMEICT-Intro ನಲ್ಲಿ ದೊರೆಯುತ್ತದೆ. |
10:23 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
10:26 | ಧನ್ಯವಾದಗಳು. |