Digital-Divide/C2/Introduction-to-PAN-Card/Kannada
From Script | Spoken-Tutorial
Revision as of 21:19, 18 September 2017 by Sandhya.np14 (Talk | contribs)
Time | Narration |
00:00 | Introduction to PAN card ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:08 | * 'PAN ಕಾರ್ಡ್' ನ ಬಗ್ಗೆ |
00:10 | * 'PAN ಕಾರ್ಡ್'ನ 'ಸ್ಟ್ರಕ್ಚರ್' ಮತ್ತು 'ವ್ಯಾಲಿಡೇಶನ್' |
00:14 | * 'PAN ಕಾರ್ಡ್'ನ ಅವಶ್ಯಕತೆ ಮತ್ತು |
00:16 | * ನಿಮ್ಮ 'PAN ಕಾರ್ಡ್' ಅನ್ನು ತಿಳಿದುಕೊಳ್ಳುವುದು
ಇತ್ಯಾದಿಗಳ ಬಗ್ಗೆ ಕಲಿಯುವೆವು. |
00:18 | PAN, 'Permanent Account Number' (ಪರ್ಮನಂಟ್ ಅಕೌಂಟ್ ನಂಬರ್) ಅನ್ನು ಪ್ರತಿನಿಧಿಸುತ್ತದೆ. |
00:23 | 'PAN ಕಾರ್ಡ್' ಹೀಗೆ ಕಾಣುತ್ತದೆ. |
00:28 | ಇದು ಹತ್ತು ಅಂಕಿಗಳ 'ಅಲ್ಫಾನ್ಯೂಮೆರಿಕ್' ಸಂಯೋಜನೆಯಾಗಿದ್ದು ಕಾನೂನಿನ ಎಲ್ಲ ಘಟಕಗಳಿಗೆ ಕೊಡಲಾಗುತ್ತದೆ. |
00:35 | ಇದನ್ನು 'Indian Income Tax Department' (ಭಾರತೀಯ ಆದಾಯ ತೆರಿಗೆ ಇಲಾಖೆ) ಯಿಂದ ನೀಡಲಾಗುತ್ತದೆ. |
00:40 | 'PAN ಕಾರ್ಡ್'ಅನ್ನು ನೀಡುವ ಮುಖ್ಯ ಉದ್ದೇಶವೇನೆಂದರೆ: |
00:44 | * ಗುರುತಿಸುವಿಕೆ ಮತ್ತು |
00:48 | * ಆ ವ್ಯಕ್ತಿ/ಸಂಸ್ಥೆಯ ಆರ್ಥಿಕ ಮಾಹಿತಿಯನ್ನು ಕಂಡುಹಿಡಿಯುವುದು. |
00:53 | PAN ಕಾರ್ಡ್ ನ ಬಗ್ಗೆ ಕೆಲವು ಸಂಗತಿಗಳು: |
00:55 | * 'PAN', ವಿಶಿಷ್ಟ, ರಾಷ್ಟ್ರೀಯ ಮತ್ತು ಶಾಶ್ವತವಾಗಿದೆ. |
01:00 | * ವಿಳಾಸದ ಬದಲಾವಣೆಯಿಂದ ಯಾವ ರೀತಿಯ ಬಾಧೆಯಿಲ್ಲ. |
01:03 | * ಒಂದಕ್ಕಿಂತ ಹೆಚ್ಚು 'PAN' ಅನ್ನು ಹೊಂದಿರುವುದು ಕಾನೂನು ಬಾಹಿರವಾಗಿದೆ. |
01:07 | 'PAN ಕಾರ್ಡ್' ಅನ್ನು ಯಾರು ಪಡೆಯಬಹುದು? |
01:10 | * ವ್ಯಕ್ತಿ (Person) |
01:12 | * ಕಂಪನಿ |
01:15 | * HUF ಅರ್ಥಾತ್ Hindu Un-divided Family (ಅವಿಭಾಜ್ಯ ಹಿಂದೂ ಕುಟುಂಬ) |
01:19 | * ಟ್ರಸ್ಟ್ ಗಳು ಮತ್ತು ಇನ್ನಿತರ ಸಂಸ್ಥೆಗಳು. |
01:22 | ನಮಗೆ 'PAN ಕಾರ್ಡ್' ಏಕೆ ಬೇಕು? |
01:25 | * 'PAN ಕಾರ್ಡ್' ಒಂದು ಮುಖ್ಯ 'ಫೋಟೋ-ID' ಸಾಕ್ಷಿಯಂತೆ ಕೆಲಸ ಮಾಡುತ್ತದೆ. |
01:30 | * ಬ್ಯಾಂಕ್ ಅಕೌಂಟ್ ಅನ್ನು ತೆರೆಯುವುದು ಮತ್ತು |
01:38 | ಆಸ್ತಿಗಳ ಖರೀದಿ ಅಥವಾ ಮಾರಾಟ ಮುಂತಾದ ವ್ಯವಹಾರಗಳಲ್ಲಿ 'PAN ಕಾರ್ಡ್' ಸಹಾಯಮಾಡುತ್ತದೆ. |
01:43 | * ಪಡೆಯುವ ಸಂಬಳ, ತೆರಿಗೆಗೆ ಅರ್ಹವಾದ ಸಂಬಳದ ಖಾತೆಯನ್ನು ಇಡುವ ಉದ್ದೇಶಕ್ಕಾಗಿ 'Pan ಕಾರ್ಡ್'ಅನ್ನು ಬಳಸಲಾಗುತ್ತದೆ. |
01:50 | * 'ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್' (Income Tax Returns) ಅನ್ನು ಫೈಲ್ ಮಾಡಲು ಸಹಾಯಮಾಡುತ್ತದೆ. |
01:53 | * ಷೇರು ವಹಿವಾಟಿಗಾಗಿ DEMAT ಅಕೌಂಟನ್ನು ತೆರೆಯಲು ಸಾಕ್ಷ್ಯಚಿತ್ರ ಪುರಾವೆಯಂತೆ ಬಳಸಲಾಗುತ್ತದೆ. |
01:59 | * Rs.50,000 ಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್ ನಿಂದ ಪಡೆಯುವಾಗ, ಇದನ್ನು ಸಾಕ್ಷ್ಯಚಿತ್ರ ಪುರಾವೆಯಂತೆ ಬಳಸಲಾಗುತ್ತದೆ. |
02:07 | * ಇದು, ತೆರಿಗೆ ಬಾಕಿದಾರರ ಮೇಲೆ ನಿಗಾ ಇಡಲು ಆದಾಯ ಕರ ವಿಭಾಗಕ್ಕೆ ಸಹಾಯಮಾಡುವ ಒಂದು ಸಾಧನವಾಗಿದೆ. |
02:13 | ಅವರ 'ಕ್ರೆಡಿಟ್ ಹಿಸ್ಟರಿ'ಯ ಜಾಡನ್ನು ಪರೋಕ್ಷವಾಗಿ ಕಂಡುಹಿಡಿಯುವುದರ ಮೂಲಕ ಇದನ್ನು ಮಾಡಲಾಗುತ್ತದೆ. |
02:18 | * 'TDS' ಅರ್ಥಾತ್ 'ಟ್ಯಾಕ್ಸ್ ಡಿಡಕ್ಶನ್ಸ್ ಆಟ್ ಸೋರ್ಸ್' ಎಂಬ ಸೌಲಭ್ಯವನ್ನು ಪಡೆಯಲು ಸಾಕ್ಷ್ಯಚಿತ್ರ ಪುರಾವೆಯಂತೆ ಬಳಸಲಾಗುತ್ತದೆ. |
02:27 | * ಪಾಸ್ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ದಾಖಲೆಗಳ ಸಾಕ್ಷಿಯಂತೆ |
02:31 | * ವಿಳಾಸದ ಬದಲಾವಣೆಗಳು |
02:32 | ಮತ್ತು ಇಂತಹ ಇತರ ಸಂಬಂಧಿತ ಡಾಕ್ಯೂಮೆಂಟ್ ಗಳನ್ನು ಪಡೆಯಲು |
02:40 | * Rs.50,000 ಅನ್ನು ಮೀರಿದ ನಿಗದಿತ ಠೇವಣಿಗಳಿಗಾಗಿ |
02:47 | * Rs.25,000 ಅನ್ನು ಮೀರಿದ ಹೊಟೆಲ್ ಬಿಲ್ ಗಳನ್ನು ಮತ್ತು ಪ್ರಯಾಣದ ವೆಚ್ಚವನ್ನು ಪಾವತಿ ಮಾಡಲು |
02:56 | * 'ಕ್ರೆಡಿಟ್ ಕಾರ್ಡ್'ಅನ್ನು ಪಡೆಯಲು ಅರ್ಜಿ ಸಲ್ಲಿಸಲು |
03:05 | * ಹಾಗೂ ದೂರವಾಣಿ ಸಂಪರ್ಕಕ್ಕೆ ಅರ್ಜಿಯನ್ನು ಸಲ್ಲಿಸಲು 'Pan ಕಾರ್ಡ್'ನ ಅವಶ್ಯಕತೆಯಿದೆ. |
03:10 | 'PAN' ನ ಸ್ಟ್ರಕ್ಚರ್, (ರಚನೆ) ಈ ಕೆಳಗಿನಂತಿದೆ. |
03:13 | ಮೊದಲಿನ ಐದು ಕ್ಯಾರೆಕ್ಟರ್ ಗಳು ಅಕ್ಷರಗಳಿದ್ದು ನಂತರದ ನಾಲ್ಕು ಅಂಕಿಗಳು ಹಾಗೂ ಕೊನೆಯದು ಮತ್ತೆ ಅಕ್ಷರ ಆಗಿರುತ್ತವೆ. |
03:21 | ಮೊದಲ ಮೂರು ಅಕ್ಷರಗಳು 'AAA' ರಿಂದ 'ZZZ' ರ ವರೆಗಿನ ವರ್ಣಮಾಲೆಗಳ ಅನುಕ್ರಮವಾಗಿವೆ. |
03:29 | ನಾಲ್ಕನೆಯ ಅಕ್ಷರವು ಕಾರ್ಡ್ ಅನ್ನು ಹೊಂದಿರುವವರ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಪ್ರತಿಯೊಂದು ನಿರ್ಣಯವು ವಿಶಿಷ್ಟವಾಗಿದೆ: |
03:36 | * 'P' – ಪರ್ಸನ್ (ಒಂದು ವ್ಯಕ್ತಿಗಾಗಿ) |
03:38 | * 'C' – ಕಂಪನಿ |
03:41 | * 'H' – “ಎಚ್-ಯು-ಎಫ್” (ಅವಿಭಾಜ್ಯ ಹಿಂದೂ ಕುಟುಂಬಕ್ಕಾಗಿ) |
03:45 | * 'F' – ಫರ್ಮ್ (ಒಂದು ಸಂಸ್ಥೆಗಾಗಿ) |
03:47 | * 'A' – AOP ಅರ್ಥಾತ್ ಅಸೋಸಿಯೇಶನ್ ಆಫ್ ಪರ್ಸನ್ಸ್ (ವ್ಯಕ್ತಿಗಳ ಸಂಘಕ್ಕಾಗಿ) |
03:51 | * 'T' – ಒಂದು ಟ್ರಸ್ಟ್ ಗಾಗಿ |
03:53 | * 'B' - BOI ಅರ್ಥಾತ್ ಬಾಡೀ ಆಫ್ ಇಂಡಿವಿಜುಅಲ್ಸ್ (ವ್ಯಕ್ತಿಗಳ ಸಭೆಗಾಗಿ) |
03:57 | * 'L' ಲೋಕಲ್ ಅಥಾರಿಟೀ (ಸ್ಥಳೀಯ ಪ್ರಾಧಿಕಾರಕ್ಕಾಗಿ) |
04:01 | * 'J' – ಆರ್ಟಿಫಿಶಿಯಲ್ ಜ್ಯೂರಿಡಿಷಿಯಲ್ ಪರ್ಸನ್ ಮತ್ತು |
04:05 | * 'G' – ಗವರ್ನಮೆಂಟ್ (ಸರಕಾರ). |
04:07 | 'PAN' ನ ಐದನೆಯ ಅಕ್ಷರವು - |
04:10 | * ವೈಯಕ್ತಿಕ (Personal) 'PAN ಕಾರ್ಡ್'ನ ವಿಷಯದಲ್ಲಿ, ವ್ಯಕ್ತಿಯ ಅಡ್ಡಹೆಸರಿನ ಅಥವಾ ಕೊನೆಯ ಹೆಸರಿನ ಮೊದಲನೆಯ ಅಕ್ಷರವಾಗಿದೆ. |
04:18 | ಇಲ್ಲಿ ತೋರಿಸಿದ ಚಿತ್ರದಲ್ಲಿ, ಅಡ್ಡಹೆಸರು 'Yadav' ಎಂದು ಇರುತ್ತದೆ. ಆದ್ದರಿಂದ ಐದನೆಯ ಅಕ್ಷರವು 'Y' ಎಂದು ಇದೆ ಅಥವಾ |
04:26 | * ಎಂಟಿಟೀ/ ಟ್ರಸ್ಟ್/ ಸೊಸೈಟೀ/ Company (ಕಂಪನಿ) ಆಗಿದ್ದಲ್ಲಿ ಸಂಸ್ಥೆ /ಎಚ್ ಯು ಎಫ್ (HUF)/ ಫರ್ಮ್ ಅಥವಾ ಬೇರೆ ಯಾವುದೇ ಪ್ರಕಾರದ PAN ಕಾರ್ಡ್ ಗಳ ಹೆಸರು ಆಗಿರುತ್ತದೆ. |
04:38 | ಇಲ್ಲಿ ತೋರಿಸಿದ ಚಿತ್ರದಲ್ಲಿ, ಟ್ರಸ್ಟ್ ನ ಹೆಸರು “Shanoz” ಎಂದು ಇದೆ. |
04:42 | ಆದ್ದರಿಂದ ಐದನೆಯ ಅಕ್ಷರವು 'S' ಆಗಿದೆ. |
04:46 | ಕೊನೆಯ ಅಕ್ಷರವು ವರ್ಣಮಾಲೆಯ ಚೆಕ್ ಅಂಕಿಯಾಗಿದೆ. |
04:50 | PAN ಕಾರ್ಡ್ ಅನ್ನು ಇಸ್ಸ್ಯೂ ಮಾಡಲಾಡ ತಾರೀಖನ್ನು (Date of Issue), ಕಾರ್ಡ್ ನ ಬಲಬದಿಯಲ್ಲಿ ಲಂಬವಾಗಿ ತೋರಿಸಲಾಗಿದೆ. |
04:59 | ಈ ಕೆಳಗಿನ ಲಿಂಕ್ ಗೆ ಭೇಟಿ ಕೊಡುವುದರ ಮೂಲಕ, ನೀವು ಹೊಸ ಮತ್ತು ಈಗ ಅಸ್ತಿತ್ವದಲ್ಲಿರುವ 'PAN ' ನಂಬರ್ ಗಳನ್ನು ಪರಿಶೀಲಿಸಬಹುದು ಮತ್ತು ವ್ಯಾಲಿಡೇಟ್ ಮಾಡಬಹುದು (ಊರ್ಜಿತಗೊಳಿಸಬಹುದು). |
05:10 | ಸಂಕ್ಷಿಪ್ತವಾಗಿ, |
05:12 | ಈ ಟ್ಯುಟೋರಿಯಲ್ ನಲ್ಲಿ, ನಾವು: |
05:15 | - 'PAN ಕಾರ್ಡ್'ನ ಬಗ್ಗೆ |
05:16 | -'PAN ಕಾರ್ಡ್'ನ 'ಸ್ಟ್ರಕ್ಚರ್' ಮತ್ತು 'ವ್ಯಾಲಿಡೇಶನ್' |
05:19 | -'PAN ಕಾರ್ಡ್'ನ ಅವಶ್ಯಕತೆ ಮತ್ತು |
05:21 | - ನಿಮ್ಮ 'PAN ಕಾರ್ಡ್' ಅನ್ನು ತಿಳಿಯುವುದು, ಇತ್ಯಾದಿಗಳ ಬಗ್ಗೆ ಕಲಿತಿದ್ದೇವೆ. |
05:23 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
05:27 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
05:30 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
05:34 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
05:36 | * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
05:40 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
05:43 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
05:50 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
05:54 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
06:01 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
06:11 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
06:14 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ. |