Digital-Divide/C2/Introduction-to-PAN-Card/Kannada

From Script | Spoken-Tutorial
Jump to: navigation, search
Time Narration
00:00 Introduction to PAN card ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:08 * 'PAN ಕಾರ್ಡ್' ನ ಬಗ್ಗೆ
00:10 * 'PAN ಕಾರ್ಡ್'ನ 'ಸ್ಟ್ರಕ್ಚರ್' ಮತ್ತು 'ವ್ಯಾಲಿಡೇಶನ್'
00:14 * 'PAN ಕಾರ್ಡ್'ನ ಅವಶ್ಯಕತೆ ಮತ್ತು
00:16 * ನಿಮ್ಮ 'PAN ಕಾರ್ಡ್' ಅನ್ನು ತಿಳಿದುಕೊಳ್ಳುವುದು

ಇತ್ಯಾದಿಗಳ ಬಗ್ಗೆ ಕಲಿಯುವೆವು.

00:18 PAN, 'Permanent Account Number' (ಪರ್ಮನಂಟ್ ಅಕೌಂಟ್ ನಂಬರ್) ಅನ್ನು ಪ್ರತಿನಿಧಿಸುತ್ತದೆ.
00:23 'PAN ಕಾರ್ಡ್' ಹೀಗೆ ಕಾಣುತ್ತದೆ.
00:28 ಇದು ಹತ್ತು ಅಂಕಿಗಳ 'ಅಲ್ಫಾನ್ಯೂಮೆರಿಕ್' ಸಂಯೋಜನೆಯಾಗಿದ್ದು ಕಾನೂನಿನ ಎಲ್ಲ ಘಟಕಗಳಿಗೆ ಕೊಡಲಾಗುತ್ತದೆ.
00:35 ಇದನ್ನು 'Indian Income Tax Department' (ಭಾರತೀಯ ಆದಾಯ ತೆರಿಗೆ ಇಲಾಖೆ) ಯಿಂದ ನೀಡಲಾಗುತ್ತದೆ.
00:40 'PAN ಕಾರ್ಡ್'ಅನ್ನು ನೀಡುವ ಮುಖ್ಯ ಉದ್ದೇಶವೇನೆಂದರೆ:
00:44 * ಗುರುತಿಸುವಿಕೆ ಮತ್ತು
00:48 * ಆ ವ್ಯಕ್ತಿ/ಸಂಸ್ಥೆಯ ಆರ್ಥಿಕ ಮಾಹಿತಿಯನ್ನು ಕಂಡುಹಿಡಿಯುವುದು.
00:53 PAN ಕಾರ್ಡ್ ನ ಬಗ್ಗೆ ಕೆಲವು ಸಂಗತಿಗಳು:
00:55 * 'PAN', ವಿಶಿಷ್ಟ, ರಾಷ್ಟ್ರೀಯ ಮತ್ತು ಶಾಶ್ವತವಾಗಿದೆ.
01:00 * ವಿಳಾಸದ ಬದಲಾವಣೆಯಿಂದ ಯಾವ ರೀತಿಯ ಬಾಧೆಯಿಲ್ಲ.
01:03 * ಒಂದಕ್ಕಿಂತ ಹೆಚ್ಚು 'PAN' ಅನ್ನು ಹೊಂದಿರುವುದು ಕಾನೂನು ಬಾಹಿರವಾಗಿದೆ.
01:07 'PAN ಕಾರ್ಡ್' ಅನ್ನು ಯಾರು ಪಡೆಯಬಹುದು?
01:10 * ವ್ಯಕ್ತಿ (Person)
01:12 * ಕಂಪನಿ
01:15 * HUF ಅರ್ಥಾತ್ Hindu Un-divided Family (ಅವಿಭಾಜ್ಯ ಹಿಂದೂ ಕುಟುಂಬ)
01:19 * ಟ್ರಸ್ಟ್ ಗಳು ಮತ್ತು ಇನ್ನಿತರ ಸಂಸ್ಥೆಗಳು.
01:22 ನಮಗೆ 'PAN ಕಾರ್ಡ್' ಏಕೆ ಬೇಕು?
01:25 * 'PAN ಕಾರ್ಡ್' ಒಂದು ಮುಖ್ಯ 'ಫೋಟೋ-ID' ಸಾಕ್ಷಿಯಂತೆ ಕೆಲಸ ಮಾಡುತ್ತದೆ.
01:30 * ಬ್ಯಾಂಕ್ ಅಕೌಂಟ್ ಅನ್ನು ತೆರೆಯುವುದು ಮತ್ತು
01:38 ಆಸ್ತಿಗಳ ಖರೀದಿ ಅಥವಾ ಮಾರಾಟ ಮುಂತಾದ ವ್ಯವಹಾರಗಳಲ್ಲಿ 'PAN ಕಾರ್ಡ್' ಸಹಾಯಮಾಡುತ್ತದೆ.
01:43 * ಪಡೆಯುವ ಸಂಬಳ, ತೆರಿಗೆಗೆ ಅರ್ಹವಾದ ಸಂಬಳದ ಖಾತೆಯನ್ನು ಇಡುವ ಉದ್ದೇಶಕ್ಕಾಗಿ 'Pan ಕಾರ್ಡ್'ಅನ್ನು ಬಳಸಲಾಗುತ್ತದೆ.
01:50 * 'ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್' (Income Tax Returns) ಅನ್ನು ಫೈಲ್ ಮಾಡಲು ಸಹಾಯಮಾಡುತ್ತದೆ.
01:53 * ಷೇರು ವಹಿವಾಟಿಗಾಗಿ DEMAT ಅಕೌಂಟನ್ನು ತೆರೆಯಲು ಸಾಕ್ಷ್ಯಚಿತ್ರ ಪುರಾವೆಯಂತೆ ಬಳಸಲಾಗುತ್ತದೆ.
01:59 * Rs.50,000 ಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್ ನಿಂದ ಪಡೆಯುವಾಗ, ಇದನ್ನು ಸಾಕ್ಷ್ಯಚಿತ್ರ ಪುರಾವೆಯಂತೆ ಬಳಸಲಾಗುತ್ತದೆ.
02:07 * ಇದು, ತೆರಿಗೆ ಬಾಕಿದಾರರ ಮೇಲೆ ನಿಗಾ ಇಡಲು ಆದಾಯ ಕರ ವಿಭಾಗಕ್ಕೆ ಸಹಾಯಮಾಡುವ ಒಂದು ಸಾಧನವಾಗಿದೆ.
02:13 ಅವರ 'ಕ್ರೆಡಿಟ್ ಹಿಸ್ಟರಿ'ಯ ಜಾಡನ್ನು ಪರೋಕ್ಷವಾಗಿ ಕಂಡುಹಿಡಿಯುವುದರ ಮೂಲಕ ಇದನ್ನು ಮಾಡಲಾಗುತ್ತದೆ.
02:18 * 'TDS' ಅರ್ಥಾತ್ 'ಟ್ಯಾಕ್ಸ್ ಡಿಡಕ್ಶನ್ಸ್ ಆಟ್ ಸೋರ್ಸ್' ಎಂಬ ಸೌಲಭ್ಯವನ್ನು ಪಡೆಯಲು ಸಾಕ್ಷ್ಯಚಿತ್ರ ಪುರಾವೆಯಂತೆ ಬಳಸಲಾಗುತ್ತದೆ.
02:27 * ಪಾಸ್ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ದಾಖಲೆಗಳ ಸಾಕ್ಷಿಯಂತೆ
02:31 * ವಿಳಾಸದ ಬದಲಾವಣೆಗಳು
02:32 ಮತ್ತು ಇಂತಹ ಇತರ ಸಂಬಂಧಿತ ಡಾಕ್ಯೂಮೆಂಟ್ ಗಳನ್ನು ಪಡೆಯಲು
02:40 * Rs.50,000 ಅನ್ನು ಮೀರಿದ ನಿಗದಿತ ಠೇವಣಿಗಳಿಗಾಗಿ
02:47 * Rs.25,000 ಅನ್ನು ಮೀರಿದ ಹೊಟೆಲ್ ಬಿಲ್ ಗಳನ್ನು ಮತ್ತು ಪ್ರಯಾಣದ ವೆಚ್ಚವನ್ನು ಪಾವತಿ ಮಾಡಲು
02:56 * 'ಕ್ರೆಡಿಟ್ ಕಾರ್ಡ್'ಅನ್ನು ಪಡೆಯಲು ಅರ್ಜಿ ಸಲ್ಲಿಸಲು
03:05 * ಹಾಗೂ ದೂರವಾಣಿ ಸಂಪರ್ಕಕ್ಕೆ ಅರ್ಜಿಯನ್ನು ಸಲ್ಲಿಸಲು 'Pan ಕಾರ್ಡ್'ನ ಅವಶ್ಯಕತೆಯಿದೆ.
03:10 'PAN' ನ ಸ್ಟ್ರಕ್ಚರ್, (ರಚನೆ) ಈ ಕೆಳಗಿನಂತಿದೆ.
03:13 ಮೊದಲಿನ ಐದು ಕ್ಯಾರೆಕ್ಟರ್ ಗಳು ಅಕ್ಷರಗಳಿದ್ದು ನಂತರದ ನಾಲ್ಕು ಅಂಕಿಗಳು ಹಾಗೂ ಕೊನೆಯದು ಮತ್ತೆ ಅಕ್ಷರ ಆಗಿರುತ್ತವೆ.
03:21 ಮೊದಲ ಮೂರು ಅಕ್ಷರಗಳು 'AAA' ರಿಂದ 'ZZZ' ರ ವರೆಗಿನ ವರ್ಣಮಾಲೆಗಳ ಅನುಕ್ರಮವಾಗಿವೆ.
03:29 ನಾಲ್ಕನೆಯ ಅಕ್ಷರವು ಕಾರ್ಡ್ ಅನ್ನು ಹೊಂದಿರುವವರ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಪ್ರತಿಯೊಂದು ನಿರ್ಣಯವು ವಿಶಿಷ್ಟವಾಗಿದೆ:
03:36 * 'P' – ಪರ್ಸನ್ (ಒಂದು ವ್ಯಕ್ತಿಗಾಗಿ)
03:38 * 'C' – ಕಂಪನಿ
03:41 * 'H' – “ಎಚ್-ಯು-ಎಫ್” (ಅವಿಭಾಜ್ಯ ಹಿಂದೂ ಕುಟುಂಬಕ್ಕಾಗಿ)
03:45 * 'F' – ಫರ್ಮ್ (ಒಂದು ಸಂಸ್ಥೆಗಾಗಿ)
03:47 * 'A' – AOP ಅರ್ಥಾತ್ ಅಸೋಸಿಯೇಶನ್ ಆಫ್ ಪರ್ಸನ್ಸ್ (ವ್ಯಕ್ತಿಗಳ ಸಂಘಕ್ಕಾಗಿ)
03:51 * 'T' – ಒಂದು ಟ್ರಸ್ಟ್ ಗಾಗಿ
03:53 * 'B' - BOI ಅರ್ಥಾತ್ ಬಾಡೀ ಆಫ್ ಇಂಡಿವಿಜುಅಲ್ಸ್ (ವ್ಯಕ್ತಿಗಳ ಸಭೆಗಾಗಿ)
03:57 * 'L' ಲೋಕಲ್ ಅಥಾರಿಟೀ (ಸ್ಥಳೀಯ ಪ್ರಾಧಿಕಾರಕ್ಕಾಗಿ)
04:01 * 'J' – ಆರ್ಟಿಫಿಶಿಯಲ್ ಜ್ಯೂರಿಡಿಷಿಯಲ್ ಪರ್ಸನ್ ಮತ್ತು
04:05 * 'G' – ಗವರ್ನಮೆಂಟ್ (ಸರಕಾರ).
04:07 'PAN' ನ ಐದನೆಯ ಅಕ್ಷರವು -
04:10 * ವೈಯಕ್ತಿಕ (Personal) 'PAN ಕಾರ್ಡ್'ನ ವಿಷಯದಲ್ಲಿ, ವ್ಯಕ್ತಿಯ ಅಡ್ಡಹೆಸರಿನ ಅಥವಾ ಕೊನೆಯ ಹೆಸರಿನ ಮೊದಲನೆಯ ಅಕ್ಷರವಾಗಿದೆ.
04:18 ಇಲ್ಲಿ ತೋರಿಸಿದ ಚಿತ್ರದಲ್ಲಿ, ಅಡ್ಡಹೆಸರು 'Yadav' ಎಂದು ಇರುತ್ತದೆ. ಆದ್ದರಿಂದ ಐದನೆಯ ಅಕ್ಷರವು 'Y' ಎಂದು ಇದೆ ಅಥವಾ
04:26 * ಎಂಟಿಟೀ/ ಟ್ರಸ್ಟ್/ ಸೊಸೈಟೀ/ Company (ಕಂಪನಿ) ಆಗಿದ್ದಲ್ಲಿ ಸಂಸ್ಥೆ /ಎಚ್ ಯು ಎಫ್ (HUF)/ ಫರ್ಮ್ ಅಥವಾ ಬೇರೆ ಯಾವುದೇ ಪ್ರಕಾರದ PAN ಕಾರ್ಡ್ ಗಳ ಹೆಸರು ಆಗಿರುತ್ತದೆ.
04:38 ಇಲ್ಲಿ ತೋರಿಸಿದ ಚಿತ್ರದಲ್ಲಿ, ಟ್ರಸ್ಟ್ ನ ಹೆಸರು “Shanoz” ಎಂದು ಇದೆ.
04:42 ಆದ್ದರಿಂದ ಐದನೆಯ ಅಕ್ಷರವು 'S' ಆಗಿದೆ.
04:46 ಕೊನೆಯ ಅಕ್ಷರವು ವರ್ಣಮಾಲೆಯ ಚೆಕ್ ಅಂಕಿಯಾಗಿದೆ.
04:50 PAN ಕಾರ್ಡ್ ಅನ್ನು ಇಸ್ಸ್ಯೂ ಮಾಡಲಾಡ ತಾರೀಖನ್ನು (Date of Issue), ಕಾರ್ಡ್ ನ ಬಲಬದಿಯಲ್ಲಿ ಲಂಬವಾಗಿ ತೋರಿಸಲಾಗಿದೆ.
04:59 ಈ ಕೆಳಗಿನ ಲಿಂಕ್ ಗೆ ಭೇಟಿ ಕೊಡುವುದರ ಮೂಲಕ, ನೀವು ಹೊಸ ಮತ್ತು ಈಗ ಅಸ್ತಿತ್ವದಲ್ಲಿರುವ 'PAN ' ನಂಬರ್ ಗಳನ್ನು ಪರಿಶೀಲಿಸಬಹುದು ಮತ್ತು ವ್ಯಾಲಿಡೇಟ್ ಮಾಡಬಹುದು (ಊರ್ಜಿತಗೊಳಿಸಬಹುದು).
05:10 ಸಂಕ್ಷಿಪ್ತವಾಗಿ,
05:12 ಈ ಟ್ಯುಟೋರಿಯಲ್ ನಲ್ಲಿ, ನಾವು:
05:15 - 'PAN ಕಾರ್ಡ್'ನ ಬಗ್ಗೆ
05:16 -'PAN ಕಾರ್ಡ್'ನ 'ಸ್ಟ್ರಕ್ಚರ್' ಮತ್ತು 'ವ್ಯಾಲಿಡೇಶನ್'
05:19 -'PAN ಕಾರ್ಡ್'ನ ಅವಶ್ಯಕತೆ ಮತ್ತು
05:21 - ನಿಮ್ಮ 'PAN ಕಾರ್ಡ್' ಅನ್ನು ತಿಳಿಯುವುದು, ಇತ್ಯಾದಿಗಳ ಬಗ್ಗೆ ಕಲಿತಿದ್ದೇವೆ.
05:23 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
05:27 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
05:30 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
05:34 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
05:36 * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
05:40 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
05:43 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

05:50 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
05:54 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
06:01 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

06:11 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
06:14 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

Contributors and Content Editors

Sandhya.np14