Scilab/C2/Iteration/Kannada

From Script | Spoken-Tutorial
Revision as of 13:12, 3 September 2017 by Anjana310312 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Scilab (ಸೈಲ್ಯಾಬ್ ) ನ iterative calculations ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:07 ನಾನು Mac operating system ನಲ್ಲಿ Scilab version 5.2 ಅನ್ನು ಉಪಯೋಗಿಸುತ್ತಿದ್ದೇನೆ.
00:11 ಆದರೆ ಈ ಕ್ಯಾಲ್ಕ್ಯುಲೇಷನ್ ಗಳು ಇತರ ಆವೃತ್ತಿಗಳಲ್ಲಿ ಸಹ ಕೆಲಸ ಮಾಡಬೇಕು ಮತ್ತು Linux ಮತ್ತು Windows ಗಳಲ್ಲಿ ರನ್ ಆಗುವ ಸೈಲ್ಯಾಬ್ ನಲ್ಲಿ ಸಹ ಕೆಲಸ ಮಾಡಬೇಕು.
00:17 'iteration.sce' ಎಂಬ ಫೈಲ್ ನಲ್ಲಿ ಲಭ್ಯವಿರುವ ಕೋಡ್ ಅನ್ನು ಬಳಸುತ್ತೇನೆ.
00:22 ನಾನು ಈ ಫೈಲ್ ಅನ್ನು ಸೈಲ್ಯಾಬ್ ಎಡಿಟರ್ ಅನ್ನು ಬಳಸಿ ಓಪನ್ ಮಾಡಿದ್ದೇನೆ ಮತ್ತು ನಾನು ಇದನ್ನು ಕೇವಲ ಎಡಿಟರ್ ಆಗಿ ಬಳಸುವ ಯೋಚನೆಯನ್ನು ಹೊಂದಿದ್ದೇನೆ.
00:29 ಈಗ ಕೋಲನ್ ಆಪರೇಟರ್ ಅನ್ನು ಬಳಸಿ ಒಂದು ವೆಕ್ಟರ್ ಅನ್ನು ರಚಿಸೋಣ. 'i' is equal to 1 colon 5,
00:38 ಈ ಕೋಡ್ 1 ರಿಂದ 5 ರವರೆಗಿನ ವೆಕ್ಟರ್ ಅನ್ನು 1 ಹೆಚ್ಚುವರಿಯೊಂದಿಗೆ ರಚಿಸುತ್ತದೆ.
00:42 ಈ ಕಮಾಂಡ್ ನಲ್ಲಿ, 'i' is equal to 1 colon 2 colon 5.
00:51 ಮಧ್ಯದ ಆರ್ಗ್ಯುಮೆಂಟ್ ಆದ 2 ಇದು ಇನ್ಕ್ರಿಮೆಂಟ್ ಅನ್ನು ಸೂಚಿಸುತ್ತದೆ.
00:56 1 ಇದು ವೆಕ್ಟರ್ ಪ್ರಾರಂಭವಾಗುವ ಮೊದಲ ಆರ್ಗ್ಯುಮೆಂಟ್. 'i' ಇದು 5 ಕ್ಕಿಂತ ಹೆಚ್ಚಾಗಲು ಸಾಧ್ಯವಿಲ್ಲ.
01:01 ಇದು 5 ಕ್ಕೆ ಸಮವಾಗಿರಬಹುದು.
01:04 ಗಮನಿಸಿ ಕೊನೆಗೊಳ್ಳುವ ಆರ್ಗ್ಯುಮೆಂಟ್ ಅನ್ನು 6 ಎಂದು ಬದಲಿಸಿದರೂ ಫಲಿತಾಂಶವು ಇದೇ ಆಗಿರುತ್ತದೆ.
01:09 ಈ ನಡವಳಿಕೆಯನ್ನು ವಿವರಿಸುವುದು ಕಷ್ಟವಲ್ಲ.
01:13 ಇದು ಯಾಕೆ ಹೀಗಾಗಿದೆ ಎಂದು ಒಂದು ನಿಮಿಷ ಯೋಚಿಸಬಲ್ಲಿರಾ?
01:15 ಈಗ ಪುನರಾವರ್ತಿತ ಲೆಕ್ಕಗಾಳನ್ನು ಮಾಡಲು for ಸ್ಟೇಟ್ಮೆಂಟ್ ನ ಬಳಕೆಯನ್ನು ನೋಡೋಣ.
01:22 for i is equal to 1 colon 2 colon 7 disp i end for loop ನ ಮುಕ್ತಾಯ.
01:28 ನಾನು ಇದನ್ನು ಕಟ್ ಮಾಡಿ ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ , Enter ಅನ್ನು ಒತ್ತುತ್ತೇನೆ.
01:34 ಈ ಕೋಡ್ ನಾವು ಲೂಪ್ ನಲ್ಲಿ ಹೋದಂತೆಲ್ಲ 'i' ಅನ್ನು ಪ್ರಿಂಟ್ ಮಾಡುತ್ತದೆ.
01:37 disp ಕಮಾಂಡ್ ನಿಂದಾಗಿ ಡಿಸ್ಪ್ಲೇ ಆಗುತ್ತದೆ – ಪಾಸ್ ಮಾಡಿದ argument ಡಿಸ್ಪ್ಲೇ ಆಗುತ್ತದೆ.
01:42 for loop ಇಂಟೀಜರ್ ವ್ಯಾಲ್ಯೂ ಗಳಿಗೆ ಬಳಕೆಯಾಗುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ.
01:45 ಈ ಉದಾಹರಣೆಯಲ್ಲಿ ನಾಲ್ಕು ಇಂಟೀಜರ್ ವ್ಯಾಲ್ಯೂಗಳು ಅಂದರೆ 1, 3, 5 ಮತ್ತು 7 –ಇವು ಡಿಸ್ಪ್ಲೇ ಆಗಿದೆ.
01:50 ಎಷ್ಟು ಸಲ ಇಟರೇಶನ್ ಆಗಿದೆ ಎನ್ನುವುದನ್ನು for loop ನಲ್ಲಿ priori ಎಂದು ಕರೆಯುತ್ತಾರೆ.
01:56 ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ ನಾವು ಡಿಫಾಲ್ಟ್ ಇನ್ಕ್ರಿಮೆಂಟ್ 1 ಅನ್ನೇ ಬಳಸೋಣ.
02:01 ಈಗ 'i' ಯನ್ನು 1 ರಿಂದ 5 ರವರೆಗೆ ಡಿಸ್ಪ್ಲೇ ಮಾಡುವ ಒಂದು ಲೂಪ್ ನಿಂದ ಪ್ರಾರಂಭಿಸೋಣ.
02:10 ನಾವು ಈ ಕೋಡ್ ಅನ್ನು break ಸ್ಟೇಟ್ಮೆಂಟ್ ಅನ್ನು ಬಳಸಿ ಬದಲಾವಣೆ ಮಾಡೋಣ.
02:18 ಗಮನಿಸಿ, 'i' ಕೇವಲ 2 ರವರೆಗೆ ಮಾತ್ರ ಡಿಸ್ಪ್ಲೇ ಆಗಿದೆ.
02:22 i ನ ಕೊನೆಯ ವ್ಯಾಲ್ಯು ಅಂದರೆ 5 ರವರೆಗೆ ಇಟರೇಶನ್ ಮುಂದುವರಿಯುವುದಿಲ್ಲ.
02:27 i is equal to 2 ಆದಾಗ , ಮೊದಲ ಬಾರಿಗೆ if ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.
02:30 break ಕಮಾಂಡ್ ಲೂಪ್ ಅನ್ನು ಟರ್ಮಿನೇಟ್ ಮಾಡುತ್ತದೆ.
02:34 ನಾವು ಕೆಲವು ಮಧ್ಯಂತರ ಷರತ್ತುಗಳು ಪೂರೈಸಿದಾಗ ನಾವು ಲೂಪ್ ನಿಂದ ಹೊರಬರಲು ಬಯಸಿದರೆ , ಆಗ ನಾವು break ಸ್ಟೇಟ್ಮೆಂಟ್ ಅನ್ನು ಬಳಸಬಹುದು.
02:40 ಗಮನಿಸಿ "i is equal to 2" ಸ್ಟೇಟ್ ಮೆಂಟ್ "equal to" ಚಿಹ್ನೆಯನ್ನು ಎರಡುಬಾರಿ ಬಳಸಿದೆ.
02:45 ಇದು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನಲ್ಲಿ ಸಮಾನತೆಯನ್ನು ಹೋಲಿಕೆ ಮಾಡುವ ವಿಧಾನ.
02:50 ಈ ಹೋಲಿಕೆಯ ಫಲಿತಾಂಶವು Boolean: true or false ಆಗಿರುತ್ತದೆ.
02:56 ಇಲ್ಲಿ ನಾವು continue ಸ್ಟೇಟ್ಮೆಂಟ್ ಅನ್ನು ಸೇರಿಸೋಣ, ಪೇಸ್ಟ್ ಮಾಡಿ , Enter ಅನ್ನು ಒತ್ತಿ.
03:06 ಇದರಿಂದ 'i' ಕೇವಲ 4 ಮತ್ತು 5 ಕ್ಕೆ ಮಾತ್ರ ಡಿಸ್ಪ್ಲೇ ಆಗುತ್ತದೆ.
03:10 ಏಕೆಂದರೆ 'i' less than or equal to 3, ಎಂದಿದೆ. i less than or equal to 3 ಸ್ಟೇಟ್ಮೆಂಟ್ ಗೆ
03:18 continue ಸ್ಟೇಟ್ಮೆಂಟ್ ಲೂಪ್ ನ ಉಳಿದ ಭಾಗವನ್ನು ಸ್ಕಿಪ್ ಮಾಡುವಂತೆ ಮಾಡುತ್ತದೆ.
03:22 break ಸ್ಟೇಟ್ಮೆಂಟ್ ನಂತೆ ಇದು ಲೂಪ್ ಅನ್ನು ಎಕ್ಸಿಟ್ ಮಾಡುವುದಿಲ್ಲ.
03:25 'i' ಪ್ಯಾರಾಮೀಟರ್ ಇನ್ಕ್ರಿಮೆಂಟ್ ಆಗುತ್ತದೆ ಮತ್ತು ಲೂಪ್ ನ ಕ್ಯಾಲ್ಕ್ಯುಲೇಷನ್ ಗಳು i ನ ಹೊಸ ವ್ಯಾಲ್ಯೂ ಗೆ ಎಕ್ಸಿಕ್ಯೂಟ್ ಆಗುತ್ತವೆ.
03:32 ಈಗ ಒಂದು ಚಿಕ್ಕ ವಿರಾಮವನ್ನು ತೆಗೆದುಕೊಂಡು, 'less than or equal to' (<=) ಆಪರೇಟರ್ ಗೆ 'help' ಅನ್ನು ಹೇಗೆ ಪಡೆಯುವುದು ಎಂದು ನೋಡೋಣ.
03:38 'help' ನೊಂದಿಗೆ 'less than or equal to ' ಎಂದು ಟೈಪ್ ಮಾಡೋಣ.
03:46 ಇದು ಸೈಲ್ಯಾಬ್ ನ Help Browser ಅನ್ನು ತೆರೆಯುತ್ತದೆ.
03:51 less ಆಯ್ಕೆಯಡಿಯಲ್ಲಿ ಹೆಲ್ಪ್ ಇರುವುದನ್ನು ನಾವು ನೋಡಬಹುದು.
03:56 ಈಗ ಇದನ್ನು ಕ್ಲೋಸ್ ಮಾಡಿದ ನಂತರ help less ಎಂದು ಟೈಪ್ ಮಾಡಿ.
04:06 ನಮಗೆ ಬೇಕಾದ help ಸಲಹೆಗಳನ್ನು ಇಲ್ಲಿ ನೋಡಬಹುದು. ನಾನು ಇದನ್ನು ಕ್ಲೋಸ್ ಮಾಡುತ್ತೇನೆ.
04:11 ಸೈಲ್ಯಾಬ್ ನಲ್ಲಿ for ಸ್ಟೇಟ್ಮೆಂಟ್ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಗಿಂತ ಬಲಶಾಲಿಯಾಗಿದ್ದೆ.
04:16 ಉದಾಹರಣೆಗೆ, vector ನಲ್ಲಿ loop ಅನ್ನು ಬಳಸೋಣ:
04:24 ಈ ಸ್ಕ್ರಿಪ್ಟ್ 'v' ಯ ವ್ಯಾಲ್ಯೂವನ್ನು ಡಿಸ್ಪ್ಲೇ ಮಾಡುತ್ತದೆ.
04:28 ಇಲ್ಲಿಯವರೆಗೆ ನಾವು ಕೇವಲ ವೇರಿಯೇಬಲ್ ಗಳನ್ನು ಮಾತ್ರ ಡಿಸ್ಪ್ಲೇ ಮಾಡಿದ್ದೇವೆ.
04:32 ನಾವು ಕ್ಯಾಲ್ಕ್ಯುಲೇಷನ್ ನ ಉತ್ತರವನ್ನು ಕೂಡ ಡಿಸ್ಪ್ಲೇ ಮಾಡಬಹುದು.
04:35 ಈ ಕೆಳಗಿನ ಕೋಡ್ ಸಂಖ್ಯೆಗಳ ವರ್ಗವನ್ನು ಡಿಸ್ಪ್ಲೇ ಮಾಡುತ್ತದೆ.
04:44 ನಾವು for loop ಅನ್ನು ವಿವರಿಸಲು ಸ್ವಲ್ಪ ಜಾಸ್ತಿ ಸಮಯವನ್ನು ತೆಗೆದುಕೊಂಡಿದ್ದೇವೆ.
04:48 ಈಗ while loops ಅನ್ನು ನೋಡೋಣ.
04:50 while ಸ್ಟೇಟ್ಮೆಂಟ್ ಬೂಲಿಯನ್ ಎಕ್ಸ್ಪ್ರೆಶನ್ true ಆಗಿದ್ದಾಗ loop ಅನ್ನು ಎಕ್ಸಿಕ್ಯೂಟ್ ಮಾಡಲು ಅವಕಾಶಮಾಡಿಕೊಡುತ್ತದೆ.
04:55 loop ನ ಪ್ರಾರಂಭದಲ್ಲಿ , ಎಕ್ಸ್ಪ್ರೆಶನ್ true ಆಗಿದ್ದರೆ,
04:58 while loop ನ ಒಳಗಿರುವ ಸ್ಟೇಟ್ಮೆಂಟ್ ಗಳು ಎಕ್ಸಿಕ್ಯೂಟ್ ಆಗುತ್ತವೆ.
05:02 ಪ್ರೊಗ್ರಾಂ ಅನ್ನು ಸರಿಯಾಗಿ ಬರೆದಿದ್ದರೆ, ಎಕ್ಸ್ಪ್ರೆಶನ್ false ಆಗುತ್ತದೆ ಮತ್ತು loop ಕೊನೆಗೊಳ್ಳುತ್ತದೆ.
05:08 ಈಗ while loop ನ ಒಂದು ಉದಾಹರಣೆಯನ್ನು ನೋಡೋಣ :
05:15 'i', ನ ವ್ಯಾಲ್ಯೂ 1 ರಿಂದ 6 ರವರೆಗೆ ಡಿಸ್ಪ್ಲೇ ಆಗುತ್ತದೆ.
05:19 while loop ನಲ್ಲಿ Break ಮತ್ತು continue ಸ್ಟೇಟ್ಮೆಂಟ್ ಗಳು ನಾವು for loop ನಲ್ಲಿ ವಿವರಿಸಿದಂತೆ ಕೆಲಸ ಮಾಡುತ್ತದೆ. break ಸ್ಟೇಟ್ಮೆಂಟ್ ಅನ್ನು ನೋಡೋಣ:
05:33 'i' ನ ವ್ಯಾಲ್ಯೂ ವು 3 ಆದಾಗ, ಪ್ರೋಗ್ರಾಂ loop ಅನ್ನು ಎಕ್ಸಿಟ್ ಮಾಡುತ್ತದೆ. break ಸ್ಟೇಟ್ಮೆಂಟ್ ಗೆ ಧನ್ಯವಾದಗಳು.
05:39 ನೀವು while loop ನಲ್ಲಿ continue ಸ್ಟೇಟ್ಮೆಂಟ್ ಅನ್ನು ಬಳಸಲು ಪ್ರಯತ್ನಿಸಬಹುದು.
05:44 ಇಲ್ಲಿಗೆ ಸೈಲ್ಯಾಬ್ ಅನ್ನು ಬಳಸಿ iterative calculations ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
05:50 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.
05:57 ಇದರ ಕುರಿತು ಹೆಚ್ಚಿನ ವಿವರಗಳು : [1] ಲಿಂಕ್ ನಲ್ಲಿ ದೊರೆಯುತ್ತದೆ
06:00 ಧನ್ಯವಾದಗಳು.

Contributors and Content Editors

Anjana310312, Sandhya.np14