Scilab/C2/Iteration/Kannada
From Script | Spoken-Tutorial
Time | Narration |
00:01 | Scilab (ಸೈಲ್ಯಾಬ್ ) ನ iterative calculations ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:07 | ನಾನು Mac operating system ನಲ್ಲಿ Scilab ಆವೃತ್ತಿ 5.2 ಅನ್ನು ಉಪಯೋಗಿಸುತ್ತಿದ್ದೇನೆ. |
00:11 | ಆದರೆ ಈ ಕ್ಯಾಲ್ಕ್ಯುಲೇಷನ್ ಗಳು ಇತರ ಆವೃತ್ತಿಗಳಲ್ಲಿ ಕೆಲಸ ಮಾಡಬೇಕು ಮತ್ತು Linux ಮತ್ತು Windows ಗಳಲ್ಲಿ ರನ್ ಆಗುವ ಸೈಲ್ಯಾಬ್ ನಲ್ಲಿ ಸಹ ಕೆಲಸ ಮಾಡಬೇಕು. |
00:17 | ನಾನು 'iteration.sce' ಎಂಬ ಫೈಲ್ ನಲ್ಲಿ ಲಭ್ಯವಿರುವ ಕೋಡ್ ಅನ್ನು ಬಳಸುವೆನು. |
00:22 | ನಾನು ಸೈಲ್ಯಾಬ್ ಎಡಿಟರ್ ಅನ್ನು ಬಳಸಿ ಈ ಫೈಲ್ ಅನ್ನು ಓಪನ್ ಮಾಡಿದ್ದೇನೆ. ನಾನು ಇದನ್ನು ಕೇವಲ ಎಡಿಟರ್ ಆಗಿ ಬಳಸಬೇಕೆಂದಿದ್ದೇನೆ. |
00:29 | ನಾವು ಕೋಲನ್ ಆಪರೇಟರ್ ಅನ್ನು ಬಳಸಿ ಒಂದು ವೆಕ್ಟರ್ ಅನ್ನು ಕ್ರಿಯೇಟ್ ಮಾಡೋಣ. 'i' is equal to 1 colon 5, |
00:38 | ಇದು, ಇನ್ಕ್ರಿಮೆಂಟ್ 1 ಅನ್ನು ಹೊಂದಿರುವ, 1 ರಿಂದ 5 ರವರೆಗಿನ ಒಂದು ವೆಕ್ಟರ್ ಅನ್ನು ಕ್ರಿಯೇಟ್ ಮಾಡುತ್ತದೆ. |
00:42 | ಈ ಕಮಾಂಡ್ ನಲ್ಲಿ, 'i' is equal to 1 colon 2 colon 5. |
00:51 | ಮಧ್ಯದ ಆರ್ಗ್ಯುಮೆಂಟ್ ಆಗಿರುವ 2, ಇನ್ಕ್ರಿಮೆಂಟ್ ಅನ್ನು ಸೂಚಿಸುತ್ತದೆ. |
00:56 | 1- ಇದು ವೆಕ್ಟರ್ ಪ್ರಾರಂಭವಾಗುವ ಮೊದಲ ಆರ್ಗ್ಯುಮೆಂಟ್. 'i', 5 ಕ್ಕಿಂತ ಹೆಚ್ಚಾಗಲು ಸಾಧ್ಯವಿಲ್ಲ. |
01:01 | ಆದರೆ ಇದು 5 ಕ್ಕೆ ಸಮವಾಗಿರಬಹುದು. |
01:04 | ಗಮನಿಸಿ: ಕೊನೆಯ ಆರ್ಗ್ಯುಮೆಂಟ್ ಅನ್ನು 6 ಎಂದು ಬದಲಿಸಿದರೂ ಫಲಿತಾಂಶವು ಇದೇ ಆಗಿರುತ್ತದೆ. |
01:09 | ಇದು ಏಕೆ ಎಂದು ವಿವರಿಸುವುದು ಕಷ್ಟವಿಲ್ಲ. |
01:13 | ಇದು ಏಕೆ ಹೀಗಾಗುತ್ತದೆ ಎಂದು ಯೋಚಿಸಬಲ್ಲಿರಾ? |
01:15 | ಈಗ, ಪುನರಾವರ್ತಿತ ಲೆಕ್ಕಗಳನ್ನು (iterative calculations) ಮಾಡಲು, for ಸ್ಟೇಟ್ಮೆಂಟ್ ನ ಬಳಕೆಯನ್ನು ನಾವು ಮಾಡಿತೋರಿಸುವೆವು. |
01:22 | 'for i is equal to 1 colon 2 colon 7 disp i end ಆಫ್ for ಲೂಪ್'. |
01:28 | ನಾನು ಇದನ್ನು ಕಟ್ ಮಾಡಿ ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ. |
01:34 | ಈ ಕೋಡ್, ನಾವು ಲೂಪ್ ನಲ್ಲಿ ಇರುವವರೆಗೆ 'i' ಅನ್ನು ಪ್ರಿಂಟ್ ಮಾಡುತ್ತದೆ. |
01:37 | disp ಕಮಾಂಡ್ ನಿಂದಾಗಿ, ಡಿಸ್ಪ್ಲೇ ಆಗುತ್ತದೆ ಮತ್ತು ಪಾಸ್ ಮಾಡಲಾದ ಅರ್ಗ್ಯುಮೆಂಟ್, ಡಿಸ್ಪ್ಲೇ ಆಗುತ್ತದೆ. |
01:42 | for ಲೂಪ್ ಅನ್ನು ಇಂಟೀಜರ್ ವ್ಯಾಲ್ಯೂ ಗಳಿಗೆ (ಪೂರ್ಣಾಂಕ) ಬಳಸಲಾಗುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ. |
01:45 | ಈ ಉದಾಹರಣೆಯಲ್ಲಿ 1, 3, 5 ಮತ್ತು 7 ಈ ನಾಲ್ಕು ಇಂಟೀಜರ್ ವ್ಯಾಲ್ಯೂಗಳು ಡಿಸ್ಪ್ಲೇ ಆಗಿವೆ. |
01:50 | ಎಷ್ಟು ಸಲ ಇಟರೇಶನ್ ಆಗಿದೆ ಎನ್ನುವುದನ್ನು for ಲೂಪ್ ನಲ್ಲಿ priori (ಪ್ರಿಯೊರಿ) ಎಂದು ಕರೆಯುತ್ತಾರೆ. |
01:56 | ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ, ನಾವು ಡಿಫಾಲ್ಟ್ ಇನ್ಕ್ರಿಮೆಂಟ್ 1 ಅನ್ನೇ ಬಳಸುವೆವು. |
02:01 | ಈಗ ನಾವು 'i' ಯನ್ನು 1 ರಿಂದ 5 ರವರೆಗೆ ಡಿಸ್ಪ್ಲೇ ಮಾಡುವ ಒಂದು ಲೂಪ್ ನೊಂದಿಗೆ ಪ್ರಾರಂಭಿಸೋಣ. |
02:10 | break ಸ್ಟೇಟ್ಮೆಂಟ್ ಅನ್ನು ಸೇರಿಸುವುದರ ಮೂಲಕ, ನಾವು ಈ ಕೋಡ್ ಅನ್ನು ಬದಲಾಯಿಸೋಣ. |
02:18 | 'i' ಕೇವಲ 2 ರವರೆಗೆ ಮಾತ್ರ ಡಿಸ್ಪ್ಲೇ ಆಗಿರುವುದನ್ನು ಗಮನಿಸಿ. |
02:22 | 'i' ನ ಕೊನೆಯ ವ್ಯಾಲ್ಯು ಆಗಿರುವ 5 ರವರೆಗೆ ಇಟರೇಶನ್ ಅನ್ನು ಮಾಡಲಾಗಿಲ್ಲ. |
02:27 | 'i' is equal to 2 ಆದಾಗ, ಮೊದಲ ಬಾರಿಗೆ if ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. |
02:30 | break ಕಮಾಂಡ್, ಲೂಪ್ ಅನ್ನು ಕೊನೆಗೊಳಿಸುತ್ತದೆ. |
02:34 | ಕೆಲವು ಮಧ್ಯಂತರ ಷರತ್ತುಗಳು ಪೂರೈಸಿದಾಗ ನಾವು ಲೂಪ್ ನಿಂದ ಹೊರಬರಲು ಬಯಸಿದರೆ, ಆಗ ನಾವು break ಸ್ಟೇಟ್ಮೆಂಟ್ ಅನ್ನು ಬಳಸಬಹುದು. |
02:40 | ಗಮನಿಸಿ, "i is equal to 2" ಸ್ಟೇಟ್ ಮೆಂಟ್, "ಇಕ್ವಲ್ ಟು" ಚಿಹ್ನೆಯನ್ನು ಎರಡು ಬಾರಿ ಬಳಸಿದೆ. |
02:45 | ಪ್ರೋಗ್ರಾಮಿಂಗ್ ಭಾಷೆಗಳಲ್ಲಿ, ಇದು ಸಮಾನತೆಯನ್ನು ಹೋಲಿಕೆ ಮಾಡುವ ವಿಧಾನವಾಗಿದೆ. |
02:50 | ಈ ಹೋಲಿಕೆಯ ಸ್ಟೇಟ್ಮೆಂಟ್ ನ ಫಲಿತಾಂಶವು Boolean: true ಅಥವಾ false ಎಂದು ಆಗಿರುತ್ತದೆ. |
02:56 | ಇಲ್ಲಿ ನಾವು continue ಸ್ಟೇಟ್ಮೆಂಟ್ ಅನ್ನು ಸೇರಿಸೋಣ, ಪೇಸ್ಟ್ ಮಾಡಿ, Enter ಅನ್ನು ಒತ್ತಿ. |
03:06 | ಇದರಿಂದ, 'i' ಕೇವಲ 4 ಮತ್ತು 5 ಕ್ಕೆ ಮಾತ್ರ ಡಿಸ್ಪ್ಲೇ ಆಗುತ್ತದೆ. |
03:10 | ಏಕೆಂದರೆ, “'i' less than or equal to 3” ಎಂಬ ಸ್ಟೇಟ್ಮೆಂಟ್ ಗೆ ಅನುಸಾರವಾಗಿ, 'i', 3 ಅಥವಾ ಅದಕ್ಕಿಂತ ಕಡಿಮೆ ಇದ್ದಾಗ ಏನೂ ಆಗುವದಿಲ್ಲ. |
03:18 | continue ಸ್ಟೇಟ್ಮೆಂಟ್, ಲೂಪ್ ನಲ್ಲಿ ಉಳಿದ ಭಾಗವನ್ನು ಬಿಟ್ಟು ಪ್ರೊಗ್ರಾಂ, ಮುಂದೆ ಹೋಗುವಂತೆ ಮಾಡುತ್ತದೆ. |
03:22 | ಆದಾಗ್ಯೂ ಇದು break ಸ್ಟೇಟ್ಮೆಂಟ್ ನಂತೆ, ಲೂಪ್ ಅನ್ನು ಎಕ್ಸಿಟ್ ಮಾಡುವುದಿಲ್ಲ. |
03:25 | ಪ್ಯಾರಾಮೀಟರ್ 'i' ಇನ್ಕ್ರಿಮೆಂಟ್ ಆಗುತ್ತದೆ ಮತ್ತು ಲೂಪ್ ನ ಎಲ್ಲ ಕ್ಯಾಲ್ಕ್ಯುಲೇಷನ್ ಗಳನ್ನು 'i' ನ ಹೊಸ ವ್ಯಾಲ್ಯೂ ಗೆ ಎಕ್ಸಿಕ್ಯೂಟ್ ಮಾಡಲಾಗುತ್ತದೆ. |
03:32 | ಈಗ ಒಂದು ಚಿಕ್ಕ ವಿರಾಮವನ್ನು ತೆಗೆದುಕೊಂಡು, 'less than or equal to' (<=) ಆಪರೇಟರ್ ಗೆ 'help' ಅನ್ನು ಹೇಗೆ ಪಡೆಯುವುದು ಎಂದು ನೋಡೋಣ. |
03:38 | ನಾವು 'help' ನೊಂದಿಗೆ 'ಲೆಸ್ ದ್ಯಾನ್ ಆರ್ ಇಕ್ವಲ್ ಟು' ಚಿಹ್ನೆಯನ್ನು ಟೈಪ್ ಮಾಡೋಣ. |
03:46 | ಇದು ಸೈಲ್ಯಾಬ್ ನ Help Browser ಅನ್ನು ತೆರೆಯುತ್ತದೆ. |
03:51 | less ಎಂಬ ಆಯ್ಕೆಯಡಿಯಲ್ಲಿ, ಈ ಹೆಲ್ಪ್ ಇರುವುದನ್ನು ನಾವು ನೋಡಬಹುದು. |
03:56 | ಹೀಗಾಗಿ, ಈಗ ಇದನ್ನು ಕ್ಲೋಸ್ ಮಾಡಿದ ನಂತರ ನಾವು help less ಎಂದು ಟೈಪ್ ಮಾಡುತ್ತೇವೆ. |
04:06 | ನಮಗೆ ಬೇಕಾದ help ಸಲಹೆಗಳನ್ನು ಇಲ್ಲಿ ನೋಡಬಹುದು. ನಾನು ಇದನ್ನು ಕ್ಲೋಸ್ ಮಾಡುತ್ತೇನೆ. |
04:11 | ಸೈಲ್ಯಾಬ್ ನಲ್ಲಿ for ಸ್ಟೇಟ್ಮೆಂಟ್, ಉಳಿದ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಇರುವುದಕ್ಕಿಂತ ಬಲಶಾಲಿಯಾಗಿದೆ. |
04:16 | ಉದಾಹರಣೆಗೆ, ಒಂದು vector ನಲ್ಲಿ loop ಅನ್ನು ಬಳಸೋಣ: |
04:24 | ಈ ಸ್ಕ್ರಿಪ್ಟ್, 'v' ಯ ಎಲ್ಲ ವ್ಯಾಲ್ಯೂಗಳನ್ನು ಡಿಸ್ಪ್ಲೇ ಮಾಡುತ್ತದೆ. |
04:28 | ಇಲ್ಲಿಯವರೆಗೆ ನಾವು ಕೇವಲ ವೇರಿಯೇಬಲ್ ಗಳನ್ನು ಮಾತ್ರ ಡಿಸ್ಪ್ಲೇ ಮಾಡುತ್ತಿದ್ದೇವೆ. |
04:32 | ನಾವು ಕ್ಯಾಲ್ಕ್ಯುಲೇಷನ್ ನ ಉತ್ತರವನ್ನು ಕೂಡ ಪ್ರದರ್ಶಿಸಬಹುದು. |
04:35 | ಈ ಕೆಳಗಿನ ಕೋಡ್, ಸಂಖ್ಯೆಗಳ ವರ್ಗವನ್ನು ಪ್ರದರ್ಶಿಸುತ್ತದೆ. |
04:44 | ನಾವು for ಲೂಪ್ ಅನ್ನು ವಿವರಿಸಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದೇವೆ. |
04:48 | ಈಗ ನಾವು while ಲೂಪ್ ಅನ್ನು ನೋಡೋಣ. |
04:50 | while ಸ್ಟೇಟ್ಮೆಂಟ್, ಬೂಲಿಯನ್ ಎಕ್ಸ್ಪ್ರೆಶನ್ true ಆಗಿದ್ದಾಗ, ಒಂದು ಲೂಪ್ ಅನ್ನು ಎಕ್ಸಿಕ್ಯೂಟ್ ಮಾಡಲು ಅನುಮತಿಸುತ್ತದೆ. |
04:55 | ಲೂಪ್ ನ ಆರಂಭದಲ್ಲಿ, ಎಕ್ಸ್ಪ್ರೆಶನ್ true ಎಂದಿದ್ದರೆ, |
04:58 | while ಲೂಪ್ ನ ಒಳಗಿರುವ ಸ್ಟೇಟ್ಮೆಂಟ್ ಗಳು ಎಕ್ಸಿಕ್ಯೂಟ್ ಆಗುತ್ತವೆ. |
05:02 | ಪ್ರೊಗ್ರಾಂ ಅನ್ನು ಸರಿಯಾಗಿ ಬರೆದಿದ್ದರೆ, ಎಕ್ಸ್ಪ್ರೆಶನ್, false ಎಂದು ಆಗುತ್ತದೆ ಮತ್ತು ಲೂಪ್ ಕೊನೆಗೊಳ್ಳುತ್ತದೆ. |
05:08 | ಈಗ while ಲೂಪ್ ಗಾಗಿ ಒಂದು ಉದಾಹರಣೆಯನ್ನು ನೋಡೋಣ: |
05:15 | 1 ರಿಂದ 6 ರವರೆಗಿನ 'i' ನ ವ್ಯಾಲ್ಯೂಗಳು ಡಿಸ್ಪ್ಲೇ ಆಗುತ್ತವೆ. |
05:19 | Break ಮತ್ತು continue ಸ್ಟೇಟ್ಮೆಂಟ್ ಗಳು, for ಲೂಪ್ ನಲ್ಲಿ ಮಾಡಿದಂತೆಯೇ while ಲೂಪ್ ನಲ್ಲಿ ಸಹ ಕೆಲಸ ಮಾಡುತ್ತವೆ. break ಸ್ಟೇಟ್ಮೆಂಟ್ ಅನ್ನು ಬಳಸಿ ಇದನ್ನು ನಾವು ಮಾಡಿತೋರಿಸುತ್ತೇವೆ. |
05:33 | 'i' ನ ವ್ಯಾಲ್ಯೂ 3 ಎಂದು ಆದಾಗ, ಪ್ರೋಗ್ರಾಂ ಲೂಪ್ ಅನ್ನು ಎಕ್ಸಿಟ್ ಮಾಡುತ್ತದೆ. break ಸ್ಟೇಟ್ಮೆಂಟ್ ಗೆ ಧನ್ಯವಾದಗಳು. |
05:39 | ನೀವು while loop ನಲ್ಲಿ, continue ಸ್ಟೇಟ್ಮೆಂಟ್ ಗಾಗಿ ಸಹ ಈ ಉದಾಹರಣೆಯನ್ನು ಬಳಸಲು ಪ್ರಯತ್ನಿಸಬಹುದು. |
05:44 | ಇಲ್ಲಿಗೆ ಸೈಲ್ಯಾಬ್ ಅನ್ನು ಬಳಸಿ, iterative calculations ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
05:50 | 'ಸ್ಪೋಕನ್ ಟ್ಯುಟೋರಿಯಲ್ಸ್', 'ಟಾಕ್ ಟು ಎ ಟೀಚರ್' ಪ್ರಕಲ್ಪದ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
05:57 | ಇದರ ಕುರಿತು ಹೆಚ್ಚಿನ ವಿವರಗಳು : [1] ಲಿಂಕ್ ನಲ್ಲಿ ದೊರೆಯುತ್ತದೆ |
06:00 | ಧನ್ಯವಾದಗಳು. |