Scilab/C2/Vector-Operations/Kannada
From Script | Spoken-Tutorial
Revision as of 14:52, 1 September 2017 by Anjana310312 (Talk | contribs)
Time | Narration |
00:01 | Vector Operations ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:07 | ಈ ಟ್ಯುಟೋರಿಯಲ್ ನ ಕೊನೆಯಲ್ಲಿ ನೀವು: |
00:11 | * ವೆಕ್ಟರ್ ಅನ್ನು ಡಿಫೈನ್ ಮಾಡಲು |
00:13 | * ವೆಕ್ಟರ್ ನ ಉದ್ದವನ್ನು ಲೆಕ್ಕಹಾಕಲು |
00:15 | * ವೆಕ್ಟರ್ ನ ಮೇಲೆ ಗಣೀತೀಯ ಕ್ರಿಯೆಗಳಾದ ಸಂಕಲನ, ವ್ಯವಕಲನ ಮತ್ತು ಗುಣಾಕಾರಗಳನ್ನು ಮಾಡಲು |
00:23 | * ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡಲು |
00:25 | * ಮ್ಯಾಟ್ರಿಕ್ಸ್ ನ ಗಾತ್ರವನ್ನು ಕಂಡುಹಿಡಿಯಲು |
00:28 | * ಮ್ಯಾಟ್ರಿಕ್ಸ್ ನ ಮೇಲೆ ಗಣೀತೀಯ ಕ್ರಿಯೆಗಳಾದ ಸಂಕಲನ, ವ್ಯವಕಲನ ಮತ್ತು ಗುಣಾಕಾರಗಳನ್ನು ಮಾಡಲು ಸಮರ್ಥರಾಗಿರುತ್ತೀರಿ. |
00:36 | ಪೂರ್ವಸಿದ್ಧತೆ ಎಂದು, ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿರಬೇಕು. |
00:41 | ನೀವು “Getting started with Scilab” ಎಂಬ ಸ್ಪೋಕನ್ ಟ್ಯುಟೋರಿಯಲ್ ಅನ್ನು ಕೇಳಿರಬೇಕು. |
00:46 | ನಿಮಗೆ ವೆಕ್ಟರ್ ಗಳು ಮತ್ತು ಮ್ಯಾಟ್ರಿಕ್ಸ್ ಗಳ ಬಗ್ಗೆ ಸ್ವಲ್ಪ ತಿಳಿದಿರಬೇಕು. |
00:50 | ನಾನು ವಿರಣೆಗಾಗಿ Windows 7 ಆಪರೇಟಿಂಗ್ ಸಿಸ್ಟಮ್ ಮತ್ತು Scilab 5.2.2 ಗಳನ್ನು ಬಳಸುತ್ತಿದ್ದೇನೆ. |
00:58 | ಸೈಲ್ಯಾಬ್ ಅನ್ನು ಲಾಂಚ್ ಮಾಡಲು ನಿಮ್ಮ ಡೆಸ್ಕ್-ಟಾಪ್ ನಲ್ಲಿರುವ Scilab ಶಾರ್ಟ್ಕಟ್ ಐಕಾನ್ ಅನ್ನು ಒತ್ತಿ. |
01:03 | ಇದು ಸೈಲ್ಯಾಬ್ ಕನ್ಸೋಲ್ ವಿಂಡೋವನ್ನು ತೆರೆಯುತ್ತದೆ. |
01:06 | ಕರ್ಸರ್, ಕಮಾಂಡ್ ಪ್ರಾಮ್ಟ್ ನ ಮೇಲಿರುವುದನ್ನು ಗಮನಿಸಿ. |
01:10 | ವಿಡಿಯೋವನ್ನು ಆಗಾಗ್ಗೆ ನಿಲ್ಲಿಸಿ ((pause ಮಾಡಿ)), ಸೈಲ್ಯಾಬ್ ನ ಈ ಟ್ಯುಟೋರಿಯಲ್ ಅನ್ನು ನೀವು ಜೊತೆಜೊತೆಗೇ ಅಭ್ಯಾಸ ಮಾಡುವುದು ಒಳ್ಳೆಯದು ಎಂದು ನಾನು ಸಲಹೆ ಮಾಡುತ್ತೇನೆ. |
01:19 | ವೆಕ್ಟರ್ ಅನ್ನು ಡಿಫೈನ್ ಮಾಡುವುದರ ಮೂಲಕ ನಾವು ಪ್ರಾರಂಭಿಸೋಣ. |
01:22 | ಇದನ್ನು ಎರಡು ರೀತಿಯಲ್ಲಿ ಮಾಡಬಹುದು: |
01:24 | ಸ್ಪೇಸ್ ಅನ್ನು ಹೀಗೆ ಉಪಯೋಗಿಸಿ : p is equal to open square bracket one space 2 space 3 close the square bracket, Enter ಅನ್ನು ಒತ್ತಿ. |
01:37 | ಅಥವಾ ಕಾಮಾವನ್ನು ಹೀಗೆ ಉಪಯೋಗಿಸಿ: q is equal to open square bracket two comma three comma four close the square bracket, Enter ಅನ್ನು ಒತ್ತಿ. |
01:53 | ನಾವು ವೆಕ್ಟರ್ p ಯ ಉದ್ದವನ್ನು length of p ಎಂಬ ಕಮಾಂಡ್ ನಿಂದ ಕಂಡುಹಿಡಿಯಬಹುದು. Enter ಅನ್ನು ಒತ್ತಿ. |
02:03 | ನಾವು ವೆಕ್ಟರ್ ನ ಮೇಲೆ, |
02:08 | * ಎರಡು ವೆಕ್ಟರ್ ಗಳ ಸಂಕಲನ |
02:11 | * ಎರಡು ವೆಕ್ಟರ್ ಗಳ ವ್ಯವಕಲನ ಮುಂತಾದ ವಿವಿಧ ಗಣಿತೀಯ ಕ್ರಿಯೆಗಳನ್ನು ಮಾಡಬಹುದು. |
02:14 | ವೆಕ್ಟರ್ ನ ಟ್ರಾನ್ಸ್ಪೋಸ್ ಅನ್ನು ಅಪೋಸ್ಟ್ರೋಪಿಯನ್ನು (ಇದನ್ನು ಸಿಂಗಲ್ ಕೋಟ್ ಎಂದೂ ಕರೆಯುತ್ತಾರೆ) ಉಪಯೋಗಿಸಿ ಕಂಡುಹಿಡಿಯಬಹುದು. |
02:21 | p transpose ಇಲ್ಲಿ ತೋರಿಸಿದಂತೆ ಇರುತ್ತದೆ. |
02:27 | ನಾವು p-transpose times q ವನ್ನು ಕೂಡ ಕಂಡುಹಿಡಿಯಬಹುದು. |
02:34 | ಈ p times q-transpose ಕಮಾಂಡ್, ಸ್ಕೇಲಾರ್ ಅನ್ನು ಕೊಡುತ್ತದೆ. |
02:43 | ಈಗ ದಯವಿಟ್ಟು ಟ್ಯುಟೋರಿಯಲ್ ಅನ್ನು (pause ಮಾಡಿ) ನಿಲ್ಲಿಸಿ, ವಿಡಿಯೋದಲ್ಲಿ ಕೊಟ್ಟಿರುವ ಮೊದಲನೆ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ. |
02:50 | ಈಗ ಮ್ಯಾಟ್ರಿಕ್ಸ್ ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ನಾವು ನೋಡುತ್ತೇವೆ. |
02:56 | ವೆಕ್ಟರ್ ಗಾಗಿ ತೋರಿಸಿದಂತೆ, ಮ್ಯಾಟ್ರಿಕ್ಸ್ ನಲ್ಲಿಯ 'ರೋ' ನ ಎಲಿಮೆಂಟ್ ಗಳನ್ನು ಸ್ಪೇಸ್ ಅಥವಾ ಕಾಮಾಗಳನ್ನು ಉಪಯೋಗಿಸಿ ಡಿಫೈನ್ ಮಾಡಬಹುದು. |
03:04 | ಉದಾಹರಣೆಗೆ: ನಾವು ಒಂದು 2 by 3 ಮ್ಯಾಟ್ರಿಕ್ಸ್ P ಯನ್ನು ಡಿಫೈನ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ: capital P is equal to open square bracket 1 space 2 space 3 semicolon |
03:20 | 4 space five space 6 close the square bracket. Enter ಅನ್ನು ಒತ್ತಿ. |
03:27 | ಗಮನಿಸಿ, ಮ್ಯಾಟ್ರಿಕ್ಸ್ ನ ಮುಂದಿನ 'ರೋ'ವನ್ನು ಡಿಫೈನ್ ಮಾಡಲು ಸೆಮಿಕೋಲನ್ ಅನ್ನು ಉಪಯೋಗಿಸುತ್ತೇವೆ. |
03:32 | ಸೈಲ್ಯಾಬ್ ಕೇಸ್ ಸೆನ್ಸಿಟಿವ್ ಎಂಬುದನ್ನು ನೆನಪಿಸಿಕೊಳ್ಳಿ. |
03:34 | ಇಲ್ಲಿ ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡಲು ಉಪಯೋಗಿಸಿದ ವೇರಿಯೇಬಲ್ P ಯು ಅಪ್ಪರ್ ಕೇಸ್ ನಲ್ಲಿದೆ. |
03:40 | ಇದು ವೆಕ್ಟರ್ ಆಗಿದ್ದ ಚಿಕ್ಕ p ಗಿಂತ ಭಿನ್ನವಾಗಿದೆ. |
03:44 | ಈ ಸಂದರ್ಭದಲ್ಲಿ ಚಿಕ್ಕ p ಏನಾಗಿದೆ ಎಂದು ಪರೀಕ್ಷಿಸಲು ಬಯಸುತ್ತೀರಾ? |
03:48 | ಈಗ ನಾವು size ಕಮಾಂಡ್ ಅನ್ನುಬಳಸಿ, ಮ್ಯಾಟ್ರಿಕ್ಸ್ ನ ಗಾತ್ರವನ್ನು ಕಂಡುಹಿಡಿಯುವುದನ್ನು ನೋಡುವೆವು. |
03:53 | ಇದಕ್ಕಾಗಿ, ಹೀಗೆ ಟೈಪ್ ಮಾಡಿ: open square bracket row comma column close the square bracket is equal to size of capital P, (ಮ್ಯಾಟ್ರಿಕ್ಸ್) ಮತ್ತು Enter ಅನ್ನು ಒತ್ತಿ. |
04:10 | ನಿಮಗೆ ಈ ಔಟ್ಪುಟ್ ಸಿಗುತ್ತದೆ. |
04:17 | ಗಮನಿಸಿ, length ಕಮಾಂಡ್, ಮ್ಯಾಟ್ರಿಕ್ಸ್ ನಲ್ಲಿಯ ಒಟ್ಟೂ ಎಲಿಮೆಂಟ್ ಗಳ ಸಂಖ್ಯೆಯನ್ನು ಕೊಡುವುದನ್ನು ನೀವು ನೋಡಬಹುದು. |
04:27 | ಇಲ್ಲಿ ತೋರಿಸಿರುವಂತೆ, transpose ಕಮಾಂಡ್, ಮ್ಯಾಟ್ರಿಕ್ಸ್ ಗೆ ಕೂಡ ಅನ್ವಯವಾಗುತ್ತದೆ. |
04:34 | P transpose, ಇದು ಮ್ಯಾಟ್ರಿಕ್ಸ್ P ಯ ಟ್ರಾನ್ಸ್ಪೋಸ್ ಅನ್ನು ಕೊಡುತ್ತದೆ. |
04:41 | ಈಗ ನಾವು ಒಂದು 2 by 3 ಮ್ಯಾಟ್ರಿಕ್ಸ್ Q ವನ್ನು ಡಿಫೈನ್ ಮಾಡೋಣ: |
04:45 | Capital Q is equal to open square bracket one space five space three semicolon, ಮುಂದಿನ 'ರೋ' ದಲ್ಲಿ ಸೇರಿಸಲು, |
04:56 | two space four space eight, close the square bracket ಮತ್ತು Enter ಅನ್ನು ಒತ್ತಿ. |
05:03 | P ಯನ್ನು ಇನ್ನೊಮ್ಮೆ ಕಾಲ್ ಮಾಡೋಣ. |
05:08 | ನಾವು ಗಣಿತದಲ್ಲಿ ಮಾಡುವಂತೆಯೇ P ಮತ್ತು Q ಗಳನ್ನು ಒಳಗೊಂಡಿರುವ ಲೆಕ್ಕಗಳನ್ನು ಮಾಡಬಹುದು. |
05:14 | ಉದಾಹರಣೆಗೆ, E is equal to 2 times P plus 3 times Q ವನ್ನು ಕಂಡುಹಿಡಿಯೋಣ. Enter ಅನ್ನು ಒತ್ತಿ. |
05:29 | ಈ ಲೆಕ್ಕಗಳು ಸರಿಯಾಗಿವೆಯೇ ಎಂದು ನೀವು ತಾಳೆ ನೋಡಿಕೊಳ್ಳಬಹುದು. |
05:33 | ದಯವಿಟ್ಟು ಈಗ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ವಿಡಿಯೋದಲ್ಲಿ ಕೊಟ್ಟಿರುವ ಎರಡನೇ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ. |
05:44 | ಈ ಟ್ಯುಟೋರಿಯಲ್ ನಲ್ಲಿ ನಾವು: |
05:47 | * ಸ್ಪೇಸ್ ಮತ್ತು ಕಾಮಾಗಳನ್ನು ಉಪಯೋಗಿಸಿ ವೆಕ್ಟರ್ ಅನ್ನು ಡಿಫೈನ್ ಮಾಡುವುದು |
05:50 | * length() ಫಂಕ್ಷನ್ ಅನ್ನು ಉಪಯೋಗಿಸಿ ವೆಕ್ಟರ್ ನ ಉದ್ದವನ್ನು ಕಂಡುಹಿಡಿಯುವುದು |
05:54 | * apostrophe ಅನ್ನು ಉಪಯೋಗಿಸಿ ವೆಕ್ಟರ್ ಅಥವಾ ಮ್ಯಾಟ್ರಿಕ್ಸ್ ನ ಟ್ರಾನ್ಸ್ಪೋಸ್ ಅನ್ನು ಕಂಡುಹಿಡಿಯುವುದು |
05:59 | * ಕಾಲಮ್ ಗಳನ್ನು ಬೇರ್ಪಡಿಸಲು ಸ್ಪೇಸ್ ಅಥವಾ ಕಾಮಾ ವನ್ನು ಉಪಯೋಗಿಸಿ, ರೋ ವನ್ನು ಬೇರ್ಪಡಿಸಲು ಸೆಮಿಕೋಲನ್ ಅನ್ನು ಉಪಯೋಗಿಸಿ ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡುವುದು |
06:07 | * size() ಫಂಕ್ಷನ್ ಅನ್ನು ಉಪಯೋಗಿಸಿ ಮ್ಯಾಟ್ರಿಕ್ಸ್ ನ ಗಾತ್ರವನ್ನು ಕಂಡುಹಿಡಿಯುವುದು- ಇವುಗಳನ್ನು ಕಲಿತಿದ್ದೇವೆ. |
06:11 | ಈ ಟ್ಯುಟೋರಿಯಲ್ ಅನ್ನು Free and Open Source Software in Science and Engineering Education (FOSSEE) ತಂಡದವರು ತಯಾರಿಸಿದ್ದಾರೆ. |
06:18 | FOSSEE ಕುರಿತಾದ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ಲಿಂಕ್ ಗಳಲ್ಲಿ ಪಡೆಯಬಹುದು. |
06:28 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. |
06:33 | ಇದರ ಬಗ್ಗೆ ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
spoken-tutorial.org/NMEICT-intro |
06:43 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
06:46 | ಧನ್ಯವಾದಗಳು. |