Scilab/C2/Vector-Operations/Kannada

From Script | Spoken-Tutorial
Jump to: navigation, search
Time Narration
00:01 Vector Operations ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:07 ಈ ಟ್ಯುಟೋರಿಯಲ್ ನ ಕೊನೆಯಲ್ಲಿ ನೀವು:
00:11 * ವೆಕ್ಟರ್ ಅನ್ನು ಡಿಫೈನ್ ಮಾಡಲು
00:13 * ವೆಕ್ಟರ್ ನ ಉದ್ದವನ್ನು ಲೆಕ್ಕಹಾಕಲು
00:15 * ವೆಕ್ಟರ್ ನ ಮೇಲೆ ಗಣಿತದ ಕ್ರಿಯೆಗಳಾದ ಸಂಕಲನ, ವ್ಯವಕಲನ ಮತ್ತು ಗುಣಾಕಾರಗಳನ್ನು ಮಾಡಲು
00:23 * ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡಲು
00:25 * ಮ್ಯಾಟ್ರಿಕ್ಸ್ ನ ಗಾತ್ರವನ್ನು ಕಂಡುಹಿಡಿಯಲು
00:28 * ಮ್ಯಾಟ್ರಿಕ್ಸ್ ನ ಮೇಲೆ ಗಣಿತದ ಕ್ರಿಯೆಗಳಾದ ಸಂಕಲನ, ವ್ಯವಕಲನ ಮತ್ತು ಗುಣಾಕಾರಗಳನ್ನು ಮಾಡಲು ಸಮರ್ಥರಾಗಿರುತ್ತೀರಿ.
00:36 ಪೂರ್ವಸಿದ್ಧತೆ ಎಂದು, ನಿಮ್ಮ ಸಿಸ್ಟಮ್ ನಲ್ಲಿ scilab (ಸೈಲ್ಯಾಬ್) ಇನ್ಸ್ಟಾಲ್ ಆಗಿರಬೇಕು.
00:41 ನೀವು Getting started with Scilab ಎಂಬ ಸ್ಪೋಕನ್-ಟ್ಯುಟೋರಿಯಲ್ ಅನ್ನು ತಿಳಿದುಕೊಂಡಿರಬೇಕು.
00:46 ನಿಮಗೆ ವೆಕ್ಟರ್ ಗಳು ಮತ್ತು ಮ್ಯಾಟ್ರಿಕ್ಸ್ ಗಳ ಬಗ್ಗೆ ಸ್ವಲ್ಪ ತಿಳಿದಿರಬೇಕು.
00:50 ನಾನು ವಿರಣೆಗಾಗಿ Windows 7 ಆಪರೇಟಿಂಗ್ ಸಿಸ್ಟಮ್ ಮತ್ತು Scilab 5.2.2 ಗಳನ್ನು ಬಳಸುತ್ತಿದ್ದೇನೆ.
00:58 ಸೈಲ್ಯಾಬ್ ಅನ್ನು ಲಾಂಚ್ ಮಾಡಲು ನಿಮ್ಮ ಡೆಸ್ಕ್-ಟಾಪ್ ನಲ್ಲಿರುವ Scilab ಶಾರ್ಟ್ಕಟ್ ಐಕಾನ್ ಅನ್ನು ಒತ್ತಿ.
01:03 ಇದು ಸೈಲ್ಯಾಬ್ ಕನ್ಸೋಲ್ ವಿಂಡೋವನ್ನು ತೆರೆಯುತ್ತದೆ.
01:06 ಕರ್ಸರ್, ಕಮಾಂಡ್ ಪ್ರಾಮ್ಟ್ ನ ಮೇಲಿರುವುದನ್ನು ಗಮನಿಸಿ.
01:10 ವಿಡಿಯೋವನ್ನು ಆಗಾಗ್ಗೆ ನಿಲ್ಲಿಸಿ (pause ಮಾಡಿ), ಸೈಲ್ಯಾಬ್ ನ ಈ ಟ್ಯುಟೋರಿಯಲ್ ಅನ್ನು ನೀವು ಜೊತೆಜೊತೆಗೇ ಅಭ್ಯಾಸ ಮಾಡುವುದು ಒಳ್ಳೆಯದು ಎಂದು ನಾನು ಸಲಹೆ ಮಾಡುತ್ತೇನೆ.
01:19 ವೆಕ್ಟರ್ ಅನ್ನು ಡಿಫೈನ್ ಮಾಡುವುದರ ಮೂಲಕ ನಾವು ಪ್ರಾರಂಭಿಸೋಣ.
01:22 ಇದನ್ನು ಎರಡು ರೀತಿಯಲ್ಲಿ ಮಾಡಬಹುದು:
01:24 ಸ್ಪೇಸ್ ಅನ್ನು ಹೀಗೆ ಉಪಯೋಗಿಸಿ : p is equal to open square bracket one space 2 space 3 close the square bracket, Enter ಅನ್ನು ಒತ್ತಿ.
01:37 ಅಥವಾ ಕಾಮಾವನ್ನು ಹೀಗೆ ಉಪಯೋಗಿಸಿ: q is equal to open square bracket two comma three comma four close the square bracket, Enter ಅನ್ನು ಒತ್ತಿ.
01:53 ನಾವು ವೆಕ್ಟರ್ p ಯ ಉದ್ದವನ್ನು length of p ಎಂಬ ಕಮಾಂಡ್ ನಿಂದ ಕಂಡುಹಿಡಿಯಬಹುದು. Enter ಅನ್ನು ಒತ್ತಿ.
02:03 ನಾವು ವೆಕ್ಟರ್ ನ ಮೇಲೆ-
02:08 * ಎರಡು ವೆಕ್ಟರ್ ಗಳ ಸಂಕಲನ
02:11 * ಎರಡು ವೆಕ್ಟರ್ ಗಳ ವ್ಯವಕಲನ ಮುಂತಾದ ವಿವಿಧ ಗಣಿತದ ಕ್ರಿಯೆಗಳನ್ನು ಮಾಡಬಹುದು.
02:14 ವೆಕ್ಟರ್ ನ ಟ್ರಾನ್ಸ್ಪೋಸ್ ಅನ್ನು ಅಪೋಸ್ಟ್ರೋಪಿಯನ್ನು (ಇದನ್ನು ಸಿಂಗಲ್-ಕೋಟ್ ಎಂದೂ ಕರೆಯುತ್ತಾರೆ) ಉಪಯೋಗಿಸಿ ಕಂಡುಹಿಡಿಯಬಹುದು.
02:21 p transpose ಇಲ್ಲಿ ತೋರಿಸಿದಂತೆ ಇರುತ್ತದೆ.
02:27 ನಾವು p-transpose times q ವನ್ನು ಕೂಡ ಕಂಡುಹಿಡಿಯಬಹುದು.
02:34 p times q-transpose ಕಮಾಂಡ್, ಸ್ಕೇಲಾರ್ ಅನ್ನು ಕೊಡುತ್ತದೆ.
02:43 ಈಗ ದಯವಿಟ್ಟು ಟ್ಯುಟೋರಿಯಲ್ ಅನ್ನು ನಿಲ್ಲಿಸಿ (pause ಮಾಡಿ), ವೀಡಿಯೋದಲ್ಲಿ ಕೊಟ್ಟಿರುವ ಮೊದಲನೆ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ.
02:50 ಈಗ ಮ್ಯಾಟ್ರಿಕ್ಸ್ ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ನಾವು ನೋಡುತ್ತೇವೆ.
02:56 ವೆಕ್ಟರ್ ಗಾಗಿ ತೋರಿಸಿದಂತೆ, ಮ್ಯಾಟ್ರಿಕ್ಸ್ ನಲ್ಲಿಯ 'ರೋ' ನ ಎಲಿಮೆಂಟ್ ಗಳನ್ನು ಸ್ಪೇಸ್ ಅಥವಾ ಕಾಮಾಗಳನ್ನು ಉಪಯೋಗಿಸಿ ಡಿಫೈನ್ ಮಾಡಬಹುದು.
03:04 ಉದಾಹರಣೆಗೆ: ನಾವು ಒಂದು 2 by 3 ಮ್ಯಾಟ್ರಿಕ್ಸ್ P ಯನ್ನು ಡಿಫೈನ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ: capital P is equal to open square bracket 1 space 2 space 3 semicolon
03:20 4 space five space 6 close the square bracket. Enter ಅನ್ನು ಒತ್ತಿ.
03:27 ಗಮನಿಸಿ, ಮ್ಯಾಟ್ರಿಕ್ಸ್ ನ ಮುಂದಿನ 'ರೋ'ವನ್ನು ಡಿಫೈನ್ ಮಾಡಲು ಸೆಮಿಕೋಲನ್ ಅನ್ನು ಉಪಯೋಗಿಸುತ್ತೇವೆ.
03:32 ಸೈಲ್ಯಾಬ್ ಕೇಸ್-ಸೆನ್ಸಿಟಿವ್ ಎಂಬುದನ್ನು ನೆನಪಿಸಿಕೊಳ್ಳಿ.
03:34 ಇಲ್ಲಿ ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡಲು ಉಪಯೋಗಿಸಿದ ವೇರಿಯೇಬಲ್ P ಯು ಅಪ್ಪರ್-ಕೇಸ್ ನಲ್ಲಿದೆ.
03:40 ಇದು ವೆಕ್ಟರ್ ಆಗಿದ್ದ ಚಿಕ್ಕ p ಗಿಂತ ಭಿನ್ನವಾಗಿದೆ.
03:44 ಈ ಸಂದರ್ಭದಲ್ಲಿ ಚಿಕ್ಕ p ಏನಾಗಿದೆ ಎಂದು ಪರೀಕ್ಷಿಸಲು ಬಯಸುತ್ತೀರಾ?
03:48 ಈಗ ನಾವು size ಕಮಾಂಡ್ ಅನ್ನು ಬಳಸಿ, ಮ್ಯಾಟ್ರಿಕ್ಸ್ ನ ಗಾತ್ರವನ್ನು ಕಂಡುಹಿಡಿಯುವುದನ್ನು ನೋಡುವೆವು.
03:53 ಇದಕ್ಕಾಗಿ, ಹೀಗೆ ಟೈಪ್ ಮಾಡಿ: open square bracket row comma column close the square bracket is equal to size of capital P, (ಇಲ್ಲಿ P ಮ್ಯಾಟ್ರಿಕ್ಸ್ ಆಗಿದೆ) ಮತ್ತು Enter ಅನ್ನು ಒತ್ತಿ.
04:10 ನಿಮಗೆ ಈ ಔಟ್ಪುಟ್ ಸಿಗುತ್ತದೆ.
04:17 ಗಮನಿಸಿ, length ಕಮಾಂಡ್, ಮ್ಯಾಟ್ರಿಕ್ಸ್ ನಲ್ಲಿಯ ಒಟ್ಟೂ ಎಲಿಮೆಂಟ್ ಗಳ ಸಂಖ್ಯೆಯನ್ನು ಕೊಡುವುದನ್ನು ನೀವು ನೋಡಬಹುದು.
04:27 ಇಲ್ಲಿ ತೋರಿಸಿರುವಂತೆ, transpose ಕಮಾಂಡ್, ಮ್ಯಾಟ್ರಿಕ್ಸ್ ಗೆ ಕೂಡ ಅನ್ವಯವಾಗುತ್ತದೆ.
04:34 P transpose, ಇದು ಮ್ಯಾಟ್ರಿಕ್ಸ್ P ಯ ಟ್ರಾನ್ಸ್ಪೋಸ್ ಅನ್ನು ಕೊಡುತ್ತದೆ.
04:41 ಈಗ ನಾವು ಒಂದು 2 by 3 ಮ್ಯಾಟ್ರಿಕ್ಸ್ Q ವನ್ನು ಡಿಫೈನ್ ಮಾಡೋಣ:
04:45 Capital Q is equal to open square bracket one space five space three semicolon, ಮುಂದಿನ 'ರೋ' ದಲ್ಲಿ ಸೇರಿಸಲು,
04:56 two space four space eight, close the square bracket ಮತ್ತು Enter ಅನ್ನು ಒತ್ತಿ.
05:03 P ಯನ್ನು ಇನ್ನೊಮ್ಮೆ ಕಾಲ್ ಮಾಡೋಣ.
05:08 ನಾವು ಗಣಿತದಲ್ಲಿ ಮಾಡುವಂತೆಯೇ P ಮತ್ತು Q ಗಳನ್ನು ಒಳಗೊಂಡಿರುವ ಲೆಕ್ಕಗಳನ್ನು ಮಾಡಬಹುದು.
05:14 ಉದಾಹರಣೆಗೆ, E is equal to 2 times P plus 3 times Q ವನ್ನು ಕಂಡುಹಿಡಿಯೋಣ. Enter ಅನ್ನು ಒತ್ತಿ.
05:29 ಈ ಲೆಕ್ಕಗಳು ಸರಿಯಾಗಿವೆಯೇ ಎಂದು ನೀವು ತಾಳೆ ನೋಡಿಕೊಳ್ಳಬಹುದು.
05:33 ದಯವಿಟ್ಟು ಈಗ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ವಿಡಿಯೋದಲ್ಲಿ ಕೊಟ್ಟಿರುವ ಎರಡನೇ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ.
05:44 ಈ ಟ್ಯುಟೋರಿಯಲ್ ನಲ್ಲಿ ನಾವು:
05:47 * ಸ್ಪೇಸ್ ಮತ್ತು ಕಾಮಾಗಳನ್ನು ಉಪಯೋಗಿಸಿ ವೆಕ್ಟರ್ ಅನ್ನು ಡಿಫೈನ್ ಮಾಡುವುದು
05:50 * length() ಫಂಕ್ಷನ್ ಅನ್ನು ಉಪಯೋಗಿಸಿ ವೆಕ್ಟರ್ ನ ಉದ್ದವನ್ನು ಕಂಡುಹಿಡಿಯುವುದು
05:54 * apostrophe ಅನ್ನು ಉಪಯೋಗಿಸಿ ವೆಕ್ಟರ್ ಅಥವಾ ಮ್ಯಾಟ್ರಿಕ್ಸ್ ನ ಟ್ರಾನ್ಸ್ಪೋಸ್ ಅನ್ನು ಕಂಡುಹಿಡಿಯುವುದು
05:59 * 'ಕಾಲಮ್' ಗಳನ್ನು ಬೇರ್ಪಡಿಸಲು ಸ್ಪೇಸ್ ಅಥವಾ ಕಾಮಾ ವನ್ನು ಉಪಯೋಗಿಸಿ, 'ರೋ' ವನ್ನು ಬೇರ್ಪಡಿಸಲು ಸೆಮಿಕೋಲನ್ ಅನ್ನು ಉಪಯೋಗಿಸಿ ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡುವುದು
06:07 * size() ಫಂಕ್ಷನ್ ಅನ್ನು ಉಪಯೋಗಿಸಿ ಮ್ಯಾಟ್ರಿಕ್ಸ್ ನ ಗಾತ್ರವನ್ನು ಕಂಡುಹಿಡಿಯುವುದು- ಇವುಗಳನ್ನು ಕಲಿತಿದ್ದೇವೆ.
06:11 ಈ ಟ್ಯುಟೋರಿಯಲ್ ಅನ್ನು Free and Open Source Software in Science and Engineering Education (FOSSEE) ತಂಡದವರು ತಯಾರಿಸಿದ್ದಾರೆ.
06:18 FOSSEE ಕುರಿತಾದ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ಲಿಂಕ್ ಗಳಲ್ಲಿ ಪಡೆಯಬಹುದು.

http://fossee.in ಅಥವಾ http://scilab.in

06:28 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.
06:33 ಇದರ ಬಗ್ಗೆ ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.

spoken-tutorial.org/NMEICT-intro

06:43 ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನಪಟ್ಟಣ.
06:46 ಧನ್ಯವಾದಗಳು.

Contributors and Content Editors

Anjana310312, Sandhya.np14