Inkscape/C4/Mango-pattern-for-Textile-design/Kannada
From Script | Spoken-Tutorial
Revision as of 22:55, 13 August 2017 by NaveenBhat (Talk | contribs)
|
|
00:01 | Inkscape ನಲ್ಲಿ “Mango Pattern for textile design” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು ಮಾವಿನ ಕಾಯಿಯ ಪ್ಯಾಟರ್ನ್ ಅನ್ನು ರಚಿಸುವುದು, Pattern along Path ಅನ್ನು ಉಪಯೋಗಿಸಿ ವಿನ್ಯಾಸಗೊಳಿಸುವುದನ್ನು ಕಲಿಯುತ್ತೇವೆ. |
00:17 | ಈ ಟ್ಯುಟೋರಿಯಲ್ ನಲ್ಲಿ ನಾವು
Ubuntu Linux 12.04 ಒ ಎಸ್, Inkscape 0.91 ಆವೃತ್ತಿಯನ್ನು ಉಪಯೋಗಿಸಿದ್ದೇವೆ. |
00:26 | ಈಗ Inkscape ಅನ್ನು ತೆರೆಯೋಣ. |
00:28 | Bezier tool ಅನ್ನು ಆಯ್ಕೆ ಮಾಡಿಕೊಳ್ಳಿ. Tool Controls bar ನಲ್ಲಿ , Mode ಅನ್ನು Create Spiro path ಗೆ ಮತ್ತು Shape ಅನ್ನು Ellipse ಗೆ ಬದಲಿಸಿ. |
00:38 | ಈಗ ' ಕ್ಯಾನ್ವಾಸ್ ನ ಮೇಲೆ ಇಲ್ಲಿ ತೋರಿಸಿದಂತೆ ಮಾವಿನಕಾಯಿಯ ವಿನ್ಯಾಸವನ್ನು ಬರೆಯಿರಿ. ಇದು ಮಾವಿನಕಾಯಿಯ ವಿನ್ಯಾಸದಂತೆ ಕಾಣಬೇಕು. |
00:47 | ಈಗ Star tool ಅನ್ನು ಆರಿಸಿಕೊಳ್ಳಿ. |
00:50 | ಈಗ ಕ್ಯಾನ್ವಾಸ್ ನ ಮೇಲೆ ಒಂದು ನಕ್ಷತ್ರವನ್ನು ಬರೆಯಿರಿ ಮತ್ತು Selector tool ನ ಮೇಲೆ ಕ್ಲಿಕ್ ಮಾಡಿ. |
00:55 | Tool controls bar ನಲ್ಲಿ Width ಮತ್ತು Height ಅನ್ನು 30 ಎಂದು ಬದಲಿಸಿ. |
01:00 | ಕೆಂಪು ಬಣ್ಣಕ್ಕೆ ಬದಲಿಸಿ. |
01:03 | ಈಗ ನಾವು ನಕ್ಷತ್ರದ ರೋ ಪ್ಯಾಟರ್ನ್ ಅನ್ನು ರಚನೆ ಮಾಡಬೇಕು. |
01:07 | ಹಾಗೆ ಮಾಡಲು Edit menu ಗೆ ಹೋಗಿ, Clone ನ ಮೇಲೆ ಕ್ಲಿಕ್ ಮಾಡಿ ನಂತರ Create Tiled Clones ನ ಮೇಲೆ ಕ್ಲಿಕ್ ಮಾಡಿ. |
01:16 | Reset ನ ಮೇಲೆ ಕ್ಲಿಕ್ ಮಾಡಿ. |
01:18 | Rows ನ ಸಂಖ್ಯೆಯನ್ನು 1 ಎಂದು Columns ಸಂಖ್ಯೆಯನ್ನು 46 ಎಂದು ಬದಲಿಸಿ. |
01:24 | ಕಾಲಮ್ ಗಳ ಸಂಖ್ಯೆಯು ಮಾವಿನ ಕಾಯಿಯ ಆಕೃತಿಯ ಗಾತ್ರಕ್ಕನುಗುಣವಾಗಿ ಬದಲಾಗಬಹುದು. |
01:28 | Create ನ ಮೇಲೆ ಕ್ಲಿಕ್ ಮಾಡಿ. ಈಗ ರೋ ಪ್ಯಾಟರ್ನ್ ರಚನೆಯಾಗಿದೆ. |
01:33 | ಎಲ್ಲಾ ನಕ್ಷತ್ರಗಳನ್ನು ಆಯ್ಕೆ ಮಾಡಿಕೊಂಡು , ಅವುಗಳನ್ನು ಒಟ್ಟಿಗೆ ಸೇರಿಸಲು Ctrl + G ಯನ್ನು ಒತ್ತಿ. |
01:38 | ಈಗ ಮಾವಿನಕಾಯಿ ಮತ್ತು ನಕ್ಷತ್ರ ಎರಡೂ ಆಕೃತಿಗಳನ್ನೂ ಆಯ್ಕೆ ಮಾಡಿಕೊಳ್ಳಿ. |
01:42 | Extensions ಹೋಗಿ, Generate from Path ನ ಮೇಲೆ ಕ್ಲಿಕ್ ಮಾಡಿ ಮತ್ತು Pattern along Path ನ ಮೇಲೆ ಕ್ಲಿಕ್ ಮಾಡಿ. |
01:49 | Apply ನ ಮೇಲೆ ಕ್ಲಿಕ್ ಮಾಡಿ ಮತ್ತು ಡಯಲಾಗ್ ಬಾಕ್ಸ್ ಅನ್ನು ಮುಚ್ಚಿ. |
01:53 | ಆಕೃತಿಯ ಮೇಲೆ ನಕ್ಷತ್ರದ ಪ್ಯಾಟರ್ನ್ ಬಂದಿರುವುದನ್ನು ಗಮನಿಸಿ. |
01:57 | ಈಗ ಮಾವಿನ ಕಾಯಿಯ ಆಕೃತಿಯನ್ನು ಮತ್ತು ನಕ್ಷತ್ರದ ರೋ ವನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಡಿಲೀಟ್ ಮಾಡಿ. |
02:01 | ಈಗ ನಕ್ಷತ್ರದ ಪ್ಯಾಟರ್ನ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಅವುಗಳನ್ನು ನಕಲು ಮಾಡಲು Ctrl + D ಯನ್ನು ಒತ್ತಿ. |
02:07 | ಈಗ ನಕಲು ಮಾಡಿದ ಪ್ಯಾಟರ್ನ್ ಅನ್ನು ಆಯ್ಕೆ ಮಾಡಿಕೊಂಡು, Ctrl key ಯನ್ನು ಒತ್ತಿಕೊಂಡು ಅದರ ಗಾತ್ರವನ್ನು ಬದಲಿಸಿ. |
02:13 | ಇದನ್ನು ಮೂಲ ಪ್ಯಾಟರ್ನ್ ನ ಮಧ್ಯ ಭಾಗದಲ್ಲಿಡಿ. |
02:16 | ಈಗ ಮಾವಿನ ಕಾಯಿಯ ಒಳಭಾಗದಲ್ಲಿರುವ ಖಾಲಿ ಜಾಗದಲ್ಲಿ ಬೇರೆ ವಿನ್ಯಾಸವನ್ನು ತುಂಬಿಸೋಣ. |
02:21 | Bezier tool ಆಯ್ಕೆ ಮಾಡಿಕೊಳ್ಳಿ. ಇಲ್ಲಿ ತೋರಿಸಿದ ವಿನ್ಯಾಸವನ್ನು ಬಿಡಿಸಿರಿ. |
02:28 | ಈಗ Path menu ಗೆ ಹೋಗಿ Path Effects ಅನ್ನು ಆಯ್ಕೆ ಮಾಡಿಕೊಳ್ಳಿ. |
02:32 | Pattern along Path ನಡಿಯಲ್ಲಿ ನಾವು ಅನೇಕ ಆಯ್ಕೆಗಳನ್ನು ನೋಡಬಹುದು. |
02:37 | Pattern source ನಲ್ಲಿ ಮೊದಲ ಆಯ್ಕೆ ಯ ಮೇಲೆ ಅಂದರೆ Edit on-canvas ನ ಮೇಲೆ ಕ್ಲಿಕ್ ಮಾಡಿ. |
02:43 | ಕ್ಯಾನ್ವಾಸ್ ನ ಮೇಲ್ಭಾಗದ ಎಡಭಾಗದಲ್ಲಿ 4 node' ಗಳು ರಚನೆಯಾಗಿರುವುದನ್ನು ಗಮನಿಸಬಹುದು. |
02:48 | ನೋಡ್ ಗಳನ್ನು ಸ್ಪಷ್ಟವಾಗಿ ಕಾಣುವಂತೆ ಮಾಡಲು ಜೂಮ್ ಮಾಡೋಣ. ಇದನ್ನು ಪ್ಯಾಟರ್ನ್ ನ ಹತ್ತಿರಕ್ಕೆ ಸರಿಸಿ. |
02:54 | ಈಗ nodes ನ ಮೇಲೆ ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ. ಈಗ ಆಕೃತಿಯಲ್ಲಾಗುವ ಬದಲಾವಣೆಯನ್ನು ಗಮನಿಸಿ. |
03:00 | Selector tool ನ ಮೇಲೆ ಕ್ಲಿಕ್ ಮಾಡಿ ಈಗ Path menu ಗೆ ಹೋಗಿ ಮತ್ತು Object to Path ನ ಮೇಲೆ ಕ್ಲಿಕ್ ಮಾಡಿ. |
03:06 | ಇದನ್ನು ಗಾತ್ರವನ್ನು ಬದಲಿಸುವಾಗ ಆಕೃತಿಯಲ್ಲಿ ಬದಲಾವಣೆಯಾಗುವುದನ್ನು ತಡೆಯಲು ಮಾಡಬೇಕು. |
03:12 | ಇಲ್ಲಿ ತೋರಿಸಿದಂತೆ ಪ್ಯಾಟರ್ನ್ ನ ಗಾತ್ರವನ್ನು ಬದಲಿಸಿ. ಅದನ್ನು ನಕಲು ಮಾಡಿ ಮಾವಿನಕಾಯಿ ಆಕೃತಿಯ ಒಳಗೆ ಇಡಿ. |
03:20 | ಈಗ ಚಿಕ್ಕ ಮಾವಿನಕಾಯಿ ಪ್ಯಾಟರ್ನ್ ನ ಒಳಗಡೆ ಖಾಲಿ ಜಾಗವನ್ನು ತುಂಬಿಸೋಣ. |
03:25 | Star tool ನ ಮೇಲೆ ಕ್ಲಿಕ್ ಮಾಡಿ ಮತ್ತು ನಕ್ಷತ್ರವನ್ನು ಬಿಡಿಸಿ. |
03:28 | ಒಳ ಹ್ಯಾಂಡಲ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಆಕೃತಿಯನ್ನು ಈ ರೀತಿಯಾಗಿ ಪುನಃ ರಚಿಸಿ. ಬಣ್ಣವನ್ನು ನೀಲಿಗೆ ಬದಲಿಸಿ. |
03:34 | Selector tool ನ ಮೇಲೆ ಕ್ಲಿಕ್ ಮಾಡಿ ಆಕೃತಿಯ ಗಾತ್ರವನ್ನು ಬದಲಿಸಿ. |
03:38 | ಈ ಆಕೃತಿಯನ್ನು ನಕಲು ಮಾಡಿ ಮತ್ತು ಚಿಕ್ಕ ಮಾವಿನಕಾಯಿಯ ಪ್ಯಾಟರ್ನ್ ನ ಒಳಭಾಗದಲ್ಲಿ ತುಂಬಿ. |
03:47 | ಎಲ್ಲಾ ಒಬ್ಜೆಕ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳಲು Ctrl + A ಯನ್ನು ಒತ್ತಿ. ಮತ್ತು ಅವುಗಳನ್ನು ಒಟ್ಟಿಗೆ ಸೇರಿಸಲು Ctrl + G ಯನ್ನು ಒತ್ತಿ. |
03:53 | ಪ್ಯಾಟರ್ನ್ ನ ಗಾತ್ರವನ್ನು ಬದಲಿಸಿ ಕ್ಯಾನ್ವಾಸ್ ನ ಮೇಲ್ಭಾಗದ ಎಡ ಮೂಲೆಯಲ್ಲಿಡಿ. |
03:58 | ನಾವು ಈ ಪ್ಯಾಟರ್ನ್ ಅನ್ನು ಕ್ಲೋನಿಂಗ್ ಅನ್ನು ಉಪಯೋಗಿಸಿ ಪುನರಾವರ್ತಿಸಬಹುದು. Edit menu ಗೆ ಹೋಗಿ, Clone ನ ಮೇಲೆ ಕ್ಲಿಕ್ ಮಾಡಿ ಮತ್ತು Create Tiled clones ನ ಮೇಲೆ ಕ್ಲಿಕ್ ಮಾಡಿ. |
04:07 | Symmetry tab ನಡಿಯಲ್ಲಿ, ಮೋಡ್ Simple translation ಆಗಿರಲೇ ಬೇಕು. |
04:12 | ರೋ ಗಳ ಸಂಖ್ಯೆಯನ್ನು 8 ಎಂದೂ ಮತ್ತು ಕಾಲಮ್ ಗಳ ಸಂಖ್ಯೆಯನ್ನು 5 ಎಂದೂ ಬದಲಿಸಿ. |
04:17 | Shift tab ನ ಮೇಲೆ ಕ್ಲಿಕ್ ಮಾಡಿ ಮತ್ತುPer column ನ Shift X ಬೆಲೆಯನ್ನು 30 ಎಂದು ಬದಲಿಸಿ. |
04:24 | Create ಬಟನ್ ನ ಮೇಲೆ ಕ್ಲಿಕ್ ಮಾಡಿ. ಈಗ ಕ್ಯಾನ್ವಾಸ್ ನ ಮೇಲೆ ನಕಲುಗಳು ರಚನೆಯಾಗಿವೆ. |
04:32 | ಈ ಪ್ಯಾಟರ್ನ್ ಕುರ್ತಾ ದ ಮೇಲೆ ಹೀಗೆ ಕಾಣಿಸುತ್ತದೆ. |
04:35 | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಮಾವಿನ ಕಾಯಿಯ ಪ್ಯಾಟರ್ನ್ ಅನ್ನುರಚಿಸುವುದು, Pattern along Path ಅನ್ನು ಉಪಯೋಗಿಸಿ ವಿನ್ಯಾಸಗೊಳಿಸುವುದನ್ನು ಕಲಿಯುತ್ತೇವೆ. |
04:44 | ಇಲ್ಲಿ ನಿಮಗಾಗಿ ಅಸೈನ್ ಮೆಂಟ್ ಇದೆ. ಎಲೆಯ ಪ್ಯಾಟರ್ನ್ ಅನ್ನು ರಚನೆ ಮಾಡಿ. |
04:47 | ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಬೇಕು. |
04:52 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ. |
04:58 | ಸ್ಪೋಕನ್ ಟ್ಯುಟೋರಿಯಲ್ ತಂಡವು :ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
05:07 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. ಇದರ ಕುರಿತು ಹೆಚ್ಚಿನ ವಿವರಗಳು ಈ ಲಿಂಕ್ ನಲ್ಲಿ ದೊರೆಯುತ್ತದೆ. |
05:16 | ಧ್ವನಿ ಮತ್ತು ಅನುವಾದ ನವೀನ್ ಭಟ್ಟ ಉಪ್ಪಿನ ಪಟ್ಟಣ. ಧನ್ಯವಾದಗಳು. |