Inkscape/C4/Warli-art-for-Textle-design/Kannada
From Script | Spoken-Tutorial
Revision as of 22:03, 13 August 2017 by NaveenBhat (Talk | contribs)
|
|
00:01 | Inkscape ನಲ್ಲಿ Warli art for Textile design ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ಬಾರ್ಡರ್ ಗೆ ವಾರ್ಲಿ ಪ್ಯಾಟರ್ನ್ಸ್ ವಿನ್ಯಾಸವನ್ನು ರಚಿಸುವುದು ಮತ್ತು ಕ್ಲೋನಿಂಗ್ ಅನ್ನು ಉಪಯೋಗಿಸಿ ಪ್ಯಾಟರ್ನ್ ಅನ್ನು ಪುನರಾವರ್ತಿಸುವುದನ್ನು ಕಲಿಯುತ್ತೇವೆ. |
00:17 | ಈ ಟ್ಯುಟೋರಿಯಲ್ ನಲ್ಲಿ ನಾವು
Ubuntu Linux 12.04 ಒ ಎಸ್, Inkscape 0.91 ಆವೃತ್ತಿಯನ್ನು ಉಪಯೋಗಿಸಿದ್ದೇವೆ. |
00:27 | Inkscape ಅನ್ನು ಓಪನ್ ಮಾಡೋಣ. ಮೊದಲು ವಾರ್ಲಿ ಪ್ಯಾಟರ್ನ್ ಅನ್ನು ವಿನ್ಯಾಸ ಗೊಳಿಸೋಣ. |
00:32 | File ಗೆ ಹೋಗಿ Document Properties ಮೇಲೆ ಕ್ಲಿಕ್ ಮಾಡಿ. Orientation ಅನ್ನು Landscape ಗೆ ಬದಲಿಸಿ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ. |
00:42 | Rectangle tool ಅನ್ನು ಆಯ್ಕೆ ಮಾಡಿಕೊಳ್ಳಿ, ಪೂರ್ಣ ಕ್ಯಾನ್ವಾಸ್ ಮುಚ್ಚುವಂತೆ ಆಯತವನ್ನು ರಚಿಸಿ ಮತ್ತು ನೀಲಿ ಬಣ್ಣವನ್ನು ತುಂಬಿ. |
00:53 | Ellipse tool ನ ಮೇಲೆ ಕ್ಲಿಕ್ ಮಾಡಿ. ಕ್ಯಾನ್ವಾಸ್ ನ ಹೊರಗೆ ಒಂದು ವೃತ್ತವನ್ನು ರಚಿಸಿ. ನಂತರ Selector tool ನ ಮೇಲೆ ಕ್ಲಿಕ್ ಮಾಡಿ. |
01:02 | 'ಟೂಲ್ ಕಂಟ್ರೋಲ್ಸ್ ಬಾರ್' ನಲ್ಲಿ Width ಮತ್ತು Height ಗಳನ್ನು 15 ಎಂದು ಬದಲಿಸಿ. |
01:08 | ಬಣ್ಣವನ್ನು ಕಿತ್ತಳೆ ಬಣ್ಣಕ್ಕೆ ಬದಲಿಸಿ. ಅದನ್ನು ಇಲ್ಲಿ ತೋರಿಸಿದಂತೆ ಕ್ಯಾನ್ವಾಸ್ ನ ಕೆಳಭಾಗಕ್ಕೆ ಸರಿಸಿ. |
01:15 | ವೃತ್ತವನ್ನು ನಕಲು ಮಾಡಲು Ctrl + D ಯನ್ನು ಒತ್ತಿ. |
01:19 | 'ಟೂಲ್ ಕಂಟ್ರೋಲ್ಸ್ ಬಾರ್' ನಲ್ಲಿ, Width ಮತ್ತು Height ಗಳನ್ನು 7 ಕ್ಕೆ ಬದಲಿಸಿ. |
01:25 | ನಕಲು ವೃತ್ತವನ್ನು ಅಸಲಿ ವೃತ್ತದ ಕೆಳ ಎಡಭಾಗಕ್ಕೆ ಚಲಿಸಿ. |
01:31 | ಇದು ವಾರ್ಲಿ ಯ ತಲೆಯ ಭಾಗ. |
01:34 | ನಂತರ Object ಮೆನ್ಯುಗೆ ಹೋಗಿ ಮತ್ತು Symbols ಆಯ್ಕೆಯ ಮೇಲೆ ಕ್ಲಿಕ್ ಮಾಡಿ. Symbol set ಡ್ರಾಪ್ ಡೌನ್ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. Flow Chart Shapes ಅನ್ನು ಆಯ್ಕೆ ಮಾಡಿಕೊಳ್ಳಿ. |
01:46 | ಒಂದಷ್ಟು ಜ್ಯಾಮಿತಿಯ ಆಕೃತಿಗಳು ಕಾಣುತ್ತವೆ. ಅದರಲ್ಲಿ ತ್ರಿಕೋನಾಕೃತಿಯ ಮೇಲೆ ಕ್ಲಿಕ್ ಮಾಡಿ ಕ್ಯಾನ್ವಾಸ್ ನ ಮೇಲೆ ಡ್ರ್ಯಾಗ್ ಮಾಡಿ.
ಬಣ್ಣವನ್ನು ಕಿತ್ತಳೆ ಬಣ್ಣಕ್ಕೆ ಬದಲಿಸಿ. Stroke ಅನ್ನು ತೆಗೆದು ಹಾಕಿ. |
02:00 | 'ಟೂಲ್ ಕಂಟ್ರೋಲ್ಸ್ ಬಾರ್' ನಲ್ಲಿ ಅಗಲ ಮತ್ತು ಎತ್ತರವನ್ನು 20 ಕ್ಕೆ ಬದಲಿಸಿ. |
02:07 | ತ್ರಿಕೋನವನ್ನು ನಕಲು ಮಾಡಲು Ctrl + D ಯನ್ನು ಒತ್ತಿ, ಹೊರಳಿಸಲು V ಯನ್ನು ಒತ್ತಿ. |
02:14 | ತ್ರಿಕೋನವನ್ನು ಇಲ್ಲಿ ತೋರಿಸಿದಂತೆ ತಲೆಯ ಕೆಳಭಾಗದಲ್ಲಿ ಜೋಡಿಸಿ. |
02:21 | ಇದು ವಾರ್ಲಿ ಚಿತ್ರದ ದೇಹ. |
02:24 | Rectangle tool ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ತಲೆ ಮತ್ತು ದೇಹದ ಮಧ್ಯ ಭಾಗದಲ್ಲಿ ಒಂದು ಗೆರೆಯನ್ನು ಎಳೆಯಿರಿ. |
02:30 | ಈಗ ಚಿತ್ರದ ಕುತ್ತಿಗೆಯನ್ನು ಬರೆದಿದ್ದೇವೆ. |
02:33 | ಈಗ ಕೈ ಮತ್ತು ಕಾಲುಗಳನ್ನು ಬರೆಯೋಣ. ಇದಕ್ಕಾಗಿ ನಾವು Bezier tool ಟೂಲ್ ಅನ್ನು ಆರಿಸಿಕೊಳ್ಳಬೇಕು. |
02:41 | ಇಲ್ಲಿ ತೋರಿಸಿದಂತೆ ಕೈ ಮತ್ತು ಕಾಲುಗಳನ್ನು ಬರೆಯಿರಿ. |
02:47 | ಎರಡೂ ಕೈ ಮತ್ತು ಕಾಲುಗಳನ್ನು ಆಯ್ಕೆ ಮಾಡಿಕೊಳ್ಳಿ. Fill and Stroke ನಲ್ಲಿ Picker tool ಅನ್ನು ಆರಿಸಿಕೊಂಡು ವಾರ್ಲಿ ಆರ್ಟ್ ನ ದೇಹದಿಂದ ಕಿತ್ತಳೆ ಬಣ್ಣವನ್ನು ಆರಿಸಿಕೊಳ್ಳಿ. |
02:59 | Stroke Width ಅನ್ನು 2 ಕ್ಕೆ ಬದಲಿಸಿ. |
03:02 | ಈಗ ಎಲ್ಲಾ ಎಲಿಮೆಂಟ್ ಗಳನ್ನು ಆರಿಸಿಕೊಂಡು ಅವುಗಳನ್ನು ಒಟ್ಟುಗೂಡಿಸಲು Ctrl + G ಯನ್ನು ಒತ್ತಿ. |
03:09 | ಈಗ ವಾರ್ಲಿ ಚಿತ್ರವು ಸಿದ್ಧವಾಗಿದೆ. ಈ ವಾರ್ಲಿ ಚಿತ್ರವನ್ನು ಉಪಯೋಗಿಸಿ ಈಗ ಒಂದು ವೃತ್ತಾಕಾರದ ವಿನ್ಯಾಸವನ್ನು ಬರೆಯೋಣ. |
03:17 | ನಾನು ಮುಂದೆ ಹೋಗುವ ಮೊದಲು ಈ ಚಿತ್ರದ ಒಂದು ನಕಲನ್ನು ಒಂದು ಬದಿಯಲ್ಲಿ ಇಟ್ಟುಕೊಳ್ಳುತ್ತೇನೆ. |
03:22 | ಈಗ ಅಸಲಿ ವಾರ್ಲಿ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಿ. ‘ಆಂಕರ್ ಪಾಯಿಂಟ್’ ಕಾಣುವಂತೆ ಮಾಡಲು ಇನ್ನೊಮ್ಮೆ ಚಿತ್ರವನ್ನು ಕ್ಲಿಕ್ ಮಾಡಿ. |
03:30 | ‘ಆಂಕರ್ ಪಾಯಿಂಟ್’ನ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ತೋರಿಸಿದಂತೆ ಕೆಳಕ್ಕೆ ಚಲಿಸಿ. |
03:36 | ಈಗ Edit ಹೋಗಿ, Clone ನ ಮೇಲೆ, ನಂತರ Create Tiled Clones ನ ಮೇಲೆ ಕ್ಲಿಕ್ ಮಾಡಿ. |
03:42 | ಡಯಲಾಗ್ ಬಾಕ್ಸ್ ನಲ್ಲಿ Symmetry tab ನ ಅಡಿಯಲ್ಲಿ ಡ್ರಾಪ್ ಡೌನ್ ಮೆನ್ಯುವಿನಲ್ಲಿ Simple translation ಆಯ್ಕೆಯನ್ನು ಆರಿಸಿಕೊಳ್ಳಿ. |
03:51 | ನಂತರ Shift ಟ್ಯಾಬ್ ಗೆ ಹೋಗಿ, Per column ಆಯ್ಕೆಯಡಿಯಲ್ಲಿ X ನ ವ್ಯಾಲ್ಯೂಅನ್ನು ಮೈನಸ್100 ಎಂದು ಬದಲಿಸಿ. |
03:58 | ನಂತರ Rotation ಟ್ಯಾಬ್ ಗೆ ಹೋಗಿ, ಕೋನದ Per row ಮತ್ತು Per column ಪ್ಯಾರಾಮೀಟರ್ ಗಳನ್ನು 30 ಕ್ಕೆ ಬದಲಿಸಿ. |
04:07 | ಕೆಳಭಾಗದಲ್ಲಿ row ಗಳ ಸಂಖ್ಯೆ 1 ಆಗಿರಲಿ. ಮತ್ತು column ಸಂಖ್ಯೆಯನ್ನು 12 ಎಂದು ಬದಲಿಸಿ. |
04:14 | ನಂತರ Create ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:16 | ಕ್ಯಾನ್ವಾಸ್ ನ ಮೇಲೆ ರಚನೆಯಾದ ವೃತ್ತಾಕಾರದ ಪ್ಯಾಟರ್ನ್ ಅನ್ನು ಗಮನಿಸಿ. |
04:21 | ಇನ್ನೂ ಬೇರೆ ಆಯ್ಕೆಗಳನ್ನು ನೋಡೋಣ. |
04:24 | Rotation ಟ್ಯಾಬ್ ನಡಿಯಲ್ಲಿ, ಕೋನದ Per row ಮತ್ತು Per column ಪ್ಯಾರಾಮೀಟರ್ ಗಳನ್ನು 10 ಎಂದು ಬದಲಿಸಿ. Create ನ ಮೇಲೆ ಕ್ಲಿಕ್ ಮಾಡಿ. |
04:33 | ಕ್ಯಾನ್ವಾಸ್ ನ ಮೇಲೆ ರಚನೆಯಾದ ಪ್ಯಾಟರ್ನ್ ಅನ್ನು ಗಮನಿಸಿ. ಇದನ್ನು ಸಂಪೂರ್ಣವಾದ ವೃತ್ತಾಕಾರದ ಪ್ಯಾಟರ್ನ್ ಆಗಿ ಮಾಡಲು Rows ಅನ್ನು 40 ಎಂದು ಬದಲಿಸಿ. |
04:41 | Create ನ ಮೇಲೆ ಕ್ಲಿಕ್ ಮಾಡಿ. ಕ್ಯಾನ್ವಾಸ್ ನಲ್ಲಾಗುವ ಬದಲಾವಣೆಯನ್ನು ಗಮನಿಸಿ. |
04:46 | ಇದೇ ರೀತಿಯಲ್ಲಿ ನೀವು ಬೇರೆ ಬೇರೆ ಕೋನದಲ್ಲಿ ಪ್ಯಾಟರ್ನ್ ಅನ್ನು ಪಡೆಯಲು Rotation ಪ್ಯಾರಾಮೀಟರ್ ಗಳನ್ನು ಬದಲಿಸಿ. |
04:53 | ವೃತ್ತಾಕಾರದ ಪ್ಯಾಟರ್ನ್ ಅನ್ನು ಆಯ್ಕೆ ಮಾಡಿಕೊಂಡು ಎಲ್ಲವನ್ನೂ ಒಟ್ಟುಗೂಡಿಸಲು Ctrl + G ಯನ್ನು ಒತ್ತಿ. |
04:59 | ಈಗ ನಾವು ನಮ್ಮ ಕ್ಯಾನ್ವಾಸ್ ನಲ್ಲಿ ಸುಂದರವಾದ ವಾರ್ಲಿ ಕಲೆಯನ್ನುಹೊಂದಿದ್ದೇವೆ. |
05:04 | ಇದನ್ನು ಈ ರೀತಿ ಒಂದು ಕಡೆ ಸರಿಸೋಣ. |
05:08 | ಈಗ ಕೆಲವು ಬೇರೆ ಆಯ್ಕೆಗಳನ್ನು ಪ್ರಯತ್ನಿಸೋಣ. |
05:11 | Create Spirals ಟೂಲ್ ಅನ್ನು ಉಪಯೋಗಿಸಿ, ಕ್ಯಾನ್ವಾಸ್ ನ ಮೇಲೆ ಒಂದು ದೊಡ್ಡದಾದ ಸುರುಳಿಯನ್ನು ಇಲ್ಲಿ ತೋರಿಸಿದಂತೆ ಬರೆಯಿರಿ. |
05:20 | Selector tool ಅನ್ನು ಆರಿಸಿಕೊಳ್ಳಿ, ವಾರ್ಲಿ ಚಿತ್ರವನ್ನು ಆರಿಸಿಕೊಳ್ಳಿ ಮತ್ತು ಅದನ್ನು ಸುರುಳಿಯ ಮಧ್ಯದಲ್ಲಿ ಈ ರೀತಿಯಾಗಿ ಇಡಿ. |
05:27 | ಈಗ 'ಟೂಲ್ ಕಂಟ್ರೋಲ್ಸ್ ಬಾರ್'ನಲ್ಲಿ Raise to top ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
05:32 | ನಂತರ ಸುರುಳಿಯನ್ನೂ ಆಯ್ಕೆ ಮಾಡಿಕೊಳ್ಳಿ. |
05:35 | Extensions menu ನ ಮೇಲೆ ಕ್ಲಿಕ್ ಮತ್ತು Generate from path ಆಯ್ಕೆಯನ್ನು ಆರಿಸಿಕೊಳ್ಳಿ. |
05:41 | ಈಗ ಬರುವ ಸಬ್ ಮೆನ್ಯುವಿನಲ್ಲಿ Scatter ಅನ್ನು ಆರಿಸಿಕೊಳ್ಳಿ. |
05:45 | ಸ್ಕ್ರೀನ್ ನ ಮೇಲೆ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. Follow path orientation ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. |
05:54 | Space between copies ನಲ್ಲಿ ನಾವು 5 ನ್ನು ಹಾಕೋಣ. |
05:58 | Original pattern will be ಇದು Moved ಎಂದೂ ಮತ್ತು Duplicate the pattern before deformation ಚೆಕ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
06:08 | Apply ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ. |
06:12 | ಈಗ ಸುರಳಿ ಪಥವು ಕಾಣುವಂತೆ ಮಾಡಲು ಸುರಳಿಯಾಕಾರದ ವಾರ್ಲಿ ಪ್ಯಾಟರ್ನ್ ಒಂದು ಕಡೆ ಸರಿಸೋಣ. ಈಗ ಸುರಳಿ ಪಥವನ್ನು ಆಯ್ಕೆ ಮಾಡಿಕೊಂಡು ಅದನ್ನು ಡಿಲೀಟ್ ಮಾಡೋಣ. |
06:21 | ಈ ರೀತಿಯಲ್ಲಿ Inkscape ನಲ್ಲಿ ಸುಂದರವಾದ ಸುರುಳಿಯಾಕಾರದ ಪ್ಯಾಟರ್ನ್ ಅನ್ನು ಬಿಡಿಸಬಹುದು. |
06:26 | ಇದೇ ರೀತಿಯಲ್ಲಿ ಇನ್ನೂ ಅನೇಕ ಸುಂದರವಾದ ವಾರ್ಲಿ ಪ್ಯಾಟರ್ನ್ ಗಳನ್ನು ರಚಿಸಬಹುದು. |
06:31 | ಈಗ ಬಾರ್ಡರ್ ಅನ್ನು ರಚಿಸುವುದು ಹೇಗೆ ಎಂದು ಕಲಿಯೋಣ. |
06:35 | Object ಮೆನ್ಯುಗೆ ಹೋಗಿ ಮತ್ತು Symbols ನ ಮೇಲೆ ಕ್ಲಿಕ್ ಮಾಡಿ. ತ್ರಿಕೋನಾಕೃತಿಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಕ್ಯಾನ್ವಾಸ್ ನ ಮೇಲೆ ಡ್ರ್ಯಾಗ್ ಮಾಡಿ. |
06:42 | 'ಟೂಲ್ ಕಂಟ್ರೋಲ್ಸ್ ಬಾರ್'ನಲ್ಲಿ, Width ಮತ್ತು Height ಗಳನ್ನು 30 ಎಂದು ಬದಲಿಸಿ. |
06:47 | ಈಗ ಕ್ಯಾನ್ವಾಸ್ ನ ಮೇಲ್ಭಾಗದ ಎಡಭಾಗಕ್ಕೆ ಈ ತ್ರಿಕೋನವನ್ನು ಸರಿಸಿ. |
06:52 | ನಾನು ತ್ರಿಕೋನವನ್ನು ಉಪಯೋಗಿಸಿ ಸಾಲು ವಿನ್ಯಾಸವನ್ನು ರಚಿಸಲು ಬಯಸುತ್ತೇನೆ. |
06:56 | Edit ಗೆ ಹೋಗಿ Clone ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Create Tiled Clones ನ ಮೇಲೆ ಕ್ಲಿಕ್ ಮಾಡಿ. ಹಳೆಯ ಎಲ್ಲಾ ಸೆಟ್ಟಿಂಗ್ ಗಳನ್ನು ಇಲ್ಲಿ ನೋಡಬಹುದು. |
07:06 | Rotation ಟ್ಯಾಬ್ ನಡಿಯಲ್ಲಿ, Per Row ಮತ್ತು Per Column ಗಳ Angle ಪ್ಯಾರಾಮೀಟರ್ ಅನ್ನು 0 ಗೆ ಬದಲಿಸಿ. |
07:13 | Shift ಟ್ಯಾಬ್ ನಡಿಯಲ್ಲಿ Per column ಆಯ್ಕೆಯಲ್ಲಿ X ನ ವ್ಯಾಲ್ಯೂವನ್ನು 0 ಗೆ ಬದಲಿಸಿ. |
07:19 | ಕೊನೆಯಲ್ಲಿ ಕೆಳಭಾಗದಲ್ಲಿ ಇಲ್ಲಿ ತೋರಿಸಿದಂತೆ Column ಅನ್ನು 35 ಎಂದು ಬದಲಿಸಿ. |
07:27 | ಕ್ಯಾನ್ವಾಸ್ ನ ಮೇಲೆ ರಚನೆಯಾದ ಸಾಲು ವಿನ್ಯಾಸವನ್ನು ಗಮನಿಸಿ. |
07:31 | ಎಲ್ಲವನ್ನೂ ಗುಂಪಾಗಿಸಲು, ಎಲ್ಲಾ ತ್ರಿಕೋನಗಳನ್ನು ಆಯ್ಕೆ ಮಾಡಿಕೊಂಡು Ctrl + G ಯನ್ನು ಒತ್ತಿ. |
07:37 | ತ್ರಿಕೋನಗಳನ್ನು ನಕಲು ಮಾಡಲು Ctrl + D ಯನ್ನು ಒತ್ತಿ ಮತ್ತು ಹೊರಳಿಸಲು V ಯನ್ನು ಒತ್ತಿ. |
07:43 | ಈಗ ಈ ಪ್ಯಾಟರ್ನ್ ಅನ್ನು ಕ್ಯಾನ್ವಾಸ್ ನ ಕೆಳಭಾಗಕ್ಕೆ ತನ್ನಿ. |
07:48 | ನಮ್ಮ ವಾರ್ಲಿ ಪ್ಯಾಟರ್ನ್ ಈಗ ಸಿದ್ಧವಾಗಿದೆ. ನಾವು ಈ ಪ್ಯಾಟರ್ನ್ ಗಳನ್ನು ನಮ್ಮ ಹಲವಾರು ಟೆಕ್ಸ್ಟೈಲ್ ವಿನ್ಯಾಸದಲ್ಲಿ ಉಪಯೋಗಿಸಬಹುದು. |
07:55 | ಕುರ್ತಿಯ ಮೇಲೆ ಅದು ಈ ರೀತಿ ಕಾಣಿಸುತ್ತದೆ. |
07:58 | ಇದನ್ನು ನಮ್ಮ ದಿಂಬಿನ ಕವರ್ ಮೇಲೆ ಸಹ ಉಪಯೋಗಿಸಬಹುದು. |
08:02 | ಮತ್ತು ಈ ವಾರ್ಲಿ ಕಲೆಯು ಬಟ್ಟೆಯ ಚೀಲದ ಮೇಲೂ ಚೆನ್ನಾಗಿ ಕಾಣಿಸುತ್ತದೆ. |
08:06 | ಇದೇ ರೀತಿ ನೀವು ವಾರ್ಲಿ ಆರ್ಟ್ ಅನ್ನು ಉಪಯೋಗಿಸಿ ಅನೇಕ ಸುಂದರವಾದ ಟೆಕ್ಸ್ಟೈಲ್ ವಿನ್ಯಾಸಗಳನ್ನು ರಚಿಸಬಹುದು. |
08:13 | ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಾರಾಂಶವನ್ನು ನೋಡೋಣ. |
08:18 | ಈ ಟ್ಯುಟೋರಿಯಲ್ ನಲ್ಲಿ ಬಾರ್ಡರ್ ಗೆ ವಾರ್ಲಿ ಪ್ಯಾಟರ್ನ್ ವಿನ್ಯಾಸವನ್ನು ರಚಿಸುವುದು ಮತ್ತು ಕ್ಲೋನಿಂಗ್ ಅನ್ನು ಉಪಯೋಗಿಸಿ ಪ್ಯಾಟರ್ನ್ ಅನ್ನು ಪುನರಾವರ್ತಿಸುವುದನ್ನು ಕಲಿತಿದ್ದೇವೆ. |
08:27 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್. ನವಿಲಿನ ಪ್ಯಾಟರ್ನ್ ನ ವಿನ್ಯಾಸವನ್ನು ರಚಿಸಿ. |
08:33 | ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು. |
08:37 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಅನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ |
08:43 | ಸ್ಪೋಕನ್ ಟ್ಯುಟೋರಿಯಲ್ ತಂಡವು :ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
08:53 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ.
ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ ಇದರ ಕುರಿತು ಹೆಚ್ಚಿನ ವಿವರಗಳು ಈ ಲಿಂಕ್ ನಲ್ಲಿ ದೊರೆಯುತ್ತದೆ. |
09:03 | ಧ್ವನಿ ಮತ್ತು ಅನುವಾದ ನವೀನ್ ಭಟ್ಟ ಉಪ್ಪಿನ ಪಟ್ಟಣ. ಧನ್ಯವಾದಗಳು. |