Inkscape/C4/Trace-bitmaps-in-Inkscape/Kannada

From Script | Spoken-Tutorial
Revision as of 12:53, 13 August 2017 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 Inkscape ನಲ್ಲಿ “Trace bitmap ” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು ರಾಸ್ಟರ್ ಮತ್ತು ವೆಕ್ಟರ್ ಇಮೇಜ್ ಗಳ ನಡುವಿನ ವ್ಯತ್ಯಾಸ, ಅನೇಕ ರಾಸ್ಟರ್ ಮತ್ತು ವೆಕ್ಟರ್ ಫಾರ್ಮ್ಯಾಟ್ ಗಳು, ಮತ್ತು ರಾಸ್ಟರ್ ಇಮೇಜ್ ಗಳನ್ನು ವೆಕ್ಟರ್ ಗೆ ಪರಿವರ್ತಿಸುವುದು ಇವುಗಳ ಕುರಿತು ಕಲಿಯುತ್ತೇವೆ.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು Ubuntu Linux 12.04 ಒ ಎಸ್ ಮತ್ತು , Inkscape ಆವೃತ್ತಿ 0.91 ಗಳನ್ನು ಉಪಯೋಗಿಸಿದ್ದೇನೆ.
00:29 ಈ ಟ್ಯುಟೋರಿಯಲ್ ನಲ್ಲಿ ಉದಾಹರಣೆಗಾಗಿ ಉಪಯೋಗಿಸಿದ ಇಮೇಜ್ ಗಳನ್ನು Code Files ಲಿಂಕ್ ನಲ್ಲಿ ಕೊಡಲಾಗಿದೆ.
00:36 ಟ್ಯುಟೋರಿಯಲ್ ಅನ್ನು ಇಲ್ಲಿಯೇ ನಿಲ್ಲಿಸಿಟ್ಟು ಆ ಇಮೇಜ್ ಗಳನ್ನು ನಿಮ್ಮ ಸಿಸ್ಟಮ್ ಗೆ ಡೌನ್ಲೋಡ್ ಮಾಡಿಕೊಳ್ಳಿ.
00:42 ಇಲ್ಲಿ ನನ್ನ desktop ನಲ್ಲಿ ಎರಡು ಇಮೇಜ್ ಗಳಿವೆ.
00:45 Linux.png ಇದು ರಾಸ್ಟರ್ ಇಮೇಜ್ ಮತ್ತು Linux.pdf ಇದು ವೆಕ್ಟರ್ ಇಮೇಜ್.
00:51 ನಾನು ಅವುಗಳನ್ನು ತೆರೆಯುತ್ತೇನೆ.
00:53 ಎರಡೂ ಒಂದೇ ರೀತಿಯಾಗಿ ಕಾಣಬಹುದು. ನಾವು ಇಮೇಜ್ ಗಳನ್ನು ಜೂಂ ಮಾಡಿ ಮಾತ್ರ ವ್ಯತ್ಯಾಸವನ್ನು ತಿಳಿಯಬಹುದು. ಈಗ ಅದನ್ನು ಮಾಡೋಣ.
01:02 ಈಗ ಮೊದಲನೆಯ ಇಮೇಜ್ ಪಿಕ್ಸಲೇಟೆಡ್ ಆದಂತೆ ಕಾಣಿಸುತ್ತದೆ ಏಕೆಂದರೆ ರಾಸ್ಟರ್ ಇಮೇಜ್ ಗಳು ಪಿಕ್ಸಲ್ ಗಳಿಂದ ಮಾಡಲ್ಪಟ್ಟಿರುತ್ತದೆ.
01:09 ಆದರೆ ಎರಡನೇ ಇಮೇಜ್ ಪಿಕ್ಸಲೇಟೆಡ್ ಆದಂತೆ ಕಾಣಿಸುವುದಿಲ್ಲ ಏಕೆಂಡರೆ ವೆಕ್ಟರ್ ಇಮೇಜ್ ಗಳು ಪಥಗಳಿಂದ ಮಾಡಲ್ಪಟ್ಟಿರುತ್ತವೆ.
01:15 ಕೆಲವು ರಾಸ್ಟರ್ ಇಮೇಜ್ ಫಾರ್ಮ್ಯಾಟ್ ಗಳು : JPEG, PNG,TIFF,GIF, BMP ಮುಂತಾದವು.
01:27 ಕೆಲವು ವೆಕ್ಟರ್ ಇಮೇಜ್ ಫಾರ್ಮ್ಯಾಟ್ ಗಳು : SVG,AI, CGM ಮುಂತಾದವು.
01:34 ಕೆಲವು ಇಮೇಜ್ ಫಾರ್ಮ್ಯಾಟ್ ಗಳು ವೆಕ್ಟರ್ ಮತ್ತು ರಾಸ್ಟರ್ ಎರಡೂ ಆಗಿರುತ್ತವೆ. ಅವು :

PDF, EPS, SWF

01:43 ಈಗ ರಾಸ್ಟರ್ ಇಮೇಜ್ ಅನ್ನು ವೆಕ್ಟರ್ ಆಗಿ ಪರಿವರ್ತಿಸುವುದು ಹೇಗೆಂದು ಕಲಿಯೋಣ.
01:47 Inkscape ಅನ್ನು ತೆರೆಯಿರಿ. ನಾವು ರಾಸ್ಟರ್ ಇಮೇಜ್ ಅನ್ನು ಇಂಪೋರ್ಟ್ ಮಾಡಿಕೊಳ್ಳೋಣ.
01:52 File ಹೋಗಿ ಮತ್ತು Import ನ ಮೇಲೆ ಕ್ಲಿಕ್ ಮಾಡಿ.
01:57 ಈಗ Path menu ಗೆ ಹೋಗಿ Trace Bitmap ನ ಮೇಲೆ ಕ್ಲಿಕ್ ಮಾಡಿ.
02:02 ಒಂದು ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. Mode ಟ್ಯಾಬ್ ನಡಿಯಲ್ಲಿ ನಾವು ಅನೇಕ ಆಯ್ಕೆಗಳನ್ನು ನೋಡಬಹುದು.
02:08 ಈಮೇಜ್ ಸೆಲೆಕ್ಟ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಡಿಫಾಲ್ಟ್ ಆಗಿ Brightness cutoff ಆಯ್ಕೆಯು ಆರಿಸಿಕೊಳ್ಳಲ್ಪಟ್ಟಿರುತ್ತದೆ.
02:14 Preview ನಡಿಯಲ್ಲಿ Live Preview ಆಯ್ಕೆಯನ್ನು ಚೆಕ್ ಮಾಡಿ, ಬದಲಾವಣೆಯನ್ನು ಗಮನಿಸಿ.
02:20 Preview ವಿಂಡೋ ನಲ್ಲಿ Brightness cutoff ಪ್ರಕಾಶದಲ್ಲಿ ವ್ಯತ್ಯಾಸವನ್ನು ಕೊಡುತ್ತದೆ.
02:26 ಈಗ ಎರಡನೆಯ ಆಯ್ಕೆ ಅಂದರೆ Edge detection ನ ಮೇಲೆ ಕ್ಲಿಕ್ ಮಾಡಿ.
02:31 ಹೆಸರೇ ಹೇಳುವಂತೆ ಅದು ತುದಿಗಳನ್ನು ಗುರ್ತಿಸುತ್ತದೆ.
02:35 Color quantization ಇದು ಕಡಿಮೆಯಾದ ಬಣ್ಣಗಳ ಬೌಂಡರಿಗಳನ್ನು ಹುಡುಕುತ್ತದೆ.
02:41 Invert image ಇದು ಬಿಟ್ ಮ್ಯಾಪ್ ನ ಬಣ್ಣಗಳನ್ನು ಇನ್ವರ್ಟ್ ಮಾಡುತ್ತದೆ. ಚೆನ್ನಾಗಿ ಕಾಣಿಸುವುದಾದರೆ ನೀವು ಅದನ್ನು ಮಾಡಿಕೊಳ್ಳಬಹುದು.
02:47 ನಾನು ಇನ್ವರ್ಟ್ ಇಮೇಜ್ ಅನ್ನು ಅನ್ ಚೆಕ್ ಮಾಡುತ್ತೇನೆ.
02:51 ಅನೇಕ ಬಣ್ಣಗಳಿಗೆ Multiple scans ಇದು ಉತ್ತಮ
02:54 Brightness steps ಇದು ಪ್ರಕಾಶದಲ್ಲಿ ವ್ಯತ್ಯಾಸವನ್ನು ಹುಡುಕುತ್ತದೆ.
02:58 Colors ಇದು ನಿರ್ದಿಷ್ಟ ಬಣ್ಣದ ಮೊತ್ತವನ್ನು ಕೊಡುತ್ತದೆ.
03:01 Grays ಇದು Colors ನಂತೆಯೇ. ಆದರೆ ಕೇವಲ ಗ್ರೇಸ್ಕೇಲ್ ಬಣ್ಣಗಳನ್ನು ಗುರುತಿಸುತ್ತದೆ. Smooth ಆಯ್ಕೆಯನ್ನು ಅನ್ ಚೆಕ್ ಮಾಡಿ ಏಕೆಂದರೆ ಇದು ತುದಿಯಲ್ಲಿ ತುಂಬಾ ನಯವಾದ ರೇಖೆಗಳನ್ನು ರಚಿಸುತ್ತದೆ.
03:13 ನಾವು ಈಗ ಎಲ್ಲಾಟ್ರೇಸಿಂಗ್ ಆಯ್ಕೆಗಳನ್ನು ನೋಡಿದ್ದೇವೆ. ನಿಮ್ಮ ಅವಶ್ಯಕತೆಗೆ ತಕ್ಕಂತೆ ನೀವು ಬೇಕಾದವುಗಳನ್ನು ಆರಿಸಿಕೊಳ್ಳಬಹುದು.
03:20 ನಾನು Colors ಆಯ್ಕೆಯನ್ನು ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆರಿಸಿಕೊಳ್ಳುತ್ತೇನೆ.
03:24 ಈಗ OK ಯ ಮೇಲೆ ಕ್ಲಿಕ್ ಮಾಡಿ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿ.
03:28 ಟ್ರೇಸ್ ಮಾಡಿದ ಇಮೇಜ್ ಅಸಲಿ ಇಮೇಜ್ ನ ಮೇಲ್ಭಾಗದಲ್ಲಿ ರಚನೆಯಾಗಿದೆ.
03:33 ಇಮೇಜ್ ಅನ್ನು ಕ್ಲಿಕ್ ಮಾಡಿ ಒಂದು ಕಡೆ ಸರಿಸಿಕೊಳ್ಳಿ ಹಾಗಾಗಿ ಎರಡೂ ಇಮೇಜ್ ಗಳನ್ನು ನೋಡಬಹುದು.
03:38 ಇಮೇಜ್ ಈಗ ವೆಕ್ಟರ್ ಆಗಿ ಪರಿವರ್ತನೆಯಾಗಿದೆ. ಇಮೇಜ್ ಗಳನ್ನು ಜೂಮ್ ಮಾಡಿ.
03:43 ಮೊದಲೇ ಹೇಳಿದಂತೆ ಮೊದಲ ಇಮೇಜ್ ಪಿಕ್ಸಲೇಟ್ ಆಗಿದೆ ಮತ್ತು ಎರಡನೆಯದು ಪಿಕ್ಸಲೇಟ್ ಆಗಿಲ್ಲ.
03:50 ಮತ್ತು ನಾವು ಪಥಗಳನ್ನು ಸ್ಪಷ್ಟವಾಗಿ ನೋಡಬಹುದು.
03:56 ಈಗ ಅಸಲಿ ಇಮೇಜ್ ಅನ್ನು ಡಿಲೀಟ್ ಮಾಡಿ.
03:58 ಇಮೇಜ್ ಅನ್ನು ಆಯ್ಕೆ ಮಾಡಿಕೊಳ್ಳಿ. Path ಗೆ ಹೋಗಿ Break Apart ನ ಮೇಲೆ ಕ್ಲಿಕ್ ಮಾಡಿ.
04:03 ಇಮೇಜ್ ನ ಮೇಲೆ ಕ್ಲಿಕ್ ಮಾಡಿ. ಇನ್ನೊಂದರ ಮೇಲೆ ಇಮೇಜ್ ಗಳ ಸ್ಟ್ಯಾಕ್ ರಚನೆಯಾಗುತ್ತದೆ.
04:10 ಅವುಗಳು ಕಾಣುವಂತೆ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ ಒಂದು ಕಡೆ ಡ್ರ್ಯಾಗ್ ಮಾಡಿಕೊಳ್ಳಿ.
04:13 ಈಗ ವೆಕ್ಟರ್ ಇಮೇಜ್ ಅನ್ನು ಹೇಗೆ ಎಡಿಟ್ ಮಾಡುವುದು ಎಂದು ನೋಡೋಣ. ನಾನು ಕಪ್ಪು ಇಮೇಜ್ ಅನ್ನು ಎಡಿಟ್ ಮಾಡುತ್ತೇನೆ.
04:19 ಹಾಗಾಗಿ ಉಳಿದ ಇಮೇಜ್ ಗಳನ್ನು ಡಿಲೀಟ್ ಮಾಡಿ.
04:23 ಇಮೇಜ್ ಆಯ್ಕೆಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
04:26 Path ಗೆ ಹೋಗಿ Break Apart ನ ಮೇಲೆ ಕ್ಲಿಕ್ ಮಾಡಿ.
04:29 Fill and Stroke ನಡಿಯಲ್ಲಿ ಒಪಾಸಿಟಿಯನ್ನು 50 ಕ್ಕೆ ಇಳಿಸಿ. ಈಗ ನೀವು ಭಾಗಗಳನ್ನು ಸ್ಪಷ್ಟವಾಗಿ ನೋಡಬಹುದು.
04:37 ಈಗ ಇಮೇಜ್ ನ ಬಣ್ಣಗಳನ್ನು ಬದಲಿಸೋಣ.
04:40 ನಿಮ್ಮ ಕಲ್ಪನೆಗೆ ತಕ್ಕಂತೆ ಬಣ್ಣಗಳನ್ನು ಬದಲಿಸಬಹುದು.
04:44 ಈಗ ಎಲ್ಲಾ ಭಾಗಗಳನ್ನು ಆರಿಸಿಕೊಂಡು opacity ಯನ್ನು 100 ಕ್ಕೆ ಹೆಚ್ಚಿಸಿ.
04:51 ಎಲ್ಲವನ್ನು ಒಟ್ಟಿಗೆ ಗುಂಪು ಮಾಡಲು Ctrl + G ಯನ್ನು ಒತ್ತಿ.
04:55 ಈಗ ಕೆಲವು ಹೇರ್ ಸ್ಟೈಲ್ ಅನ್ನು ಸೇರಿಸೋಣ. ಅದನ್ನು ಮಾಡಲು ಇಮೇಜ್ ಅನ್ನು ಆಯ್ಕೆ ಮಾಡಿಕೊಂಡು Nodes ಟೂಲ್ ನ ಮೇಲೆ ಕ್ಲಿಕ್ ಮಾಡಿ.
05:02 ತಲೆಯ ಭಾಗಕ್ಕೆ ನೋಡ್ ಗಳನ್ನು ಸೇರಿಸಿ. ಈಗ ಇಲ್ಲಿ ತೋರಿಸಿರುವಂತೆ ನೋಡ್ ಗಳನ್ನು ಸ್ವಲ್ಪ ಮೇಲಕ್ಕೆ ಸರಿಸಿ.
05:09 ಇಮೇಜ್ ಅನ್ನು ರಾಸ್ಟರ್ ಮತ್ತು ವೆಕ್ಟರ್ ಎರಡೂ ಫಾರ್ಮ್ಯಾಟ್ ಗಳಲ್ಲೂ ಸೇವ್ ಮಾಡಿ.
05:13 ಮೊದಲು ಇದನ್ನು ರಾಸ್ಟರ್ ನಲ್ಲಿ ಸೇವ್ ಮಾಡೋಣ ಅಂದರೆ PNG ಫಾರ್ಮ್ಯಾಟ್ ನಲ್ಲಿ ಸೇವ್ ಮಾಡೋಣ. File ಗೆ ಹೋಗಿ ಮತ್ತು ನಂತರ Save As ನ ಮೇಲೆ ಕ್ಲಿಕ್ ಮಾಡಿ.
05:21 ಹೆಸರನ್ನು Image-raster ಎಂದು ಬದಲಿಸಿ Save ಮೇಲೆ ಕ್ಲಿಕ್ ಮಾಡಿ.
05:29 ಈಗ ಇಮೇಜ್ ಅನ್ನು ವೆಕ್ಟರ್ ಫಾರ್ಮ್ಯಾಟ್ ನಲ್ಲಿ ಅಂದರೆ PDF ಫಾರ್ಮ್ಯಾಟ್ ನಲ್ಲಿ ಸೇವ್ ಮಾಡೋಣ.
05:34 ಮತ್ತೊಮ್ಮೆ File ಗೆ ಹೋಗಿ Save As ನ ಮೇಲೆ ಕ್ಲಿಕ್ ಮಾಡಿ.
05:39 ಎಕ್ಸ್ಟೆನ್ಷನ್ ಅನ್ನು PDF ಗೆ ಬದಲಿಸಿ. ಹೆಸರನ್ನು Image-vector ಎಂದು ಬದಲಿಸಿ Save ಮೇಲೆ ಕ್ಲಿಕ್ ಮಾಡಿ.
05:48 ಈಗ ಡೆಸ್ಕ್ ಟಾಪ್ ಗೆ ಹೋಗಿ ಎರಡೂ ಇಮೇಜ್ ಗಳನ್ನು ಪರೀಕ್ಷಿಸೋಣ.
05:53 ನೀವು ಎರಡು ಇಮೇಜ್ ಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರ್ತಿಸಬಹುದು.
05:58 ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. ಸಾರಾಂಶವನ್ನು ನೋಡೋಣ.
06:01 ಈ ಟ್ಯುಟೋರಿಯಲ್ ನಲ್ಲಿ ನಾವು ರಾಸ್ಟರ್ ಮತ್ತು ವೆಕ್ಟರ್ ಇಮೇಜ್ ಗಳ ನಡುವಿನ ವ್ಯತ್ಯಾಸ, ಅನೇಕ ರಾಸ್ಟರ್ ಮತ್ತು ವೆಕ್ಟರ್ ಫಾರ್ಮ್ಯಾಟ್ ಗಳು, ಮತ್ತು ರಾಸ್ಟರ್ ಇಮೇಜ್ ಗಳನ್ನು ವೆಕ್ಟರ್ ಗೆ ಪರಿವರ್ತಿಸುವುದು ಇವುಗಳ ಕುರಿತು ಕಲಿತಿದ್ದೇವೆ.
06:12 ಅಸೈನ್ ಮೆಂಟ್ ಗಾಗಿ , ನಿಮ್ಮ ಕೋಡ್ ಫೈಲ್ ಲಿಂಕ್ ನಲ್ಲಿ ಕೊಟ್ಟಿರುವ ಟ್ರೇನ್ ಇಮೇಜ್ ಅನ್ನು ತೆಗೆದು ಕೊಂಡು ಅದನ್ನು ಗ್ರೇ ನಲ್ಲಿ ವೆಕ್ಟರ್ ಇಮೇಜ್ ಗೆ ಪರಿವರ್ತಿಸಿ.
06:20 ನಿಮ್ಮ ಪೂರ್ಣಗೊಂಡ ಅಸೈನ್ ಮೆಂಟ್ ಈ ರೀತಿಯಾಗಿ ಕಾಣಿಸಬೇಕು.
06:23 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.
06:30 ಸ್ಪೋಕನ್ ಟ್ಯುಟೋರಿಯಲ್ ತಂಡವು :ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
06:38 ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.


06:41 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ.

ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ. ಇದರ ಕುರಿತು ಹೆಚ್ಚಿನ ವಿವರಗಳು ಈ ಲಿಂಕ್ ನಲ್ಲಿ ದೊರೆಯುತ್ತವೆ.

06:51 ಧ್ವನಿ ಮತ್ತು ಅನುವಾದ ನವೀನ್ ಭಟ್ಟ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat