Java/C2/while-loop/Kannada
From Script | Spoken-Tutorial
Revision as of 17:02, 7 August 2017 by Sandhya.np14 (Talk | contribs)
Time | Narration |
00:02 | ಜಾವ while loop ನ ಕುರಿತು ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, while loop ನ ಕುರಿತು ಮತ್ತು ಅದನ್ನು ಹೇಗೆ ಉಪಯೋಗಿಸುವುದು ಎನ್ನುವುದರ ಕುರಿತು ಕಲಿಯುತ್ತೇವೆ. |
00:12 | ಈ ಟ್ಯುಟೋರಿಯಲ್ ಗಾಗಿ
Ubuntu 11.10, JDK 1.6 ಮತ್ತು Eclipse 3.7 ಗಳನ್ನು ಉಪಯೋಗಿಸಿದ್ದೇನೆ. |
00:21 | ಈ ಟ್ಯುಟೋರಿಯಲ್ ಅನ್ನು ಅರ್ಥಮಾಡಿಕೊಳ್ಳಲು ನೀವು ಜಾವಾದಲ್ಲಿ ರಿಲೇಶನಲ್ ಆಪರೇಟರ್ ಗಳ ಕುರಿತು ಜ್ಞಾನವನ್ನು ಹೊಂದಿರಬೇಕು. |
00:26 | ತಿಳಿದಿರದಿದ್ದಲ್ಲಿ ನಮ್ಮ ಈ ವೆಬ್ ಸೈಟ್ ಅನ್ನು ನೋಡಿ. [1] |
00:36 | ಇಲ್ಲಿ while loop ನ ವಿನ್ಯಾಸವಿದೆ. |
00:39 | ಇಲ್ಲಿ ಎರಡು ಭಾಗಗಳಿವೆ. |
00:41 | ಒಂದು loop running condition ಮತ್ತು ಎರಡನೆಯದು loop variable |
00:48 | ಈಗ ಒಂದು ಉದಾಹರಣೆಯನ್ನು ನೋಡೋಣ. Eclipse ಗೆ ಹೋಗೋಣ. |
00:55 | ಇಲ್ಲಿ eclipse IDE ಮತ್ತು ಉಳಿದ ಕೋಡ್ ಗಳಿಗೆ ಬೇಕಾದ ವಿನ್ಯಾಸವಿದೆ. |
01:00 | ನಾನು class WhileDemo ಅನ್ನು ರಚಿಸಿದ್ದೇನೆ ಮತ್ತು ಅದಕ್ಕೆ main method ಅನ್ನು ಸೇರಿಸಿದ್ದೇನೆ. |
01:05 | ಇಲ್ಲಿ ನಾವು 1 ರಿಂದ 10 ವರೆಗಿನ ಸಂಖ್ಯೆಗಳನ್ನು while loop ಅನ್ನು ಉಪಯೋಗಿಸಿ ಪ್ರಿಂಟ್ ಮಾಡಬಹುದು. int n = 1; ಎಂದು ಟೈಪ್ ಮಾಡಿ. |
01:15 | ಈ ವೇರಿಯೇಬಲ್ 'n'ಅನ್ನು ನಮ್ಮ loop variable ಅನ್ನಾಗಿ ಮಾಡಿಕೊಳ್ಳೋಣ. |
01:21 | while ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ n ಚಿಕ್ಕದು ಅಥವಾ ಸಮ 10 ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ಅನ್ನು ಓಪನ್ ಮಾಡಿ ಮುಚ್ಚಿರಿ. |
01:33 | ಈ ಕಂಡಿಷನ್ ಅನ್ನು loop running condition ಎಂದು ಕರೆಯುತ್ತಾರೆ. |
01:37 | ಅಂದರೆ ಈ ಕಂಡಿಷನ್ ಟ್ರ್ಯೂ ಆಗಿರುವವರೆಗೂ ಲೂಪ್ ರನ್ ಆಗುತ್ತಿರುತ್ತದೆ. |
01:42 | ಈ ಉದಾಹರಣೆಯಲ್ಲಿ 'n' ಹತ್ತಕ್ಕಿಂತ ಚಿಕ್ಕದು ಅಥವಾ ಸಮವಾಗಿರುವವರೆಗೂ ಲೂಪ್ ರನ್ ಆಗುತ್ತದೆ. |
01:47 | ಮತ್ತು ಇದು 'n' ನ ಬೆಲೆಯು ಹತ್ತಕ್ಕಿಂತ ಹೆಚ್ಚಾದಾಗ ಲೂಪ್ ಕೊನೆಗೊಳ್ಳುತ್ತದೆ. |
01:53 | loop ನ ಒಳಗೆ ನಾವು 'n' ನ ಬೆಲೆಯನ್ನು ಪ್ರಿಂಟ್ ಮಾಡುತ್ತೇವೆ. |
01:58 | System.out.println(n); ಮತ್ತು ನಂತರ ನಾವು ಇದನ್ನು ಹೆಚ್ಚಿಸುತ್ತೇವೆ ಅಂದರೆ n = n + 1; |
02:12 | ಈ ರೀತಿಯಲ್ಲಿ ಮೊದಲು 1 ಪ್ರಿಂಟ್ ಆಗುತ್ತದೆ ಮತ್ತು ನಂತರ 'n' ನ ಬೆಲೆಯು 2 ಆಗುತ್ತದೆ. |
02:18 | ನಂತರ loop condition ಕಂಡಿಷನ್ ಪರೀಕ್ಷಿಸಲ್ಪಡುತ್ತದೆ. |
02:21 | ಅದು ಟ್ರ್ಯೂ ಆಗಿರುವುದರಿಂದ 2 ಪ್ರಿಂಟ್ ಆಗುತ್ತದೆ ಮತ್ತು n ನ ಬೆಲೆಯು 3 ಆಗುತ್ತದೆ. |
02:25 | ಮತ್ತು ಇದೇ ರೀತಿ ಮುಂದುವರಿಯುತ್ತದೆ. ಲೂಪ್ 10 ಪ್ರಿಂಟ್ ಆಗುವ ತನಕ ಮುಂದುವರಿಯುತ್ತದೆ. ಅದರ ನಂತರ 'n' ನ ಬೆಲೆಯು 11 ಆಗುತ್ತದೆ ಮತ್ತು ಕಂಡಿಷನ್ ಟ್ರ್ಯೂ ಆಗಿಲ್ಲದೇ ಇರುವುದರಿಂದ loop ನಿಂತು ಹೋಗುತ್ತದೆ. |
02:37 | ಈಗ ಕೋಡ್ ಅನ್ನು ಕ್ರಿಯೆಯಲ್ಲಿ ನೋಡೋಣ. |
02:39 | Save ಮಾಡಿ ಮತ್ತು run ಮಾಡಿ. |
02:47 | ಈಗ 1 ರಿಂದ 10 ರ ವರೆಗೆ ಸಂಖ್ಯೆಗಳು ಪ್ರಿಂಟ್ ಆಗಿದೆ. |
02:52 | ಈಗ ನಾವು 50 ರಿಂದ 40 ರವರೆಗಿನ ಸಂಖ್ಯೆಗಳನ್ನು ಪ್ರಿಂಟ್ ಮಾಡೋಣ. |
02:58 | ಹಾಗಾಗಿ ನಾವು 50 ರಿಂದ ಪ್ರಾರಂಭಿಸಬೇಕು. n = 1 ಅನ್ನು n = 50 ಎಂದು ಬದಲಿಸೋಣ. |
03:03 | ಮತ್ತು ನಾವು 40 ರ ತನಕ ಹೋಗುತ್ತೇವೆ. |
03:05 | ಅಂದರೆ, 'n' ನ ಬೆಲೆಯು 40 ಕ್ಕಿಂತ ಹೆಚ್ಚು ಅಥವಾ ಸಮವಾಗಿರುವವರೆಗೂ. ಹಾಗಾಗಿ ಕಂಡಿಶನ್ ಅನ್ನು n ದೊಡ್ಡದು ಅಥವಾ ಸಮ 40 ಎಂದು ಬದಲಿಸಿ. |
03:16 | ನಾವು ಲೂಪ್ ಅನ್ನು ದೊಡ್ಡ ಸಂಖ್ಯೆಯಿಂದ ಚಿಕ್ಕ ಸಂಖ್ಯೆಗೆ ಇಳಿಸುವುದರಿಂದ, ಲೂಪ್ ವೇರಿಯೇಬಲ್ ಅನ್ನು ಕಡಿಮೆ ಮಾಡುತ್ತಾ ಬರಬೇಕು. |
03:22 | ಹಾಗಾಗಿ n=n+1 ಅನ್ನು n=n-1 ಎಂದು ಬದಲಿಸಿ. |
03:27 | Save ಮಾಡಿ ಮತ್ತು run ಮಾಡಿ. ನಾವು ಇಲ್ಲಿ 50 ರಿಂದ 40 ರ ವರೆಗಿನ ಸಂಖ್ಯೆಗಳು ಪ್ರಿಂಟ್ ಆಗಿರುವುದನ್ನು ನೋಡಬಹುದು. |
03:42 | ಈಗ ನಾವು 7 ರ ಮೊದಲ 10 ಅಪವರ್ತನಗಳನ್ನು ಪ್ರಿಂಟ್ ಮಾಡೋಣ. |
03:48 | ಅದನ್ನು ಮಾಡಲು ನಾವು 7 ರಿಂದ ಪ್ರಾರಂಭಿಸಬೇಕು. |
03:50 | ಹಾಗಾಗಿ n = 50 ಅನ್ನು n = 7 ಎಂದು ಬದಲಿಸಿ ಮತ್ತು ನಾವು 70 ಕ್ಕೆ ಕೊನೆಗೊಳಿಸುತ್ತೇವೆ. |
03:57 | ಹಾಗಾಗಿ ಕಂಡಿಷನ್ ಅನ್ನು n ಚಿಕ್ಕದು ಅಥವ ಸಮ 70 ಎಂದು ಬದಲಿಸಿ. |
04:03 | ಲೂಪ್ 70 ಕ್ಕೆ ನಿಲ್ಲುತ್ತದೆ ಎಂಬುದನ್ನು ಖಚಿತ ಪಡಿಸುತ್ತದೆ. |
04:07 | ಅಪವರ್ತನ ಗಳನ್ನು ಪಡೆಯಲು ನಾವು loop variable ಅನ್ನು 7 ರಿಂದ ಹೆಚ್ಚಿಸಬೇಕು. |
04:12 | ಹಾಗಾಗಿ n=n-1 ಅನ್ನು n= n+7; ಎಂದು ಬದಲಿಸಿ. |
04:18 | ಈ ರೀತಿಯಲ್ಲಿ ಮೊದಲು 7 ಪ್ರಿಂಟ್ ಆಗುತ್ತದೆ. 'n' ನ ಬೆಲೆಯು14 ಆಗುತ್ತದೆ, 14ಪ್ರಿಂಟ್ ಆಗುತ್ತದೆ ಇದೇ ರೀತಿ 70 ರ ತನಕ ಮುಂದುವರಿಯುತ್ತದೆ. Save ಮಾಡಿ ಮತ್ತು run ಮಾಡಿ. |
04:33 | ನಾವು ಇಲ್ಲಿ ನೋಡುವಂತೆ 7 ರ ಮೊದಲ ಹತ್ತು ಅಪವರ್ತನಗಳು ಪ್ರಿಂಟ್ ಆಗುತ್ತದೆ. |
04:43 | ನಾವು while loop ಅನ್ನು ಒಂದು ಸಂಖ್ಯೆಯ ಅಂಕೆಗಳ ಮೊತ್ತವನ್ನು ಕಂಡುಹಿಡಿಯಲು ಸಹ ಉಪಯೋಗಿಸಬಹುದು. |
04:47 | ಅದನ್ನು ಹೇಗೆ ಮಾಡುವುದು ಎಂದು ನೋಡೋಣ. |
04:49 | ಮೊದಲು main method ಅನ್ನು ಖಾಲಿ ಮಾಡೋಣ. |
04:54 | int n ಸಮ 13876;. ಇದು ಸಂಖ್ಯೆ. |
05:02 | ನಂತರ int dSum ಸಮ 0. dsum ವೇರಿಯೇಬಲ್ ಅನ್ನು ಸಂಖ್ಯೆಯ ಅಂಕೆಗಳ ಮೊತ್ತವನ್ನು ಹಿಡಿದಿಟ್ಟುಕೊಳ್ಳಲು ಉಪಯೋಗಿಸುತ್ತೇವೆ. |
05:18 | while n ದೊಡ್ಡದು 0 ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ಅನ್ನು ತೆರೆಯಿರಿ. |
05:27 | ಈ ಕಂಡಿಶನ್ ಉಪಯೋಗಿಸಲು ಕಾರಣ ಸಧ್ಯದಲ್ಲೇ ತಿಳಿಯುತ್ತದೆ. |
05:32 | ಅಂಕೆಗಳ ಮೊತ್ತವನ್ನು ಕಂಡುಹಿಡಿಯಲು ಮೊದಲು ನಾವು ಅಂಕೆಗಳನ್ನು ಪಡೆಯಬೇಕು. |
05:36 | ಅದನ್ನು ಮಾಡಲು ನಾವು modulo operator ಅನ್ನು ಉಪಯೋಗಿಸುತ್ತೇವೆ. |
05:40 | dSum = dSum + (n % 10) ಎಂದು ಟೈಪ್ ಮಾಡಿ, ಇದರಿಂದ ಬಿಡಿ ಸ್ಥಾನದ ಅಂಕೆಯನ್ನು ಪಡೆಯುತ್ತೇವೆ ಮತ್ತು ನಾವು ಅದನ್ನು dsum ಗೆ ಸೇರಿಸುತ್ತೇವೆ. |
05:52 | ಅದರ ನಂತರ ನಾವು ಹತ್ತರಿಂದ ಭಾಗಿಸಿ ಆ ಅಂಕೆಯನ್ನು ಸಂಖ್ಯೆಯಿಂದ ತೆಗೆದು ಹಾಕುತ್ತೇವೆ. n = n / 10 |
06:08 | ಹಾಗಾಗಿ ಮೊದಲ ಬಾರಿಗೆ ಲೂಪ್ ರನ್ ಆದಾಗ dSum ನ ಬೆಲೆಯು 6 ಆಗುತ್ತದೆ ಮತ್ತು 'n' ನ ಬೆಲೆಯು 1387 ಆಗುತ್ತದೆ. |
06:15 | ಮತ್ತು ಲೂಪ್ ಎರಡನೇ ಬಾರಿ ರನ್ ಆದಾಗ dSum ನ ಬೆಲೆಯು 7 ಮತ್ತು 6 ರ ಮೊತ್ತ ಅಂದರೆ 13 ಆಗುತ್ತದೆ ಮತ್ತು 'n' ನ ಬೆಲೆಯು 138 ಆಗುತ್ತದೆ. |
06:22 | ಮತ್ತು ಲೂಪ್ ಮುಂದುವರಿದಂತೆ ಅಂಕೆಗಳು n ನಿಂದ ಹೊರತೆಗೆಯಲ್ಪಡುತ್ತದೆ ಮತ್ತು ಅಂತಿಮವಾಗಿ |
06:28 | n ನ ಬೆಲೆಯು ಸೊನ್ನೆ ಆಗುತ್ತದೆ. ಅದಾದ ನಂತರ 'n ದೊಡ್ಡದು 0' ಎಂಬ ಕಂಡಿಷನ್ ಫಾಲ್ಸ್ ಆಗುತ್ತದೆ ಮತ್ತು ಲೂಪ್ ಅಲ್ಲಿಗೆ ನಿಲ್ಲುತ್ತದೆ. |
06:36 | ಈಗ ನಾವು ಪ್ರಿಂಟ್ ಸ್ಟೇಟ್ ಮೆಂಟ್ ಅನ್ನು ಸೇರಿಸೋಣ. |
06:42 | System.out.println(dSum) |
06:51 | ಈಗ ಈ ಕೋಡ್ ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ. Save ಮಾಡಿ run ಮಾಡಿ. |
06:59 | ನಾವು ಇಲ್ಲಿ ಅಂಕೆಗಳ ಮೊತ್ತ 25 ಎಂದು ಪ್ರಿಂಟ್ ಆಗುವುದನ್ನು ನೋಡಬಹುದು. |
07:06 | ಈ ರೀತಿಯಲ್ಲಿ ಪ್ರೊಗ್ರಾಮ್ ಗಳಲ್ಲಿ ಬಹು ಮುಖ್ಯವಾದ constructs ಆದ while loop ಅನ್ನು ಉಪಯೋಗಿಸುತ್ತೇವೆ. |
07:16 | ನಾವು ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. |
07:20 | ಈ ಟ್ಯುಟೋರಿಯಲ್ ನಲ್ಲಿ ನಾವು, while loop ನ ಕುರಿತು ಮತ್ತು ಅದನ್ನು ಹೇಗೆ ಉಪಯೋಗಿಸುವುದು ಎನ್ನುವುದರ ಕುರಿತು ಕಲಿತಿದ್ದೇವೆ. |
07:26 | ಸ್ವಂತ ಅಭ್ಯಾಸಕ್ಕಾಗಿ ಈ ಸಮಸ್ಯೆಯನ್ನು ಪರಿಹರಿಸಿ. |
07:29 | ಒಂದು ಸಂಖ್ಯೆಯನ್ನು ಕೊಟ್ಟಿದ್ದು ವೈಲ್ ಲೂಪ್ ಅನ್ನು ಉಪಯೋಗಿಸಿ ಅದರ ತಿರುಗಿಸಿದ ಸಂಖ್ಯೆಯನ್ನು ಕಂಡುಹಿಡಿಯಿರಿ. ಉದಾಹರಣೆಗೆ: 19435 => 53491 |
07:37 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. |
07:45 | ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು. |
07:50 | ಸ್ಪೋಕನ್ ಟ್ಯುಟೋರಿಯಲ್ ತಂಡವು :ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:57 | ಹೆಚ್ಚಿನ ವಿವರಗಳಿಗೆ contact ಎಟ್ spoken ಹೈಫನ್ tutorial ಡಾಟ್ org. ಗೆ ಬರೆಯಿರಿ. |
08:03 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. |
08:07 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ |
08:12 | ಇದರ ಕುರಿತು ಹೆಚ್ಚಿನ ವಿವರಗಳು spoken ಹೈಫನ್ tutorial ಡಾಟ್ org ಸ್ಲ್ಯಾಶ್ NMEICT ಹೈಫನ್Intro ನಲ್ಲಿ ದೊರೆಯುತ್ತದೆ. |
08:17 | ಈ ಸ್ಕ್ರಿಪ್ಟ್ ಅನ್ನು TalentSprint ನಿಂದ ಪಡೆದುಕೊಳ್ಳಲಾಗಿದೆ. ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು |