LibreOffice-Suite-Calc/C3/Formulas-and-Functions/Kannada
Time | Narration |
00:00 | ಲಿಬ್ರೆ ಆಫಿಸ್ ಕ್ಯಾಲ್ಕ್ ನಲ್ಲಿನ ಸೂತ್ರಗಳು ಮತ್ತು ಅವುಗಳ ಫಂಕ್ಷನ್ ಗಳ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು:
ನಿಬಂಧನಾತ್ಮಕ (Conditional) ಆಪರೇಟರ್ ಗಳ ಬಗ್ಗೆ, If ಮತ್ತು Or ಹೇಳಿಕೆಗಳ ಉಪಯೋಗ, ಮೂಲಭೂತವಾದ ಸಂಖ್ಯಾಶಾಸ್ತ್ರದ (statistic) ಕಾರ್ಯಗಳ(ಫಂಕ್ಷನ್) ಬಗ್ಗೆ ಹಾಗೂ ಸಂಖ್ಯೆಗಳನ್ನು ಸರಿಹೊಂದಿಸಲು (Rounding off) ಕಲಿಯಲಿದ್ದೇವೆ. |
00:19 | ಇಲ್ಲಿ ನಾವು ಉಬಂಟು ಲಿನಕ್ಸ್ ನ 10.04 ಆವೃತ್ತಿಯನ್ನು ಮತ್ತು ಲಿಬ್ರೆ ಆಫಿಸ್ ಸೂಟ್ ನ 3.3.4 ಆವೃತ್ತಿಯನ್ನು ಬಳಸುತ್ತಿದ್ದೇವೆ. |
00:30 | ನಾವು ಈಗಾಗಲೇ ಅಂಕಗಣಿತದ ಮೂಲಭೂತ ಕಾರ್ಯಗಳಾದ ದತ್ತಾಂಶಗಳ ಕೂಡುವಿಕೆ, ಕಳೆಯುವಿಕೆ, ಮತ್ತು ಸರಾಸರಿಗಳ ಕಂಡುಹಿಡಿಯುವಿಕೆಯನ್ನು ಕಲಿತಿದ್ದೇವೆ.. |
00:39 | ಈಗ ಇನ್ನಿತರ ಕೆಲ ಉಪಯುಕ್ತ ಕಾರ್ಯಗಳನ್ನು ಕಲಿಯೋಣ. |
00:43 | ಅವುಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಆಪರೇಟರ್ ಎಂದರೆ ನಿಬಂಧನಾತ್ಮಕ (Conditional) ಆಪರೇಟರ್. |
00:51 | ನಿಬಂಧನಾತ್ಮಕ (Conditional) ಆಪರೇಟರ್ ಗಳು ,
ದತ್ತಾಂಶಗಳ ಮೇಲೆ ಬಳಕೆದಾರನ ನಿಬಂಧೆನಗಳನ್ನು(ಕಂಡೀಶನ್) ಪರಿಶೀಲಿಸುತ್ತವೆ. |
00:56 | ಮತ್ತು TRUE ಅಥವಾ FALSE ಎಂದು ಫಲಿತಾಂಶವನ್ನು ಪ್ರಕಟಪಡಿಸುತ್ತವೆ. |
01:01 | “Personal-Finance-Tracker.ods” ಅನ್ನು ಓಪನ್ ಮಾಡೋಣ. |
01:05 | ಇಲ್ಲಿ, “Cost” ಎಂಬ ಶೀರ್ಷಿಕೆಯ ಅಡಿಯಲ್ಲಿ , ಕೆಲವು ವಸ್ತುಗಳ ಬೆಲೆಗಳನ್ನು ಪಟ್ಟಿ ಮಾಡಿದ್ದೇವೆ. |
01:11 | ಅಲ್ಲಿಗೆ ನಿಬಂಧನಾತ್ಮಕ (conditional) ಆಪರೇಟರ್ ಅನ್ನು ಅನ್ವಯಸಿ, ಬಂದ ಫಲಿತಾಂಶವನ್ನು ವಿಮರ್ಶಿಸೋಣ. |
01:17 | “B10” ಕೋಶವನ್ನು ಕ್ಲಿಕ್ ಮಾಡಿ ಮತ್ತು ಅದರೊಳಗೆ “Condition Result” ಎಂದು ಟೈಪ್ ಮಾಡಿ. |
01:24 | ಈಗ, “C10” ಸೆಲ್ ಅನ್ನು ಕ್ಲಿಕ್ಕಿಸಿ. |
01:28 | ಈ ಸೆಲ್ ನಲ್ಲಿ ಈ ಮೇಲಿನ ಬೆಲೆಗಳಿಗೆ ನಿಬಂಧನಾತ್ಮಕ ಫಲಿತಾಂಶವು ಅನ್ವಯವಾಗುತ್ತದೆ ಮತ್ತು ಈ ಸೆಲ್ ನಲ್ಲಿ ಅದು ಪ್ರದರ್ಶಿತವಾಗಲಿದೆ. |
01:33 | “House Rent” ನ ಬೆಲೆ 6,000 ರೂಪಾಯಿಗಳು, |
01:38 | ಹಾಗು “Electricity Bill” ನ ಬೆಲೆಯು 800 ರೂಪಾಯಿಗಳೆಂದು ಗಮನಿಸಿ. |
01:43 | “House Rent” ನ ಬೆಲೆಯು “Electricity Bill” ನ ಬೆಲೆಗಿಂತ ಅಧಿಕವಾಗಿದೆ. |
01:48 | ನಾವು ಅವುಗಳ ಮೆಲೆ ವಿವಿಧ ನಿಬಂಧನೆಗಳನ್ನು ಅನ್ವಯಿಸಿ, ಫಲಿತಾಂಶಗಳನ್ನು ಪಡೆಯಬಹುದು. |
01:54 | “C10” ಸೆಲ್ ಅನ್ನು ಕ್ಲಿಕ್ಕಿಸಿ. |
01:57 | ಈ ಸೆಲ್ ನಲ್ಲಿ, “ ಸಮ ಚಿನ್ಹೆ C3 ಗ್ರೇಟರ್ ದೆನ್ C4 ” ಎನ್ನುವ ನಿಬಂಧನೆಯನ್ನು ಟೈಪ್ ಮಾಡಿ ಮತ್ತು “Enter” ಕೀಲಿಯನ್ನು ಒತ್ತಿ. |
02:09 | C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನ ಬೆಲೆಗಿಂತ ಹೆಚ್ಚಾಗಿರುವುದರಿಂದ, “TRUE” ಎನ್ನುವ ಫಲಿತಾಂಶ ಪ್ರದರ್ಶಿತವಾಗುತ್ತದೆ. |
02:18 | ಈಗ, “ಸಮ ಚಿನ್ಹೆ C3 ಲೆಸ್ ದೆನ್ C4” ಎಂದು ನಿಬಂಧನಾತ್ಮಕ ಹೇಳಿಕೆಯನ್ನು ಬದಲಿಸೋಣ. |
02:26 | “Enter” ಕೀಲಿಯನ್ನು ಒತ್ತಿರಿ. |
02:28 | “FALSE” ಎಂದು ಫಲಿತಾಂಶ ಪ್ರಕಟವಾಗುತ್ತದೆ. |
02:32 | ಇದೇ ಮಾದರಿಯಲ್ಲಿ ನಾವು, ವಿವಿಧ ಹೇಳಿಕೆಗಳನ್ನು ಅನ್ವಯಿಸಿ, ಫಲಿತಾಂಶವನ್ನು ಪರೀಕ್ಷಿಸಬಹುದು. |
02:38 | ಈ ರೀತಿಯ ಹೇಳಿಕೆಗಳು ದೊಡ್ಡ ಮೊತ್ತದ ದತ್ತಾಂಶಗಳ ವ್ಯವಹಾರದಲ್ಲಿ ಅನುಕೂಲಕರವಾಗಿರುತ್ತವೆ. |
02:44 | ಇದೇ ರೀತಿಯಲ್ಲಿ ನೀವು “If ಮತ್ತು Or” ನಿಬಂಧನೆಗಳನ್ನು ಕೂಡ ದತ್ತಾಂಶಗಳ ಮೇಲೆ |
02:49 | ನಿಬಂಧನೆಗಳಿಗೆ ಅನುಸಾರವಾಗಿ TRUE ಎನ್ನುವ ಫಲಿತಾಂಶವನ್ನು ಮುದ್ರಿಸಲು ಅನ್ವಯಿಸಬಹುದು. |
02:55 | “C10” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು ಅಲ್ಲಿ, |
02:59 | “ ಸಮ ಚಿನ್ಹೆ IF” ಮತ್ತು ಬಂಧಕದ (ಬ್ರೇಸಸ್) ಒಳಗೆ “C3 ಗ್ರೇಟರ್ ದೆನ್ C4”, ಅರ್ಧವಿರಾಮ , ಪುನಃ ಡಬಲ್ ಕೋಟ್ ನ ಒಳಗೆ “Positive” ಎಂದು, ಅರ್ಧವಿರಾಮ ಮತ್ತು ಪುನಃ ಡಬಲ್ ಕೋಟ್ ನ ಒಳಗೆ “Negative”ಎಂದು ಟೈಪ್ ಮಾಡಿ. |
03:16 | C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನಲ್ಲಿನ ಬೆಲೆಗಿಂತ ಜಾಸ್ತಿಯಾಗಿದ್ದೆರೆ, “Positive”ಎಂದೂ |
03:25 | ಇಲ್ಲದಿದ್ದರೆ “Negative” ಎಂದೂ, ಪ್ರದರ್ಶಿತವಾಗುತ್ತದೆ. |
03:28 | “Enter” ಕೀಲಿಯನ್ನು ಒತ್ತಿರಿ. |
03:31 | 6000 ರೂಪಾಯಿಗಳು 800 ರೂಪಾರೂಪಾಯಿಗಳಿಗಿಂತ ಜಾಸ್ತಿಯಾಗಿರುವುದರಿಂದ , ಫಲಿತಾಂಶವು“Positive” ಎಂದು ಪ್ರದರ್ಶಿತವಾಗಿರುವುದನ್ನು ಗಮನಿಸಿ. |
03:39 | ಈಗ, ನಿಬಂಧನಾತ್ಮಕ ಹೇಳಿಕೆಯನ್ನು“ಗ್ರೇಟರ್ ದೆನ್” ನಿಂದ “ಲೆಸ್ ದೆನ್” ಎಂದು ಬದಲಾಯಿಸಿ,“Enter” ಕೀಲಿಯನ್ನು ಒತ್ತಿರಿ. |
03:47 | C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನಲ್ಲಿನ ಬೆಲೆಗಿಂತ ಹೆಚ್ಚಾಗಿರುವುದರಿಂದ ಫಲಿತಾಂಶವು “Negative” ಎಂದು ಪ್ರದರ್ಶಿತವಾಗುವುದನ್ನು ಗಮನಿಸಿ . |
03:57 | C3 ಮತ್ತು C4 ಸೆಲ್ ನಲ್ಲಿ ದತ್ತಾಂಶವನ್ನು ಬದಲಾಯಿಸದರೆ ಫಲಿತಾಂಶದಲ್ಲೂ ಬದಲಾವಣೆಯನ್ನು ಗಮನಿಸಬಹುದು. |
04:04 | “Negative” ಎಂದು ಈಗ ಫಲಿತಾಂಶವು ಪ್ರಕಟವಾಗಿದೆ. |
04:09 | ಈಗ, C4 ಸೆಲ್ ನಲ್ಲಿನ ಬೆಲೆಯನ್ನು “7000” ರುಪಾಯಿಗಳಿಗೆ ಹೆಚ್ಚಿಸೋಣ ಮತ್ತು “Enter” ಕೀಲಿಯನ್ನು ಒತ್ತೋಣ. |
04:17 | ಈಗ ಫಲಿತಾಂಶವು ಸ್ವತಃ “Positive” ಎಂದು ಪರಿವರ್ತಿತವಾಗುತ್ತದೆ. |
04:22 | ಪುನಃ, C4 ಸೆಲ್ ನಲ್ಲಿನ ಬೆಲೆಯನ್ನು “800” ರೂಪಾಯಿಗಳಿಗೆ ಇಳಿಸೋಣ |
04:26 | ಮತ್ತು “Enter” ಕೀಲಿಯನ್ನು ಒತ್ತೋಣ. |
04:29 | ಫಲಿತಾಂಶವು ಸ್ವತಃ ಮೊದಲಿನಂತೆಯೇ “Negative” ಎಂದು ಬದಲಾಗುತ್ತದೆ. |
04:34 | ಈದೀಗ ಮಾಡಿದ ಪರಿವರ್ತನೆಗಳನ್ನು ಡಿಲೀಟ್ ಮಾಡೋಣ. |
04:38 | ಮುಂದೆ, ಕೆಲ ಅಂಕಗಣಿತದ (arithmetic) ಮತ್ತು ಸಂಖ್ಯಾಶಾಸ್ತ್ರದ (statistic) ಕೆಲಸಗಳನ್ನು ಕಲಿಯೋಣ. |
04:43 | ಮೂಲಭೂತವಾದ ಅಂಕಗಣಿತದ ಕೆಲಸಗಳೆಂದರೆ-
ಕೂಡಿಸಲು SUM, ಗುಣಾಕರಕ್ಕೆ PRODUCT, ಭಾಗಾಕಾರಕ್ಕೆ QUOTIENT (ಕೋಶಂಟ್) ಮತ್ತು ಈ ಹಿಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿತ ಇನ್ನಿತರ ಅಂಶಗಳು . |
04:57 | ಈಗ Sum, Product ಮತ್ತು Quotient ನ ಕೆಲಸಗಳನ್ನು ಪರಿಶೀಲಿಸಲು ಒಂದಷ್ಟು ಕಾರ್ಯಗಳನ್ನು ಮಾಡೋಣ. |
05:05 | “Sheet 3” ಅನ್ನು ಆಯ್ದುಕೊಳ್ಳಿ. |
05:08 | “50”,”100” ಮತ್ತು ”150” ಸಂಖ್ಯೆಗಳನ್ನು ಕ್ರಮವಾಗಿ “B1”, “B2” ಮತ್ತು “B3” ಸೆಲ್ ಗಳಲ್ಲಿ ನಮೂದಿಸಿ. |
05:19 | “A4” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು “SUM” ಎಂದು ಟೈಪ್ ಮಾಡಿ. |
05:23 | “B4” ಸೆಲ್ ಅನ್ನು ಕ್ಲಿಕ್ ಮಾಡಿ. |
05:26 | ಈ ಸೆಲ್ ನಲ್ಲಿಯೇ ನಾವು ಫಲಿತಾಂಶವನ್ನು ಲೆಕ್ಕಿಸಬೇಕು (compute). |
05:30 | ಅಲ್ಲಿ “ಸಮ ಚಿನ್ಹೆ “SUM” ಎಂದೂ ಮತ್ತು ಬಂಧಕದ (ಬ್ರೇಸ್) ಒಳಗೆ B1 ಅರ್ಧವಿರಾಮ B2 ಅರ್ಧವಿರಾಮ B3 ಎಂದೂ ಟೈಪ್ ಮಾಡಿ. |
05:37 | Enter ಕೀಲಿಯನ್ನು ಒತ್ತಿರಿ. |
05:39 | “300” ಎಂದು ಫಲಿತಾಂಶವು ಪ್ರಕಟವಾಗಿರುವುದನ್ನು ಗಮನಿಸಿ. |
05:43 | ನೀವು ಸೆಲ್ ಗಳಲ್ಲಿನ ಬೆಲೆಗಳ ವ್ಯಾಪ್ತಿಯನ್ನು(range) ಕೂಡ ಕಂಡುಹಿಡಿಯಬಹುದು. |
05:47 | “B4” ಸೆಲ್ ಅನ್ನು ಪುನಃ ಕ್ಲಿಕ್ಕಿಸಿ. |
05:49 | ಈಗ, ಬಂಧಕದ (ಬ್ರೇಸಸ್) ಒಳಗಡೆ, B1 ಅರ್ಧವಿರಾಮ B2 ಅರ್ಧವಿರಾಮ B3 ಎನ್ನುವುದರ ಬದಲಾಗಿ, B1 ವಿವರಣಾತ್ಮಕ ಚಿನ್ಹೆB3 ,ಎಂದು ಟೈಪ್ ಮಾಡಿ. |
05:58 | Enter ಅನ್ನು ಒತ್ತಿರಿ. |
06:00 | ಮತ್ತೊಮ್ಮೆ ,“300” ಎಂದು ಫಲಿತಾಂಶವು ಪ್ರಕಟವಾಗುತ್ತದೆ. |
06:03 | “A5” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು “PRODUCT” ಎಂದು ಟೈಪ್ ಮಾಡಿ. |
06:08 | “B5” ಸೆಲ್ ಅನ್ನು ಕ್ಲಿಕ್ ಮಾಡಿ. |
06:10 | ಇಲ್ಲಿ “ಸಮ ಚಿನ್ಹೆ” “PRODUCT” ಎಂದೂ ಮತ್ತು ಬಂಧಕದ ಒಳಗೆ B1 “ವಿವರಾಣಾತ್ಮಕ ಚಿನ್ಹೆ” B3 ಎಂದು ಟೈಪ್ ಮಾಡಿ. |
06:18 | Enter ಅನ್ನು ಒತ್ತಿರಿ. |
06:20 | “7,50,000” ಎಂದು ಫಲಿತಾಶವು ಪ್ರಕಟವಾಗುವುದನ್ನು ಗಮನಿಸಿ. |
06:26 | Quotient ನ ಕೆಲಸಗಳನ್ನು ನೋಡೋಣ. |
06:29 | “A6” ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು “QUOTIENT” ಎಂದು ಟೈಪ್ ಮಾಡಿ. |
06:34 | ಈಗ “B6” ಸೆಲ್ ಅನ್ನು ಕ್ಲಿಕ್ ಮಾಡಿ. |
06:37 | ನಾವು ಈ ಸೆಲ್ ಅನ್ನು ಫಲಿತಾಂಶವನ್ನು ಪಡೆಯಲು ಬಳಸಲಿದ್ದೇವೆ. |
06:40 | ಮತ್ತು ಅಲ್ಲಿ “ಸಮ ಚಿನ್ಹೆ QUOTIENT” ಮತ್ತು ಬಂಧಕದ ಒಳಗೆ B2 ಅರ್ಧವಿರಾಮ B1 ಎಂದು ಟೈಪ್ ಮಾಡಿ. |
06:47 | Enter ಅನ್ನು ಒತ್ತಿರಿ. |
06:49 | ಸಂಖ್ಯೆ “100”, ಸಂಖ್ಯೆ “50” ರಿಂದ ಭಾಗವಾಗಿರುವುದರಿಂದ “2” ಎಂದು ಫಲಿತಾಂಶವು ಪ್ರಕಟವಾಗುತ್ತದೆ. |
06:59 | ಇದೇ ರೀತಿಯಲ್ಲಿ ನಾವು ಕ್ಯಾಲ್ಕ್ ಅನ್ನು ಉಪಯೋಗಿಸಿ ವಿವಿಧ ಅಂಕಗಣಿತಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡಬಹುದು. |
07:05 | ಈಗ, ಸಂಖ್ಯಾಶಾಸ್ತ್ರದ (Statistic) ಕಾರ್ಯಗಳನ್ನು ಅನ್ವಯಿಸುವುದನ್ನು ಕಲಿಯೋಣ. |
07:09 | ಸಂಖ್ಯಾಶಾಸ್ತ್ರದ ಕಾರ್ಯಗಳು
ಸ್ಪ್ರೆಡ್ ಶೀಟ್ ನಲ್ಲಿನ ದತ್ತಾಂಶಗಳ ವಿಂಗಡಿಸುವಿಕೆಗೆ ಉಪಯುಕ್ತವಾಗಿವೆ. ಉದಾಹರಣೆಗಾಗಿ, COUNT, MIN, MAX, MEDIAN, MODE ಮುಂತಾದ ಕಾರ್ಯಗಳು ಮತ್ತು ಸ್ವಭಾವದಿಂದ ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಅಂಶಗಳು. |
07:27 | ಮೊದಲಿಗೆ, sheet 1 ಅನ್ನು ಕ್ಲಿಕ್ ಮಾಡಿ. |
07:30 | ಸಂಖ್ಯಾಶಾಸ್ತ್ರವನ್ನು ಉಪಯೋಗಿಸಿ ಗರಿಷ್ಠ (minimum), ಕನಿಷ್ಠ (maximum) ಮತ್ತು ಮಧ್ಯದ (median) ಬೆಲೆಗಳನ್ನು ಕಂಡುಹಿಡಿಯಲು ಕಲಿಯೋಣ. |
07:37 | ಫಲಿತಾಂಶವು ಪ್ರಕಟಗೊಳ್ಳಬೇಕಾದ “C10” ಸೆಲ್ ಅನ್ನು ಕ್ಲಿಕ್ ಮಾಡೋಣ. |
07:44 | “Cost” ಶೀರ್ಷಿಕೆಯ ಅಡಿಯಲ್ಲಿ, ನಾವು ಕೆಲವೊಂದಿಷ್ಟು ಅಂಶಗಳನ್ನು ಹೊಂದಿದ್ದೇವೆ. |
07:48 | 300 ರೂಪಾಯಿಗಳು ಕನಿಷ್ಠತಮ ಬೆಲೆಯಾಗಿದೆ. |
07:51 | 6000 ರೂಪಾಯಿಗಳು ಗರಿಷ್ಠತಮ ಬೆಲೆಯಾಗಿದೆ. |
07:55 | ಇವೆಲ್ಲವೂ ನಾವು ಆಯಾ ಕಾರ್ಯಗಳನ್ನು ಮಾಡಿದಾಗ ಪ್ರಕಟವಾಗಬೇಕಾದ ಫಲಿತಾಂಶಗಳು. |
08:00 | “C10” ಸೆಲ್ ನಲ್ಲಿ “ ಸಮ ಚಿನ್ಹೆ MAX” ಮತ್ತು ಬಂಧಕದ ಒಳಗೆ “C3” ವಿವರಣಾತ್ಮಕ ಚಿನ್ಹೆ “C7” ಎಂದು ಟೈಪ್ ಮಾಡಿ. |
08:10 | “Enter” ಕೀಲಿಯನ್ನು ಒತ್ತಿರಿ. |
08:13 | ಕಾಲಮ್ ನಲ್ಲಿರುವ ಗರಿಷ್ಠ ಬೆಲೆಯಾಗಿರುವ “6000” ವು ಫಲಿತಾಂಶವಾಗಿ ಪ್ರಕಟವಾಗಿರುವುದನ್ನು ಗಮನಿಸಿ. |
08:20 | ಈಗ, “MAX” ಹೇಳಿಕೆಯ ಜಾಗದಲ್ಲಿ “MIN” ಎನ್ನುವ ಹೇಳಿಕೆಯನ್ನು ದಾಖಲಿಸೋಣ. |
08:25 | ಮತ್ತು “Enter” ಕೀಲಿಯನ್ನು ಒತ್ತೋಣ. |
08:28 | ಕಾಲಮ್ ನ ಕನಿಷ್ಠತಮ ಬೆಲೆಯಾದ “300”, ಫಲಿತಾಂಶವಾಗಿ ಪ್ರಕಟವಾಗಿರುವುದನ್ನು ಗಮನಿಸಿ. |
08:34 | ಮಧ್ಯದ ಬೆಲೆಯನ್ನು(median value) ಕಂಡುಕೊಳ್ಳಲು, “MIN” ಎಂಬ ಹೇಳಿಕೆಯ ಜಾಗದಲ್ಲಿ “MEDIAN”ಎಂದು ನಮೂದಿಸಿ, |
08:40 | ಮತ್ತು “Enter” ಕೀಲಿಯನ್ನು ಒತ್ತಿರಿ. |
08:43 | ಕಾಲಮ್ ನಲ್ಲಿನ ಮಧ್ಯದ ಬೆಲೆಯಾದ “800”, ಫಲಿತಾಂಶವಾಗಿ ಪ್ರಕಟವಾಗುತ್ತದೆ. |
08:50 | ಇದೇ ರೀತಿಯಲ್ಲಿ ನೀವು ಸಂಖ್ಯಾಶಾಸ್ತ್ರದ ಕಾರ್ಯಗಳನ್ನು ಬಳಸಿ ದತ್ತಾಂಶಗಳನ್ನು ಅದಕ್ಕೆ ತಕ್ಕನಾಗಿ ವಿಂಗಡಿಸಬಹುದು. |
08:58 | ಈ ಸೆಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ಡಿಲೀಟ್ ಮಾಡೋಣ. |
09:02 | ಸಂಖ್ಯೆಗಳನ್ನು ಸರಿಹೊಂದಿಸಲು(round off) ಕಲಿಯೋಣ. |
09:05 | “Cost” ಶೀರ್ಷಿಕೆಯ ಅಡಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡೋಣ. |
09:09 | ನಾವು
“6000” ಅನ್ನು “6000.34” ಎಂದು “600” ಅನ್ನು “600.4” ಎಂದು ಮತ್ತು ”300” ಅನ್ನು “300.3” ಎಂದು ಪರಿವರ್ತಿಸೋಣ . |
09:23 | ಈಗ, “B11” ಸೆಲ್ ಅನ್ನು ಕ್ಲಿಕ್ ಮಾಡಿ “ROUNDING OFF” ಎಂದು ಶೀರ್ಷಿಕೆಯನ್ನು ನಮೂದಿಸಿ. |
09:31 | “C11” ಸೆಲ್ ಅನ್ನು ಕ್ಲಿಕ್ ಮಾಡಿ, ಅಲ್ಲಿ ನಾವು “Cost” ಶೀರ್ಷಿಕೆಯ ಅಡಿಯಲ್ಲಿನ ಬೆಲೆಗಳ ಒಟ್ಟು ಮೊತ್ತವನ್ನು ಕಂಡುಹಿಡಿಯಲಿದ್ದೇವೆ. |
09:39 | C11 ಸೆಲ್ ನಲ್ಲಿ “ಸಮ ಚಿನ್ಹೆ SUM” ಮತ್ತು ಬಂಧಕದ ಒಳಗೆ, “C3” ವಿವರಾಣಾತ್ಮಕ ಚಿನ್ಹೆ “C7” ಎಂದು ಟೈಪ್ ಮಾಡಿ. |
09:49 | ಈಗ, Enter ಕೀಲಿಯನ್ನು ಒತ್ತಿ. |
09:53 | ಗಮನಿಸಿ, “9701.04” ಎನ್ನುವುದು ಒಟ್ಟು ಮೊತ್ತ. |
09:59 | ನಮ್ಮ ಫಲಿತಾಂಶದಲ್ಲಿ ನಮಗೆ ದಂಶಾಶ ಸ್ಥಾನವು ಬೇಡವೆಂದಿಟ್ಟುಕೊಳ್ಳೋಣ. |
10:04 | ಇದಕ್ಕೆ ಸರಳ ಉಪಾಯವೆಂದರೆ ಫಲಿತಾಂಶದ ಸಮೀಪದ ಪೂರ್ಣಾಂಕಕ್ಕೆ ಸರಿಹೊಂದಿಸುವುದು. |
10:09 | “9701.04” ಎಂಬ ಒಟ್ಟು ಮೊತ್ತವನ್ನು ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡೋಣ. |
10:15 | ಅಲ್ಲಿ “ಸಮ ಚಿನ್ಹೆ ROUND” ಎಂದೂ, ಬಂಧಕವನ್ನು ತೆರೆದು “SUM” ಎಂದೂ, ಪುನಃ ಬಂಧಕದೊಳಗೆ “C3” ವಿವರಾಣಾತ್ಮಕ ಚಿನ್ಹೆ “C7” ಎಂದೂ ಟೈಪ್ ಮಾಡಿ. |
10:25 | ಬಂಧಕವನ್ನು ಮೊಚ್ಚೋಣ ಮತ್ತು Enter ಕೀಲಿಯನ್ನು ಅನ್ನು ಒತ್ತೋಣ. |
10:29 | ನೀವು ಗಮನಿಸಿ, ಈಗ ಫಲಿತಾಂಶವು “9701.04” ಎಂಬ ದಶಾಂಶವುಳ್ಳ ಸಂಖ್ಯೆಯಿದ “9701” ಎಂಬ ಹತ್ತಿರದ ಪೂರ್ಣಾಂಕಕ್ಕೆ ಸರಿಹೊಂದಿದೆ. |
10:44 | ದಂಶಾಂಶವಿರುವ ಸಂಖ್ಯೆಗಳನ್ನು ಮೇಲಿನ ಅಥವಾ ಕೆಳಗಿನ ಪೂರ್ಣಾಂಕಗಳಿಗೆ ಸರಿಹೊಂದಿಸಬಹುದು. |
10:52 | ಫಲಿತಾಂಶವಿರುವ ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿರುವ “ROUND” ಎಂಬ ಹೇಳಿಕೆಯನ್ನು “ROUNDUP” ಎಂದು ಬದಲಾಯಿಸಿ. |
10:59 | ಈಗ, “Enter” ಕೀಲಿಯನ್ನು ಒತ್ತಿರಿ. |
11:02 | “9702” ಎಂದು ಫಲಿತಾಂಶವು ಪ್ರಕಟವಾಗಿರುವುದನ್ನು ಗಮನಿಸಿ. ಇದು ಮೇಲಿನ ಪೂರ್ಣಾಂಕವಾಗಿದೆ. |
11:10 | ಕೆಳಗಿನ ಪೂರ್ಣಾಂಕಕ್ಕೆ ಸರಿಹೊಂದಿಸಲು, “ROUNDUP” ನಿಂದ “ROUNDDOWN” ಎಂದು ಹೇಳೀಕೆಯನ್ನು ಬದಲಾಯಿಸಿ. |
11:17 | ಮತ್ತು “Enter” ಕೀಲಿಯನ್ನು ಒತ್ತಿರಿ. |
11:19 | ಈಗ “9701” ಎಂದು ಕೆಳಗಿನ ಪೂರ್ಣಾಂಕವು ಫಲಿತಾಂಶವಾಗಿ ಪ್ರಕಟವಾಗಿದೆ. |
11:28 | “Personal-Finance-Tracker.ods” ನ ಮೂಲ ಸ್ವರೂಪವನ್ನು ಪಡೆಯಲ್ಲು ಪುನಃ ಮೊದಲಿನಂತೆಯೇ (undo) ಮಾಡೋಣ. |
11:37 | ಇಲ್ಲಿಗೆ LibreOffice Calc ಮೇಲಿನ ಸ್ಪೋಕನ್ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ. |
11:43 | ಇಲ್ಲಿ ನಾವು ಈ ಕೆಳಗನವುಗಳನ್ನು ಕಲಿತ್ತಿದ್ದೇವೆ:
ನಿಬಂಧನಾತ್ಮಕ ಆಪರೇಟರ್ ಗಳು, If ಮತ್ತು Or ಹೇಳಿಕೆಗಳು, ಮೂಲಭೂತ ಸಂಖ್ಯಾಶಾಸ್ತ್ರದ ಕಾರ್ಯಗಳು, ಸಂಖ್ಯೆಗಳನ್ನು ಸರಿಹೊಂದಿಸುವುದು. |
11:55 | ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ: |
11:58 | ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ. |
12:01 | ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
12:06 | ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
12:11 | ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
12:15 | ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
12:21 | ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ. |
12:26 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
12:34 | ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ. |
12:45 | ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು. |