LibreOffice-Suite-Calc/C3/Formulas-and-Functions/Kannada

From Script | Spoken-Tutorial
Jump to: navigation, search
Time Narration
00:00 ಲಿಬ್ರೆ ಆಫಿಸ್ ಕ್ಯಾಲ್ಕ್ ನಲ್ಲಿನ ಸೂತ್ರಗಳು ಮತ್ತು ಅವುಗಳ ಫಂಕ್ಷನ್ ಗಳ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:

ನಿಬಂಧನಾತ್ಮಕ (Conditional) ಆಪರೇಟರ್ ಗಳ ಬಗ್ಗೆ, If ಮತ್ತು Or ಹೇಳಿಕೆಗಳ ಉಪಯೋಗ, ಮೂಲಭೂತವಾದ ಸಂಖ್ಯಾಶಾಸ್ತ್ರದ (statistic) ಕಾರ್ಯಗಳ(ಫಂಕ್ಷನ್) ಬಗ್ಗೆ ಹಾಗೂ ಸಂಖ್ಯೆಗಳನ್ನು ಸರಿಹೊಂದಿಸಲು (Rounding off) ಕಲಿಯಲಿದ್ದೇವೆ.

00:19 ಇಲ್ಲಿ ನಾವು ಉಬಂಟು ಲಿನಕ್ಸ್ ನ 10.04 ಆವೃತ್ತಿಯನ್ನು ಮತ್ತು ಲಿಬ್ರೆ ಆಫಿಸ್ ಸೂಟ್ ನ 3.3.4 ಆವೃತ್ತಿಯನ್ನು ಬಳಸುತ್ತಿದ್ದೇವೆ.
00:30 ನಾವು ಈಗಾಗಲೇ ಅಂಕಗಣಿತದ ಮೂಲಭೂತ ಕಾರ್ಯಗಳಾದ ದತ್ತಾಂಶಗಳ ಕೂಡುವಿಕೆ, ಕಳೆಯುವಿಕೆ, ಮತ್ತು ಸರಾಸರಿಗಳ ಕಂಡುಹಿಡಿಯುವಿಕೆಯನ್ನು ಕಲಿತಿದ್ದೇವೆ..
00:39 ಈಗ ಇನ್ನಿತರ ಕೆಲ ಉಪಯುಕ್ತ ಕಾರ್ಯಗಳನ್ನು ಕಲಿಯೋಣ.
00:43 ಅವುಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಆಪರೇಟರ್ ಎಂದರೆ ನಿಬಂಧನಾತ್ಮಕ (Conditional) ಆಪರೇಟರ್.
00:51 ನಿಬಂಧನಾತ್ಮಕ (Conditional) ಆಪರೇಟರ್ ಗಳು ,

ದತ್ತಾಂಶಗಳ ಮೇಲೆ ಬಳಕೆದಾರನ ನಿಬಂಧೆನಗಳನ್ನು(ಕಂಡೀಶನ್) ಪರಿಶೀಲಿಸುತ್ತವೆ.

00:56 ಮತ್ತು TRUE ಅಥವಾ FALSE ಎಂದು ಫಲಿತಾಂಶವನ್ನು ಪ್ರಕಟಪಡಿಸುತ್ತವೆ.
01:01 “Personal-Finance-Tracker.ods” ಅನ್ನು ಓಪನ್ ಮಾಡೋಣ.
01:05 ಇಲ್ಲಿ, “Cost” ಎಂಬ ಶೀರ್ಷಿಕೆಯ ಅಡಿಯಲ್ಲಿ , ಕೆಲವು ವಸ್ತುಗಳ ಬೆಲೆಗಳನ್ನು ಪಟ್ಟಿ ಮಾಡಿದ್ದೇವೆ.
01:11 ಅಲ್ಲಿಗೆ ನಿಬಂಧನಾತ್ಮಕ (conditional) ಆಪರೇಟರ್ ಅನ್ನು ಅನ್ವಯಸಿ, ಬಂದ ಫಲಿತಾಂಶವನ್ನು ವಿಮರ್ಶಿಸೋಣ.
01:17 “B10” ಕೋಶವನ್ನು ಕ್ಲಿಕ್ ಮಾಡಿ ಮತ್ತು ಅದರೊಳಗೆ “Condition Result” ಎಂದು ಟೈಪ್ ಮಾಡಿ.
01:24 ಈಗ, “C10” ಸೆಲ್ ಅನ್ನು ಕ್ಲಿಕ್ಕಿಸಿ.
01:28 ಈ ಸೆಲ್ ನಲ್ಲಿ ಈ ಮೇಲಿನ ಬೆಲೆಗಳಿಗೆ ನಿಬಂಧನಾತ್ಮಕ ಫಲಿತಾಂಶವು ಅನ್ವಯವಾಗುತ್ತದೆ ಮತ್ತು ಈ ಸೆಲ್ ನಲ್ಲಿ ಅದು ಪ್ರದರ್ಶಿತವಾಗಲಿದೆ.
01:33 “House Rent” ನ ಬೆಲೆ 6,000 ರೂಪಾಯಿಗಳು,
01:38 ಹಾಗು “Electricity Bill” ನ ಬೆಲೆಯು 800 ರೂಪಾಯಿಗಳೆಂದು ಗಮನಿಸಿ.
01:43 “House Rent” ನ ಬೆಲೆಯು “Electricity Bill” ನ ಬೆಲೆಗಿಂತ ಅಧಿಕವಾಗಿದೆ.
01:48 ನಾವು ಅವುಗಳ ಮೆಲೆ ವಿವಿಧ ನಿಬಂಧನೆಗಳನ್ನು ಅನ್ವಯಿಸಿ, ಫಲಿತಾಂಶಗಳನ್ನು ಪಡೆಯಬಹುದು.
01:54 “C10” ಸೆಲ್ ಅನ್ನು ಕ್ಲಿಕ್ಕಿಸಿ.
01:57 ಈ ಸೆಲ್ ನಲ್ಲಿ, “ ಸಮ ಚಿನ್ಹೆ C3 ಗ್ರೇಟರ್ ದೆನ್ C4 ” ಎನ್ನುವ ನಿಬಂಧನೆಯನ್ನು ಟೈಪ್ ಮಾಡಿ ಮತ್ತು “Enter” ಕೀಲಿಯನ್ನು ಒತ್ತಿ.
02:09 C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನ ಬೆಲೆಗಿಂತ ಹೆಚ್ಚಾಗಿರುವುದರಿಂದ, “TRUE” ಎನ್ನುವ ಫಲಿತಾಂಶ ಪ್ರದರ್ಶಿತವಾಗುತ್ತದೆ.
02:18 ಈಗ, “ಸಮ ಚಿನ್ಹೆ C3 ಲೆಸ್ ದೆನ್ C4” ಎಂದು ನಿಬಂಧನಾತ್ಮಕ ಹೇಳಿಕೆಯನ್ನು ಬದಲಿಸೋಣ.
02:26 “Enter” ಕೀಲಿಯನ್ನು ಒತ್ತಿರಿ.
02:28 “FALSE” ಎಂದು ಫಲಿತಾಂಶ ಪ್ರಕಟವಾಗುತ್ತದೆ.
02:32 ಇದೇ ಮಾದರಿಯಲ್ಲಿ ನಾವು, ವಿವಿಧ ಹೇಳಿಕೆಗಳನ್ನು ಅನ್ವಯಿಸಿ, ಫಲಿತಾಂಶವನ್ನು ಪರೀಕ್ಷಿಸಬಹುದು.
02:38 ಈ ರೀತಿಯ ಹೇಳಿಕೆಗಳು ದೊಡ್ಡ ಮೊತ್ತದ ದತ್ತಾಂಶಗಳ ವ್ಯವಹಾರದಲ್ಲಿ ಅನುಕೂಲಕರವಾಗಿರುತ್ತವೆ.
02:44 ಇದೇ ರೀತಿಯಲ್ಲಿ ನೀವು “If ಮತ್ತು Or” ನಿಬಂಧನೆಗಳನ್ನು ಕೂಡ ದತ್ತಾಂಶಗಳ ಮೇಲೆ
02:49 ನಿಬಂಧನೆಗಳಿಗೆ ಅನುಸಾರವಾಗಿ TRUE ಎನ್ನುವ ಫಲಿತಾಂಶವನ್ನು ಮುದ್ರಿಸಲು ಅನ್ವಯಿಸಬಹುದು.
02:55 “C10” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು ಅಲ್ಲಿ,
02:59 “ ಸಮ ಚಿನ್ಹೆ IF” ಮತ್ತು ಬಂಧಕದ (ಬ್ರೇಸಸ್) ಒಳಗೆ “C3 ಗ್ರೇಟರ್ ದೆನ್ C4”, ಅರ್ಧವಿರಾಮ , ಪುನಃ ಡಬಲ್ ಕೋಟ್ ನ ಒಳಗೆ “Positive” ಎಂದು, ಅರ್ಧವಿರಾಮ ಮತ್ತು ಪುನಃ ಡಬಲ್ ಕೋಟ್ ನ ಒಳಗೆ “Negative”ಎಂದು ಟೈಪ್ ಮಾಡಿ.
03:16 C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನಲ್ಲಿನ ಬೆಲೆಗಿಂತ ಜಾಸ್ತಿಯಾಗಿದ್ದೆರೆ, “Positive”ಎಂದೂ
03:25 ಇಲ್ಲದಿದ್ದರೆ “Negative” ಎಂದೂ, ಪ್ರದರ್ಶಿತವಾಗುತ್ತದೆ.
03:28 “Enter” ಕೀಲಿಯನ್ನು ಒತ್ತಿರಿ.
03:31 6000 ರೂಪಾಯಿಗಳು 800 ರೂಪಾರೂಪಾಯಿಗಳಿಗಿಂತ ಜಾಸ್ತಿಯಾಗಿರುವುದರಿಂದ , ಫಲಿತಾಂಶವು“Positive” ಎಂದು ಪ್ರದರ್ಶಿತವಾಗಿರುವುದನ್ನು ಗಮನಿಸಿ.
03:39 ಈಗ, ನಿಬಂಧನಾತ್ಮಕ ಹೇಳಿಕೆಯನ್ನು“ಗ್ರೇಟರ್ ದೆನ್” ನಿಂದ “ಲೆಸ್ ದೆನ್” ಎಂದು ಬದಲಾಯಿಸಿ,“Enter” ಕೀಲಿಯನ್ನು ಒತ್ತಿರಿ.
03:47 C3 ಸೆಲ್ ನಲ್ಲಿನ ಬೆಲೆಯು C4 ಸೆಲ್ ನಲ್ಲಿನ ಬೆಲೆಗಿಂತ ಹೆಚ್ಚಾಗಿರುವುದರಿಂದ ಫಲಿತಾಂಶವು “Negative” ಎಂದು ಪ್ರದರ್ಶಿತವಾಗುವುದನ್ನು ಗಮನಿಸಿ .
03:57 C3 ಮತ್ತು C4 ಸೆಲ್ ನಲ್ಲಿ ದತ್ತಾಂಶವನ್ನು ಬದಲಾಯಿಸದರೆ ಫಲಿತಾಂಶದಲ್ಲೂ ಬದಲಾವಣೆಯನ್ನು ಗಮನಿಸಬಹುದು.
04:04 “Negative” ಎಂದು ಈಗ ಫಲಿತಾಂಶವು ಪ್ರಕಟವಾಗಿದೆ.
04:09 ಈಗ, C4 ಸೆಲ್ ನಲ್ಲಿನ ಬೆಲೆಯನ್ನು “7000” ರುಪಾಯಿಗಳಿಗೆ ಹೆಚ್ಚಿಸೋಣ ಮತ್ತು “Enter” ಕೀಲಿಯನ್ನು ಒತ್ತೋಣ.
04:17 ಈಗ ಫಲಿತಾಂಶವು ಸ್ವತಃ “Positive” ಎಂದು ಪರಿವರ್ತಿತವಾಗುತ್ತದೆ.
04:22 ಪುನಃ, C4 ಸೆಲ್ ನಲ್ಲಿನ ಬೆಲೆಯನ್ನು “800” ರೂಪಾಯಿಗಳಿಗೆ ಇಳಿಸೋಣ
04:26 ಮತ್ತು “Enter” ಕೀಲಿಯನ್ನು ಒತ್ತೋಣ.
04:29 ಫಲಿತಾಂಶವು ಸ್ವತಃ ಮೊದಲಿನಂತೆಯೇ “Negative” ಎಂದು ಬದಲಾಗುತ್ತದೆ.
04:34 ಈದೀಗ ಮಾಡಿದ ಪರಿವರ್ತನೆಗಳನ್ನು ಡಿಲೀಟ್ ಮಾಡೋಣ.
04:38 ಮುಂದೆ, ಕೆಲ ಅಂಕಗಣಿತದ (arithmetic) ಮತ್ತು ಸಂಖ್ಯಾಶಾಸ್ತ್ರದ (statistic) ಕೆಲಸಗಳನ್ನು ಕಲಿಯೋಣ.
04:43 ಮೂಲಭೂತವಾದ ಅಂಕಗಣಿತದ ಕೆಲಸಗಳೆಂದರೆ-

ಕೂಡಿಸಲು SUM, ಗುಣಾಕರಕ್ಕೆ PRODUCT, ಭಾಗಾಕಾರಕ್ಕೆ QUOTIENT (ಕೋಶಂಟ್) ಮತ್ತು ಈ ಹಿಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿತ ಇನ್ನಿತರ ಅಂಶಗಳು .

04:57 ಈಗ Sum, Product ಮತ್ತು Quotient ನ ಕೆಲಸಗಳನ್ನು ಪರಿಶೀಲಿಸಲು ಒಂದಷ್ಟು ಕಾರ್ಯಗಳನ್ನು ಮಾಡೋಣ.
05:05 “Sheet 3” ಅನ್ನು ಆಯ್ದುಕೊಳ್ಳಿ.
05:08 “50”,”100” ಮತ್ತು ”150” ಸಂಖ್ಯೆಗಳನ್ನು ಕ್ರಮವಾಗಿ “B1”, “B2” ಮತ್ತು “B3” ಸೆಲ್ ಗಳಲ್ಲಿ ನಮೂದಿಸಿ.
05:19 “A4” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು “SUM” ಎಂದು ಟೈಪ್ ಮಾಡಿ.
05:23 “B4” ಸೆಲ್ ಅನ್ನು ಕ್ಲಿಕ್ ಮಾಡಿ.
05:26 ಈ ಸೆಲ್ ನಲ್ಲಿಯೇ ನಾವು ಫಲಿತಾಂಶವನ್ನು ಲೆಕ್ಕಿಸಬೇಕು (compute).
05:30 ಅಲ್ಲಿ “ಸಮ ಚಿನ್ಹೆ “SUM” ಎಂದೂ ಮತ್ತು ಬಂಧಕದ (ಬ್ರೇಸ್) ಒಳಗೆ B1 ಅರ್ಧವಿರಾಮ B2 ಅರ್ಧವಿರಾಮ B3 ಎಂದೂ ಟೈಪ್ ಮಾಡಿ.
05:37 Enter ಕೀಲಿಯನ್ನು ಒತ್ತಿರಿ.
05:39 “300” ಎಂದು ಫಲಿತಾಂಶವು ಪ್ರಕಟವಾಗಿರುವುದನ್ನು ಗಮನಿಸಿ.
05:43 ನೀವು ಸೆಲ್ ಗಳಲ್ಲಿನ ಬೆಲೆಗಳ ವ್ಯಾಪ್ತಿಯನ್ನು(range) ಕೂಡ ಕಂಡುಹಿಡಿಯಬಹುದು.
05:47 “B4” ಸೆಲ್ ಅನ್ನು ಪುನಃ ಕ್ಲಿಕ್ಕಿಸಿ.
05:49 ಈಗ, ಬಂಧಕದ (ಬ್ರೇಸಸ್) ಒಳಗಡೆ, B1 ಅರ್ಧವಿರಾಮ B2 ಅರ್ಧವಿರಾಮ B3 ಎನ್ನುವುದರ ಬದಲಾಗಿ, B1 ವಿವರಣಾತ್ಮಕ ಚಿನ್ಹೆB3 ,ಎಂದು ಟೈಪ್ ಮಾಡಿ.
05:58 Enter ಅನ್ನು ಒತ್ತಿರಿ.
06:00 ಮತ್ತೊಮ್ಮೆ ,“300” ಎಂದು ಫಲಿತಾಂಶವು ಪ್ರಕಟವಾಗುತ್ತದೆ.
06:03 “A5” ಸೆಲ್ ಅನ್ನು ಕ್ಲಿಕ್ಕಿಸಿ ಮತ್ತು “PRODUCT” ಎಂದು ಟೈಪ್ ಮಾಡಿ.
06:08 “B5” ಸೆಲ್ ಅನ್ನು ಕ್ಲಿಕ್ ಮಾಡಿ.
06:10 ಇಲ್ಲಿ “ಸಮ ಚಿನ್ಹೆ” “PRODUCT” ಎಂದೂ ಮತ್ತು ಬಂಧಕದ ಒಳಗೆ B1 “ವಿವರಾಣಾತ್ಮಕ ಚಿನ್ಹೆ” B3 ಎಂದು ಟೈಪ್ ಮಾಡಿ.
06:18 Enter ಅನ್ನು ಒತ್ತಿರಿ.
06:20 “7,50,000” ಎಂದು ಫಲಿತಾಶವು ಪ್ರಕಟವಾಗುವುದನ್ನು ಗಮನಿಸಿ.
06:26 Quotient ನ ಕೆಲಸಗಳನ್ನು ನೋಡೋಣ.
06:29 “A6” ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು “QUOTIENT” ಎಂದು ಟೈಪ್ ಮಾಡಿ.
06:34 ಈಗ “B6” ಸೆಲ್ ಅನ್ನು ಕ್ಲಿಕ್ ಮಾಡಿ.
06:37 ನಾವು ಈ ಸೆಲ್ ಅನ್ನು ಫಲಿತಾಂಶವನ್ನು ಪಡೆಯಲು ಬಳಸಲಿದ್ದೇವೆ.
06:40 ಮತ್ತು ಅಲ್ಲಿ “ಸಮ ಚಿನ್ಹೆ QUOTIENT” ಮತ್ತು ಬಂಧಕದ ಒಳಗೆ B2 ಅರ್ಧವಿರಾಮ B1 ಎಂದು ಟೈಪ್ ಮಾಡಿ.
06:47 Enter ಅನ್ನು ಒತ್ತಿರಿ.
06:49 ಸಂಖ್ಯೆ “100”, ಸಂಖ್ಯೆ “50” ರಿಂದ ಭಾಗವಾಗಿರುವುದರಿಂದ “2” ಎಂದು ಫಲಿತಾಂಶವು ಪ್ರಕಟವಾಗುತ್ತದೆ.
06:59 ಇದೇ ರೀತಿಯಲ್ಲಿ ನಾವು ಕ್ಯಾಲ್ಕ್ ಅನ್ನು ಉಪಯೋಗಿಸಿ ವಿವಿಧ ಅಂಕಗಣಿತಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡಬಹುದು.
07:05 ಈಗ, ಸಂಖ್ಯಾಶಾಸ್ತ್ರದ (Statistic) ಕಾರ್ಯಗಳನ್ನು ಅನ್ವಯಿಸುವುದನ್ನು ಕಲಿಯೋಣ.
07:09 ಸಂಖ್ಯಾಶಾಸ್ತ್ರದ ಕಾರ್ಯಗಳು

ಸ್ಪ್ರೆಡ್ ಶೀಟ್ ನಲ್ಲಿನ ದತ್ತಾಂಶಗಳ ವಿಂಗಡಿಸುವಿಕೆಗೆ ಉಪಯುಕ್ತವಾಗಿವೆ. ಉದಾಹರಣೆಗಾಗಿ, COUNT, MIN, MAX, MEDIAN, MODE ಮುಂತಾದ ಕಾರ್ಯಗಳು ಮತ್ತು ಸ್ವಭಾವದಿಂದ ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಅಂಶಗಳು.

07:27 ಮೊದಲಿಗೆ, sheet 1 ಅನ್ನು ಕ್ಲಿಕ್ ಮಾಡಿ.
07:30 ಸಂಖ್ಯಾಶಾಸ್ತ್ರವನ್ನು ಉಪಯೋಗಿಸಿ ಗರಿಷ್ಠ (minimum), ಕನಿಷ್ಠ (maximum) ಮತ್ತು ಮಧ್ಯದ (median) ಬೆಲೆಗಳನ್ನು ಕಂಡುಹಿಡಿಯಲು ಕಲಿಯೋಣ.
07:37 ಫಲಿತಾಂಶವು ಪ್ರಕಟಗೊಳ್ಳಬೇಕಾದ “C10” ಸೆಲ್ ಅನ್ನು ಕ್ಲಿಕ್ ಮಾಡೋಣ.
07:44 “Cost” ಶೀರ್ಷಿಕೆಯ ಅಡಿಯಲ್ಲಿ, ನಾವು ಕೆಲವೊಂದಿಷ್ಟು ಅಂಶಗಳನ್ನು ಹೊಂದಿದ್ದೇವೆ.
07:48 300 ರೂಪಾಯಿಗಳು ಕನಿಷ್ಠತಮ ಬೆಲೆಯಾಗಿದೆ.
07:51 6000 ರೂಪಾಯಿಗಳು ಗರಿಷ್ಠತಮ ಬೆಲೆಯಾಗಿದೆ.
07:55 ಇವೆಲ್ಲವೂ ನಾವು ಆಯಾ ಕಾರ್ಯಗಳನ್ನು ಮಾಡಿದಾಗ ಪ್ರಕಟವಾಗಬೇಕಾದ ಫಲಿತಾಂಶಗಳು.
08:00 “C10” ಸೆಲ್ ನಲ್ಲಿ “ ಸಮ ಚಿನ್ಹೆ MAX” ಮತ್ತು ಬಂಧಕದ ಒಳಗೆ “C3” ವಿವರಣಾತ್ಮಕ ಚಿನ್ಹೆ “C7” ಎಂದು ಟೈಪ್ ಮಾಡಿ.
08:10 “Enter” ಕೀಲಿಯನ್ನು ಒತ್ತಿರಿ.
08:13 ಕಾಲಮ್ ನಲ್ಲಿರುವ ಗರಿಷ್ಠ ಬೆಲೆಯಾಗಿರುವ “6000” ವು ಫಲಿತಾಂಶವಾಗಿ ಪ್ರಕಟವಾಗಿರುವುದನ್ನು ಗಮನಿಸಿ.
08:20 ಈಗ, “MAX” ಹೇಳಿಕೆಯ ಜಾಗದಲ್ಲಿ “MIN” ಎನ್ನುವ ಹೇಳಿಕೆಯನ್ನು ದಾಖಲಿಸೋಣ.
08:25 ಮತ್ತು “Enter” ಕೀಲಿಯನ್ನು ಒತ್ತೋಣ.
08:28 ಕಾಲಮ್ ನ ಕನಿಷ್ಠತಮ ಬೆಲೆಯಾದ “300”, ಫಲಿತಾಂಶವಾಗಿ ಪ್ರಕಟವಾಗಿರುವುದನ್ನು ಗಮನಿಸಿ.
08:34 ಮಧ್ಯದ ಬೆಲೆಯನ್ನು(median value) ಕಂಡುಕೊಳ್ಳಲು, “MIN” ಎಂಬ ಹೇಳಿಕೆಯ ಜಾಗದಲ್ಲಿ “MEDIAN”ಎಂದು ನಮೂದಿಸಿ,
08:40 ಮತ್ತು “Enter” ಕೀಲಿಯನ್ನು ಒತ್ತಿರಿ.
08:43 ಕಾಲಮ್ ನಲ್ಲಿನ ಮಧ್ಯದ ಬೆಲೆಯಾದ “800”, ಫಲಿತಾಂಶವಾಗಿ ಪ್ರಕಟವಾಗುತ್ತದೆ.
08:50 ಇದೇ ರೀತಿಯಲ್ಲಿ ನೀವು ಸಂಖ್ಯಾಶಾಸ್ತ್ರದ ಕಾರ್ಯಗಳನ್ನು ಬಳಸಿ ದತ್ತಾಂಶಗಳನ್ನು ಅದಕ್ಕೆ ತಕ್ಕನಾಗಿ ವಿಂಗಡಿಸಬಹುದು.
08:58 ಈ ಸೆಲ್ ನಲ್ಲಿ ಮಾಡಿದ ಬದಲಾವಣೆಗಳನ್ನು ಡಿಲೀಟ್ ಮಾಡೋಣ.
09:02 ಸಂಖ್ಯೆಗಳನ್ನು ಸರಿಹೊಂದಿಸಲು(round off) ಕಲಿಯೋಣ.
09:05 “Cost” ಶೀರ್ಷಿಕೆಯ ಅಡಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡೋಣ.
09:09 ನಾವು

“6000” ಅನ್ನು “6000.34” ಎಂದು “600” ಅನ್ನು “600.4” ಎಂದು ಮತ್ತು ”300” ಅನ್ನು “300.3” ಎಂದು ಪರಿವರ್ತಿಸೋಣ .

09:23 ಈಗ, “B11” ಸೆಲ್ ಅನ್ನು ಕ್ಲಿಕ್ ಮಾಡಿ “ROUNDING OFF” ಎಂದು ಶೀರ್ಷಿಕೆಯನ್ನು ನಮೂದಿಸಿ.
09:31 “C11” ಸೆಲ್ ಅನ್ನು ಕ್ಲಿಕ್ ಮಾಡಿ, ಅಲ್ಲಿ ನಾವು “Cost” ಶೀರ್ಷಿಕೆಯ ಅಡಿಯಲ್ಲಿನ ಬೆಲೆಗಳ ಒಟ್ಟು ಮೊತ್ತವನ್ನು ಕಂಡುಹಿಡಿಯಲಿದ್ದೇವೆ.
09:39 C11 ಸೆಲ್ ನಲ್ಲಿ “ಸಮ ಚಿನ್ಹೆ SUM” ಮತ್ತು ಬಂಧಕದ ಒಳಗೆ, “C3” ವಿವರಾಣಾತ್ಮಕ ಚಿನ್ಹೆ “C7” ಎಂದು ಟೈಪ್ ಮಾಡಿ.
09:49 ಈಗ, Enter ಕೀಲಿಯನ್ನು ಒತ್ತಿ.
09:53 ಗಮನಿಸಿ, “9701.04” ಎನ್ನುವುದು ಒಟ್ಟು ಮೊತ್ತ.
09:59 ನಮ್ಮ ಫಲಿತಾಂಶದಲ್ಲಿ ನಮಗೆ ದಂಶಾಶ ಸ್ಥಾನವು ಬೇಡವೆಂದಿಟ್ಟುಕೊಳ್ಳೋಣ.
10:04 ಇದಕ್ಕೆ ಸರಳ ಉಪಾಯವೆಂದರೆ ಫಲಿತಾಂಶದ ಸಮೀಪದ ಪೂರ್ಣಾಂಕಕ್ಕೆ ಸರಿಹೊಂದಿಸುವುದು.
10:09 “9701.04” ಎಂಬ ಒಟ್ಟು ಮೊತ್ತವನ್ನು ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡೋಣ.
10:15 ಅಲ್ಲಿ “ಸಮ ಚಿನ್ಹೆ ROUND” ಎಂದೂ, ಬಂಧಕವನ್ನು ತೆರೆದು “SUM” ಎಂದೂ, ಪುನಃ ಬಂಧಕದೊಳಗೆ “C3” ವಿವರಾಣಾತ್ಮಕ ಚಿನ್ಹೆ “C7” ಎಂದೂ ಟೈಪ್ ಮಾಡಿ.
10:25 ಬಂಧಕವನ್ನು ಮೊಚ್ಚೋಣ ಮತ್ತು Enter ಕೀಲಿಯನ್ನು ಅನ್ನು ಒತ್ತೋಣ.
10:29 ನೀವು ಗಮನಿಸಿ, ಈಗ ಫಲಿತಾಂಶವು “9701.04” ಎಂಬ ದಶಾಂಶವುಳ್ಳ ಸಂಖ್ಯೆಯಿದ “9701” ಎಂಬ ಹತ್ತಿರದ ಪೂರ್ಣಾಂಕಕ್ಕೆ ಸರಿಹೊಂದಿದೆ.
10:44 ದಂಶಾಂಶವಿರುವ ಸಂಖ್ಯೆಗಳನ್ನು ಮೇಲಿನ ಅಥವಾ ಕೆಳಗಿನ ಪೂರ್ಣಾಂಕಗಳಿಗೆ ಸರಿಹೊಂದಿಸಬಹುದು.
10:52 ಫಲಿತಾಂಶವಿರುವ ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿರುವ “ROUND” ಎಂಬ ಹೇಳಿಕೆಯನ್ನು “ROUNDUP” ಎಂದು ಬದಲಾಯಿಸಿ.
10:59 ಈಗ, “Enter” ಕೀಲಿಯನ್ನು ಒತ್ತಿರಿ.
11:02 “9702” ಎಂದು ಫಲಿತಾಂಶವು ಪ್ರಕಟವಾಗಿರುವುದನ್ನು ಗಮನಿಸಿ. ಇದು ಮೇಲಿನ ಪೂರ್ಣಾಂಕವಾಗಿದೆ.
11:10 ಕೆಳಗಿನ ಪೂರ್ಣಾಂಕಕ್ಕೆ ಸರಿಹೊಂದಿಸಲು, “ROUNDUP” ನಿಂದ “ROUNDDOWN” ಎಂದು ಹೇಳೀಕೆಯನ್ನು ಬದಲಾಯಿಸಿ.
11:17 ಮತ್ತು “Enter” ಕೀಲಿಯನ್ನು ಒತ್ತಿರಿ.
11:19 ಈಗ “9701” ಎಂದು ಕೆಳಗಿನ ಪೂರ್ಣಾಂಕವು ಫಲಿತಾಂಶವಾಗಿ ಪ್ರಕಟವಾಗಿದೆ.
11:28 “Personal-Finance-Tracker.ods” ನ ಮೂಲ ಸ್ವರೂಪವನ್ನು ಪಡೆಯಲ್ಲು ಪುನಃ ಮೊದಲಿನಂತೆಯೇ (undo) ಮಾಡೋಣ.
11:37 ಇಲ್ಲಿಗೆ LibreOffice Calc ಮೇಲಿನ ಸ್ಪೋಕನ್ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.
11:43 ಇಲ್ಲಿ ನಾವು ಈ ಕೆಳಗನವುಗಳನ್ನು ಕಲಿತ್ತಿದ್ದೇವೆ:

ನಿಬಂಧನಾತ್ಮಕ ಆಪರೇಟರ್ ಗಳು, If ಮತ್ತು Or ಹೇಳಿಕೆಗಳು, ಮೂಲಭೂತ ಸಂಖ್ಯಾಶಾಸ್ತ್ರದ ಕಾರ್ಯಗಳು, ಸಂಖ್ಯೆಗಳನ್ನು ಸರಿಹೊಂದಿಸುವುದು.

11:55 ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ:
11:58 ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.
12:01 ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
12:06 ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
12:11 ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
12:15 ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
12:21 ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ.
12:26 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
12:34 ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
12:45 ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.

Contributors and Content Editors

PoojaMoolya, Pratik kamble, Vasudeva ahitanal