Java/C2/Creating-object/Kannada
From Script | Spoken-Tutorial
Revision as of 12:20, 20 March 2017 by PoojaMoolya (Talk | contribs)
Time | Narration |
00:01 | ಒಬ್ಜೆಕ್ಟ್ ಗಳ ರಚನೆಯ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು
ರೆಫರೆನ್ಸ್ ವೇರಿಯೇಬಲ್ ಒಬ್ಜೆಕ್ಟ್ ಗಳ ರಚನೆ ಮತ್ತು ಒಬ್ಜೆಕ್ಟ್ ಗಳಿಗೆ ಮೆಮೋರಿಯ ಹಂಚಿಕೆಯ ಕುರಿತು ಕಲಿಯುತ್ತೇವೆ. |
00:13 | ಇಲ್ಲಿ ನಾವು
Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦) Java Development kit 1.6 (ಜಾವಾ ಡೆವೆಲೊಪ್‍ಮೆಂಟ್ ಕಿಟ್ ೧.೬) ಹಾಗೂ Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಗಳನ್ನು ಉಪಯೋಗಿಸುತ್ತೇವೆ. |
00:23 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಎಕ್ಲಿಪ್ಸ್ ಅನ್ನು ಉಪಯೋಗಿಸಿ ಕ್ಲಾಸ್ ಅನ್ನು ರಚನೆ ಮಾಡಲು ತಿಳಿದಿರಬೇಕು. |
00:29 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಈ ಜಾಲತಾಣವನ್ನು ಭೇಟಿ ಮಾಡಿ.spoken-tutorial.org. |
00:38 | ವೇರಿಯೇಬಲ್ ಮತ್ತು ಮೆಥಡ್ ಗಳು ಸೇರಿ ಕ್ಲಾಸ್ ನ ಮೆಂಬರ್ ಆಗುತ್ತವೆ ಎಂದು ನಾವು ತಿಳಿದಿದ್ದೇವೆ. |
00:43 | ಕ್ಲಾಸ್ ನ ಮೆಂಬರ್ ಗಳನ್ನು ಆಕ್ಸೆಸ್ಸ್ ಮಾಡಲು ನಾವು ಒಬ್ಜೆಕ್ಟ್ ಗಳನ್ನು ರಚನೆಮಾಡಿಕೊಳ್ಳಬೇಕು. |
00:48 | ಈಗ ನಾವು ಒಬ್ಜೆಕ್ಟ್ ಎಂದರೇನು ಎಂದು ನೋಡೋಣ. |
00:52 | ಒಬ್ಜೆಕ್ಟ್ ಕ್ಲಾಸ್ ನ ಇನ್ಸ್-ಟೆನ್ಸ್ ಆಗಿರುತ್ತದೆ. |
00:55 | ಪ್ರತಿಯೊಂದು ಒಬ್ಜೆಕ್ಟ್ ಗಳೂ ತಮ್ಮದೇ ಆದ ಸ್ಥಿತಿ ಮತ್ತು ನಡವಳಿಕೆ ಗಳನ್ನು ಹೊಂದಿರುತ್ತವೆ. |
00:58 | ಮೊದಲ ಟ್ಯುಟೋರಿಯಲ್ ನಲ್ಲಿ ಮನುಷ್ಯ ರ ಕ್ಲಾಸ್ ನ ಉದಾಹರಣೆಯನ್ನು ನೆನಪಿಸಿಕೊಳ್ಳಿ. |
01:04 | ಒಬ್ಜೆಕ್ಟ್ ಗಳು ಅದರ ಸ್ಥಿತಿಯನ್ನು ಫೀಲ್ಡ್ಸ್ ಅಥವಾ ವೇರಿಯೇಬಲ್ ಗಳಲ್ಲಿ ಸಂಗ್ರಹಿಸುತ್ತವೆ. |
01:08 | ಅವುಗಳು ಮೆಥಡ್ ಗಳ ಮೂಲಕ ಅವುಗಳ ನಡವಳಿಕೆಯನ್ನು ತೋರ್ಪಡಿಸುತ್ತವೆ. |
01:11 | ಈಗ ನಾವು ರೆಫರೆನ್ಸ್ ವೇರಿಯೇಬಲ್ ಗಳ ಕುರಿತು ಕಲಿಯೋಣ. |
01:15 | ನಾವು ಜಾವಾದಲ್ಲಿ 8 ಪ್ರಿಮಿಟಿವ್ ಡಾಟಾ ಟೈಪ್ ಗಳ ಕುರಿತು ತಿಳಿದಿದ್ದೇವೆ. |
01:19 | ಉಳಿದೆಲ್ಲ ಬಗೆಗಳನ್ನು ಒಬ್ಜೆಕ್ಟ್ ಎಂದು ಕರೆಯುತ್ತಾರೆ. |
01:23 | ಯಾವ ವೇರಿಯೇಬಲ್ ಒಬ್ಜೆಕ್ಟ್ ಅನ್ನು ಸೂಚಿಸುತ್ತದೆಯೋ ಅದನ್ನು ರೆಫರೆನ್ಸ್ ವೇರಿಯೇಬಲ್ ಎನ್ನುವರು. |
01:28 | ಈಗ ನಾವು ಹಿಂದಿನ ಟ್ಯುಟೋರಿಯಲ್ ನಲ್ಲಿ ರಚನೆ ಮಾಡಿದ Student ಕ್ಲಾಸ್ ಗೆ ಹೋಗೋಣ. |
01:37 | ಈಗ ಮೊದಲು ಈ ಕ್ಲಾಸ್ ನಿಂದ main ಮೆಥಡ್ ಅನ್ನು ಅಳಿಸೋಣ. |
01:49 | ಫೈಲ್ ಅನ್ನು ಸೇವ್ ಮಾಡಲು Control ಮತ್ತು S ಕೀ ಗಳನ್ನು ಒಟ್ಟಿಗೇ ಒತ್ತಿರಿ. |
01:55 | ಈಗ ಅದೇ ಪ್ರಕಲ್ಪ ದಲ್ಲಿ TestStudent ಎಂಬ ಇನ್ನೊಂದು ಕ್ಲಾಸ್ ಅನ್ನು ರಚನೆ ಮಾಡಿ. |
02:00 | ನಾನು ಅದನ್ನು ಮೊದಲೇ ರಚನೆ ಮಾಡಿಟ್ಟಿರುತ್ತೇನೆ. |
02:03 | ಈ ಕ್ಲಾಸ್ ನಲ್ಲಿ ನಾನು main ಮೆಥಡ್ ಅನ್ನು ಹೊಂದಿದ್ದೇನೆ. |
02:06 | ಈಗ main ಮೆಥಡ್ ನಲ್ಲಿ Student ಕ್ಲಾಸ್ ನ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡೋಣ. |
02:11 | ಅದಕ್ಕಾಗಿ main ಮೆಥಡ್ ನಲ್ಲಿ |
02:17 | Student ಸ್ಪೇಸ್ stud1 ಸಮ new ಸ್ಪೇಸ್ Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ. |
02:34 | ಹೀಗೆ ನಾವು Student ಕ್ಲಾಸ್ ನ ಒಂದು ಒಬ್ಜೆಕ್ಟ್ ಅನ್ನು ರಚಿಸಿದ್ದೇವೆ. |
02:37 | ಇಲ್ಲಿ Student ಯಾವ ಕ್ಲಾಸ್ ಗೆ ಒಬ್ಜೆಕ್ಟ್ ಅನ್ನು ರಚಿಸುತ್ತೇವೋ ಆ ಕ್ಲಾಸ್ ನ ಹೆಸರು. |
02:47 | stud1 ಎನ್ನುವುದು Student ಕ್ಲಾಸ್ ನ ಒಬ್ಜೆಕ್ಟ್ ಅನ್ನು ಸೂಚಿಸುವ ಒಂದು ರೆಫರೆನ್ಸ್ ವೇರಿಯೇಬಲ್. |
02:53 | ಮತ್ತು new ಎನ್ನುವ ಕೀ ವರ್ಡ್ ಹೊಸದಾಗಿ ರಚನೆಯಾಗುವ ಒಬ್ಜೆಕ್ಟ್ ಗೆ ಮೆಮರಿ ಯಲ್ಲಿ ಜಾಗವನ್ನು ಒದಗಿಸಿಕೊಡುತ್ತದೆ. |
02:59 | stud1 ಎನ್ನುವುದು Student ಕ್ಲಾಸ್ ನ ಒಬ್ಜೆಕ್ಟ್ ಅಲ್ಲ ಎನ್ನುವುದನ್ನು ನೆನಪಿನಲ್ಲಿಡಿ. |
03:03 | ಇದು ಕೇವಲ ಹೊಸದಾಗಿ ರಚನೆಯಾದ ಒಬ್ಜೆಕ್ಟ್ ನ ರೆಫರೆನ್ಸ್ ಅನ್ನು ಹೊಂದಿರುತ್ತದೆ. |
03:09 | ಈಗ stud1 ಏನನ್ನು ಹೊಂದಿದೆ ಎಂದು ನೋಡೋಣ. |
03:13 | ಹಾಗಾಗಿ ಮುಂದಿನ ಸಾಲಿನಲ್ಲಿ System ಡಾಟ್ out ಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ stud1 contains ಸ್ಪೇಸ್ ಪ್ಲಸ್ stud1 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
03:44 | ಈಗ ಫೈಲ್ ಅನ್ನು TestStudent ಡಾಟ್ java ಎಂದು ಸೇವ್ ಮಾಡಿ ರನ್ ಮಾಡಿ. |
03:53 | ಕೆಳಗಿನ ಫಲಿತವನ್ನು ಪಡೆಯುತ್ತೇವೆ. |
03:56 | ಹಾಗಾಗಿ ಇಲ್ಲಿStudent ಎನ್ನುವುದು ಹೊಸ ಒಬ್ಜೆಕ್ಟ್ ಅನ್ನು ಒಳಗೊಂಡಿರುವ ಕ್ಲಾಸ್ ನ ಹೆಸರು. |
04:03 | ಎರಡನೇ ಭಾಗದಲ್ಲಿರುವುದು ರಚನೆಯಾದ ಹೊಸ ಒಬ್ಜೆಕ್ಟ್ ನ ಮೆಮೋರಿ ಅಡ್ರೆಸ್.. |
04:08 | stud1 ಅನ್ನು ಉಪಯೋಗಿಸಿ Student ಕ್ಲಾಸ್ ನ ಫೀಲ್ಡ್ಸ್ ಮತ್ತು ಮೆಥಡ್ ಗಳನ್ನು ಆಕ್ಸೆಸ್ ಮಾಡಬಹುದು. |
04:15 | ಮುಂದಿನ ಟ್ಯುಟೋರಿಯಲ್ ಗಳಲ್ಲಿ ಇದರ ಕುರಿತು ಕಲಿಯೋಣ. |
04:18 | ಈಗ ನಾನು Student ಕ್ಲಾಸ್ ನ ಇನ್ನೊಂದು ಒಬ್ಜೆಕ್ಟ್ ಅನ್ನು ರಚನೆ ಮಾಡುತ್ತೇನೆ. |
04:24 | ಹಾಗಾಗಿ Student ಸ್ಪೇಸ್ stud2 ಸಮ new ಸ್ಪೇಸ್ Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ. |
04:47 | System ಡಾಟ್ out ಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ stud2 contains ಸ್ಪೇಸ್ ಪ್ಲಸ್ stud2 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
05:19 | ಸೇವ್ ಮಾಡಿ ರನ್ ಮಾಡಿರಿ. |
05:25 | ಇಲ್ಲಿ ನಾವು stud1 ಮತ್ತು stud2 ಬೇರೆ ಬೇರೆ ಒಬ್ಜೆಕ್ಟ್ ಗಳನ್ನು ರೆಫರ್ ಮಾಡುವುದನ್ನು ನೋಡಬಹುದು. |
05:31 | ಅಂದರೆ stud1 ಮತ್ತು stud2 ಗಳು ಎರಡು ಬೇರೆ ಬೇರೆ ವಿದ್ಯಾರ್ಥಿಗಳನ್ನು ರೆಫರ್ ಮಾಡುತ್ತವೆ. |
05:37 | ಅವೆರಡೂ ಬೇರೆ ಬೇರೆ roll number ಮತ್ತು name ಗಳನ್ನುಹೊಂದಿರುತ್ತವೆ. |
05:44 | ಇಲ್ಲಿ ಸಣ್ಣ ಬದಲಾವಣೆಯನ್ನು ಮಾಡೋಣ. |
05:51 | Student stud2 ಸಮ stud1 ಎಂದು ಟೈಪ್ ಮಾಡಿ. |
06:01 | ಸೇವ್ ಮಾಡಿ ರನ್ ಮಾಡಿರಿ. |
06:06 | ಈಗ stud1 ಮತ್ತು stud2 ಗಳು ಒಂದೇ ಒಬ್ಜೆಕ್ಟ್ ಅನ್ನು ರೆಫರ್ ಮಾಡುವುದನ್ನು ನೋಡಬಹುದು. |
06:12 | ಅಂದರೆ stud1 ಮತ್ತು stud2 ಎರಡೂ ಒಂದೇ ವಿದ್ಯಾರ್ಥಿಯನ್ನು ರೆಫರ್ ಮಾಡುತ್ತಿದ್ದು ಒಂದೇ roll number ಮತ್ತು name ಅನ್ನು ಹೊಂದಿರುತ್ತವೆ. |
06:31 | ಈ ಟ್ಯುಟೋರಿಯಲ್ ನಲ್ಲಿ ನಾವು, |
06:34 | ರೆಫರೆನ್ಸ್ ವೇರಿಯೇಬಲ್ ನ ಕುರಿತು, new ಓಪರೇಟರ್ ಅನ್ನು ಉಪಯೋಗಿಸುವ ಕುರಿತು |
06:38 | ಮತ್ತು ರೆಫರೆನ್ಸ್ ಗಳನ್ನು ಅಸೈನ್ ಮಾಡಲು ಕಲಿತಿದ್ದೇವೆ. |
06:41 | ಸ್ವಂತ ಅಭ್ಯಾಸಕ್ಕಾಗಿ, |
06:43 | TestEmployee ಎನ್ನುವ ಇನ್ನೊಂದು ಕ್ಲಾಸ್ ಅನ್ನು ರಚನೆ ಮಾಡಿ, |
06:46 | TestEmployee ಕ್ಲಾಸ್ ಗೆ emp1 ರೆಫರೆನ್ಸ್ ವೇರಿಯೇಬಲ್ ಆಗಿರುವ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡಿ. |
06:52 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
06:55 | ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ. |
06:58 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ. |
07:01 | ನೀವು ಒಳ್ಳೆಯ ಬ್ಯಾಂಡ್‍ವಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್‍ಲೋಡ್ ಮಾಡಿ ನೋಡಬಹುದು. |
07:05 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
07:07 | ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
07:10 | ಅಂತರ್ಜಾಲಾಧಾರಿತ ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:14 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ |
07:20 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. |
07:24 | ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ. |
07:31 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.http://spoken-tutorial.org/NMEICT-Intro |
07:40 | ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
07:43 | . ಅನುವಾದಕ ಮತ್ತು ವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. |
07:46 | ಧನ್ಯವಾದಗಳು.. |