GIMP/C2/An-Image-For-The-Web/Kannada
From Script | Spoken-Tutorial
Revision as of 16:47, 17 March 2017 by Pratik kamble (Talk | contribs)
Time | Narration |
00:23 | Meet the GIMP (ಮೀಟ್ ದ ಗಿಂಪ್) ಎನ್ನುವುದಕ್ಕೆ ನಿಮಗೆ ಸ್ವಾಗತ . |
00:25 | ನನ್ನ ಹೆಸರು ರೊಲ್ಫ್ ಸ್ಟೆನೊರ್ಟ್. ನಾನು ಇದನ್ನು ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡುತ್ತಿದ್ದೇನೆ. |
00:31 | ಗಿಂಪ್ ಎನ್ನುವುದು ಇಮೇಜ್ ಅನ್ನು ಬದಲಾಯಿಸಲು ತುಂಬಾ ಪ್ರಭಾವಶಾಲಿಯಾದ ಪ್ರೊಗ್ರಾಮ್ ಆಗಿದೆ. |
00:35 | ಈ ಟ್ಯುಟೋರಿಯಲ್ ನಲ್ಲಿ ಗಿಂಪ್ ನ ಬಗ್ಗೆ ಸ್ವಲ್ಪ ಮಾಹಿತಿ ಹಾಗೂ ಅದರ ವೈಶಿಷ್ಠ ಗಳನ್ನು ಕೊಡಬೇಕೆಂದಿದ್ದೇನೆ. |
00:39 | ವೆಬ್ ಗಾಗಿ ಒಂದು ಇಮೇಜ್ ಅನ್ನು ಹೇಗೆ ತಯಾರಿಸುವದು ಎನ್ನುವುದನ್ನು ಸಂಕ್ಷಿಪ್ತವಾಗಿ ನಾನು ನಿಮಗೆ ತೋರಿಸುವೆನು. |
00:43 | ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾನು ವಿಸ್ತಾರವಾದ ವಿವರಣೆಯನ್ನು ಕೊಡುವೆನು. |
00:48 | ಒಂದು ಇಮೇಜ್ ಅನ್ನು ಓಪನ್ ಮಾಡಲು, ನಾನು ಅದನ್ನು ಟೂಲ್ ಬಾಕ್ಸ್ ಗೆ ಎಳೆದು ತರುವೆನು. |
00:53 | ಇದೋ, ಇಲ್ಲಿದೆ! |
00:55 | ನಾವು ಈ ಇಮೇಜನ್ನು ವೀಕ್ಷಿಸೋಣ. |
00:57 | ನನಗೆ ಈ ಇಮೇಜನ್ನು ವೆಬ್ ಗಾಗಿ ಸಿದ್ಧಪಡಿಸಬೇಕಾಗಿದೆ. |
01:02 | ಇದಕ್ಕಾಗಿ ಏನು ಮಾಡಬಹುದು ಎಂದು ನಾವು ನೋಡೋಣ. |
01:04 | ಇಮೇಜ್, ವಾಲಿದೆ ಆದ್ದರಿಂದ ಮೊದಲು ಇದನ್ನು ನಾನು ಸ್ವಲ್ಪ ತಿರುಗಿಸಬೇಕು. |
01:09 | ಆಮೇಲೆ, ಈ ವ್ಯಕ್ತಿಯ ಇಮೇಜ್ ನ ಬೆನ್ನಿನ ಭಾಗವನ್ನು ತೆಗೆದು ಹಾಕಲು ನನಗೆ ಅದನ್ನು ಕ್ರಾಪ್ ಮಾಡಬೇಕು. |
01:16 | ಮೂರನೆಯದಾಗಿ, ನನಗೆ ಇದರಲ್ಲಿ ಇನ್ನಷ್ಟು ಬಣ್ಣ ಹಾಗೂ ಕಾಂಟ್ರಾಸ್ಟ್ ಗಳನ್ನು ಸೇರಿಸಬೇಕಾಗಿದೆ. |
01:22 | ನನಗೆ ಇಮೇಜನ್ನು ರಿಸೈಜ್ ಸಹ ಮಾಡಬೇಕಾಗಿದೆ ಏಕೆಂದರೆ ಈಗ ಇದು ಸುಮಾರು 4000 ಪಿಕ್ಸೆಲ್ಗಳಷ್ಟು ಅಗಲವಿದೆ, ಇದು ತುಂಬಾ ಹೆಚ್ಚು. |
01:31 | ಆನಂತರ ನನಗೆ ಇದನ್ನು ಶಾರ್ಪ್ ಮಾಡಿ JPEG ಇಮೇಜ್ ಎಂದು ಸೇವ್ ಮಾಡಬೇಕಾಗಿದೆ. |
01:38 | ನಾವು ರೊಟೇಟಿಂಗ್ ಎನ್ನುವುದರಿಂದ ಆರಂಭಿಸೋಣ. |
01:40 | ಇಮೇಜ್, ವಾಲಿಕೊಂಡದ್ದು ಸ್ಪಷ್ಟವಾಗಿರುವ ಭಾಗದಲ್ಲಿ ನಾನು ಝೂಮ್ ಮಾಡುತ್ತೇನೆ. ನೀವು ಇದನ್ನು ಇಲ್ಲಿ ನೋಡಬಹುದು. |
01:49 | ಅಂದಹಾಗೆ, ಸ್ಪೇಸ್ ಅನ್ನು ಒತ್ತಿ ಹಿಡಿದು ಕರ್ಸರನ್ನು ಮಾತ್ರ ಅತ್ತಿತ್ತ ಜರುಗಿಸುವದರಿಂದ ನೀವು ಇಮೇಜ್ ನಲ್ಲಿ ಸುತ್ತಾಡಬಹುದು. |
01:56 | ಮತ್ತು ಈಗ ನಾನು ಇಲ್ಲಿ ಕ್ಲಿಕ್ ಮಾಡಿ Rotate ಎನ್ನುವ ಟೂಲ್ ಅನ್ನು ಆರಿಸಿಕೊಳ್ಳುತ್ತೇನೆ. |
02:00 | Rotate ಎನ್ನುವ ಟೂಲ್ ನಲ್ಲಿ, ಕೆಲವು ಆಯ್ಕೆಗಳನ್ನು ಡೀಫಾಲ್ಟ್ ಆಗಿ ಸೆಟ್ ಮಾಡಲಾಗಿದೆ. ಈ ವ್ಯಾಲ್ಯೂಗಳು ಗ್ರಾಫಿಕಲ್ ಕೆಲಸಕ್ಕೆ ಯೋಗ್ಯವಾಗಿವೆ ಮತ್ತು ಫೋಟೋಗ್ರಾಫಿಕ್ ಕೆಲಸಕ್ಕೆ ಯೋಗ್ಯವಿಲ್ಲ. |
02:09 | ಇಲ್ಲಿ Direction ಅನ್ನು Normal(Forward) ಗೆ ಸೆಟ್ ಮಾಡಲಾಗಿದೆ ಆದರೆ ನಾನು ಇದನ್ನು Corrective(Backward) ಗೆ ಸೆಟ್ ಮಾಡುವೆನು. |
02:14 | ಇಲ್ಲಿ ಉತ್ತಮವಾದ ಇಂಟರ್ಪೊಲೇಷನ್ ಇದೆಯೋ ಎಂದು ಪರಿಶೀಲಿಸುತ್ತೇನೆ. ಇದು ಸರಿಯಾಗಿದೆ. |
02:17 | Preview ನಲ್ಲಿ ನಾನು Image ನ ಬದಲಾಗಿ Grid ಎನ್ನುವುದನ್ನು ಆಯ್ದುಕೊಳ್ಳುತ್ತೇನೆ. |
02:22 | ಸ್ಲೈಡರ್ ಅನ್ನು ಸರಿಸುವದರ ಮೂಲಕ ನಾನು ಗ್ರಿಡ್ ಲೈನ್ ಗಳನ್ನು ಹೆಚ್ಚಿಸುತ್ತೇನೆ. ಶೀಘ್ರದಲ್ಲೇ ಅದನ್ನು ನೋಡುವಿರಿ. |
02:30 | ಈಗ ನಾನು ಇಮೇಜ್ ನ ಮೇಲೆ ಕ್ಲಿಕ್ ಮಾಡಿ ಗ್ರಿಡ್ ಅನ್ನು ಇಮೇಜ್ ನ ಮೇಲೆ ಹೊಂದಿಸುತ್ತೇನೆ. |
02:36 | ಈ ಗ್ರಿಡ್ ನೇರವಾಗಿದೆ. |
02:38 | ನಾನು ಇದನ್ನು ತಿರುಗಿಸಲು ಸಾಧ್ಯವಿದೆ. ಗಿಂಪ್, ಇಮೇಜ್ ನ್ನು ಅದೇ ದಿಕ್ಕಿನಲ್ಲಿ ಮತ್ತೆ ಗ್ರಿಡ್ ನೇರವಾಗಿರುವಂತೆ, ಕರೆಕ್ಟಿವ್ ಮೋಡ್ ನಲ್ಲಿ ತಿರುಗಿಸುತ್ತದೆ. |
02:51 | ನಾನು ಮಾಡಿ ತೋರಿಸುತ್ತೇನೆ. ನಾನು ಗ್ರಿಡ್ಅನ್ನು ಹೀಗೆ ತಿರುಗಿಸುವೆನು. |
02:56 | ಇದನ್ನು ಖಚಿತಪಡಿಸಿಕೊಳ್ಳಲು ನಾನು ಇಮೇಜ್ ನ ಬೇರೆ ಭಾಗವನ್ನು ಪರಿಶೀಲಿಸುವೆನು. |
03:00 | ನನಗೆ ಇದು ಸರಿ ಕಾಣುತ್ತಿದೆ. |
03:02 | ಈಗ ನಾನು Rotate ಎನ್ನುವ ಬಟನ್ ನ ಮೇಲೆ ಕ್ಲಿಕ್ ಮಾಡುವೆನು. |
03:06 | ಈ ಇಮೇಜ್, ಸುಮಾರು 10 ಮೆಗಾ-ಪಿಕ್ಸೆಲ್ ಗಳಿರುವದರಿಂದ ಇದಕ್ಕೆ ಸ್ವಲ್ಪ ಸಮಯ ಬೇಕಾಗುವುದು. |
03:13 | ಮತ್ತು ಇದನ್ನು ಮಾಡಲಾಗಿದೆ.ಇಮೇಜ್, ತಿರುಗಿದೆ. |
03:16 | ನಾವು ಸಂಪೂರ್ಣ ಚಿತ್ರವನ್ನು ಒಮ್ಮೆ ನೋಡೋಣ. Shift + Ctrl + E, ನಮ್ಮನ್ನು ಮರಳಿ ಇಮೇಜ್ ಗೆ ತರುತ್ತದೆ. |
03:22 | ಮುಂದಿನ ಹಂತ Cropping ಎನ್ನುವುದು ಆಗಿದೆ. |
03:25 | ನಾನು ಇಲ್ಲಿ ಕ್ಲಿಕ್ ಮಾಡಿ Crop ಟೂಲ್ ಅನ್ನು ಆಯ್ದುಕೊಂಡಿದ್ದೇನೆ. |
03:28 | ನನಗೆ ಈ ಇಮೇಜ್ ನ ಆಸ್ಪೆಕ್ಟ್ ರೇಶಿಯೋವನ್ನು 3:2 ಎಂದು ಇಡಬೇಕಾಗಿದೆ. |
03:33 | ಅದಕ್ಕಾಗಿ ನಾನು Fixed aspect ratio ಎನ್ನುವುದನ್ನು ಇಲ್ಲಿ ಪರಿಶೀಲಿಸಿ 3:2 ಎಂದು ಟೈಪ್ ಮಾಡುತ್ತೇನೆ. |
03:39 | ಆ ಬಾಕ್ಸ್ ನಿಂದ ಹೊರಗೆ ಬರಲು ಕ್ಲಿಕ್ ಮಾತ್ರ ಮಾಡುತ್ತಿದ್ದೇನೆ. |
03:43 | ಮತ್ತು ಈಗ ನಾನು ಕ್ರಾಪ್ ಮಾಡಲು ಆರಂಭಿಸಬಹುದು. |
03:45 | ನನಗೆ ಈ ಮನುಷ್ಯನ ಪಾದಗಳನ್ನು ಇಲ್ಲಿ ಸೇರಿಸಿಕೊಳ್ಳಬೇಕಾಗಿದೆ ಆದರೆ ಇಮೇಜ್ ನ ಈ ಭಾಗವನ್ನು ಹೊರಗೆ ಇಡಬೇಕಾಗಿದೆ. |
03:52 | ಆದ್ದರಿಂದ ನಾನು ಈ ಪಾಯಿಂಟ್ ನಿಂದ ಶುರು ಮಾಡುತ್ತೇನೆ ಮತ್ತು ಈ ಏರಿಯಾವನ್ನು ಆಯ್ಕೆ ಮಾಡಲು ಮೌಸ್ನಲ್ಲಿ ಎಡ ಕ್ಲಿಕ್ ಮಾಡಿ ಹಿಡಿದು ಮೇಲಕ್ಕೆ, ಎಡಗಡೆಗೆ ಎಳೆಯುತ್ತೇನೆ. |
04:01 | ಆಸ್ಪೆಕ್ಟ ರೇಶಿಯೋ ಸ್ಥಿರವಾಗಿರುವದನ್ನು ಗಮನಿಸಿ. |
04:06 | ಮತ್ತು ಎಷ್ಟು ದೂರ ಎಳೆಯಬೇಕೆಂದು ಈಗ ನಾನು ನಿರ್ಧರಿಸಬೇಕು. |
04:12 | ಇದು ಸಾಕಷ್ಟು ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. |
04:18 | ನಾವು ಇದರ ಅಂಚುಗಳನ್ನು ಪರಿಶೀಲಿಸೋಣ. |
04:21 | ನಾವು ಈ ಭಾಗವನ್ನು ಹೊರಗೆ ಇಟ್ಟಿದ್ದೇವೆ. ಅಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದಾನೆ. |
04:28 | ಆ ವ್ಯಕ್ತಿ ಈ ಚಿತ್ರದಲ್ಲಿ ಇರಲು ಇಲ್ಲಿ ಸಾಕಷ್ಟು ಸ್ಥಳವಿದೆ. |
04:35 | ಅದು ಚೆನ್ನಾಗಿ ಕಾಣಿಸುವದರಿಂದ ಅದನ್ನು ಹಾಗೆಯೇ ಬಿಡುತ್ತೇನೆ. |
04:41 | ಇಲ್ಲಿ ಮೇಲ್ಗಡೆ ಕಿಟಕಿಗಳಿವೆ. |
04:44 | ಕಿಟಕಿಗಳೆಂದು ನೋಡಲು ಇಮೇಜ್ ನಲ್ಲಿಯೂ ಇವುಗಳು ಸಾಕಷ್ಟು ಇರುತ್ತವೆ. |
04:50 | ಆದರೆ ಇಲ್ಲಿ, ಪಾದಗಳ ಅಕ್ಕಪಕ್ಕದಲ್ಲಿ ಸಾಕಷ್ಟು ಸ್ಥಳವಿಲ್ಲ. |
04:54 | ಆದ್ದರಿಂದ ನಾನು ಚಿತ್ರದ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು ಇದನ್ನು ಸ್ವಲ್ಪ ಕೆಳಗೆ ಎಳೆಯುತ್ತೇನೆ. |
04:58 | ಈಗ ಇದು ಸರಿಯಾಗಿದೆ. |
05:01 | ಆದರೆ ಈಗ ಇಲ್ಲಿ ಸಾಕಷ್ಟು ಕಿಟಕಿಗಳು ಕಾಣಿಸುತ್ತಿಲ್ಲ ಮತ್ತು ಇಲ್ಲಿ ಕುಳಿತ ವ್ಯಕ್ತಿ ಅಂಚಿಗೆ ತುಂಬಾ ಹತ್ತಿರವಿದ್ದಾನೆ. |
05:08 | ಆದ್ದರಿಂದ, ನಾವು ಇಮೇಜನ್ನು ಸ್ವಲ್ಪ ದೊಡ್ಡದು ಮಾಡೋಣ. |
05:11 | ಇಲ್ಲಿ ನಮಗೆ ಒಂದು ಸಮಸ್ಯೆ ಎದುರಾಗುತ್ತಿದೆ. ಬಹುಶ: ನಿಮಗೆ ಅದು ಕಾಣಿಸಬಹುದು. |
05:18 | ಇದು ರೊಟೇಶನ್ ಮಾಡುವಾಗ ಆಗಿದೆ. |
05:21 | ಇಲ್ಲಿಯ ಒಂದು ಚಿಕ್ಕ ಭಾಗ ಈಗ ಪಾರದರ್ಶಕವಾಗಿದೆ. |
05:25 | ನನಗೆ ಇದನ್ನು ಸೇರಿಸಿಕೊಳ್ಳುವದು ಬೇಡವಾಗಿದೆ, |
05:33 | ಅದಕ್ಕಾಗಿ ನಾವು ಮರಳಿ Crop ಟೂಲ್ ಗೆ ಹೋಗೋಣ. |
05:35 | ನನಗೆ ಇಲ್ಲಿ ಸ್ವಲ್ಪ ಹೆಚ್ಚು ಸ್ಥಳ ಬೇಕು; ಆದ್ದರಿಂದ ನಾನು ಇದನ್ನು ಮೇಲೆ ಎಳೆಯುತ್ತಿದ್ದೇನೆ. |
05:38 | ಇಷ್ಟು ದೂರ ಬೇಡ. |
05:40 | ಇದು ಸಾಕಷ್ಟು ಉತ್ತಮವಾಗಿದೆ. |
05:44 | ಈಗ ಇಮೇಜ್ ನ ಮೇಲೆ ಕ್ಲಿಕ್ ಮಾಡಿರಿ. ಇಲ್ಲಿ ನಾವು ಕ್ರಾಪ್ ಮಾಡಿದ ಹಾಗೂ ರೊಟೇಟ್ ಮಾಡಿದ ಇಮೇಜನ್ನು ಪಡೆದಿದ್ದೇವೆ. |
05:50 | Shift + Ctrl + E, ನಮ್ಮನ್ನು ‘ಫುಲ್ ವ್ಹ್ಯೂ’ಗೆ ಮರಳಿ ತರುತ್ತದೆ. |
05:56 | ಮುಂದಿನ ಹಂತವು ಬಣ್ಣ ಹಾಗೂ ಕಾಂಟ್ರಾಸ್ಟ್ ಗಳನ್ನು ಸ್ವಲ್ಪ ಹೆಚ್ಚಿಸುವುದಾಗಿದೆ. |
06:02 | ಇಲ್ಲಿ ಹಲವು ವಿಧಾನಗಳಿವೆ. ನಾನು ಕಲರ್ ಲೆವೆಲ್ಗಳನ್ನು ಬಳಸಬಹುದಿತ್ತು ಇದು ಇಲ್ಲಿ ಇದೆ, ಇವು ವಕ್ರ ಆಕೃತಿಗಳು ಅಥವಾ ಕೆಲವು ಸ್ಲೈಡರ್ ಗಳು. |
06:11 | ಆದರೆ ನಾನು ಇದನ್ನು ಲೇಯರ್ಸ್ ನೊಂದಿಗೆ ಮಾಡಲು ಪ್ರಯತ್ನಿಸುತ್ತೇನೆ. |
06:18 | ನಾನು ಕೇವಲ ಈ ಲೇಯರ್ ನ ‘ಕಾಪಿ’ಯನ್ನು ಇಲ್ಲಿ ಮಾಡುತ್ತೇನೆ. |
06:23 | ಮತ್ತು Layer Mode ಅನ್ನು Overlay ಎನ್ನುವುದಕ್ಕೆ ಬದಲಿಸುತ್ತೇನೆ. |
06:30 | ಇದು ಪ್ರಬಲವಾದ ಪರಿಣಾಮ ಆಗಿದೆ ಎನ್ನುವುದನ್ನು ನೀವು ನೋಡಬಹುದು. ನನಗೆ ಇದು ಇಷ್ಟು ಬೇಡವಾಗಿದೆ. |
06:36 | ಆದ್ದರಿಂದ ಅದು ನನಗೆ ಚೆನ್ನಾಗಿ ಕಾಣುವವರೆಗೆ ನಾನು Opacity (ಓಪ್ಯಾಸಿಟೀ) ಸ್ಲೈಡರ್ ಅನ್ನು ಕೆಳಗಿನ ವ್ಯಾಲ್ಯೂಗೆ ಜಾರಿಸುತ್ತೇನೆ. |
06:42 | ಬಹುಶ: ಇನ್ನೂ ಸ್ವಲ್ಪ. |
06:46 | ಸರಿ, ಇದು ಸಾಕಷ್ಟು ಉತ್ತಮವಾಗಿದೆ. |
06:50 | ಮೌಸ್ನಲ್ಲಿ ರೈಟ್ ಕ್ಲಿಕ್ ಮಾಡಿ, ಅಲ್ಲಿ ಕಾಣುವ ಚಾನೆಲ್ ಲಿಸ್ಟ್ ನಲ್ಲಿರುವ Flatten image ಅಥವಾ Merge visible layers ಎಂಬುದನ್ನು ಆಯ್ಕೆ ಮಾಡಿಲ್ಲವೆಂದಾದಲ್ಲಿ ಇದನ್ನು ನಾನು ಯಾವಾಗಲೂ ಬದಲಿಸಲು ಸಾಧ್ಯ. |
07:01 | ಆಗ ಎಲ್ಲ ಬದಲಾವಣೆಗಳು ಕಾಯಂ ಆಗುತ್ತವೆ. |
07:03 | ಇದು, ನಾನು ಇಲ್ಲಿ History ಎನ್ನುವಲ್ಲಿಗೆ ಹೋಗಿ, ಹಿಂದೆ ಹೋಗಿ undo History ಮಾಡದಿದ್ದರೆ ಮಾತ್ರ. |
07:10 | ಆದರೆ ಅದನ್ನು ನಾವು ಆಮೇಲೆ ನೋಡುವೆವು. |
07:13 | ಮುಂದಿನ ಹಂತ Resizing (ರಿಸೈಜಿಂಗ್) ಎನ್ನುವುದು ಆಗಿದೆ. |
07:16 | ನಾನು Image ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ Scale Image ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳುವೆನು. |
07:27 | ಇಲ್ಲಿ ನಾನು 800 ಪಿಕ್ಸೆಲ್ ಎಂದು ಟೈಪ್ ಮಾಡುತ್ತೇನೆ. |
07:32 | ನನಗೆ ‘height’ ಗಾಗಿ ವ್ಯಾಲ್ಯೂ ತಾನಾಗಿಯೇ ಸಿಗುತ್ತದೆ. |
07:36 | ಒಂದು ವೇಳೆ ನಾನು ಈ ಲಿಂಕ್ ಅನ್ನು ಅನ್ಲಾಕ್ ಮಾಡಿದರೆ, ಚಿತ್ರವನ್ನು ರಿಸೈಜ್ ಮಾಡುವಾಗ ಅದು ವಿರೂಪಗೊಳ್ಳುವ ಸಾಧ್ಯತೆಗಳಿವೆ. |
07:44 | Interpolation (ಇಂಟರ್ಪೊಲೇಶನ್)ನಾನು Cubic (ಕ್ಯೂಬಿಕ್) ಅನ್ನು ಆಯ್ದುಕೊಳ್ಳುವೆನು. ಇಲ್ಲಿ ಅತಿ ಹೆಚ್ಚಿನ ಲೇಯರ್, ಇಟ್ಟಿಗೆಯ ಕಟ್ಟಡಗಳೊಂದಿಗೆ ಸ್ವಲ್ಪ ಕಲಾತ್ಮಕ ಪರಿಣಾಮವನ್ನು ಕೊಡುತ್ತಿದೆ ಎನ್ನುವುದು ನನಗೆ ಕಂಡುಬಂದಿದೆ. ಇದು ಆಶ್ಚರ್ಯಕರ, ನಾನು ಇದನ್ನು ಪರಿಶೀಲಿಸಬೇಕು. |
08:02 | ಈಗ Scale ಎನ್ನುವುದರ ಮೇಲೆ ಕ್ಲಿಕ್ ಮಾಡಿರಿ. |
08:04 | ಮತ್ತು ನಾವು ಇದರ ಪರಿಣಾಮವನ್ನು ನೋಡುವೆವು. |
08:08 | Shift + Ctrl + E, ನಮಗೆ ಸಂಪೂರ್ಣ ಇಮೇಜನ್ನು ಕೊಡುತ್ತದೆ. |
08:13 | 1(ಒಂದು) ನ್ನು ಒತ್ತಿದಾಗ ನಾನು 100% (ನೂರು ಪ್ರತಿಶತ) ಝೂಮ್ ಅನ್ನು ಪಡೆಯುತ್ತೇನೆ. |
08:19 | ಈಗ ಇಮೇಜ್ ನಲ್ಲಿ ಏನಾದರೂ ತೊಂದರೆ ಕೊಡುವ ಅಥವಾ ಗೊಂದಲದ ವಿಷಯ ಇದೆಯೋ ಹೇಗೆ ಎನ್ನುವುದನ್ನು ನಾವು ನೋಡಬಹುದು. ಆದರೆ ಇದು ಸರಿಯಾಗಿ ಕೆಲಸ ಮಾಡಿದೆ. |
08:32 | ಮುಂದಿನ ಹಂತ Sharpening (ಶಾರ್ಪನಿಂಗ್) ಎನ್ನುವುದು ಆಗಿದೆ. |
08:35 | ನನ್ನ ಮಸೂರ ಹಾಗೂ ಕ್ಯಾಮರಾ ಚೆನ್ನಾಗಿವೆ. ಆದರೆ ನಾವು ಚಿತ್ರವನ್ನು ಸ್ವಲ್ಪ ಬದಲಾಯಿಸಿದ್ದೇವೆ. ಆದ್ದರಿಂದ ಅದನ್ನು ಸ್ವಲ್ಪ ಶಾರ್ಪ್ ಮಾಡಬೇಕಾಗಿದೆ. |
08:49 | ನಾನು Filters (ಫಿಲ್ಟರ್ಸ್) ಎನ್ನುವುದನ್ನು ಆಯ್ಕೆ ಮಾಡುವೆನು. |
08:53 | ಹಾಗೂ Enhance (ಎನ್ಹಾನ್ಸ್) ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ. ಇಲ್ಲಿ Sharpen (ಶಾರ್ಪನ್) ಇದೆ. ನಾನು Unsharp mask (ಅನ್-ಶಾರ್ಪ್ ಮಾಸ್ಕ್) ಎನ್ನುವ ಪ್ರಭಾವಶಾಲಿಯಾದ ಶಾರ್ಪನಿಂಗ್ ಟೂಲ್ ಅನ್ನು ಸಹ ಉಪಯೋಗಿಸಬಹುದಿತ್ತು. ಆದರೆ ಈಗ ‘ಶಾರ್ಪನ್’ ಎನ್ನುವುದು ಮಾತ್ರ ಸಾಕು. |
09:06 | ಈ ಟೂಲ್ ಗೆ ಮೂಲತಃ Sharpness (ಶಾರ್ಪ್ನೆಸ್) ಸ್ಲೈಡರ್ ಎನ್ನುವ ಒಂದೇ ಒಂದು ಆಯ್ಕೆ ಇದೆ. ಇದನ್ನು ಹೊಂದಿಸಬಹುದು. ಇಂತಹ ಇಮೇಜ್ ಗಾಗಿ ಇಷ್ಟು ಸಾಕು. |
09:16 | ಇದು ಶಾರ್ಪ್ ಮಾಡಿರದ ಇಮೇಜ್ ಆಗಿದೆ. ನಾನು ಈ ಸ್ಲೈಡರನ್ನು ಎಳೆದಾಗ ಇಮೇಜ್, ಹೆಚ್ಚು ಹೆಚ್ಚು ಶಾರ್ಪ್ ಆಗುತ್ತದೆ. ನೀವು ತುಂಬಾ ದೂರ ಎಳೆದರೆ ನಿಮಗೆ ಬಹಳ ಮೋಜು ಸಿಗುತ್ತದೆ. |
09:31 | ಈ ಇಮೇಜ್ ಗಾಗಿ ಈ ವ್ಯಾಲ್ಯೂ ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ. |
09:38 | ಕೂದಲು ಈಗ ಸ್ಪಷ್ಟವಾಗಿ ಕಾಣುತ್ತಿದೆ ಆದರೆ ಇಲ್ಲಿ ಸ್ವಲ್ಪ ಮಿಶ್ರಣ ಅಥವಾ ಅಸ್ಪಷ್ಟತೆಯನ್ನು ನೀವು ಕಾಣಬಹುದು. |
09:46 | ಆದ್ದರಿಂದ ನಾವು ಇದನ್ನು ಕೆಳಗೆ ಸ್ಲೈಡ್ ಮಾಡುವೆವು. ಇದು ಉತ್ತಮವಾಗಿದೆ. |
09:52 | ವಿರೂಪಗೊಂಡ ಇಮೇಜನ್ನು ಪಡೆಯುವದಕ್ಕಿಂತ ನಾನು ‘ಸಾಫ್ಟ್’ ಪರಿಣಾಮಗಳನ್ನು ಇಷ್ಟಪಡುತ್ತೇನೆ. |
10:00 | ನೀವು ಇಮೇಜನ್ನು ಬದಲಾಯಿಸಿರುವದಕ್ಕೆ ಅವುಗಳು ಸಾಕ್ಷಿ ಆಗಿರುತ್ತವೆ. |
10:06 | ಆದ್ದರಿಂದ, ಈಗ ನಾವು ಫಲಿತಾಂಶವನ್ನು ನೋಡೋಣ. |
10:09 | ಇದು ಚೆನ್ನಾಗಿಯೇ ಕಾಣಿಸುತ್ತಿದೆ. |
10:11 | ಈಗ ಇಮೇಜನ್ನು ‘ಸೇವ್’ ಮಾಡುವದು ಕೊನೆಯ ಹಂತವಾಗಿದೆ. |
10:15 | ನಾನು File ಎನ್ನುವಲ್ಲಿಗೆ ಹೋಗಿ, Save As ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು ಮೂಲ ಫೈಲ್ ಎಕ್ಸಟೆನ್ಶನ್ ಅನ್ನು ‘tif’ (ಟಿಫ್) ನಿಂದ ‘jpg’(ಜೆ ಪಿ ಜಿ) ಗೆ ಬದಲಿಸುತ್ತೇನೆ. |
10:29 | ಹಾಗೂ Save ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |
10:32 | JPEG (ಜೇ-ಪೆಗ್) ಗೆ, ಅನೇಕ ಲೇಯರ್ಸ ಇರುವ ಇಮೇಜನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ನನಗೆ ಮುನ್ಸೂಚನೆ ಬರುತ್ತಿದೆ. ಆದ್ದರಿಂದ ಇವುಗಳನ್ನು ನಾವು ಎಕ್ಸ್ಪೋರ್ಟ್ ಮಾಡಬೇಕು. |
10:44 | ಈ ಇಮೇಜ್ ಗಾಗಿ 85% (ಎಂಭತ್ತೈದು ಪ್ರತಿಶತ) ಒಳ್ಳೆಯ ಗುಣಮಟ್ಟದ ವ್ಯಾಲ್ಯೂ ಆಗಿದೆ. |
10:53 | ಆದ್ದರಿಂದ ಈ ಇಮೇಜನ್ನು ‘JPEG ಇಮೇಜ್’ ಎಂದು ಇಲ್ಲಿ ಸೇವ್ ಮಾಡಿದ್ದೇನೆ. |
11:01 | ನೀವು ಇದನ್ನು ಫುಲ್ ಸ್ಕ್ರೀನ್ ನಲ್ಲಿ ನೋಡಬಹುದು. |
11:04 | ಇದು Meet the GIMP ಎನ್ನುವುದರ ಮೊದಲನೇ ಟ್ಯುಟೋರಿಯಲ್ ಆಗಿದೆ. ಮುಂದಿನ ಟ್ಯುಟೋರಿಯಲ್ ಗಳಲ್ಲಿ GIMP ಅನ್ನು ಸೆಟ್ ಅಪ್ ಮಾಡುವದು, ಡ್ರಾ ಹಾಗೂ ಕನ್ವರ್ಟ್ ಮಾಡುವುದರ ಬಗ್ಗೆ, ಟೂಲ್ಸ್ ಮತ್ತು ಇನ್ನೂ ಅನೇಕ ವಿಷಯಗಳನ್ನು ತಿಳಿಸುವೆನು. |
11:17 | ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು info [at] meetthegimp dot org ಇಲ್ಲಿಗೆ ಬರೆಯಿರಿ. |
11:25 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ನೋಡಿರಿ.http://meetthegimp.org |
11:31 | ನಿಮಗೆ ಇದರಲ್ಲಿ ಏನು ಇಷ್ಟವಾಯಿತು, ಇದನ್ನು ಹೇಗೆ ಉತ್ತಮಗೊಳಿಸಬಹುದಿತ್ತು, ಮುಂದೆ ಇದನ್ನು ಹೇಗೆ ನೋಡಲು ಬಯಸುವಿರಿ ಎಂದು ತಿಳಿಸಿರಿ. ನಾನು ನಿಮ್ಮಿಂದ ಕೇಳಲು ಇಚ್ಚಿಸುತ್ತೇನೆ. |
11:41 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪಕ್ಕಾಗಿ, ಅನುವಾದಕಿ ಹಾಗೂ ಪ್ರವಾಚಕಿ ಸಂಧ್ಯಾ ಪುಣೇಕರ್. |