GIMP/C2/An-Image-For-The-Web/Kannada

From Script | Spoken-Tutorial
Jump to: navigation, search
Time Narration
00:23 Meet the GIMP (ಮೀಟ್ ದ ಗಿಂಪ್) ಎನ್ನುವುದಕ್ಕೆ ನಿಮಗೆ ಸ್ವಾಗತ .
00:25 ನನ್ನ ಹೆಸರು ರೊಲ್ಫ್ ಸ್ಟೆನೊರ್ಟ್. ನಾನು ಇದನ್ನು ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡುತ್ತಿದ್ದೇನೆ.
00:31 ಗಿಂಪ್ ಎನ್ನುವುದು ಇಮೇಜ್ ಅನ್ನು ಬದಲಾಯಿಸಲು ತುಂಬಾ ಪ್ರಭಾವಶಾಲಿಯಾದ ಪ್ರೊಗ್ರಾಮ್ ಆಗಿದೆ.
00:35 ಈ ಟ್ಯುಟೋರಿಯಲ್ ನಲ್ಲಿ ಗಿಂಪ್ ನ ಬಗ್ಗೆ ಸ್ವಲ್ಪ ಮಾಹಿತಿ ಹಾಗೂ ಅದರ ವೈಶಿಷ್ಠ ಗಳನ್ನು ಕೊಡಬೇಕೆಂದಿದ್ದೇನೆ.
00:39 ವೆಬ್ ಗಾಗಿ ಒಂದು ಇಮೇಜ್ ಅನ್ನು ಹೇಗೆ ತಯಾರಿಸುವದು ಎನ್ನುವುದನ್ನು ಸಂಕ್ಷಿಪ್ತವಾಗಿ ನಾನು ನಿಮಗೆ ತೋರಿಸುವೆನು.
00:43 ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾನು ವಿಸ್ತಾರವಾದ ವಿವರಣೆಯನ್ನು ಕೊಡುವೆನು.
00:48 ಒಂದು ಇಮೇಜ್ ಅನ್ನು ಓಪನ್ ಮಾಡಲು, ನಾನು ಅದನ್ನು ಟೂಲ್ ಬಾಕ್ಸ್ ಗೆ ಎಳೆದು ತರುವೆನು.
00:53 ಇದೋ, ಇಲ್ಲಿದೆ!
00:55 ನಾವು ಈ ಇಮೇಜನ್ನು ವೀಕ್ಷಿಸೋಣ.
00:57 ನನಗೆ ಈ ಇಮೇಜನ್ನು ವೆಬ್ ಗಾಗಿ ಸಿದ್ಧಪಡಿಸಬೇಕಾಗಿದೆ.
01:02 ಇದಕ್ಕಾಗಿ ಏನು ಮಾಡಬಹುದು ಎಂದು ನಾವು ನೋಡೋಣ.
01:04 ಇಮೇಜ್, ವಾಲಿದೆ ಆದ್ದರಿಂದ ಮೊದಲು ಇದನ್ನು ನಾನು ಸ್ವಲ್ಪ ತಿರುಗಿಸಬೇಕು.
01:09 ಆಮೇಲೆ, ಈ ವ್ಯಕ್ತಿಯ ಇಮೇಜ್ ನ ಬೆನ್ನಿನ ಭಾಗವನ್ನು ತೆಗೆದು ಹಾಕಲು ನನಗೆ ಅದನ್ನು ಕ್ರಾಪ್ ಮಾಡಬೇಕು.
01:16 ಮೂರನೆಯದಾಗಿ, ನನಗೆ ಇದರಲ್ಲಿ ಇನ್ನಷ್ಟು ಬಣ್ಣ ಹಾಗೂ ಕಾಂಟ್ರಾಸ್ಟ್ ಗಳನ್ನು ಸೇರಿಸಬೇಕಾಗಿದೆ.
01:22 ನನಗೆ ಇಮೇಜನ್ನು ರಿಸೈಜ್ ಸಹ ಮಾಡಬೇಕಾಗಿದೆ ಏಕೆಂದರೆ ಈಗ ಇದು ಸುಮಾರು 4000 ಪಿಕ್ಸೆಲ್ಗಳಷ್ಟು ಅಗಲವಿದೆ, ಇದು ತುಂಬಾ ಹೆಚ್ಚು.
01:31 ಆನಂತರ ನನಗೆ ಇದನ್ನು ಶಾರ್ಪ್ ಮಾಡಿ JPEG ಇಮೇಜ್ ಎಂದು ಸೇವ್ ಮಾಡಬೇಕಾಗಿದೆ.
01:38 ನಾವು ರೊಟೇಟಿಂಗ್ ಎನ್ನುವುದರಿಂದ ಆರಂಭಿಸೋಣ.
01:40 ಇಮೇಜ್, ವಾಲಿಕೊಂಡದ್ದು ಸ್ಪಷ್ಟವಾಗಿರುವ ಭಾಗದಲ್ಲಿ ನಾನು ಝೂಮ್ ಮಾಡುತ್ತೇನೆ. ನೀವು ಇದನ್ನು ಇಲ್ಲಿ ನೋಡಬಹುದು.
01:49 ಅಂದಹಾಗೆ, ಸ್ಪೇಸ್ ಅನ್ನು ಒತ್ತಿ ಹಿಡಿದು ಕರ್ಸರನ್ನು ಮಾತ್ರ ಅತ್ತಿತ್ತ ಜರುಗಿಸುವದರಿಂದ ನೀವು ಇಮೇಜ್ ನಲ್ಲಿ ಸುತ್ತಾಡಬಹುದು.
01:56 ಮತ್ತು ಈಗ ನಾನು ಇಲ್ಲಿ ಕ್ಲಿಕ್ ಮಾಡಿ Rotate ಎನ್ನುವ ಟೂಲ್ ಅನ್ನು ಆರಿಸಿಕೊಳ್ಳುತ್ತೇನೆ.
02:00 Rotate ಎನ್ನುವ ಟೂಲ್ ನಲ್ಲಿ, ಕೆಲವು ಆಯ್ಕೆಗಳನ್ನು ಡೀಫಾಲ್ಟ್ ಆಗಿ ಸೆಟ್ ಮಾಡಲಾಗಿದೆ. ಈ ವ್ಯಾಲ್ಯೂಗಳು ಗ್ರಾಫಿಕಲ್ ಕೆಲಸಕ್ಕೆ ಯೋಗ್ಯವಾಗಿವೆ ಮತ್ತು ಫೋಟೋಗ್ರಾಫಿಕ್ ಕೆಲಸಕ್ಕೆ ಯೋಗ್ಯವಿಲ್ಲ.
02:09 ಇಲ್ಲಿ Direction ಅನ್ನು Normal(Forward) ಗೆ ಸೆಟ್ ಮಾಡಲಾಗಿದೆ ಆದರೆ ನಾನು ಇದನ್ನು Corrective(Backward) ಗೆ ಸೆಟ್ ಮಾಡುವೆನು.
02:14 ಇಲ್ಲಿ ಉತ್ತಮವಾದ ಇಂಟರ್ಪೊಲೇಷನ್ ಇದೆಯೋ ಎಂದು ಪರಿಶೀಲಿಸುತ್ತೇನೆ. ಇದು ಸರಿಯಾಗಿದೆ.
02:17 Preview ನಲ್ಲಿ ನಾನು Image ನ ಬದಲಾಗಿ Grid ಎನ್ನುವುದನ್ನು ಆಯ್ದುಕೊಳ್ಳುತ್ತೇನೆ.
02:22 ಸ್ಲೈಡರ್ ಅನ್ನು ಸರಿಸುವದರ ಮೂಲಕ ನಾನು ಗ್ರಿಡ್ ಲೈನ್ ಗಳನ್ನು ಹೆಚ್ಚಿಸುತ್ತೇನೆ. ಶೀಘ್ರದಲ್ಲೇ ಅದನ್ನು ನೋಡುವಿರಿ.
02:30 ಈಗ ನಾನು ಇಮೇಜ್ ನ ಮೇಲೆ ಕ್ಲಿಕ್ ಮಾಡಿ ಗ್ರಿಡ್ ಅನ್ನು ಇಮೇಜ್ ನ ಮೇಲೆ ಹೊಂದಿಸುತ್ತೇನೆ.
02:36 ಈ ಗ್ರಿಡ್ ನೇರವಾಗಿದೆ.
02:38 ನಾನು ಇದನ್ನು ತಿರುಗಿಸಲು ಸಾಧ್ಯವಿದೆ. ಗಿಂಪ್, ಇಮೇಜ್ ನ್ನು ಅದೇ ದಿಕ್ಕಿನಲ್ಲಿ ಮತ್ತೆ ಗ್ರಿಡ್ ನೇರವಾಗಿರುವಂತೆ, ಕರೆಕ್ಟಿವ್ ಮೋಡ್ ನಲ್ಲಿ ತಿರುಗಿಸುತ್ತದೆ.
02:51 ನಾನು ಮಾಡಿ ತೋರಿಸುತ್ತೇನೆ. ನಾನು ಗ್ರಿಡ್ಅನ್ನು ಹೀಗೆ ತಿರುಗಿಸುವೆನು.
02:56 ಇದನ್ನು ಖಚಿತಪಡಿಸಿಕೊಳ್ಳಲು ನಾನು ಇಮೇಜ್ ನ ಬೇರೆ ಭಾಗವನ್ನು ಪರಿಶೀಲಿಸುವೆನು.
03:00 ನನಗೆ ಇದು ಸರಿ ಕಾಣುತ್ತಿದೆ.
03:02 ಈಗ ನಾನು Rotate ಎನ್ನುವ ಬಟನ್ ನ ಮೇಲೆ ಕ್ಲಿಕ್ ಮಾಡುವೆನು.
03:06 ಈ ಇಮೇಜ್, ಸುಮಾರು 10 ಮೆಗಾ-ಪಿಕ್ಸೆಲ್ ಗಳಿರುವದರಿಂದ ಇದಕ್ಕೆ ಸ್ವಲ್ಪ ಸಮಯ ಬೇಕಾಗುವುದು.
03:13 ಮತ್ತು ಇದನ್ನು ಮಾಡಲಾಗಿದೆ.ಇಮೇಜ್, ತಿರುಗಿದೆ.
03:16 ನಾವು ಸಂಪೂರ್ಣ ಚಿತ್ರವನ್ನು ಒಮ್ಮೆ ನೋಡೋಣ. Shift + Ctrl + E, ನಮ್ಮನ್ನು ಮರಳಿ ಇಮೇಜ್ ಗೆ ತರುತ್ತದೆ.
03:22 ಮುಂದಿನ ಹಂತ Cropping ಎನ್ನುವುದು ಆಗಿದೆ.
03:25 ನಾನು ಇಲ್ಲಿ ಕ್ಲಿಕ್ ಮಾಡಿ Crop ಟೂಲ್ ಅನ್ನು ಆಯ್ದುಕೊಂಡಿದ್ದೇನೆ.
03:28 ನನಗೆ ಈ ಇಮೇಜ್ ನ ಆಸ್ಪೆಕ್ಟ್ ರೇಶಿಯೋವನ್ನು 3:2 ಎಂದು ಇಡಬೇಕಾಗಿದೆ.
03:33 ಅದಕ್ಕಾಗಿ ನಾನು Fixed aspect ratio ಎನ್ನುವುದನ್ನು ಇಲ್ಲಿ ಪರಿಶೀಲಿಸಿ 3:2 ಎಂದು ಟೈಪ್ ಮಾಡುತ್ತೇನೆ.
03:39 ಆ ಬಾಕ್ಸ್ ನಿಂದ ಹೊರಗೆ ಬರಲು ಕ್ಲಿಕ್ ಮಾತ್ರ ಮಾಡುತ್ತಿದ್ದೇನೆ.
03:43 ಮತ್ತು ಈಗ ನಾನು ಕ್ರಾಪ್ ಮಾಡಲು ಆರಂಭಿಸಬಹುದು.
03:45 ನನಗೆ ಈ ಮನುಷ್ಯನ ಪಾದಗಳನ್ನು ಇಲ್ಲಿ ಸೇರಿಸಿಕೊಳ್ಳಬೇಕಾಗಿದೆ ಆದರೆ ಇಮೇಜ್ ನ ಈ ಭಾಗವನ್ನು ಹೊರಗೆ ಇಡಬೇಕಾಗಿದೆ.
03:52 ಆದ್ದರಿಂದ ನಾನು ಈ ಪಾಯಿಂಟ್ ನಿಂದ ಶುರು ಮಾಡುತ್ತೇನೆ ಮತ್ತು ಈ ಏರಿಯಾವನ್ನು ಆಯ್ಕೆ ಮಾಡಲು ಮೌಸ್ನಲ್ಲಿ ಎಡ ಕ್ಲಿಕ್ ಮಾಡಿ ಹಿಡಿದು ಮೇಲಕ್ಕೆ, ಎಡಗಡೆಗೆ ಎಳೆಯುತ್ತೇನೆ.
04:01 ಆಸ್ಪೆಕ್ಟ ರೇಶಿಯೋ ಸ್ಥಿರವಾಗಿರುವದನ್ನು ಗಮನಿಸಿ.
04:06 ಮತ್ತು ಎಷ್ಟು ದೂರ ಎಳೆಯಬೇಕೆಂದು ಈಗ ನಾನು ನಿರ್ಧರಿಸಬೇಕು.
04:12 ಇದು ಸಾಕಷ್ಟು ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ.
04:18 ನಾವು ಇದರ ಅಂಚುಗಳನ್ನು ಪರಿಶೀಲಿಸೋಣ.
04:21 ನಾವು ಈ ಭಾಗವನ್ನು ಹೊರಗೆ ಇಟ್ಟಿದ್ದೇವೆ. ಅಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದಾನೆ.
04:28 ಆ ವ್ಯಕ್ತಿ ಈ ಚಿತ್ರದಲ್ಲಿ ಇರಲು ಇಲ್ಲಿ ಸಾಕಷ್ಟು ಸ್ಥಳವಿದೆ.
04:35 ಅದು ಚೆನ್ನಾಗಿ ಕಾಣಿಸುವದರಿಂದ ಅದನ್ನು ಹಾಗೆಯೇ ಬಿಡುತ್ತೇನೆ.
04:41 ಇಲ್ಲಿ ಮೇಲ್ಗಡೆ ಕಿಟಕಿಗಳಿವೆ.
04:44 ಕಿಟಕಿಗಳೆಂದು ನೋಡಲು ಇಮೇಜ್ ನಲ್ಲಿಯೂ ಇವುಗಳು ಸಾಕಷ್ಟು ಇರುತ್ತವೆ.
04:50 ಆದರೆ ಇಲ್ಲಿ, ಪಾದಗಳ ಅಕ್ಕಪಕ್ಕದಲ್ಲಿ ಸಾಕಷ್ಟು ಸ್ಥಳವಿಲ್ಲ.
04:54 ಆದ್ದರಿಂದ ನಾನು ಚಿತ್ರದ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು ಇದನ್ನು ಸ್ವಲ್ಪ ಕೆಳಗೆ ಎಳೆಯುತ್ತೇನೆ.
04:58 ಈಗ ಇದು ಸರಿಯಾಗಿದೆ.
05:01 ಆದರೆ ಈಗ ಇಲ್ಲಿ ಸಾಕಷ್ಟು ಕಿಟಕಿಗಳು ಕಾಣಿಸುತ್ತಿಲ್ಲ ಮತ್ತು ಇಲ್ಲಿ ಕುಳಿತ ವ್ಯಕ್ತಿ ಅಂಚಿಗೆ ತುಂಬಾ ಹತ್ತಿರವಿದ್ದಾನೆ.
05:08 ಆದ್ದರಿಂದ, ನಾವು ಇಮೇಜನ್ನು ಸ್ವಲ್ಪ ದೊಡ್ಡದು ಮಾಡೋಣ.
05:11 ಇಲ್ಲಿ ನಮಗೆ ಒಂದು ಸಮಸ್ಯೆ ಎದುರಾಗುತ್ತಿದೆ. ಬಹುಶ: ನಿಮಗೆ ಅದು ಕಾಣಿಸಬಹುದು.
05:18 ಇದು ರೊಟೇಶನ್ ಮಾಡುವಾಗ ಆಗಿದೆ.
05:21 ಇಲ್ಲಿಯ ಒಂದು ಚಿಕ್ಕ ಭಾಗ ಈಗ ಪಾರದರ್ಶಕವಾಗಿದೆ.
05:25 ನನಗೆ ಇದನ್ನು ಸೇರಿಸಿಕೊಳ್ಳುವದು ಬೇಡವಾಗಿದೆ,
05:33 ಅದಕ್ಕಾಗಿ ನಾವು ಮರಳಿ Crop ಟೂಲ್ ಗೆ ಹೋಗೋಣ.
05:35 ನನಗೆ ಇಲ್ಲಿ ಸ್ವಲ್ಪ ಹೆಚ್ಚು ಸ್ಥಳ ಬೇಕು; ಆದ್ದರಿಂದ ನಾನು ಇದನ್ನು ಮೇಲೆ ಎಳೆಯುತ್ತಿದ್ದೇನೆ.
05:38 ಇಷ್ಟು ದೂರ ಬೇಡ.
05:40 ಇದು ಸಾಕಷ್ಟು ಉತ್ತಮವಾಗಿದೆ.
05:44 ಈಗ ಇಮೇಜ್ ನ ಮೇಲೆ ಕ್ಲಿಕ್ ಮಾಡಿರಿ. ಇಲ್ಲಿ ನಾವು ಕ್ರಾಪ್ ಮಾಡಿದ ಹಾಗೂ ರೊಟೇಟ್ ಮಾಡಿದ ಇಮೇಜನ್ನು ಪಡೆದಿದ್ದೇವೆ.
05:50 Shift + Ctrl + E, ನಮ್ಮನ್ನು ‘ಫುಲ್ ವ್ಹ್ಯೂ’ಗೆ ಮರಳಿ ತರುತ್ತದೆ.
05:56 ಮುಂದಿನ ಹಂತವು ಬಣ್ಣ ಹಾಗೂ ಕಾಂಟ್ರಾಸ್ಟ್ ಗಳನ್ನು ಸ್ವಲ್ಪ ಹೆಚ್ಚಿಸುವುದಾಗಿದೆ.
06:02 ಇಲ್ಲಿ ಹಲವು ವಿಧಾನಗಳಿವೆ. ನಾನು ಕಲರ್ ಲೆವೆಲ್ಗಳನ್ನು ಬಳಸಬಹುದಿತ್ತು ಇದು ಇಲ್ಲಿ ಇದೆ, ಇವು ವಕ್ರ ಆಕೃತಿಗಳು ಅಥವಾ ಕೆಲವು ಸ್ಲೈಡರ್ ಗಳು.
06:11 ಆದರೆ ನಾನು ಇದನ್ನು ಲೇಯರ್ಸ್ ನೊಂದಿಗೆ ಮಾಡಲು ಪ್ರಯತ್ನಿಸುತ್ತೇನೆ.
06:18 ನಾನು ಕೇವಲ ಈ ಲೇಯರ್ ನ ‘ಕಾಪಿ’ಯನ್ನು ಇಲ್ಲಿ ಮಾಡುತ್ತೇನೆ.
06:23 ಮತ್ತು Layer Mode ಅನ್ನು Overlay ಎನ್ನುವುದಕ್ಕೆ ಬದಲಿಸುತ್ತೇನೆ.
06:30 ಇದು ಪ್ರಬಲವಾದ ಪರಿಣಾಮ ಆಗಿದೆ ಎನ್ನುವುದನ್ನು ನೀವು ನೋಡಬಹುದು. ನನಗೆ ಇದು ಇಷ್ಟು ಬೇಡವಾಗಿದೆ.
06:36 ಆದ್ದರಿಂದ ಅದು ನನಗೆ ಚೆನ್ನಾಗಿ ಕಾಣುವವರೆಗೆ ನಾನು Opacity (ಓಪ್ಯಾಸಿಟೀ) ಸ್ಲೈಡರ್ ಅನ್ನು ಕೆಳಗಿನ ವ್ಯಾಲ್ಯೂಗೆ ಜಾರಿಸುತ್ತೇನೆ.
06:42 ಬಹುಶ: ಇನ್ನೂ ಸ್ವಲ್ಪ.
06:46 ಸರಿ, ಇದು ಸಾಕಷ್ಟು ಉತ್ತಮವಾಗಿದೆ.
06:50 ಮೌಸ್ನಲ್ಲಿ ರೈಟ್ ಕ್ಲಿಕ್ ಮಾಡಿ, ಅಲ್ಲಿ ಕಾಣುವ ಚಾನೆಲ್ ಲಿಸ್ಟ್ ನಲ್ಲಿರುವ Flatten image ಅಥವಾ Merge visible layers ಎಂಬುದನ್ನು ಆಯ್ಕೆ ಮಾಡಿಲ್ಲವೆಂದಾದಲ್ಲಿ ಇದನ್ನು ನಾನು ಯಾವಾಗಲೂ ಬದಲಿಸಲು ಸಾಧ್ಯ.
07:01 ಆಗ ಎಲ್ಲ ಬದಲಾವಣೆಗಳು ಕಾಯಂ ಆಗುತ್ತವೆ.
07:03 ಇದು, ನಾನು ಇಲ್ಲಿ History ಎನ್ನುವಲ್ಲಿಗೆ ಹೋಗಿ, ಹಿಂದೆ ಹೋಗಿ undo History ಮಾಡದಿದ್ದರೆ ಮಾತ್ರ.
07:10 ಆದರೆ ಅದನ್ನು ನಾವು ಆಮೇಲೆ ನೋಡುವೆವು.
07:13 ಮುಂದಿನ ಹಂತ Resizing (ರಿಸೈಜಿಂಗ್) ಎನ್ನುವುದು ಆಗಿದೆ.
07:16 ನಾನು Image ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ Scale Image ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳುವೆನು.
07:27 ಇಲ್ಲಿ ನಾನು 800 ಪಿಕ್ಸೆಲ್ ಎಂದು ಟೈಪ್ ಮಾಡುತ್ತೇನೆ.
07:32 ನನಗೆ ‘height’ ಗಾಗಿ ವ್ಯಾಲ್ಯೂ ತಾನಾಗಿಯೇ ಸಿಗುತ್ತದೆ.
07:36 ಒಂದು ವೇಳೆ ನಾನು ಈ ಲಿಂಕ್ ಅನ್ನು ಅನ್ಲಾಕ್ ಮಾಡಿದರೆ, ಚಿತ್ರವನ್ನು ರಿಸೈಜ್ ಮಾಡುವಾಗ ಅದು ವಿರೂಪಗೊಳ್ಳುವ ಸಾಧ್ಯತೆಗಳಿವೆ.
07:44 Interpolation (ಇಂಟರ್ಪೊಲೇಶನ್)ನಾನು Cubic (ಕ್ಯೂಬಿಕ್) ಅನ್ನು ಆಯ್ದುಕೊಳ್ಳುವೆನು. ಇಲ್ಲಿ ಅತಿ ಹೆಚ್ಚಿನ ಲೇಯರ್, ಇಟ್ಟಿಗೆಯ ಕಟ್ಟಡಗಳೊಂದಿಗೆ ಸ್ವಲ್ಪ ಕಲಾತ್ಮಕ ಪರಿಣಾಮವನ್ನು ಕೊಡುತ್ತಿದೆ ಎನ್ನುವುದು ನನಗೆ ಕಂಡುಬಂದಿದೆ. ಇದು ಆಶ್ಚರ್ಯಕರ, ನಾನು ಇದನ್ನು ಪರಿಶೀಲಿಸಬೇಕು.
08:02 ಈಗ Scale ಎನ್ನುವುದರ ಮೇಲೆ ಕ್ಲಿಕ್ ಮಾಡಿರಿ.
08:04 ಮತ್ತು ನಾವು ಇದರ ಪರಿಣಾಮವನ್ನು ನೋಡುವೆವು.
08:08 Shift + Ctrl + E, ನಮಗೆ ಸಂಪೂರ್ಣ ಇಮೇಜನ್ನು ಕೊಡುತ್ತದೆ.
08:13 1(ಒಂದು) ನ್ನು ಒತ್ತಿದಾಗ ನಾನು 100% (ನೂರು ಪ್ರತಿಶತ) ಝೂಮ್ ಅನ್ನು ಪಡೆಯುತ್ತೇನೆ.
08:19 ಈಗ ಇಮೇಜ್ ನಲ್ಲಿ ಏನಾದರೂ ತೊಂದರೆ ಕೊಡುವ ಅಥವಾ ಗೊಂದಲದ ವಿಷಯ ಇದೆಯೋ ಹೇಗೆ ಎನ್ನುವುದನ್ನು ನಾವು ನೋಡಬಹುದು. ಆದರೆ ಇದು ಸರಿಯಾಗಿ ಕೆಲಸ ಮಾಡಿದೆ.
08:32 ಮುಂದಿನ ಹಂತ Sharpening (ಶಾರ್ಪನಿಂಗ್) ಎನ್ನುವುದು ಆಗಿದೆ.
08:35 ನನ್ನ ಮಸೂರ ಹಾಗೂ ಕ್ಯಾಮರಾ ಚೆನ್ನಾಗಿವೆ. ಆದರೆ ನಾವು ಚಿತ್ರವನ್ನು ಸ್ವಲ್ಪ ಬದಲಾಯಿಸಿದ್ದೇವೆ. ಆದ್ದರಿಂದ ಅದನ್ನು ಸ್ವಲ್ಪ ಶಾರ್ಪ್ ಮಾಡಬೇಕಾಗಿದೆ.
08:49 ನಾನು Filters (ಫಿಲ್ಟರ್ಸ್) ಎನ್ನುವುದನ್ನು ಆಯ್ಕೆ ಮಾಡುವೆನು.
08:53 ಹಾಗೂ Enhance (ಎನ್ಹಾನ್ಸ್) ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ. ಇಲ್ಲಿ Sharpen (ಶಾರ್ಪನ್) ಇದೆ. ನಾನು Unsharp mask (ಅನ್-ಶಾರ್ಪ್ ಮಾಸ್ಕ್) ಎನ್ನುವ ಪ್ರಭಾವಶಾಲಿಯಾದ ಶಾರ್ಪನಿಂಗ್ ಟೂಲ್ ಅನ್ನು ಸಹ ಉಪಯೋಗಿಸಬಹುದಿತ್ತು. ಆದರೆ ಈಗ ‘ಶಾರ್ಪನ್’ ಎನ್ನುವುದು ಮಾತ್ರ ಸಾಕು.
09:06 ಈ ಟೂಲ್ ಗೆ ಮೂಲತಃ Sharpness (ಶಾರ್ಪ್ನೆಸ್) ಸ್ಲೈಡರ್ ಎನ್ನುವ ಒಂದೇ ಒಂದು ಆಯ್ಕೆ ಇದೆ. ಇದನ್ನು ಹೊಂದಿಸಬಹುದು. ಇಂತಹ ಇಮೇಜ್ ಗಾಗಿ ಇಷ್ಟು ಸಾಕು.
09:16 ಇದು ಶಾರ್ಪ್ ಮಾಡಿರದ ಇಮೇಜ್ ಆಗಿದೆ. ನಾನು ಈ ಸ್ಲೈಡರನ್ನು ಎಳೆದಾಗ ಇಮೇಜ್, ಹೆಚ್ಚು ಹೆಚ್ಚು ಶಾರ್ಪ್ ಆಗುತ್ತದೆ. ನೀವು ತುಂಬಾ ದೂರ ಎಳೆದರೆ ನಿಮಗೆ ಬಹಳ ಮೋಜು ಸಿಗುತ್ತದೆ.
09:31 ಈ ಇಮೇಜ್ ಗಾಗಿ ಈ ವ್ಯಾಲ್ಯೂ ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ.
09:38 ಕೂದಲು ಈಗ ಸ್ಪಷ್ಟವಾಗಿ ಕಾಣುತ್ತಿದೆ ಆದರೆ ಇಲ್ಲಿ ಸ್ವಲ್ಪ ಮಿಶ್ರಣ ಅಥವಾ ಅಸ್ಪಷ್ಟತೆಯನ್ನು ನೀವು ಕಾಣಬಹುದು.
09:46 ಆದ್ದರಿಂದ ನಾವು ಇದನ್ನು ಕೆಳಗೆ ಸ್ಲೈಡ್ ಮಾಡುವೆವು. ಇದು ಉತ್ತಮವಾಗಿದೆ.
09:52 ವಿರೂಪಗೊಂಡ ಇಮೇಜನ್ನು ಪಡೆಯುವದಕ್ಕಿಂತ ನಾನು ‘ಸಾಫ್ಟ್’ ಪರಿಣಾಮಗಳನ್ನು ಇಷ್ಟಪಡುತ್ತೇನೆ.
10:00 ನೀವು ಇಮೇಜನ್ನು ಬದಲಾಯಿಸಿರುವದಕ್ಕೆ ಅವುಗಳು ಸಾಕ್ಷಿ ಆಗಿರುತ್ತವೆ.
10:06 ಆದ್ದರಿಂದ, ಈಗ ನಾವು ಫಲಿತಾಂಶವನ್ನು ನೋಡೋಣ.
10:09 ಇದು ಚೆನ್ನಾಗಿಯೇ ಕಾಣಿಸುತ್ತಿದೆ.
10:11 ಈಗ ಇಮೇಜನ್ನು ‘ಸೇವ್’ ಮಾಡುವದು ಕೊನೆಯ ಹಂತವಾಗಿದೆ.
10:15 ನಾನು File ಎನ್ನುವಲ್ಲಿಗೆ ಹೋಗಿ, Save As ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು ಮೂಲ ಫೈಲ್ ಎಕ್ಸಟೆನ್ಶನ್ ಅನ್ನು ‘tif’ (ಟಿಫ್) ನಿಂದ ‘jpg’(ಜೆ ಪಿ ಜಿ) ಗೆ ಬದಲಿಸುತ್ತೇನೆ.
10:29 ಹಾಗೂ Save ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
10:32 JPEG (ಜೇ-ಪೆಗ್) ಗೆ, ಅನೇಕ ಲೇಯರ್ಸ ಇರುವ ಇಮೇಜನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ನನಗೆ ಮುನ್ಸೂಚನೆ ಬರುತ್ತಿದೆ. ಆದ್ದರಿಂದ ಇವುಗಳನ್ನು ನಾವು ಎಕ್ಸ್ಪೋರ್ಟ್ ಮಾಡಬೇಕು.
10:44 ಈ ಇಮೇಜ್ ಗಾಗಿ 85% (ಎಂಭತ್ತೈದು ಪ್ರತಿಶತ) ಒಳ್ಳೆಯ ಗುಣಮಟ್ಟದ ವ್ಯಾಲ್ಯೂ ಆಗಿದೆ.
10:53 ಆದ್ದರಿಂದ ಈ ಇಮೇಜನ್ನು ‘JPEG ಇಮೇಜ್’ ಎಂದು ಇಲ್ಲಿ ಸೇವ್ ಮಾಡಿದ್ದೇನೆ.
11:01 ನೀವು ಇದನ್ನು ಫುಲ್ ಸ್ಕ್ರೀನ್ ನಲ್ಲಿ ನೋಡಬಹುದು.
11:04 ಇದು Meet the GIMP ಎನ್ನುವುದರ ಮೊದಲನೇ ಟ್ಯುಟೋರಿಯಲ್ ಆಗಿದೆ. ಮುಂದಿನ ಟ್ಯುಟೋರಿಯಲ್ ಗಳಲ್ಲಿ GIMP ಅನ್ನು ಸೆಟ್ ಅಪ್ ಮಾಡುವದು, ಡ್ರಾ ಹಾಗೂ ಕನ್ವರ್ಟ್ ಮಾಡುವುದರ ಬಗ್ಗೆ, ಟೂಲ್ಸ್ ಮತ್ತು ಇನ್ನೂ ಅನೇಕ ವಿಷಯಗಳನ್ನು ತಿಳಿಸುವೆನು.
11:17 ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು info [at] meetthegimp dot org ಇಲ್ಲಿಗೆ ಬರೆಯಿರಿ.
11:25 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ನೋಡಿರಿ.http://meetthegimp.org
11:31 ನಿಮಗೆ ಇದರಲ್ಲಿ ಏನು ಇಷ್ಟವಾಯಿತು, ಇದನ್ನು ಹೇಗೆ ಉತ್ತಮಗೊಳಿಸಬಹುದಿತ್ತು, ಮುಂದೆ ಇದನ್ನು ಹೇಗೆ ನೋಡಲು ಬಯಸುವಿರಿ ಎಂದು ತಿಳಿಸಿರಿ. ನಾನು ನಿಮ್ಮಿಂದ ಕೇಳಲು ಇಚ್ಚಿಸುತ್ತೇನೆ.
11:41 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪಕ್ಕಾಗಿ, ಅನುವಾದಕಿ ಹಾಗೂ ಪ್ರವಾಚಕಿ ಸಂಧ್ಯಾ ಪುಣೇಕರ್.

Contributors and Content Editors

Pratik kamble, Vasudeva ahitanal