BASH/C2/String-and-File-attributes/Kannada
From Script | Spoken-Tutorial
Revision as of 15:51, 17 March 2017 by PoojaMoolya (Talk | contribs)
Time | Narration |
00:01 | ಬ್ಯಾಶ್ ನಲ್ಲಿ String and File Attributes comparison ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:10 | ಈ ಟ್ಯುಟೋರಿಯಲ್ ನಲ್ಲಿ ನಾವು |
00:13 | String comparison ಮತ್ತು File attributes comparison ಗಳ ಕುರಿತು ಕಲಿಯುತ್ತೇವೆ. |
00:18 | ನಾವು ಇದನ್ನು ಕೆಲವು ಉದಾಹರಣೆಗಳೊಂದಿಗೆ ನೋಡೋಣ. |
00:22 | ಈ ಪಾಠಕ್ಕಾಗಿ ನಾನು |
00:25 | Ubuntu Linux 12.04 OS ಮತ್ತು |
00:30 | GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:34 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:42 | ಪರಿಚಯದೊಂದಿಗೆ ಪ್ರಾರಂಭಿಸೋಣ. |
00:45 | ಬ್ಯಾಶ್ ನಲ್ಲಿ string ಅನ್ನು ಹೋಲಿಕೆ ಮಾಡಲು ಎರಡು ವಿಧಾನಗಳಿವೆ. |
00:49 | 1) ಮೊದಲನೆಯದು : == (ಸಮ ಸಮ ) ಆಪರೇಟರ್ ಅನ್ನು |
00:53 | ಎರಡು ಸಮವಾಗಿರುವ strings ಅನ್ನು ಹೋಲಿಕೆ ಮಾಡಲು, ಉಪಯೋಗಿಸುತ್ತೇವೆ |
00:56 | 2) ಎರಡನೆಯದು : != (ಅಸಮ ) ಆಪರೇಟರ್ |
00:59 | ಎರಡು ಸಮವಲ್ಲದ string ಗಳನ್ನು ಹೋಲಿಕೆ ಮಾಡಲು ಉಪಯೋಗಿಸುತ್ತೇವೆ. |
01:03 | ಈಗ ಒಂದು ಉದಾಹರಣೆಯನ್ನು ನೋಡೋಣ. |
01:06 | ನಾನು ಒಂದು ಸರಳ ಪ್ರೋಗ್ರಾಮ್ ಅನ್ನುಹೊಂದಿದ್ದೇನೆ ಅದು user ID ಯನ್ನು ಪರೀಕ್ಷಿಸುತ್ತದೆ. |
01:11 | ನಿಮ್ಮ ಎಡಿಟರ್ ನಲ್ಲಿ ಒಂದು ಫೈಲ್ ಅನ್ನು ಓಪನ್ ಮಾಡಿ ಅದನ್ನು strcompare ಡಾಟ್ sh ಎಂದು ಸೇವ್ ಮಾಡಿ. |
01:19 | ಈಗ ನಿಮ್ಮ strcompare ಡಾಟ್ sh ನಲ್ಲಿ ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ. |
01:26 | ಈಗ ನಾನು ಕೋಡ್ ಅನ್ನು ವಿವರಿಸುತ್ತೇನೆ. |
01:28 | ಇದು shebang line. |
01:31 | whoami ಕಮಾಂಡ್ ನಿಮಗೆ ಪ್ರಸ್ತುತ user ನ username ಅನ್ನು ಕೊಡುತ್ತದೆ. |
01:36 | if ಹೇಳಿಕೆಯು whoami ವೇರಿಯೇಬಲ್ ನ ಫಲಿತವನ್ನು string “root” ನೊಂದಿಗೆ ಹೋಲಿಸಿ ಪರೀಕ್ಷಿಸುತ್ತದೆ. |
01:44 | ನಾವು ಇಲ್ಲಿ not-equal to ಆಪರೇಟರನ್ನು string ಗಳನ್ನು ಹೋಲಿಸಲು ಬಳಸಿದ್ದೇವೆ. |
01:50 | ಪ್ರಸ್ತುತ ಬಳಕೆದಾರ root user, ಆಗಿರದಿದ್ದಲ್ಲಿ ಆಗ ಇದು ಈ ಹೇಳಿಕೆಯನ್ನು echo ಮಾಡುತ್ತದೆ- |
01:57 | “You have no permission to run strcompare ಡಾಟ್ sh as non-root user.” |
02:05 | ಇಲ್ಲಿ $0 (ಡಾಲರ್ ಸೊನ್ನೆ) ಇದು ಸೊನ್ನೆಯ ಆರ್ಗ್ಯುಮೆಂಟ್ ಅಂದರೆ ಅಂದರೆ ಅದು ಫೈಲ್ ನ ಹೆಸರೇ ಆಗಿರುತ್ತದೆ. |
02:13 | ಬಳಕೆದಾರನು root user ಆಗಿದ್ದರೆ , ಇದು “Welcome root!” ಎಂಬ ಸಂದೇಶವನ್ನು echo ಮಾಡುತ್ತದೆ. |
02:18 | ನಂತರ ಪ್ರೋಗ್ರಾಮ್ ಗೆ exit ಸ್ಟೇಟ್ ಮೆಂಟ್ ಅನ್ನು ಹೊಂದಿದ್ದೇವೆ. |
02:23 | ಮತ್ತು ಇಲ್ಲಿ fi ನಿಂದ if statement ಅನ್ನು ಮುಗಿಸುತ್ತೇವೆ. |
02:28 | ನಾವು ಈಗ ಪುನ ಸ್ಲೈಡ್ಸ್ ಗೆ ಹಿಂದುರಿಗಿ exit statement. ನ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. |
02:34 | ಪ್ರತಿಯೊಂದೂ ಪ್ರೋಗ್ರಾಮ್ exit status ಅನ್ನುಹಿಂದಿರುಗಿಸುತ್ತದೆ. |
02:38 | ಯಶಸ್ವಿ ಕಮಾಂಡ್ 0 (ಸೊನ್ನೆ) ಯನ್ನು ಹಿಂದಿರುಗಿಸುತ್ತದೆ. |
02:42 | ತಪ್ಪಾದ ಕಮಾಂಡ್ non-zero ಬೆಲೆಯನ್ನು ಹಿಂದಿರುಗಿಸುತ್ತದೆ. |
02:47 | ಇದನ್ನು error code ಎಂದು ಅರ್ಥೈಸಬಹುದು. |
02:51 | ನಾವು exit statement ನ ಬೆಲೆಯನ್ನು ಒಗ್ಗಿಸಿಕೊಳ್ಳಬಹುದು. |
02:56 | ಈಗ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
02:58 | Ctrl Alt ಮತ್ತು T ಕೀಲಿಗಳನ್ನು ಒಟ್ಟಿಗೆ ಒತ್ತಿ ನಿಮ್ಮ ಟರ್ಮಿನಲ್ ಅನ್ನು ಓಪನ್ ಮಾಡಿ. |
03:08 | ಮೊದಲು ಸಿಸ್ಟಮ್ ನ ಪ್ರಸ್ತುತ ಬಳಕೆದಾರರನ್ನು ಕಂಡುಹಿಡಿಯೋಣ. |
03:12 | whoami ಎಂದು ಟೈಪ್ ಮಾಡಿ. |
03:15 | Enter ಅನ್ನು ಒತ್ತಿ. |
03:17 | ಇದು ಪ್ರಸ್ತುತ ಬಳಕೆದಾರನ ಹೆಸರನ್ನು ಫಲಿತವನ್ನಾಗಿ ನೀಡುತ್ತದೆ. |
03:21 | ಈಗ ನಮ್ಮ ಸ್ಕ್ರಿಪ್ಟ್ ಎಕ್ಸಿಕ್ಯೂಟ್ ಆಗುವಂತೆ ಮಾಡೋಣ. |
03:25 | chmod ಪ್ಲಸ್ x strcompare ಡಾಟ್ sh ಎಂದು ಟೈಪ್ ಮಾಡಿ. |
03:32 | ಡಾಟ್ ಸ್ಲ್ಯಾಶ್ strcompare ಡಾಟ್ sh ಎಂದು ಟೈಪ್ ಮಾಡಿ. |
03:37 | ಫಲಿತವು |
03:39 | You have no permission to run ಡಾಟ್ ಸ್ಲ್ಯಾಶ್ strcompare ಡಾಟ್ sh as non-root user. ಎಂದು ಡಿಸ್ಪ್ಲೇ ಆಗುತ್ತದೆ. |
03:47 | ಈಗ ಅದೇ ಪ್ರೋಗ್ರಾಮ್ ಅನ್ನು root user. ಆಗಿ ಎಕ್ಸಿಕ್ಯೂಟ್ ಮಾಡೋಣ. |
03:52 | sudo ಡಾಟ್ ಸ್ಲ್ಯಾಶ್ strcompare ಡಾಟ್ sh ಎಂದು ಟೈಪ್ ಮಾಡಿ. |
03:58 | ಇದು ಪಾಸ್ ವರ್ಡ್ ಅನ್ನು ಕೇಳುತ್ತದೆ. |
04:01 | ಇಲ್ಲಿ ನಿಮ್ಮ ಪಾಸ್ ವರ್ಡ್ ಅನ್ನು ಕೊಡಿ. |
04:04 | ಫಲಿತವು Welcome root! ಎಂದು ಡಿಸ್ಪ್ಲೇ ಆಗುತ್ತದೆ. |
04:08 | ಈಗ file attribute ಗಳ ಹೋಲಿಕೆಯನ್ನು ಕಲಿಯೋಣ. |
04:13 | ನಾನು ಈಗಾಗಲೇ ಇದರ ಉದಾಹರಣೆಯ ಕೋಡ್ ಅನ್ನು ಹೊಂದಿದ್ದೇನೆ. |
04:17 | ಈ ಪ್ರೋಗ್ರಾಂ ನಲ್ಲಿ ನಾವು ಕೊಟ್ಟಿರುವ ಫೈಲ್ ಇದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸುತ್ತೇವೆ. |
04:23 | file1 ಇದು ನಾವು ಫೈಲ್ ನ ಪಥವನ್ನು ಸೇವ್ ಮಾಡಿಕೊಳ್ಳಲು ಡಿಕ್ಲೇರ್ ಮಾಡಿರುವ ಒಂದು ವೇರಿಯೇಬಲ್. |
04:29 | -(ಹೈಫನ್) f ಕಮಾಂಡ್ ಇದು ಫೈಲ್ ಇದೆಯೇ ಅಥವಾ ಇಲ್ಲವೇ |
04:33 | ಮತ್ತು ಇದು ಒಂದು ಸಾಮಾನ್ಯ ಫೈಲೇ ಎಂದು ಪರೀಕ್ಷಿಸುತ್ತದೆ. |
04:37 | ಕಂಡಿಶನ್ true ಆಗಿದ್ದರೆ ಇದು File exists and is a normal file ಎಂದು ಡಿಸ್ಪ್ಲೇ ಮಾಡುತ್ತದೆ. |
04:44 | ಇಲ್ಲವಾದಲ್ಲಿ ಇದು File does not exis ಎಂದು ಡಿಸ್ಪ್ಲೇ ಮಾಡುತ್ತದೆ. |
04:48 | ಟರ್ಮಿನಲ್ ಗೆ ಹಿಂದಿರುಗಿ ನಮ್ಮ ಫೈಲ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
04:53 | chmod ಪ್ಲಸ್ x fileattrib ಡಾಟ್ sh ಎಂದು ಟೈಪ್ ಮಾಡಿ. |
05:00 | ಡಾಟ್ ಸ್ಲ್ಯಾಶ್ fileattrib ಡಾಟ್ sh ಎಂದು ಟೈಪ್ ಮಾಡಿ. |
05:05 | ಫಲಿತವು |
05:07 | File exists and is a normal file ಎಂದು ಡಿಸ್ಪ್ಲೇ ಆಗುತ್ತದೆ. |
05:11 | ನಾವು ಈಗ ಫೈಲ್ ಖಾಲಿಯಾಗಿದೆಯೇ ಇಲ್ಲವೇ ಎಂದು ಪರೀಕ್ಷಿಸೋಣ. |
05:16 | ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು ನಾನು empty ಡಾಟ್ sh ಎಂಬ ಖಾಲಿ ಫೈಲ್ ಅನ್ನು ರಚನೆ ಮಾಡುತ್ತೇನೆ. |
05:24 | gedit empty ಡಾಟ್ sh ಆಂಪ್ರಸೆಂಡ್ ಚಿಹ್ನೆ ಯನ್ನು ಟೈಪ್ ಮಾಡಿ. |
05:31 | Save ಮೇಲೆ ಕ್ಲಿಕ್ ಮಾಡಿ ಫೈಲ್ ಅನ್ನು ಕ್ಲೋಸ್ ಮಾಡಿರಿ. |
05:35 | - (ಹೈಫನ್) f ಅನ್ನು - (ಹೈಫನ್) s ಎಂದು ಬದಲಾಯಿಸಿ. |
05:41 | ಇಲ್ಲಿ ಫೈಲ್ ನ ಹೆಸರನ್ನು ಕೂಡ ಬದಲಿಸಿ |
05:45 | empty ಡಾಟ್ sh ಎಂದು ಟೈಪ್ ಮಾಡಿ |
05:47 | ಈಗ ಮೊದಲ echo statement ಅನ್ನು |
05:51 | “File exists and is not empty” ಎಂದು ಬದಲಾಯಿಸಿ. |
05:54 | ಮತ್ತು ಎರಡನೆಯ echo statement ಅನ್ನು |
05:57 | “File is empty” ಎಂದು ಬದಲಿಸಿ |
05:59 | Save ಮೇಲೆ ಕ್ಲಿಕ್ ಮಾಡಿ. |
06:01 | ಟರ್ಮಿನಲ್ ಗೆ ಹಿಂದಿರುಗಿ. |
06:03 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
06:06 | ಈಗ ಎಕ್ಸಿಕ್ಯೂಟ್ ಮಾಡೋಣ. |
06:08 | ಡಾಟ್ ಸ್ಲ್ಯಾಶ್ fileattrib ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
06:13 | ಫಲಿತವು File is empty ಆಗಿರುತ್ತದೆ. |
06:17 | ಈಗ ನಾವು ಇನ್ನೊಂದು ಫೈಲ್ ಅಟ್ಟ್ರಿಬ್ಯೂಟ್ ಅನ್ನು ನೋಡೋಣ, ಇದು ಯಾವುದೇ ಫೈಲ್ ನ write premission ಅನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. |
06:24 | ನಮ್ಮ ಪ್ರೋಗ್ರಾಂ ಗೆ ಹಿಂದಿರುಗಿ. |
06:26 | - (ಹೈಫನ್) s ಅನ್ನು - (hyphen) w ಎಂದು ಬದಲಾಯಿಸಿ. |
06:32 | ಈಗ ಮೊದಲ echo statement ಅನ್ನು |
06:36 | “User has write permission to this file” ಎಂದು ಬದಲಾಯಿಸಿ. |
06:40 | ಮತ್ತು ಎರಡನೇ echo statement ಅನ್ನು |
06:43 | “User doesn't have write permission to this file” ಎಂದು ಬದಲಾಯಿಸಿ. |
06:47 | Save ಮೇಲೆ ಕ್ಲಿಕ್ ಮಾಡಿ. |
06:49 | ನಾನು ಈ ಉದಾಹರಣೆ ಗಾಗಿ ಬೇರೆ ಬೇರೆ ಫೈಲ್ ಅನ್ನು ತೆಗೆದುಕೊಳ್ಳುತ್ತೇನೆ. |
06:53 | ನಾವು ಒಂದು ಓದಲಾಗದ ಅಥವಾ write permission ಅನ್ನು ಹೊಂದಿರದ ಫೈಲ್ ಅನ್ನು ತೆಗೆದುಕೊಳ್ಳೋಣ. |
07:01 | ನಾನು ಈಗ filepath ಅನ್ನು |
07:04 | “ಸ್ಲ್ಯಾಶ್ etc ಸ್ಲ್ಯಾಶ್ mysql ಸ್ಲ್ಯಾಶ್ debian ಡಾಟ್ cnf” ಎಂದು ಬದಲಿಸುತ್ತೇನೆ. |
07:10 | Save ಮೇಲೆ ಕ್ಲಿಕ್ ಮಾಡಿ. |
07:12 | ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. |
07:15 | up-arrow key ಯನ್ನು ಒತ್ತಿEnter ಅನ್ನು ಒತ್ತಿ. |
07:19 | ನಾವು ಫಲಿತವು |
07:21 | User doesn't have write permission to this file. ಎಂದು ಡಿಸ್ಪ್ಲೇ ಆಗುವುದನ್ನು ನೋಡುತ್ತೇವೆ. |
07:26 | ಈಗ ಫೈಲ್ ಅಟ್ಟ್ರಿಬ್ಯೂಟ್ ನ ಕುರಿತು ಇನ್ನೊಂದು ಉದಾಹರಣೆಯನ್ನು ನೋಡೋಣ. |
07:31 | ಈ ಉದಾಹರಣೆಯಲ್ಲಿ file1 ಇದು file2 ಗಿಂತ ಹೊಸದೇ ಎಂದು ಪರೀಕ್ಷಿಸುತ್ತೇವೆ. |
07:38 | ಈಗ ಪ್ರೋಗ್ರಾಮ್ ಅನ್ನು ನೋಡೋಣ. |
07:40 | ಗಮನಿಸಿ ನಮ್ಮ ಫೈಲ್ ನ ಹೆಸರು fileattrib2 ಡಾಟ್ sh. |
07:46 | ಈಗ ಕೋಡ್ ಅನ್ನು ನೋಡೋಣ. |
07:48 | ಇಲ್ಲಿ ನಾವು file1 ಮತ್ತು file2 ಎಂಬ ಎರಡು ವೇರಿಯೇಬಲ್ ಗಳನ್ನು ಹೊಂದಿದ್ದೇವೆ. |
07:53 | ಎರಡು ಫೈಲ್ ಗಳು ಈಗಾಗಲೇ ರಚನೆಯಾಗಿವೆ ಮತ್ತು ಅವು ಖಾಲಿಯಾಗಿವೆ. |
07:58 | ಇಲ್ಲಿ ನಾವು file1 ಇದು file2 ಗಿಂತ ಹೊಸದೇ ಎಂದು ಪರೀಕ್ಷಿಸುತ್ತೇವೆ. |
08:04 | ಕಂಡಿಶನ್ true ಆಗಿದ್ದರೆ ನಾವು file1 is newer than file2 ಎಂದು ಪ್ರಿಂಟ್ ಮಾಡುತ್ತೇವೆ. |
08:09 | ಇಲ್ಲವಾದಲ್ಲಿ file2 is newer than file1 ಎಂದು ಪ್ರಿಂಟ್ ಮಾಡುತ್ತೇವೆ. |
08:14 | ಇದು ಇನ್ನೊಂದು if statement. |
08:16 | ಇಲ್ಲಿ ನಾವು file1 ಇದು file2 ಗಿಂತ ಹಳೆಯದೇ ಎಂದು ಪರೀಕ್ಷಿಸುತ್ತದೆ. |
08:21 | ಈ condition true ಆಗಿದ್ದರೆ ನಾವು file1 is older than file2 ಎಂದು ಪ್ರಿಂಟ್ ಮಾಡುತ್ತೇವೆ. |
08:27 | ಇಲ್ಲವಾದಲ್ಲಿ file2 is older than file1. ಎಂದು ಪ್ರಿಂಟ್ ಮಾಡುತ್ತೇವೆ. |
08:32 | terminal ಗೆ ಹಿಂದಿರುಗೋಣ. |
08:35 | ಮೊದಲು empty1 ಡಾಟ್ sh ಫೈಲ್ ಅನ್ನು ಎಡಿಟ್ ಮಾಡೋಣ. |
08:39 | ನಾನು ಅದರಲ್ಲಿ echo statement ಅನ್ನು ಸೇರಿಸುತ್ತೇನೆ. |
08:42 | echo ಡಬಲ್ ಕೋಟ್ಸ್ ನಲ್ಲಿ Hiii ಎಂದು ಟೈಪ್ ಮಾಡಿ, ಡಬಲ್ ಕೋಟ್ಸ್ ನ ನಂತರ ದೊಡ್ಡದು ಚಿಹ್ನೆ empty1 ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ. |
08:53 | ಈಗ ನಮ್ಮ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡೋಣ. |
08:57 | chmod ಪ್ಲಸ್ x fileattrib2 ಡಾಟ್ sh ಎಂದು ಟೈಪ್ ಮಾಡಿ |
09:03 | ಡಾಟ್ ಸ್ಲ್ಯಾಶ್ fileattrib2 ಡಾಟ್ sh ಎಂದು ಟೈಪ್ ಮಾಡಿ |
09:09 | ನಾವು ಫಲಿತವು |
09:11 | file1 is newer than file2 ಮತ್ತು |
09:15 | file2 is older than file1 ಎಂದು ನೋಡಬಹುದು. |
09:19 | ಈಗ empty2 ಡಾಟ್ sh ಫೈಲ್ ಅನ್ನು ಎಡಿಟ್ ಮಾಡೋಣ. |
09:23 | ಇಲ್ಲಿ ಕೂಡ ನಾನು ಒಂದು echo statement. ಅನ್ನು ಸೇರಿಸುತ್ತೇನೆ. |
09:27 | echo ಡಬಲ್ ಕೋಟ್ಸ್ ನಲ್ಲಿ How are you ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ನ ನಂತರ ದೊಡ್ಡದು ಚಿಹ್ನೆ >empty2 ಡಾಟ್ sh ಎಂದು ಟೈಪ್ ಮಾಡಿ. |
09:38 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
09:41 | ಈಗ ಸ್ಕ್ರಿಪ್ಟ್ ಅನ್ನು ಇನ್ನೊಮ್ಮೆ ಎಕ್ಸಿಕ್ಯೂಟ್ ಮಾಡೋಣ. |
09:45 | up-arrow key ಯನ್ನು ಒತ್ತಿ. |
09:47 | ಡಾಟ್ ಸ್ಲ್ಯಾಶ್ fileattrib2 ಡಾಟ್ sh ಎಂದು ಟೈಪ್ ಮಾಡಿ Enter ಅನ್ನು ಒತ್ತಿ. |
09:53 | ಈಗ ಫಲಿತವು |
09:55 | file2 is newer than file1 |
09:59 | ಮತ್ತು file1 is older than file2 ಎಂದು ಡಿಸ್ಪ್ಲೇ ಆಗುತ್ತದೆ. |
10:03 | ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. |
10:06 | ಸಾರಾಂಶವನ್ನು ನೋಡೋಣ. |
10:08 | ಈ ಟ್ಯುಟೋರಿಯಲ್ ನಲ್ಲಿ ನಾವು |
10:11 | String comparison, file attributes |
10:14 | ==(ಸಮ ) |
10:16 | != (ಅಸಮ), -f (ಹೈಫನ್ f) |
10:18 | -s(ಹೈಫನ್ s), -w(ಹೈಫನ್ w) |
10:21 | -nt(ಹೈಫನ್ nt), ಮತ್ತು -ot (ಹೈಫನ್ ot) ಅಟ್ಟ್ರಿಬ್ಯೂಟ್ ಗಳ ಕುರಿತು ಕಲಿತಿದ್ದೇವೆ. |
10:25 | ಸ್ವಂತ ಅಭ್ಯಾಸಕ್ಕಾಗಿ, ಇನ್ನು ಕೆಲವು ಅಟ್ಟ್ರಿಬ್ಯೂಟ್ ಗಳ ಕುರಿತು ತಿಳಿಯಿರಿ. |
10:29 | ಉದಾ : -r
-x -o |
10:33 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ.. |
10:36 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
10:40 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
10:45 | Spoken Tutorial Project Team ಇದು |
10:47 | spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
10:51 | online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10:55 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ. |
11:02 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
11:06 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
11:14 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro |
11:19 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ |
11:25 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |
11:29 | ಧನ್ಯವಾದಗಳು. |