Java/C2/Array-Operations/Kannada

From Script | Spoken-Tutorial
Revision as of 11:37, 23 February 2017 by Pratik kamble (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 ಜಾವಾದಲ್ಲಿ ಅರೇ ಓಪರೇಷನ್ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ,
00:09 ಅರೇ ಯ ಕ್ಲಾಸ್ ಅನ್ನು ಹೇಗೆ ಇಂಪೋರ್ಟ್ ಮಾಡುವುದು ಮತ್ತು
00:12 ಅರೇಯ ಕ್ರಿಯೆಗಳ ಕುರಿತು ಕಲಿಯುತ್ತೇವೆ.
00:15 ಇಲ್ಲಿ ನಾವು

Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦) Java Development kit 1.6 (ಜಾವಾ ಡೆವೆಲೊಪ್‍ಮೆಂಟ್ ಕಿಟ್ ೧.೬) ಹಾಗೂ Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಯನ್ನು ಉಪಯೋಗಿಸುತ್ತೇವೆ.

00:25 ಈ ಟ್ಯುಟೋರಿಯಲ್ ಅನ್ನು ಕಲಿಯಲು ಅರೇಯ ಬಗ್ಗೆ ತಿಳಿದಿರಬೇಕು.
00:30 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ.(http://www.spoken-tutorial.org)
00:35 ಅರೇಯ ಕ್ರಿಯೆಗಳ ಮೆಥಡ್ ಗಳು Arrays ಎಂಬ ಕ್ಲಾಸ್ ನಲ್ಲಿ ದೊರೆಯುತ್ತವೆ.
00:40 ಅವುಗಳನ್ನು ಬಳಸಲು ಆ ಕ್ಲಾಸ್ ಅನ್ನು ಇಂಪೋರ್ಟ್ ಮಾಡಿಕೊಳ್ಳಬೇಕು.
00:43 ಅದಕ್ಕಾಗಿ import java.util.Arrays ಸೆಮಿಕೋಲನ್ ಎಂಬ ಹೇಳಿಕೆಯನ್ನು ಉಪಯೋಗಿಸಬೇಕು.
00:50 ಒಂದು ಮೆಥಡ್ ಅನ್ನುಅದರ ಕ್ಲಾಸ್ ನಿಂದ ಆಕ್ಸೆಸ್ ಮಾಡಬಹುದು.
00:52 ಡಾಟ್ ಮತ್ತು ಮೆಥಡ್ ನ ಹೆಸರನ್ನು ಸೇರಿಸಿದರೆ ಮೆಥಡ್ ಅನ್ನು ಆಕ್ಸೆಸ್ ಮಾಡಬಹುದು.
00:56 Arrays ಡಾಟ್ toString ಅಂದರೆ Arrays ಕ್ಲಾಸ್ ನ toString ಮೆಥಡ್ ಎಂದರ್ಥ
01:05 ಈಗ ಎಕ್ಲಿಪ್ಸ್ ಗೆ ಹೋಗೋಣ.
01:08 ನಾವು ಆಗಲೇ ArraysDemo ಎಂಬ ಕ್ಲಾಸ್ ಅನ್ನು ರಚಿಸಿದ್ದೇವೆ.
01:13 ಈಗ Arrays ಎಂಬ ಕ್ಲಾಸ್ ಅನ್ನು ಇಂಪೋರ್ಟ್ ಮಾಡೋಣ.
01:16 ಇಂಪೋರ್ಟ್ ಸ್ಟೇಟ್‌ಮೆಂಟ್ ಅನ್ನು ಕ್ಲಾಸ್ ನ ಡೆಫಿನೇಷನ್ ಗೂ ಮೊದಲು ಬರೆಯಬೇಕು.
01:22 ಹಾಗಾಗಿ public class ಗೂ ಮೊದಲು
01:26 import java.util.Arrays ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
01:46 ಈ ಹೇಳಿಕೆಯು java ವು util ಎಂಬ ಪ್ಯಾಕೇಜ್ ಅನ್ನು ಹೊಂದಿದ್ದು ಅದು Arrays ಎಂಬ ಕ್ಲಾಸ್ ಅನ್ನು ಹೊಂದಿದೆ. ನಾವು ಈಗ ಅದನ್ನು ಇಂಪೋರ್ಟ್ ಮಾಡಬೇಕು ಎಂದು ತಿಳಿಸುತ್ತದೆ.
01:59 ಈಗ ಒಂದು ಅರೇ ಯನ್ನು ಸೇರಿಸೋಣ.
02:01 ಮೇಯ್ನ್ ಮೆಥಡ್ ನಲ್ಲಿ
02:03 int marks ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಮುಚ್ಚಿ , ಸಮ ಬ್ರ್ಯಾಕೆಟ್ ನಲ್ಲಿ 2, 7, 5, 4, 8 ಎಂದು ಟೈಪ್ ಮಾಡಿ.
02:20 ಈಗ ನಾವು 'Arrays' ಕ್ಲಾಸ್ ನಲ್ಲಿರುವ ಮೆಥಡ್ ಅನ್ನು ಉಪಯೋಗಿಸಿ ಅರೇಯನ್ನು ಸ್ಟ್ರಿಂಗ್ ನ ರೂಪದಲ್ಲಿ ನಿರೂಪಿಸೋಣ ಮತ್ತು ಪ್ರಿಂಟ್ ಮಾಡೋಣ.
02:28 ಹಾಗಾಗಿ String mStr ಸಮ Arrays ಡಾಟ್ toString ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ನಾವು ಅರೇಯ ಹೆಸರು ಅಂದರೆ marks ಎಂದು ಟೈಪ್ ಮಾಡೋಣ.
02:50 toString ಎಂಬ ಮೆಥಡ್ ಅರೇಯನ್ನು ಸ್ಟ್ರಿಂಗ್ ರೂಪದಲ್ಲಿ ನಿರೂಪಿಸುತ್ತದೆ.
02:56 ಮಾರ್ಕ್ಸ್ ಅನ್ನು ಪ್ರಿಂಟ್ ಮಾಡೋಣ.
02:58 ಅದಕ್ಕಾಗಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ mStr ಎಂದು ಟೈಪ್ ಮಾಡಿ.
03:12 ಫಲಿತವನ್ನು ನೋಡಲು ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡೋಣ.
03:18 ನಾವು ಫಲಿತದಲ್ಲಿ ನೋಡುವಂತೆ toString ಮೆಥಡ್ ಅರೇಯನ್ನು ಸ್ಟ್ರಿಂಗ್ ರೂಪದಲ್ಲಿ ನಿರೂಪಿಸಿದೆ.
03:26 ಈಗ ಅರೇ ಎಲಿಮೆಂಟ್ ಗಳನ್ನು ಏರಿಕೆ ಕ್ರಮದಲ್ಲಿ ಜೋಡಿಸುವುದನ್ನು ನೋಡೋಣ.
03:31 ಹಾಗಾಗಿ Arrays ಡಾಟ್ toString ಸಾಲಿಗೂ ಮೊದಲು Arrays ಡಾಟ್ sort ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ನಲ್ಲಿ ಅರೇಯ ಹೆಸರು ಅಂದರೆ marks ಎಂದು ಟೈಪ್ ಮಾಡಿ.
03:46 Arrays ಕ್ಲಾಸ್ ನ sort ಮೆಥಡ್ ಅದಕ್ಕೆ ಕಳುಹಿಸಿದ ಅರೇ ಯನ್ನು ಏರಿಕೆ ಕ್ರಮದಲ್ಲಿ ಜೋಡಿಸುತ್ತದೆ.
03:53 ಅಂದರೆ ನಾವು ಈಗ marks ಅರೇಯ ಎಲಿಮೆಂಟ್ ಗಳನ್ನು ಏರಿಕೆಕ್ರಮದಲ್ಲಿ ಜೋಡಿಸಿ ಅದರ ಸ್ಟ್ರಿಂಗ್ ರೂಪವನ್ನು ಪ್ರಿಂಟ್ ಮಾಡುತ್ತಿದ್ದೇವೆ.
04:04 ಈಗ ಫಲಿತವನ್ನು ನೋಡಲು ಸೇವ್ ಮಾಡಿ ರನ್ ಮಾಡಿ.
04:11 ಫಲಿತದಲ್ಲಿ ಕಾಣುವಂತೆ sort ಮೆಥಡ್ ಅರೇಯನ್ನು ಏರಿಕೆ ಕ್ರಮದಲ್ಲಿ ಜೋಡಿಸಿದೆ.
04:19 sort ಮೆಥಡ್ ಅರೇಯ ಕ್ರಮಾಂಕವನ್ನೇ ಬದಲಾಯಿಸಿದೆ.
04:22 ಈ ಕ್ರಮವನ್ನು ಇನ್-ಪ್ಲೇಸ್ ಸಾರ್ಟಿಂಗ್ ಎಂದು ಕರೆಯುತ್ತಾರೆ.
04:26 ಅಂದರೆ ಸಾರ್ಟಿಂಗ್ ನ ಪರಿಣಾಮವಾಗಿ ಅರೇಯ ಎಲಿಮೆಂಟ್ ಗಳ ಸ್ಥಾನ ಬದಲಾವಣೆಯಾಗಿದೆ.
04:33 ಈಗ ನಾವು fill ಮೆಥಡ್ ಬಗ್ಗೆ ತಿಳಿಯೋಣ.
04:38 fill ಮೆಥಡ್ ಎರಡು ಆರ್ಗ್ಯುಮೆಂಟ್ ಗಳನ್ನು ತೆಗೆದುಕೊಳ್ಳುತ್ತದೆ.
04:43 ಸಾರ್ಟಿಂಗ್ ಮೆಥಡ್ ನ ಸಾಲನ್ನು ಅಳಿಸಿ.
04:50 Arraysಡಾಟ್ fill ಬ್ರ್ಯಾಕೆಟ್ ನಲ್ಲಿ ಅರೇ ಯ ಹೆಸರು ಅಂದರೆ marks ಎಂದು ಟೈಪ್ ಮಾಡಿ,
05:05 (ಇದು ನಾವು ಕೊಡುತ್ತಿರುವ ಮೊದಲ ಆರ್ಗ್ರ್ಯುಮೆಂಟ್) ಮತ್ತು ನಾವು ಕೊಡುವ ಹೊಸ ಬೆಲೆ ಎರಡನೇ ಆರ್ಗ್ಯುಮೆಂಟ್ ಆಗಿರುತ್ತದೆ. ಹಾಗಾಗಿ 6 ಎಂದು ಟೈಪ್ ಮಾಡಿ ಬ್ರ್ಯಾಕೆಟ್ ಮುಚ್ಚಿ ಸೆಮಿಕೋಲನ್ ಹಾಕಿ. ಸೇವ್ ಮಾಡಿ ರನ್ ಮಾಡಿ.
05:24 ಹೆಸರೇ ಸೂಚಿಸುವಂತೆ fill ಮೆಥಡ್ ನಾವು ಕಳುಹಿಸಿದ ಆರ್ಗ್ಯುಮೆಂಟ್ ಅಂದರೆ 6 ಅನ್ನು ಅರೇ ಗೆ ಸೇರಿಸುತ್ತದೆ.
05:32 ಈಗ ನಾವು ಮುಂದೆ ಕಲಿಯುವ ಮೆಥಡ್ copyOf.
05:37 ನಾವೀಗ marks ಅರೇ ಯ ಎಲ್ಲಾ ಎಲಿಮೆಂಟ್ ಗಳನ್ನೂ marksCopy ಅರೇಗೆ ನಕಲು ಮಾಡುತ್ತೇವೆ.
05:44 arrays ಡಾಟ್ fill ಅನ್ನು ಅಳಿಸಿ.
05:48 ಮತ್ತು int marksCopy []; ಎಂದು ಟೈಪ್ ಮಾಡಿ.
05:59 ಮುಂದಿನ ಸಾಲಿನಲ್ಲಿ marksCopy = arrays. copyOf(marks, 5); ಎಂದು ಟೈಪ್ ಮಾಡಿ.
06:25 ಈ ಮೆಥಡ್ ಎರಡು ಆರ್ಗ್ಯುಮೆಂಟ್ ಗಳನ್ನು ಪಡೆಯುತ್ತದೆ.
06:29 ಮೊದಲನೇ ಆರ್ಗ್ಯುಮೆಂಟ್ ಯಾವ ಅರೇಯಿಂದ ಎಲೆಮೆಂಟ್ ಗಳನ್ನು ನಕಲು ಮಾಡುತ್ತೇವೋ ಆ ಅರೇಯ ಹೆಸರು ಅಂದರೆ marks
06:39 ಎರಡನೆಯದು ನಕಲು ಮಾಡುವ ಎಲಿಮೆಂಟ್ ಗಳ ಸಂಖ್ಯೆ ಅಂದರೆ 5.
06:47 ನಂತರ arrays ಡಾಟ್ toString ನಲ್ಲಿ marks ಅನ್ನು marksCopy ಎಂದು ಬದಲಾಯಿಸಿ.
06:55 ಈಗ ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡಿರಿ.
07:01 ನಾವು marks ಅರೇಯ ಎಲಿಮೆಂಟ್ ಗಳು marksCopy ಅರೇಗೆ ನಕಲಾಗಿರುವುದನ್ನು ನೋಡುತ್ತೇವೆ.
07:10 ಈಗ ಎಲಿಮೆಂಟ್ ಗಳ ಸಂಖ್ಯೆಗಳನ್ನು ಬದಲಾಯಿಸಿದರೆ ಏನಾಗುತ್ತದೆ ಎನ್ನುವುದನ್ನು ನೋಡೋಣ.
07:15 ಹಾಗಾಗಿ 5 ಅನ್ನು 3 ಎಂದು ಬದಲಾಯಿಸಿ.
07:19 ಸೇವ್ ಮಾಡಿ ರನ್ ಮಾಡಿರಿ.
07:24 ನಾವು ಈಗ ಮೊದಲ ಮೂರು ಎಲಿಮೆಂಟ್ ಗಳನ್ನು ನಕಲಾಗಿರುವುದನ್ನು ನೋಡುತ್ತೇವೆ.
07:31 ಈಗ ನಕಲು ಮಾಡುವ ಎಲಿಮೆಂಟ್ ಗಳ ಸಂಖ್ಯೆ ಮೂಲ ಅರೇಯಲ್ಲಿರುವ ಎಲಿಮೆಂಟ್ ಗಳ ಸಂಖ್ಯೆ ಗಿಂತ ಹೆಚ್ಚಾಗಿದ್ದರೆ ಏನಾಗುವುದೆಂದು ನೋಡೋಣ.
07:39 3 ಅನ್ನು 8 ಎಂದು ಬದಲಾಯಿಸಿ.
07:44 ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡಿರಿ
07:48 ಉಳಿದ ಎಲಿಮೆಂಟ್ ಗಳು ಡಿಫಾಲ್ಟ್ ಬೆಲೆಯಾದ 0 ಗೆ ನಮೂದಿಸಲ್ಪಟ್ಟಿರುವುದನ್ನು ನೋಡಬಹುದು.
07:54 ಮುಂದೆ ಬೆಲೆಗಳ ವ್ಯಾಪ್ತಿಯನ್ನು ಹೇಗೆ ನಕಲು ಮಾಡುವುದು ಎಂದು ನೋಡೋಣ.
07:58 ಹಾಗಾಗಿ copyOf ಅನ್ನು copyOfRange ಎಂದೂ ಮತ್ತು 8 ಅನ್ನು 1, 4 ಎಂದು ಬದಲಾಯಿಸಿ.
08:15 ಈ ಮೆಥಡ್ ಅರೇಯ ಇಂಡೆಕ್ಸ್ 1 ರಿಂದ 3 ರವರೆಗಿನ ಎಲ್ಲಾ ಎಲಿಮೆಂಟ್ ಗಳನ್ನೂ ನಕಲು ಮಾಡುತ್ತದೆ.
08:27 ಸೇವ್ ಮಾಡಿ ರನ್ ಮಾಡಿ.
08:31 ಫಲಿತದಲ್ಲಿ ಇಂಡೆಕ್ಸ್ 1 ರಿಂದ 3 ರವರೆಗಿನ ಎಲ್ಲಾ ಎಲಿಮೆಂಟ್ ಗಳೂ ನಕಲಾಗಿರುವುದನ್ನು ನೋಡಬಹುದು.
08:39 1, 4 ಅನ್ನು ಆರ್ಗ್ಯುಮೆಂಟ್ ಆಗಿ ನೀಡಿರುವುದನ್ನು ಗಮನಿಸಿ.
08:47 ಆದರೂ 4 ನೇ ಸ್ಥಾನದಲ್ಲಿರುವ ಎಲಿಮೆಂಟ್ ನಕಲಾಗಿರುವುದಿಲ್ಲ.
08:50 ಕೇವಲ ಇಂಡೆಕ್ಸ್ 3 ರ ವರೆಗಿನ ಎಲಿಮೆಂಟಗಳು ಮಾತ್ರ ನಕಲಾಗಿರುತ್ತದೆ. ನೀಡಿರುವ ವ್ಯಾಪ್ತಿಯ ಹಿಂದಿನ ಇಂಡೆಕ್ಸ್ ನಲ್ಲಿಯೇ ಈ ಪ್ರಕ್ರಿಯೆಯು ನಿಲ್ಲುತ್ತದೆ.
09:01 ಹಾಗಾಗಿ ಈ ಗುಣವು ವ್ಯಾಪ್ತಿಯ ನಿರಂತರತೆಯನ್ನು ಕಾಯ್ದುಕೊಂಡಿರುವುದನ್ನು ತೋರಿಸುತ್ತದೆ.
09:07 (0, 4) ಎನ್ನುವುದು 0 ಯಿಂದ 3 ರವರೆಗಿನ ಎಲಿಮೆಂಟ್ ಗಳನ್ನು ಸೂಚಿಸುತ್ತದೆ.
09:12 (4, 6) ಎನ್ನುವುದು 4 ರಿಂದ 5 ರವರೆಗಿನ ಎಲಿಮೆಂಟಗಳನ್ನು ಸೂಚಿಸುತ್ತದೆ.
09:17 ಹಾಗಾಗಿ (0, 4) + (4, 6) = (0, 5) ಎಂದಾಗುತ್ತದೆ.
09:26 ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ.
09:31 ಈ ಟ್ಯುಟೋರಿಯಲ್ ನಲ್ಲಿ ನಾವು,
09:33 Arrays ಎಂಬ ಕ್ಲಾಸ್ ಅನ್ನು ಹೇಗೆ ಇಂಪೋರ್ಟ್ ಮಾಡುವುದು,
09:36 ಮತ್ತು to strings,sort, copy, fill ಗಳಂತಹ ಅರೇಯ ಕ್ರಿಯೆಗಳನ್ನು ಉಪಯೋಗಿಸುವುದನ್ನು ಕಲಿತಿದ್ದೇವೆ.
09:44 ಸ್ವಂತ ಅಭ್ಯಾಸಕ್ಕಾಗಿ,
09:46 Arrays.equals ಮೆಥಡ್ ನ ಕುರಿತು ಓದಿ ಮತ್ತು ಅದರ ಕ್ರಿಯೆಯನ್ನು ತಿಳಿದುಕೊಳ್ಳಿ.
09:53 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
09:55 ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ.
10:02 ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ.
10:05 ನೀವು ಒಳ್ಳೆಯ ಬ್ಯಾಂಡ್‍ವಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್‍ಲೋಡ್ ಮಾಡಿ ನೋಡಬಹುದು.
10:09 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪತಂಡವು
10:10 ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಅಂತರ್ಜಾಲಾಧಾರಿತ ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:16 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ
10:22 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.

ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ.

10:31 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.

http://spoken-tutorial.org/NMEICT-Intro

10:39 ಈ ಟ್ಯುಟೋರಿಯಲ್ ಅನ್ನು TalentSprintಪ್ರಸ್ತುತ ಪಡಿಸುತ್ತಿದೆ.
10:43 ಕೇಳಿದ್ದಕ್ಕೆ ಧನ್ಯವಾದ. ಅನುವಾದಕ ಮತ್ತು ವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ.

Contributors and Content Editors

NaveenBhat, Pratik kamble