Inkscape/C3/Create-an-A4-Poster/Kannada

From Script | Spoken-Tutorial
Revision as of 17:39, 22 February 2017 by Pratik kamble (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Inkscape ನಲ್ಲಿ “Create an A4 Poster” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
00:10 Document properties ಅನ್ನು ಬದಲಾಯಿಸುವುದು,
00:12 A4 poster ಅನ್ನು ವಿನ್ಯಾಸ ಮಾಡುವುದು ಮತ್ತು
00:14 ಪೋಸ್ಟರ್ ಅನ್ನು 'pdf' ನಲ್ಲಿ Save ಮಾಡುವುದು- ಇವುಗಳ ಕುರಿತು ಕಲಿಯುತ್ತೇವೆ.
00:17 ಈ ಟ್ಯುಟೋರಿಯಲ್ ಗಾಗಿ ನಾನು
00:19 Ubuntu Linux 12.04 ಆಪರೇಟಿಂಗ್ ಸಿಸ್ಟಮ್
00:22 Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ
00:26 Inkscape ಅನ್ನು ತೆರೆಯಿರಿ.
00:28 File ಮೆನ್ಯುಗೆ ಹೋಗಿNew ಮೇಲೆ ಕ್ಲಿಕ್ ಮಾಡಿ.
00:32 ಇವುಗಳು ಡಿಫಾಲ್ಟ್ ಆದ ಕ್ಯಾನ್ವಾಸ್ ಗಳ ಅಳತೆ.
00:37 ನನ್ನ canvas ನ ಅಳತೆಯು ಡಿಫಾಲ್ಟ್ ಆಗಿ A4 size ನಲ್ಲಿದೆ..
00:41 ಹಾಗಾಗಿ ನಾನು ಅದನ್ನು ಹಾಗೆಯೇ ಬಿಡುತ್ತೇನೆ.
00:44 ನಿಮ್ಮ ಮಶಿನ್ ನಲ್ಲಿ ಆ ರೀತಿ ಇರದಿದ್ದರೆ A4 size ಅನ್ನು ಆಯ್ಕೆ ಮಾಡಿಕೊಳ್ಳಿ.
00:49 ಕೆಲವು ಸೆಟ್ಟಿಂಗ್ ಗಳನ್ನು ಬದಲಾಯಿಸೋಣ.
00:51 File ಗೆ ಹೋಗಿ Document properties ಮೇಲೆ ಕ್ಲಿಕ್ ಮಾಡಿ.
00:54 ಹಲವಾರು ಟ್ಯಾಬ್ ಗಳು ಮತ್ತು ಆಯ್ಕೆಗಳನ್ನು ಹೊಂದಿರುವ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
00:59 ಅವುಗಳ ಕುರಿತು ಒಂದೊಂದಾಗಿ ಕಲಿಯೋಣ.
01:03 ಮೊದಲ ಟ್ಯಾಬ್ Page ನಲ್ಲಿ Default units ಡ್ರಾಪ್ ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ.
01:08 ನಾನು ಒಂದೊಂದನ್ನು ಕ್ಲಿಕ್ ಮಾಡಿದಾಗಲೂ ruler ನ ಮಾಪಕಗಳ ಬದಲಾವಣೆಯನ್ನು ಗಮನಿಸಿ.
01:13 ನಾನು ಅವುಗಳಲ್ಲಿ pixels ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
01:16 Background ಆಯ್ಕೆಯು ಬ್ಯಾಕ್ ಗ್ರೌಂಡ್ ನ ಬಣ್ಣ ಮತ್ತು ಪಾರದರ್ಶಕತೆಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ.
01:21 ನಾವು ಅದನ್ನು ಕ್ಲಿಕ್ ಮಾಡಿದಾಗ ಹೊಸ dialog box ಗೋಚರಿಸುತ್ತದೆ.
01:24 RGB sliderಅನ್ನು ಎಡಕ್ಕೂ ಬಲಕ್ಕೂ ಸರಿಸಿ.
01:29 ಕ್ಯಾನ್ವಾಸ್ ನ ಮೇಲೆ background colour ಕಾಣುವಂತೆ ಮಾಡಲು alpha slider ಅನ್ನು ಬಲಕ್ಕೆ ಸರಿಸಿ.
01:35 ಈಗ ಪಾರದರ್ಶಕತೆಯು ಆಯ್ಕೆಮಾಡಿದ 'RGB' ಬೆಲೆಗೆ ಬದಲಾಗುತ್ತದೆ.
01:40 Document properties ವಿಂಡೋ ದ ಬ್ಯಾಕ್ ಗ್ರೌಂಡ್ ಆಯ್ಕೆಯಲ್ಲಿ ಬಣ್ಣವು ನಾನು ಸರಿಸಿದಂತೆ ಬದಲಾಗುವುದನ್ನು ಗಮನಿಸಿ.
01:47 Alpha ಸ್ಲೈಡರ್ ಅನ್ನು ಪೂರ್ತಿ ಎಡಕ್ಕೆ ಎಳೆದು ಡೈಲಾಗ್ ಬಾಕ್ಸ್ ಅನ್ನು ಮುಚ್ಚಿರಿ.
01:52 Page size ನ ಅಡಿಯಲ್ಲಿ ನಾವು ಬಹಳ ಆಯ್ಕೆಗಳನ್ನು ನೋಡುತ್ತೇವೆ.
01:55 ನಾವು ಕ್ಯಾನ್ವಾಸ್ ನ ಅಳತೆಯನ್ನು ಈ ಆಯ್ಕೆಯನ್ನು ಉಪಯೋಗಿಸಿ ಕೂಡ ಬದಲಾಯಿಸಬಹುದು.
02.00 ನಾನು ಕ್ಲಿಕ್ ಮಾಡಿದಂತೆ ಕ್ಯಾನ್ವಾಸ್ ನ ಅಳತೆಯಲ್ಲಿ ಬದಲಾವಣೆಯನ್ನು ಗಮನಿಸಿ.
02:04 ಪೇಜ್ ನ ಅಳತೆಯನ್ನು A4 ಆಗಿ ಇಡೋಣ.
02:08 Orientation ಅನ್ನು Portrait ಅಥವಾ Landscape ಗೆ ಬದಲಾಯಿಸಬಹುದು.
02:12 ಆಯ್ಕೆಗಳ ಮೇಲೆ ಕ್ಲಿಕ್ ಮಾಡಿದಾಗ ಕ್ಯಾನ್ವಾಸ್ ನಲ್ಲಾಗುವ ಬದಲಾವಣೆಯನ್ನು ಗಮನಿಸಿ.
02:17 ನಾವು Width ಮತ್ತು Height ಪ್ಯಾರಮೀಟರ್ ಗಳನ್ನು ಉಪಯೋಗಿಸಿ ಕ್ಯಾನ್ವಾಸ್ ನ ಅಗಲ ಮತ್ತು ಉದ್ದವನ್ನು ಬದಲಿಸಬಹುದು.
02:23 Units ಡ್ರಾಪ್ ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಮ್ಮ ಅವಶ್ಯಕತೆಗೆ ತಕ್ಕಂತೆ ನಾವು ಅದನ್ನು ಬದಲಾಯಿಸಿಕೊಳ್ಳಬಹುದು.
02:31 ಈಗ ನಾವು ಇದನ್ನು pixels ಗೆ ಬದಲಾಯಿಸೋಣ.
02:34 Resize page to content ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
02:37 ಇದರಲ್ಲಿರುವ ಹಲವಾರು ಆಯ್ಕೆಗಳು ತೆರೆದುಕೊಳ್ಳುತ್ತವೆ.
02:41 ನಾವು ಎಲ್ಲಾ ಕಡೆಗಳಿಗೂ ಮಾರ್ಜಿನ್ ಅನ್ನು ಸೆಟ್ ಮಾಡಬಹುದು.
02:45 ಮಾರ್ಜಿನ್ ಅನ್ನು ಸೆಟ್ ಮಾಡಿದ ಬಳಿಕ Resize page to drawing or selection ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
02:51 ಮುಂದಿನದು Border ಆಯ್ಕೆ.ನಾವು ಇಲ್ಲಿ ಮೂರು ಚೆಕ್ ಬಾಕ್ಸ್ ಆಯ್ಕೆಗಳನ್ನು ನೋಡಬಹುದು.
02:57 ಈ ಆಯ್ಕೆಗಳನ್ನು ವಿವರಿಸಲು ನಾನು ಮೊದಲು ಈ ರೀತಿಯಾಗಿ ಒಂದು ellipseಅನ್ನು ಚಿತ್ರಿಸಿಕೊಳ್ಳುತ್ತೇನೆ.
03:03 ಮೊದಲನೆ ಆಯ್ಕೆ ಪೇಜ್ ಬಾರ್ಡರ್ ಅಂದರೆ ಕ್ಯಾನ್ವಾಸ್ ನ ಅಂಚು.
03:08 ಈ ಆಯ್ಕೆಯನ್ನು ಅನ್ ಚೆಕ್ ಮಾಡಿ, ಅಂಚು ಮರೆಯಾಗುವುದನ್ನು ಗಮನಿಸಿ.
03:13 ಮತ್ತೆ ಆ ಆಯ್ಕೆಯನ್ನು ಚೆಕ್ ಮಾಡಿ ಮತ್ತು ಅಂಚುಗಳು ಪುನಃ ಕಾಣಿಸುವುದನ್ನು ಗಮನಿಸಿ.
03:18 ಎರಡನೇ ಆಯ್ಕೆಯು ಚಿತ್ರದ ಮೇಲೆ ಅಂಚನ್ನು ಜೋಡಿಸುತ್ತದೆ.
03:25 ಇನ್ನೊಮ್ಮೆ ಈ ಆಯ್ಕೆಯ ಮೇಲೆ ಚೆಕ್ ಮತ್ತು ಅನ್ ಚೆಕ್ ಮಾಡಿ ಕ್ಯಾನ್ ವಾಸ್ ನಲ್ಲಾಗುವ ಬದಲಾವಣೆಯನ್ನು ಗಮನಿಸಿ.
03:31 ಮೂರನೆ ಆಯ್ಕೆಯು ಕ್ಯಾನ್ವಾಸ್ ನ ನೆರಳನ್ನು ಬಲ ಮತ್ತು ಕೆಳಭಾಗದಲ್ಲಿ ಕಾಣುವಂತೆ ಮಾಡುತ್ತದೆ.
03:36 ಇಲ್ಲಿ ಅಂಚು ಬಲ ಮತ್ತು ಕೆಳಭಾಗದಲ್ಲಿ ಉಳಿದೆರಡು ಕಡೆಗಳಿಗಿಂತಲೂ ದಪ್ಪವಾಗಿರುವುದನ್ನು ಗಮನಿಸಿ.
03:42 ಮೂರನೇ ಆಯ್ಕೆಯನ್ನು ಅನ್ ಚೆಕ್ ಮಾಡಿ ಮತ್ತು ನೆರಳು ಮರೆಯಾಗುವುದನ್ನುಗಮನಿಸಿ.
03:47 ನಾವು ಈ ಎಲ್ಲಾ ಆಯ್ಕೆಗಳನ್ನು ನಮ್ಮ ಅವಶ್ಯಕತೆ ಮತ್ತು ಆದ್ಯತೆಗಳಿಗನುಗುಣವಾಗಿ ಬಳಸಬಹುದು.
03:52 Border color ಆಯ್ಕೆಯು ನಮಗೆ ಬೇಕಾದ ಅಂಚಿನ ಬಣ್ಣವನ್ನು ಆರಿಸಿಕೊಳ್ಳಲು ಸಹಾಯ ಮಾಡುತ್ತದೆ.
03:57 ಬಾರ್ಡರ್ ಕಲರ್ ಅನ್ನು ಡಿಫಾಲ್ಟ್ ಆಗಿ ಹೇಗಿದೆಯೋ ಹಾಗೇ ಬಿಡೋಣ.
04:01 ನಂತರ Guides ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
04:03 Guides ಟ್ಯಾಬ್ ಇದು ಅಕ್ಷರಗಳು ಮತ್ತು ಚಿತ್ರಗಳನ್ನು ಕ್ಯಾನ್ವಾಸ್ ನ ಮೇಲೆ ಅಲೈನ್ ಮಾಡಲು ಸಹಾಯ ಮಾಡುತ್ತದೆ.
04:08 ಇಲ್ಲಿ ನೀವು ruler guides ಅನ್ನು ರಚಿಸಬಹುದು.
04:12 ವರ್ಟಿಕಲ್ ruler ಮೇಲೆ ಕ್ಲಿಕ್ ಮಾಡಿ ಮತ್ತು ಒಂದು guideline ಅನ್ನು ಎಳೆಯಿರಿ.
04:15 ಈಗ ಮೊದಲ ಆಯ್ಕೆ Show Guides ಅನ್ನು ಚೆಕ್ -ಅನ್ ಚೆಕ್ ಮಾಡಿ
04:19 ಮತ್ತು ಗೈಡ್ ಲೈನ್ ಕ್ಯಾನ್ವಾಸ್ ನ ಮೇಲೆ ಗೋಚರಿಸುವುದು ಮತ್ತು ಮರೆಯಾಗುವುದನ್ನು ಗಮನಿಸಿ.
04:25 Guide color ಇದು guideline ನ ಬಣ್ಣ.
04:28 Highlight color ಇದು ಗೈಡ್ ಲೈನ್ ಅನ್ನು ಒಂದು ಸ್ಥಾನಕ್ಕೆ ಎಳೆಯುವಾಗ ಅದರ ಬಣ್ಣ.
04:33 ಇಲ್ಲಿ guide ಮತ್ತು highlight ನ ಡಿಫಾಲ್ಟ್ ಬಣ್ಣವನ್ನು ತೋರಿಸಿದೆ.
04:37 ನಿಮ್ಮ ಆದ್ಯತೆಗೆ ತಕ್ಕಂತೆ ಇದನ್ನು ಬದಲಿಸಿಕೊಳ್ಳಬಹುದು.
04:41 ನಾನು ಅವುಗಳ ಬಣ್ಣವನ್ನು ಡಿಫಾಲ್ಟ್ ಆಗೇ ಬಿಡುತ್ತೇನೆ.
04:44 Snap guides while dragging ಆಯ್ಕೆಯು ಎಳೆಯುವಾಗ ಒಬ್ಜೆಕ್ಟ್ ಅಥವಾ ಬೌಂಡಿಂಗ್ ಬಾಕ್ಸ್ ಗಳನ್ನುಹತ್ತಿರದ ಗೈಡ್ ಲೈನ್ ಗಳಿಗೆ snap ಮಾಡಲು ಸಹಾಯ ಮಾಡುತ್ತದೆ.
04:52 ನಂತರ Grids ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
04.54 ಈ ಆಯ್ಕೆಯನ್ನು ಉಪಯೋಗಿಸಿ ಕ್ಯಾನ್ವಾಸ್ ನ ಮೇಲೆ ಕಲಾಕೃತಿಗಳ ಹಿಂಭಾಗದಲ್ಲಿ grid ಗಳು ಮೂಡುವಂತೆ ಮಾಡಲು ಸಹಾಯ ಮಾಡುತ್ತದೆ.
05:00 Grids ಗಳು ಕ್ಯಾನ್ವಾಸ್ ನ ಮೇಲೆ ಒಬ್ಜೆಕ್ಟ್ ಗಳ ಸ್ಥಾನವನ್ನು ಗೊತ್ತುಪಡಿಸಲು ಸಹಾಯ ಮಾಡುತ್ತದೆ ಮತ್ತು ಅವು ಪ್ರಿಂಟ್ ಆಗುವುದಿಲ್ಲ.
05:07 ಡ್ರಾಪ್ ಡೌನ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ.
05:09 Rectangular grid ಮತ್ತು Axonometric grid ಇವುgrid ಗಳ ಎರಡು ವಿಧಗಳು.
05:16 Rectangular grid ಅನ್ನು ಆಯ್ಕೆ ಮಾಡಿಕೊಂಡು New ಮೇಲೆ ಕ್ಲಿಕ್ ಮಾಡಿ.
05:20 ತತ್ಕ್ಷಣವೇ ಕ್ಯಾನ್ವಾಸ್ ನ ಬ್ಯಾಕ್ ಗ್ರೌಂಡ್ ನಲ್ಲಿ ಒಂದು grid ಮೂಡಿಬರುತ್ತದೆ.
05:25 ಇರುವ ಆಯ್ಕೆಗಳನ್ನು ಉಪಯೋಗಿಸಿ ನಮ್ಮ ಅವಶ್ಯಕತೆಗೆ ತಕ್ಕಂತೆ grid ಪ್ರಾಪರ್ಟಿಗಳನ್ನು ಸೆಟ್ ಮಾಡಬಹುದು.
05:31 ಕೆಳಗಡೆ ಇರುವ Remove ಬಟ್ಟನ್ ಅನ್ನು ಒತ್ತುವುದರ ಮೂಲಕ grid ಅನ್ನು ತೆಗೆದು ಹಾಕಬಹುದು.
05:36 ಇದೇ ರೀತಿಯಲ್ಲಿ Axonometric grid ಆಯ್ಕೆಯನ್ನೂ ಕೂಡ ಪ್ರಯತ್ನಿಸಬಹುದು.
05:41 ಮುಂದಿನ ಮೂರು ಟ್ಯಾಬ್ ಗಳಲ್ಲಿರುವ ಆಯ್ಕೆಗಳ ಕುರಿತು ಈ ಸರಣಿಯ ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯುತ್ತೇವೆ.
05:47 ಈಗ ಪೋಸ್ಟರ್ ಅನ್ನು ರಚಿಸುವುದನ್ನು ಪ್ರಾರಂಭಿಸೋಣ.
05:50 ಅದಕ್ಕಾಗಿ ಈಗ ಮೊದಲು ellipse ಮತ್ತು guidelineಗಳನ್ನು ಅಳಿಸೋಣ.
05:53 ನಮ್ಮ ಪೋಸ್ಟರ್ ಗೆ ಮೊದಲು ಬ್ಯಾಕ್ ಗ್ರೌಂಡ್ ಅನ್ನು ಡಿಸೈನ್ ಮಾಡೋಣ.
05:58 Rectangle tool ಮೇಲೆ ಕ್ಲಿಕ್ ಮಾಡಿ.
06:00 ಪೂರ್ತಿ canvas ಅನ್ನು ಆವರಿಸುವಂತೆ ಒಂದು ದೊಡ್ಡ ಆಯತಾಕಾರವನ್ನು ರಚಿಸಿ.
06:06 ತಿಳಿ ನೀಲಿ ಬಣ್ಣದ ಗ್ರೇಡಿಯೆಂಟ್ ಅನ್ನು ಹಾಕಿ.
06:08 ನಂತರ ಕ್ಯಾನ್ವಾಸ್ ನ Bezier tool ಅನ್ನು ಉಪಯೋಗಿಸಿ ಮೇಲ್ಭಾಗದಲ್ಲಿ header area ವನ್ನೂ
06:16 ಕ್ಯಾನ್ವಾಸ್ ನ ಕೆಳಭಾಗದಲ್ಲಿ footer area ವನ್ನೂ ಚಿತ್ರಿಸಿ.
06:23 ಇದಕ್ಕೆ ನೀಲಿ ಬಣ್ಣವನ್ನು ಹಾಕೋಣ.
06:25 ಈಗ Spoken Tutorial logo ವನ್ನು ಇಂಪೋರ್ಟ್ ಮಾಡೋಣ.
06:28 ಈ ಲೋಗೋ ನಿಮಗೆ Code Files ಲಿಂಕ್ ನಲ್ಲಿ ದೊರೆಯುತ್ತದೆ.
06:32 ಮೊದಲಿಗೆ ಟ್ಯುಟೋರಿಯಲ್ ಗೆ ವಿರಾಮ ಕೊಟ್ಟು, Code Files ಗೆ ಹೋಗಿ ಮತ್ತು zip fileಅನ್ನು ಡೌನ್ ಲೋಡ್ ಮಾಡಿ.
06:39 ಈಗ ಫೋಲ್ಡರ್ ಅನ್ನು unzip ಮಾಡಿ ಅದನ್ನು ನಿಮಗೆ ಬೇಕಾದಲ್ಲಿ ಸೇವ್ ಮಾಡಿಕೊಳ್ಳಿ.
06:45 ಈಗ ಪುನಃ Inkscape ಡೊಕ್ಯುಮೆಂಟ್ ಗೆ ಹಿಂದಿರುಗಿ.
06:47 File ಮೆನ್ಯು ಗೆ ಹೋಗಿ Import ಮೇಲೆ ಕ್ಲಿಕ್ ಮಾಡಿ.
06:51 logo ವನ್ನು ಸೇವ್ ಮಾಡಿದ ಫೋಲ್ಡರ್ ಗೆ ಹೋಗಿ.
06:54 Spoken Tutorial logo ವನ್ನು ಆಯ್ಕೆ ಮಾಡಿಕೊಂಡು Open ಮೇಲೆ ಕ್ಲಿಕ್ ಮಾಡಿ.
06:59 ಹೊಸ ಡೈಲಾಗ್ ಬಾಕ್ಸ್ ತೆರೆದು ಕೊಳ್ಳುತ್ತದೆ OK ಮೇಲೆ ಕ್ಲಿಕ್ ಮಾಡಿ.
07:03 ಈಗ ನಮ್ಮ canvas ನ ಮೇಲೆ ಲೋಗೊ ಇಂಪೋರ್ಟ್ ಆಗಿದೆ.
07:06 100×100 pixels ಗೆ Resize ಮಾಡಿ.
07:09 ಇದನ್ನು header area ದ ಮೇಲ್ಭಾಗದ ಎಡ ಮೂಲೆಯಲ್ಲಿ ಇಡಿ.
07:14 ಈಗ “Spoken Tutorial” ಎಂದು ಟೈಪ್ ಮಾಡಿ.
07:18 ಇದನ್ನು Bold ಮಾಡಿ.
07:20 ಫಾಂಟ್ ಸೈಜ್ ಅನ್ನು 48 ಕ್ಕೆ ಬದಲಾಯಿಸಿ.
07:24 ಅದನ್ನು logo ದ ಬಲಭಾಗದಲ್ಲಿಡಿ.
07:27 ಇದಾದ ನಂತರ “partner with us...help bridge the digital divide” ಎಂದು ಟೈಪ್ ಮಾಡಿ.
07:35 ಫಾಂಟ್ ಸೈಜ್ ಅನ್ನು 20 ಕ್ಕೆ ಬದಲಾಯಿಸಿ
07:39 ಮುಂದೆ ಕೆಲವು ಪಠ್ಯವನ್ನು ಸೇರಿಸೋಣ.
07:42 ನಾನು ಈಗಾಗಲೇ LibreOffice Writer ನಲ್ಲಿ ಪಠ್ಯವನ್ನು ಸೇವ್ ಮಾಡಿಕೊಂಡಿದ್ದೇನೆ.
07:47 ಈ ಪಠ್ಯವು ನಿಮಗೆ Code Files ನಲ್ಲಿ ದೊರೆಯುತ್ತದೆ.
07:51 ದಯವಿಟ್ಟು ಅದನ್ನು ನಿಮ್ಮ ಫೋಲ್ಡರ್ ನಲ್ಲಿ ಇಟ್ಟುಕೊಳ್ಳಿ.
07:54 ಈಗ ಅದನ್ನು copy ಮಾಡಿ ಮತ್ತು ಪೋಸ್ಟರ್ ನಲ್ಲಿ ಖಾಲಿ ಇರುವ ಜಾಗದಲ್ಲಿ paste ಮಾಡಿ.
08:00 ಫಾಂಟ್ ಸೈಜ್ ಅನ್ನು 28 ಕ್ಕೆ ಬದಲಾಯಿಸಿ.
08:04 ಲೈನ್ ಸ್ಪೇಸಿಂಗ್ ಅನ್ನು ಸೆಟ್ ಮಾಡಿ.
08:06 bullet ಗಳನ್ನು ರಚನೆ ಮಾಡಿ ಪ್ರತಿ ವಾಕ್ಯದ ಪ್ರಾರಂಭದಲ್ಲಿ ಇಡಿ.
08:10 ಇದರ ಕೆಳಗೆ ಎರಡು ಇಮೇಜ್ ಗಳನ್ನು ಸೇರಿಸೋಣ.
08:13 ಮೊದಲಿನಂತೆಯೇ ಅವುಗಳನ್ನು ಒಂದೊಂದಾಗಿ import ಮಾಡಿ.
08:17 ನಾನು ಅವುಗಳನ್ನು images ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ.
08:20 ನಿಮಗೆ ಈ ಇಮೇಜ್ ಗಳು Code Files ನಲ್ಲಿ ದೊರೆಯುತ್ತದೆ.
08:24 ದಯವಿಟ್ಟು ಅವುಗಳನ್ನು ನಿಮ್ಮ ಫೋಲ್ಡರ್ ನಲ್ಲಿ ಸೇವ್ ಮಾಡಿಕೊಳ್ಳಿ.
08:27 ಇಮೇಜ್ ಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಗಾತ್ರವನ್ನು ಸರಿಪಡಿಸಿಕೊಳ್ಳಿ.
08:30 ಅವುಗಳನ್ನು poster ನ ಕೆಳಭಾಗಕ್ಕೆ ಸರಿಸಿ.
08:33 ಸಂಪರ್ಕದ ವಿವರವನ್ನು footer area ದಲ್ಲಿ ಬರೆಯೋಣ.
08:37 ಇನ್ನೊಮ್ಮೆ LibreOffice Writer ಡಾಕ್ಯುಮೆಂಟ್ ನಿಂದ ಪಠ್ಯವನ್ನು copy ಮಾಡಿ pasteಮಾಡಿ.
08:42 ಫಾಂಟ್ ಸೈಜ್ ಅನ್ನು 18 ಕ್ಕೆ ಬದಲಾಯಿಸಿ
08:45 ಈಗ ನಮ್ಮ poster ಸಿದ್ಧವಾಗಿದೆ.
08:47 ಈಗ ಅದನ್ನು pdf ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವುದು ಹೇಗೆಂದು ನೋಡೋಣ.
08:51 File ಮೆನ್ಯುಗೆ ಹೋಗಿ Save As ಮೇಲೆ ಕ್ಲಿಕ್ ಮಾಡಿ.
08:55 ಒಂದು ಡೈಲಾಗ್ ಬಾಕ್ಸ್ ಗೋಚರಿಸುತ್ತದೆ.
08:58 ನೀವು ಯಾವ ಫೋಲ್ಡರ್ ನಲ್ಲಿ ಸೇವ್ ಮಾಡಬೇಕೋ ಅದನ್ನು ಆರಿಸಿಕೊಳ್ಳಿ.
09:00 ನಾನು Desktop ಅನ್ನು ಆರಿಸಿಕೊಳ್ಳುತ್ತೇನೆ.
09:02 ಕೆಳ ಬಲಭಾಗದಲ್ಲಿರುವ ಡ್ರಾಪ್ ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ ಫಾರ್ಮ್ಯಾಟ್ ಅನ್ನು pdf ಗೆ ಬದಲಾಯಿಸಿ.
09:09 ಇಲ್ಲಿ Name ಅಲ್ಲಿ: Spoken-Tutorial-Poster.pdf ಎಂದು ಟೈಪ್ ಮಾಡಿ.
09:16 Save ಮೇಲೆ ಕ್ಲಿಕ್ ಮಾಡಿ.
09:18 Desktop ನಲ್ಲಿ ನಮ್ಮ ಪೋಸ್ಟರ್ ಸೇವ್ ಆಗಿದೆ.
09:21 ಈಗ Desktop ಗೆ ಹೋಗಿ ಪೋಸ್ಟರ್ ಅನ್ನು ಪರೀಕ್ಷಿಸೋಣ.
09:25 ನಾವು ಪೋಸ್ಟರ್ ಅನ್ನು pdf ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿದ್ದೇವೆ.
09:28 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು
09:32 Document properties ಅನ್ನು ಬದಲಾಯಿಸುವುದು,
09:34 A4 poster ವಿನ್ಯಾಸಗೊಳಿಸುವುದು,
09:36 ಪೋಸ್ಟರ್ ಅನ್ನು 'pdf' ನಲ್ಲಿ ಸೇವ್ ಮಾಡುವುದನ್ನು ಕಲಿತಿದ್ದೇವೆ.
09:38 ಸ್ವಂತ ಅಭ್ಯಾಸಕ್ಕಾಗಿ ಅಸೈನ್ ಮೆಂಟ್ -
09:40 Spoken Tutorial Project ಗೆ ಒಂದು A4 poster ಅನ್ನು ವಿನ್ಯಾಸಗೊಳಿಸಿ.
09:44 ಮುಗಿಸಿದ ನಂತರ ನಿಮ್ಮ ಅಸೈನ್ ಮೆಂಟ್ ಈ ರೀತಿಯಾಗಿರಬೇಕು.
09:48 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ.
09:54 Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
10:01 ಹೆಚ್ಚಿನ ವಿವರಗಳಿಗಾಗಿ ನಮಗೆ ಬರೆಯಿರಿ.
10:04 Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ
10:10 ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ
10:14 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
10:16 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು..

Contributors and Content Editors

NaveenBhat, Pratik kamble