BASH/C2/Basics-of-Shell-Scripting/Kannada
From Script | Spoken-Tutorial
Revision as of 11:01, 22 February 2017 by Pratik kamble (Talk | contribs)
Time | Narration |
00:01 | Basics of Shell Scripting ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. |
00:05 | ಇಲ್ಲಿ ನಾವು |
00:09 | System variables ಗಳ ಕುರಿತು |
00:11 | User defined variable ಗಳ ಕುರಿತು ಮತ್ತು |
00:13 | ಕೀಬೋರ್ಡ್ ನಿಂದ ಇನ್ ಪುಟ್ ಪಡೆಯುವುದರ ಕುರಿತು ಕಲಿಯುತ್ತೇವೆ. |
00:16 | ಈ ಪಾಠವನ್ನು ಕಲಿಯಲು ನೀವು Linux Operating System ಅನ್ನು ಉಪಯೋಗಿಸಲು ತಿಳಿದಿರಬೇಕು. |
00:23 | ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ. |
00:29 | ಈ ಪಾಠಕ್ಕಾಗಿ ನಾನು |
00:32 | Ubuntu Linux 12.04 OS ಮತ್ತು |
00:35 | GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:40 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:46 | ನಾವು ವೇರಿಯೇಬಲ್ ಗಳ ಕುರಿತು ವಿವರಣೆಯೊಂದಿಗೆ ಈ ಪಾಠವನ್ನು ಪ್ರಾರಂಭಿಸೋಣ. |
00:49 | 'Bash variable ಗಳು ಇನ್ಫೊರ್ಮೇಷನ್ ಗಳಿಗೆ ತಾತ್ಕಾಲಿಕ ಸ್ಟೋರೇಜ್ ಅನ್ನು ಒದಗಿಸುತ್ತವೆ. |
00:55 | ಈ ವೇರಿಯೇಬಲ್ ಗಳನ್ನು ಪ್ರೊಗ್ರಾಮ್ ಗಳ ಜೀವಿತಾವಧಿಯಲ್ಲಿ ಉಪಯೋಗಿಸಬಹುದು. |
01:01 | ವೇರಿಯೇಬಲ್ ಗಳಲ್ಲಿ ಎರಡು ವಿಧ:
ಸಿಸ್ಟಮ್ ವೇರಿಯೇಬಲ್ ಗಳು ಮತ್ತು ಡಿಫೈನ್ಡ್ ವೇರಿಯೇಬಲ್ ಗಳು. |
01:07 | ಸಿಸ್ಟಮ್ ವೇರಿಯೇಬಲ್ ಗಳು Linux Bash Shell ನಿಂದಲೇ ರಚನೆಗೊಂಡಿವೆ ಮತ್ತು ನಿರ್ವಹಿಸಲ್ಪಡುತ್ತವೆ. |
01:14 | ಅವುಗಳನ್ನು ಕ್ಯಾಪಿಟಲ್ ಲೆಟರ್ ಗಳಲ್ಲೇ ಡಿಫೈನ್ ಮಾಡಬೇಕು. |
01:17 | ಸಾಮಾನ್ಯವಾಗಿ ಉಪಯೋಗಿಸುವ ಸಿಸ್ಟಮ್ ವೇರಿಯೇಬಲ್ ಗಳು |
01:20 | BASH_VERSION, |
01:21 | HOSTNAME, |
01:23 | HOME ಮುಂತಾದವು. |
01:25 | Ctrl Alt ಮತ್ತು T ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. |
01:33 | ಈಗ set ಎಂದು ಟೈಪ್ ಮಾಡಿEnter ಒತ್ತಿರಿ. |
01:38 | ಇದು ಎಲ್ಲ ಸಿಸ್ಟಮ್ ವೇರಿಯೇಬಲ್ ಗಳನ್ನು ಡಿಸ್ಪ್ಲೇ ಮಾಡುತ್ತದೆ. |
01:42 | ಅಥವಾ env ಅಥವಾ printenv ಎಂದು ಟೈಪ್ ಮಾಡಿ ಕೂಡ ಸಿಸ್ಟಮ್ ವೇರಿಯೇಬಲ್ ಗಳನ್ನು ನೋಡಬಹುದು. |
01:53 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
01:55 | ಈಗ echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ HOSTNAME ಎಂದು ಟೈಪ್ ಮಾಡಿ. |
02:01 | Enter ಒತ್ತಿರಿ. |
02:04 | ಇದು ಸಿಸ್ಟಮ್ ನ hostname ಅನ್ನು ಡಿಸ್ಪ್ಲೇ ಮಾಡುತ್ತದೆ. |
02:07 | ಈಗ home directory ಯ ಪೂರ್ಣ ಪಥವನ್ನು ನೋಡೋಣ. |
02:11 | echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ (ಕ್ಯಾಪಿಟಲ್ ಅಲ್ಲಿ) HOME ಎಂದು ಟೈಪ್ ಮಾಡಿ. |
02:18 | Enter ಒತ್ತಿರಿ. |
02:21 | ಈಗ home directory ಯ ಪೂರ್ಣ ಪಥವನ್ನು ತೋರಿಸುತ್ತದೆ. |
02:26 | ಈಗ |
02:27 | echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ (ಕ್ಯಾಪಿಟಲ್ ಅಲ್ಲಿ) HOME ಎಂದು ಟೈಪ್ ಮಾಡಿ. |
02:32 | Enter ಒತ್ತಿರಿ. |
02:34 | ಇದು HOME ವೇರಿಯೇಬಲ್ ನ ಬೆಲೆಯ ಬದಲು HOME ಎಂದು ಡಿಸ್ಪ್ಲೇ ಮಾಡುತ್ತದೆ. |
02:39 | ಹಾಗಾಗಿ ಪ್ರತಿ ವೇರಿಯೇಬಲ್ ನ ಮೊದಲು ಡಾಲರ್ ಸೈನ್ ಉಪಯೋಗಿಸುವುದು ಅನಿವಾರ್ಯವಾಗಿದೆ. |
02:48 | ಸ್ಲೈಡ್ಸ್ ಗೆ ಹಿಂದಿರುಗೋಣ. |
02:51 | ಯೂಸರ್ ಡಿಫೈನ್ಡ್ ವೇರಿಯೇಬಲ್ಸ್: |
02:53 | ಈ ವೇರಿಯೇಬಲ್ ಗಳನ್ನು ಬಳಕೆ ದಾರರೇ ರಚಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ. |
02:57 | ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳನ್ನು ಡಿಫೈನ್ ಮಾಡಲು ಕ್ಯಾಪಿಟಲ್ ಅಕ್ಷರಗಳನ್ನು ಉಪಯೋಗಿಸದಿರುವುದು ಒಳ್ಳೆಯದು. |
03:05 | ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳು ಮತ್ತು ಸಿಸ್ಟಮ್ ಡಿಫೈನ್ಡ್ ವೇರಿಯೇಬಲ್ ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. |
03:12 | ಟರ್ಮಿನಲ್ ಗೆ ಹಿಂದಿರುಗಿ. |
03:14 | username ಸಮ sunita ಎಂದು ಟೈಪ್ ಮಾಡಿ. |
03:20 | ನೆನಪಿರಲಿ username ಸಮ ಚಿಹ್ನೆ ಮತ್ತು 'sunita' ನಡುವೆ ಯಾವುದೇ ಖಾಲಿ ಜಾಗವನ್ನು ಬಿಡಬಾರದು. |
03:29 | Enter ಅನ್ನು ಒತ್ತಿರಿ. |
03:30 | username ವೇರಿಯೇಬಲ್ ನ ಬೆಲೆಯನ್ನು ಡಿಸ್ಪ್ಲೇ ಮಾಡಲು, |
03:33 | echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ username ಎಂದು ಟೈಪ್ ಮಾಡಿ. |
03:40 | Enter ಒತ್ತಿರಿ. |
03:42 | ಇದು ಟರ್ಮಿನಲ್ ನಲ್ಲಿ sunita ಎಂದು ಡಿಸ್ಪ್ಲೇ ಮಾಡುತ್ತದೆ. |
03:46 | ವೇರಿಯೇಬಲ್ ನ ಬೆಲೆಯನ್ನು unset ಮಾಡಬಹುದು. |
03:50 | ಸ್ಲೈಡ್ಸ್ ಗೆ ಹಿಂದಿರುಗೋಣ. |
03:52 | ವೇರಿಯೇಬಲ್ ನ ಬೆಲೆಯನ್ನು unset ಕಮಾಂಡ್ ಅನ್ನು ಉಪಯೋಗಿಸಿ unset ಮಾಡಬಹುದು. |
03:59 | ಇದರ ಸಿಂಟ್ಯಾಕ್ಸ್ unset ಸ್ಪೇಸ್ variablename |
04:03 | ಅದಕ್ಕೋಸ್ಕರ username ವೇರಿಯೇಬಲ್ ಆಗಿದ್ದ ಹಿಂದಿನ ಉದಾಹರಣೆಯನ್ನು ಉಪಯೋಗಿಸೋಣ. |
04:08 | ಟರ್ಮಿನಲ್ ಗೆ ಹಿಂದಿರುಗಿ. unset ಸ್ಪೇಸ್ username ಎಂದು ಟೈಪ್ ಮಾಡಿ Enter ಒತ್ತಿ. |
04:18 | ಪರೀಕ್ಷಿಸಲು echo ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ ಡಾಲರ್ ಸೈನ್ username ಎಂದು ಟೈಪ್ ಮಾಡಿ. Enter ಒತ್ತಿರಿ. |
04:28 | ಟರ್ಮಿನಲ್ ನಲ್ಲಿ ಏನೂ ಡಿಸ್ಪ್ಲೇ ಆಗುವುದಿಲ್ಲ. |
04:30 | ಅಂದರೆ username ವೇರಿಯೇಬಲ್ ನ ಬೆಲೆಯು ಅಳಿಸಲ್ಪಟ್ಟಿದೆ. |
04:36 | ಸ್ಲೈಡ್ಸ್ ಗೆ ಹಿಂದಿರುಗಿ. |
04:39 | Global ಮತ್ತು local variable ಗಳು:- |
04:42 | Shell script ನಲ್ಲಿ ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳನ್ನು global ಆಗಿಯಾದರೂ local ಆಗಿಯಾದರೂ ಡಿಕ್ಲೇರ್ ಮಾಡಬಹುದು. |
04:49 | ಡಿಫಾಲ್ಟ್ ಆಗಿ ಎಲ್ಲ ವೇರಿಯೇಬಲ್ ಗಳು global ಆಗಿರುತ್ತವೆ. |
04:52 | ಅಂದರೆ ಅವುಗಳ ಬೆಲೆಗಳು function ನ ಒಳಗೂ ಹೊರಗೂ ಒಂದೇ ಆಗಿರುತ್ತವೆ. |
04:59 | ಈಗ ವೇರಿಯಾಬಲ್ ಗಳನ್ನು globally ಮತ್ತು locally ಡಿಕ್ಲೇರ್ ಮಾಡಲು ಕಲಿಯೋಣ. |
05:04 | ಟರ್ಮಿನಲ್ ಗೆ ಹಿಂದಿರುಗಿ. |
05:07 | gedit ಸ್ಪೇಸ್ g_(ಅಂಡರ್ ಸ್ಕೋರ್)variable.sh ಸ್ಪೇಸ್ & (ಆಂಪರ್ಸೆಂಡ್ ಚಿಹ್ನೆ) ಎಂದು ಟೈಪ್ ಮಾಡಿ. |
05:16 | gedit ಒಂದು ಟೆಕ್ಸ್ಟ್ ಎಡಿಟರ್ ಮತ್ತು g_(ಅಂಡರ್ ಸ್ಕೋರ್ ) variable.sh ಇದು ಫೈಲ್ ನ ಹೆಸರು. |
05:23 | ಮತ್ತು& (ಆಂಪರ್ಸೆಂಡ್) ಪ್ರಾಮ್ಟ್ ಅನ್ನು ಖಾಲಿ ಮಾಡಲು ಉಪಯೋಗಿಸಲ್ಪಡುತ್ತದೆ. |
05:28 | Enter ಒತ್ತಿರಿ. |
05:30 | ಇಲ್ಲಿ ತೋರಿಸಿದಂತೆ ಕೋಡ್ ಗಳನ್ನ್ಉ g_(ಅಂಡರ್ಸ್ಕೋರ್)variable.sh ಫೈಲ್ ನಲ್ಲಿ ಟೈಪ್ ಮಾಡಿ. |
05:35 | ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ. |
05:38 | ಹ್ಯಾಶ್ ಮತ್ತು ಎಕ್ಸ್ಲಾಮೇಷನ್ ಚಿಹ್ನೆಯನ್ನೊಳಗೊಂಡಿರುವ ಮೊದಲ ಸಾಲು shebang ಅಥವಾ bang line. |
05:44 | username=sunita ಇದು ಯೂಸರ್ ಡಿಫೈನ್ಡ್ ವೇರಿಯೇಬಲ್ ಮತ್ತು ಇದು global ಆಗಿ ಡಿಕ್ಲೇರ್ ಆಗಿದೆ. |
05:51 | echo ಕಮಾಂಡ್ outside function: ಎಂಬ ಸ್ಟ್ರಿಂಗ್ ಅನ್ನೂ ಮತ್ತು |
05:55 | ಡಾಲರ್ username ಇದು username ವೇರಿಯೇಬಲ್ ನ ಬೆಲೆಯನ್ನೂ ಪ್ರಿಂಟ್ ಮಾಡುತ್ತವೆ. |
06:00 | ಹೀಗೆ BASH script ನಲ್ಲಿ ಫಂಕ್ಷನ್ ಡಿಫೈನ್ ಮಾಡಲ್ಪಡುತ್ತದೆ. |
06:04 | ನಾವು ಫಂಕ್ಷನ್ ಗಳ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ. |
06:09 | ಇದು ಫಂಕ್ಷನ್ ನ ಮುಖ್ಯ ಭಾಗ. |
06:12 | ಇಲ್ಲಿ inside functionಎಂಬ ಇನ್ನೊಂದು ಸಂದೇಶ username ನ ಬೆಲೆಯೊಂದಿಗೆ ಡಿಸ್ಪ್ಲೇ ಆಗುತ್ತದೆ. |
06:19 | ಇಲ್ಲಿ ನಾವು ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ. |
06:21 | ಇದು ನಮ್ಮ ಕೋಡ್. ಈಗ ಇದನ್ನು ಎಕ್ಸಿಕ್ಯೂಟ್ ಮಾಡೋಣ. |
06:23 | ನಮ್ಮ ಟರ್ಮಿನಲ್ ಗೆ ಹಿಂದಿರುಗೋಣ. |
06:26 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
06:28 | ಮೊದಲು ನಾವು ನಮ್ಮ ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಿಕೊಳ್ಳಬೇಕು. |
06:31 | chmod ಸ್ಪೇಸ್ ಪ್ಲಸ್ x ಸ್ಪೇಸ್g_(ಅಂಡರ್ ಸ್ಕೋರ್)variable.sh ಎಂದು ಟೈಪ್ ಮಾಡಿ Enter ಅನ್ನು ಒತ್ತಿರಿ. |
06:39 | ಡಾಟ್ ಸ್ಲ್ಯಾಶ್ g_(ಅಂಡರ್ ಸ್ಕೋರ್)variable.sh ಎಂದು ಟೈಪ್ ಮಾಡಿ. |
06:45 | Enter ಅನ್ನು ಒತ್ತಿರಿ. |
06:47 | ಫಲಿತವನ್ನು ಗಮನಿಸಿ. |
06:48 | ಫಂಕ್ಷನ್ ನ ಹೊರಗೆ username ವೇರಿಯೇಬಲ್ sunita ಎಂಬ ಬೆಲೆಯನ್ನುಪಡೆದುಕೊಳ್ಳುತ್ತದೆ. |
06:53 | ಫಂಕ್ಷನ್ ನ ಒಳಗೆ ಕೂಡ username ವೇರಿಯೇಬಲ್ sunita ಎಂಬ ಬೆಲೆಯನ್ನುಪಡೆದುಕೊಳ್ಳುತ್ತದೆ. |
06:59 | ಏಕೆಂದರೆ username ಎಂಬ ವೇರಿಯೇಬಲ್ ಫಂಕ್ಷನ್ ನ ಹೊರಗೆ global ಆಗಿ ಡಿಕ್ಲೇರ್ ಆಗಿದೆ. |
07:04 | ಈಗ ವೇರಿಯೇಬಲ್ ಗಳನ್ನು local ಆಗಿ ಡಿಕ್ಲೇರ್ ಮಾಡುವುದು ಹೇಗೆಂದು ಕಲಿಯೋಣ. |
07:09 | geditಸ್ಪೇಸ್ l_(ಅಂಡರ್ಸ್ಕೋರ್ )variable.sh ಸ್ಪೇಸ್ & (ಆಂಪರ್ ಸೆಂಡ್ ಚಿಹ್ನೆ)ಎಂದು ಟೈಪ್ ಮಾಡಿ. |
07:18 | Enter ಅನ್ನು ಒತ್ತಿ. |
07:20 | ಇಲ್ಲಿ ತೋರಿಸಿರುವ ಕೋಡ್ ಅನ್ನು ನಿಮ್ಮ l_(ಅಂಡರ್ ಸ್ಕೋರ್)variable.sh ಫೈಲ್ ನಲ್ಲಿ ಟೈಪ್ ಮಾಡಿ. |
07:25 | ಈ ಕೋಡ್ ಅನ್ನು ವಿವರಿಸುತ್ತೇನೆ. |
07:28 | ಈ ಕೋಡ್ ನಲ್ಲಿ ಫಂಕ್ಷನ್ ನ ಒಳಗೆ ಒಂದು ಹೊಸ ಸಾಲಿನ ಹೊರತು ಮಿಕ್ಕೆಲ್ಲಾ ಹಿಂದಿನ ಕೋಡ್ ನಂತೆ ಇದೆ. |
07:36 | function ಬ್ಲಾಕ್ ನ ಒಳಗೆ ನಾವು localಸ್ಪೇಸ್ username ಸಮ jack ಎಂಬ ಹೊಸ ಸಾಲನ್ನು ಸೇರಿಸಿದ್ದೇವೆ. |
07:41 | ಇದು username ಎಂಬ ವೇರಿಯೇಬಲ್ ಗೆ local ಆಗಿ ಹೊಸ ಬೆಲೆಯನ್ನು ಅಸೈನ್ ಮಾಡುತ್ತದೆ. |
07:48 | ಈಗ ಟರ್ಮಿನಲ್ ಗೆ ಹಿಂದಿರುಗಿ. |
07:50 | ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡೋಣ. |
07:52 | ಅದಕ್ಕಾಗಿ chmodಸ್ಪೇಸ್ x ಸ್ಪೇಸ್ l_variable.sh ಎಂದು ಟೈಪ್ ಮಾಡಿ. |
08:00 | Enter ಅನ್ನು ಒತ್ತಿರಿ. |
08:02 | ಡಾಟ್ ಸ್ಲ್ಯಾಶ್ l_variable.sh ಎಂದು ಟೈಪ್ ಮಾಡಿ. |
08:07 | Enter ಒತ್ತಿರಿ. |
08:08 | ಫಲಿತವು ಡಿಸ್ಪ್ಲೇ ಆಗಿದೆ. |
08:10 | ಫಂಕ್ಷನ್ ನ ಹೊರಗೆ username ಇದು sunita ಎಂಬ ಬೆಲೆಯನ್ನು ಪಡೆದುಕೊಂಡಿದೆ. |
08:15 | ಆದರೆ ಫಂಕ್ಷನ್ ನ ಒಳಗೆ username ಇದು jack ಎಂಬ ಬೆಲೆಯನ್ನು ಪಡೆದುಕೊಂಡಿದೆ. |
08:20 | ಇದಕ್ಕೆ ಕಾರಣ ಏನೆಂದರೆ username ಗೇ ಈ ಬೆಲೆಯನ್ನು ಫಂಕ್ಷನ್ ನ ಒಳಗೆ local ಆಗಿ ಅಸೈನ್ ಮಾಡಲಾಗಿದೆ. |
08:26 | ಈಗ ಯೂಸರ್ ಇನ್ ಪುಟ್ ಅನ್ನುಕೀಬೋರ್ಡ್ ನಿಂದ ಪಡೆಯುವುದು ಹೇಗೆಂದು ನೋಡೋಣ. |
08:31 | ಕೀಬೋರ್ಡ್ ನಿಂದ ಇನ್ ಪುಟ್ ಪಡೆಯಲು read ಕಮಾಂಡ್ ಅನ್ನು ಉಪಯೋಗಿಸುತ್ತಾರೆ. |
08:36 | ಇದನ್ನು ಯೂಸರ್ ಡಿಫೈನ್ಡ್ ವೇರಿಯೇಬಲ್ ಗೆ ಇನ್ ಪುಟ್ ಆದ ಬೆಲೆಯನ್ನು ಅಸೈನ್ ಮಾಡಲು ಕೂಡ ಉಪಯೋಗಿಸಬಹುದು. |
08:41 | read ಕಮಾಂಡ್ ನ ಸಿಂಟ್ಯಾಕ್ಸ್ : |
08:44 | read ಸ್ಪೇಸ್ ಹೈಫನ್ p ಸ್ಪೇಸ್ ಡಬಲ್ ಕೋಟ್ಸ್ ನಲ್ಲಿ “ PROMPT ಅನ್ನು ಟೈಪ್ ಮಾಡಬೇಕು. |
08:50 | ನೆನಪಿರಲಿ ಪ್ರಾಮ್ಟ್ ಯೂಸರ್ ಇನ್ ಪುಟ್ ಗಾಗಿ ಕಾಯುವ ಯಾವುದೇ ಸ್ಟ್ರಿಂಗ್ ಆಗಿರುತ್ತದೆ. |
08:55 | ನೀವು ಅದನ್ನು ನಿಮ್ಮದೇ ಸ್ಟ್ರಿಂಗ್ ಗೆ ಬದಲಾಯಿಸಿಕೊಳ್ಳಬಹುದು. |
08:58 | ಟರ್ಮಿನಲ್ ಗೆ ಹಿಂದಿರುಗಿ. |
09:00 | gedit ಸ್ಪೇಸ್ read.sh ಸ್ಪೇಸ್ & (ಆಂಪರ್ಸೆಂಡ್ ಚಿಹ್ನೆ) ಎಂದು ಟೈಪ್ ಮಾಡಿ. |
09:08 | Enter ಅನ್ನು ಒತ್ತಿ. |
09:09 | ಇಲ್ಲಿ ತೋರಿಸಿದ ಕೋಡ್ ಅನ್ನು ನಿಮ್ಮ read.sh ಫೈಲ್ ನಲ್ಲಿ ಟೈಪ್ ಮಾಡಿ. |
09:14 | ಈಗ ಕೋಡ ಅನ್ನು ವಿವರಿಸುತ್ತೇನೆ. |
09:16 | ಈ ಉದಾಹರಣೆಯಲ್ಲಿ ಕೀಬೋರ್ಡ್ ಮೂಲಕ ಬಳಕೆ ದಾರರು ಇನ್ ಪುಟ್ ಅನ್ನು ಕೊಡುತ್ತಾರೆ. |
09:21 | ಇದು bang line. |
09:23 | ಇಲ್ಲಿ –p(ಹೈಫನ್p) , ಪ್ರಾಮ್ಟ್ ಅನ್ನು ಡಿಸ್ಪ್ಲೇ ಮಾಡುತ್ತದೆ ಮತ್ತು ಅದೇ ಸಾಲಿನಲ್ಲಿ ಕೀಬೋರ್ಡ್ ನಿಂದ ಇನ್ ಪುಟ್ ಅನ್ನು ಪಡೆಯುತ್ತದೆ. |
09:31 | username ಎಂಬ ವೇರಿಯೇಬಲ್ ನಲ್ಲಿ ಯೂಸರ್ ಇನ್ ಪುಟ್ ಸಂಗ್ರಹಿಸಲ್ಪಡುತ್ತದೆ. |
09:36 | echo ಕಮಾಂಡ್ ಮೆಸ್ಸೇಜ್ ಅನ್ನು ಡಿಸ್ಪ್ಲೇ ಮಾಡುತ್ತದೆ. |
09:38 | ಅಂದರೆ Hello ಮತ್ತು ಕೀಬೋರ್ಡ್ ನಿಂದ ಬಳಕೆದಾರರು ಎಂಟರ್ ಮಾಡಿದ ಹೆಸರು. |
09:43 | ಈಗ ಈ ಪ್ರೋಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
09:45 | ಟರ್ಮಿನಲ್ ಗೆ ಹಿಂದಿರುಗಿ. |
09:49 | chmod ಸ್ಪೇಸ್ ಪ್ಲಸ್ x ಸ್ಪೇಸ್ read.sh ಎಂದು ಟೈಪ್ ಮಾಡಿ. |
09:55 | Enter ಒತ್ತಿರಿ. |
09:56 | ಡಾಟ್ ಸ್ಲ್ಯಾಶ್ read.sh ಎಂದು ಟೈಪ್ ಮಾಡಿ Enter ಒತ್ತಿರಿ. |
10:01 | ಇಲ್ಲಿ Enter username: ಎಂದು ಡಿಸ್ಪ್ಲೇ ಆಗುತ್ತದೆ. |
10:04 | ನಾನು ashwini ಎಂದು ಟೈಪ್ ಮಾಡಿ Enter ಒತ್ತುತ್ತೇನೆ. |
10:08 | Hello ashwini ಎಂಬ ಮೆಸ್ಸೇಜ್ ಡಿಸ್ಪ್ಲೇ ಆಗುತ್ತದೆ. |
10:13 | ashwini ಎಂಬ ಇನ್ ಪುಟ್ ಬೆಲೆಯು ಯೂಸರ್ ಡಿಫೈನ್ಡ್ ವೇರಿಯೇಬಲ್ ಆದ username ಗೆ ಅಸೈನ್ ಆಗಿತ್ತು. |
10:20 | ಸಾರಾಂಶವನ್ನು ತಿಳಿಯಲು ಸ್ಲೈಡ್ಸ್ ಗೆ ಹಿಂದಿರುಗೋಣ. |
10:23 | ಈ ಟ್ಯುಟೋರಿಯಲ್ ನಲ್ಲಿ ನಾವು |
10:26 | ಸಿಸ್ಟಮ್ ವೇರಿಯೇಬಲ್ ಗಳ ಕುರಿತು, |
10:27 | ಯೂಸರ್ ಡಿಫೈನ್ಡ್ ವೇರಿಯೇಬಲ್ ಗಳ ಕುರಿತು, |
10:29 | ಮತ್ತು ಕೀಬೋರ್ಡ್ ನಿಂದ ಇನ್ ಪುಟ್ ಅನ್ನು ಪಡೆಯಲು ಕಲಿತಿದ್ದೇವೆ. |
10:33 | ಸ್ವಂತ ಅಭ್ಯಾಸಕ್ಕಾಗಿ, |
10:34 | ಕೆಳಗಿನ ಸಿಸ್ಟಮ್ ವೇರಿಯೇಬಲ್ ಗಳನ್ನು ಪಡೆಯಲು ಒಂದು Bash ಪ್ರೋಗ್ರಾಮ್ ಅನ್ನು ಬರೆಯಿರಿ. |
10:38 | pwd ಮತ್ತು logname |
10:41 | ಇವುಗಳಿಗೆ Bash ಪ್ರೋಗ್ರಾಂ ಅನ್ನು ಬರೆಯಿರಿ. |
10:43 | ಬಳಕೆ ದಾರರಿಂದ username ಅನ್ನು ಕೇಳುವುದು ಮತ್ತು |
10:46 | 10 ಸೆಕೆಂಡ್ ಗಳಲ್ಲಿ ಬಳಕೆದಾರ ಏನನ್ನೂ ಎಂಟರ್ ಮಾಡದಿದ್ದಲ್ಲಿ ಪ್ರೋಗ್ರಾಂ ನಿಂದ ಹೊರಬರುವುದು. |
10:51 | {ಸುಳಿವು: read -(ಹೈಫನ್)t 10 -(ಹೈಫನ್)p} |
10:56 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ.. |
10:59 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
11:02 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
11:07 | Spoken Tutorial Project Team ಇದು, spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
11:16 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ. |
11:23 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
11:27 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
11:34 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro |
11:40 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
11:44 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |