Ruby/C3/Object-Oriented-Programming-Methods/Kannada
From Script | Spoken-Tutorial
Revision as of 20:35, 22 October 2016 by NaveenBhat (Talk | contribs)
Time | Narration |
00:01 | Ruby ಯಲ್ಲಿ, Object Oriented Programming – Methods ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:09 | * ಇನ್ಸ್ಟನ್ಸ್ ಮೆಥಡ್ ಗಳು |
00:11 | * ಕ್ಲಾಸ್ ಮೆಥಡ್ ಗಳು ಮತ್ತು |
00:14 | * ಅಕ್ಸೆಸ್ಸರ್ (accessor) ಮೆಥಡ್ ಗಳನ್ನು ಬಳಸಲು ಕಲಿಯುವೆವು. |
00:15 | ಇಲ್ಲಿ ನಾವು,
|
00:19 | * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:22 | ಈ ಟ್ಯುಟೋರಿಯಲ್ ಅನ್ನು ಬಳಸಲು, ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು. |
00:27 | ಅಲ್ಲದೇ ನೀವು ಲಿನಕ್ಸ್ ಕಮಾಂಡ್ ಗಳು, ಟರ್ಮಿನಲ್ ಮತ್ತು ಟೆಕ್ಸ್ತ್-ಎಡಿಟರ್ ಗಳ ಬಗ್ಗೆ ತಿಳಿದಿರಬೇಕು. |
00:31 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನು ನೋಡಿ. |
00:36 | ಪ್ರಾರಂಭಿಸುವ ಮುನ್ನ, ನಾವು ಈ ಮೊದಲು “ttt” ಎಂಬ ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ. |
00:41 | ನಾವು ಆ ಡಿರೆಕ್ಟರೀಗೆ, |
00:44 | ಆನಂತರ 'ruby-tutorial' ಗೆ ಹೋಗೋಣ. |
00:47 | 'oop-methods' ಎಂಬ ಒಂದು ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿ ಮತ್ತು ಅದಕ್ಕೆ cd ಮಾಡಿಕೊಳ್ಳಿ. |
00:54 | ’ಇನ್ಸ್ಟನ್ಸ್ ಮೆಥಡ್’ಗಳೆಂದರೆ ಏನು? |
00:56 | ’ಇನ್ಸ್ಟನ್ಸ್ ಮೆಥಡ್’ಗಳು, ಒಂದು ಕ್ಲಾಸ್ ನ ಎಲ್ಲ ಇನ್ಸ್ಟನ್ಸ್ ಗಳಿಗೆ ಲಭ್ಯವಿರುವ ಮೆಥಡ್ ಗಳಾಗಿವೆ. |
01:03 | ಒಂದು ’ಕ್ಲಾಸ್’ನ ’ಆಬ್ಜೆಕ್ಟ್’ಗಳನ್ನು ಅಥವಾ ’ಇನ್ಸ್ಟನ್ಸ್’ಗಳನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ಹಿಂದೆ ನಾವು ಕಲಿತಿದ್ದೆವು. |
01:09 | ಪ್ರಾಥಮಿಕ ಹಂತದ (basic level) 'Ruby tutorials' ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
01:14 | ಅದನ್ನು 'instance_methods.rb' ಎಂದು ಹೆಸರಿಸಿ. |
01:19 | ನನ್ನ ಹತ್ತಿರ 'instance methods' (ಇನ್ಸ್ಟನ್ಸ್ ಮೆಥಡ್ಸ್) ಅನ್ನು ಜಾರಿಗೊಳಿಸುವ ಒಂದು ಉದಾಹರಣೆಯಿದೆ. |
01:24 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು. |
01:29 | ಈ ಉದಾಹರಣೆಯಲ್ಲಿ, ನಾನು 'Product' (ಪ್ರೊಡಕ್ಟ್) ಎಂಬ ಒಂದು ಕ್ಲಾಸ್ ಅನ್ನು ಡಿಫೈನ್ ಮಾಡಿದ್ದೇನೆ. |
01:33 | "name" ಹಾಗೂ "price" ಗಳೆಂಬ ಇನ್ಸ್ಟನ್ಸ್ ವೇರಿಯೇಬಲ್ ಗಳನ್ನು ಇನಿಶಿಯಲೈಸ್ ಮಾಡಲು, ನಾನು 'initialize' (ಇನಿಶಿಯಲೈಸ್) ಎಂಬ ಮೆಥಡ್ ಅನ್ನು ಕಾಲ್ ಮಾಡಿದ್ದೇನೆ. |
01:41 | "name" ಹಾಗೂ "price" ಗಳೆಂಬ ಇನ್ಸ್ಟನ್ಸ್ ಮೆಥಡ್ ಗಳನ್ನು ಸಹ ಡಿಫೈನ್ ಮಾಡಿದ್ದೇನೆ. |
01:47 | ಇವುಗಳಲ್ಲಿ ಪ್ರತಿಯೊಂದು, ಕ್ರಮವಾಗಿ "name" ಹಾಗೂ "price" ಇನ್ಸ್ಟನ್ಸ್ ವೇರಿಯೇಬಲ್ ಗಳನ್ನು ರಿಟರ್ನ್ ಮಾಡುತ್ತದೆ (ಹಿಂದಿರುಗಿಸುತ್ತದೆ). |
01:54 | ಇನ್ಸ್ಟನ್ಸ್ ಮೆಥಡ್ ಗಳನ್ನು ಸಾಮಾನ್ಯ ಮೆಥಡ್ ಗಳಂತೆಯೇ ಡಿಫೈನ್ ಮಾಡಲಾಗುತ್ತದೆ. |
01:58 | Ruby (ರೂಬಿ) ಯಲ್ಲಿ ಮೆಥಡ್ ಗಳನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ಈಮೊದಲು ನಾವು ಕಲಿತಿದ್ದೆವು. |
02:02 | ಎಲ್ಲ ಇನ್ಸ್ಟನ್ಸ್ ಗಳಿಗೆ, ಈ ಮೆಥಡ್ ಗಳು ಹೇಗೆ ಲಭ್ಯವಾಗುತ್ತವೆ ಎಂಬುದನ್ನು ಇದೀಗ ನಾವು ನೋಡುವೆವು. |
02:07 | ಈಗ, ನಮ್ಮ ಹತ್ತಿರ ಇರುವ ಲಾಜಿಕ್ ಅನ್ನು ಕಾರ್ಯಗತಗೊಳಿಸೋಣ. |
02:11 | ಇಲ್ಲಿ, ನಾನು 'Product' ಎಂಬ ಆಬ್ಜೆಕ್ಟ್ ಅನ್ನು ಇನಿಶಿಯಲೈಸ್ ಮಾಡಿದ್ದೇನೆ ಮತ್ತು ಅದನ್ನು 'product_object_1' ಎಂದು ಹೆಸರಿಸಿದ್ದೇನೆ. |
02:18 | ನಾನು ಇದನ್ನು ಒಂದು 'name' ನ ವ್ಯಾಲ್ಯೂ ಹಾಗೂ ಒಂದು 'price' ನ ವ್ಯಾಲ್ಯೂಗಳೊಂದಿಗೆ ಇನಿಶಿಯಲೈಸ್ ಮಾಡಿದ್ದೇನೆ. |
02:24 | ಇನಿಶಿಯಲೈಸರ್ (initializer) ಬ್ಲಾಕ್, ಇನ್ಸ್ಟನ್ಸ್ ವೇರಿಯೇಬಲ್ ಗಳಾದ '@name' ಹಾಗೂ '@price' ಗಳಿಗೆ ವ್ಯಾಲ್ಯೂಗಳನ್ನು ರವಾನಿಸುತ್ತದೆ (pass). |
02:31 | ಈಗ, ಈ 'product' ಇನ್ಸ್ಟನ್ಸ್ ಅಥವಾ ಆಬ್ಜೆಕ್ಟ್, 'name' ಹಾಗೂ 'price' ಎಂಬ ಇನ್ಸ್ಟನ್ಸ್ ಮೆಥಡ್ ಗಳನ್ನು ಬಳಸಬಹುದು. |
02:37 | ಈ ಮೆಥಡ್ ಗಳನ್ನು ಇನ್ವೋಕ್ ಮಾಡಿದಾಗ, ಇನ್ಸ್ಟನ್ಸ್ ವೇರಿಯೇಬಲ್ ಗಳಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯುಗಳನ್ನು ನಾವು ಪಡೆಯುತ್ತೇವೆ. |
02:43 | ಈಗ, ನಾವು ಈ ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡೋಣ. |
02:46 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'ruby instance_methods.rb' ಹಾಗೂ ಔಟ್ಪುಟ್ ಅನ್ನು ನೋಡಲು 'Enter' ಅನ್ನು ಒತ್ತಿ. |
02:56 | ನೀವು ಆಬ್ಜೆಕ್ಟ್ ಅನ್ನು ಇನಿಶಿಯಲೈಸ್ ಮಾಡಿದ ವ್ಯಾಲ್ಯೂಗಳನ್ನು ಅದು ಪ್ರಿಂಟ್ ಮಾಡುವುದನ್ನು ನೀವು ನೋಡುವಿರಿ. |
03:02 | ಅರ್ಥಾತ್, “laptop” ಹಾಗೂ “35,000”. |
03:07 | ನಂತರ, ಇನ್ನೊಂದು ಇನ್ಸ್ಟನ್ಸ್ ಅಥವಾ ಆಬೆಕ್ಟ್ ಅನ್ನು ಇನಿಶಿಯಲೈಸ್ ಮಾಡಿ. |
03:12 | ನಾವು ಈ ಆಬ್ಜೆಕ್ಟ್ ಅನ್ನು 'product_object_2' ಎಂದು ಹೆಸರಿಸೋಣ. |
03:18 | ಈ ಸಲ, ನಾವು 'name' ಹಾಗೂ 'price' ಗಳಿಗಾಗಿ ವ್ಯಾಲ್ಯೂಗಳ ಬೇರೊಂದು ಸೆಟ್ ಅನ್ನು ಕೊಡೋಣ. |
03:23 | ಈಗ, ನಾವು ಈ ಆಬ್ಜೆಕ್ಟ್ ಗಾಗಿ 'name' ಹಾಗೂ 'price' ಎಂಬ ಇನ್ಸ್ಟನ್ಸ್ ಮೆಥಡ್ ಗಳನ್ನು ಕಾಲ್ ಮಾಡೋಣ. |
03:35 | ನಂತರ, ನಾವು ಮತ್ತೆ ಟರ್ಮಿನಲ್ ಗೆ ಬದಲಾಯಿಸೋಣ ಹಾಗೂ ಹಿಂದಿನಂತೆ ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡೋಣ. |
03:41 | ಇದು ಯಶಸ್ವಿಯಾಗಿ ಎಕ್ಸೀಕ್ಯೂಟ್ ಆಗುವುದನ್ನು ಮತ್ತು ಹೊಸ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುವುದನ್ನು ನೀವು ನೋಡುವಿರಿ. |
03:48 | ಇನ್ಸ್ಟನ್ಸ್ ಮೆಥಡ್ ಗಳು, 'Product' ಎಂಬ ಕ್ಲಾಸ್ ನ ಎಲ್ಲ ಆಬ್ಜೆಕ್ಟ್ ಗಳಿಗೆ ಲಭ್ಯವಾಗಿರುತ್ತವೆ ಎಂಬುದನ್ನು ಇದು ಸಾಬೀತು ಮಾಡುತ್ತದೆ. |
03:55 | ಈಗ ನಿಮಗೆ ನಿಮ್ಮ ಸ್ವಂತದ ಇನ್ಸ್ಟನ್ಸ್ ಮೆಥಡ್ ಗಳನ್ನು ಬರೆಯಲು ಸಾಧ್ಯವಾಗಬೇಕು. |
03:59 | ಇನ್ನು ಮುಂದೆ, ಕ್ಲಾಸ್ ಮೆಥಡ್ ಗಳೆಂದರೆ ಏನು ಎಂಬುದನ್ನು ನಾವು ನೋಡೋಣ. |
04:04 | ಕ್ಲಾಸ್ ಮೆಥಡ್ ಗಳು, ಕ್ಲಾಸ್ ಗೆ ಮಾತ್ರ ಲಭ್ಯವಿರುವ ಮೆಥಡ್ ಗಳಾಗಿವೆ. |
04:09 | ಈ ಮೆಥಡ್ ಗಳು, ಕ್ಲಾಸ್ ನ ಇನ್ಸ್ಟನ್ಸ್ ಗಳಿಗೆ ಲಭ್ಯವಿರುವುದಿಲ್ಲ. |
04:14 | ನೀವು ’ಕ್ಲಾಸ್ ಮೆಥಡ್’ ಗಳನ್ನು ವಿವಿಧ ರೀತಿಗಳಲ್ಲಿ ಡಿಫೈನ್ ಮಾಡಬಹುದು. |
04:16 | ನಾವು ಒಂದು ಉದಾಹರಣೆಯನ್ನು ನೋಡೋಣ. |
04:18 | ಪ್ರಾಥಮಿಕ ಹಂತದ 'Ruby tutorials' ನಲ್ಲಿ ತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
04:24 | ಅದನ್ನು 'class_methods.rb' ಎಂದು ಹೆಸರಿಸಿ. |
04:28 | ನನ್ನ ಹತ್ತಿರ ' class methods' (ಕ್ಲಾಸ್ ಮೆಥಡ್ಸ್) ಅನ್ನು ಕಾರ್ಯಗತಗೊಳಿಸುವ ಒಂದು ಉದಾಹರಣೆಯಿದೆ. |
04:32 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು. |
04:36 | ನಾನು ಈಮೊದಲು ಮಾಡಿದಂತೆ, 'Product' ಎಂಬ ಕ್ಲಾಸ್ ಅನ್ನು ಡಿಫೈನ್ ಮಾಡಿದ್ದೇನೆ. |
04:40 | ಹಿಂದೆ ಮಾಡಿದಂತೆ ಒಂದು 'initializer' (ಇನಿಶಿಯಲೈಸರ್) ಅನ್ನು ಕಾಲ್ ಮಾಡಿದ್ದೇನೆ. |
04:44 | ಆದರೆ ಈ ಸಲ ನಾನು 'description' (ಡಿಸ್ಕ್ರಿಪ್ಶನ್) ಎಂಬ ಒಂದು ಹೆಚ್ಚಿನ ’ಆರ್ಗ್ಯೂಮೆಂಟ್’ಅನ್ನು ಸೇರಿಸಿದ್ದೇನೆ. |
04:48 | ವ್ಯಾಲ್ಯೂಗಳನ್ನು ಇಡಲು, ಹಿಂದಿನಂತೆ ಇನ್ಸ್ಟನ್ಸ್ ವೇರಿಯೇಬಲ್ ಗಳನ್ನು ಬಳಸದೇ, ನಾನು ಕ್ಲಾಸ್ ವೇರಿಯೇಬಲ್ ಗಳನ್ನು ಬಳಸುತ್ತಿದ್ದೇನೆ. |
04:55 | ಕ್ಲಾಸ್ ಮೆಥಡ್ ಗಳನ್ನು ಡಿಫೈನ್ ಮಾಡಬಹುದಾದ ಮೂರು ವಿಧಾನಗಳನ್ನು ಈ ಕ್ಲಾಸ್, ನಿಮಗೆ ತೋರಿಸುವುದು. |
05:01 | 'name' ಎಂಬ 'ಕ್ಲಾಸ್ ಮೆಥಡ್' ನ ಡಿಕ್ಲೆರೇಶನ್ ಅನ್ನು ನೋಡಿ. |
05:06 | ಇಲ್ಲಿ, ಇದನ್ನು ಕ್ಲಾಸ್-ನೇಮ್ 'Product' ಅನ್ನು ಬಳಸಿ ಡಿಫೈನ್ ಮಾಡಲಾಗಿದೆ. |
05:10 | ಆಮೇಲೆ, ಎರಡನೆಯ 'ಕ್ಲಾಸ್ ಮೆಥಡ್' ನ ಡಿಕ್ಲೆರೇಶನ್ ಅನ್ನು ನೋಡಿ. |
05:14 | ಇಲ್ಲಿ ನಾನು "self" ಎಂಬ ಕೀವರ್ಡ್ ಅನ್ನು ಬಳಸಿದ್ದೇನೆ. |
05:18 | ನಂತರ, ನೀವು 'ಕ್ಲಾಸ್ ಮೆಥಡ್' ಗಳನ್ನು ಡಿಫೈನ್ ಮಾಡಬಹುದಾದ ಮೂರನೆಯ ರೀತಿಯನ್ನು ಪರಿಶೀಲಿಸಿ. |
05:23 | ಈಗ ನಾವು, ಈ 'ಕ್ಲಾಸ್ ಮೆಥಡ್'ಗಳನ್ನು ಕಾರ್ಯಗತಗೊಳಿಸೋಣ. |
05:27 | ಹಿಂದೆ ಮಾಡಿದಂತೆ, ಮೊದಲು, ನಾವು 'Product' ನ ಒಂದು ಆಬ್ಜೆಕ್ಟ್ ಅನ್ನು ಇನಿಶಿಯಲೈಸ್ ಮಾಡೋಣ. |
05:32 | ಈ ಸಲ, ನಾವು 'description' ಗೆ ಒಂದು ವ್ಯಾಲ್ಯೂಅನ್ನು ಸಹ ಕೊಡುತ್ತಿದ್ದೇವೆ. |
05:37 | ಈಗ, ಇಲ್ಲಿ ತೋರಿಸಿದಂತೆ, ನಾವು ಕ್ಲಾಸ್ ಮೆಥಡ್ ಗಳನ್ನು ಇನ್ವೋಕ್ ಮಾಡೋಣ. |
05:42 | ಈಗ, ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡೋಣ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸೋಣ. |
05:47 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹಿಂದಿನಂತೆ ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡಿ. |
05:54 | ಅದು 'name, price' ಹಾಗೂ ' description' ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುವುದನ್ನು ನೀವು ನೋಡುವಿರಿ. |
05:59 | ಈಗ ನೀವು ನಿಮ್ಮ ಸ್ವಂತದ 'ಕ್ಲಾಸ್ ಮೆಥಡ್' ಗಳನ್ನು ಬರೆಯಲು ಸಾಧ್ಯವಾಗಬೇಕು. |
06:03 | ಇನ್ನುಮುಂದೆ, ಆಕ್ಸೆಸ್ಸರ್ (accessor) ಮೆಥಡ್ ಗಳೆಂದರೆ ಏನು ಎಂದು ನಾವು ನೋಡುವೆವು. |
06:07 | ರೂಬಿ, ಕ್ಲಾಸ್ ಗಳಲ್ಲಿ ಡಿಫೈನ್ ಮಾಡಿದ ಡೇಟಾಅನ್ನು ಅಕ್ಸೆಸ್ ಮಾಡಲು, ಆಕ್ಸೆಸ್ಸರ್ (accessor) ಮೆಥಡ್ ಗಳನ್ನು ಬಳಸುತ್ತದೆ. |
06:13 | ಆಕ್ಸೆಸ್ಸರ್ ಮೆಥಡ್ ಗಳು, 'ಸೆಟ್ಟರ್ ಮೆಥಡ್' ಮತ್ತು 'ಗೆಟ್ಟರ್ ಮೆಥಡ್'ಗಳನ್ನು ಒಳಗೊಂಡಿವೆ. |
06:18 | ’ಸೆಟ್ಟರ್ ಮೆಥಡ್’ಗಳು (Setter methods) ವ್ಯಾಲ್ಯೂಗಳನ್ನು ಸೆಟ್ ಮಾಡುತ್ತವೆ. |
06:22 | ’ಗೆಟ್ಟರ್ ಮೆಥಡ್’ಗಳು (Getter methods) ಆ ವ್ಯಾಲ್ಯೂಗಳನ್ನು ಪಡೆಯುತ್ತವೆ. |
06:24 | ಈ ಮೆಥಡ್ ಗಳನ್ನು ಡಿಕ್ಲೇರ್ ಮಾಡಲು, ರೂಬಿ, 'attr_accessor' ಎಂಬ ಶಬ್ದವನ್ನು ಬಳಸುತ್ತದೆ. |
06:31 | ನಾವು ಆಕ್ಸೆಸ್ಸರ್ (accessor) ಮೆಥಡ್ ಗಳ ಒಂದು ಉದಾಹರಣೆಯನ್ನು ನೋಡೋಣ. |
06:35 | ಪ್ರಾಥಮಿಕ ಹಂತದ 'Ruby tutorials' ನಲ್ಲಿತೋರಿಸಿದಂತೆ, 'gedit' ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. |
06:39 | ಇದನ್ನು 'accessor_methods.rb' ಎಂದು ಹೆಸರಿಸಿ. |
06:43 | ನನ್ನ ಹತ್ತಿರ ' accessor methods' (ಅಕ್ಸೆಸ್ಸರ್ ಮೆಥಡ್ಸ್) ಅನ್ನು ಕಾರ್ಯಗತಗೊಳಿಸುವ ಒಂದು ಉದಾಹರಣೆಯಿದೆ. |
06:47 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು. |
06:52 | ಈ ಉದಾಹರಣೆಯಲ್ಲಿ, ನಾನು 'Product' ಎಂಬ ಒಂದು ಕ್ಲಾಸ್ ಅನ್ನು ಡಿಫೈನ್ ಮಾಡಿದ್ದೇನೆ. |
06:56 | 'name' ಮತ್ತು 'price' ಗಳಿಗಾಗಿ, ನಾನು 'attr_accessor' ಅನ್ನು ಡಿಕ್ಲೇರ್ ಮಾಡಿದ್ದೇನೆ. |
07:01 | ಈ ವಿಧದ ಮೆಥಡ್ ಗಳನ್ನು ಬಳಸಲು ಬೇಕಾಗಿರುವುದು ಇಷ್ಟೇ. |
07:05 | ಈಗ ಇದನ್ನು ಕಾರ್ಯರೂಪಕ್ಕೆ ತರೋಣ. |
07:07 | ಒಂದು 'Product' ಆಬ್ಜೆಕ್ಟ್ ಅನ್ನು ನಾನು ಇನಿಶಿಯಲೈಸ್ ಮಾಡಿದ್ದೇನೆ. |
07:10 | ಆಮೇಲೆ, 'product' ಆಬ್ಜೆಕ್ಟ್ ನ 'name' ಹಾಗೂ 'price' ಗಳನ್ನು ನಾನು ಸೆಟ್ ಮಾಡಿದ್ದೇನೆ. |
07:14 | ಇದು ಸಾಧ್ಯವಿದೆ. ಏಕೆಂದರೆ 'attr_declaration' (ಎ ಟಿ ಟಿ ಆರ್ ಅಂಡರ್ ಸ್ಕೋರ್ ಡಿಕ್ಲೆರೇಶನ್), ವ್ಯಾಲ್ಯೂಗಳನ್ನು ಸೆಟ್ ಮಾಡಲು ಡೀಫಾಲ್ಟ್ ಆಗಿ ಮೆಥಡ್ ಗಳನ್ನು ಕ್ರಿಯೇಟ್ ಮಾಡುತ್ತದೆ. |
07:22 | ಆಮೇಲೆ ನಾನು ’ಗೆಟ್ಟರ್ ಮೆಥಡ್’ಗಳನ್ನು ಬಳಸಿ, 'name' ಹಾಗೂ 'price' ಗಳಿಗಾಗಿ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು ಪ್ರಯತ್ನಿಸಿದ್ದೇನೆ. |
07:28 | ಈ ’ಗೆಟ್ಟರ್ ಮೆಥಡ್’ ಗಳು ಸಹ, 'attr_accessor' ನ ಡಿಕ್ಲೆರೇಶನ್ ನಿಂದ ರಚಿಸಲ್ಪಟ್ಟಿದ್ದವು. |
07:35 | ಈಗ, ನಾವು ಮುಂಚಿನಂತೆಯೇ ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡೋಣ. |
07:40 | ಸೆಟ್ ಮಾಡಿದ ವ್ಯಾಲ್ಯೂಗಳನ್ನು ಅದು ಪ್ರಿಂಟ್ ಮಾಡುವುದನ್ನು ನೀವು ನೋಡುವಿರಿ. |
07:44 | ಈಗ, ನಿಮ್ಮ ಸ್ವಂತದ ಅಕ್ಸೆಸ್ಸರ್ ’ಮೆಥಡ್’ಗಳನ್ನು ಬರೆಯಲು ನಿಮಗೆ ಸಾಧ್ಯವಾಗಬೇಕು. |
07:50 | ಗಮನಿಸಬೇಕಾದ ಒಂದು ಅಂಶವೆಂದರೆ, ಅಕ್ಸೆಸ್ಸರ್ ’ಮೆಥಡ್’ಗಳು, ಡೀಫಾಲ್ಟ್ ಆಗಿ, ಇನ್ಸ್ಟನ್ಸ್ ಮೆಥಡ್ ಗಳಾಗಿವೆ. |
07:55 | ಹೀಗಾಗಿ, 'class Product' ನ ವಿವಿಧ ಇನ್ಸ್ಟನ್ಸ್ ಗಳಿಂದ ಅವುಗಳನ್ನು ಅಕ್ಸೆಸ್ ಮಾಡಬಹುದು. |
08:00 | ಈ ಟ್ಯುಟೋರಿಯಲ್ ನಲ್ಲಿ ನಾವು, ಇನ್ಸ್ಟನ್ಸ್ ಮೆಥಡ್ ಗಳು, ಕ್ಲಾಸ್ ಮೆಥಡ್ ಗಳು ಹಾಗೂ ಅಕ್ಸೆಸ್ಸರ್ ’ಮೆಥಡ್’ಗಳ ಬಗ್ಗೆ ಕಲಿತಿದ್ದೇವೆ. |
08:06 | ಒಂದು ಅಸೈನ್ಮೆಂಟ್: 'Temperature' ಎಂಬ ಹೆಸರಿನ ಒಂದು ಕ್ಲಾಸ್ ಅನ್ನು ಡಿಫೈನ್ ಮಾಡಿ. |
08:10 | ’ರೂಬಿ’ಯ ಅಕ್ಸೆಸ್ಸರ್ (accessor) ಮೆಥಡ್ ನ ಸಿಂಟ್ಯಾಕ್ಸ್ ಅನ್ನು ಬಳಸಿ, ಒಂದು ಇನ್ಸ್ಟನ್ಸ್ ಮೆಥಡ್ ಅನ್ನು ಬರೆಯಿರಿ. |
08:15 | ಈ ಮೆಥಡ್, ಕೊಟ್ಟಿರುವ ಫ್ಯಾರನ್ಹೈಟ್ ಗೆ (Fahrenheit), ಸೆಲ್ಸಿಯಸ್ (Celsius) ಅನ್ನು ಕಂಡುಹಿಡಿಯಬೇಕು. |
08:20 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
08:23 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
08:26 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:30 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
08:31 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:34 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:38 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact at spoken hyphen tutorial dot org. |
08:44 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
08:48 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:55 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
09:03 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ .
ವಂದನೆಗಳು. |