Ruby/C3/for-and-each-Looping-Statements/Kannada

From Script | Spoken-Tutorial
Revision as of 20:45, 15 October 2016 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Ruby(ರೂಬಿ) ಯಲ್ಲಿ for and each Loopsಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ, ನಾವು:
00:07 * “loop” ಶಬ್ದದ ಅರ್ಥ
00:08 * 'ರೂಬಿ' ಯಲ್ಲಿ ವಿವಿಧ ಪ್ರಕಾರದ 'ಲೂಪ್'ಗಳು
00:11 * “for” ಲೂಪ್ ನ ಬಳಕೆ
00:12 * “each” ಲೂಪ್ ಕನ್ಸ್ಟ್ರಕ್ಟ್ ನ (construct) ಬಳಕೆ ಇವುಗಳನ್ನು ಕಲಿಯುವೆವು.
00:14 ಇಲ್ಲಿ ನಾವು:
00:16 * Ubuntu ಆವೃತ್ತಿ 12.04
00:19 Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:22 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರಬೇಕು.
00:25 'Linux ಕಮಾಂಡ್'ಗಳು, ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಸಹ ನೀವು ತಿಳಿದಿರಬೇಕು.
00:30 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:34 ಈಗ, 'ರೂಬಿ'ಯಲ್ಲಿ “loop” ಎಂಬುದನ್ನು ನಾನು ವಿವರಿಸುತ್ತೇನೆ.
00:38 'loop' (ಲೂಪ್) ಎಂಬುದು, ನಿರ್ದಿಷ್ಟ ಬಾರಿ ಎಕ್ಸಿಕ್ಯೂಟ್ ಮಾಡಲಾಗುವ ಕಮಾಂಡ್ ಅಥವಾ ಕಮಾಂಡ್ ಗಳ ಸಮೂಹವಾಗಿದೆ.
00:44 'ರೂಬಿ', ಈ ಕೆಳಗಿನ ಪ್ರಮುಖ ಲೂಪಿಂಗ್ (ಆವರ್ತಿಸುವ) ಸ್ಟೇಟ್ಮೆಂಟ್ ಗಳನ್ನು ಹೊಂದಿದೆ.
00:47 * 'for'
00:48 * 'each'
00:49 * 'while' ಮತ್ತು
00:49 * 'until'.
00:50 ಈ ಟ್ಯುಟೋರಿಯಲ್ ನಲ್ಲಿ, 'for' ಮತ್ತು 'each' 'ಲೂಪಿಂಗ್ ಕನ್ಸ್ಟ್ರಕ್ಟ್' ಗಳನ್ನು ಹೇಗೆ ಬಳಸುವುದೆಂದು ನಾವು ಕಲಿಯುವೆವು.
00:55 ನಾವು ಪ್ರಾರಂಭಿಸುವ ಮುನ್ನ, ನಿಮ್ಮ ’ಹೋಮ್ ಡಿರೆಕ್ಟರೀ’ಯಲ್ಲಿ ದಯವಿಟ್ಟು ಈ ಕೆಳಗಿನ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ -
01:02 'ttt, ruby hyphen tutorial, looping hyphen statements'.
01:07 ದಯವಿಟ್ಟು ಅಲ್ಲಿ ಹೇಳಿರುವಂತೆ ಸಬ್-ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ.
01:11 ಈಗ ನಾವು ಬೇಕಾಗಿರುವ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿದ್ದೇವೆ.
01:13 ನಾವು ಮುಂದೆ ಸಾಗೋಣ.
01:15 'ರೂಬಿ'ಯಲ್ಲಿ, “for” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
01:19 'for “variable” in “a collection of objects”'
01:22 'ruby code'
01:23 'end'
01:25 ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.
01:28 ಪ್ರಾಥಮಿಕ ಮಟ್ಟದ (basic level) Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ
01:32 ಮತ್ತು ಅದನ್ನು 'for hyphen loop dot rb' ಎಂದು ಹೆಸರಿಸಿ.
01:36 ಈಗಾಗಲೇ ನನ್ನ ಹತ್ತಿರ “for” ಲೂಪ್ ನ ಒಂದು ಉದಾಹರಣೆ ಇದೆ.
01:39 ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ ನೀವು ಕೋಡ್ ಅನ್ನು ಟೈಪ್ ಮಾಡಬಹುದು.
01:44 ಈ ಉದಾಹರಣೆಯಲ್ಲಿ, ನಾನು ಒಂದು “for” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
01:47 ನಾವು 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಅನ್ನು ಪಡೆದಿದ್ದೇವೆ.
01:50 “for” ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ.
01:55 ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ, ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.
02:00 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಕೋಡ್, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್ ಮಾಡಲು, “for” ಲೂಪ್ ನ ಡಿಕ್ಲೆರೇಶನ್ ಕಾರಣವಾಗುತ್ತದೆ.
02:07 “for” ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ.
02:14 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:
02:17 'ruby space for hyphen loop dot rb ' ಮತ್ತು ಔಟ್ಪುಟ್ ಅನ್ನು ನೋಡಿ.
02:22 ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು.
02:26 ಈ ಉದಾಹರಣೆಯಲ್ಲಿ, ಒಂದು 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು “for” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ.
02:31 ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ.
02:35 ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range) “for” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು.
02:41 ಕೋಡ್ ನ ಮುಂದಿನ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ.
02:44 'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ.
02:49 ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, “for” ಲೂಪ್ ಅನ್ನು ಜಾರಿಗೊಳಿಸಲಾಗಿದೆ.
02:55 ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ.
02:59 ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ.
03:04 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space for hyphen loop dot rb'
03:13 ಹಾಗೂ ಔಟ್ಪುಟ್ ಅನ್ನು ನೋಡಿ.
03:17 ಈಗಲೂ ಸಹ ಔಟ್ಪುಟ್, ಸಂಖ್ಯೆಗಳ ಒಂದು ’ಆರೇ’ ಆಗಿರುವುದು ಆದರೆ 20 (ಇಪ್ಪತ್ತು) ಅನ್ನು ಒಳಗೊಂಡಿರುವುದಿಲ್ಲ.
03:22 ಈಗ, ನಿಮಗೆ ನಿಮ್ಮದೇ ಆದ “for” ಲೂಪನ್ನು ಬರೆಯಲು ಸಾಧ್ಯವಾಗಬೇಕು.
03:27 'Ruby'ಯಲ್ಲಿ, “each” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
03:31 '“a collection of objects” dot each'

'do item '

03:36 'ruby code'

'end'

03:38 ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.
03:42 ಪ್ರಾಥಮಿಕ ಮಟ್ಟದ Ruby tutorials ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ
03:46 ಮತ್ತು ಅದನ್ನು 'each hyphen loop dot rb' ಎಂದು ಹೆಸರಿಸಿ.
03:50 ನನ್ನ ಹತ್ತಿರ ಈಗಾಗಲೇ 'each' ಲೂಪ್ ನ ಒಂದು ಉದಾಹರಣೆಯಿದೆ.
03:53 ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ, ನೀವು ಕೋಡ್ ಅನ್ನು ಟೈಪ್ ಮಾಡಬಹುದು.
03:58 ಈ ಉದಾಹರಣೆಯಲ್ಲಿ, ನಾನು ಒಂದು “each” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
04:03 ನಮ್ಮ ಹತ್ತಿರ 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಇದೆ.
04:06 'each' ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ.
04:11 ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ, ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.
04:17 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಕೋಡ್, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್ ಮಾಡಲು, 'each' ಲೂಪ್ ನ ಡಿಕ್ಲೆರೇಶನ್ ಕಾರಣವಾಗುತ್ತದೆ.
04:23 'each' ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ.
04:30 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space each hyphen loop dot rb'
04:39 ಹಾಗೂ ಔಟ್ಪುಟ್ ಅನ್ನು ನೋಡಿ.
04:43 ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು.
04:46 ಮೇಲಿನ ಉದಾಹರಣೆಯಲ್ಲಿ, 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು ಒಂದು “each” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ.
04:51 ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ.
04:54 ನಂತರ, ಒಂದು 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range), “each” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು.
05:00 ಕೋಡ್ ನ ಈ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ.
05:04 'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ.
05:10 ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, ಒಂದು “each” ಲೂಪ್ ಅನ್ನು ಜಾರಿಗೊಳಿಸಲಾಗಿದೆ.
05:16 ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ.
05:20 ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಸಂಖ್ಯೆಯು ಸೇರಿಸಲ್ಪಡುವುದಿಲ್ಲ.
05:25 ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'ruby space each hyphen loop dot rb'
05:34 ಹಾಗೂ ಔಟ್ಪುಟ್ ಅನ್ನು ನೋಡಿ.
05:39 ಈಗ ನಿಮಗೆ ನಿಮ್ಮದೇ ಆದ “each” ಲೂಪನ್ನು ಬರೆಯಲು ಸಾಧ್ಯವಾಗಬೇಕು.
05:44 ಯಾವ 'ಲೂಪಿಂಗ್ ಕನ್ಸ್ಟ್ರಕ್ಟ್'ಅನ್ನು ಆರಿಸಿಕೊಳ್ಳಬೇಕು ಎಂಬುದನ್ನು ನಾವು ಹೇಗೆ ನಿರ್ಧರಿಸುತ್ತೇವೆ?
05:48 "for" 'ಲೂಪ್ ಕನ್ಸ್ಟ್ರಕ್ಟ್'ಅನ್ನು ನೆನಪಿಸಿಕೊಳ್ಳಲು ನಾವು ಪ್ರಯತ್ನಿಸೋಣ.
05:53 ಮೊದಲನೆಯ ಉದಾಹರಣೆಯಲ್ಲಿ, ನಾವು 'for' ಲೂಪನ್ನು ಬಳಸಿ 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನ ಮೇಲೆ ಇಟರೇಟ್ ಮಾಡಿದೆವು.
05:59 ನಿಮ್ಮ ಟರ್ಮಿನಲ್ ನಲ್ಲಿ ಇದನ್ನು ಎಕ್ಸೀಕ್ಯೂಟ್ ಮಾಡಿ: 'ruby space for hyphen loop dot rb' ಹಾಗೂ ಔಟ್ಪುಟ್ ಅನ್ನು ನೋಡಿ.
06:08 ಈಗ, 'gedit'ನಲ್ಲಿ ಇರುವ ಕೋಡ್ ಅನ್ನು ನೋಡಿ.
06:11 ನೀವು 'for' ಲೂಪನ್ನು ಇನ್ವೋಕ್ ಮಾಡಿದಾಗ, ವಾಸ್ತವದಲ್ಲಿ 'ರೂಬಿ', 'each' ಮೆಥಡ್ ಅನ್ನು ಕಾಲ್ ಮಾಡುತ್ತದೆ.
06:16 ಮತ್ತು 'each' ಅಥವಾ 'for'ಅನ್ನು ಕಾಲ್ ಮಾಡುವುದರಿಂದ ಒಂದೇ ಔಟ್ಪುಟ್ ಸಿಗುವುದು.
06:21 'for' ಲೂಪ್ ಅನ್ನು ಕಾಲ್ ಮಾಡಿದರೆ, ಅದು 'each' ಲೂಪ್ ಅನ್ನು ಕಾಲ್ ಮಾಡುತ್ತದೆ. ಆದ್ದರಿಂದ, ಇದರ ಬದಲಾಗಿ 'each' ಲೂಪನ್ನು ಬಳಸುವುದು ಹೆಚ್ಚು ಸೂಕ್ತವಾಗಿದೆ.
06:28 ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
06:30 ಸಂಕ್ಷಿಪ್ತವಾಗಿ,
06:32 ಈ ಟ್ಯುಟೋರಿಯಲ್ ನಲ್ಲಿ, ನಾವು:
06:33 * 'for' ಲೂಪ್ ನ ಬಳಕೆ
06:35 * 'each' ಕನ್ಸ್ಟ್ರಕ್ಟ್ ನ ಬಳಕೆ
06:38 * 'for' ಲೂಪ್ ನ ಬದಲಾಗಿ 'each' ಲೂಪನ್ನು ಬಳಸುವುದರ ಹಿಂದೆ ಇರುವ ಕಾರಣ ಮತ್ತು
06:41 * ಮೇಲಿನ 'ಲೂಪಿಂಗ್ ಕನ್ಸ್ಟ್ರಕ್ಟ್'ಗಳನ್ನು ಬಳಸುವ ಉದಾಹರಣೆಗಳನ್ನು ಕಲಿತಿದ್ದೇವೆ.
06:45 ಒಂದು ಅಸೈನ್ಮೆಂಟ್-
06:47 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಿಂದ, ಸಮ ಸಂಖ್ಯೆಗಳ ಔಟ್ಪುಟ್ ಅನ್ನು ತಯಾರಿಸಲು,
06:50 ಸೂಕ್ತವಾದ 'ಲೂಪ್ ಕನ್ಸ್ಟ್ರಕ್ಟ್'ಅನ್ನು ಬಳಸಿ, ಒಂದು ruby (ರೂಬಿ) ಪ್ರೊಗ್ರಾಂಅನ್ನು ಬರೆಯಿರಿ.
06:56 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
07:00 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
07:03 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:08 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
07:11 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:14 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:18 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ:

contact@spoken-tutorial.org

07:23 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
07:26 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
07:33 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

07:41 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . ವಂದನೆಗಳು.

Contributors and Content Editors

NaveenBhat, Sandhya.np14